Jump to ratings and reviews
Rate this book

Huliyoorina Sarahaddu

Rate this book
ಹುಲಿಯೂರಿನ ಸರಹದ್ದು ಸ್ವರೂಪ ನಿಗೂಢ ಮನುಷ್ಯರು : ಕಥಾ ಸಂಕಲನ /
ಕೆ. ಪಿ. ಪೂರ್ಣಚಂದ್ರ ತೇಜಸ್ವಿ.
Stories

Linga banda -- Panjrolli pisaciya savalu -- Gudugu heliddenu -- Urvasi -- Huliyurina sarahaddu -- Gandhiji Deseyinda -- Svarupa -- Nigudha manusyaru.

Paperback

40 people are currently reading
519 people want to read

About the author

K.P. Poornachandra Tejaswi

58 books1,100 followers
K.P. Purnachandra Tejaswi was a prominent Kannada writer, novelist, photographer, ornithologist, publisher, painter and environmentalist. He made a great impression in the "Navya" period of Kannada literature and and inaugurated the bandaya sahitya.

Tejaswi was born on September 8, 1938. His father is the famous poet, Rashtrakavi Kuvempu. He completed his education in Mysore. Tejaswi has written in almost all forms of literature including poems, short stories, novels, travel literature, plays and science fiction. He has translated several English books to Kannada. His famous translations include the series on Kenneth Anderson's hunting expeditions and Henri Charrière's Papillon.

He has won several awards for his contribution to literature such as the Rajyotsava and Kannada Sahitya Academy awards.

Poornachandra Tejaswi died of cardiac arrest at the age of 69

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
92 (36%)
4 stars
106 (42%)
3 stars
42 (16%)
2 stars
6 (2%)
1 star
6 (2%)
Displaying 1 - 22 of 22 reviews
Profile Image for Chethan.
13 reviews2 followers
January 11, 2021
ಪುಚಂತೆಯವರು ಬರೆದಿರುವ ಈ ಪುಸ್ತಕವನ್ನ ನಾನು ೨೦೨೧ನೆಯ ಮೊದಲ ಪುಸ್ತಕವಾಗಿ ಓದಿದೆ. ಓದಲು ಆರಂಭಿಸುತ್ತಿದ್ದಂತೆಯೇ ಮನಸ್ಸಿಗೆ ಮುಟ್ಟಿದ್ದು ಮಲೆನಾಡಿನ ಅದ್ಭುತವಾದ ಆ ಸೌಂದರ್ಯದ ವರ್ಣನೆ.
ಕೇವಲ ಎರಡು ಬೆಟ್ಟದ ನಡುವೆಯ ದಾರಿಯಾಗಿರಲಿ ಅಥವಾ ಮಳೆ ಸುರಿಯುವ ಒಂದು ಸನ್ನಿವೇಶನವನ್ನಾಗಲಿ ಒಂದೆರಡು ವಾಕ್ಯಗಳಿಗೆ ಸೀಮಿತ ಪಡಿಸದೆ ಒಂದು ಸಂಪೂರ್ಣ ಪ್ಯರಾಗ್ರಾಫ್ ಉದ್ದ ವಿಶೇಲ್ಷಿಸುವಂಥ ಚಾತುರ್ಯ ಹಾಗು ಸೃಜನಶೀಲತೆ ಲೇಖಕರದ್ದು.

6 ಸಣ್ಣ ಕಥೆಗಳು ಹಾಗು ಎರಡು ಕಿರು ಕಾದಂಬರಿಗಳನ್ನುಳ್ಳ ಈ ಪುಸ್ತಕದಲ್ಲಿ ನನಗೆ 'ಸ್ವರೂಪ' ಎಂಬ ಒಂದೇ ಒಂದು ಕಿರು ಕಾದಂಬರಿ ಹಿಡಿಸಲಿಲ್ಲ. ಕಥೆ ಹೇಗೋ ತಿರುಗುತ್ತದೆ, ಯಾವುದೋ ರೀತಿಯ ಸಂಭಾಷಣೆಗಳು ಮೂಡಿ ಬರುತ್ತವೆ. ಒಟ್ಟಾರೆ, ಮುಂದುವರೆಸಬೇಕೆನ್ನುವ ಯಾವುದೇ ಹಂಬಲ ಬರಲಿಲ್ಲ. ಅದಕ್ಕೆ ಸಹಾಯ ಮಾಡುವಂತೆ ನಾನು ಓದುತ್ತಿರುವ ಪುಸ್ತಕದ ಪ್ರತಿಯಲ್ಲಿ ಹಲವಾರು ಪುಟಗಳು ಮುದ್ರಣವಿಲ್ಲದೆ ಖಾಲಿಯಾಗಿ ಇವೆ. ಹಾಗಾಗಿ ಆ ಒಂದು ಕಥೆಯನ್ನು ಬಿಟ್ಟು ಮಿಕ್ಕ ಎಲ್ಲ ಕಥೆಗಳನ್ನು ಓದಿ ಮುಗಿಸಿದೆ.

ಆ ಕಥೆಗಳ ಮೇಲಿನ ನನ್ನ ಕಿರು ಅಭಿಪ್ರಾಯ ಈ ರೀತಿ ಇದೆ
೧. ಲಿಂಗ ಬಂದ - ಮಳೆ ಸುರಿಯುತ್ತ, ಕತ್ತಲಲ್ಲಿ ಕುಳಿತು ಮೂಢನಂಬಿಕೆಯ ಕತೆಯೊಂದನ್ನು ನೆನಸಿಕೊಂಡು ಹೆದರಿಕೊಳ್ಳುವ ಮಕ್ಕಳ ಕಥೆ.

೨. ಪಂಜ್ರೊಳ್ಳಿ ಪಿಶಾಚಿಯ ಸವಾಲು - ಕಾಫಿ ಆಸೆ ಪಟ್ಟು ಮನೆಗೆ ಹೊಕ್ಕಿ ಹಾಲು ಹಾಗು ಡಿಕಾಕ್ಷನ್ ಕದ್ದು, ಕಾಫಿ ಮಾಡಿ ಕುಡಿದು ಪಶ್ಚಾತಾಪ ಪಟ್ಟಿಕೊಂಡ ವ್ಯಕ್ತಿಯ ಮೇಲಿನ ಒಂದು ಹಾಸ್ಯದ ಕಥೆ.

೩. ಗುಡುಗು ಹೇಳಿದ್ದೇನು - ದುಡ್ಡಿನ ದುರಾಸೆಯಿಂದ ಸ್ವಂತ ಅಜ್ಜಿಯನ್ನೇ ಕೊಂದು ಕಷ್ಟಕ್ಕೆ ಸಿಲುಕಿಕೊಂಡ ಎರಡು ಮೊಮ್ಮಕ್ಕಳು ಕಲಿತ ಪಾಠದ ಕಥೆ.

