Jump to ratings and reviews
Rate this book

ರೇಷ್ಮೆ ಬಟ್ಟೆ | Reshme Batte

Rate this book
‘ಜಾಗತೀಕರಣ’ ಎನ್ನುವ ಸಂಗತಿಯನ್ನು ನಾವು ಇತ್ತೀಚಿನ ದಶಕಗಳಲ್ಲಿ ಜಾಗತಿಕವಾಗಿ ನಡೆಯುತ್ತಿರುವ ವ್ಯಾಪಾರ ವ್ಯವಹಾರಗಳಿಗೆ ಸೀಮಿತವಾಗಿ ಬಳಸುತ್ತೇವೆ. ಆದರೆ ದೇಶ-ದೇಶಗಳ ನಡುವೆ ವ್ಯಾಪಾರವು ಯಾವುದೋ ರೂಪದಲ್ಲಿ ಪ್ರಾರಂಭವಾದರೆ ಸಾಕು, ’ಜಾಗತೀಕರಣ’ವು ಸದ್ದಿಲ್ಲದೆ ನಡೆದಿರುತ್ತದೆ. ಈ ಪ್ರಕ್ರಿಯೆಯನ್ನು ಎಲ್ಲಾ ಕಾಲದಲ್ಲಿಯೂ ಜಗತ್ತು ಹಲವು ರೂಪಗಳಲ್ಲಿ ಕಂಡಿದೆ. ಸಿಹಿ-ಕಹಿಗಳೆರಡನ್ನೂ ಒಟ್ಟಿಗೆ ತಂದೊಡ್ಡುವ ಜಾಗತೀಕರಣವು ಆ ದೇಶ-ಕಾಲದ ಜನಸಾಮಾನ್ಯರ ಬದುಕಿನಲ್ಲಿ ಹಲವು ಗಡಿಗಳನ್ನು ದಾಟುವ ಸವಾಲನ್ನು ಜೀವನ್ಮರಣದ ಸಂಗತಿಯಾಗಿ ಮುಂದಿಡುತ್ತದೆ. ಬದುಕಿನಲ್ಲಿ ಬದಲಾವಣೆಯನ್ನು ಕಡ್ಡಾಯವಾಗಿ ಬೇಡುವ ಈ ವಿದ್ಯಮಾನವು, ತಲೆಮಾರುಗಳ ನಡುವೆ ದೊಡ್ಡ ಕಂದಕವನ್ನು ನಿರ್ಮಿಸುತ್ತದೆ. ಧರ್ಮ, ಸಂಸ್ಕೃತಿ, ಭಾಷೆ, ವಾಣಿಜ್ಯ, ರಾಜಕೀಯ, ನೈತಿಕತೆ - ಎಲ್ಲದರಲ್ಲಿಯೂ ಊಹಿಸಲಾರದ ಸಂಕರವನ್ನು ಸೃಷ್ಟಿಸಿ ಯುಗಸಂಘರ್ಷವನ್ನು ಸೃಷ್ಟಿಸುತ್ತದೆ.

ಎರಡನೆಯ ಶತಮಾನದಲ್ಲಿ ಇಂತಹದೊಂದು ದೊಡ್ಡ ಜಾಗತೀಕರಣಕ್ಕೆ ಏಷ್ಯಾಖಂಡದ ಜನರು ಮುಖಾಮುಖಿಯಾದರು. ಕುಶಾನ ಸಾಮ್ರಾಜ್ಯದ ಕಾನಿಷ್ಕನು ವಾಯವ್ಯ ಭಾರತವನ್ನು ಆಳುತ್ತಿರುವ ಹೊತ್ತಿನಲ್ಲಿ, ಚೀನಾ ದೇಶದಿಂದ ರೋಮ್ ದೇಶದ ತನಕ ಕಾಲ್ನಡಿಗೆಯ ವ್ಯಾಪಾರದ ಹಲವು ದಾರಿಗಳು ಉದ್ಭವಿಸಿದವು. ಈ ಕಾಲದಲ್ಲಿ ವಾಹನವನ್ನು ಬಳಸಿಯೂ ಆ ದಾರಿಯನ್ನು ಸಂಪೂರ್ಣವಾಗಿ ಕ್ರಮಿಸಲು ಅಸಾಧ್ಯವಾಗಿದ್ದರೂ, ಹದಿನೆಂಟು ನೂರು ವರ್ಷಗಳ ಹಿಂದೆ ಭೂಪಟದ ಅರಿವಿಲ್ಲದ ನಮ್ಮ ಹಿರಿಯರು ವ್ಯಾಪಾರದ ದೆಸೆಯಿಂದ ಈ ಕ್ಲಿಷ್ಟ ದಾರಿಯುದ್ದಕ್ಕೂ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಸಾವಿರಾರು ಮೈಲುಗಳ ಈ ದಾರಿಯು ಹಲವು ಪರ್ವತ, ಮರುಭೂಮಿ, ನದಿ, ಕೊಳ್ಳ, ಕಾಡು, ನಾಡುಗಳನ್ನು ಹಾದು ಹೋಗುತ್ತಿತ್ತು. ಈ ಕಾಲದ ಭೂಪಟದ ದೇಶಗಳಾದ ಚೀನಾ, ಕಝಕಿಸ್ತಾನ್, ಉಜ್ಬೆಕಿಸ್ತಾನ್, ಅಫಘನಿಸ್ತಾನ್, ಭಾರತ, ಪಾಕಿಸ್ತಾನ್, ಇರಾನ್, ಇರಾಕ್, ಟರ್ಕಿ - ಹೀಗೆ ಹಲವು ದೇಶಗಳನ್ನು ಹಾದು ಹೋಗುವ ಈ ದಾರಿಯು ವ್ಯಾಪಾರದ ಉದ್ದೇಶಕ್ಕಾಗಿ ಸಂಭವಿಸಿದರೂ ಅದಕ್ಕಾಗಿಯೇ ಸೀಮಿತವಾಗಿ ಉಳಿಯಲಿಲ್ಲ. ಧರ್ಮಗಳು, ಭಾಷೆಗಳು, ಲಿಪಿಗಳು, ಕೌಶಲ್ಯಗಳು, ಕಲಾಪ್ರಕಾರಗಳು, ತಂತ್ರಜ್ಞಾನಗಳು - ಹೀಗೆ ಹಲವು ವಿದ್ಯಮಾನಗಳು ಈ ದಾರಿಯ ಮೂಲಕ ಅತ್ತಿತ್ತ ಚಲಿಸಿದವು. ಆ ಕಾಲದ ಜನರು ಅವೆಲ್ಲವನ್ನೂ ತಮ್ಮ ಆವಶ್ಯಕತೆಗೆ ತಕ್ಕಂತೆ ಅಳವಡಿಸಿಕೊಂಡು ಹೊಸ ಜಗತ್ತನ್ನು ಸೃಷ್ಟಿಸಿಕೊಳ್ಳುವುದರಲ್ಲಿ ಸಫಲರಾದರು.

ಈ ಕಾದಂಬರಿಯು ಎರಡನೆಯ ಶತಮಾನದ ಏಷ್ಯಾಖಂಡದ ಹಲವು ಚಾರಿತ್ರಿಕ ಸಂಗತಿಗಳನ್ನು ಇಟ್ಟುಕೊಂಡು, ಅಂದಿನ ಯುಗಸಂಘರ್ಷವು ಜನಸಾಮಾನ್ಯರಲ್ಲಿ ತಂದಿರಬಹುದಾದ ಸವಾಲುಗಳನ್ನು ಕಾಲ್ಪನಿಕವಾದ ಕತೆಯ ಮೂಲಕ ನಿಮ್ಮ ಮುಂದಿಡಲು ಪ್ರಯತ್ನಿಸುತ್ತದೆ. ಹಲವು ದೇಶಗಳ ಮತ್ತು ಹಲವು ಧರ್ಮಗಳ ವಿಸ್ತಾರವಾದ ಅಧ್ಯಯನ ಮಾಡಿ ಈ ಕೃತಿಯನ್ನು ಲೇಖಕರು ರಚಿಸಿದ್ದಾರೆ.

#silkroute #sogdians #handynasty #kushandynasty #KannadaNovel #SecondCentury #asiahistory #buddhism #Theravada #confusionism #taoism #zoroastrian #Zoroastrianism #Vasudhendra #reshmebatte #chandapustaka

472 pages, Paperback

Published October 2, 2024

13 people are currently reading
60 people want to read

About the author

Vasudhendra

40 books388 followers
Vasudhendra (ವಸುಧೇಂದ್ರ) was born at Sandur in Ballari district, Karnataka. After working as a software professional for more than twenty years, Vasudhendra now runs his own publication house, Chanda Pustaka, which publishes and encourages new writing in Kannada and has instituted the Chanda Pustaka Award which recognizes young short story writers. He is also associated with local support groups for LGBT individuals. The author of thirteen books in Kannada, that have sold over 80,000 copies, Vasudhendra has won many literary awards, including the Kannada Sahitya Academy Book Prize, the Da Raa Bendre Story Award and the Dr U.R. Ananthamurthy Award.

https://en.wikipedia.org/wiki/Vasudhe...

https://kn.wikipedia.org/wiki/%E0%B2%...

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
13 (16%)
4 stars
41 (52%)
3 stars
23 (29%)
2 stars
1 (1%)
1 star
0 (0%)
Displaying 1 - 24 of 24 reviews
Profile Image for Nayaz Riyazulla.
423 reviews94 followers
October 19, 2024
ಇಷ್ಟು ವರ್ಷ ವಸುಧೇಂದ್ರರ ಕೃತಿಗೆ ಕಾದು ಓದಿದ ನನಗೆ ಈ ಕೃತಿ ನಿರಾಸೆ ಮೂಡಿಸಿದೆ. ವಸ್ತು ವಿಶೇಷವಾದರೂ ಇಲ್ಲಿ ಬರುವ ದಟ್ಟ ವಿವರಗಳು ಕಥೆಯನ್ನು ದುರ್ಬಲಗೊಳಿಸಿದೆ. ಒಂದು non-fiction ಪುಸ್ತಕ ಓದುವಂತೆ ಭಾಸವಾಗುತ್ತದೆ. ಹಾಗಾಗಿ ಕೃತಿಯ ಕಥಾರಸ ನೀರಸವಾಗಿದೆ.

ಪಾತ್ರಗಳು ಕಾಡುವಷ್ಟು ಬಲಶಾಲಿಯಾಗಿಲ್ಲ, ಮಧುಮಾಯಾ ಎಂಬ ಪಾತ್ರವನ್ನು ಹೊರತುಪಡಿಸಿ ಮಿಕ್ಕ ಪಾತ್ರಗಳಿಗೆ ತೂಕವೇ ಕಾಣಸಿಗದು. ರೇಷ್ಮೆ ದಾರಿಯು ಜನಸಾಮಾನ್ಯರ ಮೇಲೆ ಮಾಡಿದ ಪ್ರಭಾವವನ್ನು ಕೊಂಚವೇ ಹೇಳಿದ್ದರೂ ಉತ್ತಮವಾಗಿ ಕಟ್ಟಿಕೊಟ್ಟಿದ್ದಾರೆ, ಈ ಭಾಗವನ್ನು ಹೆಚ್ಚು ಒತ್ತು ಕೊಟ್ಟು ಬರೆಯದೇ ಧರ್ಮ ಚಲನದ ಭಾಗಕ್ಕೆ ಹೆಚ್ಚು ಒತ್ತು ಕೊಟ್ಟು ವಿವರಿಸಿದ್ದು ನೀರಸತೆಗೆ ಕಾರಣವಾಗಿರಬಹುದು.

ವಸುಧೇಂದ್ರರ ಕೃತಿಗಳು ಹೆಚ್ಚು ಇಷ್ಟವಾಗಲು ಪ್ರಮುಖ ಕಾರಣ ಅವರ ಕೃತಿಗಳಿಗೆ ಮತ್ತು ಕಥೆಗಳಿಗೆ ಒಂದು ನಿರ್ದಿಷ್ಟ ಅಂತ್ಯವಿರುತ್ತದೆ, ಇಲ್ಲಿನ ಅಂತ್ಯ ಪೂರ್ಣವಾಗಿಲ್ಲವೆನಿಸುತ್ತದೆ, ಹಲವು ಪಾತ್ರಗಳ ಅಂತ್ಯ ಅಪೂರ್ಣ ಎನಿಸುತ್ತದೆ ಉದಾ : ಜ್ಞಾನಸೇನ, ಛಾನ್ ಲೀಹ್ವಾ.

