Jump to ratings and reviews
Rate this book

ಮಾಗಧ [Maagadha]

Rate this book
ಇದು ಸುಪ್ರಸಿದ್ಧ ಮೌರ್ಯವಂಶದ ರಾಜ ಅಶೋಕನ ಕುರಿತ ಐತಿಹಾಸಿಕ ಕಾದಂಬರಿ. ಕಥಾನಕದ ಸಂದರ್ಭ ಕಲಿಂಗಯುದ್ಧ. ಕಥಾವಸ್ತು ರೂಪಿತವಾಗಿರುವುದು ಅಶೋಕನೇ ಬರೆಸಿದ ಶಾಸನಗಳನ್ನಾಧರಿಸಿ. ಪ್ರಚಲಿತವಿರುವ ಬೌದ್ಧಗ್ರಂಥಗಳ ಕಥೆಗಳನ್ನಲ್ಲ. ಹಾಗಾಗಿ ನೀವಿಲ್ಲಿ ಬೇರೆಯೇ ಅಶೋಕನನ್ನು ಕಾಣುವಿರಿ. ಇದಕ್ಕಾಗಿ ಸುದೀರ್ಘ ಅಧ್ಯಯನ, ಕ್ಷೇತ್ರಕಾರ್ಯಗಳನ್ನು ಕೈಗೊಂಡಿರುವ ಲೇಖಕಿ ಅಶೋಕ ತನ್ನ ಶಾಸನದಲ್ಲಿ ಉಲ್ಲೇಖಿಸಿರುವ ಬ್ರಾಹ್ಮಣ-ಶ್ರಮಣ-ಆಜೀವಕ-ನಿರ್ಗ್ರಂಥ ಎಂಬ ನಾಲ್ಕು ನೆಲೆಗಳಲ್ಲಿ ಇತಿವೃತ್ತವನ್ನು ಸೃಜಿಸಿದ್ದಾರೆ. ಕ್ರಿ.ಪೂ. ಮೂರನೆಯ ಶತಮಾನದ ಪ್ರಾಚೀನ ಭಾರತವನ್ನು ಪುನರ್ನಿರ್ಮಿಸಿದ್ದಾರೆ. ಈ ರಸವತ್ತಾದ ಕಾದಂಬರಿಗೆ ಶತಾವಧಾನಿ ಡಾ| ಆರ್. ಗಣೇಶರ ಅರ್ಥಪೂರ್ಣ ಮುನ್ನುಡಿಯಿದೆ.

772 pages, Hardcover

First published January 1, 2024

11 people are currently reading
50 people want to read

About the author

Sahana Vijayakumar

7 books35 followers
Sahana Vijayakumar is a Kannada author and IT professional. Her work has been Translated into English, Hindi and Marathi

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
12 (75%)
4 stars
4 (25%)
3 stars
0 (0%)
2 stars
0 (0%)
1 star
0 (0%)
Displaying 1 - 8 of 8 reviews
172 reviews21 followers
February 7, 2025
#ಅಕ್ಷರವಿಹಾರ_೨೦೨೫
ಕೃತಿ: ಮಾಗಧ
ಲೇಖಕರು: ಸಹನಾ ವಿಜಯಕುಮಾರ್
ಪುಸ್ತಕದ ಬೆಲೆ: ರೂ. ೯೧೫
ಪ್ರಕಟಣೆಯ ವರ್ಷ: ೨೦೨೪
ಪ್ರಕಾಶಕರು: ಸಾಹಿತ್ಯ ಭಂಡಾರ, ಬೆಂಗಳೂರು

ಈ ಕಾದಂಬರಿಯನ್ನು ನಿನ್ನೆ ಓದಿ ಮುಗಿಸಿದೆ. ನಮಗೆ ತಿಳಿಯಪಡಿಸಲಾಗಿರುವ ಇತಿಹಾಸವನ್ನು ಮತ್ತೆ ಪ್ರಶ್ನೆಗೊಳಪಡಿಸುವ ಅನೇಕ ವಿಚಾರಗಳು ಕೃತಿಯೊಳಗಡಕವಾಗಿವೆ. ಐತಿಹಾಸಿಕ ವಿಚಾರಗಳನ್ನು ಇದೇ ಸತ್ಯ ಇಷ್ಟೇ ಸತ್ಯ ಎಂದು ಸಾರ್ವಕಾಲಿಕವಾಗಿ ಹೇಳಲು ಯಾರಿಂದಲೂ ಅಸಾಧ್ಯ. ಆದರೆ ಆ ಕಾಲದ ಶಿಲಾಶಾಸನಗಳು, ಒಂದು ಕಾಲಘಟ್ಟದ ಹಿಂದೆ ಮುಂದೆ ನಡೆದಿರಬಹುದಾದ ಘಟನೆಗಳ ಕಾಲಮಾನ, ಅಲ್ಲಿಂದ ಲಭ್ಯವಾಗಿರುವ ಅನೇಕಾನೇಕ ವಿವರಗಳನ್ನು ತಾಳೆ ಹಾಕಿ ಹೀಗೂ ಇರಬಹುದು ಎಂಬ ನಿರ್ಣಯಕ್ಕೆ ಬರಬಹುದು. ಆ ನಿಟ್ಟಿನಲ್ಲಿ ನೋಡಿದಾಗ ಈ ಕೃತಿಯ ಅಧಿಕೃತತೆ ಇತರರಿಗಿಂತ ಹೆಚ್ಚು ಮೌಲ್ಯವನ್ನು ಪಡೆದುಕೊಳ್ಳುತ್ತದೆ. ಲೇಖಕರು ನಡೆಸಿರುವ ಅಪಾರವಾದ ಅಧ್ಯಯನ ಮತ್ತು ಕ್ಷೇತ್ರಕಾರ್ಯಗಳು ಅಧಿಕೃತತೆಗೆ ಇನ್ನಷ್ಟು ಪುಷ್ಟಿಯನ್ನು ನೀಡುತ್ತವೆ. ಒಟ್ಟಿನಲ್ಲಿ ಹೇಳಬೇಕಾದರೆ “ಮಾಗಧ” ಕೃತಿಯು ಅಗಾಧವಾದ ಸಮೃದ್ಧವಾದ ಓದಿನ ಅನುಭೂತಿಯನ್ನುಂಟುಮಾಡಿದೆ.‌‌

