Jump to ratings and reviews
Rate this book

ರಾಜಮಾತೆ ಕೆಂಪನಂಜಮ್ಮಣ್ಣಿ | Rajamate Kempananjammanni

Rate this book
ಬಂಗಾಳದ ಚತುರೆಯೊಬ್ಬಳು ಮೈಸೂರಿನ ಅರಮನೆಯ ಆಶ್ರಯ ಪಡೆದ ಪರಿಣಾಮದಿಂದಾಗಿಯೇ ನಮ್ಮ ರಾಷ್ಟ್ರಗೀತೆ ಆ ರಾಗರೂಪ ಪಡೆದದ್ದು! ತಿರುವಾಂಕೂರಿನ ಆಡಳಿತ ನೆಲೆ ನೀಡದ ದಲಿತವೈದ್ಯನಿಗೆ ಮೈಸೂರು ಆಶ್ರಯ ಕೊಟ್ಟ ಪರಿಣಾಮವೇ ಸ್ವಾಮಿ ವಿವೇಕಾನಂದರು ಸಿಡುಬುರೋಗ ದಿಂದ ಬಿಡುಗಡೆ ಪಡೆದು ಚಿಕಾಗೋಗೆ ಹೋಗಲು ಸಾಧ್ಯವಾದದ್ದು! ಕೋಲಾರದ ಚಿನ್ನದಗಣಿಗೆ ವಿದ್ಯುತ್ ಸರಬರಾಜು ಮಾಡಿ ಮುಂದೆ ಬೆಂಗಳೂರು ಸೇರಿದಂತೆ ನಮ್ಮ ನೆಲವನ್ನು ಬೆಳಗಿಸಿದ್ದು ಮೈಸೂರಿನ ರಾಣಿಯ ಪ್ರೋತ್ಸಾಹದಲ್ಲಿ ಸ್ಥಾಪಿತಗೊಂಡ ಕಾವೇರಿ ವಿದ್ಯುತ್ ಸ್ಥಾವರ! ಆ ರಾಣಿಯ ಮುಂದಾಲೋಚನೆಯಿಂದಾಗಿಯೇ ಸಿಡುಬು, ಪ್ಲೇಗ್ ಮುಂತಾದುವಕ್ಕೆ ಲಸಿಕೆಗಳು ಮೈಸೂರು ಪ್ರಾಂತ್ಯದಲ್ಲಿ ತಯಾರಾದದ್ದು. ಮಾರಿಕಣಿವೆಯಲ್ಲಿ ಕೃಷಿನೀರಾವರಿ ಅಣೆಕಟ್ಟು ನಿರ್ಮಾಣಗೊಂಡದ್ದು, ಬೆಂಗಳೂರಿನಲ್ಲಿ ಮಲ್ಲೇಶ್ವರಂ, ಬಸವನಗುಡಿಗಳು ಪ್ರಾರಂಭವಾದದ್ದು: ಟಾಟಾ ಅವರ ಆಶಯದ ವಿಜ್ಞಾನ ಸಂಸ್ಥೆ ನೆಲೆಗೊಂಡದ್ದು... ಇಂತಹ ಅದೆಷ್ಟೋ ಅಪರೂಪದ ಅಮೂಲ್ಯವಾದ ಕೈಂಕರ್ಯಗಳನ್ನು ಕೊಡುಗೆಯಾಗಿಸಿದ, ಜನಮನದಲ್ಲಿ ಹೊಸಚಿಂತನೆಗಳ ಬೀಜ ಬಿತ್ತಿದ, ಮೈಸೂರು ಪ್ರಾಂತ್ಯದ ಬೆಳವಣಿಗೆಯ ರೂವಾರಿಯಾಗಿದ್ದ ಅಪರೂಪದ ರಾಣಿ ಕೆಂಪನಂಜಮ್ಮಣ್ಣಿ ಯವರ ಹೃದಯಸ್ಪರ್ತಿ ಜೀವನಗಾಥೆ ಈ ಕೃತಿ. *-ಡಾ| ಕೆ.ಎನ್. ಗಣೇಶಯ್ಯ

496 pages, Paperback

First published January 1, 2024

2 people are currently reading
29 people want to read

About the author

ಡಾ| ಗಜಾನನ ಶರ್ಮಾರವರು ಪ್ರಸಿದ್ಧ ನಟ, ನಾಟಕಕಾರ, ನಿರ್ದೇಶಕ ಮತ್ತು ಸಾಹಿತಿಯು ಹೌದು. ವೃತ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿದ್ದರು ಕನ್ನಡ ಸಾಹಿತ್ಯದ ಹಲವಾರು ರಂಗಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ’ಪುನರ್ವಸು’ ಇವರ ಪ್ರಮುಖ ಕಾದಂಬರಿ. 'ನಾಣಿ ಭಟ್ಟನ ಸ್ವರ್ಗದ ಕನಸು', 'ಗೊಂಬೆ ರಾವಣ', ಆಗ ಮತ್ತು ಸುಂದರಿ', 'ಹಂಚಿನಮನೆ ಪರಸಪ್ಪ', 'ಪುಸ್ತಕ ಪಾಂಡಿತ್ಯ' ಮುಂತಾದ ಹತ್ತಕ್ಕೂ ಹೆಚ್ಚು ಮಕ್ಕಳ ನಾಟಕ, 'ಕನ್ನಂಬಾಡಿಯ ಕಟ್ಟದಿದ್ದರೆ', 'ದ್ವಂದ್ವ ದ್ವಾಪರ', 'ಬೆಳ್ಳಿಬೆಳಕಿನ ಹಿಂದೆ' ಮುಂತಾದ ನಾಟಕಗಳನ್ನು ರಚಿಸಿದ್ದಾರೆ.

ವಿಶ್ವೇಶ್ವರಯ್ಯನವರ ವೃತ್ತಿ ಜೀವನದ ಆತ್ಮಕಥೆಯನ್ನು ಕನ್ನಡಕ್ಕೆ 'ನನ್ನ ವೃತ್ತಿ ಜೀವನದ ನೆನಪುಗಳು' ಎಂಬ ಶೀರ್ಷಿಕೆಯಡಿ ಅನುವಾದಿಸಿದ್ದಾರೆ. 'ಕನ್ನಡದಲ್ಲಿ ಮಕ್ಕಳ ನಾಟಕ ಮತ್ತು ರಂಗಭೂಮಿ' ಎಂಬ ಮಹಾಪ್ರಬಂಧಕ್ಕಾಗಿ ಹಂಪಿಯ ಕನ್ನಡ ವಿಶ್ವವಿದ್ಯಾ ಲಯದಿಂದ ಡಾಕ್ಟೋರೇಟ್ ಪದವಿ ಪಡೆದಿದ್ದಾರೆ. ಕನ್ನಡ ಸುಗಮ ಸಂಗೀತದ ಮೇರುಪ್ರತಿಭೆ ಗರ್ತಿಕೆರೆ ರಾಘಣ್ಣನವರ ಬದುಕಿನ ಚಿತ್ರಣವಾದ 'ಕಾಡು ಕಣಿವೆಯ ಹಾಡುಹಕ್ಕಿ ಗರ್ತಿಕೆರೆ ರಾಘಣ್ಣ' ಇವರ ಇನ್ನೊಂದು ಮಹತ್ವದ ಕೃತಿ. ’ಕೈಲಾಸ ಮಾನಸ', 'ಗೋಮುಖಆಗಿ ಹೋಗುವ ಮುನ್ನ ಕಣ್ಣುಂಬಿಕೊಳ್ಳೋಣ' (ಪ್ರವಾಸ ಕೃತಿ), “ನನ್ನ ವೃತ್ತಿಯ ನೆನಪುಗಳು” ಕೃತಿಯಲ್ಲಿ ಅವರ ವೃತ್ತಿ ಬದುಕಿನ ಅನುಭವವನ್ನು ದಾಖಲಿಸಿದ್ದಾರೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
6 (46%)
4 stars
5 (38%)
3 stars
0 (0%)
2 stars
2 (15%)
1 star
0 (0%)
Displaying 1 - 6 of 6 reviews
Profile Image for Sanjay Manjunath.
201 reviews10 followers
January 13, 2025
ಮೈಸೂರು ಎಂದ ತಕ್ಷಣ ಒಂದು ಆಪ್ತ ಭಾವ ಮೂಡುತ್ತದೆ. ಆ ಭಾವದ ಮೂಲಸೆಲೆ ಎಂದರೆ ಅಲ್ಲಿನ ಪಾರಂಪರಿಕ ವಾತಾವರಣ. ಅಂತಹ ವಾತಾವರಣದ ನಿರ್ಮಾತೃಗಳಲ್ಲಿ ಅಗ್ರಗಣ್ಯರಾದ ರಾಜಮಾತೆ ಕೆಂಪನಂಜಮ್ಮಣಿಯವರ ಜೀವನಗಾಥೆ ಈ ಕೃತಿಯಲ್ಲಿದೆ.

