Jump to ratings and reviews
Rate this book

ಪೆರುವಿನ ಪವಿತ್ರ ಕಣಿವೆಯಲ್ಲಿ | Peruvina Pavithra Kaniveyalli

Rate this book
Travel literature

216 pages, Paperback

First published January 1, 2004

25 people are currently reading
333 people want to read

About the author

Nemichandra

19 books4 followers

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
62 (53%)
4 stars
43 (37%)
3 stars
4 (3%)
2 stars
2 (1%)
1 star
4 (3%)
Displaying 1 - 19 of 19 reviews
Profile Image for Soumya.
218 reviews49 followers
February 2, 2021
Amazing!!
ನಾ ಓದಿದ ಮೊದಲ ಪ್ರವಾಸ ಕಥನ.
Peru virtual tour ಮುಗಿಸಿ ಬಂದ ಹಾಗ್ ಆಗತ್ತೆ ಈ ಪುಸ್ತಕ ಓದಿದಾಗ.
ನೀವು ಈಗ trip ಹೋಗಿ ಬರೋ scenarioನ ತಲೇಲಿ ಇಟ್ಕೊಂಡ್ ಇದು ಮತ್ತೊಂದ್ blog post ಅನ್ಕೋಬೇಡಿ.
ಇವರು ಪೆರು ದೇಶನ ಸುತ್ತಿ ಬಂದಾಗ ಈಗ ಇದ್ದಷ್ಟು ಮಟ್ಟದಲ್ಲಿ internet ಎಲ್ಲ ಇರ್ಲಿಲ್ಲ. ಹಾಗಾಗಿ ಒಂಥರ pre-internet/early internet era travelogue ಓದಿದ ಹಾಗೆ ಇದೆ.
ತುಂಬಾ ಚೆನ್ನಾಗಿದೆ.
ಇಬ್ಬರು ಗೆಳತಿಯರು ಭಾಷೆ ಗೊತ್ತಿಲ್ಲದ ದೇಶಕ್ಕೆ ಹೋಗಿ, ಅಲ್ಲಿ ಭಾಷೆ ಕಲಿಯೋ ಸಂಭ್ರಮದಲ್ಲಿ ಅಲ್ಲಿ ಅವರಿಗೂ ಅಷ್ಟೋ ಇಷ್ಟೊ ಕನ್ನಡ ಹೇಳ್ಕೊಟ್ಟ ಬಂದಿದ್ದಾರೆ.
ಇನ್ಕಾ ಜನಾಂಗ, amazon ಕಾಡುಗಳು ಇದೆಲ್ಲ ನೋಡ್ಬೇಕು, ಇವೆಲ್ಲವನ್ನು ನೋಡ್ತಾ ನೋಡ್ತಾ ಎಲ್ಲ ಪ್ರಾಚೀನ ಜನಾಂಗದಲ್ಲೂ ಇದ್ದಂತಹ ಸಾಮ್ಯತೆಗಳನ್ನ ಹಾಗೂ ಭಾರತಕ್ಕೂ ಅವ್ರ ಹೋದ ಪೆರು ದೇಶದ ನಡುವೆ ಇರುವ ಎಷ್ಟೋ ಸಾಮ್ಯತೆಗಳನ್ನ ಚೆನ್ನಾಗಿ ವಿವರಿಸಿದ್ದಾರೆ.
ತರಂಗ/ಸುಧಾ ಅಲ್ಲಿ ವಾರ ವಾರ ಬರ್ತಾ ಇತ್ತು. ಆಗ ಅದ್ಯಾಕೆ ಓದ್ಲಿಲ್ವೋ ಗೊತ್ತಿಲ್ಲ.
ಈಗ book ಓದಿದೆ ಅನ್ನೋ ಖುಷಿ ಅಂತೂ ಖಂಡಿತ ಇದೆ.
Profile Image for Nayaz Riyazulla.
423 reviews94 followers
June 27, 2023
ಅತಿ ಕಡಿಮೆ ವೆಚ್ಚದಲ್ಲಿ ಪೆರುವನ್ನು ಸಂಚರಿಸಿದ ಪಯಣಿಗರು ಬಹುಷಃ ಈ ಪುಸ್ತಕದ ಓದುಗರೇ ಇರಬೇಕು. ಇಷ್ಟು ಜೀವಂತವಾಗಿ ಬರೆಯುವ ಲೇಖಕರ ಪ್ರತಿಭೆಯನ್ನು ಮಾತುಗಳಲ್ಲಿ ವಿವರಿಸುವುದು ಅಸಾಧ್ಯ.

ನಾನು ದಕ್ಷಿಣ ಅಮೇರಿಕಾದ ಗಯಾನ ದೇಶಕ್ಕೆ ಪ್ರಯಾಣ ಮಾಡಿದ್ದೇನೆ. ಅಲ್ಲಿ ಬಹುತೇಕ ಭಾರತೀಯರನ್ನು ಕಂಡು ನಮ್ಮದೇ ದೇಶವೆನ್ನುವಷ್ಟು ಆಪ್ತವಾಗಿ ಓಡಾಡಿದ್ದೇನೆ. ಅಲ್ಲೇ ಸಮೀಪದಲ್ಲಿದ್ದ ಪೆರುವನ್ನು ಕಾಣದೇ ಬಂದದ್ದು ಎದೆ ಹೊಡೆದು ಹೋಗುವಷ್ಟು ಬೇಸರವನ್ನು ಈ ಪುಸ್ತಕ ತರಿಸಿದೆ.

ಪೆರುವಿನ ತಮ್ಮ ಅನುಭವಗಳ ಜೊತೆ ಜೊತೆಗೆ, ಪೆರುವಿನ ಇತಿಹಾಸ, ಅಲ್ಲಿನ ವಸಾಹತುಶಾಯಿಯ ಕ್ರೂರ ರೂಪ, ಇನ್ಕಾಗಳ ನಾಗರೀಕತೆ, ಅಮೆಜಾನ್ ನದಿ, ಕಾಡುಗಳ ಅಮೋಘ ದರ್ಶನವೆಲ್ಲವನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾರೆ.

Highly recommended
Profile Image for Mallikarjuna M.
51 reviews14 followers
April 6, 2022
ನೇಮಿಚಂದ್ರರವರ ಯಾದ್ ವಶೇಮ್ ಓದಿದಾಗಿಂದ ಅವರ ಭಯಂಕರ ಅಭಿಮಾನಿಯಾಗಿರುವ ಮತ್ತು ಪ್ರವಾಸದ ಗೀಳಿರುವ ನನಗೆ "ಪೆರುವಿನ ಪವಿತ್ರ ಕಣಿವೆಯಲ್ಲಿ" ಹಲವು ಕಾರಣಗಳಿಂದಾಗಿ ಬಲು ಮೆಚ್ಚಿಕೆಯಾಯಿತು.

