Jump to ratings and reviews
Rate this book

ಸಾರಾ | Saaraa

Rate this book

201 pages, Paperback

First published January 1, 2024

2 people are currently reading
15 people want to read

About the author

ಅನುಷ್ ಜನಿಸಿದ್ದು ಮಂಗಳೂರಿನಲ್ಲಿ. ವಿದ್ಯಾಭ್ಯಾಸ ಹುಣಸೂರು, ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ವಿದ್ಯುನ್ಮಾನ ಮಾಧ್ಯಮದಲ್ಲಿ ಎಂ.ಎಸ್ಸಿ ಪದವಿ ಪಡೆದಿರುವ ಇವರು ಕನ್ನಡಪ್ರಭಾ, ಸಾಧ್ವಿ ದಿನಪತ್ರಿಕೆಗಳಲ್ಲಿ, ಜೀ ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. 15 ವರ್ಷಗಳ ಕಾಲ ಮೃದಂಗ ವಾದನ ಕಲಿತ ಇವರು, ಅನೇಕ ಲಯವಾದ್ಯಗಳನ್ನು ನುಡಿಸಬಲ್ಲವರಾಗಿದ್ದು, ತಮ್ಮ ಗೆಳೆಯರೊಂದಿಗೆ ಸೇರಿ ಆರಂಭಿಸಿರುವ 'ನಾವು' ಮತ್ತು 'ರಿದಂ ಅಡ್ಡ' ಬ್ಯಾಂಡ್‌ಗಳ ಮೂಲಕ ಸಂಗೀತದಲ್ಲಿ ಹೊಸ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಕೆಲವು ವರ್ಷಗಳಿಂದ ರಂಗ ಸಂಗೀತವನ್ನೂ ಮಾಡುತ್ತ ದೇಶಾದ್ಯಂತ ಓಡಾಡುತ್ತಿದ್ದಾರೆ. ಅನುಗ್ರಹ ಪ್ರಕಾಶನವನ್ನು ಮುನ್ನಡೆಸುತ್ತಿದ್ದಾರೆ.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳಿಂದ ಪ್ರೇರಿತರಾಗಿ ಸಾಹಿತ್ಯ ಸೃಜಿಸುವೆಡೆಗೆ ಬಂದ ಅನುಷ್‌ರ ಈವರೆಗಿನ ಬರಹದ ಮೂಲವಸ್ತು ಪ್ರಕೃತಿಮೇ ಆಗಿದೆ. ಸಣ್ಣ ವಿಷಯಗಳಲ್ಲೂ ಕೌತುಕ ತೋರುತ್ತ, ಸದಾ ಊರಿಂದ ಊರಿಗೆ ಓಡಾಡುತ್ತ, ಹಾಡುತ್ತ, ಬರೆಯುತ್ತ ಇರುವ ಇವರು ಸದ್ಯ ಮಡದಿ ಡಾ. ಅನುಷಾ ಅವರೊಂದಿಗೆ ಮೈಸೂರಿನಲ್ಲಿ ನೆಲೆಸಿದ್ದಾರೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
10 (45%)
4 stars
12 (54%)
3 stars
0 (0%)
2 stars
0 (0%)
1 star
0 (0%)
Displaying 1 - 12 of 12 reviews
Profile Image for milton.reads.
59 reviews1 follower
August 21, 2024
ಮೊನ್ನೆ ಮೊನ್ನೆ ಅನುಷ್ ಅವರ ಹುಲಿ ಪತ್ರಿಕೆ ಸರಣಿಯ ಕತೆಗಳು ಓದಿ ಮುಗಿಸಿದೆ. ಅದರ ಮೊದಲೆನಯ ಭಾಗ ಮುಗಿಸಿದಾಗ ಇವರ ಮುಂದಿನ ಕಾದಂಬರಿ ಯಾವಾಗ ಬರಬಹುದು ಅನ್ನೋ ಯೋಚನೆ ಕೂಡ ಬಂತು. ಎರಡನೆಯ ಭಾಗ ಮುಗಿಸಿದ ಮರು ದಿನವೇ ಅನುಷ್ ಅವರ ಮುಂದಿನ ಕೃತಿಯ ಪೋಸ್ಟ್ ನೋಡಿ ಖುಷಿ ಪಟ್ಟೆ. ಎಂಥಾ ಟೈಮಿಂಗ್ ಅಲ್ವೇ.