ಸಾಮಾನ್ಯ ತಿಳುವಳಿಕೆಯ ಪ್ರಕಾರ ಪ್ರಮುಖವಾಗಿ ಅಶೋಕ ಚಕ್ರವರ್ತಿಯು ಕಲಿಂಗದ ಯುದ್ಧದ ತರುವಾಯದಲ್ಲಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದನು,ತನ್ನ ಮಕ್ಕಳನ್ನು ಬೌದ್ಧ ಧರ್ಮದ ಪ್ರಚಾರಕ್ಕಾಗಿ ಶ್ರೀಲಂಕಾಗೆ ಕಳುಹಿಸಿದನು ಮತ್ತು ಇನ್ನಿತರ ಸಮಾಜಮುಖಿ ಸುಧಾರಣೆಗಳನ್ನು ಜಾರಿಗೆ ತಂದನು ಎನ್ನುವಲ್ಲಿಗೆ ಮುಕ್ತಾಯ. ಅದೇ ಅಶೋಕ ಚಕ್ರವರ್ತಿಯ ತಾತ ಚಂದ್ರಗುಪ್ತ ಮೌರ್ಯ ಮತ್ತು ಆಚಾರ್ಯ ಚಾಣಕ್ಯರು ಒಂದಾಗಿ ಇಡೀ ಭರತಖಂಡವನ್ನು ಪರಕೀಯರ ಆಕ್ರಮಣದಿಂದ ರಕ್ಷಿಸಲು ಮಗಧ ಸಿಂಹಾಸನವನ್ನು ಪ್ರತಿಷ್ಠಾಪಿಸಿದರು ಎಂಬುದನ್ನು ಗಮನದಲ್ಲಿಟ್ಟುಕೊಂಡರೆ ಅವನ ಮೊಮ್ಮಗನಾದ ಅಶೋಕನು ಶಸ್ತ್ರತ್ಯಾಗ ಮಾಡಿ ಎರಡೂವರೆ ದಶಕಗಳ ಕಾಲ ಆಡಳಿತ ನಡೆಸುವುದು ಶಕ್ಯವೇ ಎಂಬ ಪ್ರಶ್ನೆ ಮೂಡುತ್ತದೆ. ಕಲಿಂಗದ ನಂತರ ಯುದ್ಧ ಸನ್ನಿವೇಶಗಳು ಉಂಟಾಗದಿರುವುದಕ್ಕೂ ಸ್ವತಃ ವಿಮುಖನಾಗುವುದಕ್ಕೂ ವ್ಯತ್ಯಾಸ ಇದೆಯಲ್ಲವೇ… ಈ ಅಂಶಕ್ಕೆ ಪೂರಕವಾಗಿ ಅಶೋಕನ ವ್ಯಕ್ತಿತ್ವ, ವರ್ತನೆಗಳು, ವಿವಿಧ ಸನ್ನಿವೇಶಗಳಲ್ಲಿ ಬದಲಾಗುವ ಮನೋಧರ್ಮಗಳಿಗನುಗುಣವಾಗಿ ಕಾದಂಬರಿಯು ಚಿತ್ರಿತವಾಗಿದೆ. ಪಕ್ಕದಲ್ಲಿ ಹರಿಯುವ ಶೋಣ ನದಿಯ ಏರಿಳಿತಗಳೊಂದಿಗೆ, ಮೊರೆತಗಳೊಂದಿಗ ಅಶೋಕನ ಸ್ವಭಾವ ವರ್ತನೆಗಳನ್ನು ಸಮೀಕರಿಸಿದ್ದು ಸಮುಚಿತವಾಗಿದೆ. ಹಾಗೇ ನೋಡಿದರೆ ಇಡೀ ಕೃತಿಯಲ್ಲಿ ಬರುವ ನದಿಗಳ ಹರಿವು, ಏರಿಳಿತಗಳು, ಆಳ ವಿಸ್ತಾರಗಳು ಮನುಷ್ಯ ಸಹಜ ಸ್ವಭಾವದ ವರ್ತನೆಗಳನ್ನು ಪ್ರತಿಫಲಿಸುತ್ತದೆ. ಇಡೀ ಕೃತಿಯಲ್ಲಿ ಅಶೋಕನ ದುಡುಕು, ಸಿಡುಕಿನ ಸ್ವಭಾವ, ತೀವ್ರವಾಗಿ ಪ್ರತಿಕ್ರಿಯಿಸುವ ಸ್ವಭಾವಗಳ ಜೊತೆಗೆ ಇಡೀ ಭರತಖಂಡದ ಅಖಂಡತೆಯನ್ನು ಕಾಪಾಡಲು ಅನುಕ್ಷಣವೂ ಚಿಂತಿಸುವ ವ್ಯಕ್ತಿತ್ವದ, ಆ ಜವಾಬ್ದಾರಿಯು ಹುಟ್ಟಿಸುವ ಒತ್ತಡವನ್ನು ನಿಭಾಯಿಸುವ ಅಶೋಕನು ನಮ್ಮೆದುರು ತೆರೆದುಕೊಳ್ಳುತ್ತಾನೆ.

ಇನ್ನು ಬೌದ್ಧರ ಕುರಿತಾಗಿ ಹಲವು ಜಿಜ್ಞಾಸೆಗೆ ಒಳಪಡುವ ವಿಚಾರಗಳು ಕಾದಂಬರಿಯುದ್ದಕ್ಕೂ ಕಾಣಿಸುತ್ತವೆ. “ಆಸೆಯೇ ದುಃಖಕ್ಕೆ ಮೂಲ” ಎಂದವನು ತನ್ನ ಧರ್ಮ ಸುಮಾರು ಸಾವಿರ ವರ್ಷಗಳ ತನಕ ಬಾಳಬಹುದೆಂಬ ಆಸೆಯನ್ನಿಟ್ಟುಕೊಂಡನೇಕೆ… “ಮನೆಯನ್ನು ಬೇಡವೆಂದವನು ವಿಹಾರಗಳನ್ನೇಕೆ ಕಟ್ಟಿಸಿದ” ಎಂಬ ಪ್ರಶ್ನೆಗಳನ್ನು ಎತ್ತುತ್ತಲೇ ಬೌದ್ಧರ ಆಚಾರ ವಿಚಾರಗಳು,ಅಂದಿನ ಕಾಲದಲ್ಲಿಯೇ ಅದೆಷ್ಟು ಶಿಥಿಲವಾಗುತ್ತಾ ಸಾಗಿತ್ತು ಎನ್ನುವುದನ್ನು ಸಾಧಾರವಾಗಿ ನಿರೂಪಿಸುತ್ತಾರೆ. ಸಮಕಾಲೀನ ಧರ್ಮವಾದ ಜೈನರು ಮತ್ತು ಬೌದ್ಧರಿಗಿದ್ದ ವೈಚಾರಿಕ ವ್ಯತ್ಯಾಸಗಳು ಸಹ ಚೆನ್ನಾಗಿ ಚಿತ್ರಿತವಾಗಿವೆ. ಕೊನೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಪಾಲಿನ ಕರ್ತವ್ಯವನ್ನು ನಿರ್ವಂಚನೆಯಿಂದ ನಿರ್ವಹಿಸುವುದೇ ನಿಜವಾದ ಆನಂದವನ್ನು ಉಂಟುಮಾಡುತ್ತದೆ, ಈ ಮೂಲಕ ಸಿಗುವ ಬಿಡುಗಡೆಯ ಭಾವ ಬೇರೆಲ್ಲೂ ಸಿಗದು ಎನ್ನುವುದನ್ನು ಅಚ್ಚುಕಟ್ಟಾಗಿ ಹೇಳುತ್ತಾರೆ.