ನಮ್ಮ ರಾಷ್ಟ್ರಗೀತೆಯ ರಾಗರೂಪದ ಮೂಲ ಮೈಸೂರು ಸಂಸ್ಥಾನದ ನಾಡಗೀತೆಯಿಂದ ಪ್ರೇರಣೆ ಪಡೆದಿದ್ದು ಎಂಬ ಅಚ್ಚರಿಯ ಭಾವ ದೊಂದಿಗೆ ಶುರುವಾಗುವ ಕಾದಂಬರಿ, ಕ್ರಮೇಣ ಸಾಗುವುದು ಮೈಸೂರು ಸಂಸ್ಥಾನ ಬ್ರಿಟಿಷ್ ಇಂಡಿಯಾದಲ್ಲಿಯೇ ಹೇಗೆ ಅತ್ಯುತ್ತಮ ಸಂಸ್ಥಾನವಾಗಿ ಒಡ ಮೂಡಿತು ಎಂಬುದನ್ನ ಬಿತ್ತರಿಸುವುದರಲ್ಲಿ.

ಇದಕ್ಕೆಲ್ಲ ಮೂಲ ಕಾರಣ ಒಡೆಯರ್ ರವರ ಕನಸುಗಳು. ಆ ಕನಸುಗಳನ್ನು ಗಟ್ಟಿಯಾಗಿ ನೆಲೆಗೊಳ್ಳಲು ಕಾರಣರಾಗಿದ್ದು ರಾಜಮಾತೆ ಮತ್ತು ಅವರಿಗೆ ಒತ್ತಾಸೆಯಾಗಿದ್ದ ಶೇಷಾದ್ರಿ ಅಯ್ಯನವರು.

13ನೇ ವಯಸ್ಸಿಗೆಲ್ಲ ಮದುವೆಯಾಗಿ, 14ನೇ ವಯಸ್ಸಿನಲ್ಲಿ ಮಗುವನ್ನು ಹೆತ್ತು, 28ನೇ ವಯಸ್ಸಿಗೆ ಬರುವಷ್ಟರಲ್ಲಿ ಐದು ಮಕ್ಕಳ ತಾಯಿಯಾಗಿ, ಆತ್ಮಸಖನಂತಿದ್ದ ಪತಿಯನ್ನು ಕಳೆದುಕೊಳ್ಳುವ ರಾಜಮಾತೆಯವರು.. ಲೇಡಿ ಮೆಗ್ಗಾನ್, ವೆಂಕಟಕೃಷ್ಣಯ್ಯನವರು ಮತ್ತು ಮುಂತಾದ ವ್ಯಕ್ತಿಗಳ ಮಾತುಗಳಿಗೆ ಬೆಲೆ ಕೊಟ್ಟು, ಮಗನಾದ ಕೃಷ್ಣರಾಜರಿಗಾಗಿ ಮತ್ತು ಪ್ರಜೆಗಳ ಹಿತಕ್ಕಾಗಿ ರೀಜೆಂಟರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ.

