Jump to ratings and reviews
Rate this book

ಕೇರಳ ಮಾಂತ್ರಿಕರ ನಿಗೂಢ ಕಥೆಗಳು | Kerala Mantrikara Nigoodha Kathegalu

Rate this book

172 pages, Paperback

Published January 1, 2024

16 people want to read

About the author

Sandhya Pai

15 books

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
1 (25%)
4 stars
2 (50%)
3 stars
1 (25%)
2 stars
0 (0%)
1 star
0 (0%)
Displaying 1 - 4 of 4 reviews
Profile Image for That dorky lady.
381 reviews73 followers
June 3, 2025
ಸಂಧ್ಯಾ ಪೈ ನನಗೆ 'ತರಂಗದ ಸಂಧ್ಯಾ ಮಾಮಿ' ಆಗಿಯೇ ಹೆಚ್ಚು ಪರಿಚಯ. ಚಿಕ್ಕಂದಿನಿಂದ ಅವರು ಮಕ್ಕಳಿಗಾಗಿ ಬರೆದ ಕಥೆಗಳನ್ನು ಓದಿ ಬೆಳೆದವಳಿಗೆ ಈ ಪುಸ್ತಕದ ಕಥನ ಶೈಲಿ ನಾಸ್ಟಾಲ್ಜಿಕ್ ಫೀಲ್ ಕೊಟ್ಟಿತು. ಪುಸ್ತಕ ಓದುವಾಗ
ಇತ್ತೀಚೆಗೆ ನೋಡಿದ ಮಲಯಾಳಂ ಸಿನಿಮಾ 'ಭ್ರಮಯುಗಂ'ನ್ನು ಪುನಃ ಪುನಃ ನೆನೆದಿದ್ದೇನೆ. ನಂಬೂದಿರಿ, ಭಟ್ಟಾತ್ತಿರಿ, ಚಾತ್ತನ್, ಯಕ್ಷಿ, ತಾಂಬನ್, ಭಗವತಿ, ನಂಬಿದ ಭಕ್ತನಿಗಾಗಿ ಹರಿವ ನದಿಯ ದಿಕ್ಕನ್ನೇ ಬದಲಿಸುವ ಗಣಪತಿ.... ಓಹ್ ಇದೊಂದು ಬೇರೆಯದೇ ಬಗೆಯ ವಿಸ್ಮಯ. ನಂಬಿಕೆ- ಅಪನಂಬಿಕೆಗಳಾಚೆ ನಿಂತು ಓದಿದರೆ ಅತ್ಯಂತ ರೋಚಕವಾಗಿ ಬೇರೊಂದೇ ಲೋಕಕ್ಕೆ ಕರೆದೊಯ್ದು ಚಕಿತಗೊಳಿಸುವ, ಹಗುರವಾಗಿ ಓದಿ ಮರೆಯಬಹುದಾದ ಗುಣವುಳ್ಳ ಇಪ್ಪತ್ತು ಕಥೆಗಳಿಂದ ಸಂಕಲನ ಸಮೃದ್ಧವಾಗಿದೆ. loved it
Profile Image for Madhu B.
105 reviews10 followers
December 31, 2025
ತರಂಗದಲ್ಲಿ ಸಂಧ್ಯಾ ಪೈ ರವರ ಸಂಪಾದಕೀಯ ಓದಿ ಅವರ ಫ್ಯಾನ್ ಆಗಿದ್ದೆ. ಅವರ ಕಥೆ ಹೇಳುವ ಶೈಲಿಯಿಂದ ಕಥೆಗಳು ನೆನಪಿನಲ್ಲಿ ಉಳಿಯುತಿದ್ವು. ಇದು ಕೇರಳದ ಮಾಂತ್ರಿಕರ ಕಥೆಗಳು...ಕೆಲವೊಂದು ಕಥೆಗಳು ನಿಜವೂ ಇರಬಹುದು ಅನ್ನುವುದನ್ನ ಕಥೆಗಳ ಕೊನೆಯಲ್ಲಿ ಪೈ ರವರು ಹೇಳಿದ್ದಾರೆ. ಯಕ್ಷಿ , ಯಕ್ಷಿಣಿ ಇವೆಲ್ಲ ಬರುತ್ತೆ ಕೋಸ್ಟಲ್ ಕನ್ನಡಿಗರು ಕನೆಕ್ಟ್ ಆಗ್ಬಹುದು.
Profile Image for pustakamare.
89 reviews13 followers
May 14, 2025