ಕಾದಂಬರಿಯಲ್ಲಿನ ಒಂದೊಂದು ಪಾತ್ರಗಳು ಸಹ ತಮ್ಮ ಸಹಜಾಭಿವ್ಯಕ್ತಿಯಿಂದ ಉನ್ನತವಾಗಿ ಗೋಚರಿಸುತ್ತವೆ. ಮಹಾಮಾತ್ಯ ರುದ್ರದೇವರು, ಅಕಿಂಚನ,ಅನಗಾರ,ಮಂಜರಿ,ಅನುಪಮ,ಧಮ್ಮಪಾಲರು,ಸುಮನ,ಮಹಾನಾಯಕರು, ಶಾಂತಸಾಗರರು, ಇಡೀ ಕೃತಿಗೆ ಜೀವ ತುಂಬುತ್ತಾರೆ. ಮುಖ್ಯ ಕತೆಯು ಅಶೋಕನದ್ದೇ ಆದರೂ ಈ ಪಾತ್ರಗಳು ಸಹ ಅಷ್ಟೇ ತೂಕವನ್ನು ಹೊಂದಿವೆ. ಅಂದಿನ ಕಾಲದ ಸಾಮಾಜಿಕ,ಆರ್ಥಿಕ,ರಾಜಕೀಯ ಮತ್ತು ಧಾರ್ಮಿಕ ವಿಚಾರಗಳು ಸಹ ಒಂದು ಐತಿಹಾಸಿಕ ಕೃತಿಯು ಹೇಗಿರಬೇಕೆಂಬುದಕ್ಕೆ ಉದಾಹರಣೆಯಾಗಿ ನಿಲ್ಲುತ್ತದೆ.

ಕೊನೆಯದಾಗಿ ಇಷ್ಟೊಂದು ದೊಡ್ಡ ಕಾದಂಬರಿಯು ತನ್ನ ಬಿಗುವಾದ ನಿರೂಪಣೆಯಿಂದ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಎಲ್ಲಿಯೂ ಸಡಿಲಗೊಳ್ಳದ ಬಿಗುವಿನ ನಿರೂಪಣೆ ಕೃತಿಯ ಧನಾತ್ಮಕ ಅಂಶ. ಕೆಲವು ವಾಕ್ಯ ಸಂಯೋಜನೆಗಳು ಮತ್ತೆ ಮತ್ತೆ ಓದಿ ಮನನ ಮಾಡಿಕೊಳ್ಳಲು ಪ್ರೇರಕ. ನನ್ನ ಸೀಮಿತ ತಿಳುವಳಿಕೆಯ ಮಿತಿಯಲ್ಲಿ ಅನಿಸಿದ್ದನ್ನು ಬರೆದಿದ್ದೇನೆ. ಕೃತಿಯ ಸಾವಕಾಶ ಓದಿನಿಂದ ಮಾತ್ರ ಇದರ ಅಗಾಧತೆಯನ್ನು ಅರಿಯಲು ಸವಿಯಲು ಸಾಧ್ಯ. ಒಂದಂತೂ ಸ್ಪಷ್ಟ, ಎಲ್ಲಿಯವರೆಗೆ ನಾವು ಅಥವಾ ಸಮಾಜ ಪ್ರಶ್ನೆಮಾಡದೇ ಹೇಳಿದ್ದನ್ನು ಒಪ್ಪಿಕೊಂಡು ಅನುಸರಿಸುವ ಮನೋಭಾವವನ್ನು ಇರಿಸಿಕೊಂಡಿರುತ್ತದೆಯೋ ಅಲ್ಲಿಯವರೆಗೆ ಐತಿಹಾಸಿಕ ಸತ್ಯಗಳು ಕಣ್ಣೆದುರೇ ಇದ್ದರೂ ನಮಗೆ ಗೋಚರವಾಗುವುದಿಲ್ಲ.

ನಮಸ್ಕಾರ,
ಅಮಿತ್ ಕಾಮತ್
Profile Image for Karthikeya Bhat.
109 reviews13 followers
October 26, 2025
ಮಾಗಧ
ಸಹನಾ ವಿಜಯಕುಮಾರ್

ಈ ಒಂದು ಬೃಹತ್ ಕಾದಂಬರಿಯನ್ನು ಅದೂ ಐತಿಹಾಸಿಕ ಕಾದಂಬರಿಯನ್ನು ಎಷ್ಟೋ ಸಮಯದ ನಂತರ ಓದಿದಾಗ ತೃಪ್ತಿಯಾಯಿತು, ಸರಿ ಸುಮಾರು ೭೮೦ ಪುಟಗಳುಲ್ಲ ಈ ಕಾದಂಬರಿಯಲ್ಲಿ ಅಶೋಕ, ಶೂರ್ಮಿ, ಗುಣಕೀರ್ತಿ, ಅಕಿಂಚನ, ಅನಗಾರ, ಸುಮನ, ತೇಜೋವರ್ಮ, ಸ್ವಯಂಪ್ರಭೆ, ತುಷಾಸ್ಪ, ರುದ್ರದೇವರು, ಧಮ್ಮಪಾಲರು, ಮಂಜರಿ ಇನ್ನೂ ಹಲವು ಪಾತ್ರಗಳ ಕುರಿತು, ಕಲಿಂಗಯುದ್ದ, ಯುದ್ದಕ್ಕೆ ಕಾರಣಗಳು, ಯುದ್ಧ ಸಿದ್ಧತೆಗಳು, ಯುದ್ದಾನಂತರ ಅಶೋಕನು ರಾಜ್ಯದ ಪರಿಪಾಲನ, ಪ್ರಜೆಗಳ ಯೋಗಕ್ಷೇಮ ಹಾಗು ರಕ್ಷಣೆ, ವ್ಯವಹಾರಸ್ಥಾಪನೆಯಲ್ಲಿ ತೊಡಗುವುದು. ಪಾಟಲಿಪುತ್ರದಿಂದ ಹಿಡಿದು, ದಂತಪುರ, ದಕ್ಷಿಣತೋಸಲಿ, ಉತ್ತರತೋಸಲಿ, ಇಸಿಲ, ಸುವರ್ಣಗಿರಿ, ಉಜ್ಜಯಿನಿ, ಸಾರವ, ಹಾರಿಹೂರಕ, ಕಾಂಭೋಜದ ಸ್ಥಳಗಳ ಪರಿಚಯ. ಶೋಣಾ, ಋಷಿಕುಲ್ಯಾ, ಗೋದಾವರಿ, ಸಿಂಧು, ಇರಾವತೀ ನದಿಗಳ ಹರಿವುಗಳನ್ನು ಆ ಯಾ ಪಾತ್ರಗಳಿಗೆ ತಕ್ಕಂತೆ ಹೋಲಿಸಿದ್ದು ಅದ್ಭುತವಾಗಿ ಮೂಡಿಬಂದಿದೆ.

