ಎಷ್ಟೋ ಪುಸ್ತಕದ ಬಗ್ಗೆ ಮಾತಾಡ್ತೀವಿ, ಬರಿತೀವಿ. ಆದರೆ, ಕೆಲವು ಪುಸ್ತಕವನ್ನ ಓದಿನು ಬರೆಯೋದಕ್ಕೆ ಆಗಲ್ಲ. ಅಂತಹ ಪುಸ್ತಕಗಳು ನಮ್ಮನ್ನ ಕಾಡುತ್ತವೆ, ಬಿಕ್ಕಿಬಿಕ್ಕಿ ಅಳಿಸುತ್ತವೆ ಮತ್ತು ಮೌನವಾಗಿಸುತ್ತವೆ.
ಜಗತ್ತಿನಲ್ಲಿ ತಾಯಿ ಪ್ರೀತಿಗೆ ಸಮನಾದುದ್ಯಾವುದಿದೆ? ತನಗೆ ಹುಟ್ಟಿದವನು ದುಷ್ಟನೋ, ಶ್ರೇಷ್ಠನೋ. ಅವಳ ಪ್ರೀತಿಯಲ್ಲಿ ವ್ಯತ್ಯಾಸವಿರುವುದಿಲ್ಲ.. ಜೀವನ ಒಂದು ಹಂತಕ್ಕೆ ಬಂದ ಮೇಲೆ ತನ್ನ ತಾಯಿಯನ್ನು ಮರೆತು ಬಿಡುವ ಅದೆಷ್ಟೋ ಮಕ್ಕಳಿದ್ದಾರೆ. ಪಾಪ ಅವಳು ಮಾಡಿದ ತ್ಯಾಗಕ್ಕೆ ಚೂರು ಬೆಲೆಯೇ ಇಲ್ಲದಂತಾಯಿತು.. ತನ್ನ ಮಕ್ಕಳಿಗೋಸ್ಕರ ಸಮಾಜವನ್ನೇ ಎದುರು ಹಾಕಿಕೊಳ್ಳುತ್ತಾಳೆ ಅವಳು. ಅವಳ ಮಕ್ಕಳ ಖುಷಿಯನ್ನು ನೋಡಿ ಬದುಕು ಕೊಟ್ಟ ನೋವನ್ನೆ ಮರೆಯುತ್ತಾಳೆ. ಅವಳು ಕೊಟ್ಟಷ್ಟು ಪ್ರೀತಿಯನ್ನು ಅವಳಿಗೆ ಹಿಂದಿರುಗಿ ಕೊಡಲಾಗುವುದಿಲ್ಲವಾದರು ಕೊನೆಯ ತನಕ ಅವಳನ್ನು ಚೆನ್ನಾಗಿ ನೋಡಿಕೊಳ್ಳುವುದು ಪ್ರತಿಯೊಬ್ಬನ ಜವಾಬ್ದಾರಿ..
ನನ್ನವ್ವನ ಬಯೋಗ್ರಫಿ ಜಯರಾಮಾಚಾರಿ ಅವರ ಅವ್ವನ ಜೀವನ ಚರಿತ್ರೆಯನ್ನುವುದಕ್ಕಿಂತ ಒಬ್ಬ ಗಂಡನ ಹೆಂಡತಿಯಾಗಿ ಅಲ್ಲೊಂದಿಷ್ಟು ಕಷ್ಟಗಳನ್ನು ಅನುಭವಿಸಿ, ಮತ್ತೆ ಒಂದಷ್ಟು ಮಕ್ಕಳ ತಾಯಿಯಾಗಿ ತನ್ನ ಗಂಡನನ್ನು ಕಳೆದುಕೊಂಡು ಸವೆಸಿದ ಜೀವನದ ಚರಿತ್ರೆ ಅನ್ನಬಹುದು. ಒಂದೇ ಗುಟುಕಿನಲ್ಲಿ ಓದಬಹುದಾದ ಪುಸ್ತಕ. ಪ್ರತಿಯೊಂದು ಪುಟಗಳು ಭಾವಾತ್ಮಕವಾಗಿದೆ. ಓದುವಾಗ ಕಣ್ಣಂಚು ಒದ್ದೆ ಮಾಡುತ್ತದೆ. ಜೀವನ ಪರಿಯಂತ ಸ್ವಾಭಿಮಾನಿಯಾಗಿ ಬದುಕಿದ ಜೀವ ಕೊನೆಯಕಾಲದಲ್ಲಿ ಇನ್ನೊಬ್ಬರಿಗೆ ಭಾರವಾಗಬೇಕಾಯಿತಲ್ಲ ಎಂದು ದುಃಖ ಪಡುವಾಗ ಎಲ್ಲಿಲ್ಲದ ಸಂಕಟ ಕಾಡುದಂತು ಹೌದು..
ಕನ್ನಡದ ಹೊಸ ಲೇಖಕ ಜಯರಾಮಾಚಾರಿ ಅವರ ನನ್ನವ್ವನ ಬಯೋಗ್ರಾಫಿ...ಪುಸ್ತಕದ ಬಗ್ಗೇ ಸಾಮಾಜಿಕ ಜಾಲತಾಣಗಳಲ್ಲಿ ತಿಳಿದು ಒಂದೇ ಗುಟುಕಿನಲ್ಲಿ ಓದಿ ಮುಗಿಸಿದೆ... ಇಲ್ಲಿ ಲೇಖಕರು ತನ್ನ ಅವ್ವನ ಬಗ್ಗೇ ಬಹಳ ಚಿಕ್ಕದಾಗಿ ಚೊಕ್ಕದಾಗಿ ಬರೆದಿದ್ದಾರೆ..... ತನ್ನ ಅವ್ವನೂ ಕ್ಯಾನ್ಸರ್ ಬಂದು ಪಟ್ಟ ಕಷ್ಟದ ದಿನಗಳನ್ನು...ಅಮ್ಮನ ಪ್ರೀತಿ ತ್ಯಾಗ ಎಲ್ಲವನ್ನೂ ಮನಮುಟ್ಟುವಂತೆ ಬರೆದಿದ್ದಾರೆ........ಇದು ಓದಬೇಕಾದರೆ ಅಲ್ಲಲ್ಲಿ ಅವರವರ ಅಮ್ಮಂದಿರ ನೆನಪು ಮೂಡಿ ಕಣ್ಣಂಚಲಿ ನೀರು ಜಿನುಗುವಂತೆ ಮಾಡುತ್ತದೆ...
"ನಮ್ಮನ್ನು ಆಡಿ ಬೆಳೆಸಿದ ಹೆತ್ತವರು ನಮ್ಮ ಕಣ್ಣಮುಂದೆ ಅಸಹಾಯಕರಾಗಿ ನಿಲ್ಲುವುದು ಬದುಕಿನ ಅತ್ಯಂತ ಕೆಟ್ಟ ಕ್ಷಣ"...ಈ ಸಾಲು ನಮ್ಮನ್ನು ಬಹಳ ಕಾಡುತ್ತದೆ.ಒಟ್ಟಿನಲ್ಲಿ ಈ ಪುಸ್ತಕ ಹಲವು ದಿನಗಳವರೆಗೆ ನಮ್ಮ ನೆನಪಿನಲ್ಲಿ ಉಳಿಯುತ್ತದೆ.