ವಿಷಯದ ಮೇಲಿನ ಲೇಖಕರ ಅಧ್ಯಯನ ನಿಜಕ್ಕೂ ಬೆರಗು ಮೂಡಿಸುವಂತದ್ದು, ಓದುಗನಿಗೆ ಒಳ್ಳೆಯ ಕೃತಿಯನ್ನು ಕೊಡಬೇಕು ಎನ್ನುವ ಹಸಿವು ಕಾಣುತ್ತದೆ. ಕೃತಿಯನ್ನು ಓದಿದ ನಂತರ ಅನಿಸಿದ್ದು ಇಷ್ಟೇ - ಈ ವಿಷಯದ ಮೇಲೆ ಒಂದೊಳ್ಳೆ non-fiction ಪುಸ್ತಕ ಬರೆಯಬಹುದಿತ್ತು, ಕಥೆಯ ಹಿನ್ನಲೆಯಲ್ಲಿ ಈ ವಿಷಯ ದಾಟಿಸುವುದು ಕಷ್ಟವೋ ಏನೋ... ತಿಳಿಯದು
Profile Image for Prashanth Bhat.
2,159 reviews139 followers
October 15, 2024
ಎರಡನೇ ಶತಮಾನದ ಏಷ್ಯಾಖಂಡದ ಕುರಿತಾದ ಈ ಕಾದಂಬರಿ ,ರೇಷ್ಮೆ ದಾರಿಯ ಕತೆಯನ್ನು ಹೇಳುತ್ತದೆಯಾದರೂ ಅದರ ಹಿಂದೆ ಇರುವುದು ಮತ್ತದೇ ಪ್ರಕೃತಿಯ ಮಕ್ಕಳ ಮತ್ತು ಆಧುನಿಕರ ನಡುವಿನ ಹೊಂದಾಣಿಕೆಯ ಸಮಸ್ಯೆಯೇ..
ಕಾದಂಬರಿಗೆ ನಡೆಸಿದ ಅಧ್ಯಯನ ಬೆರಗು ಹುಟ್ಟಿಸುತ್ತಾದರೂ ಕಾದಂಬರಿಯ ಶುಷ್ಕ ಭಾಷೆ ಯಾವ ಹಂತದಲ್ಲಿ ಕೂಡ ಓದಿನ ಕುತೂಹಲ ಹೆಚ್ಚಿಸುವುದಿಲ್ಲ.
ಮಾಹಿತಿಗಾಗಿ ಓದಬಹುದು ಎಂದು ಅನಿಸುವ ಹಾಗೆ ಮಾಡಿತು.
Profile Image for That dorky lady.
375 reviews73 followers
November 25, 2024
Not a review
ಇಷ್ಟವಾದ ಅಂಶಗಳು :
* ಓದುಗರಿಗೆ ತಿಳಿದಿರದ ಕಾಲ, ಜಾಗ ಸಂಸ್ಕೃತಿಯ ಬದುಕಿನ ಕಥೆಯನ್ನು ಅತ್ಯಂತ ವಿಸ್ತಾರವಾದ ಕ್ಯಾನ್ವಾಸಿನ ಮೇಲೆ ಅಷ್ಟೇ ಸೂಕ್ಷ್ಮವಾಗಿ ಪ್ರತಿಯೊಂದು ವಿವರಗಳನ್ನೂ ಎಳೆಯೆಳೆಯಾಗಿ ಕಣ್ಣಿಗೆ ಕಟ್ಟುವಂತೆ ಅಕ್ಷರಕ್ಕಿಳಿಸಿದ ರೀತಿ.

* ಬದಲಾವಣೆಯ ನಿರಂತರತೆ ಮತ್ತು ಕಾಲಾನುಕ್ರಮದಲ್ಲಿ ಅದರ butterfly effectನಂತೆ ಮನುಷ್ಯರ ಜೀವನ ಕ್ರಮದಲ್ಲಿ, ಆಹಾರ, ಅಭ್ಯಾಸ ಮತ್ತು ಧರ್ಮಶ್ರದ್ಧೆಗಳಲ್ಲಿ ಆಗಬಹುದಾದ ಪರಿಣಾಮವನ್ನು ಕಥೆಯಲ್ಲಿ ಅಡಕವಾಗಿರಿಸಿರುವುದು.

* ಒಬ್ಬ ವ್ಯಕ್ತಿ ಅಥವಾ ಒಂದು ಸಮುದಾಯಕ್ಕೆ ಕಥೆಯನ್ನು ಸೀಮಿತವಾಗಿಸದೆ ರೇಷ್ಮೆ ಮಾರ್ಗ ಅಥವಾ ಸಿಲ್ಕ್ ರೂಟನ್ನು ಕೇಂದ್ರವಾಗಿರಿಸಿ ಅದರ ಉದ್ದಗಲಕ್ಕೂ ಕಥೆಯನ್ನು ಕೊಂಡೊಯ್ದುದು.

* ಪುಟಪುಟದಲ್ಲೂ quotable ಎನಿಸುವ ಮತ್ತೆ ಮತ್ತೆ ಓದಿಕೊಳ್ಳುವಂತೆ ಮಾಡುವ ಚೆಂದದ ಸಾಲುಗಳು.

ಇಷ್ಟವಾಗದ್ದು :
* ಸ್ಥಳವಿವರಣೆ, ಪಾತ್ರ ಚಿತ್ರಣ ಮತ್ತು ಬೌದ್ಧ ಧರ್ಮಪ್ರಚಾರ ಇವೆಲ್ಲದರ ಗಾಢ ವರ್ಣನೆಯ ನಡುವೆ ಕಥೆಗೆ ಸಾಕಷ್ಟು ಪ್ರಾಮುಖ್ಯತೆ ದೊರಕಿದಂತೆ ಅನಿಸಲಿಲ್ಲ.

*ಕಲಾಪ್ರಕಾರ, ಅದು ಹಾಡು, ಚಿತ್ರಕಲೆ ಅಥವಾ ಬರವಣಿಗೆ ಯಾವುದೇ ಇರಲಿ ಕಲೆಗಾರರಿಗೆ ಅವರದೇ ಆದ್ದೊಂದು ಸಿಗ್ನೆಚರ್ ಸ್ಟೈಲ್ ಸಿದ್ಧಿಸುವುದು ಮತ್ತದು ಒಳ್ಳೆಯ ರೀತಿಯಲ್ಲಿ ಸ್ವೀಕೃತವಾಗೊದು ತುಂಬ ಅಪರೂಪದ ಮತ್ತು ಕಷ್ಟದ ವಿಷಯ. ಲೇಖಕರು ತಮ್ಮ ಮೊದಲ ಪುಸ್ತಕದಿಂದಲು ತಮ್ಮದೇ ಆದ ಭಾಷಾಪ್ರಯೋಗ, ಶೈಲಿಯನ್ನು ಕಾಯ್ದುಕೊಂಡಿದ್ದರಷ್ಟೇ... ವಸುಧೇಂದ್ರ ಎಂದರೆ ಸರಳ, ಸರಾಗ ಮತ್ತು ಚೆಂದದ ಓದು ಅಂತ ನಿಸ್ಸಂಶಯವಾಗಿ ಮುದ್ರೆಯೊತ್ತಬಹುದಿತ್ತು. ಈ ಕಾದಂಬರಿಯಲ್ಲಿ ವಸ್ತುವಿನ ಗಹನತೆಯನ್ನು ಗಮನಿಸಿದರೆ ಬರವಣಿಗೆ ಸರಳವಾಗಿಯೇನೋ ಇದೆ. ಆದರೆ ವಸುಧೇಂದ್ರರ ಎಂದಿನ ಸರಾಗ ಬರವಣಿಗೆಗೂ ಈ ಪುಸ್ತಕಕ್ಕೂ ಬಹಳಷ್ಟು ಅಂತರ ಎನಿಸಿತು. ಬಹುಶಃ ಅಧ್ಯಯನದ ಸಾರ ಹೆಚ್ಚಾಗಿದ್ದು ಕಲ್ಪನೆಯ ಪಾಲು ಕಡಿಮೆ ಇರುವುದರಿಂದ ಹೀಗಿರಬಹುದಾ... ಗೊತ್ತಿಲ್ಲ. I didn't like it.

* ಲೇಖಕರು ಮಧುಮಾಯಾಳ ವ್ಯಕ್ತಿತ್ವ ಚಿತ್ರಣ ಕಟ್ಟಿಕೊಡುವಾಗ ಆಕೆಯನ್ನು, ತನ್ನ ಬದುಕು ಹೀಗೆಯೇ ಇರಬೇಕು ಎಂಬ ಸ್ಪಷ್ಟ ಕಲ್ಪನೆಯನ್ನು ಹೊಂದಿದ್ದ, ಅದಕ್ಕಾಗಿ ವಿವೇಚನೆ ಮತ್ತು ವಸ್ತುನಿಷ್ಠತೆಯಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬಲ್ಲ ಯುವತಿಯಾಗಿ ಚಿತ್ರಿಸಿದ್ದಾರೆ. ಆದರೆ ತದನಂತರ ಆಕೆ ಮಿತ್ರವಂದಕನ ಸಲುವಾಗಿ ತೆಗೆದುಕೊಂಡ - ಕಥೆಯ ಅತಿಮುಖ್ಯ ತಿರುವುಗಳಲ್ಲಿ ಒಂದಾದ ನಿರ್ಧಾರಕ್ಕೂ ಆಕೆಯ ಸ್ವಭಾವಕ್ಕೂ ತಾಳೆಯಾಗುತ್ತದೆ ಅಂತ ನನಗೆ ಅನ್ನಿಸಲಿಲ್ಲ. ಪ್ರೀತಿಯೆಂಬುದು ಎಲ್ಲ ತರ್ಕ, ವಿವರಣೆಗಳನ್ನೂ ಮೀರಿದ್ದು ಎಂದುಕೊಂಡರೂ ಸಹ ಆಕೆಯ ನಿರ್ಧಾರ ಅತ್ಯಂತ ಅವಸರದ್ದು ಮತ್ತು ಕಥೆಯ ಹರಿವಿನ ಹೊರತು ಮತ್ಯಾವ ರೀತಿಯಿಂದಲೂ ಅಗತ್ಯವಿಲ್ಲದ್ದು ಅನಿಸಿತು.

* ಕಥೆಯ ಅಂತ್ಯ ಅವಸರದ ಅಡುಗೆಯೇನೋ ಅನಿಸಿತು. ಸಗನೇಮಿ, ಮಿತ್ರವಂದಕ, ಬುದ್ಧಮಿತ್ರ ಎಲ್ಲರ ಕಥೆಗೆ ಸಿಕ್ಕಷ್ಟು ಅಚ್ಚುಕಟ್ಟಾದ ಅಂತ್ಯ ಹೀ, ಲಿಹ್ವಾರಿಗೆ ಸಿಗಲಿಲ್ಲವೇನೋ ಎನಿಸಿತು. I wasn't expecting a 'and then they all lived happily forever' kind of ending but ಎಲ್ಲೋ ಮಾತಿನ ಮಧ್ಯ ತೇಲಿಸಿದಂತೆ ಅವರ ಕಥೆಯ ಅಂತ್ಯ ನಡೆದು ಹೋಯ್ತು ಎನಿಸಿ ಒಪ್ಪಿಗೆಯಾಗಲಿಲ್ಲ.

*ಇನ್ನೂ ನೂರಿನ್ನೂರು ಪುಟಗಳಷ್ಟು 'ಹೀ' ಯ ಸಾಹಸಮಯ ಪಯಣವನ್ನೂ ಮುಂದಿನ ಪರಿಣಾಮಗಳನ್ನೂ ಕಥೆಯಾಗಿಸುವ ಅವಕಾಶವಿದ್ದಾಗ್ಯೂ ಲೇಖಕರು ಯಾಕೋ ಕಥೆಯನ್ನು ಮೊಟಕಾಗಿಸಿದ್ದಾರೆ ಎನಿಸಿ ಬೇಸರವಾಯ್ತು.