೪. ಉರ್ವಶಿ - ತನ್ನನ್ನು ತಿರಸ್ಕಿರಿಸಿದ ಒಂದು ಹೆಣ್ಣಿನ ಬಗ್ಗೆ ಯೋಚಿಸುತ್ತ ಅವಳಿಗೆ ಮನಸ್ಸಿನಲ್ಲೇ ಶಪಿಸುತ್ತಿದಾಗ ನಾಯಿಯೊಂದು ತನಿಗೆ ಕಚ್ಚಿ ತಾನು ಸಾಯುತ್ತೇನೆ ಎಂದು ವಿಪರೀತ ಆತಂಕಕ್ಕೆ ಒಳಗಾದ ಒಬ್ಬನ ವ್ಯಥೆಯ ಕಥೆ.

೫. ಹುಲಿಯೂರಿನ ಸರಹದ್ದು - ಗರುಡ ಪಕ್ಷಿಯನ್ನೇ ದೇವರೇನ್ದು ನಂಬಿ ಆ ಪಕ್ಷಿಯನ್ನೇ ಕಚ್ಚಿ ಕೊಂದ ಒಬ್ಬ ಹುಡುಗನ ಕತೆ.

೬. ಗಾಂಧೀಜಿ ದೆಸೆಯಿಂದ - ಗಾಂಧೀಜಿಯವರಂತೆ ಸತ್ಯವನ್ನೇ ನುಡಿಯಬೇಕು ಎಂದು ಮನದಟ್ಟು ಮಾಡಿಕೊಂಡು ತಂದೆಯ ಕಯ್ಯಲ್ಲಿ ಏಟು ತಿಂದ ಒಬ್ಬ ಪುಟ್ಟ ಹುಡುಗನ ಕಥೆ.

೭. ಸ್ವರೂಪ - ಈ ಕಥೆ ನನಿಗೆ ಹಿಡಿಸಲಿಲ್ಲ. ಮೇಲೆ ತಿಳಿಸಿರುವಂತೆ ಈ ಕಥೆಯನ್ನ ಪೂರ್ತಿ ಓದಲೂ ಇಲ್ಲ.

೮. ನಿಗೂಢ ಮನುಷ್ಯರು - ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಂದು ನಿಗೂಢ ಇರುತ್ತದೆ ಎಂದು ತೋರಿಸಿಕೊಟ್ಟ ಕುತೂಹಲಕರವಾದ ಕಾದಂಬರಿ. ಆದರೆ ಇದರ ಅಂತ್ಯ ಅಷ್ಟಾಗಿ ಹಿಡಿಸಲಿಲ್ಲ. ಕಥೆಯ ಆರಂಭ ಹಾಗು ಅದರ ಬೆಳವಣಿಗೆಯಲ್ಲಿ ಬಂದಂತಹ ತವಕ, ಆಸಕ್ತಿ ಎಲ್ಲಾ ಕೊನೆಯಲ್ಲಿ ಸ್ವಲ್ಪ ಉಡುಗಿಹೋಯಿತು. ಆ ಕುತೂಹಲಕ್ಕೆ ತಕ್ಕ ಅಂತ್ಯ ಕಂಡು ಬಂದಿದ್ದಲ್ಲಿ ಈ ಪುಸ್ತಕಕ್ಕೆ 4 / 5 ರೇಟಿಂಗ್ ಕೊಟ್ಟಿರುತಿದ್ದೆ. ಸ್ವಲ್ಪ ನಿರಾಶಾದಾಯಕ ಕೊನೆಯನ್ನು ಕಂಡಿದ್ದರಿಂದ 3 /5 ರೇಟಿಂಗನ್ನು ಕೊಟ್ಟಿದ್ದೇನೆ.
Profile Image for Abhiram's  Book Olavu.
105 reviews3 followers
July 11, 2025
ತೇಜಸ್ವಿ ಅವರ ಈ ಪುಸ್ತಕವನ್ನ ಓದುವಾಗ ಎಲ್ಲೋ ಒಂದೆಡೆ ನೀರಸವಾದ ಅನುಭವ ಆಗುವುದು ಸಹಜ. ತಮ್ಮ ಆರಂಭಿಕ ದಿನಗಳಲ್ಲಿ ಬರೆದಿದ್ದರಿಂದಲೋ ಅಥವಾ ತಮ್ಮ ಸುತ್ತಲಿನ ಸಮಾಜದ ಆಗುಹೋಗುಗಳನ್ನ ನೋಡಿ, ತಮ್ಮ ಮನಸ್ಸಿನಲ್ಲಿ ಆದ ವಿಚಾರವಂತಿಕೆಗಳನ್ನ ನೇರವಾಗಿ ಬರಹದ ರೂಪದಲ್ಲಿ ಇಳುಹಿದುದರಿಂದಲೋ ಇರಬಹುದು. ಆಳವಾದ ತತ್ವಜ್ಞಾನವನ್ನು ಒಳಗೊಂಡ ಈ ಪುಸ್ತಕ ನನಗೆ ಓದಲು ಕಷ್ಟವಾಯ್ತು. ಇಲ್ಲಿ ಓದಿದ್ದು ನೆನಪಿರುವುದೂ ಸ್ವಲ್ಪ ಕಡಿಮೆಯೇ! ಪ್ರಾಯಶಃ ಓದಿ ವರುಷಗಳೇ ಕಳೆದವು ಅದಿಕ್ಕೆ!

'ಲಿಂಗ ಬಂದ' ಕಥೆ ನಾನು ಯಾವಾಗಲೋ ಕೇಳಿದ ಅಥವಾ ಅನುಭವಿಸಿದ ಪ್ರಸಂಗವೇ ಅಂತ ಯಾವತ್ತೂ ಅನ್ನಿಸುವುದು. ಚಿಕ್ಕಂದಿನಲ್ಲಿ, ಈ ಗುಮ್ಮ ಬರುವುದು, ಕೊಳ್ಳಿ ದೆವ್ವ ಬರುವುದನ್ನ ನಿಜವೆಂದೆಣಿಸಿ ಎಷ್ಟು ಹೆದರಿಲ್ಲಾ? ಅದಕ್ಕೆ ಪೂರಕವಾದ ಕಥೆಯನ್ನ ಕೇಳಿದರಂತೂ ಅಲ್ಲೇ ಟುಸ್ಸ್sss. ಇನ್ನೂ 'ಹುಲಿಯೂರಿನ ಸರಹದ್ದು' ಕಥೆ ನೆನೆಸಿಕೊಂಡಾಗಲೆಲ್ಲಾ ಆ ಈಚಲು ಬಯಲು, ರೆಟ್ರೋ ಫಿಲ್ಟರ್ ನೊಂದಿಗೆ, ನೀರಸ ಬದುಕೇ ನೆನಪಾಗುವುದು. ಈ ಅದೃಶ್ಯದ ಪಂಜರದೊಳಗೆ ಬುದುಕಿನಲ್ಲಿ ಬವಣೆ ಪಡುತಿರುವ ನಮ್ಮೆಲ್ಲರ ರೀಯಾಲಿಟಿಗೆ ಕನ್ನಡಿಹಿಡಿದಂತೆ ಈ ಕಥಾನಾಯಕ ಬದುಕೂ ಹೋಲಿಕೆಯಾಗುವುದು. ಯಾರದೋ ತಾಳ, ಇನ್ಯಾವುದೋ ಕುಣಿತ!

