Jump to ratings and reviews
Rate this book

The Same Village The Same Tree

Rate this book

364 pages, Paperback

Published January 1, 2022

2 people are currently reading
70 people want to read

About the author

Kota Shivarama Karanth

95 books452 followers
Kota Shivaram Karanth was a Kannada writer, social activist, environmentalist, Yakshagana artist, film maker and thinker. He was described as the "Rabindranath Tagore of Modern India who has been one of the finest novelists-activists since independence"by Ramachandra Guha. He was the third person among eight recipients of Jnanpith Award for Kannada the highest literary honour conferred by the Govt. of India.

Shivaram Karanth was born on 10 October 1902, in Kota near Udupi in the Udupi district of Karnataka to a Kannada family.He was influenced by Gandhi's principles and took part in Indian Independence movement while he was in college. He did not complete his education and went to participate in the Non-cooperation movement and canvassed for khadi and swadeshi for five years up to 1927. By that time Karanth had already started writing fiction-detective novels, to begin with as well as plays.

Karanth was an intellectual and environmentalist who tremendously contributed to art and culture of Karnataka. He is considered one of the greatest novelist in Kannada. Apart from his 47 novels, he also wrote 31 plays, four short stories, six books of essays and sketches, thirteen books on art, 2 volumes of poems, 9 encyclopedias, and 100+ of articles on various issues and subjects, including a history of world art in Kannada and a work on Chalukyan sculpture and architecture, a standard treatise on the Yakshagana (with which dramatic form, his name is identified), a three volume book of knowledge for children, a four volume encyclopedia on science for grown ups, 240 children's books, six books on travel, two books on birds, three Travelogues, an autobiography.

He has received several literary awards,.Namely, Jnanpith Award, Padma Bhushan, Sahitya Academy award and Pampa Award.

He passed away on 9th December 1997 in Manipal, Karnataka.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
3 (15%)
4 stars
12 (63%)
3 stars
3 (15%)
2 stars
1 (5%)
1 star
0 (0%)
Displaying 1 - 3 of 3 reviews
Profile Image for Prashanth Bhat.
2,122 reviews138 followers
January 22, 2021
ಅದೇ ಊರು ಅದೇ ಮರ - ಡಾ.ಕೆ.ಶಿವರಾಮ ಕಾರಂತ

ಕಾರಂತರ ಕಾದಂಬರಿಗಳ ಓದುತ್ತಾ ಬೆಳೆದವನು ನಾನು. ಅಳಿದ ಮೇಲೆ,ಮರಳಿ ಮಣ್ಣಿಗೆ,ಮೂಕಜ್ಜಿಯ ಕನಸುಗಳು,ಬೆಟ್ಟದ ಜೀವ,ಚೋಮನ ದುಡಿ ಇತ್ಯಾದಿಗಳು ಯಾವತ್ತಿಗೂ ಎಷ್ಟು ಓದಿದರೂ ಬೇಸರವಾಗದಿರುವುದು.

ಆದರೆ ಈ ಪುಸ್ತಕ ಮಾತ್ರ ಎರಡು ಸಲ ನೂರು ಪುಟ ಓದಿ ಬಿಟ್ಟೇ ಬಿಟ್ಟಿದ್ದೆ. ಈಗ ಮತ್ತೊಮ್ಮೆ ಯತ್ನಿಸುವಾಗ ಅದು ಯಾಕೆ ಎಂದು ಅರ್ಥವಾಯಿತು.