ಆಹುತಿಯ ನಂತರ ಓದುಗಾರನ ಕಲ್ಪನಾಶಕ್ತಿಯನ್ನು ಅದೇ ಮಟ್ಟಕ್ಕೆ ಪರೀಕ್ಷಿಸೋ ಧೈರ್ಯ ಈ ಕೃತಿ ಹೊತ್ತುಕೊಂಡಿದೆ. ಪಾತ್ರಗಳ ವಿವರಣೆ ಹಾಗೂ ಲ್ಯಾನ್ಡ್ಮನ್ ಬಂಗ್ಲೋನ ವಿವರಣೆ ಹೊತ್ತ ಮೊದಲಿನ ಕೆಲವು ಅಧ್ಯಾಯಗಳು ಓದಿದ ಕೂಡಲೇ ಈ ಕಾದಂಬರಿಯನ್ನು ಸಾವಕಾಶವಾಗಿ ಓದೋ ನಿರ್ಧಾರ ಮಾಡಿದೆ. ಅನುಷ್ ಅವರು ಅಂಥಾ ಅದ್ಭುತ ಜಗತ್ತನ್ನು ನಿರ್ಮಿಸಿದ್ದರು. ನನ್ನನ್ನು ನಾನು ಆ ಬಂಗಲೆಯ ಮೂಲೆಯಲ್ಲಿ ನಿಂತು ಪ್ರಯೋಗ ನೋಡೋ ಹಾಗೇ, ದಟ್ಟ ಕಾಡಲ್ಲಿ ಬೇಟೆಗೆ ಇಳಿದ ಹಳ್ಳಿ ಜನರ ಮಧ್ಯೆ, ಗಿಟಾರಿನ ತಂತಿಗಳು ಮೀಟಿಸೋ ಸ್ವರಗಳನ್ನು ರೋಲ್ಯಾಂಡ್ನ ಎದುರು ಕೂತು ಆಲಿಸೋ ಹಾಗೇ, ಹೀಗೆ ವಿವಿಧ ಅನುಭವಗಳು.

ಓದುಗಾರರು ಕತೆಯ ಗುಂಗಲ್ಲಿ ವಿಕ್ಕಿ-ಅನಿತಾರ ಸುಂದರ ಸಂಬಂಧ ಮರೆಯೋ ಸಾಧ್ಯತೆವಿದ್ದರೂ ಒಮ್ಮೆ ಕೂತು ಯೋಚಿಸುವಂತೆ ಮಾಡೋದು ಖಂಡಿತ.

ಸಿಲ್ವರ್ ಸ್ಕ್ರೀನ್ ಸಿನಿಮಾ ತರ ಲಿಮಿಟೆಡ್ ಬಜೆಟ್ ಕೊಡದೆ ಮೆದುಳಿಗೆ ಅನ್ಲಿಮಿಟೆಡ್ ಬಜೆಟ್ ಕೊಟ್ಟು ಉನ್ನತ ಅನುಭವಕ್ಕೆ ತಯಾರಾಗಿರಿ. ಇದು ಕಡೆ ತನಕ ಕಾಡಿ, ಮುಗಿದ ಮೇಲೂ ಕಾಡೋ ಕತೆ.

ರೇಟಿಂಗ್ - ⭐⭐⭐⭐½
Profile Image for Kanarese.
133 reviews19 followers
August 21, 2024
S.A.R.A - *Subject Awakening Research & Analogy* is Anush Shetty's latest sci-fi thriller and his seventh novel. As expected, his extraordinary writing style grips you from page one and keeps the suspense alive until the very end.

Since *Ahuti,* I've admired his ability to weave different vantage points into the story, making this book even more captivating and confirming Anush as a unique voice in our generation.

The dopamine rush I experienced during the final part was intense, and without revealing any spoilers, I can say this is a must-read and a remarkable addition to Kannada literature.

I'm especially thrilled to have received the book in advance and to have personally met him again for his autograph.
Profile Image for Prashant Mujagond.
40 reviews9 followers
February 2, 2025
ಸಾರಾ - ಅನುಷ್ ಶೆಟ್ಟಿ

ಅನುಷ್ ಅವರ “ಆಹುತಿ” ಕಾದಂಬರಿಯನ್ನು ಇದಕ್ಕೂ ಮೊದಲು ಓದಿ ತುಂಬಾ ಇಷ್ಟಪಟ್ಟಿದ್ದೆ. ಅದೇ ರೀತಿ ಅವರ ಇನ್ನೊಂದು ಕಾದಂಬರಿ ಸಾರಾ ಕೂಡ ಓದಿ ನೋಡೋಣ ಎಂದು ಓದಲು ಶುರುಮಾಡಿದೆ.

