What do you think?

ಕತೆ ಜಾರಿಯಲ್ಲಿರಲಿ | Kate Jaariyallirali
ಸೋ ಕಾಲ್ಡ್ ಇನ್‌ಕ್ಲೂಸಿವ್‌ನೆಸ್ಸಿನ, ಎಜುಕೇಟೆಡ್ ಸೊಸೈಟಿಯ ಡ್ರಾಮಾ ಅಲ್ಲವಾ ಇದೆಲ್ಲ..? ಗೋ ಫ್ಲ್ಯಾಟ್ ಫೋಟೋಶೂಟಂತೆ! ಕ್ಲೀವೇಜ್ ತೋರಿಸುವ ಡ್ರೆಸ್ ಹಾಕಿದಾಗಲೆಲ್ಲ ಎಷ್ಟುಬಾರಿ ಕಾಂಪ್ಲಿಮೆಂಟ್ ಕೊಟ್ಟಿಲ್ಲ ನೀನು!” ಕಳ್ಳನನ್ನು ಹಿಡಿದಂತೆ ಮಾತಾಡಿದಳು. ಥತ್! ನನ್ನನ್ನ ಡೈಲೆಮಾದಲ್ಲಿ ಹಾಕುತ್ತಿದ್ದಾಳಲ್ಲ ಇವಳು ಎನ್ನಿಸಿತು. -'ಸೀಕ್ರೆಟ್ ಸ್ಯಾಂಟಾ' ಕತೆಯಿಂದ ಮಗುವನ್ನು ಆಸ್ಪತ್ರೆಯಿಂದ ಮನೆಗೆ ಕರೆತಂದವನು ಅವನೇ... ಮಗಳನ್ನು ಪೂರ್ವಿ ಎಂದೇ ಕರೆಯಬೇಕೆಂದು ನಿರ್ಧರಿಸಿದವನು ಅವನೇ... ಹಡೆದ ಹನ್ನೊಂದನೇ ದಿನಕ್ಕೆ ಬೆತ್ತದ ಡಬ್ಬಿಯ ಮುಚ್ಚಳದಲ್ಲಿ ಗುಲಾಬಿ ದಾಸವಾಳದ ಪಕಳೆಯಂತೆ ಮಲಗಿದ ಮಗುವನ್ನು ಹೊತ್ತು ಹೊಸ್ತಿಲು ದಾಟಿಸಿದವನೂ ಅವನೇ... ದಾವಣಗೆರೆಗೆ ಹೊರಡುವ ಮುಂಚೆ ಪೂರ್ವಿಯನ್ನು ತೋಳಲ್ಲೆತ್ತಿಕೊಂಡು ಕುಮಾರವ್ಯಾಸ ಭಾರತದ 'ಗಜಮುಖನೆ ಮೆರೆವೇಕದಂತನೆ ನಿಜಗುಣಾನ್ವಿತ ಪರಶುಧಾರನೆ' ಸಾಲುಗಳನ್ನು ರಾಗಬದ್ಧವಾಗಿ ಹಾಡಿದವನೂ ಅವನೇ... ಮಗುವಿಗೆ ತಿಂಗಳು ತುಂಬಲು ಇನ್ನೇನು ಎರಡು ದಿನ ಇರುವಾಗ ದಾವಣಗೆರೆಯಿಂದ ಅಂಬ್ಯುಲೆನ್ಸಿನಲ್ಲಿ ಉದ್ದುದ್ದ ಮಲಗಿ ಹೆಣವಾಗಿ ಬಂದವನೂ ಅವನೇ. - 'ಪಟಾಕಿ ಕೈಚೀಲ' ಕತೆಯಿಂದ ಎಲ್ಲೋ ನೆಮ್ಮದಿಯಲ್ಲಿ ತಂಗಿದ್ದ, ಇನ್ನೆಲ್ಲೋ ಬವಣೆಗಳಿಂದ ಬೇಸತ್ತಿದ್ದ ಮತ್ತೆಲ್ಲೋ ವೈರಾಗ್ಯ ತಳೆದು ಕೂತಲ್ಲೇ ಹುತ್ತ ಬೆಳೆಸಿಕೊಂಡಿದ್ದ ಕತೆಗಳನ್ನು ಅವುಗಳ ಪಾಡಿಗೇ ಬಿಟ್ಟುಬಿಡದೆ ಕರೆದು ಕರೆದು ಕಟ್ಟಿಹಾಕಿದ್ದಿದೆ, ಚಿಕ್ಕಂದಿನಿಂದಲೂ, ಸಾಕಿನ್ನು ಕತೆಗಳನ್ನು ಕರೆದದ್ದು, ಅವುಗಳನ್ನು ಕಟ್ಟಿಹಾಕಿದ್ದು ಎಂದುಕೊಂಡಷ್ಟೂ ಇನ್ನಷ್ಟು ಅವುಗಳ ಬೆನ್ನು ಬೀಳುತ್ತೇನೆ. - 'ಕತೆ ಜಾರಿಯಲ್ಲಿರಲಿ' ಕತೆಯಿಂದ
120 pages, Paperback
Published January 1, 2025
Ratings & Reviews
Friends & Following
Create a free account to discover what your friends think of this book!
Community Reviews
Displaying 1 - 3 of 3 reviews
March 22, 2025
ಈ ಹೊತ್ತಿಗೆ ಕಥಾ ಪ್ರಶಸ್ತಿಗೆ ಭಾಜನವಾದ, ಅಂಗೈ ಅಗಲದ ಈ ಪುಟ್ಟ ಪುಸ್ತಕದಲ್ಲಿ ಎಂಟು ಚಿಕ್ಕ ಚಿಕ್ಕ ಕತೆಗಳು ಓದಲು ಸಿಕ್ಕವು.
'ಪಟಾಕಿ ಕೈಚೀಲ', 'ಸೀಕ್ರೆಟ್ ಸ್ಯಾಂಟಾ', 'ಹತ್ತವತಾರವನು ಹೊತ್ತವಳು ನೀನು' ಕತೆಗಳು ತಮ್ಮೊಳಗಿನ ಸ್ತ್ರೀವಾದಿ ನಿಲುವಿನಿಂದ ಗಮನ ಸೆಳೆಯುತ್ತವೆ.
ಸ್ತ್ರೀವಾದ ಎಂದರೆ ಪುರುಷ ವಿರೋಧಿ ನಿಲುವು, ಸ್ವೆಚ್ಛೆ, ಹೆಣ್ಣುಮಕ್ಕಳು ಮಾತ್ರ ಅಭ್ಯಸಿಸುವ ವಿಷಯ ಎಂಬಿತ್ಯಾದಿಯಾಗಿ ಸೂಡೋ ಫೆಮಿನಿಸಂ ಹಬ್ಬಿಸಿರುವ ಮೂಢನಂಬಿಕೆಗಳನ್ನು ಮೀರಲು ಇಂತಹ ಕತೆಗಳೂ, ಇವುಗಳ ಪಾತ್ರದಂತಾ ವ್ಯಕ್ತಿಗಳೂ ಅವಶ್ಯ ಎನಿಸುತ್ತದೆ.
'ಕತೆ ಜಾರಿಯಲ್ಲಿರಲಿ', 'ಸಿನ್ನರ್ಸ್ ಎಂಡ್ ಸೋಬರ್ಸ್' ಮತ್ತು 'ಬದುಕು ಕದನದ ತೆರನೆ' ಕತೆಗಳಲ್ಲಿ ಸೂಕ್ಷ್ಮವಾಗಿ ಅಡಕವಾಗಿರುವ ಮನುಷ್ಯರ ಮನೋವ್ಯಾಪಾರದ ವಿಭಿನ್ನತೆ ಮತ್ತು ಸಂಕೀರ್ಣತೆಯನ್ನು ಹಿಡಿದಿಟ್ಟು ಯೋಚನೆಗೆ ಹಚ್ಚುತ್ತವೆ.