ಈ ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುವುದಕ್ಕೆ, 'ನಿಗೂಢ ಮನುಷ್ಯರು' ಕಿರು ಕಾದಂಬರಿ ನೆನಪಾಗುವುದು. ಎಷ್ಟೋ ಸಂದರ್ಭಗಳು, ಈ ಬಿಸಿ ತುಪ್ಪವನ್ನ ಬಾಯ್ಯೊಳು ಇಟ್ಟುಕೊಂಡ ಹಾಗೇ ಇರುವುದು. ಆ ಸಂದರ್ಭದವನ್ನ ಅನುಭವಿಸುವವನಿಗೆ ಅದು ಹೋರಾಟ ಅಥವಾ ಜಂಜಾಟ; ಅದೇ ಮೂರನೇ ವ್ಯಕ್ತಿಗೆ ಅದೇ ಸನ್ನಿವೇಶ ಭಿನ್ನವಾಗಿ ಕಾಣುವುದು, ಅಷ್ಟೇ! ಇಷ್ಟೆಲ್ಲಾ ಯಾಕೆ ಕಷ್ಟ ಪಡಬೇಕು? ಹೊರಬರಬಹುದಲ್ಲಾ? ಹೀಗೆ! Everyone's situation is totally different. Infact, everybody is leading a different life. Everything is happening in the same ground but perception is different.
Profile Image for   ರಕ್ಷಿತ್  . ಡಿ.
18 reviews
May 21, 2023
Everything is perfect and consists of many stories but I don't like 1 story among them called "Swaroopa" too much drag and better skip it or skim it. but the last story is fantastic called "niguda manushyaru" I liked it too much and overall worth buying no regrets of purchasing it.i try physical kannada book from amazon still story is fantastic I finish this book at 3 days of purchasing.
Profile Image for Karthik.
61 reviews19 followers
November 26, 2021
ಹುಲಿಯೂರಿನ ಸರಹದ್ದು (1962) ತೇಜಸ್ವಿಯವರ ಮೊದಲ ಕಥಾ ಸಂಕಲನ. 'ಲಿಂಗಬಂದ', 'ಪಂಜೊಳ್ಳಿ ಪಿಶಾಚಿಯ ಸವಾಲು', 'ಗುಡುಗು ಹೇಳಿದ್ದೇನು?’, ’ಉರ್ವಶಿ', 'ಹುಲಿಯೂರಿನ ಸರಹದ್ದು', 'ಗಾಂಧೀಜಿ ದೆಸೆಯಿಂದ’ ಎಂಬ ಆರು ಕಥೆಗಳು ಇಲ್ಲಿವೆ. 1966ರಲ್ಲಿ ಸ್ವರೂಪ ಪ್ರಕಟವಾದ ಮೊದಲ ಕಿರುಕಾದಂಬರಿ ಹಾಗೂ 1973ರಲ್ಲಿ ಪ್ರಕಟವಾಗಿದ್ದ ’ನಿಗೂಢ ಮನುಷ್ಯರು’ ಕಿರು ಕಾದಂಬರಿಗಳನ್ನು ಈ ಸಂಕಲನದಲ್ಲಿ ಸೇರಿಸಲಾಗಿದೆ

ಲಿಂಗ ಬಂದ -

ಕೆಲವೊಮ್ಮೆ ಮಕ್ಕಳ ಕುತೂಹಲ ತಣಿಸಲು ಅಥವಾ ಅವರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಕಥೆಗಳನ್ನು ಸೃಷ್ಟಿಸುವುದು ಸಹಜ ಪ್ರಕ್ರಿಯೆ. ಆದರೆ ಆ ಕತೆಗಳು ಮಕ್ಕಳ ಮನಸಿನ ಮೇಲೆ ಎಷ್ಟು ಪ್ರಭಾವ ಬೀರಬಹುದು ಎಂಬುದು ಆ ಸಮಯಕ್ಕೆ ನಮ್ಮ ಅರಿವಿಗೆ ಬರಲಾರದು. ಈ ಕಥೆಯಲ್ಲಿ ಇದೇ ನೆಲೆಗಟ್ಟನ್ನು ಬಳಸಲಾಗಿದೆ.

ಪಂಜ್ರೊಳ್ಳಿ ಪಿಶಾಚಿಯ ಸವಾಲು

ಕಾಫಿ ಕದಿಯಲು ಹೊರಟ ಮೂವರು ಸ್ನೇಹಿತರ ಕಥೆ ಇದು. ಕಳ್ಳ ಹೆಜ್ಜೆಯನ್ನಿಟ್ಟು, ಆ ಕಾಳ ರಾತ್ರಿಯಲಿ ಅಡುಗೆ ಮನೆಗೆ ನುಗ್ಗಿ , ಸಿಕ್ಕಿದ ಡಬ್ಬಿಯಲ್ಲಿ ಹಾಲು - ಕಾಪಿ ಸುರಿದು , ಮರಳಿ ತಮ್ಮ ರೂಮಿಗೆ ಬಂದು ಕಾಪಿ ಹೀರಿದ ಸ್ನೇಹಿತರಿಗೆ ಗೊತ್ತಾಗುವ ಕಹಿ ಸತ್ಯ ಮಜವಾಗಿದೆ. ಕಥೆ ಸೊಗಸಾಗಿದೆ!

ಗುಡುಗು ಹೇಳಿದ್ದೇನು?

