ನಾನು ಸುಬ್ರಹ್ಮಣ್ಯ, ಹೇಳಿ ಹೊರಟಿರುವ ಕಥೆ ಭೈರವಿ ವೆಂಕಟಸುಬ್ಬಯ್ಯನವರದು, ಯಾರೀ ವೆಂಕಟಸುಬ್ಬಯ್ಯನವರು ಹಾಗು ಅವರನ್ನು ಭೈರವಿ ರಾಗದ ಹೆಸರಿಟ್ಟು ಕರೆಯವುದಾದರೂ ಏತಕ್ಕೆ, ತನ್ನ ಸಂಶೋಧನೆಯಿಂದ ಅವರ ಬಗ್ಗೆ ಹಲವಾರು ವಿಷಯಗಳು ತಿಳಿದುಕೊಂಡೆ ಅದಕ್ಕೆ ಆಸಕ್ತಿ ಮೂಡಿಸಿದವರೇ ರಾಘವೇಂದ್ರರಾಯರು. ರಾಘವೇಂದ್ರರಾಯರಿಗೆ ಚಿತ್ರದುರ್ಗದ ಇತಿಹಾಸದಲ್ಲಿ ಅತ್ಯಂತ ಆಸಕ್ತಿ, ಎಷ್ಟೆಂದರೆ ಕ್ಲಬ್ಬಿನಲ್ಲಿ ನಿತ್ಯವು ಅವರಾಡುವ ಇಸ್ಪೀಟಿನಷ್ಟೆ ಉತ್ಸಾಹ. ಒಮ್ಮೆ ರಾಯರು ನನ್ನನ್ನು ಕರೆದು ಒಂದು ಹಳೆ ಕಾಗದ ಕೊಟ್ಟರು, ಮುಟ್ಟಿದರೆ ಪುಡಿ ಪುಡಿಯಾಗುವ ಸ್ಥಿತಿಯಲ್ಲಿತ್ತು. ರಾಯರಿಗೆ ಅಕಸ್ಮಾತ್ತಾಗಿ ಕೋಟೆಯಲ್ಲಿ ಸಿಕ್ಕ ದಾನಶಾಸನದ ನಕಲು, ನೋಡಿದರೆ ಅದು ಟಿಪ್ಪುವಿನ ಕಾಲದ್ದು, ಅದರಲ್ಲಿ ಟಿಪ್ಪು ಭೈರವಿ ವೆಂಕಟಸುಬ್ಬಯ್ಯನವರಿಗೆ ದಾನಕೆೊಟ್ಟ ವಿಚಾರ ಬೇರೆ ಬರೆದಿತ್ತು. ಭೈರವಿ ಅವರಿಗೆ ಒಲಿದ ರಾಗವಾಗಿತ್ತು, ಅವರ ಹಾಗೆ ಆ ರಾಗವನ್ನು ಬೇರೆ ಯಾರು ಹಾಡುತ್ತಿರಲಿಲ್ಲ, ಅಂಥವರು ಟಿಪ್ಪು ಇದಿರು ಹಾಡಲೊಪ್ಪದೆ ತಮ್ಮ ನಾಲಿಗೆಯನ್ನು ಕತ್ತರಿಸಿಕೊಂಡಿದ್ದಾದರೂ ಏಕೆ ಅದನ್ನು ತಿಳಿಯಲು ರಾಯರು ನನ್ನ ಮೇಲೆ ಜವಾಬ್ದಾರಿ ವಹಿಸಿದರು. ಎಷ್ಟೋ ಜನರಿಗೆ ಭೈರವಿ ವೆಂಕಟಸುಬ್ಬರಾಯರು ಯಾರೆಂದು ತಿಳಿಯದು * ನಿಜ, ನಾವು ನಿರ್ಭಾಗ್ಯರು, ನಮಗೆ ನಮ್ಮ ನಾಡಿನ ಇತಿಹಾಸ, ಇಂತ ಮಹನೀಯರ ವಿಚಾರ, ಏನೂ ತಿಳಿಯದು, ಅವರ ತ್ಯಾಗ, ಬಲಿದಾನ,ಸಾಹಸಗಳು ಕಣ್ಮರೆಯಾಗಿದೆಯಂದು ರಾಯರು ಮರುಕಪಟ್ಟರು*.