ಈ ಹೊತ್ತಿಗೆ ಕಥಾ ಸ್ಪರ್ಧೆಯ ನಿಯಮಗಳೇನೋ ಗೊತ್ತಿಲ್ಲ. 'ನಿನ್ನ ಕೊಂದು ನಾನೇನು ಪಡೆಯಲಿ?' ಕತೆ ಪದಮಿತಿ ಅಥವಾ ಪುಟಸಂಖ್ಯೆ ಮಿತಿಯ ಕಾರಣಕ್ಕೆ ಬಡವಾಯಿತೇನೋ ಎನಿಸಿತು. ಕಥೆ ಹೊರಟ ದಿಕ್ಕಿಗೂ ಸಾಗಿ ಕೊನೆಯಾದ ದಿಕ್ಕಿಗೂ ಸಾಮರಸ್ಯ ಇದ್ದಂತೆ ಎನಿಸಲಿಲ್ಲ. ಇನ್ನಷ್ಟು ಗಹನವಾಗಿ ಸಾಗಬಹುದಿತ್ತೇನೋ ಅಥವಾ ಕತೆಯನ್ನು ನಾನು ಕಂಡ ರೀತಿಯದೇ ಕೊರತೆಯೇನೋ ಗೊತ್ತಿಲ್ಲ.
ಕತೆಗಳಿಗೆಂದೇ ಮೀಸಲಿಟ್ಟ ಪುಟಗಳು, ಪುಸ್ತಕದ ಒಟ್ಟಾರೆ ಆಕಾರಕ್ಕೆ ಹೋಲಿಸಿದರೆ ಬೆಲೆ ಕೊಂಚ ಭಾರವೇ ಎನಿಸುತ್ತದೆ. ಕತೆಗಳಿಗೆಂದೇ ಮೀಸಲಿರುವ ಪುಟಗಳ ಸಂಖ್ಯೆಯ ದುಪ್ಪಟ್ಟಿಗಿಂತಲೂ ಹೆಚ್ಚಿರುವ ಬೆಲೆ ಸಮರ್ಥನೀಯ ಎನಿಸಲಿಲ್ಲ.

March 24, 2025
ಒಳ್ಳೆಯ ಕತೆಗಳು. ಎಂಬತ್ತನಾಲ್ಕು ಪುಟಕ್ಕೆ ಪ್ಲಸ್ ಬೆನ್ನುಡಿ ಮುನ್ನುಡಿ .ಬೆಲೆ ತೀರಾ ಜಾಸ್ತಿ. ಅದು ಬಿಟ್ರೆ ಕತೆಗಳು ಚೆನ್ನಾಗಿದೆ.
ಕತೆ ಜಾರಿಯಲ್ಲಿರಲಿ - ಪೂರ್ಣಿಮಾ ಭಟ್ಟ ಸಣ್ಣಕೇರಿ.
ಈ ಸಂಕಲನದ ಕತೆಗಳ ಓದುವಾಗ ಬಿಟ್ಟೂ ಬಿಡದೆ ಲೇಖಕಿಯ ಬರವಣಿಗೆಯಲ್ಲಿ ವಸ್ತುವಿನ ನಿರ್ವಹಣೆಯ ಬಗ್ಗೆ ಮೆಚ್ಚುಗೆ ಮೂಡುತ್ತಲೇ ಇತ್ತು.
ಕಥೆಯೊಂದು ರೂಪುಗೊಳ್ಳುವ ಬಗೆ ಮತ್ತು ಸುತ್ತಲಿನ ಬದುಕಿನ ಕತೆಗಳ ಬಗ್ಗೆ ನಿರೂಪಕಿಯ ಕುತೂಹಲ ಚೇತೋಹಾರಿಯಾಗಿದೆ.