ವಾಡಿಕೆಯಂತೆ ವರ್ಷಕ್ಕೊಂದು ಕಾದಂಬರಿ ಬರೆಯುತ್ತಿದ್ದ ಕಾರಂತರು ಬಹುಶಃ ಹೇಳಿ ಬರೆಯಿಸುವುದಕ್ಕೆ ಹೊರಳಿಕೊಂಡ ಬಳಿಕ ಅವರ ಕಾದಂಬರಿಗಳಲ್ಲಿ ಆ ಖಾಸಗಿತನ, ಒಳವಿವರಗಳು ಮಾಯವಾಗಿ ಉಪದೇಶವೋ,ದಾರಿ ತಪ್ಪಿದ ವಿವರ ಗಳೂ ಎಲ್ಲಕ್ಕಿಂತ ಹೆಚ್ಚಾಗಿ ರಂಜನೆ ಕಡಿಮೆಯಾಗಿತ್ತು ಎನ್ನುವುದು ಮೇಲ್ನೋಟಕ್ಕೇ ಕಾಣಿಸಿದ ಅಂಶ‌.
ವಟಪುರ ಎಂಬ ಊರನ್ನೂ ಅಲ್ಲಿನ ಒಂದು ಮರವನ್ನೂ ಕೇಂದ್ರವಾಗಿರಿಸಿಕೊಂಡು ಬೆಳೆವ ಕಥೆ ಆ ಮರದಂತೆಯೇ ರೆಂಬೆ ಕೊಂಬೆಗಳ ಹೆಚ್ಚಿಸಿಕೊಂಡು ಸಮೃದ್ಧವಾಗುತ್ತದೆ. ಆದರೆ ಅದರಿಂದ ಏನು ಸಿಕ್ಕಿತು ಅನ್ನುವುದು ಗಟ್ಟಿಸಿ ಕೇಳಿದರೆ ಹೇಳಲಾಗುವುದಿಲ್ಲ.
ಮೊದಲ ನೂರು ಪುಟಗಳಲ್ಲಿ ಬರುವ ಮರ್ತಪ್ಪ ಪ್ರಭುಗಳು,ಅವರ ಬೇರು ,ಅವರ ವ್ಯಾಪಾರ,ವಹಿವಾಟು, ಅವರು ಕ್ಷಾಮ ಕಾಲದಲ್ಲಿ ಮಾಡಿದ ಸಹಾಯ,ರಾಮ ಭಟ್ಟರು, ಅವರ ಕೆಲಸ,ಊರವರ ಪರಸ್ಪರ ಸಂಬಂಧ ಇವೆಲ್ಲದವರ ವಿವರಣೆ ಆಸಕ್ತಿದಾಯಕವಾಗಿತ್ತು. ಆದರೆ ಅದಾದ ಬಳಿಕ ಕಥಾವಸ್ತು ಕಾಲದಲ್ಲಿ ಮುಂದೆ ಹೋಗುತ್ತದೆ ಹಾಗೂ ಬೇಸರ ಆಕಳಿಕೆ ಎರಡೂ ತರಿಸುತ್ತದೆ. ಸ್ವಾತಂತ್ರ್ಯ ಹೋರಾಟ,ನಂತರದ ರಾಜಕೀಯ, ಇತರ ಬದಲಾವಣೆಗಳು ಇವೆಲ್ಲ ತಮ್ಮ ಎಂದಿನ ಶೈಲಿಯಲ್ಲಿ ಕಾರಂತರು ಹೇಳಿದ್ದು ಸಪ್ಪೆಯೆನಿಸಿತು.

ಜೀವನದರ್ಶನದ ಸಾಲುಗಳ ವಿಷಯಕ್ಕೆ ಬಂದರೆ ಕಾರಂತರ ಮೀರಿಸುವವರಿಲ್ಲ.ಹಾಗಾಗಿಯೇ ಬಾಲ್ಯದಲ್ಲಿ ಓದುವಾಗ ಒಂದು ತೆರನಾಗಿ ಕಾಣಿಸಿದ್ದ ಅವರ ಕೃತಿಗಳು ಈಗೀಗ ನೆಮ್ಮದಿ ಕೊಡುತ್ತವೆ.
ಈ ಕೃತಿಯೂ ಮೊದಲ ನೂರು ಪುಟಗಳನ್ನು ಅದೇ ಸಾಲಿಗೆ ಸೇರಿಸಬಹುದು.ಅತಿಯಾದ ವಾಚಾಳಿತನ ಕಾದಂಬರಿಯ ಉಳಿದ ಪುಟಗಳನ್ನು ತುಂಬಿ ಸಾರವನ್ನು ಬರಿದುಮಾಡಿದೆ ಅನಿಸಿತು.

(ಸೂಚನೆ - ಶಿವರಾಮ ಕಾರಂತರ ಬರವಣಿಗೆಯ ಕುರಿತು ಮಾತಾಡಲು ನನಗೆ ಯಾವ ಅರ್ಹತೆಯೂ ಇಲ್ಲ. ಆದರೆ ಒಬ್ಬ ಓದುಗನಾಗಿ ಅವರ ಕಾದಂಬರಿಗಳ ಸ್ಪಷ್ಟವಾಗಿ ಭಾಗಗಳಾಗಿ ವಿಭಜಿಸಬಹುದು ಅಂತ ಎಷ್ಟೋ ಸಲ ಅನಿಸಿದೆ)


ಅದೇ ಊರು‌ ಅದೇ ಮರ - ಶಿವರಾಮ ಕಾರಂತ.

