ನಮಸ್ಕಾರ. ಶಿವ ಸ್ವಾಮಿಯ ಖಾಸಗಿ ತಲ್ಲಣಗಳು, ನೆಮ್ಮದಿಯ ನಿವೃತ್ತ ಜೀವನ ಬಯಸಿ ಬಂದು, ಬಿಲ್ಡರುಗಳ ಮೋಸಕ್ಕೆ ಸಿಲುಕಿದರೂ ಆತ್ಮಸ್ಥೈರ್ಯ ಕಳೆದುಕೊಳ್ಳದೆ, ವಿರೋಧದ ವಾತಾವರಣವಿದ್ದರೂ, ಅಳುಕಿನಲ್ಲೇ ಕೆಲಸ ಶುರುಮಾಡಿಕೊಂಡು, ಕೌಟುಂಬಿಕ ವ್ಯವಹಾರದ ಸಾಂಸ್ಥಿಕ ಸಂಘರ್ಷಗಳಿಗೆ ಸಾಕ್ಷಿಯಾಗುತ್ತಾ, ಬಯಸದೆಯೇ ಮಧ್ಯಸ್ಥಿಕೆಗಾರನೂ ಆಗುತ್ತಾ, ತನ್ನ ವೈಯಕ್ತಿಕತೆಯನ್ನು ಉಳಿಸಿಕೊಳ್ಳುತ್ತಲೇ, ಸಂಸ್ಥೆಯ ಸಮಸ್ಯೆಗೆ ಸಾಕ್ಷಿಯಾಗುತ್ತಲೇ, ತನಗರಿವಿಲ್ಲದೆಯೇ ಸಮಸ್ಯೆಯ ಪರಿಹಾರಕ್ಕೂ ಕಾರಣನಾಗಿಬಿಡುವ ಶಿವಸ್ವಾಮಿ ಯ ವ್ಯಕ್ತಿತ್ವ ಬೆರಗು ಹುಟ್ಟಿಸುತ್ತದೆ. ತನ್ನ ಖಾಸಗಿ ಸಮಸ್ಯೆಯೂ ಚಿಟಿಕೆ ಹೊಡೆಯುವುದರಲ್ಲಿ ಪರಿಹಾರವಾಗುವ ಅವಕಾಶ ಎದುರಾದರೂ, ಅದಕ್ಕೆ ಸುಲಭ ತುತ್ತಾಗದೆ ಉಳಿಯಲು ಹೆಣಗಾಡುವ ತಲ್ಲಣ ಈ ಕಾಲದಲ್ಲಿ ಅಪರೂಪವೆನಿಸಿದರೂ ಅಸಹಜವಾಗುವುದಿಲ್ಲ. ತನ್ನ ವಿಲಕ್ಷಣ ಸ್ವಭಾವದಿಂದ ಓದುಗನಿಗೆ ಆತ್ಮೀಯವಾಗಿಬಿಡುವ ಧಾವಲ್ ಥಕ್ಕರ್ ಹೆಮ್ಮೆಗೂ ಅನುಕಂಪಕ್ಕೂ ಪಾತ್ರನಾಗುತ್ತಾನೆ. ಕೆಲವು ಭಾಗ ಓದುವಾಗ, ಬಕೆಟ್ ಲಿಸ್ಟ್ ನೆನಪಾಯಿತು. ಕೆಲವೆಡೆ ವಸುಧೇಂದ್ರರ ಹೆಡ್ ಹಂಟರ್ ಕತೆ ನೆನಪಾಯಿತು. ಹಾಗೆಂದು, ಕಾದಂಬರಿಯ ರಚನಾ ತಂತ್ರಕ್ಕೂ ನನ್ನ ನೆನಪಿಗೂ ಸಂಬಂಧವಿಲ್ಲ. ಅಯಾಚಿತವಾಗಿ ನೆನಪಾಯಿತಷ್ಟೆ. ಮನುಷ್ಯ ಸಂಬಂಧಗಳು ಆರೋಗ್ಯಕರವಾಗಿ ಹೇಗಿರಬಹುದು