ಇವೆಲ್ಲಾ ಇಷ್ಟ ಕಷ್ಟಗಳ ಜೊತೆಗೇ ರೇಷ್ಮೆ ಬಟ್ಟೆ ಓದಿನ ಅನುಭವ ಖುಷಿಕೊಟ್ಟಿದೆ. Its a one of a kind experience for sure.
Profile Image for Aadharsha Kundapura.
60 reviews
February 12, 2025
ವಸುಧೇಂದ್ರರವರ ತೇಜೋ ತುಂಗಾಭದ್ರ ಎಷ್ಟು ತಲೆಕೆಡಿಸಿತ್ತಂದರೆ ಅವರ ಇನ್ನೂಂದು ಕಾದಂಬರಿ ಯಾವಾಗ ಬರುವುದೋ ಎಂದು ತುದಿಗಾಲಲ್ಲಿ ಕಾಯುತ್ತಿದ್ದೆ.. ರೇಷ್ಮೆ ಬಟ್ಟೆ ಬಿಡುಗಡೆಯಾದ ತಕ್ಷಣವೇ ಖರೀದಿಸಿದ ನನಗೆ ಪುಸ್ತಕ ಪ್ರಾರಂಭದ ಓದಿನಲ್ಲಿ ಅಷ್ಟೊಂದು ಹಿಡಿತ ಸಿಗಲಿಲ್ಲ.. ಈ ಪುಸ್ತಕ ಶುರುಮಾಡಿ ಮುಗಿಸುವ ಮಧ್ಯದಲ್ಲಿ ಸದ್ದಿಲ್ಲದಂತೆ ಇನ್ನೂ ಮೂರು ಪುಸ್ತಕಗಳನ್ನು ಓದಿ ಮುಗಿಸಿದ್ದೆ. ನಂತರ ಅರ್ಧಕ್ಕೆ ನಿಲ್ಲಿಸಿದ‌ ಓದನ್ನು ಮುಂದುವರೆಸಿದಾಗ ಪುಸ್ತಕ ಸ್ವಲ್ಪ ಹಿಡಿತಕ್ಕೆ ಸಿಕ್ಕಿತು..
ರೇಷ್ಮೆ ರಸ್ತೆ ಎರಡನೇ ಶತಮಾನದ ಒಂದು ಬೃಹತ್ ವ್ಯಾಣಿಜ್ಯ ಕ್ರಾಂತಿ ಅಂತನೇ ಹೇಳಬಹುದು. ರೇಷ್ಮೆ ಬಟ್ಟೆ ರೇಷ್ಮೆ ರಸ್ತೆಯಿಂದಾದ ಬದಲಾವಣೆಗಳು ಅಲ್ಲಿನ ಸಾಮಾನ್ಯ ಜನಜೀವನದ ಮೇಲೆ ಬೀರಿದ ಪರಿಣಾಮಗಳನ್ನು ವಿವರಿಸುವುದರ ಜೊತೆಗೆ ಸ್ವಲ್ಪ ಜಾಸ್ತಿಯಾಗಿ ಬೌದ್ಧ ಧರ್ಮ ಪ್ರಚಾರದ ಕಡೆಗೆ ಸಾಗಿತ್ತು.
ಸುಮಾರು ಮೂರು‌‌ ಸಾವಿರ ವರ್ಷಗಳವರೆಗೆ ಬರೀ ಚೀನಕ್ಕೆ ಸೀಮಿತವಾಗಿದ್ದ ರೇಷ್ಮೆ ಕೃಷಿಯು ಎರಡನೇ ಶತಮಾನದಲ್ಲಿ ಹೇಗೆ ತನ್ನ ಗಡಿ ಮೀರಿ ಹೊರಹೋಯಿತು, ಹತ್ತಿಯಂತೆ ರೇಷ್ಮೆಯನ್ನು ಮರದಲ್ಲಿ ಬೆಳೆಯುತ್ತಾರೆ ಎಂದು ತಿಳಿದಿದ್ದ ಹೊರ ಜಗತ್ತಿಗೆ ರೇಷ್ಮೆ ಉತ್ಪಾದನೆ ಹೇಗೆ ಹರಡುತ್ತದೆ ಎನ್ನುವುದೇ ಒಂದು ಕೌತುಕ. ವಸ್ತುಗೆ ಇನ್ನೊಂದು ವಸ್ತುಗಳ ವಿನಿಮಯ ಪದ್ಧತಿಯ ಎದುರು ಅಚನಕ್ಕಾಗಿ ನಿರ್ದಿಷ್ಟ ಮುಖಬೆಲೆಯ ನಾಣ್ಯಗಳು ಬಂದಾಗ ಅದರ ಮೌಲ್ಯ ಅರಿಯದ ಜನರ ಗೊಂದಲಗಳು, ಸಾಮಾನ್ಯ ಜನಗಳು ವ್ಯಾಪಾರ ವ್ಯಾಮೋಹಕ್ಕೆ ಮರುಳಾಗಿ ಕೆಲವರು ಜೀವನ ಕಟ್ಟಿಕೊಂಡರೆ ಹಾಗೇ ಕೆಲವರ ಜೀವನ ಹೇಗೆ ನರಕವಾಗುವುದು, ಬೌದ್ಧ ಬಿಕ್ಕುಗಳ ಧರ್ಮ ಪ್ರಚಾರ, ಪಶ್ಚಿಮದಿಂದ ಚೀನಾದವರೆಗಿನ ಆ ಘೋರ ಮರುಭೂಮಿಗಳ ಸಾವಿರಾರು ಕಿಲೋಮೀಟರ್‌ಗಳ ಕಾಲ್ನಡಿಗೆಯ ಚಿತ್ರಣಗಳು ನಮ್ಮನ್ನು ಕ್ರಿಸ್ತ ಶಕ 100 ರ ಆಸುಪಾಸಿಗೆ ಕರೆದುಕೊಂಡು ಹೋಗುವುತ್ತದೆ.
ಬೇಸರ ಮೂಡಿಸಿವ ಸಂಗತಿಗಳೇನೆಂದರೆ ಕೆಲವು ಮನಸ್ಸಿಗೆ ಹತ್ತಿರವಾದ ಪಾತ್ರಗಳಿಗೆ‌ ಸರಿಯಾದ ಅಂತ್ಯ‌ ಸಿಗದಿರುವುದು. ಇದರಲ್ಲಿ ಬರುವ ಅಷ್ಟು ಪಾತ್ರಗಳಲ್ಲಿ ಮಧುಮಾಯ ತನ್ನ ಪ್ರಿಯಕರನಿಗೋಸ್ಕರ‌ ತನ್ನನ್ನ ತಾನೆ‌ ಮಾರಿಕೊಂಡು ಚೀನಾದಲ್ಲಿ‌ ಯಾವುದೋ ಮನೆಯ ದಾಸಿಯಾಗಿ ನಾಯಿ ತಿನ್ನುವಾಗ ಎಂತಹ ಹೃದಯಕೂಡ‌‌ ಒಂದು ಕ್ಷಣ ಕಂಪಿಸುವುದು. ಮಧುಮಾಯ ಸದಾ ಕಾಡುವಳು.
‌‌‌‌ ಚರಿತ್ರೆಯಾದಾರಿತ ಈ ಕಾದಂಬರಿಯಲ್ಲಿ ಚರಿತ್ರೆಯು ತುಂಬಾ ಹಿಡಿಸಿದ್ದರೆ ಅಲ್ಲಿ ಬರುವ ಕಾಲ್ಪನಿಕ ಪಾತ್ರಗಳು ತಕ್ಕ ಅಂತ್ಯ ಕಳೆದುಕೊಂಡಿದ್ದು ಸ್ವಲ್ಪ ಬೇಜಾರಾಯಿತು .
ರೇಷ್ಮೆ ರಸ್ತೆಯು ಬುದ್ಧ ಸತ್ತು ಎಳುನೂರು ವರ್ಷಗಳಾದರು ವ್ಯಾಪಾರದ ಜೊತೆಗೆ ಬೌದ್ಧ ಧ್ರಮದ ಪ್ರಚಾರಕ್ಕೆ‌ ಎಡೆ ಮಾಡಿ ಕೊಟ್ಟಿತ್ತು. ರೇಷ್ಮೆ ರಸ್ತೆ ಅದೆಷ್ಟೋ ಜನರಿಗೆ ಸ್ವರ್ಗವೂ ಆಯಿತು, ನರಕವೂ ಆಯಿತು..

ರೇಷ್ಮೆ ರಸ್ತೆ
🖊ವಸುಧೇಂದ್ರ
Profile Image for Chetan V.
97 reviews3 followers
November 21, 2024
ಗದ್ಯವನ್ನೂ ಕಾವ್ಯಮಯವಾಗಿ ಬರೆಯ ಬಹುದು ಎನ್ನುವುದಕ್ಕೆ ಸಾಕ್ಷಿ "ರೇಷ್ಮೆ ಬಟ್ಟೆ"
ಸರಳ ಭಾಶೆ, ನಿರೂಪಣೆ, , ಪಾತ್ರ ನಿರ್ವಹಣೆ, ಕಥೆ ಸಾಗುವ ರೀತಿ ಎಲ್ಲವೂ ಭೈರಪ್ಪನವರನ್ನು ನೆನಪಿಗೆ ತರುತ್ತದೆ.
ಜಾಗತೀಕರಣ ಎಂಬುದು ಇಂದಿನ ಸಮಸ್ಯೆಯಲ್ಲ, ಮನುಷ್ಯ ಒಂದು ಕಡೆಯಿಂದ ಇನ್ನೊಂದು ಕಡೆಗೆ ತಿರುಗಾಟ ಆರಂಭಿಸಿದ ಕೂಡಲೇ ಶುರುವಾದ ತೊಳಲಾಟ. ಪ್ರತೀ ಪ್ರಗತಿಯೂ ಅನೇಕ ಸಮಸ್ಯೆ ಗಳನ್ನೂ ತಂದಿಡುತ್ತದೆ. ಜೊತೆಗೆ ಅನೇಕ ಜನರ ಜೀವನವನ್ನು ಬುಡಮೇಲು ಮಾಡುತ್ತದೆ. ಆದರೇ ಮುಂದಿನ ಜನಾಂಗ ಅದರ ಸಿಹಿ ಫಲವನ್ನು ಉಣ್ಣುತ್ತದೆ.
ಮಾನವ ಮತ್ತು ಪ್ರಕೃತಿಯ ಸಂಘರ್ಷ ಇಂದಿನದಲ್ಲ ಸಾವಿರಾರು ವರ್ಷ ಹಳೆಯದು. ಈ ಸಂಘರ್ಷವನ್ನು ಅತ್ಯಂತ ಸುಂದರವಾಗಿ ಕಥೆಯ ಮೂಲಕ ನಿರೂಪಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೊರ ಬಂದಿರುವ ಅತ್ಯಂತ ಪ್ರಬುದ್ಧ ಕಾದಂಬರಿ.
Profile Image for Kanarese.
136 reviews19 followers
October 22, 2024
Book Review: Reshme Batte by Vasudhendra Sir

Reshme Batte stands as Vasudhendra Sir's most significant novel after Tejo Tungabhadra. The novel transports readers to the 1st and 2nd centuries CE, with every line reflecting the extensive research and attention to detail that has gone into its creation. Though the ending may leave some disappointment, it is clear that Vasudhendra Sir wants us to complete the story as the outcome feels inevitable.

The character dynamics are fascinating. Buddhamitra, despite his deep understanding of Buddha's teachings, often seems naive compared to Saganemi, whose life experience gives him a different kind of wisdom. Madhumaya, on the other hand, is like the wind—she moves from one place to another without forming deep attachments.

Vasudhendra Sir has mentioned in interviews that this story's canvas is vast, and it was impossible to cover everything in a single book. With 450 pages, he has done his best to offer readers a glimpse of the philosophical and cultural shifts that occurred over time. The novel masterfully explores how religious principles evolve based on time, place, and individual experiences, with characters that, like the wind, adapt and flow.

Reshme Batte is a gem for Kannada readers who are eager to learn something new and fall in love with complex, well-crafted characters. Vasudhendra Sir's work is commendable, and no review can fully capture the impact this novel has left on me. It is truly a must-read.
Profile Image for Sanjay Manjunath.
200 reviews10 followers
November 6, 2024
ವ್ಯಾಪಾರಕ್ಕಾಗಿ ಉದಯಿಸಿದ ಹೊಸ ದಾರಿಯೊಂದು ಜನರ ಜೀವನವನ್ನೇ ಹೇಗೆ ಅಲ್ಲೋಲಕಲ್ಲೋಲ ಮಾಡುತ್ತದೆ ಎಂಬುದು ಅಚ್ಚರಿ ತರಿಸುತ್ತದೆ ರೇಷ್ಮೆಬಟ್ಟೆ ಕೃತಿಯನ್ನ ಓದುವಾಗ.

ಮೂರನೇ ಶತಮಾನದ ಕಾಲಘಟ್ಟದಲ್ಲಿ ರೇಷ್ಮೆ ಬಟ್ಟೆ ವ್ಯಾಪಾರದಿಂದ ಉಂಟಾದ ಜಾಗತೀಕರಣವನ್ನು ಸಾಮಾನ್ಯ ಜನಗಳ ದೃಷ್ಟಿಯಲ್ಲಿ ಕಟ್ಟಿ ಕೊಡುತ್ತಾ, ಅದು ತಂದೊಡ್ಡಿದ ಸುಖ ಸಮೃದ್ಧಿಯ ಜೊತೆಗೆ ಅದರಿಂದುಂಟಾದ ತಲ್ಲಣಗಳನ್ನೂ ತಿಳಿಸುತ್ತದೆ ಈ ಕೃತಿ.

ಅಧಿಕಾರಶಾಹಿ ವ್ಯವಸ್ಥೆ, ಧರ್ಮ ಜಿಜ್ಞಾಸೆ, ಕಾಡಿನ ಜನರು ಮತ್ತು ಅವರ ಆಚರಣೆಗಳು, ನಾಡಿನ ಜನರ ಮನಸ್ಥಿತಿಗಳು, ಪ್ರಭುತ್ವ ರಾಜಕೀಯಕ್ಕಾಗಿ ಧರ್ಮವನ್ನು ಬಳಸಿಕೊಳ್ಳುವುದು, ಗಂಡು ಹೆಣ್ಣಿನ ನಡುವಿನ ಭಾವನೆಗಳು, ಹೀಗೆ ಹಲವು ವಿಷಯಗಳನ್ನು ಒಂದಕ್ಕೊಂದು ಪೋಣಿಸುವ ರೀತಿ ವಿಶಿಷ್ಟವಾಗಿದೆ.

ಕೃತಿಯಲ್ಲಿ ಉಲ್ಲೇಖಿಸಿರುವ ಅನೇಕ ಉಪಮೇಯಗಳು ಆಹ್ಲಾದವನ್ನುಂಟು ಮಾಡುತ್ತವೆ.

ಬೌದ್ಧ ಧರ್ಮದ ವಿವರಣೆ, ರೇಷ್ಮೆಬಟ್ಟೆಯ ಉತ್ಪಾದನೆ, ಚೀನಾ ದೇಶವನ್ನ ಪ್ರಸ್ತುತಪಡಿಸಿರುವ ರೀತಿ ಮತ್ತು ಕೃತಿಯಲ್ಲಿನ ಅನೇಕ ಪಾತ್ರಗಳು ಅದರಲ್ಲೂ ಸಗನೇಮಿ, ಹವಿನೇಮ, ಜ್ಞಾನಸೇನ, ಬುದ್ಧಮಿತ್ರ ಮಿತ್ರವಂದಕ, ಮಧುಮಾಯ ಪಾತ್ರಗಳು ಸೊಗಸಾಗಿ ಮೂಡಿ ಬಂದಿವೆ.

ಕಥೆಯ ಓಘಕ್ಕೆ ತೊಂದರೆ ಕೊಡದಿದ್ದರೂ, ಅನೇಕ ವಿವರಗಳು ಬೇಕಿರಲಿಲ್ಲ ಎಂದೆನಿಸಿತು ಓದುವಾಗ ಮತ್ತು ಅದರಿಂದಾಗಿ ಒಟ್ಟಾರೆ ಕಥೆಯ ರಸಸ್ವಾದ ಕಮ್ಮಿಯಾಯಿತು ಎಂಬುದು ನನ್ನ ಕೊಸರು.

ಉತ್ತಮ ಕೃತಿ.