ಈ ಕಾದಂಬರಿಯ ಪ್ರಾರಂಭದಲ್ಲಿ ಇದೊಳ್ಳೆ ವಿಚಿತ್ರ ವೈಜ್ಞಾನಿಕ ಸಂಶೋಧನೆಯ ಬೆನ್ನಟ್ಟಿ ಕಥೆ ಮಾಡಲು ಹೊರಟಿದ್ದಾರಲ್ಲ ಎಂಬ ಒಂದು ಬೇಸರ ಮೂಡಿತು. ಆದರೆ ಮುಂದೆ ಕಾದಂಬರಿ ಸಾಗಿದಂತೆ ತನ್ನ ವಿಧವಿಧವಾದ ಕವಲುಗಳನ್ನು ಒಡೆದಂತೆ “SARA - SUBJECT AWAKENING RESEARCH AND ANALOGY” ಎಂಬ ಪಾತ್ರವು ಇಷ್ಟವಾಗುತ್ತಾ, ಸತ್ತ ಜೀವಿಯನ್ನು ಬದುಕಿಸಿದಾಗ ಅದು ವರ್ತಿಸುವ ರೀತಿ ಅದರ ಸುತ್ತಮುತ್ತಲಿನ ವಾತಾವರಣವನ್ನು ಅನುಸರಿಸುತ್ತದೆ ಹೊರತು ಅದು ಯಾವಾಗಲೂ ನಮ್ಮ ಉಳಿವಿಗೆ ಕಂಟಕವಾಗಿರುವುದಿಲ್ಲ ಎಂಬ ಒಂದು ಮುನ್ನೆಚ್ಚರಿಕೆಯನ್ನು ನೀಡಿತು.
Profile Image for ಸುಶಾಂತ ಕುರಂದವಾಡ.
420 reviews26 followers
April 3, 2025
ಅನುಶ್ ಅವರ ಬಹುತೇಕ ಎಲ್ಲ ಕಾದಂಬರಿಗಳನ್ನು ನಾನು ಓದಿದ್ದೇನೆ. ಅವರ ಬರೆಯುವ ಶೈಲಿ ಇಂದಿನ ಪೀಳಿಗೆಯ ಜನರನ್ನು ಇಷ್ಟಪಡಿಸುವಂತಹದು. ಸಾಧಾರಣವಾಗಿ ಅವರ ಕಥೆಗಳು ರೋಚಕವಾಗಿರುತ್ತವೆ. ತೇಜಸ್ವಿಯವರ ಪುಸ್ತಕಗಳಿಂದ ಪ್ರೇರಣೆಗೊಂಡ ಇವರ ಪುಸ್ತಕಗಳಲ್ಲಿ ನಿಸರ್ಗದ ವಿವರಣೆಯೂ ಚೆನ್ನಾಗಿರುತ್ತದೆ.
ವಿಕ್ಕಿ ಒಬ್ಬ ವೈದ್ಯ. ಬೇರೆ ದೇಶಕ್ಕೆ ಹೋಗಿ ಅಧ್ಯಯನ ನಡೆಸಿ ಸದಾ ಶೋಧನೆಯ ಬಗ್ಗೆ ಮಾತನಾಡುವವನು ಅವನು. ಗೋಣಿಕೊಪ್ಪ ಬೆಟ್ಟದ ತುದಿಯ ಮೇಲೆ ಅವನ ಬಂಗಲೆ. ಟೋನಿಕಾಕಾ ಜೊತೆ ಇರುತ್ತಿರುತ್ತಾನೆ. ಅನಿತಾ ಅವನು ಪ್ರೀತಿಸಿದ ಹುಡುಗಿ. ಸರಳ ಶಾಂತಸ್ವಭಾವದ ಅನಿತಾ ಅವನನ್ನು ಇಷ್ಟ ಪಡುತ್ತಿರುತ್ತಾಳೆ. ವಿಕ್ಕಿ ಬೇರೆ ದೇಶಕ್ಕೆ ಹೋಗಿ ಸತ್ತುಹೋದ ಜೀವಿಗೆ ಮತ್ತೆ ಜೀವ ಬರುವುದರ ಬಗ್ಗೆ ಅಧ್ಯಯನ ಮಾಡಿ ಬಂದಿರುತ್ತಾನೆ. ಅದನ್ನು ಊರಿಗೆ ಬಂದು ಅದರ ಪ್ರಯೋಗದಲ್ಲಿ ನಿರತನಾಗುತ್ತಾನೆ. ಕೋತಿಯ ಮೇಲೆ ಅದನ್ನು ಪ್ರಯೋಗಿಸಿದಾಗ ಪ್ರಯೋಗ ವಿಫಲವಾಗುತ್ತದೆ ಆದರೆ ಶಾಕ್ ಕೊಟ್ಟ ಕೆಲ ಘಳಿಗೆಯ ನಂತರ ಕೋತಿಯ ಎದೆಬಡಿತ ಅನಿತಾಳಿಗೆ ಕೇಳಿ ಬಂದಿರುತ್ತದೆ. ಇನ್ನು ಆ ಪ್ರಯೋಗ ಮನುಷ್ಯನ ಮೇಲೆ ಮಾಡಲು ಮುಂದಾಗುತ್ತಾನೆ. ಆದರೆ ಅದರಲ್ಲಿ ವಿಫಲನಾಗುತ್ತಾನೆ. ಕಾರಣ ಅವನಿಗೆ ಇನ್ನು ಹೆಚ್ಚು ವೋಲ್ಟೇಜ್ ಬೇಕಾಗಿರುತ್ತದೆ. ಅದು ಮಳೆಗಾಲ. ಮಡಿಕೇರಿಯಲ್ಲಿ ಗಾಳಿ ಮಳೆಯ ವಾತಾವರಣ. ಹಾಗಿದ್ದರೆ ಮಿಂಚಿನಿಂದ ತನಗೆ ಬೇಕಾಗಬಹುದಾದ ವೋಲ್ಟೇಜ್ ಸಿಗಬಹುದೆಂದು ಅವನು ಪ್ರಯೋಗಕ್ಕೆ ಮುಂದಾಗುತ್ತಾನೆ. ಆ ಪ್ರಯೋಗಕ್ಕೆ ಮೃತದೇಹವನ್ನು ಹೊತ್ತು ತರುವವರು ಟೋನಿಕಾಕಾ. ಆ ದಿನ ಅವರು ಹೆಣ್ಣು ದೇಹವೊಂದನ್ನು ತರುತ್ತಾರೆ. ಏನೋ ಹಿಂಜರಿಕೆಯಿಂದ ವಿಕ್ಕಿ ಅವಳ ಮೇಲೆ ಅಸ್ತ್ರ ಹೂಡುತ್ತಾನೆ. ಅವನು ನೋಡಿದಾಗ ಅಲ್ಲಿ ಹುಡುಗಿ ಮಲಗಿದ ಜಾಗ ಬರಿದಾಗಿರುತ್ತದೆ. ಹಾಗಿದ್ದರೆ ಆ ಹೆಣ್ಣಿಗೆ ಮತ್ತೆ ಜೀವ ಬಂದಿತ್ತೆ?
