Jump to ratings and reviews
Rate this book

Aghorigala Naduve | ಅಘೋರಿಗಳ ನಡುವೆ

Rate this book
ಅಘೋರಿಗಳು ಸಾಮಾಜಿಕರಲ್ಲ. ತಮ್ಮದೇ ಜೀವನದರ್ಶನ ರೂಪಿಸಿಕೊಂಡು ಈ ಜನ ಭಾರತದ ಎಲ್ಲ ಭಾಗದಲ್ಲಿಯೂ ಇದ್ದಾರೆ. ಅತಿ ಕಷ್ಟದ ಬದುಕನ್ನು ಸ್ವೀಕರಿಸಿದ ಇವರು ಕಾಡುಜನರಲ್ಲ. ನಾಗರಿಕ ಬದುಕು ಬೇಕೆನಿಸುವ ಇವರು 'ಜೀವಿಸುವ ಕ್ರಿಯೆ' ಮೈ ಚಳಿ ಹುಟ್ಟಿಸುತ್ತದೆ. ಇವರಿಗೆ ಬದುಕಷ್ಟೇ ಮುಖ್ಯ. ಅಘೋರಿಗಳ ನಡವಳಿಕೆ ಸಾಮಾಜಿಕರಿಗೆ ಹೇಸಿಗೆಯನ್ನುಂಟು ಮಾಡುವುದರಿಂದ ಇವರನ್ನು ಸಾರ್ವಜನಿಕ ಸಮುದಾಯಗಳಲ್ಲಿ ಕಾಣಲಾಗುತ್ತಿಲ್ಲ.
ಶ್ರೀ ಸೋಮಪುರ ಇಂಥ ಕೆಲವರನ್ನು ಭೇಟಿ ಮಾಡಿ ಇವರ ದಿನನಿತ್ಯದ ನಡವಳಿಕೆಯನ್ನು ಕಣ್ಣಾರೆ ಕಂಡು ತಮ್ಮದೇ ಆಕರ್ಷಕ ಶೈಲಿಯಲ್ಲಿ ನಿರೂಪಿಸಿ ಓದುಗರನ್ನು ಆಶ್ಚರ್ಯಪಡಿಸಿದ್ದಾರೆ.

190 pages, Paperback

First published January 1, 1978

43 people are currently reading
491 people want to read

About the author

Suresh Sompura

15 books28 followers

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
55 (39%)
4 stars
45 (31%)
3 stars
25 (17%)
2 stars
7 (4%)
1 star
9 (6%)
Displaying 1 - 15 of 15 reviews
Profile Image for mahesh.
271 reviews26 followers
October 28, 2021
I have tried so hard to love this book, But author constant need to prove his ideology and egoistical confrontation with "Agorah's" made it boring and uninteresting. Picked this book last week in my visit to Sapna book House, Intention was to understand life of Agora's since their way of living always surprised me. But book was a great disappointment to meet my expectations, It felt like journalists hell bent conviction to prove his point in news debate.

This book is not really about Agora's way of life, Its an confrontation of fixed idea against another idea. I wish book more focused on Agora's life than being author prejudice and inherent need to prove them wrong.

if you like philosophical confrontation, you might like this book. But reading this book to understand the way of agora's life is pure waste.

Profile Image for Abhi.
89 reviews20 followers
March 3, 2021
||• ಅಘೋರಿಗಳ ನಡುವೆ •||