It's 4&½*
Profile Image for Subrahmanya Bhat.
22 reviews2 followers
October 25, 2024
ನಿರೀಕ್ಷೆ ಹೆಚ್ಚೇ ಇದ್ದ ಕಾರಣ 'ರೇಷ್ಮೆ ಬಟ್ಟೆ' ಅದ್ಭುತ ಎನ್ನಲು ಮನಸ್ಸಿಲ್ಲ. ಕಥಾವಸ್ತು ಕುತೂಹಲಕಾರಿಯಾಗಿದೆ ಆದರೆ ಕಥೆಯೊಂದು ಹುಟ್ಟಿಸುವ ಭಾವವನ್ನು ಪೂರ್ತಿಯಾಗಿ ಸಾಧಿಸುವಲ್ಲಿ ಕಾದಂಬರಿ ವಿಫಲವಾಗಿದೆ ಎನ್ನಿಸಿತು. ವಿವರಣೆಗಳು ಸ್ವಲ್ಪ ಹೆಚ್ಚಾದವು. ಮೂರು ಕಥೆಗಳ ಸಂಗಮ ಇದಾದರೂ ಪ್ರತೀ ಕಥೆಯಲ್ಲೂ ಇತಿಹಾಸದ ವಿವರಗಳೇ ತುಂಬಿರುವಂತೆ ಕಂಡಿತು‌. ಮಧುಮಾಯಾಳ ಕಥೆ ಸುಖಾಂತ್ಯವಾಗುವುದು ಗೊತ್ತಾಗುತ್ತದೆಯಾದರೂ ಆ ಸುಖಾಂತ್ಯದ ಸಂದರ್ಭವೂ ಕಥೆಯಲ್ಲಿ ಬಂದಿದ್ದರೆ ಓದುಗನಿಗೊಂದು ಚಂದದ ಅನುಭೂತಿಯಾಗುತ್ತಿತ್ತೇನೊ. ಕಾದಂಬರಿಯಲ್ಲಿ ಅಲ್ಲಲ್ಲಿ ಕಾಣಿಸುವ ಉಪಮಾಲಂಕಾರದ ವಾಕ್ಯಗಳು ಚೆನ್ನಾಗಿವೆ. ವಸುಧೇಂದ್ರ ಅವರ ಪೂರಕ ಓದು ಮತ್ತು ತಯಾರಿಗೆ ಮೆಚ್ಚಲೇಬೇಕು.
Profile Image for Karthikeya Bhat.
109 reviews13 followers
July 24, 2025
ಕಾದಂಬರಿ :ರೇಷ್ಮೆ ಬಟ್ಟೆ (ಒನಪು ಬಟ್ಟೆ ಒರಟು ದಾರಿ)
ಲೇಖಕರು: ವಸುಧೇಂದ್ರ
ಛಂದ ಪುಸ್ತಕ
ಬೆಲೆ: ೪೫೦/-


ವಸುಧೇಂದ್ರ ರವರ ರೇಷ್ಮೆ ಬಟ್ಟೆ ಕಾದಂಬರಿ ಓದಿ ಮುಗಿಸಿದ ನಂತರ ಸಗನೇಮಿ, ಮಧುಮಾಯ, ಮಿತ್ರವಂದಕ ಈ ಪಾತ್ರಗಳು, ಕೆಲವು ಅದ್ಭುತ ಸಾಲುಗಳು ಮರೆಯಲಾಗದು. ಈ ಇಡೀ ಕಾದಂಬರಿ ಓದಿದ್ದು ಆಫೀಸಿನ ಕ್ಯಾಬಿನಲ್ಲೇ, ಕೆಲಸದಲ್ಲಿ ಬಿಜಿ, ಇಬ್ಬರ ಮಕ್ಕಳ ಜೊತೆ ಆಟ, ಪಾಠ, ಆರೋಗ್ಯದಲ್ಲಿ ಏರುಪೇರು ಈ ಎಲ್ಲಾ ಕಾರಣದಿಂದ ಈ ನಡುವೆ ಓದಲು ಸಮಯ ಸಾಕಾಗುತ್ತಿರಲಿಲ್ಲ. ಕ್ಯಾಬಿನಲ್ಲಿ ಇನ್ನೇನು ಕೆಲಸ? ಕಾದಂಬರಿಗಳನ್ನು ಓದಲು ಆ ಸಮಯ ಉಪಯೋಗಿಸಿಕೊಂಡೆ, ಒಂದು ಅದ್ಭುತ ಕಾದಂಬರಿ ಓದಿ ಖುಷಿಯಾಯುತು, ವಿಮರ್ಶೆ ಬರೆಯುವ ತನಕ ಮತ್ತೊಂದು ಪುಸ್ತಕವನ್ನು ಓದಲು ಸಾಧ್ಯವಾಗಲಿಲ್ಲ.

ಇದು ಎರಡನೆಯ ಶತಮಾನದ ಕಥೆ, ಪುರುಷಪುರ, ಸಮರಖಂಡ, ಹಳದಿ ಸಮುದ್ರ, ಲುಓಯಾಂಗ್, ತಕ್ಲಾಮಕಾನ್ ಮರಭೂಮಿ, ದನ್ಹುಅಂಗ್ ಏಷ್ಯಾ ಖಂಡದ ಪೂರ್ವ ಭಾಗ ಹಾಗು ಪಶ್ಚಿಮ ಭಾಗದ ಸುತ್ತ ಮುತ್ತ ನಡೆಯುವ ಕಥೆ. ವ್ಯಾಪಾರವೆನ್ನುವುದು ಮನುಷ್ಯನ ಜೀವನದಲ್ಲಿ ಏನೆಲ್ಲಾ ಪರಿಣಾಮಗಳನ್ನು ಬೀರುತ್ತೆಂದರೆ, ಸುಖದಲ್ಲಿರುವವನನ್ನು ದುಃಖಕ್ಕೆ, ದುಃಖದಲ್ಲಿರುವವನನ್ನು ಸುಖಕ್ಕೆ ಕೊಂಡೊಯ್ಯುವುದು, ಬಡವನು ಶ್ರೀಮಂತನಾದುದು, ಶ್ರೀಮಂತನು ಬಡವನಾದುದು, ದೈನಂದಿಕ ಜೀವನದಲ್ಲಾಗುವ ಏರುಪೇರು, ಪ್ರೀತಿಯನ್ನೇ ತ್ಯಾಗ ಮಾಡುವ ಪ್ರಸಂಗ, ಕಾಡಿನಲ್ಲಿರುವವರು ನಾಡಿಗೆ ಬಂದಾಗ ಎದುರಾಗುವ ಸಂಕಷ್ಟಗಳು, ಪ್ರಾಣಹಾನಿ ಈ ಎಲ್ಲವೂ ವ್ಯಾಪಾರ ಎನ್ನುವುದು ಮನುಷ್ಯನ ಜೀವನದ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ.

ಪೃಥುಗಳ ಮತ್ತು ಯವನರ ನಡುವೆ ನಡೆಯುವ ಯುದ್ಧದ ಸಮಯದಲ್ಲಿ ವಿಜಯದ ಪೃಥುಗಳ ಪಡೆಯು ಒಂದು ಕೋಲಿನ ತುದಿಗೆ ಬಾವುಟವನ್ನು ಕಟ್ಟಿ ಹಾರಿಸಿದಾಗ ಆ ಮಿಂಚುವ ಬಟ್ಟೆಯನ್ನು ನೋಡಿದ ಯವನರಿಗೆ ಆಶ್ಚರ್ಯವಾಗುತ್ತದೆ, ಅಂತಹ ಅಪುರೂಪದ ಬಟ್ಟೆಯನ್ನು ಹಾಗು ಆ ಬಟ್ಟೆಯಲ್ಲಿದ್ದ ಬಣ್ಣಗಳನ್ನು ಕಂಡಿರದೆ ಇರುವ ಯವನರಿಗೆ ತಮ್ಮನ್ನು ಜಾಣತನದಲ್ಲಿ ಎಂದೂ ಮೀರಿಸಲಾಗದ ಪೃಥುಗಳಿಗೆ ಈ ಬಟ್ಟೆಯನ್ನು ಕೊಟ್ಟವರು ಯಾರು? ಅಥವಾ ಅವರೇ ಸೃಷ್ಟಿಸಿದರೆ ಎಂದು ಯೋಚನೆಗೀಡಾಗುತ್ತಾರೆ. ಹೀಗೆ ಪ್ರಾರಂಭವಾಗುವ ಕಥೆ ಓದಿಸಿಕೊಂಡು ಹೋಗುತ್ತದೆ, ರೇಷ್ಮೆ ಬಟ್ಟೆ ಬೆಳೆಯುವ ಹಾಗು ನೇಯುವ ವಿದ್ಯೆಯು ಚೀನಿಯರು ರಹಸ್ಯವಾಗಿಟ್ಟಿದ್ದರೂ ಅದು ಈ ವ್ಯಾಪಾರದ ಸಾರ್ಥದಲ್ಲಿ ಆ ಗುಟ್ಟು ಹೇಗೆ ಬಯಲಾಗಿಬಿಡುತ್ತದೆ ಹಾಗು ಚೀನಾದ ಮಹಾರಾಜನಿಗೆ ಬುದ್ಧನು(ತಥಾಗತನು) ಕನಸ್ಸಿನಲ್ಲಿ ಕಂಡು ಅದನ್ನು ಸಭೆಯಲ್ಲಿ ವಿವರಿಸಿದಾಗ ಆತನು ಭಾರತದಲ್ಲಿರುವುದಾಗಿ ತಿಳಿದು ಆತನನ್ನು ಒಡೆನೆಯೇ ತಮ್ಮ ದೇಶಕ್ಕೆ ಕರೆದುತನ್ನಿ ಎನ್ನುವ ಶರತ್ತಿನಿಂದ ಈ ಕಾದಂಬರಿ ಪ್ರಾರಂಭವಾಗುವುದು ಅದ್ಭುತ. ಅಂದರೆ ರೇಷ್ಮೆ ಬಟ್ಟೆಯ (Silk route) ಜೊತೆಗೆ ಬೌದ್ಧ ಧರ್ಮವು ಭಾರತದಿಂದ ಚೀನಾ ಹಾಗು ಸಿಂಹಳದವರೆಗೂ ತಥಾಗತನ ಶಿಷ್ಯರು ಹೇಗೆ ಪ್ರಚಾರ ಮಾಡುತ್ತಾ ಹೋಗುತ್ತಾರೆನ್ನುವುದು ಕಾದಂಬರಿಯಲ್ಲಿ ಕಾಣಬಹುದು.

ನಾಡಿನ ಜೀವನವನ್ನು ಅನುಭವಿಸಿದ ಶಿಖನೇಮ ನಾಡಿನ ಜೀವನ ಇಷ್ಟವಾಗದೇ ಕಾಡಿಗೆ ಬಂದು ತುಷಾರ ಗುಂಪಿನಲ್ಲಿ ಸೇರಿಕೊಂಡು ತುಷಾರ ಜನಾಂಗಕ್ಕೆ ನಾಯಕನಾಗಿ ಮಾರ್ಗದರ್ಶನ ನೀಡುವುದು ಹಾಗು ಹಲವು ಬಣ್ಣಗಳ, ವಾಸನೆಗಳ, ಮನುಷ್ಯನಿಗೆ ಕಣ್ಣಿಗಿಂತ ಸದ್ಧುಗಳ ಕುರಿತು ನಾನಾ ವಿಚಾರಗಳನ್ನು ತಿಳಿಹೇಳುವ ಪ್ರಸಂಗಗಳು ಇಷ್ಟವಾಯಿತು. ನಾಡಿನಲ್ಲಿ ಒಳ್ಳೆಯ ಬಣ್ಣ ಕಾಣುವುದಿಲ್ಲ, ಒಂದೇ ಕಡೆ ಜೀವನ ಸಾಗಿಸುವ ಪರಿಸ್ಥಿತಿ ಆತನಿಗೆ ಇಷ್ಟವಿರಲಿಲ್ಲ, ಕಾಡಿನ ಜೀವನದಲ್ಲಿ ಒಳ್ಳೊಳ್ಳೆ ಬಣ್ಣಗಳು, ತರ ತರದ ವಾಸನೆಗಳು, ಒಂದು ಕಡೆ ಹೆಚ್ಚು ಕಾಲೂರದೇ ನಾನಾ ಕಡೆ ಹೋಗಿ ಜೀವನ ಸಾಗಿಸುವ ಆತನ ಆಲೋಚನೆಗಳು ಇದರಿಂದ ತುಷಾರ ಗುಂಪಿನಲ್ಲಿರುವ ಮಧ್ಯವಯಸ್ಕರಿಗಾಗುವ ಕಿರಿಕಿರಿಗಳು, ಕಾಡಿನಲ್ಲಿ ಸಿಗುವ ಪದಾರ್ಥಗಳನ್ನು ನಾಡಿಗೆ ಹೋಗಿ ಮಾರಿ ನಾಡಿನಿಂದ ಅಕ್ಕಿ, ಬೆಳೆ, ಇನ್ನಿತರೆ ಧಾನ್ಯಗಳನ್ನು ತಂದು ಜೀವನ ಸಾಗಿಸುವ ಸಮಯದಲ್ಲಿ, ಪುರುಷಪುರದ ಕಾನಿಷ್ಕ ಮಹಾರಾಜನು ವ್ಯಾಪಾರದಲ್ಲಿ ನಾಣ್ಯದ ಚಲವಣೆಯನ್ನು ಜಾರಿಗೆ ತಂದಾಗ ತುಷಾರ ಜನರು ಪಡುವ ತೊಂದರೆಗಳು, ವಿಧಿಯಿಲ್ಲದೆ ಕ್ರಮೇಣ ಅದಕ್ಕೆ ಹೊಂದಿಕೊಳ್ಳುವುದು ಚೆನ್ನಾಗಿ ಮೂಡಿಬಂದಿದೆ.