ಆ ಊರಿನಲ್ಲಿ ರೋಲೆಂಡ್ ಎಂಬ ಒಬ್ಬ ಎಕ್ಸ್ ಮಿಲಿಟರಿ ಮನುಷ್ಯ ಇರುತ್ತಿರುತ್ತಾನೆ. ಯುದ್ಧವೊಂದರಲ್ಲಿ ಕಣ್ಣುಗಳನ್ನು ಕಳೆದುಕೊಂಡು ಏಕಾಂಗಿಯಾಗಿ ಮನೆಯಲ್ಲಿ ಕಾಲವನ್ನು ಕಳೆಯುತ್ತಿದ್ದನು. ಕುರುಡನಾದರೂ ಬಲುಚಾಣಾಕ್ಷ ಅವನು. ಬೇಜಾರಾದಾಗ ಗಿಟಾರ್ ಬಾರಿಸುತ್ತ ತನ್ನ ಸಮಯವನ್ನು ಆನಂದದಿಂದ ಕಳೆಯುತ್ತಿದ್ದ. ಒಂದು ದಿನ ಹೀಗೆ ಗಿಟಾರ್ ನುಡಿಸುತ್ತ ಕುಳಿತಿರುವಾಗ ಯಾರೋ ಮನೆಯನ್ನು ನುಗ್ಗಿದ ಶಬ್ದ ಕೇಳುತ್ತದೆ! ಹಾಗಾದರೆ ಅದು ಓಡಿ ಹೋದ ಹುಡುಗಿಯದಾಗಿರಬಹುದೇ? ಆ ಹುಡುಗಿಗೆ ಸಾರಾ ಎಂಬ ಹೆಸರಿಗೆ ಏನು ಸಂಬಂಧ? ಈ ಸಸ್ಪೆನ್ಸನ್ನು ನಾನು ಹೊರಗೆ ಹಾಕುವುದಿಲ್ಲ. ಇದನ್ನು ತಿಳಿಯಲು ನೀವು ಓದಿ ಆನಂದಿಸಲೇಬೇಕು. ಎಲ್ಲೆಲ್ಲೂ ಕಾದಂಬರಿ ನಿಮಗೆ ಬೇಜಾರಾಗುವುದಿಲ್ಲ. ಎಲ್ಲಯೂ ಬೇಡದ ಸಂಭಾಷಣೆ, ವಿವರಣೆ ಈ ಕಾದಂಬರಿಯಲ್ಲಿಲ್ಲ. ಅನುಶ್ ಶೆಟ್ಟಿಯವರ ಕಾದಂಬರಿಗಳೇ ಹಾಗೆ . ಬೇಗವೇ ಹೇಳಿ ಮುಗಿಸುತ್ತವೆ ಅದಕ್ಕಾಗಿ ಎಲ್ಲಿಯೂ ನಿಮಗೆ ಓದಲು ಬೇಜಾರಾಗುವುದಿಲ್ಲ.
ಸತ್ತವರು ಮತ್ತೆ ಬದುಕುವುದು ಶಕ್ಯವೇ? ಹಾಗೆ ಬದುಕಿದರೆ ಎಷ್ಟು ದಿನ? ಇಂತಹ ಪ್ರಶ್ನೆಗಳು ನಿಮ್ಮಲ್ಲಿ ಮೂಡಬಹುದು. ಅವುಗಳನ್ನೆಲ್ಲ ಪಕ್ಕಕ್ಕಿಟ್ಟು ನೀವು ಇಂತಹ ಪುಸ್ತಕವನ್ನು ಓದಬೇಕು. ಇಂದಿನ ಜನಗಳು ಎಷ್ಟೋ ಇಂಗ್ಲಿಷ್ superhero ಚಲನಚಿತ್ರಗಳನ್ನು ನೋಡಿ ಸಿಟಿ ಹೊಡೆಯುವವರು ಇಂತಹ ಪುಸ್ತಕಗಳನ್ನು ಓದದೇ ಇರುವುದು ವಿಪರ್ಯಾಸ, ಹಾಗೆಯೇ ಈ ಕಥೆಯಲ್ಲಿ ಹುರುಳಿಲ್ಲ ಅಂತ ಹೀಯಾಳಿಸುವವರೂ ಇದ್ದಾರೆ. ಇಂದಿನ ಪೀಳಿಗೆಯ ಜನರು ಈ ಪುಸ್ತಕವನ್ನು ಓದಿ ಆನಂದಿಸುವುದರಲ್ಲಿ ಸಂಶಯವಿಲ್ಲ. ಓದಿ ಆನಂದಿಸಿ.
Anush Shetty
Profile Image for Prashanth Bhat.
2,154 reviews137 followers
October 17, 2024
ಫ್ರಾಂಕೆನ್‌ಸ್ಟೈನ್‌ ಕಾದಂಬರಿಯ ರೂಪಾಂತರ.
ಅನುವಾದ ಅನಿಸದಷ್ಟು ಚೆನ್ನಾಗಿದೆ.
Profile Image for ಲೋಹಿತ್  (Lohith).
89 reviews1 follower
January 6, 2025
ಅನುಷ್ ಅವರ ಪ್ರಕಾಶನದ ಹೊಸ ಪುಸ್ತಕ.,ಅವ್ರ ಹಿಂದಿನ ಎಲ್ಲ ಕೃತಿಗಳನ್ನು ಓದಿ ಮುಗಿಸಿಯಾಗಿದೆ..
ಕೊಡಗಿನ ತಂಪಾದ ಬೆಟ್ಟ ,ಕಾಡಿನ ನಡುವೆ ನಡೆವ ರೋಚಕತೆ ಹೊಸತಾಗಿ ಸೈ-ಫಿ ಮಾದರಿಯ ಕಥೆ ರೂಪಿಸಿದ್ದಾರೆ..
ಅವರ ಎಲ್ಲ ಕೃತಿಗಳಂತೆ ಇದೂ ಒಂದು repeat readable book..
Profile Image for Soumya.
217 reviews49 followers
June 27, 2025
ಒಂದು ಒಳ್ಳೇ movie ನೋಡಿದ ಅನುಭವ ಆಯ್ತು.
ಕನ್ನಡದಲ್ಲಿ ಸತ್ತು ಹೋದವರಿಗೆ ಜೀವ ಕೊಡೋ concept use ಮಾಡಿರೋ storyline ಅಲ್ಲಿ ನಾ ಓದಿದ ಮೊದಲ ಪುಸ್ತಕ.

