What do you think?

ಧ್ಯಾನಕ್ಕೆ ಕೂತ ನದಿ | Dhyanakke Koota Nadi
128 pages, Paperback
Published January 1, 2024
About the author
Sadashiv Soraturu
6 books3 followersಹುಟ್ಟಿದ್ದು ಬೆಳೆದಿದ್ದು ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ. ಈಗ ಹರಿಹರ ತಾಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿ (ಪ್ರೌಢಶಾಲೆ) ನಲ್ಲಿ ಕನ್ನಡ ಪಾಠ ಹೇಳ್ತಿದೀನಿ… ಅದು ವೃತ್ತಿ. ಪಾಠ ಮಾಡುತ್ತಾ ಕಳೆದು ಹೋಗುವುದು ನನಗೆ ಅತೀ ಖುಷಿಕೊಡುವಂತದ್ದು. ಅದರಾಚೆಯ ಓದು ಬರಹ ಪ್ರವೃತ್ತಿ. ಹತ್ತಾರು ಕತೆಗಳನ್ನು ಬರೆದಿದ್ದೀನಿ. ಬರೆದ ಲೇಖನ, ಕವನ, ಪ್ರಬಂಧಗಳ ಲೆಕ್ಕ ಇಟ್ಟಿಲ್ಲ. ಬಹುತೇಕ ಎಲ್ಲಾ ಪತ್ರಿಕೆಗಳಲ್ಲೂ ಇವೆಲ್ಲಾ ಪ್ರಕಟವಾಗಿವೆ. ನಾನೂ ಕೂಡ ನಿಮ್ಮ ಹಾಗೆ ಅಂದಿನ ಪತ್ರಿಕೆಯಲ್ಲಿ ಅವುಗಳನ್ನು ನೋಡಿ ಮರೆತು ಹೋಗಿದ್ದೇನೆ. ಐದಾರು ಪುಸ್ತಕಗಳೂ ಆಗಿವೆ. ಈಗ ಅವಧಿ ಆನ್‌ಲೈನ್ ಪತ್ರಿಕೆಯಲ್ಲಿ ವಾರಕ್ಕೊಂದು ಕತೆ ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ಓದು ಅಂದ್ರೆ ಬರೀತೀನಿ. ಹಲವು ಇಷ್ಟ ಪುಸ್ತಕ ಪ್ರಾಣ. ಒಂಟಿತನವೇ ಗೆಳೆಯ, ಸಂಗೀತ ಆತ್ಮಬಂಧು, ಕ್ರೀಡೆ ನೋಡುತ್ತೇನೆ ಆಡುವುದಿಲ್ಲ. ನೀನು ಬರಹಗಾರನಾ ಅಂತ ಯಾರಾದರೂ ಕೇಳಿದರೆ ನೋ ನಾನು ಮೇಷ್ಟ್ರು ಅಂತ ಹೇಳೋದು ನನಗೆ ಹೆಚ್ಚು ಇಷ್ಟ. ಇದರಾಚೆ ಮತ್ತೇನಿಲ್ಲ. ಪರಿಚಯಕ್ಕೆ ಇಷ್ಟು ಸಾಕು.
Ratings & Reviews
Friends & Following
Create a free account to discover what your friends think of this book!
Community Reviews
Displaying 1 - 10 of 10 reviews
May 13, 2025
ಇದು ಖಂಡಿತ ರಿವ್ಯೂ ಅಲ್ಲ!!
BACKSTORY:
ಒಂದೂವರೆ ವರ್ಷದಿಂದ ನಾ ಓದಿದ್ದ ಹೆಚ್ಚಿನ ಪುಸ್ತಕಗಳಿಗೆ, ಬಹುಷಃ 90% ಪರ್ಸೆಂಟ್ ಪುಸ್ತಕಗಳಿಗೆ Goodreads ನಲ್ಲಿ ಒಂದು ಚಿಕ್ಕದಾಗಿ ರಿವ್ಯೂ ಕೊಟ್ಟಿದ್ದೇನೆ. ಆ ರಿವ್ಯೂ ಅಥವಾ ರೇಟಿಂಗ್ ಕೊಡೋ ಒಂದೇ ಉದ್ದೇಶ - ಸಹ ಓದುಗರಿಗೆ ಆ ಪುಸ್ತಕ ಕೈ ಹಿಡಿಯೋದಕ್ಕೆ ಒಂದು ಮೆಟ್ಟಿಲಾಗಲೆಂದು, ಒಂದು ಸಣ್ಣ PUSH ಅನ್ನಬಹುದು.