ಬಡವನಾಗಿದ್ದೂ ಸೋಮಾರಿಯಾಗಿರುವ ಮಾನವ ಯಾವ ಮಟ್ಟಿಗೂ ಇಳಿಯಬಲ್ಲ ಅಲ್ವಾ ?! ಹೀಗೆಯೇ ಇಲ್ಲೊಂದು ಮನ ಮುಟ್ಟುವ ಕಥೆಯಿದೆ. ಕ್ಷಣ ಕಾಲ ನಿಂತು ತನ್ನನ್ನೇ ವಿಮರ್ಶಿಸಿಕೊಳ್ಳುವಂತೆ ಮಾಡುವ ಹಿಡಿತವಿದೆ ಈ ಕಥೆಗೆ! ಹಣದಾಸೆಗೆ ಸ್ವಂತದವರನ್ನೂ ಬಲಿಕೊಡುವ ಹೀನ ಮನಸಿನ ಅನಾವರಣವಿದೆ.

ಹಾ ಊರ್ವಶಿ

ಹುಚ್ಚು ಪ್ರೀತಿಯಿಂದ ಹಾಗೂ ಹುಚ್ಚು ನಾಯಿ (?) ಯ ಕಡಿತದಿಂದ ಬಳಲಿದ ಸೋಮುವಿನ ಕಥೆ. ಆ ಕತ್ತಲ ರಾತ್ರಿಯಲ್ಲಿ ಸುಭದ್ರೆಯಿಂದ ತಿರಸ್ಕೃತಗೊಂಡು, ನಾಯಿಯಿಂದ ಕಚ್ಚಿಸಿಕೊಂಡ ಸೋಮು ನಿಜ ವಿಷವನ್ನೇನೂ ಅರಿಯದೆ, ಸ್ವಗತದಲ್ಲೆ ಕಾಲ ಕಳೆಯುತ್ತಾನೆ. ನಾಯಿಗೆ ಹುಚ್ಚು ಹಿಡಿದಿದೆ ಎಂದು ಅನುಮಾನಿಸಿ, ಅದರ ಹಿಂದೆ ಅಲೆದು, ಅದೊಂದು ದಿನ ಕಾಣದೇ ಇದ್ದಾಗ, ಇಂಜೆಕ್ಷನ್ ಚುಚ್ಚಿಸಿಕೊಂಡು, ತಾನೂ ಹುಚ್ಚು ಹಿಡಿದು ಸಾಯುವುದಕ್ಕಿಂತ , ವಿಷ ಹೀರಿ ಸಾಯುವುದೇ ಮೇಲು ಎಂದು ಭ್ರಮಿಸಿ ಸಾಯಲು ಹೊರಟಾಗ ಧುತ್ತನೆ ಎದುರಾಗುವ ನಾಯಿ, ತನ್ನ ಪೂರ್ವಗ್ರಹದ ಪರದೆಯನ್ನು ಕಳಚುತ್ತದೆ.

ಹುಲಿಯೂರಿನ ಸರಹದ್ದು

ತನ್ನ ತಂದೆ ಹಾಗೂ ಊರಿನ ಸರಹದ್ದಲ್ಲೇ ಬಾಳುವ ಓರ್ವ ಯುವಕ ತನ್ನ ಬಿಡುಗಡೆಯ ಹಾದಿಯಲ್ಲಿ ಕಟ್ಟುಪಾಡುಗಳನ್ನು ಮೀರುವ ಕಥೆ ! ಸೊಗಸಾಗಿದೆ.

ಗಾಂಧೀಜಿ ದೆಸೆಯಿಂದ

ಆತನ ಹೆಸರೂ ಮೋಹನ K G. ಸತ್ಯದ ದಾರಿಯಲ್ಲಿ ನಡೆಯುವ ಸಲುವಾಗಿ , ತಾನು ಮಾಡಿದ ಪಾಪ ಪುಣ್ಯಗಳ ಪಟ್ಟಿಯನ್ನು ಒಂದು ಲೆಟರ್ ನಲ್ಲಿ ಬರೆದು ತಂದೆಗೆ ತಲುಪಿಸುವ ಈ ಮೋಹನನ ಪಾಡು ನಗು ತರಿಸುತ್ತದೆ.

ಸ್ವರೂಪ

ಇಂದೊಂದು ಅಂತರಾತ್ಮವ ಮಥಿಸುವ ಕಥೆ. ಶಿಕಾರಿಗೆ ಕೂತ ನಿರೂಪಕ ತನ್ನೊಡನಿದ್ದ ಸ್ನೇಹಿತನ ಜೊತೆ ತನ್ನ ಪೂರ್ವ ಕಥೆಗಳನ್ನು ಹೇಳುತ್ತಾ ಸಾಗುತ್ತಾನೆ. ಕಾಲೇಜಿನಲ್ಲಿ ಪರೀಕ್ಷೆ ಬರೆಯುವಾಗ ಪ್ರೊಫೆಸರ್ ಸಹಾಯ ಮಾಡಿದ್ದು, ಪ್ರೇಮ ಪ್ರಕರಣ, ಕಾಫಿ ಹೌಸ್ ನಲ್ಲಿ ಭಿಕ್ಷುಕನ ಮುಖಾಮುಖಿ, ಬೇಟೆಯ ಸಮಯದಲ್ಲಿ ತಪ್ಪಿ ಒಬ್ಬನನ್ನು ಸಾಯಿಸಿದ್ದು.. ಹೀಗೆ ಹಲವು ಸಂಗತಿಗಳು ತಾತ್ವಿಕ ನೆಲೆಗಟ್ಟಿನಲ್ಲಿ ಓದುಗನ ಮನಸ್ಸಿಗೆ ಇಳಿಯುತ್ತಾ ಚಿಂತನೆಗೆ ಹಚ್ಚುತ್ತದೆ.

ನಿಗೂಢ ಮನುಷ್ಯರು

ಭೋರ್ಗರೆದು ಸುರಿವ ಮಳೆ, ಮುಗಿಲೆತ್ತರಕ್ಕೆ ಚಾಚಿದ ‘ಉಗ್ರ ಗಿರಿ’, ಕೆಸರಲ್ಲಿ ಹೂತುಹೋದ ಕಾರು, ಮೂಕಳಾದ ಶಾರಿ, ನಿಗೂಢ ವ್ಯಕ್ತಿತ್ವದ ಗೋಪಾಲಯ್ಯ, ಏನನ್ನೋ ಅರಸುತ್ತ ಬಂದ ರಂಗಪ್ಪ - ಜಗನ್ನಾಥ ! ಹೀಗೆ ಕಾಡುವ ಹಲವು ಸಂಗತಿಗಳು ಈ ಕತೆಯಲ್ಲಿದೆ.