ತಮ್ಮ 7 ವರ್ಷಗಳ ಅಧಿಕಾರಾವಧಿಯಲ್ಲಿ ಅವರು ಸಾಧಿಸಿದ ಕಾರ್ಯಗಳು ಅನೇಕ..
"ವಿಕ್ಟೋರಿಯಾ ಆಸ್ಪತ್ರೆ, ಮಾರೀಕಣಿವೆ ಅಣೆಕಟ್ಟು, ಹೊಸದಾಗಿ ನಿರ್ಮಿಸಿದ ಅರಮನೆ, ಶಿವನಸಮುದ್ರದ ವಿದ್ಯುತ್ ಸ್ಥಾವರ, ವಿಜ್ಞಾನ ಮಂದಿರದ ಪೂರ್ವ ತಯಾರಿ, ಬಾಲ್ಯ ವಿವಾಹ ಪದ್ದತಿ ರದ್ದುಗೊಳಿಸಿದ್ದು, ವಿದೇಶಕ್ಕೆ ತೆರಳಲು ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ಕೆರೆಗಳ ನಿರ್ಮಾಣ, ರೈಲ್ವೆ ವಿಸ್ತರಣೆ. ಮಲೆನಾಡಿಗೆ ರೈಲು, ಪ್ಲೇಗ್ ನಿಯಂತ್ರಣಕ್ಕಾಗಿ ನಗರ ಪಟ್ಟಣಗಳ ನೈರ್ಮಲೀಕರಣ, ಬೆಂಗಳೂರು ಮೈಸೂರು ನಗರಗಳ ವಿಸ್ತರಣೆ, ಶಾಶ್ವತ ಕೊಳಾಯಿ ಕುಡಿಯುವ ನೀರು ಯೋಜನೆ."

ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಪ್ರಗತಿಪಥವನ್ನು ಸಾಧಿಸಿ ಮೈಸೂರಿನ ತಾಯಿಬೇರಾಗುತ್ತಾರೆ. ಇಷ್ಟೆಲ್ಲಾ ಸಾಧನೆಯ ನಡುವೆ ಮಕ್ಕಳ ಮೆಚ್ಚಿನ ತಾಯಿಯಾಗಿ, ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವುದಕ್ಕೆ ಭಾರತೀಯ ಮತ್ತು ಪಾಶ್ಚಾತ್ಯ ಸಂಸ್ಕೃತಿಗಳ ಸಮನ್ವಯದಲ್ಲಿ ಬೆಳೆಸುತ್ತಾರೆ.

ಲೇಡಿ ಮೆಗ್ಗಾನ್ ರೊಂದಿಗಿನಾ ಮಾತುಕತೆಗಳು, ಚಿನ್ನದ ಗಣಿಯ ವಿಚಾರದಲ್ಲಿ ವೆಂಕಟ ಕೃಷ್ಣಯ್ಯ ಅವರೊಂದಿಗೆ ನಡೆದ ಜಟಾಪಟಿ, ಬೈರಾಗಿಯ ಮಾತಿನ ಚುಚ್ಚುಮದ್ದುಗಳು, ಹೊನ್ನವ್ವೆಯ ತಾಯ್ತನದ ನುಡಿಗಳು..
ಈ ಮೇಲಿನ ಚಿತ್ರಗಳಲ್ಲಿ ಬರುವ ಸಂಭಾಷಣೆಯ ಸೊಗಸುಗಾರಿಕೆ ಅತ್ಯುತ್ತಮವಾದುದು.