ಇದೇ ಉತ್ಸಾಹ ಎರಡನೇ ಸಂಬಂಧದ ಕತೆ ಹೊಂದಿರುವ ಪಟಾಕಿ ಕೈಚೀಲವನ್ನು ಎತ್ತಿ ನಿಲ್ಲಿಸಿದೆ.
ಹದ ತಪ್ಪಿದರೆ ಗೋಳಾಗಬಹುದಾಗಿದ್ದ ಕತೆಯನ್ನು ಕಟ್ಟಿದ ರೀತಿ ಖುಷಿಯಾಯಿತು. 'ಸಿಕ್ರೇಟ್ ಸ್ಯಾಂಟಾ' ಕತೆಯು ದೇಹದ ಭಾಗವೊಂದರ ವಿರೂಪವನ್ನು ಸರಿಗೊಳಿಸಲು ಹೆಣಗಾಣುವ ಪತ್ನಿ ಹಾಗೂ ಅದು ಅನಗತ್ಯ ಎಂದುಕೊಳ್ಳುವ ಪತಿಯ ನಡುವೆ ಅನಿಸಿದರೂ ಅದು ಬರೀ ದೇಹದ ಭಾಗವಲ್ಲ ಎಂದು ಚಕ್ಕನೆ ಹೊಳಹು ಕೊಡುವ ಕತೆಯಾಗಿದೆ.
' ಬದುಕು ಕದನದ ತೆರನೆ' ಕತೆ ಯಲ್ಲಿ ಬಡವರು ದೊಡ್ಡವರ ನಡುವಿನ ಅಂತರವ ಬಹಳ ಚೆನ್ನಾಗಿ ತೆರೆದಿಟ್ಟಿದೆ. ಇಲ್ಲಿ ಉಳ್ಳವರಿಗೆ ಅದು ಆ ಕ್ಷಣ ಬಚಾವಾಗುವ ದಾರಿಯಾದರೆ ಬಡವರಿಗೆ ಅದು ಜೀವನದ ಪ್ರಶ್ನೆ.
ಕಿವಿ ತಿರಪೇಕಾಯಿ, ಸಿನ್ನರ್ಸ್ ಸೋಬರ್ಸ್ ಕತೆ ಎರಡೂ ವಿಭಿನ್ನ ವಿಷಯಗಳ ಹೇಳಿದರೂ ಆಳದಲ್ಲಿ ಇದು ನಗರ ಬದುಕಿನ ಸಮಸ್ಯೆ ಅನಿಸುವಂತೆ ಇದೆ.
ಈ ಸಂಕಲನದ ಕತೆಗಳ ಓದುವಾಗ ಲೇಖಕಿಗೆ ಕತೆ ಹೇಳಲು ಗೊತ್ತಿದೆ ಎಂಬ ಆತ್ಮವಿಶ್ವಾಸ ಮತ್ತು ಕತೆಗಳ ಯಶಸ್ಸಿಗೆ ಅದು ಬಹುಮುಖ್ಯ ಕಾರಣ ಎಂದು ಅನಿಸಿತು. ಭಾಷೆಯ ಸರಾಗ ಬಳಕೆ ಕತೆಗಳ ಖುಷಿಯಿಂದ ಓದಿಸಿಕೊಂಡು ಹೋಗುತ್ತದೆ.
' ಈ ಹೊತ್ತಿಗೆ' ಕಥಾ ಪ್ರಶಸ್ತಿ ವಿಜೇತ ಕೃತಿ ಇದು.

January 13, 2026
ಪುಸ್ತಕ: ಕಥೆ ಜಾರಿಯಲ್ಲಿರಲಿ
ಪ್ರಕಾರ: ಕಥಾ ಸಂಕಲನ
ಲೇಖಕಿ: ಪೂರ್ಣಿಮಾ ಭಟ್ ಸಣ್ಣಕೇರಿ
ಪ್ರಕಾಶನ: ಸಸಿ
ಪುಟ: 120
ಬೆಲೆ: 175/-
ಕಥೆ ಜಾರಿಯಲ್ಲಿರಲಿ ಒಟ್ಟು 8 ಕಥೆಗಳ ಕಥಾ ಸಂಕಲನ.