ಅಶೋಕನಿಗೆ ಗುಣಕೀರ್ತಿಯನ್ನು ಸೋಲಿಸಿ ಕಲಿಂಗವನ್ನು ಆಕ್ರಮಣ ಮಾಡವುದೇ ಆತನ ಉದ್ದೇಶ,ಯುದ್ಧದಿಂದ ಎರಡೂ ಕಡೆ ಪ್ರಾಣ ಹಾನಿಯಾಗುವುದು, ರಕ್ತಪಾತವಾಗುವುದೂ ಅದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುವ ಮನೋಭಾವ ಅಶೋಕನಿಗಿರುವುದಿಲ್ಲ, ಆದರೆ ಮಹಾಮಾತ್ಯ ರುದ್ರದೇವರಿಗೆ ಹೇಗಾದರೂ ಯುದ್ಧವನ್ನು ತಡೆಯಲು ಅಶೋಕನ ಮಾತನ್ನು ತಿರಸ್ಕರಸಿ ಗುಣಕೀರ್ತಿಯ ಜೊತೆ ಸಂಧಿಪ್ರಯತ್ನ ಮಾಡಿ ವಿಫಲವಾದಾಗ ಅಶೋಕನಿಗೆ ಇದೊಂದು ಕಾರಣವೂ ದೊರಕಿ ಯುದ್ಧಕ್ಕೆ ತಯಾರಾಗುತ್ತಾನೆ. ಇದರಲ್ಲಿ ಅಶೋಕನೋ ಅಥವಾ ಕಲಿಂಗದ ಗುಣಕೀರ್ತಿಯೋ ರಾಜ್ಯದ ಒಳಿತಿಗಾಗಿ ಒಬ್ಬರಾದರೂ ಸೋಲಬಹುದಿತ್ತು, ಸರಿಸುಮಾರು ಒಂದೇ ವಯಸ್ಸಿನವರಾದರೂ ಅವರ ವ್ಯಕ್ತಿತ್ವವು ಅಡ್ಡಬರುತ್ತದೆ. ಮತ್ತೊಂದು ಕಾರಣ ಮಗಧದ ಅಮಾತ್ಯರನ್ನು ತಮ್ಮ ಆಸ್ಥಾನದಲ್ಲಿ ನಿರಾಕರಿಸಿದ್ದು, ರುದ್ರದೇವರ ಸಂಧಿಪ್ರಯತ್ನವನ್ನು ತಿರಸ್ಕರಿಸಿದ್ದು ಅಶೋಕನಿಗೆ ಗುಣಕೀರ್ತಿಯ ಗರ್ವವನ್ನು ಇಳಿಸಿ ಕಲಿಂಗವನ್ನು ಆಕ್ರಮಣ ಮಾಡಬೇಕೆಂದು ನಿರ್ಧರಿಸುತ್ತಾನೆ, ಅತ್ತ ಗುಣಕೀರ್ತಿಗೆ ಮಹಾಪದ್ಮನ ಕಲಿಂಗಜಿನರ ಪ್ರತಿಮೆಯನ್ನು ಒಯ್ದಾಗಿನಿಂದ ಅಲ್ಲಿಯವರೆಗೂ ಕಲಿಂಗ ಸ್ವತಂತ್ರವಾಗಿಯೇ ಇತ್ತು, ಹಾಗು ತಮ್ಮಿಂದ ತಾಮ್ರಲಿಪ್ತಿಯನ್ನು ಕಸಿದುಕೊಂಡದ್ದು, ಜಿನಪ್ರತಿಮೆಯನ್ನು ಕೊಂಡೊಯ್ದದ್ದು ಹಾಗು ತಾನೇಕೆ ಜಂಬೂದ್ವೀಪಕ್ಕೆ ರಾಜನಾಗಬಾರದು ಮಗಧದವರೇ ಏಕಾಗಬೇಕೆನ್ನುವ ವ್ಯಕ್ತಿತ್ವದಿಂದ ಸುವರ್ಣಗಿರಿ, ಅಶ್ಮಕಗಳ ರಾಜರುಗಳ ಜೊತೆ ಕೈಜೋಡಿಸಿ ಮಗಧವಿಜಯಕ್ಕೆ ಸಿದ್ಧಾವಾಗುವುದು ಅದರಿಂದಾದ ಅನಾಹುತಗಳು ಇಡೀ ಕಾದಂಬರಿಯಲ್ಲಿ ಕಂಡುಬರುತ್ತದೆ.

ಇದರ ಜೊತೆ ಕಾದಂಬರಿಯಲ್ಲಿ ಒಂದು ಕಡೆ ಬರುವ ಜೈನ ಮುನಿಗಳ ಸಂಕಲ್ಪಭಿಕ್ಷೆಯ ವ್ರತ ಹಾಗು ಅವರಲ್ಲಿ ನಿರ್ಜೀವವೆಂದು ಭಾವಿಸುವ ಕಲ್ಲಿನಲ್ಲೂ ಜೀವವಿರುತ್ತೆನ್ನುವ ಅವರ ಸಿದ್ಧಾಂತಗಳು, ತಮ್ಮ ಧರ್ಮವನ್ನು ಸಂಕೇತಿಸಲು ಪ್ರತಿಮೆಗಳನ್ನು, ಮತ್ತೊಂದು ಕಡೆ ದಂತಪುರದ ಬೌದ್ಧ ಧರ್ಮ, ಭಿಕ್ಕುಗಳ ಆಚಾರ ವಿಚಾರಗಳು ಹಾಗು ಬೌದ್ಧ ಧರ್ಮವನ್ನು ಸಂಕೇತಿಸಲು ಚಿಹ್ನೆಗಳ ಬಳಸುವಿಕೆ, ಮನೆಯನ್ನು ತ್ಯಜಿಸಿ ಬೇಡವೆಂದು ಬಂದ ಬುದ್ಧನು ವಿಹಾರಗಳನ್ನು ಕಟ್ಟಿಸಿದ ಕಾರಣವಾದರೂ ಏನು ಎಂಬ ಪ್ರಶ್ನೆಗಳಿಗೆ ಇಡೀ ಕಾದಂಬರಿಯಲ್ಲಿ ಈ ಎರಡೂ ಮತಗಳ ಆಚಾರ ವಿಚಾರಗಳ ಕುರಿತು ಕೆಲವು ಪಾತ್ರಗಳು ಹಾಗು ಸನ್ನಿವೇಷಗಳ ಮೂಲಕ ಚರ್ಚೆಯಾಗುತ್ತದೆ.