- ಕಾರ್ತಿಕ್ ಕೃಷ್ಣ
26/11/2021
172 reviews21 followers
June 27, 2020
ಕೃತಿ: ಹುಲಿಯೂರಿನ ಸರಹದ್ದು/ಸ್ವರೂಪ/ನಿಗೂಢ ಮನುಷ್ಯರು
ಲೇಖಕರು:ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಪ್ರಕಾಶಕರು:ಪುಸ್ತಕ ಪ್ರಕಾಶನ ಮೈಸೂರು

ತೇಜಸ್ವಿಯವರ ಆರು ವಿಭಿನ್ನ ಕಥೆಗಳು ಹಾಗೂ ಎರಡು ಕಿರು ಕಾದಂಬರಿಗಳುಳ್ಳ ಕಿರು ಹೊತ್ತಗೆ. "ಲಿಂಗ ಬಂದ" ಎಂಬ ಮಕ್ಕಳ ಕಥೆಯಿಂದ ಮೊದಲಾಗಿ ಮೂಢನಂಬಿಕೆ ಮತ್ತು ಕಂದಾಚಾರಗಳ ಸರಹದ್ದು ದಾಟಿ ಹೊರಕ್ಕೆ ಬಂದು ತನ್ನ ಜೀವನವನ್ನು ಕಟ್ಟಿಕೊಳ್ಳುವ "ಹುಲಿಯೂರಿನ ಸರಹದ್ದು", ಸೇರಿದಂತೆ ಇನ್ನೂ ನಾಲ್ಕು ಕಥೆಗಳು ಚೆನ್ನಾಗಿ ಮೂಡಿಬಂದಿದೆ.

#ನಿಗೂಢಮನುಷ್ಯರು ಈ ಕಾದಂಬರಿಯು ತುಂಬಾ ಇಷ್ಟವಾಯಿತು. ಪ್ರತಿಯೊಬ್ಬ ಮನುಷ್ಯನು ತಕ್ಕಮಟ್ಟಿಗೆ ನಿಗೂಢವಾಗಿಯೇ ಇರುತ್ತಾನೆ ಅಥವಾ ಇರಲು ಇಷ್ಟಪಡುತ್ತಾನೆ. ಎಷ್ಟೇ ಆದರೂ ತನ್ನೊಳಗಿನ ಎಲ್ಲವನ್ನು ಬಿಟ್ಟುಕೊಡುವುದಿಲ್ಲ. ಜೀವನದ ಹಲವು ಮಜಲುಗಳನ್ನು ಕಂಡರೂ, ಅನೇಕ ಅನುಭವಗಳಲ್ಲಿ ಮಿಂದೆದ್ದರೂ ಪ್ರತಿಯೊಬ್ಬರ ಬದುಕಿನ ನಿಗೂಢತೆಯನ್ನು ಈ ಕತೆಯಲ್ಲಿ ಕಾಣಬಹುದು.

ಎಂದಿನಂತೆ ತೇಜಸ್ವಿಯವರ ಬರವಣಿಗೆಯಲ್ಲಿ ಕಾಣುವ ಪ್ರಕೃತಿ ಸೌಂದರ್ಯವನ್ನು ಇಲ್ಲೂ ಸಹ ಆಸ್ವಾದಿಸಬಹುದು.