ಹೊಸ ರೀತಿಯ, ಹೊಸ ಕಥೆಗಳಿಂದ ಕೂಡಿದೆ. ಒಂದು ರೀತಿಯ ಹೊಸ ಆಯಾಮದಲ್ಲೇ ಕಥೆಗಳು ಸೃಷ್ಟಿಯಾಗಿವೆ ಅಂದರೆ ತಪ್ಪಿಲ್ಲ.
ಓದಿ ಮುಗಿದ ಮೇಲೂ ಹಲವಾರು ಪಾತ್ರಗಳು, ಸಂದರ್ಭಗಳು ಓದುಗರನ್ನು ಕಾಡದೆ ಬಿಡುವುದಿಲ್ಲ.
ನಾನು ಶೃಂಗೇರಿಯಲ್ಲಿ ಇರೋವಾಗ ಹವ್ಯಕ ಕನ್ನಡ, ಮಲೆನಾಡಿನ ಕನ್ನಡವನ್ನ ಜಾಸ್ತಿ ಕೇಳ್ತಿದ್ದೆ ಬಹುಶಃ ಅದುಕ್ಕೆ ನಂಗೆ ಇನ್ನು ಹೆಚ್ಚು ಕಥೆಗಳು ಕನೆಕ್ಟ್ ಅದ್ವು. ಹೊಸ ಓದುಗರಿಗೆ ಹವ್ಯಕ ಕನ್ನಡ ಹೆಚ್ಚು ಓದುಗರನ್ನು ಸೆಳೆಯುತ್ತೆ.
ಪೂರ್ಣಿಮಾ ಅವರು ಕಥೆಗಳನ್ನು ಪೋಣಿಸಿರುವ ರೀತಿ ಅದ್ಭುತ like very simple and easy way of story telling (which is challenging) ಅದು ಈ ಕಥಾ ಸಂಕಲನದ ಮೆರಗು.
ಕೆಲವು ಕಥೆಗಳಲ್ಲಿ ಕನ್ನಡ ಬಳಕೆ ಮಾತ್ರ ಅದ್ಭುತ.
ಉದಾ: ಗರಿಕೆಗೆ ಎಂಬ ಪದವನ್ನ ದೂರ್ವೆ ಎಂದು ಕರೆದದ್ದು, ಉತ್ತಮ ಎಂಬ ಪದವನ್ನ ಘನಂದಾರಿ ಅಂತ ಹೇಳಿದ್ದು ಒಂದೆಡೆಯಾದರೆ; ರೂಪಕಗಳು ಬಹಳ ಸೆಳೆಯಿತು, ಇನ್ನು ಹಲವು ಕಥೆಗಳಲ್ಲಿ ಕೆಲು ಸಾಲುಗಳನ್ನ ಪೋಣಿಸಿದ್ದು ಮಸ್ತ್ ಕಥೆಗಾರ್ತಿ ಎಂಬ ಭಾವನೆ ಬಂದದ್ದು ಸುಳಲ್ಲ. ಇವೆಲ್ಲಾ ಅಂಶಗಳು ಒಟ್ಟಿಗೆ ಸೇರಿ ಈ ಪುಸ್ತಕದ ಮೌಲ್ಯವನ್ನು ಹೆಚ್ಚುಮಾಡಿದೆ.
ಏನು ಕೆಲಸ ಇಲ್ಲದೆ ಸೋಮಾರಿಯಾಗಿ ಕೂತರು ಈ ಪುಸ್ತಕವನ್ನು ಓದಿ ಮುಗಿಸಬಹುದು. I mean such a refreshing stories.