ಪಾತ್ರ ವಿವರಣೆ, landman ಬಂಗಲೆಯ ವಿವರಗಳು ಎಲ್ಲ ಚೆನ್ನಾಗಿ ಅನ್ನಿಸಿತು.
This entire review has been hidden because of spoilers.
Profile Image for Aadharsha Kundapura.
59 reviews
August 22, 2024
ನೀನು ನಿನ್ನೊಳಗೆ ಖೈದಿ ಓದಿ ಮುಗಿಸಿ ಈಗ ಎರಡೂವರೆ ವರ್ಷ ಕಳೆದಿರಬಹುದೇನೋ. ಅಲ್ಲಿಂದ ಇಲ್ಲಿಯ ತನಕ ಅನುಷ್ ಶೆಟ್ಟಿಯವರ ಇನ್ನೊಂದು ಪುಸ್ತಕಕ್ಕೆ ಕಾಯ್ತಾ ಇದ್ದೆ.
ಸಾರ ಇದು ಒಂದು ಸೈನ್ಸ್‌ ಫಿಕ್ಷನ್ (sci - fi) ಪುಸ್ತಕ. ಲೇಖಕರು ಪುಷ್ಪಗಿರಿ ಬೆಟ್ಟದ ತಪ್ಪಲಿನಲ್ಲಿ ತನ್ನದೇ ಆದ ಒಂದು ಕಲ್ಪನೆಯ ಜಗತ್ತನ್ನು ಸೃಷ್ಟಿಸಿ ಬೆಟ್ಟ, ಮಳೆ, ಮುಗಿಲಿನ ತುದಿಯಲ್ಲಿ ಬೇರು ಬಿಟ್ಟಂತೆ ಭಾಸವಾಗುವ ಮಿಂಚು, ಚಂಡ ಮಾರುತ, ಜಾರುವ ಕೆಸರಿನ ಕಾಡು ದಾರಿಯಲ್ಲಿ ದಬ್ಬಿದಂತಿತ್ತು.
ಅದೊಂ���ು ಎಲಿಯನ್ ಇರಬಹುದಾ? ಇಲ್ಲಾ ಅದೊಂದು ರಣಾನಾ? ಅಥವಾ ಯಾವುದೋ ವಿಚಿತ್ರ ಪ್ರಾಣಿನಾ? ಇಲ್ಲ ನಮ್ಮ ನಿಮ್ಮಂತೆ ಸಾಮಾನ್ಯ ಮನುಷ್ಯನಾ? ಉಳಿದವರು ಕಂಡಂತೆ..
ಒಬ್ಬರು ಒಂದೊಂದು ವೇಷ ತೊಡಿಸಿ ಚಿತ್ರಿಸಿದ ಈ ಪ್ರಾಣಿ ಬಂದಿದ್ದಾದರೂ ಎಲ್ಲಿಂದ? ಅದರಿಂದ ಆಗಿರುವ ತೊಂದರೆಗೆ ಪರಿಹಾರದ ಹುಡುಕಾಟದ ಅಲೆದಾಟವೆ ಸಾರ ಕಾದಂಬರಿ. ಮೊದಲಾರ್ಧ ಹುಡುಕಾಟ, ಅಲೆದಾಟ, ನಿಗೂಢತೆಯನ್ನು ಹೊತ್ತು ವೇಗವಾಗಿ ಸಾಗುತ್ತದೆ. ಉಳಿದಾರ್ಧ ಎಲ್ಲಾದಕ್ಕು ಉತ್ತರ ಸಿಕ್ಕಿ ನಿಗೂಢತೆ ಎಲ್ಲ ಕಳಚಿ ಸ್ವಲ್ಪ ನಿಧಾನವೆನಿಸಿದರು ಅನುಷ್ ಶೆಟ್ಟಿ ಅವರ ಮೊದಲಿನ ಪುಸ್ತಕಗಳಂತೆ ಇದು ಮನಸ್ಸಿಗೆ ಹತ್ತಿರವಾದ ಪುಸ್ತಕ. ಹೊಸ ಜಗತ್ತು ಸೃಷ್ಟಿಮಾಡುವಂತಹ ನಿಮ್ಮ ಬರವಣಿಗೆ ಅನನ್ಯವಾದುದು.
ಯಾವುದಾದರು ಪುಸ್ತಕ ತಗೊಳ್ಬೇಕು ಅಂತ ಯಾರದರೂ ನನ್ನತ್ರ ಕೇಳಿದ್ರೆ 'ನೀನು ನಿನ್ನೊಳಗೆ ಖೈದಿ', 'ಹುಲಿ ಪತ್ರಿಕೆ' ಅಂತ ಇದ್ದೆ. ಓದಲೂ ಯಾವುದಾದರು ಪುಸ್ತಕ ಕೊಡು ಮರಾಯ ಅಂದ್ರೆ 'ಜೋಡ್ಪಾಲ', 'ಆಹುತಿ' ಕೊಡ್ತ ಇದ್ದೆ, ಆ ಸಾಲಿಗೆ ಈಗ ಸಾರ ಹೊಸತ್ತಾಗಿ ಸೇರಿದೆ..
Profile Image for Abhiram's  Book Olavu.
104 reviews3 followers
July 3, 2025
ಅನುಷ್ ರವರು ತಮ್ಮ ಪ್ರತಿ ಕಾದಂಬರಿಯಲ್ಲಿಯೂ ಏನಾದರೊಂದು ಹೊಸ ಕಾನ್ಸೆಪ್ಟನ್ನ ತರುವುದರಿಂದ ಅವು ಯಾವಾಗಲೂ ವಿಭಿನ್ನತೆಯಿಂದ ಕೂಡಿರುತ್ವೆ. ನಾನಾ ಬಗೆ, ನಾನಾ ಭಾವ! ಭಾವಗಳು ಹಲವಾದರೂ ರೂಪ ಒಂದೇ; ಪಶ್ಚಿಮ ಘಟ್ಟ, ಕಾನನ, ಕಾರ್ಮೋಡ, ಕುಳಿರ್ಗಾಳಿ, ಕಗ್ಗತ್ತಲುಗಳಿಲ್ಲದೇ ಇವರ ಕಾದಂಬರಿಗಳು ಜೀವ ತಾಳವು! ಇದೇ ಅವರ ಕಾದಂಬರಿಗಳ‌ ವಿಶೇಷತೆ ಅಂತ ನನ್ನ ಅಭಿಪ್ರಾಯ.‌