ಅಂತರ್ಜಾಲವಿರಲಿ ಮೊಬೈಲ್ ದೂರವಾಣಿಗಳೇ ಬಳಕೆಯಲ್ಲಿಲ್ಲದ ಕಾಲದಲ್ಲಿ ಲೇಖಕರು ಒಂದು ವರ್ಷಕ್ಕೂ ಮಿಗಿಲಾಗಿ ಪ್ರವಾಸದ ಸಿದ್ಧತೆ ಮಾಡಿಕೊಂಡು, 2 ತಿಂಗಳ ಪ್ರಯಾಣದ ಕಥನವೇ ಈ ಪುಸ್ತಕ.
Travelogue ಜೊತೆಜೊತೆಗೆ ಪೆರುವಿನ ಪುರಾತನ ಸಂಸ್ಕೃತಿ, ಇತಿಹಾಸ, ರಾಜಕೀಯ, ಪಾಶ್ಚಾತ್ಯ ಆಳ್ವಿಕೆ, ಜಾಗತೀಕರಣದ ದುಷ್ಪರಿಣಾಮ ಮತ್ತು ಭಾರತದೊಂದಿಗಿರುವ ಜನಜೀವನದ ಸಮಾನ ಮನಸ್ಥಿತಿಯ ಬಗ್ಗೆ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.

P.S. ಮಾಚುಪಿಚು ಮತ್ತು ಅಮೆಜಾನ್ ನದಿ ಪ್ರಯಾಣ ನನ್ನ to-do listಗೆ ಸೇರಿಕೊಂಡಿದೆ 😉🤗
Profile Image for Nayana Sukumar.
6 reviews
December 30, 2025
ಈ ಪುಸ್ತಕವನ್ನು ಓದುವಾಗ ನಾನು ಸಹ ಲೇಖಕರ ಜೊತೆ ಪೆರು, ಅಮೆಜಾನ್ ನದಿ, ಕಾಡು ಸುತ್ತಿ ಬಂದ್ನೇನೋ ಅಂತ ಅನ್ಸಿಬಿಡ್ತು. ನನಗೊಬ್ಬಳಿಗೆ ಅಲ್ಲ, ಈ ಪುಸ್ತಕ ಓದಿದ ಎಲ್ಲರಿಗೂ ಇದೇ ರೀತಿ ಅನುಭವ ಆಗಿದೆ. ಹಾಗೇ ಮುಂದೆ ಯಾರ್ ಆದ್ರೂ ಓದಿದ್ರೆ ಅವರಿಗೂ ಹೀಗೆ ಅನ್ಸೋದ್ರಲ್ಲಿ ಅನುಮಾನ ಇಲ್ಲ. ಒಳ್ಳೆ ಪುಸ್ತಕ ಮಾತ್ರ...
Profile Image for Chaitra.
187 reviews
May 10, 2021
What a book!

I have always been a fan of Nemichandra, reading her Yaad Vashem on Jews and her short stories collection I always felt that she, among the contemporary kannada authors, stands very unique. Although I love reading there are certain genres I never tried simply because I assumed they'd be boring and one such genre was travelogue. However, after reading Peruvina Pavitra Kaniveyalli (In the sacred valley of Peru, if roughly translated) my misconception got repaired. My! Travelogues are really cool! Or maybe because it was due to the author who's my favourite or the place she wrote about.

The author in this book shares her experience of traveling in Peru with her friend, Malati. This book had been in my house for years which I hadn't shown much interested to read. As I was reading Amazing Ayodhya the author mentions about the Peruvian ancient civilization, the Inca quite a few times and I was kinda surprised to know that both Indian and Inca civilizations share a few stuff of their own. When I read about the golden Sun disc the Incas had next to their Sun god's temple my curiosity rose. I so wanted to know about the Incas and I instantly knew there's one book nearest to the hands that could help me into this exploration.

The author makes sure anyone who reads this work feels transported into the place. She beautifully explains the civilians there, their friendly nature and bright smiles amidst the centuries of hardships. The author doesn't just mention which places they visited etc but also dug through the stories of the land, the past and present case scenarios. So when you're reading this book you're not only reading the travel experiences of the author but also the history and current status of the place.

The Incas were brilliant people! Of course they didn't know about wheels but that didn't stop them to raise a great civilization. I have no words to explain how mesmerized I am about them! As I went on reading I began realising there are so many similarities that we share with them! I began feeling like they are our distant cousins or something. Just like every other ancient civilizations, the Incas were brought down by the bloodthirsty Spanish. Although the writer just gave the basic information reading that was enough to move anyone's heart. The great Incas's present descendants in Peru are still struggling a great deal because of racism and other socio-economic factors. Peru has changed a lot and days weren't brighter anymore since the Europeans found the beautiful civilisation safe between the Peruvian valleys.

One thing that attracted me and made me wonder a lot was the Nasca lines. This sounds rubbish but the author states there are certain possibilities that the Incas fled in the skies. Of course as usual the so called researchers stated that none of these single lined geometrical figures drawn for miles is the work of Incas but aliens. But only one woman stood to guard the cultural significance and dedicated her whole life such that every Peruvian more or less thinks of her as a goddess. She was Maria Reichi. She has done a tremendous work in the preservation of these ancient lines.

The Peruvians were excited to see two Indian women for the first time as much as these two women were interested to learn about Peru. The author states she didn't feel like she was continents afar from home but amongst her own people. The book helped me a lot. I was curious before I read this book now I'm left with more questions of my own.

I wonder how although far from each other our ancient civilizations were so similar. I absolutely love this book since it fuelled my interest and curiosity towards the Incas. This book doesn't just make you read but also makes you feel that you're an Inca hailing from the civilisation which raised great empires of gold and silver with nothing.

This review isn't much. I honestly don't know what to write. I had so many ideas while I read but right now as I type I'm feeling loss at words. Maybe because a mere review can't suffice to the glory of Incas. They went through a lot of terror and bloodshed despite their peaceful and loving nature. They got harassed and were crushed between power hungry government and bloodthirsty communists. They as well as their lands are being used and wrung to dry inhumanely by rich nations for profit. The once golden clad Inca land has now reduced to this sad state. Although their population witnessed larger massacres and presently ill justice they still fight to keep their culture, language and rituals safe hugging tighter to their hearts struggling every day, which is something we Indians are yet to learn.

If you know Kannada please don't miss out this beautiful book. You won't regret reading it. I'm so glad I read it. I actually could get a lot of knowledge. I wish the author had mentioned a few books to read and learn more. Anyway, I guess I should try to read more travelogues from now I don't know how much I'm losing.

I dedicate this review to our Inca brethren. My naman to the ancient Sun worshipers and my prayers are for their descendants who haven't let anything come between their connections with their ancestors

My! I still feel like I'm in Machu Picchu!!
Profile Image for ತುಳಸಿ .
5 reviews13 followers
January 16, 2022
ಈ ಪುಸ್ತಕ ಓದಿ ಮುಗಿಸುವ ಹೊತ್ತಿಗೆ ನಾನೇ ಪೆರು ದೇಶಕ್ಕೆ ಹೋಗಿ ಬಂದ ಅನುಭವ. ಅಮೇಜಾನ್ ಕಾಡು, ನದಿಯಲ್ಲಿ ನಾನೇ ಸಂಚರಿಸಿದ ಭಾವ. ಅವರ ಇನ್ಕಾ ನಾಗರಿಕತೆ, ಕಳೆದು ಹೋದ ನಗರಿ ಮಾಚುಪಿಚು, ನಾಸ್ಕಾ ಗೆರೆಗಳು. ಇನ್ನೂ ತುಂಬಾ ಕಡೆ ಲೇಖಕಿ ಈ ಪುಸ್ತಕದ ಮೂಲಕ ನಮ್ಮನ್ನು ಕರೆದುಕೊಂಡು ಹೋಗುತ್ತಾರೆ. ಪೆರುವಿಗರ ಭವ್ಯ ಬದುಕು ಹೇಗೆ ಕೊನೆಯಾಯಿತು. ಅವರ ಹಿಂದಿನ ಬದುಕಿಗೂ ಮತ್ತು ಈಗಿನ ಬದುಕನ್ನು ನೋಡಿದರೆ ಬಹಳ ದುಃಖವಾಗುತ್ತದೆ. ಎಷ್ಟೋ ವಿಷಯಗಳಲ್ಲಿ ಭಾರತಕ್ಕೂ ಪೆರುವಿಗೂ ಸಾಮ್ಯತೆ ಇರುವುದನ್ನ ಲೇಖಕಿ ಅಲ್ಲಿಯ ಪ್ರವಾಸದಲ್ಲಿ ಕಂಡಿದ್ದಾರೆ.