ಇದರ ಜೊತೆ ಈ ಕಾದಂಬರಿಯಲ್ಲಿ ಅಲೆಕ್ಷಾಂದ್ರ ದಂಡೆತ್ತಿ ಬಂದದ್ದು,ಚಂದ್ರಗುಪ್ತಮೌರ್ಯ, ಬಿಂದುಸಾರ, ಅಂತಿಯೋಕನ ಆಳ್ವಿಕೆಯ ಕುರಿತು, ಅಶೋಕನು ತಾನು ರಾಜನಾಗಲು ಸ್ವಂತ ಅಣ್ಣನನ್ನೇ ಬಂಧಿಸಿ ಹಾಗು ಆತನನ್ನು ಕೊಂದು ರಾಜನಾದದ್ದು, ಅಶೋಕನಿಗೂ ಹಾಗು ಸೆಲೂಕನ ಮೊಮ್ಮಗ ತುಷಾಷ್ಪನ ಸಂಬಂಧದ ಕುರಿತೂ, ಬಹುಪತ್ನೀ ವ್ರತಸ್ತನಾಗಿದ್ದ ಅಶೋಕನು ಅವನ ಪತ್ನಿಯರ ಜೊತೆ, ಮಕ್ಕಳ ಜೊತೆ ಹೇಗೆ ವರ್ತಿಸುತ್ತಿದ್ದನೆಂಬುದರ ಕುರಿತೂ, ಅಶೋಕನು ವೈಶಾಲಿಗೆ ಹೋದಾಗ ಅಲ್ಲಿರುವ ಭಿಕ್ಕುಗಳು ಬುದ್ಧಭಗವಾನನ ಜೀವನ ಚರಿತ್ರೆಯನ್ನು ನಾಟಕ ಮೂಲಕ ಪ್ರದರ್ಶಿಸಿದಾಗ ಬೌದ್ಧ ಧರ್ಮದ ಕುರಿತು ಯೋಚನಾಮಗ್ನನಾಗುವುದು ಕಂಡುಬರುತ್ತದೆ. *ಬೌದ್ಧ ಮುನಿಗಳಿಗೆ ರಾಜನ ಅಗತ್ಯವಿದೆ, ರಾಜಸಾಹಾಯ್ಯವಿದ್ದರೆ ಧರ್ಮ ಚಿರಕಾಲ ಉಳಿಯದು, ಇತ್ತ ಜೈನ ಮುನಿಗಳಿಗೆ ರಾಜಸಾಹಾಯ್ಯವಿರದಿದ್ದರೆ ಧರ್ಮ ಕುಂಠಿತವಾಗುತ್ತೆ, ಸಾಯುತ್ತೆ, ಎರಡಕ್ಕೂ ಎಷ್ಟು ಅಂತರವೆಂಬುದು ಅಶೋಕನಿಗೆ ಮನದಟ್ಟಾಗುತ್ತದೆ.* ಧಾರಯದ್ವಸುವಿನ ಶಿಲಾ ಲಿಪಿಯನ್ನು ಕಂಡು ಪ್ರೇರಿತನಾಗಿ ತನ್ನ ರಾಜ್ಯದಲ್ಲಿ ತಾನೂ ಲಿಪಿ ಬರೆಸಬೇಕೆನ್ನುವ ನಿರ್ಧಾರ ಕೈಗೊಳ್ಳುವುದು ಹೀಗೆ ಹಲವು ಮಾಹಿತಿಗಳು ಓದುತ್ತಾ ಓದುತ್ತಾ ತಿಳಿಯುತ್ತದೆ .

ಉತ್ತರತೋಸಲಿಯ ವೀರಸಿಂಹನು, ದಂತಪುರದ ತೇಜೋವರ್ಮನು, ಗುಣಕೀರ್ತಿಯ ತಮ್ಮ ಚಂದ್ರಕೀರ್ತಿ, ಕಲಿಂಗದ ನೌಕಾ ಶಕ್ತಿ, ಅರಣ್ಯದ ಆಟವಿಕನಾಯಕರು, ಇವರೆಲ್ಲರು ಎಷ್ಟೇ ಪ್ರಭಾವಶಾಲಿಗಳಾದರೂ ಅಶೋಕನ ಕೂಟ ಯುದ್ಧದಲ್ಲಿ, ರಾಕ್ಷಸ ಯುದ್ಧದಲ್ಲಿ, ಮಗಧ ಸೈನ್ಯಕ್ಕೆ ತುತ್ತಾಗುತ್ತಾರೆ. ಅಶೋಕನ ಸೈನ್ಯ ದಕ್ಷಿಣತೋಸಲಿಯನ್ನು ಮುತ್ತಿದಾಗ ಅರ್ಹತರು ಕಷ್ಟಪಟ್ಟು ನಡೆಯಲು ಸಾಧ್ಯವಿಲ್ಲದವರು ಬೆಟ್ಟದಿಂದ ಕೆಳಗಿಳಿದು ಬಂದು ಗುಣಕೀರ್ತಿಗೆ ಎಚ್ಚರ ಕೊಟ್ಟು ಕಲಿಂಗವನ್ನು ಕಾಪಾಡಿಕೋ ಎಂದು ಹೇಳಿದಾಗ ಗುಣಕೀರ್ತಿಯ ಪತ್ನಿ ಸ್ವಯಂಪ್ರಭೆಯ ಪ್ರಶ್ನೆಗೆ ಅರ್ಹತರು ಉತ್ತರಿಸಲು ಸಾಧ್ಯವಾಗುವುದಿಲ್ಲ, * ನಿಮ್ಮ ಸಾಧನೆಯೂ ವ್ಯರ್ಥ, ನಮ್ಮ ಗೆಲವೂ ಅನಿಶ್ಚಿತ, ಮುಂಚಿನಿಂದಲೇ ಗುಣಕೀರ್ತಿಗೆ ನೆರವಾಗಿ ಆತನಿಗೆ ಹಿತವಚನಗಳನ್ನು ಬೋಧಿಸಿದ್ದರೆ ಇಷ್ಟು ದೂರ ತಲುಪುತ್ತಿರಲಿಲ್ಲ, ಈಗ ಆಲೋಚಿಸಿ ಪ್ರಯೋಜನವಿಲ್ಲ, ಯುದ್ಧ ತನಗೂ ಇಷ್ಟವಿಲ್ಲ ಆದರೂ ಪತಿ ಗುಣಕೀರ್ತಿ ನಿರ್ಧಾರಕ್ಕೆ ಪತ್ನಿಯಾದವಳು ಸಹಕರಿಸಲೇಬೇಕು*. ಯುದ್ಧದಲ್ಲಿ ಸ್ವತಃ ಸ್ವಯಂಪ್ರಭೆ ತೊಡಗಿ ಇನ್ನೇನು ಜೀವ ಹೋಗುತ್ತಿದೆ ಎನ್ನುವ ಸಂದರ್ಭದಲ್ಲಿ ಒಂದು ಜನಪದವನ್ನೆದುರಿಸಲು ಭರತ ವರ್ಷವನ್ನೇ ಕರೆತಂದೆಯಾ ಅಶೋಕ? ಎನ್ನುವ ಸ್ವಯಂಪ್ರಭಳ ಮಾತು ಅಶೋಕನಿಗೂ ಯುದ್ಧಾನಂತರ ಆಕೆಯ ಮಾತಿನ ಅರಿವಾಗುತ್ತದೆ. ಈ ಕಾದಂಬರಿಯಲ್ಲಿ ಸುಮನ- ಮಂಜರಿಯ ನಿಷ್ಕಲ್ಮಷ ಪ್ರೇಮದ ಕಥೆ, ಜೈನ ಧರ್ಮವನ್ನು ಸ್ವೀಕರಿಸಿ ನಿಷ್ಟೆಯಿಂದ ಸಂಕಲ್ಪಭಿಕ್ಷೆ ಸ್ವೀಕರಸಿ ಜೀವನ ನಡೆಸುವ ಅಕಿಂಚನನ ಕಥೆ, ಮಾರುವೇಷದಲ್ಲಿರುವ ಸೇನಾನಾಯಕರ ಕಥೆ, ಗೂಢಪುರುಷರ ಕಥೆ, ಅಲೆಕ್ಷಾಂದ್ರ ದಂಡೆತ್ತಿ ಬಂದು ಪ್ರದೇಶಗಳನ್ನು ಆಕ್ರಮಣ ಮಾಡಿದ ನಂತರ ದೇಶದಲ್ಲಾಗುವ ಬದಲಾವಣೆಗಳ ಕಥೆ, ಅಶೋಕನಿಗೆ ನಿಷ್ಠೆಯಿಂದ ಸೇವೆಸಲ್ಲಿಸುವ ಶೂರ್ಮಿಕೆಯ ಕಥೆ, ಯುದ್ಧದಲ್ಲಿ ಹೋರಾಡಿ ವೀರಮರಣವನ್ನು ಪಡೆಯುವ ಸ್ವಯಂಪ್ರಭೆಯ ಕಥೆ ಅದ್ಭುತವಾಗಿ ಮೂಡಿಬಂದಿದೆ.