ನಾನಾಪೋಷಕರ ಎರಡನೆಯ ಮಗ ಮಿತ್ರವಂದಕ ವ್ಯವಸಾಯದಲ್ಲಿ ಆಸಕ್ತಿಯಿಲ್ಲದೆ ಸಮರಖಂಡದಿಂದ ಸೋಗ್ದಾನಗರದಲ್ಲಿ ನೀಲಿರಾಗ ಹರಳುಗಳ ಗಣಿಗಳಲ್ಲಿ ಕೆಲಸಕ್ಕೆ ಸೇರಿಕೊಂಡು, ನಂತರ ಮಧುಮಾಯಳನ್ನು ಭೇಟಿಯಾಗಿ, ಅವರಿಬ್ಬರ ನಡುವೆ ಪ್ರೀತಿ ಬೆಳೆದು, ��ಿತ್ರವಂದಕನ ವ್ಯಾಪಾರದ ಸಲುವಾಗಿ ತನ್ನನ್ನೇ ಮಾರಿಕೊಂಡು (ಚೀನಾ ದೇಶಕ್ಕೆ ತೊತ್ತಿನ ಹೆಣ್ಣಾಗಿ ಮಾರಿ) ಅದರಿಂದ ಪಡೆದ ಬಹು ಅಮೂಲ್ಯವಾದ ಬಂಗಾರ, ಬೆಳ್ಳಿ ನಾಣ್ಯಗಳನ್ನು ರೇಷ್ಮೆ ಗಂಟಿನಲ್ಲಿ ಮಿತ್ರವಂದಕನಿಗೆ ತಲುಪಿಸಿ ಆತನು ವ್ಯಾಪಾರದಲ್ಲಿ ಹೆಚ್ಚು ಅಭಿವೃದ್ಧಿಹೊಂದಲಿ ಎನ್ನುವ ತ್ಯಾಗದ ಗುಣವು ಇಷ್ಟವಾಗುತ್ತದೆ. ಇಲ್ಲಿ ಪಾರಸೀಕರ ಆಚಾರ ವಿಚಾರಗಳು, ಪಾದ್ರಿ ಜರಾತುಷ್ಟ್ರನ ತತ್ವಗಳನ್ನೂ ನಾನಪೋಷಕರ ಪಾತ್ರದ ಮೂಲಕ ಎಳೆಎಳೆಯಾಗಿ ವಿವರಿಸಿದ್ದಾರೆ.

ಕಾಂಗ್ಫೂಜೀ ತತ್ವಜ್ಞಾನಿಗಳ ಜೊತೆ ಸಂಭಾಷಣೆಗಳು, ಉಪ್ಪು ಮತ್ತು ಕಬ್ಬಿಣವು ದೇವರು ಪ್ರಜೆಗಳಿಗೆ ಕೊಟ್ಟಿರುವ ಕಚ್ಚಾ ಪದಾರ್ಥಗಳೆಂದು ನಂಬುವ ಕಾಂಗ್ಫೂಜೀಗಳು, ಅದೇ ಕಚ್ಚಾ ಪದಾರ್ಥಗಳನ್ನು ವ್ಯಾಪಾರಕ್ಕೆ ಬಳಸಿ ಅಭಿವೃದ್ಧಿ ಹೊಂದಿ ನಾಲ್ಕು ಹಾಗು ಐದನೆಯ ಶ್ರೇಣಿಯನ್ನು ಪಡೆದುಕೊಂಡ ಕುಟುಂಬದ ಪ್ರಸಂಗಗಳು, ಚೀನಾದ ಗೃಹಿಣಿಯರೆಲ್ಲರೂ ರೇಷ್ಮೆ ಉದ್ದಿಮೆಯಲ್ಲಿ ತೊಡಗಿಕೊಂಡ ಪ್ರಸಂಗಗಳು, ತಾವೋ ಧರ್ಮದ ಕುರಿತು, ರೇಷ್ಮೆಯನ್ನು ದೇವರಾಗಿ ಪೂಜಿಸುವ ಕುರಿತು, ಹೂಣರ ಕಿರಿಕಿರಿಯನ್ನು ತಪ್ಪಿಸಿಕೊಳ್ಳಲು ಶತಮಾನಗಳಿಂದ ಚೀನಾದ ರಾಜರು ಗೋಡೆಯನ್ನು ವಿಸ್ತರಿಸುವ ಬಗ್ಗೆ, ಕಾನಿಷ್ಕ ಮಹಾರಾಜರ ಆದೇಶದಂತೆ ಸಾರ್ಥದ ತಂಡ ಜೊತೆ ಬೌದ್ಧಮಿತ್ರ(ಸಮಣ) ಹಾಗು ಬೌದ್ಧಭಿಕ್ಕುಗಳು ರಾಜನ ಆದೇಶದಂತೆ ಬೌದ್ಧ ತತ್ವವನ್ನು ಪ್ರಚಾರ ಮಾಡಬೇಕು, ಬೌದ್ಧ ವಿಹಾರಗಳು ಸ್ಥಾಪನೆಯಾಗಬೇಕು ಎನ್ನುವ ಆಕಾಂಕ್ಷೆಯಿಂದ ಹೊರಟಾಗ ಎದುರಾಗುವ ಸಂಕಷ್ಟಗಳು, ತಕ್ಲಮಕಾನಂತಹ ಭೀಕರ ಮರಭೂಮಿಯಲ್ಲಿ ಸಾರ್ಥದ ತಂಡದ ಜೊತೆ ಹೊರಟ ಸಗನೇಮಿ, ಹವಿನೇಮ, ಬೌದ್ಧಭಿಕ್ಕುಗಳು, ಮಿತ್ರವಂದಕ, ಹೀಗೆ ನಾನಾ ದೇಶದವರು ವ್ಯಾಪಾರದ ಸಲುವಾಗಿ ಸಾರ್ಥದ ತಂಡದಲ್ಲಿ ಭೇಟಿಯಾಗಿ ಭಾಷೆ ಬಾರದಿದ್ದರೂ ಅವರಲ್ಲಿ ಅನ್ಯೋನ್ಯತೆ ಬೆಳೆಯುವುದು, ಬೌದ್ಧತತ್ವಗಳನ್ನು ಅರ್ಥಮಾಡಿಕೊಳ್ಳುವುದು, ಒಬ್ಬರಿಗೊಬ್ಬರು ನೆರವಾಗಿ ಇನ್ನೇನು ಚೀನಾ ಮುಟ್ಟಬೇಕು ಆಗ
ಹೂಣರು ಆಕ್ರಮಣ ಮಾಡಿ ಸಾರ್ಥದ ತಂಡದ ನಾಯಕನನ್ನು ಇನ್ನಿತರರನ್ನು ಕೊಂದು ಅವರ ಪದಾರ್ಥಗಳನ್ನು ದೋಚಿಕೊಂಡು ಹೋದಾಗ, ಆ ಸಮಯದಲ್ಲೂ ಇನ್ನುಳಿದ ಜನರು ತಮ್ಮ ಪ್ರಯಾಣ ಮುಂದುವರೆಸುತ್ತಾ ಆ ಮರುಭೂಮಿಯಲ್ಲಿ ಸರಿಯಾದ ಆಹಾರವಿಲ್ಲದೆ, ಕುಡಿಯಲು ನೀರಿಲ್ಲದೆ ತಮ್ಮ ಗುರಿ ಮುಟ್ಟುತ್ತಾರಾ? ಕಡೆಯಲ್ಲಿ ಮಿತ್ರವಂದಕ ಹಾಗು ಮಧುಮಾಯ ಭೇಟಿಯಾಗುತ್ತಾರಾ? ಕಾನಿಷ್ಕನ ಬೌದ್ಧಧರ್ಮ ಪ್ರಚಾರ ಆಕಾಂಕ್ಷೆಯು ಫಲಿಸಿತೆ? ಕಾಡಿನಿಂದ ನಾಡಿಗೆ ಬಂದ ಸಗನೇಮಿ ಹವನೇಮ ತಕ್ಲಮಕಾನ ಮರಭೂಮಿಯಲ್ಲಿ ಪಡುವ ಕಷ್ಟಗಳಿಂದ ಅವರಿಗೆ ನಾಡಿನಲ್ಲಿ ಜೀವನ ನಡೆಸುವ ನಿರ್ಧಾರ ತಾವು ತೆಗೆದುಕೊಂಡದ್ದು ಸರಿಯನ್ನಿಸಿತೆ? ರೇಷ್ಮೆ ಗುಟ್ಟು ಚೀನಾದಿಂದ ಇಡೀ ಏಷ್ಯಾ ಖಂಡಕ್ಕೆ ರಟ್ಟಾಗುವ ಪ್ರಸಂಗ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿ ಹೇಳುವುದಕ್ಕಿಂತ ಕಾದಂಬರಿ ಓದಿದರೆ ಉತ್ತಮ

*ಕಾರ್ತಿಕೇಯ*
This entire review has been hidden because of spoilers.
Profile Image for Sampat Badiger.
28 reviews
October 26, 2024


"ರೇಷ್ಮೆ ಬಟ್ಟೆ" ಕಾದಂಬರಿಯು ಕ್ರಿ.ಪೂ. 2ನೇ ಶತಮಾನದಲ್ಲಿ, ಕಾಂಡಿನ ನಾಡಿನ ಅರಸರಾಗಿದ್ದ ಕನಿಷ್ಕನ ಕಾಲದಲ್ಲಿ ನಡೆದ ಗ್ಲೋಬಲೈಜೇಷನ್ (ವಿಶ್ವೀಕರಣ) ಪ್ರಕ್ರಿಯೆಯನ್ನು ಆಳವಾಗಿ ವಿಶ್ಲೇಷಿಸುತ್ತದೆ. ಈ ಕಾಲದ ಸಂದರ್ಭದಲ್ಲಿ ಅರಣ್ಯಗಳಲ್ಲಿ ಸಂತೃಪ್ತಿಯಿಂದ ಬದುಕುತ್ತಿದ್ದ ಜನಾಂಗಗಳು, ಕೃಷಿಯಿಲ್ಲದೆ ಮತ್ತು ಸಾಮಾನ್ಯ ಜನರೊಡನೆ ದೂರವಾಗಿ ಸಂತೋಷದಿಂದ ಬದುಕುತ್ತಿದ್ದ ಇತಿಹಾಸವನ್ನು ದಾಖಲಿಸಿದೆ.

ಪುಸ್ತಕವು ರೇಷ್ಮೆದಾರ ಕೃಷಿಯ ಆರಂಭ, ಚೀನಾದವರು ಈ ಕೃಷಿಯನ್ನು ಎಷ್ಟು ದಶಕಗಳಿಂದ ರಕ್ಷಿಸಿಕೊಂಡಿದ್ದು, ಚೀನಾದಿಂದ ರೋಮನ್ (ಯವನ) ಜನಾಂಗಕ್ಕೆ ರೇಷ್ಮೆಯ ಪರಿಚಯವು ನಡೆದಿದ್ದು, ರೇಷ್ಮೆ ಮಾರ್ಗವು ಸಮರ್ಕಂದ್ ಮೂಲಕ ವಿಸ್ತರಿಸಲ್ಪಟ್ಟ ಪ್ರಕ್ರಿಯೆಯನ್ನು ವಿವರಿಸುತ್ತದೆ.

ಕಥೆಯು ಆ ಕಾಲದ ಪ್ರಭಾವವನ್ನೊಬ್ಬ ಕೃತಕ ಪಾತ್ರದ ಮೂಲಕ ವಿವರಿಸುವ ಮೂಲಕ, ಗ್ಲೋಬಲೈಜೇಷನ್‍ನ ಪರಿಣಾಮವನ್ನು ತೆರೆದಿಡುತ್ತದೆ. ಈ ವ್ಯಾಪಾರದ ಪರಿಣಾಮವಾಗಿ ಹಲವಾರು ಬದಲಾವಣೆಗಳು ಸಮಾಜದಲ್ಲಿ ರೂಪುಗೊಳ್ಳುತ್ತವೆ; ಕೆಲವರು ಕೃಷಿಯನ್ನು ತೊರೆದು ವ್ಯಾಪಾರಿಗಳಿಗೆ ಮಾರ್ಪಡುತ್ತಾರೆ, ಕೆಲವು ಮುಗ್ಧ ಯುವತಿಯರು ವ್ಯಾಪಾರ ಪರಿಣಾಮದ ಪರಿಣಾಮವಾಗಿ ವ್ಯಾಪಾರಕ್ಕೆ ಒಳಗಾಗುತ್ತಾರೆ, ಮತ್ತು ಇದರಿಂದ ಬೌದ್ಧ ಸನ್ಯಾಸಿಗಳಿಗೆ "ಚೈತ್ಯ" ಮತ್ತು "ವಿಹಾರ" ನಿರ್ಮಾಣವಾಗುತ್ತದೆ. ವ್ಯಾಪಾರಿಗಳ ದೇಣಿಗೆಗಳಿಂದ ಚೈತ್ಯ-ವಿಹಾರಗಳು ಉಳಿಯುತ್ತವೆ. ಈ ರೇಷ್ಮೆ ಮಾರ್ಗವು ಏಷ್ಯಾದ ಆರ್ಥಿಕತೆಯ ಮೇಲೆ ಹಲವಾರು ಬದಲಾವಣೆಗಳನ್ನು ತಂದಿತ್ತು.

ಇದರಲ್ಲಿ ಅಂತಿಮ ಭಾಗವು ಬೌದ್ಧ ಧರ್ಮದ ಸಂದೇಶವನ್ನು ಹರಡುವ ನಿಟ್ಟಿನಲ್ಲಿ ತಾತಾಗತನ (ಬುದ್ಧನ) ಸಂದೇಶವನ್ನು ಪ್ರಚಾರ ಮಾಡುವುದಕ್ಕಾಗಿ ತನ್ನ ಬ್ರಹ್ಮಚರ್ಯ ತೊರೆಯುವ ಬೌದ್ಧ ಭಿಕ್ಷು ಬಗ್ಗೆ ವಿವರಿಸುತ್ತದೆ.

Profile Image for Vidya Ramakrishna.
267 reviews18 followers
February 25, 2025
ವಸುಧೇಂದ್ರರು ಸಾಕಷ್ಟು ಸಂಶೋಧಿಸಿ ಮಾಹಿತಿ ಸಂಗ್ರಹಿಸಿ ಕಾದಂಬರಿಯನ್ನು ರಚಿಸಿರುವುದು ಅಭಿನಂದನೀಯವಾಗಿದೆ.