ನಮಸ್ಕಾರ,
ಅಮಿತ್ ಕಾಮತ್
Profile Image for Vinay . reads .
10 reviews2 followers
May 21, 2025
🔸ತೇಜಸ್ವಿಯವರ "ಹುಲಿಯೂರಿನ ಸರಹದ್ದು" ಕಥಾಸಂಕಲನವು ಆರು ವಿಶಿಷ್ಟ ಕಥೆಗಳನ್ನು ಒಳಗೊಂಡಿದೆ, ಪ್ರತಿಯೊಂದೂ ಆಳವಾದ ಮಾನವೀಯ ಸಂವೇದನೆಗಳನ್ನು ಅನಾವರಣಗೊಳಿಸುತ್ತದೆ. ಎಲ್ಲ ಕಥೆಗಳ ಆರಂಭದಲ್ಲಿ ಪ್ರಸಿದ್ಧ ಕವಿಗಳ ಕಾವ್ಯದ ತುಣುಕುಗಳಿದ್ದು, ಕಥೆಯ ತಿರುಳಿಗೆ ಪೂರಕವಾಗಿವೆ. ತೇಜಸ್ವಿ ಅವರ ನಿಸರ್ಗ ಸೌಂದರ್ಯದ ಬಗೆಗಿನ ಒಲವು ಮತ್ತು ಅದರ ನಿಗೂಢತೆಯ ಅನ್ವೇಷಣೆ, ವಿಶಿಷ್ಟ ಹಾಸ್ಯ ಪ್ರಜ್ಞೆ, ಸಂವಿಧಾನದ ಕುರಿತಾದ ಆಳವಾದ ತಿಳಿವಳಿಕೆ ಮತ್ತು ನಿರರ್ಗಳ ನಿರೂಪಣಾ ಶೈಲಿ ಈ ಸಂಕಲನದ ಯಶಸ್ಸಿಗೆ ಕಾರಣವಾಗಿವೆ. ಅವರು ತಮ್ಮ ಕಥೆಗಳಲ್ಲಿ ಮಣ್ಣಿಗೆ ಸಮೀಪವಾದ ಭಾಷೆಯನ್ನು ಬಳಸಿದ್ದು, ಓದುಗರಿಗೆ ಸಹಜ ಅನುಭವ ನೀಡುತ್ತದೆ.
ಸಂಕಲನದ ಮೊದಲ ಕಥೆ, "ಲಿಂಗ ಬಂದ", ಕುವೆಂಪುರವರ ಪದ್ಯದ ತುಣುಕಿನೊಂದಿಗೆ ಆರಂಭವಾಗಿ, ಹತ್ತು ವರ್ಷದ ಕಿಟ್ಟಿಯ ಮೂಲಕ ಹುಲಿಯ ಭಯ ಮತ್ತು ಮಲೆನಾಡಿನ ಮಳೆಗಾಲದ ವಾತಾವರಣವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಏಕಾಂತ, ರಾತ್ರಿ, ಮಳೆ ಮುಂತಾದ ಅಂಶಗಳು ನಿಗೂಢ ವಾತಾವರಣವನ್ನು ಸೃಷ್ಟಿಸಿ, ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ಸುಸಂಬದ್ಧವಾದ ವಸ್ತುನಿಷ್ಠತೆಯನ್ನು ಕಥೆಗೆ ನೀಡುತ್ತವೆ. ಮಕ್ಕಳನ್ನು ಹೆದರಿಸಲು ಹಿರಿಯರು ಹೇಳುವ ಕಥೆಗಳಿಂದಾಗುವ ಅನಾಹುತಗಳ ಬಗ್ಗೆ ಲೇಖಕರು ಕಲಾತ್ಮಕ ಎಚ್ಚರಿಕೆ ನೀಡಿದ್ದಾರೆ. ಕಿಟ್ಟಿಯ ಅಜ್ಞಾನ ಮತ್ತು ಲಿಂಗನ ಆಗಮನದ ಮೂಲಕ ಅಜ್ಞಾನ ಮೂಲದ ಭಯದಿಂದ ಭದ್ರತೆಯ ಕಡೆಗೆ ಮಾನವನ ಚಲನೆಯನ್ನು ಸಾಂಕೇತಿಕವಾಗಿ ಚಿತ್ರಿಸಿದ್ದಾರೆ. ಮಾನವನ ಆದಿಮ ಆಲೋಚನಾ ವಿಧಾನಗಳು ಮತ್ತು ಸತ್ಯಾನ್ವೇಷಣೆಯ ಹಂಬಲವನ್ನು ಶುಷ್ಕವಾಗದಂತೆ ಕಲಾತ್ಮಕವಾಗಿ ಅನಾವರಣಗೊಳಿಸಿದ್ದಾರೆ.
ಎರಡನೆಯ ಕಥೆ, "ಪಂಜ್ರೊಳ್ಳಿ ಪಿಶಾಚಿಯ ಸವಾಲು", ಕುಮಾರವ್ಯಾಸ ಭಾರತದ ಪದ್ಯದೊಂದಿಗೆ ಪ್ರಾರಂಭವಾಗಿ, ತೇಜಸ್ವಿ ಅವರ ನವಿರಾದ ಹಾಸ್ಯಪ್ರಜ್ಞೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ಓದಿ ಮುಗಿಸಿದ ಮೇಲೆ ನಗದೆ ಇರಲು ಸಾಧ್ಯವಾಗದಂತಹ ಒಂದು ಸಾಮಾನ್ಯ ಕಥೆಯಿದು.
ಮೂರನೆಯ ಕಥೆ, "ಗುಡುಗು ಹೇಳಿದ್ದೇನು?", ಕುವೆಂಪುರವರ ಪದ್ಯದೊಂದಿಗೆ ಆರಂಭವಾಗಿ, ತೇಜಸ್ವಿ ಅವರು ಪೂರ್ಣ ಪ್ರಮಾಣದ ಕಥೆಗಾರರಾಗಿ ಬೆಳೆದು ನಿಂತಿದ್ದನ್ನು ತೋರಿಸುತ್ತದೆ. ಇದರ ಕಥಾತಂತ್ರ ಅತ್ಯಂತ ವಿಶಿಷ್ಟವಾಗಿದ್ದು, ಸರಳ ನಿರೂಪಣೆಯ ಮೂಲಕ ಮಾನವೀಯ ಮನಸ್ಸಿನ ಒಳಪದರಗಳನ್ನು ಎಳೆಎಳೆಯಾಗಿ ಬಿಡಿಸಿ ತೋರಿಸುತ್ತಾರೆ. ಕಥೆಯೊಳಗಿನ ಸೋಮ ಮತ್ತು ಲಕ್ಕರ ಪಾತ್ರಗಳು ಪ್ರತಿಯೊಬ್ಬ ವ್ಯಕ್ತಿಯ ಅಂತರಂಗದಲ್ಲಿರುವ ಮಾನಸಿಕ ದ್ವಂದ್ವವನ್ನು ಬಿಂಬಿಸುತ್ತವೆ. ಕಥೆಯ ಅಂತ್ಯವನ್ನು ಊಹಿಸಬಹುದಾದರೂ, ತೇಜಸ್ವಿ ಅವರು ರಹಸ್ಯವನ್ನು ಕೊನೆಯವರೆಗೂ ಕಾಯ್ದುಕೊಂಡು ಸ್ಫೋಟಗೊಳಿಸುವ ಕಥಾತಂತ್ರದ ಸಿದ್ಧಿ ಮೆಚ್ಚುವಂತಹದ್ದು. ಇದು ಸಂಕಲನದ ಅತ್ಯುತ್ತಮ ಕಥೆಗಳಲ್ಲಿ ಒಂದಾಗಿದೆ.
ನಾಲ್ಕನೆಯ ಕಥೆ, "ಊರ್ವಶಿ", ಋಗ್ವೇದದ ಉಕ್ತಿಯೊಂದಿಗೆ ಶುರುವಾಗುತ್ತದೆ ಮತ್ತು ಇದನ್ನು ಶಾಪ, ವಿರಹ, ಮಿಳನ ಎಂದು ಮೂರು ಭಾಗಗಳಲ್ಲಿ ವಿಂಗಡಿಸಲಾಗಿದೆ. ಭಯದ ಮನೋವಿಜ್ಞಾನವನ್ನು ಇದು ಮುಂದುವರೆಸಿದೆ; ಹಾವಿಗೆ ಹೆದರಿದವನು ಹಗ್ಗಕ್ಕೂ ಹೆದರುವಂತೆ, ಸೋಮು ಹುಚ್ಚು ನಾಯಿಯ ಭಯದಿಂದ ನರಳುತ್ತಾನೆ. ಮಳೆಗಾಲದ ವಾತಾವರಣವು ಅವನ ಭಯವನ್ನು ಉಲ್ಬಣಗೊಳಿಸುತ್ತದೆ. ಕಥೆಯ ಆರಂಭದಲ್ಲಿ ಬರುವ ಊರ್ವಶಿ (ಸುಭದ್ರ) ಮತ್ತು ಸೋಮು ನಡುವಿನ ಸಂಬಂಧವು ಬದುಕಿನ ಆಕರ್ಷಣೆಯನ್ನು ಸೂಚಿಸುತ್ತದೆ. ಸಾವಿನ ಸಾನ್ನಿಧ್ಯದಲ್ಲಿಯೂ ಬದುಕಿನ ಬಗೆಗಿನ ಮಾನವನ ಅದಮ್ಯ ಪ್ರೀತಿಯನ್ನು ತೇಜಸ್ವಿ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ, ಆದ್ದರಿಂದ 'ಊರ್ವಶಿ' ಶಿರೋನಾಮೆ ಔಚಿತ್ಯಪೂರ್ಣವಾಗಿದೆ.
ಐದನೆಯ ಕಥೆ, "ಹುಲಿಯೂರಿನ ಸರಹದ್ದು", ಅಡಿಗರ ಕವನದ ತುಣುಕಿನೊಂದಿಗೆ ಆರಂಭವಾಗಿ, ಈ ಸಂಕಲನಕ್ಕೆ ಹೆಸರಾದ ಕಥೆಯಾಗಿದೆ. 'ಹುಲಿಯೂರು' ಒಂದು ಸಾಂಕೇತಿಕ ಹೆಸರಾಗಿದ್ದು, ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ. ಅದರ ಸರಹದ್ದನ್ನು ದಾಟಿ ಹೋಗುವುದು ಹೊಸ ದಿಗಂತದತ್ತ ಇಟ್ಟ ಹೆಜ್ಜೆಯ ಸಂಕೇತ. ಇಲ್ಲಿ ಕಥಾನಾಯಕ ಸೋಮುವಿಗೆ, ತಾನು ಮತ್ತೊಬ್ಬರಿಗಾಗಿ ಬದುಕುತ್ತಿದ್ದೇನೆ ಎಂಬ ಸತ್ಯದ ಅರಿವಾಗಿ, ಈ ಹುಲಿಯೂರಿನ ವ್ಯವಸ್ಥೆಯಿಂದ ಸಿಡಿದು ನಿಲ್ಲಲು ಪ್ರಚೋದಿಸುತ್ತದೆ. ರಕ್ತದಿಂದ ಕೆಂಪಾದ ಗರುಡನ ಬಾಯಿ ಮತ್ತು ಉಗುರುಗಳು ಕ್ರಾಂತಿಯನ್ನು ನಿರ್ದೇಶಿಸುತ್ತವೆ. ಸಮಷ್ಟಿ ಶೋಷಣೆಯ ವಿರುದ್ಧ ವ್ಯಷ್ಟಿ ಮನಸ್ಸಿನ ಪ್ರತಿಕ್ರಿಯೆಯಾಗಿ ಈ ಕಥೆ ರೂಪುಗೊಂಡಿದೆ. ಸೋಮುವನ್ನು ವ್ಯವಸ್ಥೆಗೆ ಬಲಿಯಾಗಿಸದೆ, ಅದರ ವಿರುದ್ಧ ಸಿಡಿದು ನಿಲ್ಲಿಸಿ ಹೊಸ ದಿಗಂತದತ್ತ ದಾರಿಗೂಡಿಸಿರುವುದು ಲೇಖಕರ ವೈಶಿಷ್ಟ್ಯ.