ಕೆಲವು ಇಂಗ್ಲಿಷ್ ಸಂಭಾಷಣೆಯನ್ನ ಇಂಗ್ಲಿಷ್ ಅಲ್ಲೇ ಬರೆದಿದ್ದರೆ, ಹಲವು ಸಂಭಾಷಣೆಗೆ ಒಂದೆರಡು strong quotes ಹಾಕಿದ್ದರೆ ಪುಸ್ತಕ ಇನ್ನು ಚೆನ್ನಾಗಿ ಆಗುತ್ತಿತ್ತು. But still it’s a good book.
1. ಕಥೆ ಜಾರಿಯಲ್ಲಿರಲಿ - native narrative or nativity ತಂದದ್ದು ಖುಷಿ ಆಯ್ತು.
2. ಪಾಟಕಿ ಕೈಚೀಲ - ಮಂದಾರ ಸದಾ ನೆನಪಲ್ಲಿ ಉಳಿಯುತ್ತಾಳೆ
3. ಸಿನ್ನರ್ಸ್ ಅಂಡ್ ಸೋಬರ್ಸ್ - ಕಥೆಯ ವರ್ಣನೆ ಇಷ್ಟ ಆಯ್ತು
4. ಸೀಕ್ರೆಟ್ ಸ್ಯಾಂಟಾ - ಕಥೆ ಈಜಿ ಅನ್ನಿಸಿದರೂ ವಿಷ್ಯ ಸೂಕ್ಷ್ಮ
5. ಬದುಕು ಕದನದ ತೆರನೆ - ನಂಗೆ ತುಂಬ ಇಷ್ಟವಾದ ಕಥೆ
6. ಕಿವಿ ತಿರಪೇಕಾಯಿ - ಸಕತ್ ಕಥೆ ಇದು.
7. ಹತ್ತವತಾರವನು ಹೊತ್ತವಳು ನೀನು - ಅಜ್ಜಿ ಮತ್ತು ಜಾನು ಮರೆಯಲಾಗದ ಪಾತ್ರಗಳು
8. ನಿನ್ನ ಕೊಂದು ನಾನೇನು ಪಡೆಯಲಿ - ನರ್ಮದೆಯ ಪಾತ್ರ ತುಂಬ ಕಾಡಿತು.
ನನ್ನಿಷ್ಟದ ಸಾಲುಗಳು:
ಎಲ್ಲೂ ನೆಮ್ಮದಿಯಲ್ಲಿ ತಂಗಿದ್ದ, ಇನ್ನೆಲ್ಲೋ ಬವಣೆಗಳಿಂದ ಬೇಸತ್ತಿದ್ದ ಮತ್ತೆಲ್ಲೋ ವೈರಾಗ್ಯ ತಳೆದು ಕೂತಲ್ಲೇ ಹುತ್ತ ಬೆಳೆಸಿಕೊಂಡಿದ್ದು ಕಥೆಗಳನ್ನು ಅವುಗಳ ಪಾಡಿಗೆ ಬಿಟ್ಟುಬಿಡದೆ ಕರೆದು ಕರೆದು ಕಟ್ಟಿಹಾಕಿದ್ದಿದೆ, ಚಿಕ್ಕಂದಿನಿಂದಲೂ. ಸಾಕಿನ್ನು ಕಥೆಗಳನ್ನು ಕರೆದದ್ದು, ಅವುಗಳನ್ನು ಕಟ್ಟಿಹಾಕಿದ್ದು ಎಂದುಕೊಂಡಷ್ಟೂ ಇನ್ನಷ್ಟು ಅವುಗಳ ಬೆನ್ನು ಬೀಳುತ್ತೇನೆ.
ಕಥೆ ಜಾರಿಯಲ್ಲಿರಲಿ,
ಓದು ನಿರಂತರವಾಗಿರಲಿ.
ಪುಸ್ತಕವನ್ನು ಕೊಂಡು ಓದಿ.