ಇನ್ನೂ ಈ ಪುಸ್ತಕದ ಬಗ್ಗೆ ಹೇಳುವುದಾದರೆ, ಒಂದು ರೋಚಕ ಸಿನಿಮೀಯ ಅನುಭವ! ಲೇಖಕರೇ ಹೇಳುವ ಹಾಗೆ ಇದು ಮೇರಿ ಶೆಲ್ಲಿಯ Frankenstein ಕೃತಿಯ ಕನ್ನಡದ ರೂಪಾಂತರ. ಈ ಹಿಂದೆ, ಇದೆ ವಿಷಯವನ್ನ ಇಟ್ಟುಕೊಂಡು ಹಲುವು ಚಲನಚಿತ್ರಗಳೂ ಬಂದಿದೆ. ಆದರೆ ಈ ಪುಸ್ತಕದಲ್ಲಿ ಒಂದು freshness ಇದ್ದೇ ಇದೆ. ನನಗೆ, ಲೇಖಕರ ಇನ್ನಿತರರು ಪುಸ್ತಕಗಳು ಹೆಚ್ಚು ಇಷ್ಟವಾದರೂ ಕೂಡ ಹಲವು ಅಂಶಗಳು ನನಗೆ ಇಷ್ಟವಾದ್ವು. ಅದರಲ್ಲಿ, ಸಾರಾಳ ಮುಗ್ಧತೆ ಮತ್ತು ಅವಳು ತನ್ಮೂಲಕ ಜಗತ್ತನ್ನು ನೋಡುವ ಪರಿ, ರೊಲೆಂಡ್ ರ ಪಾತ್ರ, ಹೀಗೆ ಒಂದಿಷ್ಟು. ಶುರುವಿನಿಂದ ಅಂತ್ಯದ ವರೆಗೂ ಕುತೂಹಲ ಕೆರಳಿಸುವ ಜೊತೆಗೆ ಕೆಲವು ಮೂಲಭೂತ ಪ್ರಶ್ನೆಗಳನ್ನೂ ಮೂಡಿಸುವುದು. ಒಟ್ಟಿನಲ್ಲಿ 'ಸಾರಾ', ಒಂದೊಳ್ಳೆ ಓದು!
Profile Image for Raghavendra Shekaraiah.
34 reviews
October 17, 2024
"ಸಾರಾ" ಕಾದಂಬರಿಯು ಕನ್ನಡ ಸಾಹಿತ್ಯದಲ್ಲಿ ಒಂದು ರೋಮಾಂಚಕ ಕೃತಿ. ಕೊಡಗಿನ ಮನಮೋಹಕ ನೈಸರ್ಗಿಕ ಸೌಂದರ್ಯವನ್ನು ಹಿನ್ನೆಲೆಯಾಗಿಸಿಕೊಂಡು, ಲೇಖಕರು ಅಲ್ಲಿನ ಜನರ ಜೀವನ ಮತ್ತು ಸಂಸ್ಕೃತಿಯನ್ನು ಸಜೀವವಾಗಿ ಚಿತ್ರಿಸಿದ್ದಾರೆ.