ಸಂಕಲನದ ಕೊನೆಯ ಕಥೆ, "ಗಾಂಧೀಜಿಯ ದೆಸೆಯಿಂದ", ಬೇಂದ್ರೆಯವರ ಕವನದೊಂದಿಗೆ ಪ್ರಾರಂಭವಾಗಿ, ವಿಡಂಬನಾತ್ಮಕ ಶೈಲಿಯಲ್ಲಿ ಗುಂಡೇಗೌಡರ ಮಗ ಮೋಹನದಾಸ (ಕೆ.ಜಿ) ಗಾಂಧೀಜಿಯಂತೆ ಆಗಲು ಪ್ರಯತ್ನಿಸಿ ಹೇಗೆ ನಿರಾಶನಾಗುತ್ತಾನೆ ಎಂಬುದನ್ನು ಚಿತ್ರಿಸುತ್ತದೆ. ಆದರ್ಶಗಳನ್ನು ಅಂಧವಾಗಿ ಅನುಕರಿಸುವಿಕೆಯ ವಿಫಲತೆಯನ್ನು ತೇಜಸ್ವಿ ಇಲ್ಲಿ ಹಾಸ್ಯ ಮತ್ತು ವಿಡಂಬನೆಯ ಮೂಲಕ ಪರಿಣಾಮಕಾರಿಯಾಗಿ ತೋರಿಸಿದ್ದಾರೆ.
ಒಟ್ಟಾರೆ, "ಹುಲಿಯೂರಿನ ಸರಹದ್ದು" ಸಂಕಲನದ ಆರು ಕಥೆಗಳು ಲೇಖಕರ ಪ್ರಯೋಗಶೀಲತೆಯನ್ನು ಎತ್ತಿ ಹಿಡಿಯುತ್ತವೆ. ಪ್ರತಿಯೊಂದು ಕಥೆಯೂ ವಿಭಿನ್ನ ಆಯಾಮಗಳನ್ನು ತೆರೆದಿಟ್ಟರೂ, ಅವೆಲ್ಲವೂ ನಿಸರ್ಗ, ಮಾನವ ಸಂಬಂಧಗಳು, ಮನಸ್ಸಿನ ಸಂಕೀರ್ಣತೆಗಳು ಮತ್ತು ಸಾಮಾಜಿಕ ವಾಸ್ತವಗಳನ್ನು ತೇಜಸ್ವಿ ಅವರ ವಿಶಿಷ್ಟ ಶೈಲಿಯಲ್ಲಿ ಅನಾವರಣಗೊಳಿಸುತ್ತವೆ. 'ಹುಲಿಯೂರಿನ ಸರಹದ್ದು' ಎಂಬ ಶೀರ್ಷಿಕೆ ಲೇಖಕರ ಹೊಸ ದಿಗಂತದತ್ತ ಹೆಜ್ಜೆಯಿಡುವ ನಿರ್ಧಾರವನ್ನು ಪ್ರತಿನಿಧಿಸುತ್ತದೆ, ಇದು ಅವರ ವ್ಯಕ್ತಿಗತ ಸನ್ನಿವೇಶ ಮತ್ತು ಸಂದರ್ಭಗಳಿಗೆ ಔಚಿತ್ಯಪೂರ್ಣವಾಗಿದೆ.
Profile Image for pustakamare.
89 reviews13 followers
April 10, 2025
ನಗಬೇಕು ಅನ್ಸತ್ತೆ. ನಗ್ತಾನೆ ಇರಬೇಕು ಅನಿಸುತ್ತೆ. ನಗಲೇ ಬಾರದೂನೂ ಅನಿಸುತ್ತೆ. ದೊಡ್ ದೊಡ್ ಸಾಧನೆ ಮಾಡಿ ಹೆಸ್ರು ಮಾಡ್ಬೇಕು, ಸಿಕ್ಕಾಪಟ್ಟೆ ಕೆಟ್ಟೋನು ಆಗ್ಬೇಕು ಅಂತೆಲ್ಲ ಅನಿಸುತ್ತೆ. ಜನರಿಗೆಲ್ಲ ನಾನ್ ಗೊತ್ತಿರಬೇಕು ಇಲ್ಲಾ ಯಾರ್ಗೂ ಗೊತ್ತೇ ಆಗಬಾರದು ಅಂತ ಸಹ ಅನಿಸುತ್ತೆ. ಅಂತಹ ದ್ವಂದ್ವಗಳಲ್ಲೇ ಕೆಲವೊಮ್ಮೆ ನಾವು ಇಷ್ಟ ಪಡೋ ಕೆಲೋ ವಸ್ತು ಕೆಲಸ ಎಲ್ಲಾ ಒಮ್ಮೆ ಬಾಲ್ಯಾನ ನೆನಪಿಸುತ್ತೆ. ಮಳೆ ನೆನಪಾಗುತ್ತೆ; ಮನೆಯ ಮೆಟ್ಲೂ. ಚೋಗಿ ನೆನಪಾಗುತ್ತೆ; ಗಯ್ಟವೂ. ಶಾಲೆ ನೆನಪಾಗುತ್ತೆ; ಹಣ್ಣಿನ ಮರವೂ.
ನಾನೀ ಪೂರ್ತಿ ���ುಸ್ತಕದ ಬಗ್ಗೆ ಹೇಳಲ್ಲ. ಹೆಚ್ಚಿನಂಶ ನೀವು ಓದಿರೋದೆ. ತೇಜಸ್ವಿ ಬಗ್ಗೆ ಕೇಳಿರೋದೆ. ಈ ಪುಸ್ತಕದಲ್ಲಿ ಬರೋ ಮೊದ್ಲ ಕತೆ ನನ್ನ ಮನೆಗೆ, ಬಾಲ್ಯಕ್ಕೆ, ನೆನಪಿನ ಆಳಕ್ಕೆ ಅಂತೆಲ್ಲ ಕರೆದುಕೊಂಡು ಹೋಯ್ತು. ಯಾಕಂದ್ರೆ ಈ ಕತೆಯಲ್ಲಿ ಬಂದ ಘಟನೆಗಳಲ್ಲಿ ಹೆಚ್ಚಿನವನ್ನ ನಾನು ಅನುಭವಿಸಿ ನೆನಪಾಗಿ ತುಂಬಿಸಿಕೊಂಡು ಬಂದಿರೋದೆ. ಮಳೆ, ಅಪ್ಪ, ಕತ್ಲೂ, ಸೂರಂಕ್ಲೂ, ಮಗು, ತೊಟ್ಲು, ಕಿಟಕಿಯಾಚೆಯ ಮಳೆ ಗುಡ್ಗು ಸಿಡ್ಲು, ಮಿಂಚುಗಳೆಲ್ಲ ನಾನು ನೋಡಿರೋದೆ. ಆದ್ರೆ ಅವನ್ನ ಮತ್ತೆ ನೆನಪಿಸಿದ್ದು ಈ ಕತೆ.
ತೇಜಸ್ವಿ ಅವರ ೧೯೫೭ ರಿಂದ ೧೯೭೩ ರವರೆಗೆ ಬರೆದ ಪ್ರಖ್ಯಾತ ಕತೆಗಳು ಹಾಗೆ ಸ್ವರೂಪ ಮತ್ತು ನಿಗೂಢ ಮನುಷ್ಯರು ಅನ್ನೋ ಎರಡು ಕಿರು ಕಾದಂಬರಿಗಳು ಇಲ್ಲಿವೆ.
ಜೈ.
Profile Image for Santrupth Kumar.
18 reviews
August 22, 2024
Either I have not gotten used to short stories or this collection is not his best work.
My first kannada novel and though the description of the locations and emotions of all elements described is beautiful, the story lacks intent. It takes you to places but then disappoints.
ಸ್ವರೂಪ is definitely worth a skip
ನಿಗೂಢ ಮೌಷ್ಯರು is good for its malenadu experience.
Profile Image for Nandeesh.
8 reviews2 followers
September 20, 2020
Ok,ok.ಕೆಲವು ಕಡೆ ಕಥೆ ತನ್ನ ಮಿತಿಯನ್ನ ಬಿಟ್ಟು ಎತ್ತ ಎತ್ತಲೋ ಸಾಗುತ್ತೆ. ಇಲ್ಲ ಕಥೆ ಗಾಢತೆಯನ್ನು ಇನ್ನು ಒತ್ತು ಕೊಟ್ಟು ಹೆಳಬಹುದಿತ್ತೆನೂ.ಸಲೀಸಾಗಿ ಹೇಳಲು ಹೋಗಿದ್ದಾರೆ.ಲಿಂಗ ಬಂದ, ನಿಗೂಢ ಮನುಷ್ಯರು ಕಥೆ ಹಿಡಿಸಿತು.(ಅಂತ್ಯವನ್ನು ಹೊರತು ಪಡಿಸಿ).cinematic Feel ಇದೆ
Profile Image for Bharath Manchashetty.
122 reviews2 followers
December 22, 2025
೮ ಸಣ್ಣ ಕತೆಗಳನ್ನು ಹೊಂದಿರುವ ಕಥಾಸಂಕಲನ ಈ ಕೃತಿ.