ಸದಾಶಿವ ಸೊರಟೂರು ರವರ ಕಥಾ ಸಂಕಲನ 'ಧ್ಯಾನಕ್ಕೆ ಕೂತ ನದಿ' ನನ್ಗೆ ಯಾರು ಸಜೆಸ್ಟ್ ಮಾಡಿದ್ರು ಅನ್ನೋ ನೆನಪಿಲ್ಲ - Goodreads, Instagram... ನೆನಪಿಗೆ ಬರ್ತಾಯಿಲ್ಲ, ಒಂದು ತಿಂಗಳಾಗಿರಬಹುದು. ಈ ಪುಸ್ತಕ MUST BUY ಅನ್ನೋದೊಂದೇ ನೆನಪಿದೆ.
ಹಾಗೇ ನನ್ನ ರೆಗ್ಯುಲರ್ ಪುಸ್ತಕ ಮಳಿಗೆ ನವಕರ್ನಾಟಕಕ್ಕೆ ಭೇಟಿ ನೀಡಿ ಪುಸ್ತಕ ವಿಚಾರಿಸಿದಾಗ ಇದೆ ಎಂದರು. ಸ್ಟೋರ್ ನವರು ಹುಡುಕಿದರು, ನಾನೂ ಹುಡುಕಿದೆ. ಹತ್ತು ನಿಮಿಷ ಆದರೂ ಸಿಗಲಿಲ್ಲ. ತೆಗೆದಿಡ್ತೇವೆ ಅಂದರು. ತಿಂಗಳಾದ ಮೇಲೆ ಮೊನ್ನೆ ಹೋದಾಗ ಕೊಟ್ಟರು.
REVIEW?
ಈ ಪುಸ್ತಕದಲ್ಲಿರೋ ಎಲ್ಲಾ ಹತ್ತು ಕತೆಗಳೂ ಸೂಪರ್. ಯಾವದೊಂದೂ ಪಿಕ್ ಮಾಡಿ ಹೇಳುವುದು ಕಷ್ಟ. ಕನ್ನಡ ಪುಸ್ತಕಗಳನ್ನ ಓದಿದ ಮಟ್ಟಿಗೆ ಈ ಪುಸ್ತಕಕ್ಕೆ ಒಂದು Justifying ರಿವ್ಯೂ ಕೊಡೋದು ಸಧ್ಯಕ್ಕೆ ನನ್ನಿಂದ ಕಷ್ಟ. ರಿವ್ಯೂ ಪರ್ಪಸ್ಗೆ ಕೊಡೋದು ತಪ್ಪಾಗುತ್ತೆ. ಅನೇಕ ಲೇಖಕರ ಪುಸ್ತಕಗಳನ್ನ ನಾನು ಓದಬೇಕಾಗುತ್ತೆ, ಇನ್ನೊಂದು ನೂರಿನ್ನೂರು ಅನ್ನೋಣ.
ಸದ್ಯಕ್ಕೆ, ಸದಾಶಿವ ಸರ್. ತುಂಬಾ ಥ್ಯಾಂಕ್ಸ್.
HIGHLY RECOMMENDED.
ರೇಟಿಂಗ್ - ⭐⭐⭐⭐⭐

January 20, 2025
ಧ್ಯಾನಕ್ಕೆ ಕೂತ ನದಿ - ಸದಾಶಿವ ಸೊರಟೂರು
ಮನುಷ್ಯ ಸಮಾಜದ ಶಿಶು ಎನ್ನುತ್ತಾರೆ. ಆದರೆ ಅದೇ ಮನುಷ್ಯ ಕಪ್ಪು ಬಿಳುಪುಗಳಾಗಿ ಹಂಚಿಹೋಗಿರುವ ಸಮಾಜದ ನಿಯಮಗಳ ಚೌಕಟ್ಟನ್ನು ಮೀರಿ ಆಚೆ ಕೈಚಾಚುವುದು ಹಿಂದೆಯೂ ನಡೆದದ್ದೇ; ಮುಂದೆಯೂ ನಡೆಯುವುದೇ. ಹಾಗೆ ಚಾಚಿದ ಕೈಗಳ ಒಂದಷ್ಟು ಕಥೆಗಳು ಈ 'ಧ್ಯಾನಕ್ಕೆ ಕೂತ ನದಿ' ಕಥಾಸಂಕಲನದಲ್ಲಿ ಓದಲು ಸಿಗುತ್ತವೆ.