ಮಾನವ ಸಂಕುಲದಲ್ಲಿ ಪ್ರಾಯಶಃ ಉತ್ತರ ಸಿಗಲಾರದ‌ ಪ್ರಶ್ನೆ ಆತ್ಮ ಮತ್ತು ಅತಿ ಮಾನುಷ ಶಕ್ತಿಗಳೆಡೆಯದ್ದು. ನಮ್ಮ ಕನ್ನಡದವರೇ ಆದ ಹುಲಿಕಲ್ ನಟರಾಜ್ ಅವರು ಅತಿಮಾನುಷ ಶಕ್ತಿಯೆಂದೇ ವರ್ಗೀಕೃತಗೊಂಡ ಎಷ್ಟೋ ಕಣ್ಕಟ್ಟು ವಿದ್ಯೆಗಳನ್ನು ಬಯಲಿಗೆಳೆಯುತ್ತಾ ಹೋದಂತೆ ಆಸಕ್ತಿ ಹೆಚ್ಚಾಗುತ್ತಾ ಹೋಗಿತ್ತು. ಅದೇ ಸಮಯದಲ್ಲಿ ಸಿಕ್ಕ ಪುಸ್ತಕ ಮಾಟಗಾತಿ. ಮಾಟಗಾತಿ ಕಾದಂಬರಿಯಲ್ಲಿ ಅಘೋರ ಜೀವನ ಮೊದಲ‌ ಪರಿಚಯವಾಗಿತ್ತು. ಹೃದಯವೆಲ್ಲಾ ಭಯದಿಂದ ದ್ರವಿಸುವಂತಹ ಘೋರ ಸಿದ್ಧಿಗಳು, ಸಾಧನೆಗಳ ಕುರಿತು ಆ ಪುಸ್ತಕದಲ್ಲಿ ಪರಿಚಯಿಸಲಾಗಿತ್ತು. ಅದೆಲ್ಲವೂ ನಿಜವೇ ಎಂಬ ವಿಲಕ್ಷಣ ಸೆಳೆತವಿದ್ದಾಗ ಕೈಗೆ ಸಿಕ್ಕಿದ್ದು - ಅಘೋರಿಗಳ ನಡುವೆ.

ಸುಮಾರು ೪೩ ವರ್ಷಗಳ ಹಿಂದೆ ಗುಜರಾತಿ ಭಾಷೆಯಲ್ಲಿ ಪ್ರಕಟವಾದ "ಅಘೋರಿಯೋ ಸಾಥೆ ಪಾಂಚ್ ದಿವಸ್" ಎಂಬ ಪುಸ್ತಕದ ಕನ್ನಡದ ಅನುವಾದ "ಅಘೋರಿಗಳ ನಡುವೆ" ಪುಸ್ತಕ. ಅನುವಾದಿತವಾದರೂ ಸ್ವಂತ ಕೃತಿಯೇ ಎನ್ನುವಷ್ಟು ಪರಿಣಾಮಕಾರಿಯಾಗಿದೆ.

ಪುಸ್ತಕದ ವೃತ್ತಾಂತ:

ಗೆಳೆಯನೊಬ್ಬನಿಗಾಗಿ ಅಘೋರಿಗಳ ಮೂಲವನ್ನು ಹುಡುಕುತ್ತಾ ಹೋಗುವ‌ ಲೇಖಕರಿಗೆ ಅವರ ಸಾಧನಾ ಶಿಬಿರ ನಡೆಯುವುದು ತಿಳಿಯುತ್ತದೆ. ತಮ್ಮ ಕಾಂಟ್ಯಾಕ್‌ಗಳನ್ನು ಬಳಸಿಕೊಂಡು ಅವರ ಚಲನ ವಲನಗಳನ್ನು ಗಮನಿಸಿ ಅದರ ಅನುಭವಗಳನ್ನು ಪ್ರಾಮಾಣಿಕವಾಗಿ ಬರೆಯಲಾಗಿದೆ.

ಲೇಖಕರು ಕಲ್ಪನಾಯೋಗಿಗಳಾಗಿರುವುದರಿಂದ ಆತ್ಮ ಮತ್ತು ಅತಿಮಾನುಷ ಶಕ್ತಿಗಳೆಡೆಗಿನ ಅವರ ನಿಲುವುಗಳು ಓದುಗರನ್ನು ತರ್ಕಶೀಲವಾಗಿಸುತ್ತವೆ. ಅಷ್ಟೇ ಅಲ್ಲದೇ ಪ್ರತಿಯೊಂದಕ್ಕೂ ವೈಜ್ಞಾನಿಕ ವಿವರಣೆ‌ ಕೊಡುತ್ತಾ ನಾವು ಕೇಳಿದ್ದ ಅಥವಾ ನೋಡಿದ್ದ ಆತ್ಮ ಪರಮಾತ್ಮದ ನಂಬಿಕೆಗಳನ್ನು ಈ ಪುಸ್ತಕ ಬುಡಮೇಲು ಮಾಡುತ್ತದೆ. ಒಂದು ಹಂತದಲ್ಲಿ ಲೇಖಕರು ವಾದವೂ ಕೂಡ ಸರಿ ಎನಿಸುತ್ತದೆ. ಆತ್ಮವೆಂಬುದು‌ ಇದೆಯಾ? ಗೊತ್ತಿಲ್ಲ!!! ಚೈತನ್ಯವಂತೂ ಇದೆ. ಅದುವೇ ಸತ್ಯ, ಸತ್ಯವೇ ಸನಾತನ ಎಂಬ ಸಿದ್ಧಾಂತಗಳನ್ನು ಮಂಡಿಸುತ್ತಾ ಮೈ ಮುಳ್ಳಾಗುವ ಅನುಭವವನ್ನು ಪುಸ್ತಕ ನೀಡಿತು.