ಪುಸ್ತಕದ ಹಿಂಭಾಗದಲ್ಲಿ ಕೊಟ್ಟಿರುವ ವರ್ಣನೆಯು - ರೋಲೆಂಡ್ ಕೋಟ್ಸ್ ಎಂಬ ಕುರುಡು ಗಿಟಾರ್ ವಾದಕನ ಚಿತ್ರಣ - ಶೆಟ್ಟಿಯವರ ಭಾಷಾ ಕೌಶಲ್ಯ ಮತ್ತು ವಿವರಣಾ ಶೈಲಿಯನ್ನು ಪ್ರದರ್ಶಿಸುತ್ತದೆ. ಅವರು ಸೂಕ್ಷ್ಮ ವಿವರಗಳನ್ನು ಬಳಸಿ ದೃಶ್ಯ, ಧ್ವನಿ ಮತ್ತು ಸ್ಪರ್ಶದ ಅನುಭವಗಳನ್ನು ಓದುಗರಿಗೆ ಜೀವಂತವಾಗಿ ತಲುಪಿಸುತ್ತಾರೆ.

ಕಥಾನಕದ ತಿರುವುಗಳು ಮತ್ತು ಪಾತ್ರ ಚಿತ್ರಣ ಅತ್ಯಂತ ನೈಜ ಹಾಗೂ ಮನಮುಟ್ಟುವಂತಿದೆ. ಕೊನೆಯ ಪುಟದವರೆಗೂ ಓದುಗರ ಕುತೂಹಲವನ್ನು ಕಾಯ್ದುಕೊಳ್ಳುವ ಈ ಕೃತಿ, ಸಮಾಜದ ಕಟ್ಟುಪಾಡುಗಳನ್ನು ಪ್ರಶ್ನಿಸುತ್ತಾ ನಮ್ಮನ್ನು ಆಲೋಚಿಸುವಂತೆ ಮಾಡುತ್ತದೆ.
Profile Image for Madhukara.
Author 7 books5 followers
October 30, 2024
It has a good setup in the western ghats and a cozy monsoon. As the story went it was clear the main plot was taken from Frankenstein (the same is mentioned at the end of the book). Still, it is an interesting read because of the setup and unique surroundings.