ಕಾದಂಬರಿಯ ಆರಂಭ ಸೊಗಸಾಗಿದೆ. ಒಂದೇ ಸ್ಥಳದಲ್ಲಿ ವಾಸಿಸದೆ ಕಾಡುಗಳಲ್ಲಿ ಅಲೆದು ಜೀವನ ನಡೆಸುವ ಹವಿನೇಮನ ಜನಾಂಗದ ಜೀವನಶೈಲಿಯನ್ನು ಆಕರ್ಷಕವಾಗಿ ಕಟ್ಟಿಕೊಡಲಾಗಿದೆ. ಸೊಗ್ದ, ಕುಶಾನ, ಹೂಣ, ಪಾರ್ಸಿ, ಚೀನೀ ... ಹೀಗೆ ವಿವಿಧರ ಧರ್ಮ, ಜೀವನಶೈಲಿ, ನಂಬಿಕೆಗಳ ಚಿತ್ರಣ ಕಾದಂಬರಿಯಲ್ಲಿ ಸ್ವಲ್ಪ ಮಟ್ಟಿಗೆ ದೊರೆಯುತ್ತದೆ.


ಅತಿಯಾದ ಉಪಮೆಗಳ ಬಳಕೆ (ಕೆಲವೊಮ್ಮೆ ಅಸಮಂಜಸ ಎನಿಸುವಂತೆ), ಅಲ್ಲಲ್ಲಿ ಉಪದೇಶದ ರೀತಿಯ ಬರವಣಿಗೆ, ಎಲ್ಲೆಲ್ಲಿಗೋ ಹೋದ ಪಾತ್ರಗಳನ್ನು ಕೊನೆಯಲ್ಲಿ ನಾಟಕೀಯವಾಗಿ ತಿರುವು ಕೊಟ್ಟು ಒಂದಾಗಿಸಿರುವುದು ಇವೆಲ್ಲವೂ ಅಸಹಜ ಎನಿಸಿದವು.

ಪದೇ ಪದೇ 'ಒಂದು ಒಂದು' ಎಂದು ಬರೆಯುವುದು ಲೇಖಕರ ದೌರ್ಬಲ್ಯವಿರಬೇಕು ....ಹೂವೊಂದು, ಹೆಣ್ಣೊಂದು, ಹಾವೊಂದು, ಊರೊಂದು, ನದಿಯೊಂದು ದಾರಿಯೊಂದು... ಹೀಗೆ...😇😇 ಒಂದೇ ವಾಕ್ಯದಲ್ಲಿ ಹಲವು ಒಂದುಗಳು ಬಂದು ಓದಿಗೆ ಅಡ್ಡಿಪಡಿಸುತ್ತವೆ ಎನ್ನಿಸಿತು !
Profile Image for Ashwini.
33 reviews4 followers
June 6, 2025
This is not a review of the book, just some thoughts after I finally finished reading it, several months after I started. I think I started off this book with wrong expectations. Since its main theme was the ancient Silk Route, I eagerly started reading as soon as it was released but soon lost interest because the first several pages went extremely slow, and there were too many characters to remember.

Almost none of the characters are strongly defined… no one’s story is fully told, even when you wanted to know more. Some characters are abandoned halfway, some of their stories ending in a hasty 2-line description. What happened to Lihwa, how did her story pan out? What went wrong with Jnanasena, how did he end up where he did? How did Mitravandaka and Madhumaya meet in the end? Did Buddhamitra marry Saganemi in the end?

There’s just too much left for the reader’s imagination!

The ending seemed very hastily done, like the author just wanted to be done with it already. With so many characters in the book, their stories should, could have been neatly tied together, or at least had some kind of closure. But the abrupt ends were disappointing.

What was good, though:

* There was one part where I was really really affected, one sudden twist in the tale that made me gasp and close the book in pain and took a few hours to come to terms with what happened with Madhumaya.

* The changes in societal and religious rules and practices that the Silk Route brought in gradually, the impact of increased interactions between people from different parts of the world, how culture of a certain society gets shaped, these are all depicted very well.

* I liked Maharaja Kanishka’s part in the book. It was short, but I think it represented well what the rulers’ parts were in the development of the Silk Route and trade in general.

* The enormous amount of research the author so clearly had to do in order to write this book. It shows in little little details throughout the book, in snippets of information strewn in every chapter, in the development of every character.

To sum it up, I’m glad I finally finished reading it, it had its moments, but overall it was very dissatisfying.
19 reviews1 follower
November 10, 2024
ಇತ್ತೀಚೆಗಿನ ಆವಿಷ್ಕಾರವಾದ ಯಾಂತ್ರಿಕ ಬುದ್ಧಿಮತ್ತೆಯನ್ನೂ (artificial intelligence) ಒಳಗೊಂಡಂತೆ, ನಾಗರಿಕತೆ ಪ್ರಾರಂಭವಾದಾಗಿನಿಂದ ಪ್ರತಿಯೊಂದು ಆವಿಷ್ಕಾರವನ್ನೂ ಮನುಷ್ಯ ವಿರೋಧಿಸಿಕೊಂಡೇ ಬಂದಿದ್ದಾನೆ. (Luddite attitude) ಇದಕ್ಕೆ ಕಾರಣ ಹಲವಾರು: ತಾನು ಮಾಡುತ್ತಿರುವ ನಿತ್ಯ ಕಾಯಕವು ಹೊಸ ಆವಿಷ್ಕಾರದಿಂದಾಗಿ ನಷ್ಟವಾಗಬಹುದು ಎಂಬ ಭಯ, ಹೊಟ್ಟೆ ಹೊರೆಯಲು ಕಷ್ಟವಾಗಬಹುದು ಎಂಬ ಚಿಂತೆ, ಸಂಸಾರ ಸಾಗಿಸುವುದು ಯಾತನಾಮಯವಾಗಬಹುದು ಎಂಬ ನೋವು. ನಾಣ್ಯಗಳು ಪ್ರಪ್ರಥಮ ಬಾರಿಗೆ ವ್ಯಾಪಾರದಲ್ಲಿ ಮಾರುಕಟ್ಟೆಯಲ್ಲಿ ಚಲಾವಣೆಗೆ ಬಂದಾಗ, ಸೆಣಬು ಮತ್ತು ಹತ್ತಿಯ ವಸ್ತ್ರಗಳ ಬದಲಾಗಿ ರೇಷ್ಮೆ ಬಟ್ಟೆ ಬಂದಾಗ ಇದೇ ರೀತಿಯ Luddite attitude ಬಹುತೇಕ ಮಾನವ ಜನಾಂಗವನ್ನು ಆವರಿ���ಿಕೊಂಡಿತ್ತು ಎನ್ನುವುದನ್ನು "ರೇಷ್ಮೆ ಬಟ್ಟೆ" ಕಾದಂಬರಿ ಮನೋಜ್ಞವಾಗಿ ಚಿತ್ರಿಸುತ್ತದೆ.
ಕಾದಂಬರಿಕಾರ ವಸುಧೇಂದ್ರ ಅವರು ಕಥೆಯ ಮೂಲಕ ಎರಡನೇ ಶತಮಾನದ ವಿಜ್ಞಾನದ ಪ್ರಗತಿಯನ್ನೂ ಧರ್ಮದ ಬೋಧನೆಗಳನ್ನೂ ಮನುಷ್ಯನ ಸಹಜವಾದ ಮಾನಸಿಕ ತುಮುಲಗಳನ್ನೂ ಹಿಡಿದಿಡಲು ಪ್ರಯತ್ನಿಸಿದ್ದಾರೆ. ಈ ಪ್ರಯತ್ನದಲ್ಲಿ ಪಾತ್ರಗಳ ಅಭಿವ್ಯಕ್ತಿ ಸೋತಿದೆ. ಆದರೆ ಧರ್ಮ ಬೋಧೆ ಮತ್ತು ಕುತೂಹಲಕಾರಿ ಆವಿಷ್ಕಾರಗಳು ಗೆದ್ದಿವೆ.

ನಾಗರಿಕತೆಯ ಪ್ರಗತಿ ಎಷ್ಟೇ ಇದ್ದರೂ ಹೆಣ್ಣನ್ನು ಕೇವಲ ಭೋಗದ ವಸ್ತುವಾಗಿ ನೋಡುವ ಕೆಟ್ಟ ಪ್ರವೃತ್ತಿ ಮತ್ತು ಅವಳಿಗೆ ವಿದ್ಯಾಭ್ಯಾಸ ನಿರಾಕರಿಸುವ ಪದ್ಧತಿ ಸಾವಿರಾರು ವರ್ಷಗಳ ಹಿಂದೆಯೂ ನಡೆದಿತ್ತು ಎಂಬ ಘಟನೆಗಳನ್ನು ಓದುವಾಗ ಕಣ್ಣುಗಳು ಒದ್ದೆಯಾಗಿದ್ದು ಸುಳ್ಳಲ್ಲ. ಆದರೆ ನಾಗರಿಕತೆಯಿಂದ ದೂರ ಉಳಿದು ಕಾಡಿನಲ್ಲಿ ಸ್ವಚ್ಛಂದವಾಗಿ ಜೀವನ ನಡೆಸುವ ಗುಂಪುಗಳಲ್ಲಿ ತನ್ನ ದೇಹದ ಮೇಲಿನ ಹಕ್ಕು ತನಗಷ್ಟೇ ಎಂಬ ನೈಸರ್ಗಿಕ ಅಧಿಕಾರವನ್ನು ಹೆಣ್ಣಿಗೇ ಕೊಡಲಾಗಿದೆ ಎನ್ನುವುದನ್ನೂ ಕಾದಂಬರಿ ತಿಳಿಸುತ್ತದೆ. ಧಾರ್ಮಿಕ ವಿಧಿ ಮತ್ತು ಮಾನಸಿಕ/ದೈಹಿಕ ವಾಂಛೆಯ ನಡುವಿನ ಯುದ್ಧದಲ್ಲಿ ಗೆದ್ದದ್ದು ಯಾವುದೆನ್ನುವ ಪ್ರಶ್ನೆಗಿಂತ, ಮನುಷ್ಯರನ್ನು ಅತ್ಯಂತ ಸುಲಭವಾಗಿ "ಪಾಪಪ್ರಜ್ಞೆ"ಗೆ ದೂಡುವುದು ಸಮಾಜ ಹಾಕಿರುವ ನೈತಿಕತೆ ಮತ್ತು ಪಾಪ ಪುಣ್ಯದ ಚೌಕಟ್ಟು ಎಂಬ ಸತ್ಯವನ್ನು ಅತ್ಯಂತ ಸೂಕ್ಷ್ಮವಾಗಿ ಕಾದಂಬರಿಕಾರರು ತಿಳಿಸಿದ್ದಾರೆ.

ಕಾದಂಬರಿಯ ತುಂಬಾ ಅನವಶ್ಯಕವಾಗಿ ಉಪಮೆಗಳನ್ನು ಬಳಸಲಾಗಿದೆ. ಈ ಅನವಶ್ಯಕ ಉಪಮೆಗಳು ಕಾದಂಬರಿಯನ್ನು ವಾಸ್ತವಿಕತೆಯಿಂದ ದೂರಕ್ಕೆ ಕರೆದೊಯ್ಯುತ್ತವೆ. ಬಹಳಷ್ಟು ಓದುಗರು ಸೂಚಿಸಿರುವಂತೆ, ಕೆಲವು ಪಾತ್ರಗಳಿಗೆ ತಾರ್ಕಿಕ ಅಂತ್ಯ ಕೊಡಿಸಿಲ್ಲ. ಕೊನೆಯ ಕೆಲವು ಪುಟಗಳು ಆತುರದಲ್ಲಿ ಮುಗಿದುಹೋಗುತ್ತವೆ. ಒಟ್ಟಾರೆ 18 ಶತಮಾನಗಳ ಹಿಂದೆ ಜನಜೀವನ, ಭಾಷೆ, ಲಿಪಿ, ವ್ಯಾಪಾರ ಹೇಗಿದ್ದವು ಎಂದು ತಿಳಿಯಲು ಪ್ರತಿಯೊಬ್ಬರು ಓದಲೇಬೇಕಾದ ಅದ್ಭುತ ಪುಸ್ತಕವಾಗಿ "ರೇಷ್ಮೆ ಬಟ್ಟೆ" ಕಾದಂಬರಿ ಮೂಡಿ ಬಂದಿದೆ.
Profile Image for Harsha Raghuram.
Author 2 books13 followers
October 13, 2024
ಓದಿ ಮುಗಿಸಿ ಮೂರು ದಿನಗಳಾದರೂ ಕಾದಂಬರಿಯಲ್ಲಿ ಬರುವ ಬಣ್ಣಗಳು, ದೃಶ್ಯಾವಳಿಗಳು ಮನಸ್ಸಿನಿಂದ ಮಾಸಿಲ್ಲ. ವಸುಧೇಂದ್ರರ ಹಿಂದಿನ ಕಾದಂಬರಿ ʼತೇಜೋ-ತುಂಗಭದ್ರಾʼ ಚೋಳರ ದೇವಾಲಯವಾದರೆ ʼರೇಷ್ಮೆ ಬಟ್ಟೆʼ ಹೊಯ್ಸಳರ ದೇವಾಲಯ. ನೋಡಿದೊಡನೆ ಬೆರಗು ಮೂಡಿಸುವ ದೊಡ್ಡ ಗೋಪುರ ಇಲ್ಲಿಲ್ಲ, ಬದಲಾಗಿ ಸಮಾಧಾನದಿಂದ ಆಸ್ವಾದಿಸಬೇಕಾದ ಕುಸುರಿ ಕೆಲಸವಿದೆ. ರೇಷ್ಮೆಯ ಏಳೆಗಳನ್ನು ತೆಗೆಯುವಷ್ಟೇ ಚಾಣಾಕ್ಷತೆಯಿಂದ ನಾಲ್ಕು ಎಳೆಗಳನ್ನು ಸೇರಿಸಿ ಬಣ್ಣಬಣ್ಣದ ಒನಪು ಬಟ್ಟೆಯನ್ನು ಲೇಖಕರು ಹೆಣೆದಿದ್ದಾರೆ.