ಅಷ್ಟಲ್ಲದೇ, ಅಘೋರಿಗಳ ‌ಹಠ ಸಾಧನೆ, ಖೇಚರಿ‌ ವಿದ್ಯೆ, ಪೂತಲಿಕಾ‌ ಪ್ರಯೋಗ, ಆತ್ಮ ಆವಾಹನೆಗಳ ಕುರಿತಾದ‌ ವಿಷಯಗಳು ಕೂಡ ಮೈ ನವಿರೇಳಿಸುತ್ತವೆ. ಆತ್ಮ ಪರಮಾತ್ಮ ಚಂದ್ರಲೋಕ ಎಂಬ ಎಷ್ಟೋ ವಾದಗಳಲ್ಲಿ ಹುರುಳಿಲ್ಲವೇನೋ ಎನಿಸಿ ಕಲ್ಪನಾ ಯೋಗದ "ಕಣ್ಣಿಗೆ‌ ಕಾಣಿಸುವುದಷ್ಟೆ ಸತ್ಯ" ಎಂಬುದನ್ನು ‌ಪ್ರತಿಪಾದಿಸಬೇಕು ಎಂದನಿಸಿಬಿಟ್ಟದ್ದು ಸುಳ್ಳಲ್ಲ!!!

ಆತ್ಮ, ಪರಮಾತ್ಮ, ಜಡ, ಜೀವ, ಚೇತನ ಎಂಬ ಹಲವಾರು ಪ್ರಶ್ನೆಗಳನ್ನು‌ ಭುಗಿಲೇಳುವಂತೆ ಮಾಡಿದ ಪುಸ್ತಕವನ್ನು‌ ಕನ್ನಡೀಕರಿಸಿದ್ದಕ್ಕೆ ನಾಗರಾಜರಾಯರಿಗೂ ಧನ್ಯವಾದಗಳು!!

ನೂರಾ ಎಂಭತ್ನಾಲ್ಕು ಪುಟಗಳ ರೋಮಾಂಚಕಾರಿ ಅನುಭವಕ್ಕಾಗಿ ಈ‌ ಪುಸ್ತಕ ಓದಿ. ಸುರೇಶ್ ಸೋಮಪುರ ಅವರು ಗೆಳೆಯನಿಗಾಗಿ ಅಘೋರಿಗಳ ಸಂಘ ಮಾಡಿದ್ದಾದರೂ ಏಕೆ ಎಂಬ ಕುತೂಹಲವೇನಾದರೂ‌ ಮೂಡಿದರೆ ಉತ್ತರ ಪುಸ್ತಕದಲ್ಲಿದೆ.

ಶುಭವಾಗಲಿ...