ಒಟ್ಟಿನಲ್ಲಿ ಕೆಂಪನಂಜಮ್ಮಣಿಯವರ ಜೀವನ ಸಾಧನೆ ಅಮೋಘವಾಗಿ ಮೂಡಿ ಬಂದಿದೆ. ಉತ್ತಮ ಕೃತಿ.

ಪುಸ್ತಕ ಓದುವಾಗ ಸಿಕ್ಕಿದ ಕೆಲವು ಸಾಲುಗಳು

*ಫಲಿತಾಂಶ ಉತ್ತಮವಾಗಲು ಯಾವತ್ತೂ ದೊಡ್ಡ ಹೆಜ್ಜೆಗಳನ್ನೇ ಇಡಬೇಕಿಲ್ಲ. ಇಡುವ ಹೆಜ್ಜೆಗಳನ್ನು ತುಸು ಸೂಕ್ಷ್ಮವಾಗಿ ಗಮನಿಸಿ. ಸರಿ ದಾರಿಯಲ್ಲಿ, ಸರಿ ದಿಕ್ಕಿನಲ್ಲಿ ಇಟ್ಟರೆ ಸಾಕು.

*ಅಯ್ಯಾಜಿ, ಪಟ್ಟವೇರಿದ ಮೇಲೆ ಜವಾಬ್ದಾರಿ ಹೆಚ್ಚು ಮಗೂ, ಎಲ್ಲ ವಿಷಯಗಳ ಕುರಿತೂ ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕಾಗುತ್ತದೆ. ಎಲ್ಲ ವಿಷಯಗಳನ್ನೂ ಗಮನಿಸಬೇಕಾಗುತ್ತದೆ. ಭೇಟಿಯಾಗಲು ಬಂದವರನ್ನು ಗೌರವ ದಿಂದ ಮಾತನಾಡಿಸಬೇಕು. ಅವರೊಡನೆ ಘನತೆಯಿಂದ ವರ್ತಿಸಬೇಕು. ಎತ್ತರದಲ್ಲಿ ಕುಳಿತವರನ್ನು ಎಲ್ಲರೂ ಗಮನಿಸುತ್ತಿರುತ್ತಾರೆ. ಸೌಜನ್ಯದಿಂದ ವರ್ತಿಸಿದರೆ ಮೆಚ್ಚಿಕೊಳ್ಳುತ್ತಾರೆ. ತುಸು ಒರಟಾಗಿ ವರ್ತಿಸಿದರೂ ದೂರುತ್ತಾರೆ. ಮೃದುವಾದ ಮಾತು. ವಿನಯದ ವರ್ತನೆ ಬಹಳ ಮುಖ್ಯ ವಿನಯವೇ ವ್ಯಕ್ತಿತ್ವಕ್ಕೆ ಭೂಷಣ. ನೆನಪಿಟ್ಟುಕೋ ಮಗೂ. ಒಮ್ಮೆ ಒರಟರೆಂಬ ಅಪಕೀರ್ತಿ ಹಬ್ಬಿದರೆ, ನಂತರ ಅದರಿಂದ ಬಿಡುಗಡೆ ಬಹುಕಷ್ಟ.

*ಅಮ್ಮನೆಂದರೆ ಎದೆಗೆ ಒದ್ದರೂ ಮಗುವನ್ನು ಎತ್ತಿ ಎದೆಗೊತ್ತಿಕೊಳ್ಳುವ ವಾತ್ಸಲ್ಯದ ಜೀವ, ಪ್ರಭುತ್ವ ನಡೆಸುವವರಿಗೆ ಪ್ರಜೆಗಳ ತಪ್ಪು ಒಪ್ಪುಗಳನ್ನು ಸಹನೆಯಿಂದ ತೂಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ತಾಯ್ತನ ಬೇಕು.

*ನನ್ನ ದೃಷ್ಟಿಯಲ್ಲಿ ಬದುಕೆಂದರೆ ನ್ಯಾಯಾಲಯದ ಕಟಕಟೆಯಲ್ಲ. ನಮ್ಮ ಪ್ರತಿ ಮಾತು, ವರ್ತನೆಗಳಿಗೆ ಸಮರ್ಥನೆ ಬೇಕಿಲ್ಲ. ಸಹಜವಾಗಿ ಎದೆಯೊಳಗೆ ಬದ್ಧತೆ ಮತ್ತು ಪ್ರಾಮಾಣಿಕತೆಗಳಿದ್ದರೆ ಸಾಕು. ಅಂತರಂಗ ಬಹಿರಂಗ ಎರಡಾಗದಿದ್ದರಾಯಿತು. ನಮ್ಮನ್ನು ನಾವೆಷ್ಟೇ ಒಳ್ಳೆಯವರೆಂದು ಭಾವಿಸಿಕೊಂಡರೂ, ಅಂತಿಮವಾಗಿ ನಾವೂ ಕೇವಲ ಮನುಷ್ಯರು. ಪರಿಪೂರ್ಣರಲ್ಲ.
Profile Image for Subrahmanya Bhat.
22 reviews2 followers
November 13, 2024
ಕೇವಲು ಏಳು ವರ್ಷಗಳ ಅವಧಿಯಲ್ಲಿ ನಾಡು ಸದಾ ನೆನಪಿಟ್ಟುಕೊಳ್ಳುವಂತಹ ಕೆಲಸಗಳನ್ನು ಮಾಡಿದ ರಾಜಮಾತೆ ಕೆಂಪನಂಜಮಣ್ಣಿಯವರ ಕಥನ ಕನ್ನಡಿಗರು ಓದಲೇಬೇಕಾದಂಥದ್ದು. ರಂಜನೆಯತ್ತ ಗಮನ ಕೊಡದೆ ಇತಿಹಾಸಕ್ಕೆ ನಿಷ್ಠವಾದ ಇಂತದ್ದೊಂದು ಕಾದಂಬರಿ ಬರೆದ ಗಜಾನನ ಶರ್ಮ ಅಭಿನಂದನಾರ್ಹರು.
Profile Image for Kavya Bhat.
68 reviews5 followers
September 2, 2025

ರಾಜಮಾತೆ ಕೆಂಪನಂಜಮ್ಮನ್ನಿ – ತ್ಯಾಗ, ಧೈರ್ಯ ಮತ್ತು ಮಹಿಳಾಶಕ್ತಿಯ ಪ್ರತೀಕ 👑✨

ಈ ಕೃತಿ ಅವರ ಅಸಾಮಾನ್ಯ ಜೀವನವನ್ನು ಸೊಗಸಾಗಿ ಚಿತ್ರಿಸುತ್ತದೆ. ಇತಿಹಾಸ, ಪ್ರೇರಣೆ ಮತ್ತು ಸಾಹಿತ್ಯವನ್ನು ಒಟ್ಟಿಗೆ ಅನುಭವಿಸಲು ಇದು ಓದಲೇಬೇಕಾದ ಪುಸ್ತಕ. 🌿💛”
Profile Image for Bharath Manchashetty.
131 reviews2 followers
October 10, 2025
“ಈ ಕೃತಿಯ ಶೀರ್ಷಿಕೆ ಮತ್ತು ಮುಖಪುಟಕ್ಕೆ ಭಕ್ತಿಯಿಂದ ಮನಸೋತಿದ್ದು ನಿಜ. ಮೈಸೂರೆಂದರೆ ಭಕ್ತಿಯ ಚಿಲುಮೆ ಎಂದೆಂದಿಗೂ ಪ್ರಸ್ತುತ.”

“ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತಿದೆ. ಹೆಣ್ಣು ಮನಸ್ಸು ಮಾಡಿದರೆ ದೇಶವನ್ನೇ ಉತ್ತಮವಾಗಿ ಆಳಬಹುದು ಎಂದು ತೋರಿಸಿದವರು ಮೈಸೂರು ಸಂಸ್ಥಾನದ ರಾಜಮಾತೆ ಕೆಂಪನಂಜಮ್ಮಣ್ಣಿಯವರು.”

“ಒಂದೂರಿನ ಮಹತ್ವ ಹೆಚ್ಚಾಗುವುದು ವ್ಯಕ್ತಿಯಿಂದಲ್ಲ, ಆ ವ್ಯಕ್ತಿಯ ಕಾರ್ಯ ನಿಷ್ಠೆ ಮತ್ತು ಹೃದಯವಂತಿಕೆಯಿಂದ. ಹಾಗೆಯೇ ಕಾರ್ಯ ನಿಷ್ಠೆಗೆ ಬೇಕಿರುವುದು ತನ್ನನ್ನು ಕರ್ಮಕ್ಕೆ ಒಪ್ಪಿಸಿಕೊಳ್ಳುವ ವ್ಯಕ್ತಿತ್ವವಷ್ಟೇ ಹೊರತು ಅದು ಹೆಣ್ಣು/ಗಂಡೆನ್ನುವ ಲಿಂಗವಲ್ಲ. ಕೆಂಪನಂಜಮ್ಮಣ್ಣಿಯವರು ಯಾವ ವೀರ ಪುರುಷನಿಗೂ ಕಮ್ಮಿಯಿಲ್ಲದ ಆಳ್ವಿಕೆಕೊಟ್ಟು ಸಾರ್ವಕಾಲಿಕವಾಗಿ ಮನೆ ಮಾತಾಗಿದ್ದಾರೆ.”

“ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ನಿರ್ಧಾರಗಳಿಗೆ ಬೆಲೆ ಇರುವುದಿಲ್ಲವೆನ್ನುವುದು ಪೂರ್ವ ಇತಿಹಾಸದಿಂದ myth ಆಗಿದೆ ಎನ್ನಬಹುದು ಮತ್ತು ವೀರವನಿತೆ ಹೆಣ್ಣಿನ ಇತಿಹಾಸ ಬೆರಳೆಣಿಕೆಯಷ್ಟೇ ಆದರೂ ಒಬ್ಬೊಬ್ಬರೂ ಕೂಡ ಬೆಟ್ಟದಂಥ ಗಟ್ಟಿ ಮಹಿಳೆಯೇ ಸರಿ. ವಾಣಿ ವಿಲಾಸ ಸನ್ನಿಧಾನರವರು ಕೂಡ ಅಂತದ್ದೇ ಗುಂಪಿನಲ್ಲಿ ಅಗ್ರಗಣ್ಯರಾಗಿ ನಿಲ್ಲುತ್ತಾರೆ.”