ಒಂದೊಳ್ಳೆಯ ಪ್ರವಾಸ ಕಥನ. ನಮಗೆ ಗೊತ್ತಿಲ್ಲದ ಎಷ್ಟೋ ವಿಷಯಗಳು ತೆರೆದುಕೊಳ್ಳುತ್ತದೆ.
Profile Image for Karthikeya Bhat.
109 reviews13 followers
October 13, 2022
ಪೆರುವಿನ ಪವಿತ್ರ ಕಣಿವೆಯಲ್ಲಿ
ನೇಮಿಚಂದ್ರ

ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದ ಕೃತಿ

ಇದು ನೇಮಿಚಂದ್ರರವರ ಅದ್ಭುತ ಅನುಭವದ ಕತೆ, ಪೆರುವಿನ ಕುರಿತು ಪುಸ್ತಕಗಳಲ್ಲಿ ಓದಿ, ನ್ಯಾಷನಲ್ ಜಿಯೋಗ್ರಾಫಿಕ್ ನಲ್ಲಿ ಆಂಡೀಸ್ ಪರ್ವತಗಳನ್ನು ಕಂಡು, ಇನ್ಕಾ ನಾಗರಿಕತೆಯ ಕುರಿತು ಓದಿದ ಪರಿಣಾಮ ಲೇಖಕರಿಗೆ ಪೆರುವಿಗೆ ಹೋಗಲು ಪ್ರೇರಣೆಯಾಯಿತು. ಇವರಿಗೆ ಜೊತೆಯಾದವರು ಅವರ ಗೆಳತಿ ಮಾಲತಿಯವರು. ಪೆರುವಿಗೆ ಹೋಗುವ, ನಂತರ ನಾಸ್ಕಾ, ಕುಸ್ಕೋ, ಮಾಚುಪಿಚು ಬ್ರೆಜಿಲ್ ನೋಡುವ, ಅಮೆಜಾನ್ ನದಿ ಮೇಲೆ ತೇಲಿಹೋಗುವ ಹಾಗು ಅಮೆಜಾನ್ ಕಾಡಿನಲ್ಲಿ ರಾತ್ರಿ ಹೊತ್ತು ಕಳೆಯುವ ಅನುಭವಕ್ಕಾಗಿ, ನಾಸ್ಕಾ ಗೆರೆಗಳ ಮೇಲೆ ಹಾರುವ, ಮಾಚುಪೀಚುವಿನ ಎತ್ತರವನ್ನು ತಲುಪುವ ಕನಸುಗಳನ್ನು ಕಟ್ಟಿಕೊಂಡು ದಕ್ಷಿಣ ಅಮೇರಿದಲ್ಲಿರುವ ಪೆರುವಿಗೆ ಹೊರಟರು, ಹೊರಟು ಲೀಮಾಗೆ ತಲುಪಿದರು.

ಇವರು ಹೋಗಬೇಕಾದ ಜಾಗದ ಪಟ್ಟಿ ಮಾಡಿಕೊಂಡು, ಅಗ್ಗದ ಹೋಟಲ್ ನಲ್ಲಿ ತಂಗುವುದು, ಅನಾವಶ್ಯಕವಾಗಿ ಹೋಟಲ್ ಗೆ ಖರ್ಚು ಮಾಡುವ ಬದಲು ಅದೇ ಹಣದಿಂದ ಹೆಚ್ಚು ಸ್ಥಳಗಳನ್ನು ನೋಡಬೇಕೆಂದು ನಿರ್ಧಾರ ಮಾಡಿಕೊಂಡರು. ಇನ್ಕಾ ಟ್ರಾವೆಲ್ಸ್ ಏಜನ್ಸಿಯ ಮೂಲಕ ಅವರ ಪ್ರವಾಸವನ್ನು ಕೈಗೊಂಡು ಲೀಮಾ ನಿಲ್ದಾಣದಿಂದ ಹೊರಟು ಪೆರುವಿನ ಪ್ರಥಮ ದರ್ಶನವಾದಾಗ ಅವರ ಆನಂದಕ್ಕೆ ಪಾರವೇ ಇರಲಿಲ್ಲ. ಪೆರುವಿನ ಉದ್ದಕ್ಕೂ ಉತ್ತರದಿಂದ ದಕ್ಷಿಣಕ್ಕೆ ಆಂಡೀಸ್ ಪರ್ವತ ಶ್ರೇಣಿ ಹರಡಿಕೊಂಡಿದೆ, ಪಶ್ಚಿಮದಿಂದ ಪೂರ್ವಕ್ಕೆ ಹಿಮ ತುಂಬಿದ ಪರ್ವತ ಶಿಖರಗಳು, ಪೂರ್ವಕ್ಕೆ ಟ್ರಾಪಿಕಲ್ ಮಳೆ ಕಾಡು,ಅಲ್ಲಿ ಕೇಳಿ ಬರುವುದು ಸ್ಪಾನಿಷ್ ಹಾಗು ಕೆಚುವಾ ಭಾಷೆ, ಜನರಿಗೆ ಇಂಗ್ಲೀಷ್ ಬಾರದು ಇವರಿಗೆ ಪೆರುವಿನ ಭಾಷೆ ಬಾರದು, ಭಾಷೆ ತಿಳಿಯದಿದ್ದರೂ ಧೈರ್ಯ ಮಾಡಿ ಆ ಆ ಸಂದರ್ಭಕ್ಕೆ ತಕ್ಕಂತೆ ತಮಗೆ ತಿಳಿದ ರೀತಿಯಲ್ಲಿ ಅಭಿನಯಿಸುತ್ತಾ ಮುಂದುವರೆದರು, ಇವರ ಧೈರ್ಯಕ್ಕೆ ಮೆಚ್ಚಬೇಕಾದದ್ದೆ. ಮೊದಲು ಇನ್ಕಾ ನೆಲಕ್ಕೆ ಭೇಟಿಯಿತ್ತರು, ಅಲ್ಲೇ ನೂರಾರು ವರ್ಷಗಳ ಕಾಲ ಮಲಗಿದ್ದ ಮಮ್ಮಿಗಳು ಈ ಇನ್ಕಾ ನೆಲದ ಬಗ್ಗೆ ಹೇಳುವ ಕತೆಗಳು ಸ್ಪಾನಿಷರ ದಾಳಿಯಿಂದ ತನ್ನ ಸಂಸ್ಕೃತಿಯನ್ನೇ ಕಳೆದುಕೊಂಡಿದೆ, ನೆಲದ ಚಿನ್ನವನ್ನು, ಸಿರಿವಂತಿಕೆಯನ್ನು ಸಮಾಧಿಗಳನ್ನು ಲೂಟಿ ಮಾಡಿದ್ದಲ್ಲದೇ ಈ ನೆಲದ ಇತಿಹಾಸವನ್ನೂ ಅಳಸಿಹಾಕಿದೆ. ನಂತರ ಅಲ್ಲೇ ಒಂದು ಪಿರಮಿಡ್ ಅಗೆಯುವುದನ್ನು ನೋಡಲು ಅವಕಾಶಸಿಗುತ್ತದೆ, ಅಗೆಯುವಾಗ ದೊರೆತ ಮಡಕೆ, ಕುಡಕೆ, ಮೂಳೆ ಚೂರು, ಅಸ್ಥಿಪಂಜರ ಎಲ್ಲವನ್ನೂ ನೋಡುತ್ತಾರೆ. ಇಲ್ಲಿ ಸರ್ಪವನ್ನು, ಮೀನನ್ನು ದೇವರೆಂದು ಪೂಜಿಸುವ ಕ್ರಮ ಅಳವಡಿಸಿಕೊಂಡಿದ್ದರು.