ಸ್ಥೂಲ ನೋಟಕ್ಕೆ 'ಇದೇನಿದು, ಈ ಕಥಾಸಂಕಲನದ ಹೆಚ್ಚಿನ ಕಥೆಗಳು ಅಕ್ರಮ ಸಂಬಂಧ ಅಥವಾ ಗೆಳೆತನಗಳ ಬಗ್ಗೆಯೇ ಇದೆಯಲ್ಲ!' ಎನಿಸಬಹುದು. ಆದರೆ ವಿಷಯ ಒಂದೇ ಆದರೂ ಅದರ ಆಯಾಮಗಳು ಹಲವು.
ಸೂಕ್ಷ್ಮಗ್ರಹಿಕೆಯ ಲೇಖಕ ಸಮಾಜ ಸಮ್ಮತವಲ್ಲದ ಸಂಬಂಧಗಳನ್ನು ಇನ್ನೊಂದು ಆಯಾಮದಿಂದ ಕಂಡು ಅತ್ಯಂತ ಸುಂದರವಾದ ಹೃದಯಸ್ಪರ್ಶಿ ಬಾಂಧವ್ಯಗಳ ಕಥೆಯನ್ನು ನಮಗಾಗಿ ನೀಡಿದ್ದಾರೆ. ನಡುವೆ ಒಂದೆರಡು ಕಥೆಗಳು ಮನುಷ್ಯರ ದುರಾಸೆ, ಕ್ರೌರ್ಯ, ಲಂಪಟತನವನ್ನು ಎತ್ತಿ ತೋರುವಂತದ್ದು ಇವೆಯಾದರೂ ಆ ಕಥೆಗಳಲ್ಲೂ ಮನಸಿಗೆ ಹತ್ತಿರವಾಗುವ ಪ್ರಾಮಾಣಿಕ, ಮುಗ್ಧ ಪಾತ್ರಗಳಿದ್ದು ಕಥೆ ಯಾವುದೋ ಒಂದು ತೆರದಲ್ಲಿ ಮನಸ್ಸನ್ನು ಕಾಡುತ್ತದೆ.
ಸಂಕಲನದ ತುಂಬಾ 'ಹಗಲೊಂದು ಸದ್ದಿಲ್ಲದೆ ಕತ್ತಲೊಳಗೆ ಕರಗುತ್ತಿತ್ತು'.
'ಕತ್ತಲು ನದಿಯಂತೆ ಹರಿಯುತ್ತಿತ್ತು', 'ಕತ್ತಲು ದುಃಖಿಸುತ್ತಿತ್ತು'... ರೀತಿಯಾದ ಕತ್ತಲು ಬೆಳಕಿನ ಕುರಿತ ಸಾಲುಗಳು ಪದೇಪದೇ ಇಣುಕುತ್ತವೆ; ಮನುಷ್ಯನ ಭಾವಪಲ್ಲಟವನ್ನು ಸೂಕ್ಷ್ಮವಾಗಿ ಹೇಳಲು ಲೇಖಕರು ಆಯ್ದುಕೊಂಡ ಈ ರೀತಿ ಅತ್ಯಂತ ಆಹ್ಲಾದಕರ ಎನಿಸಿತು.
'ಪಲ್ ಪಲ್ ದಿಲ್ ಕೇ ಪಾಸ್' ಈ ಸಂಕಲನದಲ್ಲಿ ನನಗೆ ತುಂಬ ಇಷ್ಟವಾದ ಕಥೆ. ಬದುಕು ಕಹಿಯನ್ನೇ ಉಣಿಸುವಾಗಲೂ ಅಲ್ಲೆಲ್ಲೋ ತನ್ನ ಪ್ರೀತಿಯ ಹೆಂಡತಿ ಇದ್ದಾಳೆ ಎಂದು ಅವಳ ಕನವರಿಕೆಯ ಸಿಹಿಯನ್ನೇ ಆಯ್ಕೆ ಮಾಡಿಕೊಂಡು ಕವಿಮನೆಯೆದುರು ಕತ್ತಲ ರಾತ್ರಿಗಳನ್ನು ಕಳೆಯುವ ಕಥಾನಾಯಕನ ಮಧುರ ಯಾತನೆ ಓದಿ ಬಹುಕಾಲದ ನಂತರವೂ ಕಾಡುವಂಥದ್ದು.