“ತಮ್ಮ 7 ವರ್ಷಗಳ ಅಧಿಕಾರಾವಧಿಯಲ್ಲಿ ಅವರು ಸಾಧಿಸಿದ ಕಾರ್ಯಗಳು ಇಂದಿಗೂ ಎಂದೆಂದಿಗೂ ಮನೆಮಾತಾಗಿವೆ ಎಂದರೆ ತಪ್ಪಾಗಲಾರದು. ವಿಕ್ಟೋರಿಯಾ ಆಸ್ಪತ್ರೆ, ಮಾರೀಕಣಿವೆ ಅಣೆಕಟ್ಟು, ಹೊಸದಾಗಿ ನಿರ್ಮಿಸಿದ ಅರಮನೆ, ಶಿವನಸಮುದ್ರದ ವಿದ್ಯುತ್ ಸ್ಥಾವರ, ಟಾಟಾ ಇನ್ಸ್ಟಿಟ್ಯೂಟ್ ವಿಜ್ಞಾನ ಮಂದಿರದ ಪೂರ್ವ ತಯಾರಿ, ಬಾಲ್ಯ ವಿವಾಹ ಪದ್ದತಿ ರದ್ದುಗೊಳಿಸಿದ್ದು, ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ಕೆರೆಗಳ ನಿರ್ಮಾಣ, ರೈಲ್ವೆ ವಿಸ್ತರಣೆ. ಮಲೆನಾಡಿಗೆ ರೈಲು, ಪ್ಲೇಗ್ ನಿಯಂತ್ರಣಕ್ಕಾಗಿ ನಗರ ಪಟ್ಟಣಗಳ ನೈರ್ಮಲೀಕರಣ, ಬೆಂಗಳೂರು ಮೈಸೂರು ನಗರಗಳ ವಿಸ್ತರಣೆ, ಹೆಸರಘಟ್ಟ ಶಾಶ್ವತ ಕೊಳಾಯಿ ಕುಡಿಯುವ ನೀರು ಯೋಜನೆ.”

“ಮಹಾರಾಣಿಯಾದರೂ ಮಕ್ಕಳನ್ನು ಉತ್ತಮ ಗುಣವಂತರನ್ನಾಗಿ, ಸಂಸ್ಕಾರಾವತರನ್ನಾಗಿ ಮಾಡುವಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರನ್ನು ನಾಡಿನ ಏಳಿಗೆಗಾಗಿ ಶ್ರಮ ವಹಿಸುವಂತೆ ಸ್ಫೂರ್ತಿ ತುಂಬಿ ತಮ್ಮ ಪಟ್ಟವನ್ನು ತ್ಯಾಗ ಮಾಡಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ.”

“ಬ್ರಿಟಿಷ್ ಸಂಸ್ಥಾನದ ಉತ್ತಮ ವ್ಯಕ್ತಿಗಳೂ, ವೆಂಕಟಕೃಷ್ಣಯ್ಯ, ಹೊನ್ನವ್ವೆ, ಬೈರಾಗಿ ಇತ್ಯಾದಿ ಉತ್ತಮ ವ್ಯಕ್ತಿತ್ವಗಳು ಕೃತಿಯ ಉದ್ದಕೂ ತುಂಬಿವೆ.”

“ಹೆಣ್ಣುಮಕ್ಕಳು ಓದಲೇಬೇಕಾದ ಕೃತಿ. ಉತ್ತಮ ಓದು”

-ಭರತ್ ಎಂ
ಓದಿದ್ದು ೨೮.೦೫.೨೦೨೫
Profile Image for Anirudh .
833 reviews
August 16, 2025
In recent times there has been a significant rise in Historical Fiction books in Kannada. Some of them do make for a very good read, while others, though having potential, fall short of expectations.

Rajamathe Kempananjamanni is an account of the Regent of Mysore who was influential in taking Mysore Kingdom into the modern era with multiple ambitious projects in an era where The British were sucking the life out of India. Despite the unexpected responsibility thrust on her The Queen Regent seems to have led her people through some really tough times until her son came of age.

While the premise is quite interesting and hers is a life definitely worth reading about, the biggest hindrance comes from the author himself who insists upon applying Divine Attributes to Mortals. Throughout the book It felt like I was reading The Ramayana and not a story set in 1890s. In his world every character is held up to impossible moralistic standards who somehow always meet them seamlessly. Everyone is selfless, serving their land with no ulterior motives or any negative attributes. This was an issue in Chennabhairadevi as well. It would have been far more interesting to read if this was a more realistic picture of life.
At times it also felt like there was too much info dumping as if the book was oscillating between being a fiction and non fiction book.

Readers who enjoyed Chennabhairadevi would enjoy this was well but this writing style is not for me.
Displaying 1 - 6 of 6 reviews

Can't find what you're looking for?

Get help and learn more about the design.