ಇವರು ಹೋದ ಸಮಯದಲ್ಲಿ ಅಲ್ಲಿ ಚುಣಾವಣೆ ಬೇರೆ ನಡೆಯುತ್ತಿತ್ತು, ಅಲ್ಲಿನ ರಾಜಕೀಯದ ಬಗ್ಗೆಯೂ ತಿಳಿಯುವ ಕುತೂಹಲವಾಯಿತು. ಅಧ್ಯಕ್ಷ ಸ್ಥಾನಕ್ಕೆ ನಿಂತಿದ್ದ ಫ್ಯುಜಿಮೊರೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡರು, ಆತನ ಕಾಲದಲ್ಲಿ ಪೌಷ್ಟಿಕತೆಯ ಕೊರತೆಯಿಂದ ಸರಿಸುಮಾರು ೨೦೦ ಮಕ್ಕಳು ಸತ್ತಿದ್ದರು, ಚಿನ್ನದ ನಾಡಾದರು ಇಲ್ಲಿನ ಸಂಪತ್ತೆಲ್ಲವನ್ನು ಲೂಟಿ ಮಾಡಿ ವಿದೇಶಕ್ಕೆ ಸಾಗಿಸುತ್ತಿದ್ದರು.
ಈ ನೆಲದಲ್ಲಿ ಮಹಿಳೆಯರೂ ರಾಜಕೀಯದ ಏರುಪೇರಿನಲ್ಲಿ ಎದ್ದು ನಿಂತಿದ್ದರು, ಕ್ರಾಂತಿ, ಸುಧಾರಣೆ,ಹೋರಾಟ,ರಾಜಕೀಯ, ಚುಣಾವಣೆ ಎಲ್ಲದರಲ್ಲೂ ಭಾಗಿಯಾಗಿದ್ದರು. ಪೆರುವಿನ ಮಹಿಳಾ ಹೋರಾಟಗಾರ್ತಿಯರಾದ ಎಲಿನಾ, ರೋಸಾಡೋ ಅವರು ನ್ಯಾಯಕ್ಕೆ ಹೋರಾಡಿ ನಂತರ ಅವರು ಪ್ರಾಣವನ್ನರ್ಪಿಸಿದ ಕಾರಣಗಳ ಬಗ್ಗೆ ಲೇಖಕರು ಸುಧೀರ್ಘವಾಗಿ ವಿವರಿಸಿದ್ದಾರೆ.

ನಂತರ ಹೊರಟದ್ದು ಮರುಭೂಮಿಯ ನಗರ ನಾಸ್ಕಾ. ನಾಸ್ಕಾದ ಮರುಭೂಮಿಯಲ್ಲಿ ನೆಲದ ಮೇಲೆ ಮೂಡಿಸಿದ ವಿಚಿತ್ರ ಗೆರೆಗಳ ಬಗ್ಗೆ ವಿವರಿಸುತ್ತಾರೆ, ಇದು ನೆಲದಿಂದ ಕಾಣುವುದು ಸಾಧ್ಯವಿಲ್ಲ, ವಿಮಾನದಿಂದ ನೋಡಿದಾಗ ಈ ಗೆರೆಗಳು ಕಂಡುಬರುತ್ತದೆ, ನಾಸ್ಕಾ ಚಿತ್ರಗಳನ್ನು ಅಧ್ಯಯನ ಮಾಡಿದುದಲ್ಲದೆ ನಾಸ್ಕಾ ಗೆರೆಗಳ ಖಗೋಳ ವೀಕ್ಷಣೆಗೆ, ಗ್ರಹ ನಕ್ಷತ್ರಹಳ ಅಧ್ಯಯನಕ್ಕೆ ಬಳಸಿದ ಸಲಕರಣೆಗಳ ಬಗ್ಗೆ ಡಾ॥ಮರಿಯಾ ಅಧ್ಯಯನ ಮಾಡಿರುತ್ತಾರೆ, ಈಕೆಯ ಕೊಡುಗೆಯಿಂದ ಜಗತ್ತೆೇ ನಾಸ್ಕಾ ಕಡೆ ಗಮನ ಸೆಳೆಯುತ್ತೆ, ಇಲ್ಲಿ ಈಕೆಯ ಹೆಸರಿನ ಪ್ಲ್ಯಾನಿಟೋರಿಯಂ ನಿರ್ಮಿಸಿ ಹಾಗು ಪುಟ್ಟ ವಿಮಾನ ನಿಲ್ದಾಣಕ್ಕೆ ಈಕೆಯ ಹೆಸರಿಟ್ಟು ಅಲ್ಲಿರುವ ಜನರು ಈಕೆಗೆ ಋಣಿಯಾಗಿರುತ್ತಾರೆ. ಈ ನಾಸ್ಕಾ ಚಿತ್ರಗಳು ಆಂಡೀಸ್ ಪರ್ವತಗಳ ಇಳಿಜಾರು ಕಣಿವೆಯಲ್ಲಿ ಸುಮಾರು ೩೦ ಮೈಲಿ ಪಟ್ಟಿಯಲ್ಲಿ ಹರಡಿಕೊಂಡಿದೆ, ಆ ಚಿತ್ರಗಳ ಗೆರೆಗಳು, ಕೋನಗಳು, ತಿರುವುಗಳನ್ನು ಎತ್ತರ ಪ್ರದೇಶದಿಂದ ಕಂಡಾಗ ಸುಂದರವಾಗಿಯೂ ಆಶ್ಚರ್ಯಕರವಾಗಿ ಕಾಣುತ್ತದೆ, ಇದು ಹೇಗೆ ಹುಟ್ಟಿಕೊಂಡವು ಅಥವ ಇದನ್ನು ನಿರ್ಮಿಸಿದ್ದಾದರೂ ಯಾರು ಇಲ್ಲಿಯವರೆಗೂ ಉತ್ತರವಿಲ್ಲ. ಪಕ್ಷಿಯ ಚಿತ್ರ, ತಿಮಿಂಗಲ ಚಿತ್ರ, ನಕ್ಷತ್ರಗಳ ಚಿತ್ರಗಳಾಗಿ ಕಂಡುಬರುತ್ತವೆ. ನಂತರ ಅರಿಕೀಪಾಗೆ ಭೇಟಿನೀಡುತ್ತಾರೆ, ಅರಿಕೀಪಾ ದಕ್ಷಿಣ ಪೆರುವಿನಲ್ಲಿರುವ ನಗರ. ಗೋಧಿ, ಮೆಕ್ಕೆಜೋಳ, ದ್ರಾಕ್ಷಿ ಯಥೇಚ್ಚವಾಗಿ ಇಲ್ಲಿ ಬೆಳೆಯುತ್ತದೆ. ಅರಿ ಕೀಪಾ ಎಂದರೆ ಕೆಚುವಿನ ಭಾಷಯಲ್ಲಿ ಬನ್ನಿ ಇರಿ ಎಂದರ್ಥ, ಅದರ ಸುತ್ತಲೂ ಇರುವ ಜ್ವಾಲಾಮುಖಿಗಳನ್ನು ಹಾಗು ಸೇಂಟ್ ಕ್ಯಾರೊಲಿನಾ ಮೊನೆಸ್ಟರಿಯನ್ನು ಕಾಣುತ್ತಾರೆ. ನಂತರ ಹೊರಟಿದ್ದೇ ಕುಸ್ಕೋ ಗೆ. ಕುಸ್ಕೋ ಇನ್ಕಾ ಸಾಮ್ರಾಜ್ಯದ ಕೇಂದ್ರ ಬಿಂದು, ಮೊಟ್ಟ ಮೊದಲ ಇನ್ಕಾ ಸೂರ್ಯನ ಪುತ್ರ, ಚಂದಿರನ ಮಗಳು ಸ್ಥಾಪಿಸಿದ ಇನ್ಕಾ ಸಾಮ್ರಾಜ್ಯ ಕೇಂದ್ರವೇ ಕುಸ್ಕೋ.. ಇದು ಇನ್ಕಾಗಳಿಗೆ ಮತ್ತು ಅವರ ಪ್ರಜೆಗಳಿಗೆ ರಾಜಧಾನಿ ಮಾತ್ರವಲ್ಲದೇ ಪವಿತ್ರ ಯಾತ್ರಾಸ್ಥಳವಾಗಿತ್ತು. ಇದು ಪೆರುವಿನ ಪ್ರಮುಖ ವಾಣಿಜ್ಯ ಕೇಂದ್ರ. ನಂತರ ನೋಡಿದ್ದು ಓಲಂತಾಯ್ ತೋಂಬೋದಲ್ಲಿರುವ ಸೂರ್ಯನ ದೇವಸ್ಥಾನ. ಇಲ್ಲಿ ಇನ್ಕಾಗಳು ಬೆಟ್ಟವನ್ನು, ನೀರನ್ನು, ಭೂಮಿಯನ್ನು, ಗಾಳಿಯನ್ನು ದೇವರೆಂದು ಪೂಜಿಸುತ್ತಿದ್ದರು. ಈ ಬೆಟ್ಟದಲ್ಲಿ ಇನ್ಕಾಗಳು ಸತ್ತೊಡೆನೆಯೆ ಬದುಕು ಮುಗಿಯಿತೆಂದು ಬಗೆದಿರಲಿಲ್ಲ, ಮೇಲೆ ಸ್ವರ್ಗ, ನಡುವೆ ಭೂಮಿ, ಸತ್ತ ಮೇಲೆ ಪಾತಳದಲ್ಲಿ ತಮ್ಮ ಬದುಕೆಂದು ಭಾವಿಸಿದ್ದರು ಆದ್ದರಿಂದ ಪಾತಾಳ ಬದುಕಿಗೆ ದೇಹವನ್ನು ಕಾದಿರಿಸಬೇಕೆಂದು ಮಮ್ಮಿಗಳಾಗಿಸುತ್ತಿದ್ದರು.