ಕಾರಂತರ ಈ ಕಾದಂಬರಿ ‌ನಾನು ನಾಲ್ಕು ಸಲ ಓದಲು ಯತ್ನಿಸಿ ವಿಫಲನಾಗಿದ್ದೆ.
ಇದರಲ್ಲಿ ಮೂರು ಕಾಲಘಟ್ಟದ ಚಿತ್ರಣಗಳಿವೆ.
ಮೊದಲನೆಯ ಕಾಲಘಟ್ಟದವರೆಗೆ ಅದ್ಭುತವಾದ ಚಿತ್ರಣ ಆಮೇಲೆ ಶುಷ್ಕವಾಗುವುದು ಇದಕ್ಕೆ ಕಾರಣ ಎಂದು ನಂಬಿದ್ದೆ. ಸರಿಯಾಗಿ ನೂರು ಪುಟಗಳ ಮೇಲೆ‌ ಮುಂದುವರೆಯಲೇ ಆಗಿರಲಿಲ್ಲ.
ಆದರೆ ಇದಕ್ಕೆ ಕೃತಿ ಕಾರಣವಲ್ಲ ಎಂದೂ ನನ್ನ ಅನುಭವ ರಾಹಿತ್ಯ ಕಾರಣ ಎಂದು ಈಗ ತಿಳಿದುಬಂತು.
ಇವತ್ತು ಕೂತು‌ ಸಾವಧಾನವಾಗಿ ಇಡಿಯ ಕಾದಂಬರಿ ಓದುತ್ತಾ ಹೋದೆ.
ಕಾರಂತರ ಪುಸ್ತಕಗಳಲ್ಲಿ ಆಮೇಲಿನ ಕಾದಂಬರಿಗಳು ಕಾದಂಬರಿಯ ಖಾಸಗಿತನ ಬಿಟ್ಟು ಉಪನ್ಯಾಸಗಳಂತೆ ಭಾಸವಾದರೂ ಅದರಲ್ಲಿ ಅಡಗಿದ ಜೀವನದ ಸತ್ಯಗಳ ಅರಿಯಲು‌ ಬದುಕು ಅರಿವಾಗಬೇಕು.
ಅದು ಈಗ ಮರು ಓದಿಗೆ ಗೊತ್ತಾಯಿತು.
This entire review has been hidden because of spoilers.
Profile Image for ಸುಶಾಂತ ಕುರಂದವಾಡ.
404 reviews24 followers
October 12, 2021
ಒಂದು ಹಳ್ಳಿಯಲ್ಲಿಯ ಮೂರು ಹಲವು ತಲೆಮಾರುಗಳ ಕಥೆ. ಪ್ರತಿ ತಲೆಮಾರುಗಳಲ್ಲಿ ಹೇಗೆ ಆ ಹಳ್ಳಿ ರೂಪಗೊಂಡಿತು, ಹೇಗೆ ಅದರ ಚಿತ್ರಣ ಬೇರೆಗೊಂಡಿತು ಇದು ಈ ಪುಸ್ತಕದ ಮೇಲುನೋಟ. ಹಾಗೆ ಅಲ್ಲಿ ಉದ್ಭವಿಸುವ ರಾಜಕೀಯ, ಜಾತಿಗಳ ನಡುವಿನ ತಿಕ್ಕಾಟಗಳು ಇಲ್ಲಿ ಕಾಣಬಹುದು.
Profile Image for Amogha Udupa.
14 reviews16 followers
January 24, 2019
The author, like in Mookajjiya Kanasugalu goes meta about the book in the first few pages. According to him, though the title says the book is about a tree or a village, it's more about the people, their culture, social and economic conditions that evolved with time. For a few pages he goes on about his choice for the name of his village which felt unnecessary. He starts off from the age of early British rule till few decades after independence. In this course he picks up characters from the village who spent time at the big Banyan tree of the village and tries to tell their story. A weak attempt is made to connect these characters across generations. Though the book does not explore the human element of all the times, it does tell about the social structure of the village and the evolution of the tree with time, acting as a metaphor for the village people. A decent read for people who have some idea about Canara region.
Displaying 1 - 3 of 3 reviews

Can't find what you're looking for?

Get help and learn more about the design.