ಕಾಡು-ನಾಡಿನ ಮಾತುಕತೆಗಳು ಇಂದಿಗೂ ಪ್ರಸ್ತುತ ಅನ್ನಿಸುತ್ತವೆ. ರೇಷ್ಮೆಯಷ್ಟೇ ಅಲ್ಲದೆ ನೀಲಿ ಕಲ್ಲು, ಸಿಂಹಳದ ಮುತ್ತು ಮುಂತಾದ ವಹಿವಾಟಿನ ಸಾಮಾನುಗಳೇ ಕತೆಯನ್ನು ಅದ್ಭುತವಾಗಿ ಮುನ್ನಡೆಸುತ್ತವೆ. ರೋಚಕತೆ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ರೋಚಕವಾಗಬಹುದಾದ ಘಟನೆಗಳನ್ನು ಯಃಕಶ್ಚಿತ್‌ (matter-of-fact) ಎಂಬಂತೆ ಚಿತ್ರಿಸಿ, ಅದರ ಹಿಂದೆ ಮುಂದೆ ನಡೆಯುವ ಘಟನೆಗಳ ಮೇಲೆ ಓದುಗರ ಗಮನ ಕೇಂದ್ರೀಕರಿಸುವಂತೆ ಮಾಡಿರುವುದು ವಿಶೇಷವಾಗಿ ಕಂಡಿತು.

ʼರೇಷ್ಮೆ ಬಟ್ಟೆಯನ್ನುʼ ನಾನು ಕೇವಲ historical fiction ಅಲ್ಲದೇ ethnographic fiction ಎಂದು ಪರಿಗಣಿಸುತ್ತೇನೆ. ಭಾಷೆ, ಲಿಪಿ, ವೇಷ ಭೂಷಣ, ರೀತಿ ರಿವಾಜು ಇವುಗಳ ಮೇಲೆ ಲೇಖಕರಿಗಿರುವ ವಿಶೇಷ ಆಸಕ್ತಿಗಳು ಕಾದಂಬರಿಯಲ್ಲಿ ಚೆನ್ನಾಗಿ ವ್ಯಕ್ತವಾಗಿವೆ. ಕಾನಿಷ್ಕನ ಪಾತ್ರ ಕತೆಯಲ್ಲಿ ಬಂದರೂ ಅದನ್ನು ಕೇವಲ ದೇಶಕಾಲಗಳ ಚೌಕಟ್ಟನ್ನು ಹಾಕುವುದಕ್ಕೆ ಹಾಗೂ ರೇಷ್ಮೆಯ ವಹಿವಾಟು ಮತ್ತು ಧರ್ಮಪ್ರಚಾರದಲ್ಲಿ ಅವನ ಪಾತ್ರವನ್ನು ತಿಳಿಸುವುದಕ್ಕಷ್ಟೇ ಬಳಸಿಕೊಳ್ಳಲಾಗಿದೆ. ಯಾವುದೇ ದೇಶ,‌ ಧರ್ಮ ಅಥವಾ ವ್ಯಕ್ತಿಯ ವೈಭವೀಕರಣ ಇಲ್ಲಿಲ್ಲ.

ಕಾದಂಬರಿಯನ್ನು ಲೇಖಕರು ಕನ್ನಡದ ಓದುಗರಿಗಾಗಿ ಬರೆದಿದ್ದರೂ ಆಯ್ದುಕೊಂಡ ವಿಷಯ ಮತ್ತು ಕತೆ ಹೆಣೆದಿರುವ ರೀತಿ ಇದಕ್ಕೆ ಒಂದು ಗ್ಲೋಬಲ್‌ ಔಟ್‌ಲುಕ್‌ ನೀಡಿದೆ. ‘ರೇಷ್ಮೆ ಬಟ್ಟೆ’ ಆದಷ್ಟು ಬೇಗ ಇಂಗ್ಲೀಷ್‌ ಸೇರಿದಂತ ಹಲವಾರು ಭಾಷೆಗಳಿಗೆ ಅನುವಾದವಾಗಲಿ ಎಂದು ಹಾರೈಸುತ್ತೇನೆ.
Profile Image for pustakamare.
89 reviews13 followers
April 10, 2025
ಸರಿ. ಈ ಕಾದಂಬರಿಯನ್ನ ಓದೋಕೆ ಶುರುಮಾಡಿ ಸುಮಾರು ದಿನವೇ ಆಯ್ತು. ಸರಿಯಾಗಿ ಪುರ್ಸೊತ್ತೆ ಸಿಗ್ತಾ ಇರ್ಲಿಲ್ಲ.
ಇಲ್ಲಿ ಕತೆ ಎಂತ ಇದೆ ಆತ ಹುಡ್ಕೊಂಡು ಓದ್ತಾ ಹೋದ್ರೆ ಸ್ವಲ್ಪ ಗಲಿಬಿಲಿ ಆಗ್ಬೋದು. ರೇಷ್ಮೆಬಟ್ಟೆಯಿಂದ ಶುರುವಾದ ವ್ಯಾಪಾರದ ರಸ್ತೆ ಹರಿದು ಹೋದಲೆಲ್ಲಾ ಅಕ್ಕಪಕ್ಕ ಸಿಕ್ಕ ಕೆಲವು ಧರ್ಮ, ಭಾಷೆ, ಜನ, ಬದುಕು, ಶೈಲಿಯನ್ನ ಅನ್ವೇಷಿಸುತ್ತ ಹೋಗೋ ಕಾದಂಬರಿ ಇದು. ಗಾತ್ರ ಸ್ವಲ್ಪ ದೊಡ್ಡದೇ. ಸಮಯ ಸ್ವಲ್ಪ ಜಾಸ್ತಿನೇ ತಗೊಳುತ್ತೆ. ತೇಜೋ ತುಂಗಭದ್ರಾದ ವೇಗ, ಓಗ, ಹಿಡಿತವನ್ನೆಲ್ಲ ಇಲ್ಲಿ ಹುಡ್ಕೊಂಡು ನೀವು ಬಂದಿದ್ರೆ ಸ್ವಲ್ಪ ನಿರಾಸೆ ಆಗಬಹುದು.
ತುಂಬಾ ಪಾತ್ರಗಳು ಇಲ್ಲಿ ಬರೋದರಿಂದ ಯಾರು ಅಷ್ಟೊಂದು ಮನಸಿಗೆ ಹತ್ರ ಆಗಲ್ಲ. ಇನ್ನು ಪ್ರೀತಿ ಪ್ರೇಮ ಇದ್ರು ತುಂಬಾ ಕಮ್ಮಿ ಅನಿಸುತ್ತೆ. Non linear ಅಂದ್ರೆ ಆಕಡೆ ಈಕಡೆ ಧರ್ಮ, ಊರುಗಳಲ್ಲೆಲ್ಲ ಇದು ಓಡಾಡೋದ್ರಿಂದ, ಅಲ್ಲಿ ಬರೋ ಪಾತ್ರಗಳ ಹೆಸರು ನಮಗೆ ತೀರಾ ಅಪರಿಚಿತ ಅನಿಸೋದರಿಂದ ಯಾರು ಏನು ಎಲ್ಲಿ ಅಂತ ಸ್ವಲ್ಪ ಗೊಂದಲ ಹುಟ್ಟುತ್ತೆ. ಸಸ್ಪೆನ್ಸು ಕಮ್ಮಿ ಅನಿಸ್ತು. ಈ ತುಷಾರರ ಕತೆ ಶುರುವಾದಾಗ ಬರೆವಣಿಗೆ ಸ್ವಲ್ಪ ಗಿರ್ಕಿ ಹೊಡೀತಾ ಇತ್ತು ಅನಿಸ್ತು. ಕಾದಂಬರಿಯ ಕೊನೆ ಅರ್ಧ ಆದಂಗೆ ಅನಿಸ್ತು.
ಇನ್ನ ನಿಸ್ವಾರ್ಥ, ಬದುಕಿನ ಅರ್ಥ ಅನ್ನೋ ವಿಷಯಗಳೆಲ್ಲ ವಯಕ್ತಿಕವಾಗಿ ನನಗೆ ಬೋರು ಹೊಡೆಸೋದರಿಂದ ಕಾದಂಬರಿ ತೇಜೋ ಅಷ್ಟು ಇಂಪ್ರೆಸ್ ಮಾಡಲಿಲ್ಲ. ಇನ್ನ ಹಂಪಮ್ಮ, ಬೆಲ್ಲ, ಹಂಪಿಯಷ್ಟು ಪಾತ್ರಗಳು, ಪಾತ್ರೆಗಳು, ಊರುಗಳು ಮನಸಲ್ಲಿ ನೆನಪು ಉಳಿಯಲಿಲ್ಲ.
ಆಮೇಲೆ ನೀವ್ ಇದನೆಲ್ಲ ನಾನ್ ಬರದ್ ಓದ್ತಾ ಇದ್ರೆ ತೇಜೋಗೆ ಹೋಲಿಸಿ, ಮನಸಲ್ಲಿ ಅದರ ಅನುಭವಗಳನ್ನ ಇಟ್ಟುಕೊಂಡು ಓದಿರೋದು ಸ್ಪಷ್ಟವಾಗಿ ಕಾಣಿಸುತ್ತೆ. ಮಂಡೆಯಿಂದ ತೇಜೋ ಅನುಭವಗಳನ್ನ ಹೊರಗಿಟ್ಟು ಓದ್ತಾ ಹೋದ್ರೆ ಉತ್ತಮ ಅಂತ ನನಗೆ ಅನಿಸ್ತು. ನಾನ್ ಕೇಳಿರೋರಲ್ಲಿ ಹೆಚ್ಚಿನೋರಿಗೆ ರೇಷ್ಮೆ ಬಟ್ಟೆ ಇಷ್ಟ ಆಗಿದೆ ಅಂತ ಹೇಳೋದರಿಂದ ನೀವ್ ಒಮ್ಮೆ ಓದಿ ತಿಳಿಸಬಹುದು.
ಜೈ!
Profile Image for Ramaprasad KV.
Author 3 books64 followers
November 14, 2024
ವಸುಧೇಂದ್ರ ಅವರ #ರೇಷ್ಮೆಬಟ್ಟೆ. ಚಾರಿತ್ರಿಕ ಕಾಲದಲ್ಲಿ ಹೆಣೆದ ಕುತೂಹಲಕಾರಿ ಕಾಲ್ಪನಿಕ ಕಾದಂಬರಿ.

ಸುಮಾರು 2000 ವರ್ಷದ ಹಿಂದಿನ , ಇಂದಿನ ಭಾರತದ ಗಡಿಗೆ ಹೊರಗೆ ಆದರೆ ಅಂದಿನ ಭಾರತದ ಪ್ರಭಾವಲಯದೊಳಗಿದ್ದ ಮಧ್ಯ ಏಷ್ಯಾದ ಭಾಗಗಳಲ್ಲಿ ನಡೆದಿರಬಹುದಾದ ಕಥೆ. ಸರಾಗವಾಗಿ ಓದಿಸಿಕೊಂಡು ಹೋಗುತ್ತೆ. ಪಾತ್ರಗಳ ಚಿತ್ರಣ ಚೆನ್ನಾಗಿ ಮೂಡಿಬಂದಿದೆ. ಕಾಶ್ಮೀರದಿಂದ ಪಶ್ಚಿಮಕ್ಕೆ ಹೋಗುತ್ತ ಪುರುಷಪುರ (ಪೆಷಾವರ್) ಬಾಹ್ಲಿಕ( Balkh) , ಸಮರಖಂಡ ಮತ್ತೆ ಅಲ್ಲಿಂದ ಪೂರ್ವ ದಿಕ್ಕಿಗೆ ಹೊರಳಿ ಮರುಭೂಮಿಗಳ ನಡುವೆ ಚೀನಾ ದೇಶದ ಹಳೆಯ ರಾಜಧಾನಿ ಲುವೋಯಂಗ್ ವರೆಗೆ ಕಾದಂಬರಿಕಾರರು ನಿಮ್ಮನ್ನು ಪ್ರಯಾಣ ಕೊಂಡೊಯ್ಯುತ್ತಾರೆ. ಸಂಸ್ಕೃತ ಪಾಲಿ ಪ್ರಾಕೃತಗಳು. ಪಾರಸೀಕ, ತೊಖಾರಿ , ಸೊಗಾಡಿ, ಚೀನೀ ಮೊದಲಾದ ಹಲವು ಭಾಷೆಗಳ ಬಣ್ಣವಿರುವ ವರ್ಣಮಯ ಚಿತ್ರವನ್ನಿಲ್ಲಿ ಕಾಣಬಹುದು. ಮತ ಭಾಷೆಗಳ ಜೊತೆ ಬರವಣಿಗೆ ಕೂಡ ಹೇಗೆ ಸಾಗಿರಬಹುದು ಎಂಬ ಕಲ್ಪನೆಯನ್ನು ಹೆಣೆದ ಭಾಗ ನನಗೆ ಬಹಳ ಹಿಡಿಸಿತು.

ರೇಷ್ಮೆಬಟ್ಟೆ ಯ ಜೊತೆ ಬೌದ್ಧ ಧರ್ಮ ಹರಡಿದ್ದು , ವ್ಯಾಪಾರಕ್ಕೆಂದು ತಿಂಗಳಾನುಗಟ್ಟಲೆ ಮರುಭೂಮಿಯ ಪಯಣ, ಅದರ ಸಾಧಕಬಾಧಕಗಳು , ಸರಕು ನೇರ ವಿನಿಮಯದ ಬದಲು ದುಡ್ಡಿನ ಬಳಕೆ , ವೈಡೂರ್ಯ ದ ಗಣಿಗಾರಿಕೆ ಇಂತಹ ಹತ್ತು ಹಲವು ವಿಚಾರ ಇಲ್ಲಿ ನಿಮಗೆ ಕಂಡುಬರುತ್ತವೆ. ಒಂದೆರಡು ವಿಷಯಗಳು ಅಸಂಭವ ಎನ್ನಿಸಿದರೂ - ಅದರಿಂದ ಪುಸ್ತಕ ಓದುವ ಆನಂದ ಏನೂ ಕಡಿಮೆ ಆಗಲಾರದು.