In his earlier books, the Author has shown a good range between nature stories and sci-fi with his unique ideas. So it was a little bit of a disappointment to see that this book does not have an original plot. Hopefully, in the next book, the author can return to original ideas.
Profile Image for Vinay.
10 reviews
June 23, 2025
ಅದು ಮನುಷ್ಯರನ್ನು ನುಂಗುವ ಪ್ರಾಣಿಯಂತೆ,ಅದೊಂದು ಯೇಲಿಯನ್ ಇರಬಹುದಾ,ಇಲ್ಲಾ...ರಣಾ ನಾ..? ಒಬ್ಬಬ್ಬರು ತಾವೇ ಅದಕ್ಕೊಂದು ರೂಪ ಕಲ್ಪಿಸಿಕೊಂಡು ಪುಷ್ಪಗಿರಿ ತೆಪ್ಪಲಿನಲ್ಲಿ , ಬಿಟ್ಟು ಬಿಡದೆ ಹುಡುಕುತ್ತಿರುವ ಜನ

ಯಾರಿವಳು?

ಆಸತ್ರೆ ನಿಂದ ತಪ್ಪಿಸಿ ಕೊಂಡವಳಾ? ಮತಿಭ್ರಮಣೆ ಕಳೆದು ಕೊಂಡವಳಾ? ಕಿಡಿಗೇಡಿಗಳ ಕೃತ್ಯಕ್ಕೆ ಸಿಲುಕಿದವಳಾ?

Climax🔥🔥🔥
Displaying 1 - 12 of 12 reviews

Can't find what you're looking for?

Get help and learn more about the design.