Jump to ratings and reviews
Rate this book

ಓದುವವರೆಲ್ಲ ಓದುಗರಲ್ಲ! ಹಾಗಾದರೆ? | Oduvavarella Odugaralla Hagadare?

Rate this book

150 pages, Paperback

Published January 1, 2024

Loading...
Loading...

About the author

K. Satyanarayana

34 books1 follower
ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.

1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ.

ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಹಲವಾರು ಕೃತಿಗಳ ಪ್ರಕಟನೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಬಂಧ ಹಾಗೂ ಕಾದಂಬರಿ ಹಾಗೂ ಸಣ್ಣ ಕಥೆಗಳಿಗೆ ಪುರಸ್ಕಾರ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010 ) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಒಟ್ಟು ಸಾಹಿತ್ಯ ಸಾಧನೆಗೆ ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸಾವಿನ ದಶಾವತಾರ ಕಾದಂಬರಿಗೆ ಸೂರ್ಯನಾರಾಯಣ ಚಡಗ ಪ್ರಶಸ್ತಿ ಲಭಿಸಿದೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
0 (0%)
4 stars
1 (33%)
3 stars
2 (66%)
2 stars
0 (0%)
1 star
0 (0%)
Displaying 1 of 1 review
Profile Image for Prashanth Bhat.
2,260 reviews144 followers
June 11, 2025
ಕೆಲವು ಪುಟಗಳ ಬಿಟ್ಟರೆ ಒಬ್ಬ ಓದುಗನಿಗೆ ಈ ಪುಸ್ತಕದಿಂದ ಉಪಯೋಗ ಇದೆ ಎಂದು ಅನಿಸಲಿಲ್ಲ.
ಅಸಂಬದ್ಧ ಚುಟುಕು ಬರೆಯುವ ಡುಂಡಿರಾಜ್,‌ಮನಸಿಗೆ ಬಂದದ್ದೆಲ್ಲ ಎಡಿಟ್ ಮಾಡದೆ ಬರೆದು ಪ್ರಕಟಿಸುವ ಸತ್ಯನಾರಾಯಣ ಇದರಿಂದ ಅವರ ಬರಹಗಳ ಕ್ವಾಲಿಟಿ ಕಡಿಮೆಯಾಗುತ್ತದೆ ಎಂದು ಅರಿತರೆ ಒಳ್ಳೆಯದು.
ಇಲ್ಲವಾದರೆ ಹಳಬರು ಮಾತೇ ನಿಲ್ಲಿಸುವುದಿಲ್ಲ ಮಾರ್ರೇ ಎನ್ನುವ ಹಾಗೆ ಓದುಗರ ಅವಜ್ಞೆಗೆ ಗುರಿಯಾಗಬೇಕಾದೀತು.
ಮುಖಪುಟಕ್ಕೆ ಸ್ಟಾರುಗಳು.
Displaying 1 of 1 review