ಅಭಿ...
Profile Image for Vidya Ramakrishna.
267 reviews18 followers
July 25, 2023
A good and quick read. Gives a short glimpse of aghora life and a good contemplation of Satya - Asatya, existence of atma, astitva, ಅಹಂಕಾರ, ಆತ್ಮ ಪ್ರತಿಷ್ಠೆ, fear of the unknown, fear of the death, after life etc. It also demonstrates the power of the controlled and uncontrolled minds.
Profile Image for Pradip Sevak.
1 review
July 17, 2019
Absolutely Awesome book . I'm a jugé fan of late shree Suresh bhai Sompura Ji. I was Lucky To see him personally....ones. 💐🍀🌷
Great Author...core Knowledge of our existence.
Profile Image for Karthik.
61 reviews19 followers
September 1, 2021
ಅಘೋರಿಗಳದ್ದು ಒಂದು ನಿಗೂಢ ಲೋಕ, ಅವರ ಜೀವನ ಶೈಲಿ ಇಂದಿಗೂ ಸೋಜಿಗವೇ. ಅಂತಹ ಸಾಧಕರ ನಡುವೆ 5 ದಿನಗಳ ಕಳೆಯುವುದನ್ನು ಎಂದಾದರೂ ಯೋಚಿಸಿದ್ದೀರಾ ? ಗುಜರಾತಿ ಭಾಷೆಯಲ್ಲಿ ಸುರೇಶ್ ಸೋಮಪುರ ಅವರು ಬರೆದಿರುವ ಪುಸ್ತಕವನ್ನು ಎಂ ವಿ ನಾಗರಾಜ ರಾಯರು ಕನ್ನಡಕ್ಕೆ ಅನುವಾದಿಸಿ ಈ ರೋಚಕ ಅನುಭವವನ್ನು ನಮ್ಮ ಮುಂದಿಟ್ಟಿದ್ದಾರೆ. ಪುಸ್ತಕದ ಹೆಸರು ‘ಅಘೋರಿಗಳ ನಡುವೆ’

ತಂತ್ರ ಮಂತ್ರದ ವೈಜ್ಞಾನಿಕ ಹಾಗೂ ಮನೋ ವೈಜ್ಞಾನಿಕ ಸತ್ಯದ ಅನ್ವೇಷಣೆ ಮಾಡಲು ಲೇಖಕರು (ಸುರೇಶ್ ಸೋಮಪುರ) ಅಘೋರಿಗಳನ್ನು ಭೇಟಿ ಮಾಡುತ್ತಾರೆ.
ಅಘೋರಿಗಳಿಗೆ ಅವರ ಜೀವನದ ಅವರ ಸಿದ್ದಿಗಳ ವ್ಯರ್ಥತೆ ಗಳನ್ನು ಮನದಟ್ಟು ಮಾಡಿಕೊಟ್ಟು ಗೆಳೆಯನ ಸಾವಿಗೆ ಪ್ರತೀಕಾರ ತೆಗೆದುಕೊಳ್ಳುವುದು ಕೂಡ ಅವರ ಗುರಿಯಾಗಿರುವುದು ಅವರ ಸ್ಥೈರ್ಯಕ್ಕೆ ಸಾಕ್ಷಿ.

ದಟ್ಟ ಕಾಡಿನ ಮಧ್ಯೆ ನಡೆಯಲಿದ್ದ ಅಘೋರಿಗಳ ಸಮಾವೇಶಕ್ಕೆ ಪ್ರವೇಶ ಸಿಕ್ಕು, ಅಲ್ಲಿ ಲೇಖಕರು ಕಳೆದ ೫ ದಿನಗಳು ಅಘೋರಿಗಳ ಬದುಕಿನ ಸಿದ್ಧಾಂತದ ವಿಸ್ಕೃತ ಪರಿಚಯ ಮಾಡಿಸುತ್ತದೆ. ಅಘೋರಿಗಳು ತೋರಿಸುವ ಕೆಲ ಚಮತ್ಕಾರದ ಹಿಂದಿನ ಮರ್ಮವನ್ನು ಲೇಖಕರು ಎಳೆ ಎಳೆಯಾಗಿ ಬಿಚ್ಚಿಟ್ಟು ಕೆಲ ಅಘೋರಿಗಳು ತಮ್ಮ ಅಹಂನ್ನು ಬಿಟ್ಟು ದೇಹತ್ಯಾಗ ಮಾಡಿದ್ದು ವಿಪರ್ಯಾಸ.