ಹಿಂದೆಲ್ಲ ಕೇಳ್ಕೊಂಡೋ ಇಲ್ಲಾ ಕೇಳಿಸಿಕೊಂಡೋ ಬಂದ ಜನಪದ ಕತೆಗಳ ತರಗ ಅನಿದವು ಇವು. ಭರ್ಜರಿ ಸಮಸ್ಯೆ ಕೊಡೋ ಯಕ್ಷಿಗಳು, ಅವುಗಳನ್ನ ಹಿಡಿದಾಕೋ ಇಲ್ಲಾ ಅವರ ಸಮಸ್ಯೆಗಳಿಗೆ ಪರಿಹಾರ ಕೊಡೋರು, ಕಿನ್ನರಕಿನ್ನರಿಯರು, ದೇವ್ರಿಗೆ ಬಾರೀ ಹತ್ತಿರವಾದೋರು, ದೇವ್ರಿಂದ ವರ ಪಡೆದು ಮಹಾನ್ ವೈದ್ಯರಾದೋರು, ಬಾರೀ ಮಾಂತ್ರಿಕರು, ತಲೆಓಡಿಸಿ ಎದುರಿದ್ದನವವ ಹತ್ರ ಸೈ ಅನಿಸಿಕೊಂಡವರು ಅಂತವೆಲ್ಲವಿರೋ ತಮಾಷೆಯ, ಭಯಾನಕ, ಭಯಂಕ್ರ ಕತೆಗಳು ಇಲ್ಲಿವೆ.
ಚಿಕ್ಕಮಕ್ಕಳಿಗೆ ಹೇಳಿದಂತೆ ತುಂಬಾ ಸರಳವಾಗಿ ಪುಸ್ತಕ ಬರೆದಿರೋದರಿಂದ ಸಖತ್ ಸುಲಭವಾಗಿ ಈ ಪುಸ್ತಕ ಓದಿಸಿಕೊಂಡು ಹೋಗುತ್ತೆ. ಇಂತಹ ಕತೆಗಳೆಲ್ಲ ನಾವು ಚಿಕ್ಕಂದಿನಲ್ಲಿ ಕೇಳಿಸಿಕೊಂಡೇ ಬಂದಿರೋದರಿಂದ, ಅದರಲ್ಲಿ ಆಸಕ್ತಿ ಹೆಚ್ಚಿರೋದರಿಂದ ಎರಡು ಮೂರು ಗಂಟೆಗಳೊಳಗೆ ಪುಸ್ತಕ ಮುಗಿದೇ ಬಿಡುತ್ತೆ. ಲೋಕಲ್ ದೇವ್ರುಗಳಿಂದ ಹಿಡಿದು ವಲಸೆ ಬಂದವರ ತನಕದ ಒಳಗೊಳ್ಳುವಿಕೆಯೆಲ್ಲ ಇಲ್ಲಿರೋ ಕತೆಗಳನ್ನ ಬಾರೀ ಸ್ಪೆಶಲ್ ಅನಿಸದೆ ಇದ್ರು ಮಳಯಾಳಿ ಜನಪದದ ಒಂದು ಸಣ್ಣ ಪರಿಚಯ ಅಥವಾ ಕಲ್ಪನೆ ಸಿಗುತ್ತೆ; ಅಂದ್ರೆ ಅಲ್ಲಿರೋ ಹಳೇಕಾಲದ ಜನರ ಬದುಕು, ಶೈಲಿ, ನೀತಿಗೀತಿ, ಯೋಚನೆಗಳು ಅಂತವೆಲ್ಲ ಹೇಗಿತ್ತು ಅಂತ.
ಇಲ್ಲಿ ಸಖತ್ ಇಷ್ಟವಾದ ಮ್ಯಾಟ್ರು ನನಗೆ ಯಾವ್ದು ಅಂದ್ರೆ ಸಾಧಾರಣ ರಾಕ್ಷಸರನ್ನ ಸಾಯಿಸಿ ಬಿಟ್ರೆ ಅಲ್ಲಿಗೆ ಕತೆ ಮುಗೀತು ಅನ್ನೋದೆ ಹೆಚ್ಚು ಕೇಳಿರೋವಾಗ ಇಲ್ಲಿ ವಿಲನ್‌ಗಳ ಕಷ್ಟ ಕೇಳ್ಕೊಂಡು ದೇವರು, ದೈವಸಂಭೂತರು ಅವರಿಗೂ, ನಂಬಿದ ಜನಕ್ಕೂ ಬ್ಯಾಲೆನ್ಸ್ ಮಾಡ್ಕೊಂಡು ಪರಿಹಾರ ಕೊಡೋದು. ಮಲಯಾಳಿಗಳ ಇಲ್ಲಿರೋ ಬಹುತೇಕ ಕತೆಗಳಲ್ಲಿ ಡಾಕ್ಟ್ರು ಮ್ಯಾಟ್ರು ಆಗೋದು, ಅವರಿಗೆ ದೇವ್ರು ಜಾಸ್ತಿ ಒಲಿಯೋದು. ಬರೀ ಅವ್ರಿಗೆ ಮಾತ್ರ ಅಲ್ಲದೆ ‘ಕೀಳು’ (ಕತೇಲಿ ಇರೋಹಾಗೆ) ಜಾತಿಯವರೂ ತಪಸ್ಸು ಮಾಡಿ ದೇವರನ್ನ ಒಲಿಸಿ ವರ ಪಡೆದು ದೇವರಾಗೋದು; ಅವರಿಗೆ ಹಿಂದಿನ ಜನ್ಮದಲ್ಲಿ ಒಂದು ಶಾಪ ಇತ್ತು ಅದಕ್ಕೆ ಹಾಗೆ ಹುಟ್ಟಿದ್ದ ಈ ಜನ್ಮದಲ್ಲಿ ಅನ್ನೋ ಒಂದು ಸಮರ್ಥನೆಗೆ ಅಂತ ಇನ್ನೊಂದು ಕತೆ ಕೊಡದೆ ಇರೋದು. ಶಬರಿಮಲೆಯ ಕತೆಯೂ ಇಲ್ಲಿದೆ. ಎಲ್ಲಾ ಯೋಚನೆ ಮಾಡಿದ್ರೆ ಬಾರೀ ಯೋಚನೆಗೆ ತಲೆ ಹಾಕೋವಂತದ್ದು ಅಲ್ಲದೆ ಇದ್ರು ಒಂದಷ್ಟು ಆಶ್ಚರ್ಯ ಪಡಿಸೋ ವಿಷಯಗಳಿರುವ ಮಲಯಾಳಿ ಜನಪದ ಕತೆಗಳಂತವು ಇವು; ಚೆನ್ನಾಗಿ ಓದಿಸಿಕೊಂಡು ಹೋಗುತ್ತೆ, ಓದಿ. ಜೈ!
Displaying 1 - 4 of 4 reviews

Can't find what you're looking for?

Get help and learn more about the design.