ತೇಜಸ್ವಿಯವರ ಸೃಜನಶೀಲತೆಯ ಶಿಖರ “ಸ್ವರೂಪ , ನಿಗೂಢ ಮನುಷ್ಯರು” ಈ ಕೃತಿಯಲ್ಲಿದೆ. ಅಬ್ಬಾ ನಿಜವಾಗಿಯೂ ಈ ಕಥೆಗಳನ್ನು ರಚಿಸಿರುವುದು ತೇಜಸ್ವಿಯವರ ಯೋಚನಾಶಕ್ತಿಗೆ ಸವಾಲೆನಿಸುತ್ತದೆ.

ವಿಭಿನ್ನ ಓದಿಗೆ ಒಂದು ಒಳ್ಳೆಯ ಪ್ರಯತ್ನ.
1 review
July 11, 2018
Awesome story
This entire review has been hidden because of spoilers.
1 review
February 15, 2021
My favorite book and i recommended for readers.
This entire review has been hidden because of spoilers.
1 review
November 13, 2021
One of best novel in the world
This entire review has been hidden because of spoilers.
119 reviews1 follower
October 26, 2024
Enjoyed all the stories except Swarupa which was such a ramble. Personal favourites were Nigoodha Manushyaru and Panjrolli pishachiya sawaalu
Profile Image for Madhu B.
105 reviews10 followers
February 6, 2017
Nigoodha manushyaru is too good. May read the book again after some days.
This entire review has been hidden because of spoilers.
Profile Image for Kishore Murthy.
1 review
April 7, 2014
Awsome Book with funny and interesting Narration lot to say about this book will review about all the stories some day and suggest those who are interested to read just go for it ;)
Profile Image for Bharat.
140 reviews
January 27, 2015
Hilarious short stories from the western ghats of Karnataka.
Displaying 1 - 22 of 22 reviews

Can't find what you're looking for?

Get help and learn more about the design.