ವಾಮದೇವರು ಎಂಬ ಅಘೋರಿ ನಿರ್ಜೀವ ಹುಡುಗಿಯ ದೇಹವ ಪ್ರವೇಶಿಸಿದ್ದು, ಅಲಖ ಅನಂದರು ಬೊಂಬೆಯ ಮೇಲೆ ಜಗಜಿತ್ ನ ಆತ್ಮ ಬರುವಂತೆ ಮಾಡಿ ಮಾತನಾಡಿಸಿದ್ದು,ನಂತರ ಅದನ್ನು ಸುಳ್ಳು ಏನು ಲೇಖಕರು ಸಾಬೀತು ಮಾಡಿದ್ದು, ವಿತಥ ನಾಥರ ‘ಖೇಚರಿ ಪ್ರಯೋಗ’ ಹೀಗೆ ಹಲವು ಪ್ರಸಂಗಗಳು ಅಚ್ಚರಿ ಮೂಡಿಸುತ್ತದೆ.

ಅಲಖ್ ಆನಂದ್ ರಿಂದ ಹಿಡಿದು ಬಾಬಾ ವಿತಥನಾಥ ರ ವರೆಗೆ ನಡೆಸಿದ ಮುಕ್ತ ಮನಸಿನ ಚರ್ಚೆಗಳು ತಾತ್ವಿಕ ನೆಲೆಗಟ್ಟಿನಲ್ಲಿ ಅಘೋರ ಪಂಥದ ಬಗೆಗಿದ್ದ ಕೆಲ ಪೂರ್ವ ಕಲ್ಪನೆಗಳನ್ನು ಮತ್ತೆ ಒರೆಗೆ ಹಚ್ಚುವಂತೆ ಮಾಡಿತು.

182 ಪುಟಗಳ ಈ ಕಾದಂಬರಿಯಲ್ಲಿ ಅಘೋರ ವಿಚಾರಗಳನ್ನು ಹುದುಗಿಟ್ಟು, ಲೇಖಕರ ವಿಚಾರಗಳ ಆಧಾರದ ಮೇಲೆ ವಾಮ ಪಂಥವನ್ನು ತುಲನೆ ಮಾಡಿ ಓದುಗರಿಗೆ ಸಮರ್ಪಿಸಲಾಗಿದೆ.

ಆಸಕ್ತರು ಓದಿಕೊಳ್ಳುವುದು 😌

ಪುಸ್ತಕ : ಅಘೋರಿಗಳ ನಡುವೆ
ಲೇಖಕರು : ಸುರೇಶ್ ಸೋಮಪುರ ( ಕನ್ನಡಕ್ಕೆ : ಎಂ ವಿ ನಾಗರಾಜರಾವ್)
ಪುಟ : 182
ಪ್ರಕಾಶನ : ಅಂಕಿತ ಪುಸ್ತಕ


- ಕಾರ್ತಿಕ್ ಕೃಷ್ಣ
Profile Image for Manasa HR.
135 reviews5 followers
May 15, 2018
This is the story of the author himself. He has captured his personal experience in a stunning, fearful manner. The story is violent and yet true story.

Is this happening in 21st century? We will be shocked to hear it's true....
The blind beliefs and weird process followed by Aghoris'.

"Aghori" the name itself is so scary and violent. This is truly a magical yet shocking experience for the author no doubt.