October 13, 2025
ಒಂದಕ್ಕಿಂತ ಒಂದು ಸುಂದರವಾದ, ಸ್ವಾರಸ್ಯಕರ ಕಥೆಗಳು. ಒಂದೊಂದು ಕಥೆಯಲ್ಲೂ ಮುಖ್ಯ ಕಥಾಪತ್ರಗಳು ವರ್ತಿಸುವ ರೀತಿಯಲ್ಲಿ ಮನ ಸೆಳೆಯುತ್ತವೆ, ಅಂತ್ಯ ಅನಿರೀಕ್ಷಿತವಾಗಿರುತ್ತದೆ. ಓದಿದ ಸ್ವಲ್ಪ ದಿನಗಳ ಕಾಲ ಈ ಕಥೆಗಳು ಗುಂಗಿನಲ್ಲುಳಿಯುವುದಂತೂ ನಿಜ.
July 23, 2024
ಕವಿಯೊಬ್ಬ ಕತೆ ಬರೆದರೆ ಹೇಗಿರುತ್ತದೆ ಹಾಗಿದೆ ಇದು. ಅತ್ಯುತ್ತಮ ಕತೆಗಳು.
February 21, 2025
“ಧ್ಯಾನಕ್ಕೆ ಕೂತ ನದಿ” ಎನ್ನುವ ಶೀರ್ಷಿಕೆಯೇ ನನ್ನನ್ನು ಸೆಳೆದಿತ್ತು. ಓದಿ ಮುಗಿಸಿದೆ, ನದಿಯ ಹರಿವಿನಲ್ಲಿ ಗೋಚರಿಸಿವ ಶಾಂತಸ್ಥಿತಿ ಇಲ್ಲಿನ ಕಥೆಗಳಲ್ಲಿತ್ತು. ಕಥೆಗಳಲ್ಲಿನ ವಸ್ತು ಮತ್ತು ವೈವಿಧ್ಯತೆ ಬೇರೆ ಬೇರೆಯಾಗಿದ್ದರೂ ಅವುಗಳಲ್ಲಿನ ಭಾವನಾತ್ಮಕ ಅಂಶ ಒಂದೇ ಆಗಿತ್ತು. ಕಾವ್ಯಾತ್ಮಕ ಭಾಷೆ ಮತ್ತು ನಿರೂಪಣೆ ಇಲ್ಲಿನ ಕಥೆಗಳಲ್ಲಿನ ಭಾವವನ್ನ ಪಾತ್ರಗಳಲ್ಲಿನ ಮಾರ್ದವತೆಯನ್ನ ದುರ್ಬಲತೆಯನ್ನ ಅಸಹಾಯಕತೆಯನ್ನ ಓದುಗರಿಗೆ ಹದಮಾಡಿ ಉಣಬಡಿಸಿದ್ದಂತಿತ್ತು. ಒಂದೆರಡು ಕಥೆಗಳನ್ನೊರತುಪಡಿಸಿ ಮಿಕ್ಕೆಲ್ಲಾ ಕಥೆಗಳು ನನ್ನನ್ನು ಕಾಡಿದ್ದಲ್ಲದೆ “ಒಂದಷ್ಟು ದಿನಗಳವರೆಗಾದರೂ ನಿನ್ನ ನೆನಪಿನಿಂದ ನಾವು ಮಾಸುವುದಿಲ್ಲ” ಎಂದು ಹೇಳಿದವು.
ಧನ್ಯವಾದ
ವಸಂತ್
೨೦/೦೨/೨೦೨೫
ಧನ್ಯವಾದ
ವಸಂತ್
೨೦/೦೨/೨೦೨೫
October 3, 2024
The writing of this book was so beautiful, it made me fall in love with Kannada all over again. There were so many beautiful lines scattered across the pages.
However, I was quite disappointed with the kind of stories. Almost each story touched upon infidelity and I am not a fan of those.
There were some very disturbing ones which focused on sexual exploitation of the vulnerable classes of society and they did a very good job at exposing the hypocrisy that human life is.
I am still quite confused about the theme of this book - I wish there was a short summary which could help the readers understand what to expect from a book before buying.
(I did plan on writing this review in Kannada when I started the book, but am way too depressed by the stories at the end to put in the effort to do so)

June 13, 2025
128 ಪುಟಗಳ ಹಗುರವಾದ ಸಣ್ಣ ಕಥಾಸಂಕಲನ ಓದಿದ ಮೇಲೆ ನೂರು ಪಟ್ಟು ಭಾರವೆನಿಸುವುದು. ಇಲ್ಲಿ ಬರುವ ಹತ್ತು ಕತೆಗಳು ಹತ್ತು ರೀತಿಯಲ್ಲಿ ಭಾವಾತ್ಮಕಗೊಳಿಸುತ್ತದೆ. ಅನೀರಿಕ್ಷಿತ ಘಟನೆಗಳು, ಇನ್ನೊಬ್ಬರ ಸ್ವಾರ್ಥಕ್ಕೆ ಬಲಿಯಾದ ಮುಗ್ಧ ಮನಸ್ಸುಗಳ ಸರಮಾಲೆ ಇದು.