ಕಲಿಂಗಯುದ್ಧವಾದ ನಂತರ ಅಶೋಕನು ಶಿಲಾಲಿಪಿಗಳನ್ನು ಬರೆಸುತ್ತಾನೆ,ಆತನು ಜೀವಂತವಿರುವವೆಗೂ ಕಲಿಂಗ ಸ್ವಾತಂತ್ರವಾಗಲಿಲ್ಲ, ತನ್ನ ಪುತ್ರ ಪೌತ್ರರಲ್ಲಿ ಯಾರೂ ಬೌದ್ದರಾದುದಕ್ಕೆ ಲಿಪಿಗಳ ಆಧಾರವಿಲ್ಲ, ಓರ್ವ ಪೌತ್ರ ಚಂದ್ರಗುಪ್ತ ಜೈನನಾದುದಕ್ಕೂ, ಮತ್ತೋರ್ವ ಪೌತ್ರ ದಶರಥ ಅಜೀವಕರಿಗೆ ಗುಹೆಗಳನ್ನು ದಾನ ನೀಡಿರುವ ಆಧಾರವಿದೆಯೆಂದು, ದೇವನಾಂಪ್ರಿಯ ಪ್ರಿಯದರ್ಶಿ ರಾಜ ಎಂದೇ ಆರಂಭವಾಗುತ್ತಿದ್ದ ಲಿಪಿಗಳು ಅಶೋಕನಿಗೆ ಸಂಬಂಧಪಟ್ಟದ್ದು, ಅಶೋಕ ಬೌದ್ಧಮತದ ಪ್ರಭಾವಕ್ಕೊಳಗಾಗಿ ಶಸ್ತ್ರತ್ಯಜಿಸಿದ ಎಂಬ ತಪ್ಪು ಗ್ರಹಿಕೆಯು, ಅಂಥ ಯಾವ ರಾಜನ ಮಾದರಿಯೂ ಅಶೋಕನ ಕಣ್ಣುಂದಿರಲಿಲ್ಲ, ಸ್ವತಃ ಬುದ್ಧನೇ ಕ್ಷಾತ್ರಪ್ರಜ್ಞೆಯುಳ್ಳವನಾಗಿದ್ದನೆಂಬುದು ಅವನ ಜೀವನದಿಂದ ತಿಳಿಯುತ್ತದೆ ಎನ್ನುವ ಮಾಹಿತಿಗಳನ್ನು ಉಪಸಂಹಾರದಲ್ಲಿ ಹೇಳಿದ್ದಾರೆ.


ನಮಸ್ಕಾರ,
ಕಾರ್ತಿಕೇಯ
Profile Image for Kanarese.
136 reviews19 followers
September 5, 2025
Book Review: Magadha by Sahana Vijayakumar

Magadha is undoubtedly the finest work of Sahana Vijayakumar to date—a magnum opus that stands as a testament to years of meticulous research and literary dedication. Spanning nearly 790 pages, this monumental work delves deep into one of the most defining episodes of ancient Indian history: the Kalinga War and the complex circumstances that led to it.

The book sheds light on many lesser-known facets of history, challenging long-held perceptions. It explores ideas such as the contemporaneity of the Buddha and the Upanishads, the contested narratives around Ashoka’s relationship with Buddhism, and the contrasting roles of Bhikkus and Shravakas. It also examines how Buddhism evolved, intertwined with, and diverged from Brahmanism (later Hinduism).

The narrative opens with Ashoka’s disappointment and anger at Kalinga’s King Gunakeerti, who rejected Magadha’s ambassador and refused to acknowledge Magadha’s supremacy. From there, the story expands into a grand exploration of Ashoka’s vision, Chanakya’s foresight, and the broader dream of Janapudweepa—the Indian subcontinent as a unified entity. On the other hand, smaller Janapadas like Kalinga are depicted fighting bravely for independence, yet unaware of the greater external threats looming on the horizon.

Sahana Vijayakumar excels in character portrayal. Each figure—whether central or peripheral—comes alive with depth and nuance. Emotions flow with remarkable fluidity: anger melts into compassion, courage trembles into fear, and characters constantly evolve, reflecting the complexities of human nature.

The narrative builds gradually and intensely, culminating in the Kalinga War, while also weaving in fascinating characters and compelling political insights. The book is not just a historical retelling but also a mirror to contemporary times, offering lessons on geopolitics, unity, and the consequences of disunity.

Magadha is more than a novel—it is a literary and historical achievement. A work of this scale and depth is rare in Kannada literature, and Sahana Vijayakumar deserves the highest commendation for her perseverance, research, and narrative brilliance.

This book is a must-read for anyone seeking to understand the geo-political complexities of ancient India, and perhaps even to draw wisdom for today’s world. Words fall short of doing justice to the richness of Magadha—it is a true magnum opus, both in scale and in significance.
Profile Image for Bharath Manchashetty.
126 reviews2 followers
November 24, 2025
ಮಾಗಧ-ಸಹನಾ ವಿಜಯಕುಮಾರ್.
ಈ ತರದ ಸುದೀರ್ಘ ಕಾದಂಬರಿಗಳನ್ನು (೭೭೩ ಪುಟಗಳು) ಓದುವುದೆಂದರೆ ಸಮುದ್ರದಲ್ಲಿ ಈಜಿದಂತೆ, ಎಷ್ಟು ವಿಸ್ತಾರವೋ ಅಷ್ಟೇ ಆಳವೂ ಕೂಡ ಹೌದು. ಆಳ-ಅಗಲ ಅರಿಯುತ್ತ ಸುಖಿಸುವುದು ಓದುಗನ ಪ್ರಬುದ್ಧತೆಗೆ ಬಿಟ್ಟದ್ದು.