ನಂತರ ಮಾಚುಪಿಚು, ಕುಸ್ಕೋದಿಂದ ಮಾಚುಪಿಚುವಿಗೆ ೩ ಗಂಟೆಯ ಪ್ರಯಾಣ. ಓಲಂತಾಯ್ ತೋಂಬ್ ನಿಂದ ರಸ್ತೆ ನಿಂತು ಬಿಡುತ್ತದೆ ಅಲ್ಲಿಂದ ರೈಲು ಪ್ರಯಾಣ ಮಾತ್ರ. ಉರುಬಂಬಾ ನದಿಯು ಶಾಂತವಾಗಿ ಹರಿಯುತ್ತಿರುವುದನ್ನು ಕಾಣುತ್ತಾರೆ. ಪುರಾತನ ಪೆರುವಿಗರು ಏರು ಎತ್ತರದಲ್ಲಿ ಸುತ್ತಲಿನ ಪ್ರಕೃತಿಯೊಡನೆ ಲೀನವಾಗುವಂತೆ ಕಟ್ಟಿದ ನಗರ ಮಾಚುಪಿಚು, ಇಲ್ಲಿರುವ ಪ್ರಕೃತಿಯ ಸಂಪತ್ತನ್ನು ಬುದ್ಧಿವಂತಿಕೆಯಿಂದ ಬಳಸಿದ್ದ ಕಾರಣ ಆಂಡೀಸ್ ನಾಗರೀಕತೆ ಹಾಗು ಇನ್ಕಾ ಸಾಮ್ರಾಜ್ಯದ ಯಶಸ್ಸಿಗೆ ಕಾರಣವಾಯಿತು. ಮಾಚುಪಿಚು ಎಂದರೆ ಹಳೆಯ ಬೆಟ್ಟ ಎಂದರ್ಥ. ಅಲ್ಲಿ ಕಾಂಡರ್ ದೇವಾಲಯ ಹಾಗು ಅದರ ಹಿಂಭಾಗದಲ್ಲಿ ಹರಿಯುವ ಉರುಬಂಬಾ ನದಿಯನ್ನು ಕಾಣುತ್ತಾರೆ. ಮಾಚುಪಿಚು ಬೆಟ್ಟದ ಸೌಂದರ್ಯಕ್ಕೆ ಮಾರುಹೋಗುತ್ತಾರೆ, ಅವರ ಕನಸಿನ ಪಯಣದಲ್ಲಿ ಮಾಚುಪಿಚುವನ್ನು ಕಂಡಾಗ ಅವರಿಗೆ ಆನಂದವೋ ಆನಂದ. ನಂತರ ಅಮೆಜಾನೆ ನದಿಯತ್ತ ಪಯಣ ಹೊರಡುತ್ತಾರೆ.