ಮೊದಲ ಪುಟದಿಂದ ಕೊನೆಯ ಪುಟದವರೆಗು ಧ್ಯಾನಕ್ಕೆ ಕೂತ ನಿರ್ಲಿಪ್ತ ನದಿಯಂತಾಗುವ ನಾವು ಅಲ್ಲಿನ ಪಾತ್ರಗಳ ಬಗ್ಗೆ ಯೋಚನೆ ಬಂದಾಗ ಮಾತ್ರ ಅಚಾನಕ್ ಆಗಿ ಜಲಪಾತದಿಂದ ದುಮುಕಿ ಯಾವುದೋ ಬಂಡೆಗೆ ಬಡಿದು ನುಚ್ಚು ನೂರಾಗುವ ನೀರಿನಂತಾಗುತ್ತೇವೆ.
ಪಲ್ ಪಲ್ ದಿಲ್ ಕೇ ಪಾಸ್ ಎನ್ನೋ ಕತೆಯೂ ಇಲ್ಲಿ ತನಕ ನೂರಾರು ಸಾರಿ ಕೇಳಿದ ಕಿಶೋರ್ ಕುಮಾರ್‌ನ ಎವರ್ಗ್ರೀನ್ ಹಾಡು 'ಪಲ್ ಪಲ್ ದಿಲ್ ಕೇ ಪಾಸ್' ಇಲ್ಲಿ ಮತ್ತೆ ಹೊಸ ಬಟ್ಟೆ ತೊಟ್ಟುಕೊಂಡು ಇನ್ನಷ್ಟು ನವಿರಾದಂತನಿಸಿತು..
ಕಾವ್ಯಾತ್ಮಕ ಬರವಣಿಗೆ ಕಥೆಗಳಿಗೆ ಇನ್ನಷ್ಟು ಅಲಂಕಾರ ತಂದು ಕೊಟ್ಟಿದೆ. ಇಲ್ಲಿ ಬರುವ ಕತೆಗಳು ಇನ್ನೆಷ್ಟು ದಿನ ಕಾಡುತ್ತದೋ ಗೊತ್ತಿಲ್ಲ..
ಇಲ್ಲಿ ಬರುವ ಕೆಲವು ಸಾಲುಗಳು
*'ಈ ಬದುಕು ಅನ್ನೋದು ಮರಣಕೆ ತೊಡಿಸಿದ ಅಂಗಿ ಸಾರ್. ಅಂಗಿ ಹರಿದ ದಿನ ಸಾವು ಕಾಣಿಸುತ್ತೆ'
*ಮೂಡಣ ದಿಕ್ಕಿನಲಿ ಸೂರ್ಯನ ಹೆರಿಗೆಯಾಗುತ್ತಿದೆ. ಆಕಾಶದಲ್ಲಿ ರಕ್ತದ ಕಲೆಗಳು.
*ದೇವರೂ ಹೋಗದ ಹಟ್ಟಿಯಲ್ಲೂ ಜನ ಆ ದೇವರನ್ನೇ ನಂಬಿ ಬದುಕಿದ್ದರು.
*ಕಾಲದ ಅಸಲಿ ಗುಣವೇ ಅದು. ಬೇಡವಾದದ್ದನ್ನು ಕೂಡ ಕ್ರಮೇಣ ಸಹ್ಯಗೊಳಿಸುತ್ತಾ ಹೋಗುತ್ತದೆ.
ಧ್ಯಾನಕ್ಕೆ ಕೂತ ನದಿ
ಸದಾಶಿವ ಸೊರಟೂರು.

March 1, 2026
It's 3.5, poetic prose, and filled with incidents that bring out human nature and its complexities. Major theme seems to be the injustice that happen to women, old age traditions, gods, and relationships.
I did liked the stories, but it seems to be in general concise and similar tone but different tone (poetic prose).
This is good read of short stories.

September 17, 2025
Sadashiv Soraturu ಇವರಲ್ಲೊಬ್ಬ ಕಾಡುವ ಬರಹಗಾರನಿದ್ದಾನೆ.
July 22, 2026
ಚೆನ್ನಾದ ಕಥೆಗಳನ್ನು ಹೊಂದಿರುವ ಪುಸ್ತಕ
Displaying 1 - 10 of 10 reviews