Overall, it is worth the read.
Profile Image for Fifa.
75 reviews1 follower
December 6, 2018
Loved the authors philosophy...kalpana yoga...the search for the truth which is ever transient...accept truth & only truth...the author doesnt believe in past lives or rebirth or souls...theres stuff about thoughtograpgy & ouijaboard...to know more get yourself this book & its worth the money u spend on it...its a relatively cheap book...but very engrossing book...
Profile Image for Pradeepvn Cta.
3 reviews
April 20, 2019
Amazing book
This entire review has been hidden because of spoilers.
Profile Image for Shreenidhi R.
67 reviews2 followers
January 20, 2025
I loved this book very much, I got to know about Aghoris rituals , author's experience staying there and mindset of Aghoris their mind power, totally I loved this book
Profile Image for vrishakapi.
1 review2 followers
December 14, 2025
ನಾನು ಬಹಳ ದಿನಗಳ ನಂತರ, ಕೊನೆಗೂ ಈ ಪುಸ್ತಕವನ್ನು ಓದಿ ಮುಗಿಸಿದೆ. ಇದು ನೇರವಾಗಿ ಅಘೋರಿಗಳ ಕುರಿತಾದ ಕೃತಿಯಲ್ಲದಿದ್ದರೂ, ಲೇಖಕರು ಅವರೊಂದಿಗೆ ಕಳೆದ ನಾಲ್ಕರಿಂದ ಐದು ದಿನಗಳ ವೈಯಕ್ತಿಕ ಅನುಭವವನ್ನು ವಿವರಿಸುತ್ತಾರೆ . ವೈಯಕ್ತಿಕವಾಗಿ ಹೇಳುವುದಾದರೆ, ಈ ನಿರೂಪಣೆಯು ಕಾಲ್ಪನಿಕ ಕಥೆ ಅಗಿದ್ದು ಸತ್ಯಕ್ಕೆ ದೂರ ಆಗಿದೆಯೆಂದನಿಸುತ್ತದೆ (ನನ್ನ ಅನಿಸಿಕೆ ಮಾತ್ರ )
ಲೇಖಕರ ಪ್ರಕಾರ, ಅವರು ಒಂದು ದೂರದ ಕಾಡಿನಲ್ಲಿ ನಡೆದ ಅಘೋರ ಆಚರಣೆಗಳಿಗೆ ಭೇಟಿ ನೀಡುವ ಮತ್ತು ಅಲ್ಲಿನ ಸಾಧಕರೊಂದಿಗೆ ಸಂವಾದ ನಡೆಸುವ ಅವಕಾಶವನ್ನು ಪಡೆದಿದ್ದರು. ಇದರಲ್ಲಿ ಲೇಖಕರು ಕೆಲವು ನಿರ್ದಿಷ್ಟ ಸಿದ್ಧಾಂತಗಳನ್ನು ಹೊಂದಿದ್ದು, ಅದನ್ನು ಅವರು ಅಘೋರಿಗಳ ಮುಂದೆ ಮಂಡಿಸಿದರು. ಅತ್ಯಂತ ಗಮನಾರ್ಹವಾಗಿ, ಒಬ್ಬ ಅಘೋರಿ ತನ್ನ ಆಚರಣೆಯು "ಬದುಕಲು ಯೋಗ್ಯವಲ್ಲ" ಎಂದು ಮನಗಂಡು ಆತ್ಮಹತ್ಯೆ ಮಾಡಿಕೊಂಡನು. ಈ ಘಟನೆಯ ಮೇಲೆ ತನ್ನ ಪ್ರಭಾವವೇನೂ ಇಲ್ಲ ಎಂದು ಲೇಖಕರು ಖಚಿತವಾಗಿ ನಿರಾಕರಿಸುತ್ತಾರೆ.
ಈ ಪುಸ್ತಕವನ್ನು ಮೂರು ಮುಖ್ಯ ಭಾಗಗಳಾಗಿ ವಿಂಗಡಿಸುವುದಾದರೆ, ಅವು ಹೀಗಿವೆ:
ಅವರ ಸ್ನೇಹಿತ ಜಗಜ್ಜಿತ್ ಸಿಂಗ್ ಅವರ ಕಥೆ.
ಅಘೋರಿಗಳ ಆಚರಣೆಗಳು.
ಲೇಖಕರ ತತ್ವಶಾಸ್ತ್ರ.
ಕೊನೆಯಲ್ಲಿ ಹೇಳುವುದಾದರೆ, ಈ ಪುಸ್ತಕವು ಚೆನ್ನಾಗಿ ದಾಖಲಿಸಲಾದ ಸತ್ಯಾಂಶಗಳ ಕೃತಿಯಾಗಿರುವುದಕ್ಕಿಂತ ಹೆಚ್ಚಾಗಿ, ಲೇಖಕರ ವೈಯಕ್ತಿಕ ಅನುಭವದ ನಿರೂಪಣೆಯಾಗಿ ಕಾರ್ಯನಿರ್ವಹಿಸುತ್ತದೆ.

ಇಷ್ಟೆಲ್ಲ ಇದ್ದರೂ, ಒಂದು ಸಲ ಮಾತ್ರ ಓದಲೇ ಬೇಕಾದ ಪುಸ್ತಕ !
Profile Image for Pragna Sompura.
2 reviews1 follower
August 1, 2019
Best book of Gujarati, hv been translated in Hindi, Marathi, Kannad n malayalam.
Displaying 1 - 15 of 15 reviews

Can't find what you're looking for?

Get help and learn more about the design.