ಅಮೆಜಾನ್ ನದಿಯ ಮೇಲೆ ಚಿಕ್ಕ ಹಡುಗಿನಲ್ಲಿ ಪ್ರಯಾಣ ಮಾಡುತ್ತಾ, ನದಿಯ ಮೇಲೆ ಹೋಗುವ ಪಯಣವನ್ನು ಸುತ್ತಲೂ ದಟ್ಟವಾದ ಅಮೆಜಾನ್ ಕಾಡಿನ ಸೌಂದರ್ಯವನ್ನು ವೀಕ್ಷಿಸುತ್ತಾ , ಅಲ್ಲಿರುವ ಬಗೆಬಗೆಯ ಪಕ್ಷಿಗಳನ್ನು ನೋಡುತ್ತಾ ಹೋದಗ ಅವರ ಮನಸ್ಸಿಗೆ ಏನೋ ಒಂದು ರೀತಿಯ ಸಮಾಧಾನ ತಮ್ಮ ಕನಸು ನನಸಾಗಿದ್ದಕ್ಕೆ, ಎಲ್ಲಿನ ಬೆಂಗಳೂರು ಎಲ್ಲಿನ ಬ್ರೆಜಿಲ್ ನ ಅಮೆಜಾನ್ ಕಾಡು, ನೆನೆದರೆ ರೋಮಾಂಚನವಾಗುತ್ತದೆ, ಬೆಂಗಳೂರಿನಿಂದ ಹೊರಟು ಲೀಮಾಗೆ ಬಂದು, ನಂತರ ಅರಿಕೀಪಾ, ಕುಸ್ಕೋ ನಾಸ್ಕಾ, ಮಾಚುಪಿಚು, ಓಲಂತಾಯ್ ತೋಂಬೋ , ಈಗ ಅಮೆಜಾನ್ ನದಿ ಹಾಗು ಕಾಡು ಎಷ್ಟೆಲ್ಲಾ ನೋಡಿ ಆನಂದಪಟ್ಟೆವು, ಭಾಷೆ ಬಾರದೆ ಇದ್ದಾಗ ಕೈಯಲ್ಲಿ ಮುಖದಲ್ಲೇ ಅಭಿನಯಿಸುತ್ತಾ ಇತರರಿಗೂ ಅರ್ಥ ಮಾಡಿಸುತ್ತಾ , ಸಸ್ಯಾಹಾರಿಗಳಾದ ತಮಗೆ ಸರಿ ಊಟ ಸಿಗದೆ ಬರಿ ಹಣ್ಣು, ತರಕಾರಿ, ಬಿಸ್ಕೆಟ್, ಕೇಕ್ ಗಳಲ್ಲಿ ಒಮ್ಮೊಮ್ಮೆ ಏನೂ ಇಲ್ಲದೆ ಪ್ರವಾಸ ಮುಂದುವರೆಸಿ ಹಾಗು ಎಲ್ಲೂ ಆಯಾಸವಾಗದಿರುವುದನ್ನು ನೆನದು ಇದೆಲ್ಲಾ ನಿಜವೇ ಎಂಬ ಭಾಸವಾಗುತ್ತದೆ. ಎಲ್ಲಿ ಹೋದರು ಪೆರುವಿನ ಜನರು ಇಂಡಿಯಾ ಇಂಡಿಯಾ ಅಂತ ನಮ್ಮ ಉಡುಪಿನಿಂದನೆಲೇ ಕಂಡು ಹಿಡಿದು ಆದರದಿಂದ ಬರಮಾಡಿಕೊಂಡ ಅವರ ಪ್ರೀತಿಗೆ ಶರಣು. ಈ ಆಂಡೀಸ್ ಪರ್ವತಗಳು, ಬೆಟ್ಟ ಕಣಿವೆಗಳು, ನಾಸ್ಕಾ ಮರುಳುಗಾಡು, ಅರಿಕೀಪಾ ಹಾಗು ಮಾಚುಪಿಚು ಬೆಟ್ಟ, ಅಮೆಜಾನ್ ಮಳೆಕಾಡುಗಳು ತಾವು ಕಂಡದ್ದು ಗುಟುಕು ಮಾತ್ರ, ನೇಡಲು ಇನ್ನೂ ಬಹಳಷ್ಟಿವೆ ಮತ್ತೆ ಬರುತ್ತೇವೆ ಎನ್ನುತ್ತಾ ಪೆರುವಿಗೆ ವಿದಾಯ ಹೇಳುತ್ತಾರೆ.

*ಕಾರ್ತಿಕೇಯ*

Profile Image for Vishwas Gc.
32 reviews
Read
January 12, 2026
“ಪೆರುವಿನ ಪವಿತ್ರ ಕಣಿವೆಯಲ್ಲಿ” ಕನ್ನಡ ಪ್ರವಾಸ ಸಾಹಿತ್ಯದಲ್ಲಿ ವಿಭಿನ್ನ ಸ್ಥಾನವನ್ನು ಪಡೆದಿರುವ ಕೃತಿ. ಇದು ಕೇವಲ ಒಂದು ದೇಶದ ಪ್ರವಾಸ ವಿವರವಾಗದೇ, ಒಂದು ನಾಗರಿಕತೆ, ಸಂಸ್ಕೃತಿ ಮತ್ತು ಮಾನವ ಜೀವನದ ಆಳವಾದ ಅನ್ವೇಷಣೆಯಂತೆ ಓದುಗರ ಮುಂದೆ ತೆರೆದುಕೊಳ್ಳುತ್ತದೆ.

ಲೇಖಕಿ ನೇಮಿಚಂದ್ರ ಅವರು ಪೆರು ದೇಶದ ಭೌಗೋಳಿಕ ವೈಶಿಷ್ಟ್ಯಗಳು, ಆಂಡೀಸ್ ಪರ್ವತಶ್ರೇಣಿ, ಮಾಚುಪಿಚು, ಪವಿತ್ರ ಕಣಿವೆ, ಸ್ಥಳೀಯ ಜನರ ಜೀವನ ಶೈಲಿ ಮತ್ತು ಅವರ ಇತಿಹಾಸವನ್ನು ಅತ್ಯಂತ ಸೂಕ್ಷ್ಮವಾಗಿ ದಾಖಲಿಸಿದ್ದಾರೆ. ಅವರ ಬರಹದಲ್ಲಿ ಪ್ರವಾಸದ ಉತ್ಸಾಹದ ಜೊತೆಗೆ ಅಧ್ಯಯನದ ಗಂಭೀರತೆ ಮತ್ತು ಮಾನವೀಯ ಸ್ಪರ್ಶ ಕೂಡ ಕಂಡುಬರುತ್ತದೆ.

ಅಮೆರಿಕದ ಪ್ರಭಾವದಿಂದ ನಡೆದ ರಾಜಕೀಯ ಹಸ್ತಕ್ಷೇಪ, ಬಹುರಾಷ್ಟ್ರೀಯ ಕಂಪನಿಗಳ ಶೋಷಣೆ, ಸ್ಥಳೀಯ ಸಂಪನ್ಮೂಲಗಳ ದೋಚಾಟ ಮತ್ತು ಅದರ ಪರಿಣಾಮವಾಗಿ ಉಂಟಾದ ಬಡತನ, ಅಸಮಾನತೆ ಹಾಗೂ ಜನಸಾಮಾನ್ಯರ ಅಸಹಾಯಕತೆ — ಇವೆಲ್ಲವೂ ಲೇಖಕಿಯ ಗಮನದಿಂದ ತಪ್ಪಿಲ್ಲ. ಪ್ರವಾಸ ಕಥನದೊಳಗೆ ಈ ಅಂಶಗಳು ಬಂದಾಗ, ಓದುಗರಿಗೆ ಪೆರು ದೇಶದ ಸೌಂದರ್ಯದ ಹಿಂದೆ ಮರೆಮಾಚಿರುವ ನೋವು ಸ್ಪಷ್ಟವಾಗಿ ಕಾಣಿಸುತ್ತದೆ.