ಎನ್ನುವುದಕ್ಕೆ ಮಾದರಿಯಾಗಿ ಶಿವಸ್ವಾಮಿ, ರೇವತಿ, ಸಂಜನಾ ಮತ್ತು ತೇಜು ನಿಲ್ಲುತ್ತಾರೆ. ವ್ಯವಹಾರಕ್ಕೆ ಸಂಬಂಧಿಸಿದಂತೆ, ಅನುಭವಜನ್ಯವಾದ ಧಾವಲ್ ಅವರ ನಿಖರವಾದ ನಿಲುವುಗಳು, ರವಿ ಮತ್ತು ಪ್ರಭುವಿನ ಹುಡುಗುತನದ ಆತುರಗಳು, ವ್ಯವಹಾರದ ಚಕ್ರಸುಳಿಗಳ ನಡುವೆಯೇ ಹುಟ್ಟಿ ಬೆಳೆದು ವ್ಯಕ್ತಿತ್ವ ಕಟ್ಟಿಕೊಂಡ ಧೃತಿಯಂತಹ ಪಾತ್ರಗಳು ಕಳವಳ ಹುಟ್ಟಿಸುತ್ತವೆ. ಒಟ್ಟಿನಲ್ಲಿ, ಭರ್ಜರಿಯಾದ ಓದಿನ ಸುಖಕ್ಕೆ ಕಾರಣವಾದ ಒಂದೊಂದು ತಲೆಗೂ ಒಂದೊಂದು ಬೆಲೆ ಬರೆದು ಕೈಗಿಟ್ಟ ನಿಮ್ಮ ಸೃಜನಶೀಲ ಮನಸ್ಸಿಗೆ ಮಾರುಹೋಗಿದ್ದೇನೆ.
ಇದು ಸಿನೆಮಾವಾಗಿ ಪರಿಣಾಮಕಾರಿ ಆಗಬಹುದು. ನಾಟಕವಾಗಿ ಸವಾಲು. ನಮಸ್ಕಾರ.
ನಮಸ್ಕಾರ. ಶಿವ ಸ್ವಾಮಿಯ ಖಾಸಗಿ ತಲ್ಲಣಗಳು, ನೆಮ್ಮದಿಯ ನಿವೃತ್ತ ಜೀವನ ಬಯಸಿ ಬಂದು, ಬಿಲ್ಡರುಗಳ ಮೋಸಕ್ಕೆ ಸಿಲುಕಿದರೂ ಆತ್ಮಸ್ಥೈರ್ಯ ಕಳೆದುಕೊಳ್ಳದೆ, ವಿರೋಧದ ವಾತಾವರಣವಿದ್ದರೂ, ಅಳುಕಿನಲ್ಲೇ ಕೆಲಸ ಶುರುಮಾಡಿಕೊಂಡು, ಕೌಟುಂಬಿಕ ವ್ಯವಹಾರದ ಸಾಂಸ್ಥಿಕ ಸಂಘರ್ಷಗಳಿಗೆ ಸಾಕ್ಷಿಯಾಗುತ್ತಾ, ಬಯಸದೆಯೇ ಮಧ್ಯಸ್ಥಿಕೆಗಾರನೂ ಆಗುತ್ತಾ, ತನ್ನ ವೈಯಕ್ತಿಕತೆಯನ್ನು ಉಳಿಸಿಕೊಳ್ಳುತ್ತಲೇ, ಸಂಸ್ಥೆಯ ಸಮಸ್ಯೆಗೆ, ತನಗರಿವಿಲ್ಲದೆಯೇ ಸಮಸ್ಯೆಯ ಪರಿಹಾರಕ್ಕೂ ಕಾರಣನಾಗಿಬಿಡುವ ಶಿವಸ್ವಾಮಿ ಯ ವ್ಯಕ್ತಿತ್ವ ಬೆರಗು ಹುಟ್ಟಿಸುತ್ತದೆ. ತನ್ನ ಖಾಸಗಿ ಸಮಸ್ಯೆಯೂ ಚಿಟಿಕೆ ಹೊಡೆಯುವುದರಲ್ಲಿ ಪರಿಹಾರವಾಗುವ ಅವಕಾಶ ಎದುರಾದರೂ, ಅದಕ್ಕೆ ಸುಲಭ ತುತ್ತಾಗದೆ ಉಳಿಯಲು ಹೆಣಗಾಡುವ ತಲ್ಲಣ ಈ ಕಾಲದಲ್ಲಿ ಅಪರೂಪವೆನಿಸಿದರೂ ಅಸಹಜವಾಗುವುದಿಲ್ಲ. ತನ್ನ ವಿಲಕ್ಷಣ ಸ್ವಭಾವದಿಂದ ಓದುಗನಿಗೆ ಆತ್ಮೀಯವಾಗಿಬಿಡುವ ಧಾವಲ್ ಥಕ್ಕರ್ ಹೆಮ್ಮೆಗೂ ಅನುಕಂಪಕ್ಕೂ ಪಾತ್ರನಾಗುತ್ತಾನೆ. ಕೆಲವು ಭಾಗ ಓದುವಾಗ, ಬಕೆಟ್ ಲಿಸ್ಟ್ ನೆನಪಾಯಿತು. ಕೆಲವೆಡೆ ವಸುಧೇಂದ್ರರ ಹೆಡ್ ಹಂಟರ್ ಕತೆ ನೆನಪಾಯಿತು. ಹಾಗೆಂದು, ಕಾದಂಬರಿಯ ರಚನಾ ತಂತ್ರಕ್ಕೂ ನನ್ನ ನೆನಪಿಗೂ ಸಂಬಂಧವಿಲ್ಲ. ಅಯಾಚಿತವಾಗಿ ನೆನಪಾಯಿತಷ್ಟೆ. ಮನುಷ್ಯ ಸಂಬಂಧಗಳು ಆರೋಗ್ಯಕರವಾಗಿ ಹೇಗಿರಬಹುದು ಎನ್ನುವುದಕ್ಕೆ ಮಾದರಿಯಾಗಿ ಶಿವಸ್ವಾಮಿ, ರೇವತಿ, ಸಂಜನಾ ಮತ್ತು ತೇಜು ನಿಲ್ಲುತ್ತಾರೆ. ವ್ಯವಹಾರಕ್ಕೆ ಸಂಬಂಧಿಸಿದಂತೆ, ಅನುಭವಜನ್ಯವಾದ ಧಾವಲ್ ಅವರ ನಿಖರವಾದ ನಿಲುವುಗಳು, ರವಿ ಮತ್ತು ಪ್ರಭುವಿನ ಹುಡುಗುತನದ ಆತುರಗಳು, ವ್ಯವಹಾರದ ಚಕ್ರಸುಳಿಗಳ ನಡುವೆಯೇ ಹುಟ್ಟಿ ಬೆಳೆದು ವ್ಯಕ್ತಿತ್ವ ಕಟ್ಟಿಕೊಂಡ ಧೃತಿಯಂತಹ ಪಾತ್ರಗಳು ಕಳವಳ ಹುಟ್ಟಿಸುತ್ತವೆ. ಒಟ್ಟಿನಲ್ಲಿ, ಭರ್ಜರಿಯಾದ ಓದಿನ ಸುಖಕ್ಕೆ ಕಾರಣವಾದ ಒಂದೊಂದು ತಲೆಗೂ ಒಂದೊಂದು ಬೆಲೆ ಬರೆದು ಕೈಗಿಟ್ಟ ನಿಮ್ಮ ಸೃಜನಶೀಲ ಮನಸ್ಸಿಗೆ ಮಾರುಹೋಗಿದ್ದೇನೆ.
ಇದು ಸಿನೆಮಾವಾಗಿ ಪರಿಣಾಮಕಾರಿ ಆಗಬಹುದು. ನಾಟಕವಾಗಿ ಸವಾಲು. ನಮಸ್ಕಾರ.