ಕೃತಿಯ ಕರ್ತೃವಿನ ಪ್ರಬುದ್ಧತೆ, ಕ್ಷೇತ್ರಕಾರ್ಯ, ಪಾತ್ರ ಪೋಷಣೆಗಳು ದೂರದಲ್ಲಿರುವ ಆಕಾಶದಲ್ಲಿರುವ ನಕ್ಷತ್ರಗಳಂತೆ, ಆಳದಲ್ಲಿರುವ ಮುತ್ತುಗಳಂತೆ ನಮಗೆ ಕಾಣಿಸುತ್ತವೆ ಎಂದರೆ ಲೇಖಕರ ಅಧ್ಯಯನ, ವಸ್ತುನಿಷ್ಠೆ, ಧಾವಂತವಿಲ್ಲದೆ ಭಾವುಕವಾಗದ ಹೊಸ ಭಾಷೆ ಮತ್ತು ಕೃತಿಯ ದರ್ಶನದ ಪಾಂಡಿತ್ಯಗಳೆಲ್ಲವೂ ಸಾಧನೆಯೆಂದೇ ತೋರುತ್ತದೆ. ಓದುಗನು ಅದರ ಅರಿವನ್ನು ಗ್ರಹಿಸಲು ಗಂಭೀರ ಓದು ಅವಶ್ಯಕ. ಓದುತ್ತಾ ಪ್ರಬುದ್ಧನಾಗುತ್ತಾನೆ ಎಂಬುವುದು ಕೂಡ ಕೃತಿಯ ವಿಶೇಷ. ನಾವು ಎಷ್ಟು ಹತ್ತಿರ ಹೋಗುತ್ತೇವೋ, ಆಳಕ್ಕೆ ಇಳಿಯುತ್ತೇವೆಯೋ ಇತಿಹಾಸದ ಸತ್ಯವು ಅಷ್ಟು ಸ್ಫಟಿಕದಂತೆ ಗೋಚರಿಸುತ್ತದೆ.

ಕುವೆಂಪುರವರು ಮೊದಲು ನಾಡಗೀತೆ ರಚಿಸಿದಾಗ “ಹಿಂದೂ, ಕ್ರೈಸ್ತ ಮುಸಲ್ಮಾನ, ಪಾರಸೀಕ ಭೌದ್ಧರುದ್ಯಾನ ಎಂದು ರಚಿಸಿದ್ದರಂತೆ. ಕೆಲವು ವರ್ಷಗಳ ನಂತರ ಜೈನಾರುದ್ಯಾನ ಎಂದು ತತಿದ್ದಿ ನಾಡಗೀತೆಗೆ ಕೊಟ್ಟರಂತೆ..” ಇದನ್ನು ಓದಿದ ನನಗೆ ಯಾಕೆ ಈ ಬದಲಾವಣೆ ಎಂದು ಕಾಡುತ್ತಿತ್ತು, ಈ ಕೃತಿ ಓದಿದ ನಂತರ ಸಂದೇಹಗಳೆಲ್ಲವೂ ಪರಿಹಾರವಾಯ್ತು. ಅಶೋಕ ನಿಜವಾಗಿಯೂ ಮತಾಂತರಗೊಂಡನ.? ಅವನ ಆಳ್ವಿಕೆ, ವ್ಯಕ್ತಿತ್ವ ಅರಿಯಲು ಈ ಕೃತಿ ಓದಿ.

ಇಲ್ಲಿರುವುದು ಅಶೋಕನು ತನ್ನ ಸಾಮ್ರಾಜ್ಯ ವಿಸ್ತರಣೆಯ ಸಮಯದಲ್ಲಿರುವ ನಿರ್ಣಾಯಕ ಘಟ್ಟ, ಎಂದರೆ ಕಳಿಂಗಯುದ್ಧ..! ಜೊತೆಗೆ ಜೈನ, ಬೌದ್ಧ ಧರ್ಮದ ಘರ್ಷಣೆಗಳೂ , ಕ್ಕ್ಷತ್ರಿಯ ಧರ್ಮದ ರಕ್ತದ ಸಾಮ್ರಾಜ್ಯ ಮತ್ತು ರಕ್ತದ ದಾಹ, ಶೌರ್ಯತನದ ಪರಮಾವಧಿ, ಮಹಾಮಾತ್ಯರ ಚಾಣಕ್ಯತನ ಕೂಡ ತಣ್ಣನೆಯ ದ್ವೇಷದಲ್ಲಿ ಕುಡಿಯುತ್ತಾ ಕೊನೆಗೆ ಸಿಡಿಯುವುದು ಜನ ಸಾಮಾನ್ಯನೆಂಬ ಅಣುವಿನ ಮೇಲೆಯಷ್ಟೇ. ತಮ್ಮ ಅಹಂಕಾರವನ್ನು ನೀಗಿಸಿಕೊಳ್ಳುವುದು, ಪೋಷಿಸುವುದು, ಸಮರ್ಥಿಸಿಕೊಳ್ಳುವುದರ ಜೊತೆ ಮುಂದಿನ ಪೀಳಿಗೆಯ ತನ್ನನ್ನು ಹೇಗೆ ನೆನಪಿಸಿಕೊಳ್ಳಬೇಕೆನ್ನುವುದು ಬಹುತೇಕ ರಾಜರ ಕನಸು. ಇಲ್ಲಿರುವ ಅಶೋಕನದೂ ಕೂಡ ಅಷ್ಟೇ. ಕಳಿಂಗರಾಜ ಗುಣಕೀರ್ತಿಯ ಸ್ಥೈರ್ಯ ಮೆಚ್ಚುವಂತದ್ದು. ಅವನ ನಿರ್ಧಾರ ಇತಿಹಾಸಕ್ಕೆ ಮಾದರಿ. ಯುದ್ಧದ ವಿವರಣೆ ಗಮನಿಸಿದಾಗ ಎರಡನೇ ಮಹಾಯುದ್ಧದಲ್ಲಿ ನಡೆದ ನರಮೇಧ ಹತ್ಯೆಗಳು ಹೊಸದಲ್ಲವೆನ್ನಿಸಿತು. ಮನುಷ್ಯನಲ್ಲಿರುವ ಕ್ರೂರತೆ ಅಂದಿನಿದ ಇವತ್ತಿಗೂ ಬದಲಾಗಿಲ್ಲವಷ್ಟೇ ಎನ್ನುವುದೂ ಪ್ರತಿಯೊಬ್ಬರೂ ಒಪ್ಪಲೇಬೇಕು.

ಆದರೆ ಬೌದ್ಧ ಬಿಕ್ಕುಗಳ ಪ್ರಕಾರ ಕಳಿಂಗಯುದ್ಧ ಮುಗಿದನಂತರ ಅಶೋಕನು ಶಸ್ತ್ರ ತ್ಯಜಿಸಿ ಬುದ್ಧ ಧರ್ಮಕ್ಕೆ ಮತಾಂತರನಾದನೆಂದು, ಇದಕ್ಕೆ ಸ್ವಲ್ಪವೂ ಆಧಾರವಿಲ್ಲದ ಬೌದ್ಧರ ನಡವಳಿಕೆ ಅತ್ಯಂತ ಖಂಡನೀಯ. ಅಶೋಕ ಧರ್ಮ ಸಹಿಷ್ಣುನಾಗಿದ್ದ ಎನ್ನುವುದು ಅವನ ನ್ಯೂನತೆಯೆಂದೇ ಭಾವಿಸಿ ಹಿಂದೂ ಧರ್ಮದ ಮೇಲೆ ಹುನ್ನಾರ ನಡೆಸಿರುವುದು ಯಾವ ಇತಿಹಾಸದಲ್ಲೂ, ಶಾಲಾ ಶಿಕ್ಷಣದಲ್ಲೂ ಉಲ್ಲೇಖವಾಗಿಲ್ಲ.. ಅದೇ ಸತ್ಯವೆಂದು ಸುಪ್ತ ಮನಸ್ಸಿನಲ್ಲಿ ಭಟ್ಟಿ ಇಳಿಸಿ ಇತಿಹಾಸವನ್ನು ಅತ್ಯಾಚಾರ ಮಾಡಿ ಮೂಲೆಗು೦ಪಾಗಿಸುವುದು ಭಾರತೀಯ ರಾಜಕಾರಣಿಗಳಿಗೆ ರಕ್ತದಲ್ಲೇ ಇದೆ ಎನಿಸುತ್ತದೆ.