ಇದು ಪ್ರವಾಸ ಕಥನವಾದರೂ, ಇತಿಹಾಸ, ಸಂಸ್ಕೃತಿ ಮತ್ತು ಸಾಮಾಜಿಕ ವಿಚಾರಗಳು ಸಹಜವಾಗಿ ಕಥನದೊಳಗೆ ಬೆರೆತು ಹೋಗಿವೆ. ಆದ್ದರಿಂದಲೇ ಈ ಪುಸ್ತಕವನ್ನು ಓದುತ್ತಿದ್ದಂತೆ, ಓದುಗರ ಮನಸ್ಸಿನಲ್ಲಿ ಪೆರುಗೆ ಸ್ವತಃ ಭೇಟಿ ನೀಡಬೇಕು, ಪೆರುವಿನ ಹಾದಿಗಳಲ್ಲಿ ನಡೆಯುವಂತೆ, ಆ ಪರ್ವತಗಳ ನಡುವೆ ಉಸಿರಾಡಬೇಕು ಎಂಬ ತೀವ್ರ ಆಸೆ ಹುಟ್ಟುತ್ತದೆ. ಅದೇ ಈ ಕೃತಿಯ ದೊಡ್ಡ ಸಾಧನೆ ಎಂಬ ಭಾವನೆ ಉಂಟಾಗುತ್ತದೆ. ಕೆಲವು ಓದುಗರಿಗೆ ಚಿತ್ರಗಳ ಕೊರತೆ ಅನಿಸಬಹುದಾದರೂ, ಲೇಖಕಿಯ ಶಬ್ದಚಿತ್ರಣವೇ ಅದನ್ನು ತುಂಬಿಬಿಡುತ್ತದೆ.

Profile Image for Supriya.
84 reviews1 follower
March 10, 2022
What a wonderful travelogue!