ಮಧುಮಾಯಾ ಮತ್ತು ಸಗನೇಮಿಯಂತಹ ಹಲವು ಪಾತ್ರಗಳು, ಅವರ ಮಾತುಗಳು ಮನಸ್ಸಿನಲ್ಲಿ ಉಳಿಯುತ್ತವೆ. ಅಲ್ಲಲ್ಲಿ ಸಾರ್ಥ ಕಾದಂಬರಿಯ ಕೂಡ ನೆನಪು ಬರಬಹುದು ಓದುಗರಿಗೆ.
Profile Image for Mahesh.
89 reviews
October 28, 2024
ಲೇಖಕ ಶ್ರೀ ವಸುದೇಂದ್ರರ ಎರಡನೇ ಕಾದಂಬರಿಗೆ ಕಾಯುವಂತೆ ಮಾಡಿದ್ದು ಅವರ ಮೊದಲ ಕಾದಂಬರಿ 'ತೇಜೊ ತುಂಗಭಧ್ರ'. ಚೀನಾ ಆವಿಷ್ಕಾರಗಳ ನಾಡು ಹಾಗು ತಮ್ಮ ನಡೆ ನುಡಿಗಳನ್ನು ಬಹು ಗೌಪ್ಯವಿರಿಸುವ ನಾಡು ಸಹ ಎಂದು ತಿಳಿ���ಿತ್ತು ಆದ್ದರಿಂದಲೇ ರೇಷ್ಮೆ ದಾರಿಯ ಬಗ್ಗೆ ಸಹಜವಾಗೇ ಕುತೂಹಲವಿತ್ತು ಅದನ್ನು ತಿಳಿಯಲು ಈ ಕಾದಂಬರಿ ನನಗೆ ಮುನ್ನುಡಿಯಾಗಿದೆ.ಚೀನಾ ತನ್ನ ಸರಕನ್ನು ಮಾರಲು ಮಾರುಕಟ್ಟೆ ವೃದ್ಧಿಸಿಕೊಳ್ಳುವ ವಿದ್ಯೆ ಶತಮಾನಗಳ ಇತಿಹಾಸವಿರುವುದು ಈ ಓದು ಪುಷ್ಟಿಕರಿಸುತ್ತದೆ. ಎಲ್ಲಿಯ ಚೀನಾ ಎಲ್ಲಿಯ ಸಮರಕಂಡ್, ಭಾಷೆ ಬೇರೆ ರೀತಿ ರಿವಾಜು ಬೇರೆ, ಹವಾಗುಣ ತೀರಾ ಭಿನ್ನ ಆದರೂ ಒಂದು ನಾಡಿನಿಂದ ಇನ್ನೊಂದು ನಾಡಿಗೆ ಸಾರ್ಥ ವಾಹಕರ ಜೊತೆ ತಮ್ಮ ಮಾರುಕಟ್ಟೆ ಹಾಗು ಧರ್ಮದ ವಿಸ್ತರಿಸಿದ್ದು ಹೇಗೆ ಅಂತ ತಿಳಿಯುವಲ್ಲಿ 'ರೇಷ್ಮೆ ಬಟ್ಟೆ ' ಒಂದು ಭಿತ್ತಿಯಲ್ಲಿ ಕಟ್ಟಿಕೊಟ್ಟಿದೆ. ಜಾಗತೀಕರಣದಿಂದ ಅಭಿವೃದ್ಧಿ ಒಂದೇ ಅಲ್ಲದೇ ನಮ್ಮ ಸಂಸ್ಕೃತಿಗೆ ಅಭದ್ರತೆಯನ್ನು ತಂದುಕೊಂಡಿದ್ದೇವೆ, ನಮಗೆ ಇದು ಹೊಸದೇನು ಅಲ್ಲ ಅನ್ನಿಸುವಂತೆ ಶತಮಾನಗಳಿಂದ ಸ್ಥಳೀಯ ಸಂಸ್ಕೃತಿಗಳ ಮೇಲೆ ಅನ್ಯರ ಆಕ್ರಮಣ ನಡದೇ ಇದೆ ಅಭಿವೃದ್ಧಿ ಎಂಬ ಹಣೆಪಟ್ಟಿಯಿಂದ ಇದನ್ನು ಬಿಸಿತುಪ್ಪದ ಹಾಗೆ ಅನುಭವಿಸಲೇ ಬೇಕಾದ ಅನಿವಾರ್ಯ ಹಲವರದ್ದಾಗಿದೆ. ಇವಿಷ್ಟು ಕಾದಂಬರಿಯ ಹೂರಣದ ಕೆಲವು ಭಾಗ ಮಾತ್ರ ಕಾದಂಬರಿ ಓದಿಸಿಕೊಂಡು ಹೋಗುವುದಕ್ಕೆ ಭಾವನೆಗಳ ತಂತುಗಳನ್ನು ಸರಿಯಾಗಿ ಹೆಣೆದು ಹಲವು ಚಿತ್ತಾರದ ರೇಷ್ಮೆ ಬಟ್ಟೆಯನ್ನು ಲೇಖಕಕರು ಸಿದ್ದಪಡಿಸಿದ್ದಾರೆ.
Profile Image for Rathish Kumar.
53 reviews3 followers
July 3, 2025
This is a beautifully crafted journey into the world of the ancient Silk Route. Though I thought I knew history well, this book introduced me to the Parthians, the Kushanas, and the cultural and political landscape of 2,000 years ago.

It vividly portrays the lifestyle of forest tribes, Buddhists, and followers of Zoroastrianism, while offering deep insights into silk production, trade secrets, and ancient religions. I even learned that blue was the hardest color to produce naturally!

Characters like Buddhamitra, Saganemi, and Shikhanema left a strong impression. While I hoped for a final reunion of Mitravandaka and Saganemi, the story still felt emotionally satisfying.

Compared to Tejo Tungabhadra, this novel felt more immersive—possibly because of its older historical setting, which I deeply enjoy. A must-read for history lovers!
Profile Image for ಸುಶಾಂತ ಕುರಂದವಾಡ.
424 reviews25 followers
December 20, 2024
ತೇಜೋ ತುಂಗಭದ್ರಾ ಓದಿದ ಮೇಲೆ ಅದರಂತೆಯೇ ಎಲ್ಲೋ ಟ್ವಿಸ್ಟ್ ಥರ ಇರಬಹುದು ಅಂತ ಅನ್ನಿಸಿತ್ತು ಆದರೆ ಪ್ರಾಯಶಃ ಅದೇ ನಿರೀಕ್ಷೆಯಲ್ಲಿದ್ದಿದ್ದಕ್ಕೆ ಸ್ವಲ್ಪ ಹುಸಿಯಾಯಿತೇನೋ. ಒಂದು ಸಲ ವಸುಧೇಂದ್ರ ಅವರ ಜೊತೆ ಮಾತನಾಡಿದಾಗ ಅವರು ಹೇಳಿದ್ದರು ತುಂಬಾ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದೇನೆ ಕಣೋ ಅಂತ, ಅದರ ಫಲಿತಾಂಶ ರೇಷ್ಮೆ ಬಟ್ಟೆ ಕಾದಂಬರಿ. ಎರಡನೇ ಶತಮಾನದಲ್ಲಿ ರೇಷ್ಮೆ ಬಟ್ಟೆ ವ್ಯಾಪಾರದಿಂದ ಉಂಟಾದ ಆಧುನೀಕರಣ ಮತ್ತು ಅಧಿಕಾರಶಾಹಿಯ ಕರಾಳ ಮುಖವನ್ನು ಇಲ್ಲಿ ಲೇಖಕರು ಎತ್ತಿ ತೋರಿಸಿದ್ದಾರೆ. ಹವಿನೇಮನ ಮನಸ್ಸಿನ ತೊಳಲಾಟವನ್ನು ಚೆನ್ನಾಗಿ ಬರೆದಿದ್ದಾರೆ. ಆದರೆ ಅಂತ್ಯವನ್ನು ಸ್ವಲ್ಪ ಗಡಿಬಿಯಲ್ಲಿ ಮುಗಿಸಿದರೇನೋ ಎನಿಸಿತು. ಆದರೂ ಕನ್ನಡಕ್ಕೆ ಒಳ್ಳೆಯ ಕಾದಂಬರಿಯನ್ನು ವಸುಧೇಂದ್ರ ಅವರು ನೀಡಿದ್ದಾರೆ.
Profile Image for Veeresh Hiremath.
3 reviews
February 11, 2025
Vasudhendra's meticulous research and storytelling brilliance shine in Reshme Batte. The way he delves into history and presents it in an engaging narrative is truly remarkable. The book offers a deep, thought-provoking exploration, making it one of the best reads of 2024. A must-read for anyone who appreciates well-researched historical fiction with a compelling narrative.
3 reviews
February 17, 2025
Story run towards globalisation effects in India and China. Must read novel.
Profile Image for Raghavendra Shekaraiah.
34 reviews
May 21, 2025
ಈ ಕಾದಂಬರಿಯನ್ನು ನಾನು ಬಹಳ ಆಸಕ್ತಿಯಿಂದ ಓದಿದೆ. ಶೀರ್ಷಿಕೆ ನೋಡಿದಾಗಲೇ ಇದು ರೇಷ್ಮೆಯ ಬಗ್ಗೆ ಅಂತ ಗೊತ್ತಾಯಿತು. ಭಾರತಕ್ಕೆ ರೇಷ್ಮೆ ಹೇಗೆ ಬಂತು ಎಂಬುದನ್ನು ಕಾದಂಬರಿ ರೂಪದಲ್ಲಿ ನಿರೀಕ್ಷಿಸಿದ್ದೆ. ಓದಲು ಶುರು ಮಾಡಿದಾಗ, ಕಥೆ ನನ್ನನ್ನು ಸೆಳೆಯಿತು ಆದರೆ ಎರಡನೆ ಭಾಗದಿಂದ ಆ ಹಿಡಿತ ಕಳೆದುಕೊಳ್ಳಲು ಶುರುವಾಯಿತು. ಲೇಖಕರು ಬೇರೆ ಬೇರೆ ಜಾಗಗಳಲ್ಲಿ ಬೇರೆ ಬೇರೆ ಜನರ ಸ್ಥಿತಿಗಳನ್ನು ಬರೆದು, ನಂತರ ಅವುಗಳನ್ನು ಜೋಡಿಸಲು ಪ್ರಯತ್ನಿಸಿದ್ದಾರೆ, ಆದರೆ ಎಲ್ಲವನ್ನೂ ಜೋಡಿಸದೇ ಕೆಲವನ್ನು ಮಾತ್ರ ಜೋಡಿಸಿದ್ದಾರೆ.

ಕಥೆಯಲ್ಲಿ ಜನ ವಸ್ತುಗಳ ವ್ಯಾಪಾರದಿಂದ ನಾಣ್ಯ ವ್ಯಾಪಾರಕ್ಕೆ ಹೋದ ಬದಲಾವಣೆ, ಆ ಕಾಲದಲ್ಲಿನ ಕಷ್ಟಗಳು ತೋರಿಸಿದ್ದಾರೆ. ಹೆಂಗಸರನ್ನ ವ್ಯಾಪಾರದ ವಸ್ತುಗಳಂತೆ ನೋಡಿದ್ದು ಮತ್ತು ಅವರು ಹೇಗೆ ಭಾವಿಸಿದರು ಆದ್ರು ಅಂತಾನೂ ತೋರಿಸಿದ್ದಾರೆ. ನನಗನ್ನಿಸಿದ್ದು ಕಥೆ ಸ್ವಲ್ಪ ಪಾಲಿಶ್ ಮಾಡಿದಂತಿದೆ ಮತ್ತು ನಿಜದಿಂದ ದೂರವಾಗಿದೆ. ಇದು ಓದಲು ಸುಲಭ, ಗೊಂದಲವಿಲ್ಲದ ಕಾದಂಬರಿ. ಲೇಖಕರ ಬರವಣಿಗೆಯ ಶೈಲಿ ನನಗೆ ಇಷ್ಟವಾಯಿತು. ಆದರೆ ಪಾತ್ರಗಳಿಗೆ ಇನ್ನಷ್ಟು ಆಳ ನೀಡಿ, ಓದುಗರು ಅವುಗಳೊಂದಿಗೆ ಸಂಬಂಧ ಬೆಳೆಸಲು ಅವಕಾಶ ಮಾಡಿಕೊಡಬೇಕಿತ್ತು.

ಕೆಲವು ಪದಗಳು ನನಗೆ ಸಂಪೂರ್ಣ ಹೊಸದಾಗಿದ್ದವು, ಓದುವುದು ನಿಲ್ಲಿಸಿ ಅರ್ಥಮಾಡಿಕೊಳ್ಳಬೇಕಾಯಿತು. ಒಟ್ಟಾರೆಯಾಗಿ ಓದಲು ಚೆನ್ನಾಗಿದೆ, ಆದರೆ ಇನ್ನೂ ಉತ್ತಮವಾಗಿರಬಹುದಿತ್ತು. ಕೊನೆಯಲ್ಲಿ, ಕಾದಂಬರಿ ಅಪೂರ್ಣವಾಗಿದೆ, ಲೇಖಕರು ನಮ್ಮಲ್ಲಿ ಹೊಸ ಪ್ರಾರಂಭ, ಅಧ್ಯಾಯ, ಯುಗದ ಭಾವನೆಯನ್ನು ಬಿಟ್ಟಿದ್ದಾರೆ.
Profile Image for Amit B.
4 reviews
August 22, 2025
Though there is substance in it,
Basic writing style is kind of turn off for me

If you’re interested in history
will be decent read
Displaying 1 - 24 of 24 reviews

Can't find what you're looking for?

Get help and learn more about the design.