ಬುದ್ಧನ ವಿಗ್ರಹ ಶ್ರೀಮಂತರ ಮನೆಯಲ್ಲಿ , ದೊಡ್ಡ ಹೋಟೆಲ್ ಗಳಲ್ಲಿ, ಫೋನಿನ ವಾಲ್ ಪೇಪರ್ನಲ್ಲಿ, ಹಿಂದುಳಿದ ವರ್ಗಗಳ ಮನೆಯಲ್ಲಿಡುವ ಶೋಕಿಯಾಗಿದೆ . ನಿಜಕ್ಕೂ ಬುದ್ಧ ಆಸೆಯನ್ನು ತೊರೆದಿದ್ದನ.? ಆಸೆಯೇ ದುಃಖಕ್ಕೆ ಮೂಲವೆಂದು ಹೇಳುತ್ತಾ, ತಾನು ಸ್ಥಾಪಿಸಿರುವ ಧರ್ಮ ಸುಮಾರು ಸಾವಿರ ವರ್ಷಗಳಾದರೂ ಬದುಕುಳಿಯಬೇಕು ಎಂದು ಅವನೇ ಆಸೆ ಪಡುತ್ತಾನೆ. ಎಲ್ಲರಿಗೂ ತತ್ವ ಹೇಳುವ ಮಂದಿ ಶೂನ್ಯದಷ್ಟು ಕೂಡ ಅದನ್ನು ಪಾಲಿಸುವುದಿಲ್ಲ ಎನ್ನುವುದು ಅಂದಿಗೂ-ಇಂದಿಗೂ ಪ್ರಸ್ತುತ. ವಿಗ್ರಹಾರಾಧನೆ ವಿರೋಧಿಸುವ ಬುದ್ಧನ ಹಲ್ಲು, ಕೂದಲುಗಳಿಗೂ ದೇವಸ್ಥಾನ ಕಟ್ಟಿ ಮೆರೆಸಿರುವುದು ಶೋಚನೀಯ.

ಅಶೋಕ ಶಸ್ತ್ರ ತ್ಯಜಿಸಿ ಬುದ್ಧನಾದ ಎಂದರೆ ಈಗಿರುವ ಭೋಗದ ಜೀವನ, ಆಳ್ವಿಕೆಯ ಹಿಡಿತ ಹೊಂದಿರುವ ಶ್ರೀಮಂತರೂ, ಬಂಡವಾಳಶಾಹಿಗಳು, ರಾಜಕಾರಣಿಗಳಲ್ಲೇರೂ ಸುಖವನ್ನು ತ್ಯಜಿಸಿ ಮತಾಂತರ ಹೊಂದಿದರು ಎಂಬ ಪರಿಹಾಸ್ಯದಂತೆ ಗೋಚರಿಸುತ್ತದೆ. ಇದು ದುಸ್ಸಾಧ್ಯ. ಅಶೋಕನ ಇತಿಹಾಸವೂ ಕೂಡ ತಿರುಚಿರುವುದು ಆಗಿದೆ.”

ಎಸ್.ಎಲ್ ಭೈರಪ್ಪನವರ ಸಾರ್ಥ ಕೂಡ ಇದೇ ಸತ್ಯವನ್ನು ಅನಾವರಣ ಮಾಡುವ ದೃಷ್ಟಿಯಿಂದ ರಚಿಸಲ್ಪಟ್ಟದ್ದು.

ಮಹತ್ವದ ಕಾದಂಬರಿಗಳಲ್ಲೊಂದು, Must read.!

- ಓದಿದ್ದು ೧೪.೧೧.೨೦೨೫
Profile Image for Anirudh .
833 reviews
December 3, 2024
After reading this book I realise how little we actually know about this period in India's history. What little we know is distorted by Agenda driven historians and those idiots from the film industry. I can't speak to the historical accuracy of this story but it's certainly a compelling read.

This is my fourth book by the author and while I had loved Kasheera, the other two had been very disappointing. With Maagadha, I think she's finally grown into a powerful writer.

Maagadha is the story of King Ashoka and the Kalinga War. While we all know the basic story, the author has managed to create a layered narrative which touches upon individual threads as well as broad strokes of history. I can't recall the last time I read such fascinating storytelling. Overall there are four storylines. One with Ashoka, one with Gunakeerthi, one with a Buddhist Monk and one with a Jain Monk.

The novel explores strong themes. Do we support the Unification ideas of Ashoka? Are they really selfless decisions? Do we support the need for independence for others? Is that too short sighted? Ironically these questions exist even today.
Another one of great interest is the philosophical clashes of Brahminism, Buddhism and Jainism and their approach to life. Mature writing and intriguing discussions about politics, ruling, war and philosophy make this a wonderful reading experience.

One thing which I greatly loved is the influence of Bhyrappa on the author. She has followed in his footsteps when it comes to writing characters and chooses to have them in different shades of grey. No one is right or wrong but a bit of both. One of the main issues I have had with Historical Fiction in Kannada such as Chennabhairadevi is the black and white characters that sound unrealistic. Ashoka specifically has been shown as having a temper. His conversations at the end with Gunakeerthi is probably the highlight of this book. Another similarity with Bhyrappa is the exploration of Buddhism and the disruption it caused. The author has really honed her skills with this book and I would say she would become a worthy successor to Bhyrappa.

I don't know if this will get translated. I hope it does. It's a story worth reading. Highly recommend.
Profile Image for Madhukara.
Author 7 books5 followers
August 4, 2025
One of the best original kannada novels I have read recently. The amount of research the author has taken to build the story and characters from the first principle is commendable.

This story is about vast things like kingdoms, religion, war but at the same time about the intimate things like relationship between husband and wife, Teacher and Student etc. This balance and interweaving of these makes book very interesting read.

I recomend the book to anyone who enjoy reading Historical Fiction which explores the characters using the archeological and texts of that era. Also if you are a fan of S.L.Bhyarappa books like Parva you are in for a treat.
Profile Image for Ullasa.
17 reviews
January 23, 2025
Sahana Vijay Kumar’s Magadha is a well-written historical novel that offers a nuanced perspective on Emperor Ashoka’s leadership. Rather than depicting him solely as a ruthless conqueror or an idealized ruler, the book explores his strategic governance, moral dilemmas, and the political forces that shaped his empire. With rich storytelling and strong female characters, it brings history to life through a deeply immersive narrative. Magadha is a must-read for those interested in history, leadership, and the complexities of power.
Displaying 1 - 8 of 8 reviews

Can't find what you're looking for?

Get help and learn more about the design.