ನಾನೇ ಪೆರುವಿಗೆ ಹೋದಂತೆನಿಸಿತು. ಈ ಪುಸ್ತಕ pre-internet era ಲಿ ಪ್ರಯಾಣ ಮಾಡಿದ ಅನುಭವ ಕೊಡ್ತು. ಬರಿ ಪೆರುವಿನ itinerary ಮಾತ್ರವಲ್ಲ, ಅದರ ಇತಿಹಾಸವನ್ನು ಸಹ ಹೊಂದಿದೆ. Learnt a lot on Peru’s heritage and civilisation. I hope to go there someday.
Profile Image for Mahesh.
89 reviews
July 16, 2019
ದಕ್ಷಿಣ ಅಮೇರಿಕಾ ವಸಾಹತುಶಾಹಿಗಳಿಂದ ದಾಕ್ಷಿಣ್ಯಕ್ಕೆ ಒಳಗಾದ ದಾರುಣ ನಾಡು. ಜಗತ್ತಿನಲ್ಲೇ ಸಂಪತ್ಭರಿತ ಪ್ರಕೃತಿ ಮಡಿಲಲ್ಲಿ ಬೆಳೆದ ಜನಕ್ಕೆ ತಮ್ಮಲ್ಲಿರು ಸಂಪತ್ತೇ ಮುಳುವಾದಂತೆ ಅವರ ಮೇಲೆ ಶತಮಾನಗಳಿಂದ ದಬ್ಬಾಳಿಕೆ, ಅತ್ಯಾಚಾರಗಳಾಗಿವೆ. ಇಂತಾ ದಬ್ಬಾಳಿಕೆಗಳನ್ನು ಸಹಿಸಿ , ಸವೆಸಿದ ಆ ಜನಗಳ ಚಿತ್ರಣ ನೇಮಿಚಂದ್ರರು ' ಪೆರುವಿನ ಪವಿತ್ರ ಕಣಿವೆಯಲ್ಲಿ ' ಎಂಬ ಪ್ರವಾಸಕಥನದಲ್ಲಿ ಮನ ಮುಟ್ಟುವಂತೆ ಚಿತ್ರಿಸಿದ್ದಾರೆ . ಮುಂದುವರೆದ ದೇಶಗಳನ್ನು ಬಹಳ ಸುಲಭವಾಗಿ , ಕಡಿಮೆ ಸಹಾಯದಿಂದ ಪ್ರೇಕ್ಷಣೀಯ ಸ್ಥಳಗಳ ಪ್ರವಾಸ ಮಾಡಬಹುದು ಆದರೆ ಅರಾಜಕತೆಯಿಂದಲೇ ತುಂಬಿ ತುಳುಕುವ ದಕ್ಷಿಣ ಅಮೇರಿಕಾ ವನ್ನು ಇಬ್ಬರು ಮಹಿಳೆಯರು ಯಾವುದೇ ಸಹಾಯವಿಲ್ಲದೆ , ಬಾಷೆ ಬರದೇ ಯಾವುದೇ ಅಡೆತಡೆಗಳ್ಳಿಲದೆ ಪೆರು ,ಬ್ರೆಜಿಲ್ ದೇಶಗಳನ್ನು ಮತ್ತು ಅಲ್ಲಿಯ ಅಮೆಜಾನ್ ನದಿ ಮೇಲೆ ಸಾದಾರಣ ನಾಗರಿಕರ ದೋಣಿಯಲ್ಲಿ ಪ್ರಯಾಣ ಮಾಡಿ ಬಂದ ಬಗ್ಗೆ ಬರೆದುಕೊಂಡಿರುವುದು ಕೇಳಿದರೆ ಮೈ ಜುಮ್ ಎನ್ನುತ್ತದೆ . ಪೆರು ಜನರ ಜೀವನ ಶೈಲಿ , ಉಡುಗೆ , ಆಹಾರ , ಬಡ ರಾಷ್ಟ್ರವಾದರೂ ರಸ್ತೆಗಳ ಸ್ವಚ್ಛತೆ , ಪ್ರವಾಸಿಗಳಿಗೆ ಸ್ವಾಗತಿಸುವ ರೀತಿ ಮತ್ತು ತುಂಬಾ ಆಶ್ಚರ್ಯ ಅನ್ನಿಸುವ ವಿಷಯವೆಂದರೆ ಸಾಮಾನ್ಯವಾಗಿ ಜಗತ್ತೆಲ್ಲ ಸುತ್ತುವ ಭಾರತೀಯರಾದ ನಾವು ದಕ್ಷಿಣ ಅಮೇರಿಕಾ ಅಂದರೆ ಹಿಂಜರೆತ ಹೀಗಿದ್ದರೂ ನಮ್ಮನ್ನು ಕಂಡರೆ ಗುರುತು ಹಿಡಿಯುತ್ತಿದನ್ನು ಬಹಳ ವಿನೋದವಾಗಿ ಬರೆಡಿದ್ದಾರೆ . ಇಂಗ್ಲೀಷ್ ಬರುವ ದೇಶಗಳಲ್ಲೇ ಸಂವಹನಕ್ಕೆ ಪರದಾಡುವ ನಾವು ಇನ್ನು ಇಂಗ್ಲೀಷ್ ಕಿಂಚಿತ್ತೂ ಬರದ ಆ ನಾಡಲ್ಲಿ ಬರಿಯ ಆಂಗಿಕ ಭಾಷೆಯಲ್ಲಿ ಸಂವಹನ ನಡೆಸಿ ಚೌಕಾಸಿಯೂ ಮಾಡಿ ಹೋಟೆಲ್ ನ ರೂಮು, ಟ್ಯಾಕ್ಸಿ ಮತ್ತು ರೆಸ್ಟೋರೆಂಟ್ ಸೇವೆಗಳನ್ನು ಪಡೆದ ಬಗ್ಗೆ ಕೇಳಿದರೆ ಸೋಜಿಗವೆನಿಸುತ್ತದೆ . ಪೆರು ದೇಶದ ಐತಿಹಾಸಿಕ , ಸಾಂಸ್ಕೃತಿಕ ಮತ್ತು ಜೀವನ ಶೈ ಲಿ ತಿಳಿಯಲು ಈ ಪ್ರವಾಸಕಥನ ಬಹಳ ಉಪಯುಕ್ತ .
Profile Image for Bhavani Gowda.
1 review3 followers
Want to read
January 12, 2023
ಇದು ಸ್ಟೋರಿ ಓಪನ್ ಆಗ್ತಿಲ್ಲ ... ಮತ್ತೆ ಓದೋದು ಹೇಗೆ .. ಬರಿ ಫೋಟೋ ಬರ್ತಿದೆ ಅಷ್ಟೇ
Profile Image for Saritha Pai.
41 reviews30 followers
September 23, 2019
Mind blowing! It's a travelogue. Loved the comparison she does Peru with India... India was ruled by British similarly Peru by Spanish people. Their Cultures, traditions are written beautifully. Amazon forest tour was my favorite part in this book. 😊 Looking forward to read many of Nemichandra books.
3 reviews
May 31, 2016
This is a beautiful travelogue, which gives insight in to Peru's culture, heritage and people. Nemichandra entertains the readers with her knowledge, wit and humor with lot of local stories. I like her all books.
10 reviews3 followers
January 23, 2017
This is one of the best travelogue. It was like visiting the places myself. Enjoyed all the places..Felt like went on the amazon river with the troupe. It was good to know the history of Peru and Brazil. I would have loved more pictures in the book.
I have thoroughly enjoyed it !
Profile Image for Akila Manu.
13 reviews
July 1, 2016
Memorable walk in Peru with Nemi Chandra. Beautifully written.
Profile Image for Sindhu.
27 reviews11 followers
June 28, 2018
ಪೆರುವಿನ ಪವಿತ್ರ ಕಣಿವೆಯಲ್ಲಿ
ನೇಮಿಚಂದ್ರರ `ಪೆರುವಿನ ಪವಿತ್ರ ಕಣಿವೆಯಲ್ಲಿ´ಪುಸ್ತಕ ತಿಂಬಾ ಚೆನ್ನಾಗಿದೆ ಅಂತ ಎಲ್ರೂ ಹೇಳ್ತಿದ್ರೂ ಯಾಕೋ ಅದನ್ನ ತಂದಿರಲಿಲ್ಲ.ಮೊನ್ನೆ ಪುಸ್ತಕದಂಗಡಿಯಲ್ಲಿ ಆ ಹೆಸರು ನೆನಪಾಗಿ ಪುಸ್ತಕ ಕೈಗೆತ್ತಿಕೊಂಡ ಕೂಡಲೇ ಕಂಡದ್ದು ಮಾಚುಪಿಚುವಿನ ಚಿತ್ರ.ಅದ್ಹೇಗಿದ್ರೂ ಓದ್ಲೇಬೇಕು ಅಂತ ಪುಸ್ತಕ ಓದೋಕೆ ಶುರುಮಾಡಿದ್ದಷ್ಟೇ,ಅದ್ಯಾವ ಮಾಯದಲ್ಲಿ ನನ್ನನ್ನ ಆವರಿಸಿತೋ ತಿಳಿಯಲಿಲ್ಲ.ಲೇಖಕಿ ಒಂದೂರಿನಿಂದ ಮತ್ತೊಂದೂರಿಗೆ ಹೇಗೆ ನಿದ್ದೆ ಊಟ ಬಿಟ್ಟು ವಿಮಾನ ಟ್ಯಾಕ್ಸಿ ಹಿಡಿದು ಓಡ್ತಿದ್ರೋ ಹಾಗೆ ನಂಗೂ ಊಟ ನಿದ್ದೆಯನ್ನ postpone ಮಾಡಿ ಓದೋ ಹಾಗೆ ಮಾಡ್ತು ಪುಸ್ತಕ.
ನಾಸ್ಕಾದ ಗೆರೆಗಳು, ಅವುಗಳ ನಿಗೂಡತೆ ಅಗಾಧತೆ ಇದನ್ನೆಲ್ಲ‍ಾ ಓದ್ತಿರುವಂತೆ ಅವನ್ನ ನೋಡದೆ ಇರೋಕಾಗ್ದೆ YouTube ನಲ್ಲಿ ಅದರ ಚಿತ್ರಗಳನ್ನ ನೋಡಿದ್ದಾಯ್ತು.ಲೇಖಕಿ ಅಲ್ಲಿನ ರಾಜಕೀಯ ಮಹಿಳಾ ಹೋರಾಟ ಅಲ್ಲಿನ ಜನರ ಬದುಕು ಬವಣೆ ಎಲ್ಲವನ್ನ ಅಂದವಾಗಿ ಕಟ್ಟಿಕೊಟ್ಟಿದಾರೆ.ಅವರ ಜೊತೆಯಲ್ಲೇ ನಾವೂ ಹೋಗ್ತಿದೀವಿ ಅನ್ನೋ ಭಾವವೇ ಮೊದಲ ಪುಟದಿಂದ ಕೊನೆಯ ಪುಟದವರೆಗೂ.
ಕುಸ್ಕೋ ಮಾಚುಪಿಚುವಿನ ಚಿತ್ರಣವೂ ಅಷ್ಟೇ ಸುಂದರ.ಅಷ್ಟು ಎತ್ತರದ ಪರ್ವತಗಳ ಮೇಲೆ ಆ ನಗರವನ್ನ ಹೇಗೆ ನಿರ್ಮಿಸಿರಬಹುದು ಅನ್ನೋ ಅಚ್ಚರಿ ಮನದಲ್ಲಿ.ಮುಂದಿನ ಭಾಗ ಅಮೇಜಾನ್ ನದಿ ಅಮೇಜಾನ್ ಕಾಡು.ತೇಜಸ್ವಿಯವರ ಮಿಲೇನಿಯಂ ಸರಣಿಯ ಪುಸ್ತಕವೊಂದು ನೆನಪಾಯ್ತು.ಪೆರುವಿನಿಂದ ಬ್ರೆಜಿಲ್ಗೆ ಅಮೇಜಾನ್ ನದಿಯಲ್ಲಿ ಸ್ಪೀಡ್ ಬೋಟಲ್ಲಿ ಒಂದಿಡೀ ದಿನದ ಪಯಣ. ಅಬ್ಬಾ! ಅದೆಷ್ಟು ಸುಂದರ ಅನುಭವವಾಗಿರಬಹುದು ಅದು.ನಿಶಬ್ದ ಪರಿಸರ ಅಗಾಧ ನೀರು ಸುತ್ತೆಲ್ಲ ಕಾಡು.
ಇಷ್ಟಕ್ಕೇ ಮುಗೀಲಿಲ್ಲ ಅಗಾಧ ಕಾಡಿನ ಮಧ್ಯದಲ್ಲಿ ರಾತ್ರಿಯೀಡಿ ಕಳೆದ ಅನುಭವ ಅನಕೊಂಡ, ವಾಟರ್ ಲಿಲ್ಲಿ, ಪಿರಾನ ಮೀನು ,ಡಾಲ್ಫಿನ್ ಹೀಗೆ ಬೆರಗಿನ ಲೋಕವೇ ನಮ್ಮೆದುರಲ್ಲಿ ತೆರೆದುಕೊಳ್ಳತ್ತೆ.
ಪೆರುವಿನಿಂದ ವಾಪಸ್ ಬರುವಾಗ ನಮಗೂ ಇಷ್ಟು ಬೇಗ ಪ್ರವಾಸ ಮುಗಿದು ಹೋಯ್ತಾ ಅನ್ನಿಸದೆ ಇರಲಾರದು.
Displaying 1 - 19 of 19 reviews

Can't find what you're looking for?

Get help and learn more about the design.