ಸಂಶೋಧನೆ ಆರಂಭ ಮಾಡಿದ್ದೇ ಲಿಂಗಾಜೋಯಿಸರಿಂದ ಅವರ ಬಗ್ಗೆ ಮಾಹಿತಿ ಪಡೆಯುವದರಿಂದ, ಅವರಿಗೆ ವೆಂಕಟಸುಬ್ಬಯ್ಯನವರ ಬಗ್ಗೆ ಕೊಂಚ ತಿಳಿದಿದ್ದರು, ಅವರು ನಾಲಿಗೆ ಕತ್ತರಿಸಿಕೊಂಡದ್ದನಷ್ಟೇ ಕೇಳಿರುವುದೆಂದು ಅವರ ಬಗ್ಗೆ ಅಷ್ಟು ಮಾಹಿತಿ ಇಲ್ಲವೆಂದು ಹೇಳುತ್ತಾರೆ. ನಂತರ ಮುರುಗೇಂದ್ರಪ್ಪನವರಿಂದ ಏಕನಾಥಮ್ಮನ ಗುಡೀಲಿ ವೆಂಕಟಸುಬ್ಬಯ್ಯನವರ ಕಲ್ಲು ಇದೆ ಅದರ ಮೇಲೆ ಅವರು ತಮ್ಮ ಸಂಗೀತಾಭ್ಯಾಸವನ್ನು ಮಾಡುತ್ತಿದ್ದರೆಂದು ಆದರೆ ಈಗ ಅದರ ಪಾಡು ಹೇಳತೀರದು ಜನರಿಗೆ ಅದೊಂದು ಸಾಮನ್ಯ ಕಲ್ಲಷ್ಟೇ ಎಂದು ದುಃಖಪಟ್ಟರು. ಅಲ್ಲಿಯೇ ವೀರಣ್ಣನ ಕಲ್ಲಿನ ಬಗ್ಗೆಯೂ ಹೇಳುತ್ತಾರೆ, ಹಿಡಿಂಬೇಶ್ವರ ದೇವಸ್ಥಾನದ ಅರ್ಚಕರಾಗಿದ್ದ ವೀರಣ್ಣನೋರು ಕಡೇ ಪಾಳೆಯಗಾರರು ಪಟ್ಟಕ್ಕೆ ಬಂದ ಸಮಯದಲ್ಲಿ ಪೂಜೆ ಮಾಡುತ್ತಿದ್ದರು, ಪ್ರತಿ ದಿನ ತಪ್ಪದೇ ಪ್ರಸಾದ ತೆಗೆದುಕೊಳ್ಳುವುದು ಪಾಳೆಯಗಾರರ ಪದ್ಧತಿ, ಒಂದು ದಿನ ಎಷ್ಟು ಕಾದರೂ ಬರದೇ ಇದ್ದಾಗ ವೀರಣ್ಣನೋರು ತನ್ನ ಪ್ರೀತಿಯ ಹೆಣ್ಣಿಗೆ ಹೂವು ಮುಡಿಸಲು ಮನೆಗೆ ಹೋದರು ಅದೇ ಸಮಯದಲ್ಲಿ ಕಹಳೆ ಬತೇರಿಗಳು ಮೊಳಗತೊಡಗಿದವು ಪಾಳೆಯಗಾರರು ದೇವಸ್ಥಾನಕ್ಕೆ ಬರುವರೆಂದು, ಭಯದಲ್ಲಿ ಮುಡಿದ ಹೂವನ್ನೇ ತೆಗೆದು ಪಾಳೆಗಾರರಿಗೆ ಕೊಟ್ಟಾಗ ಕೂದಲು ಸಿಗುತ್ತದೆ, ದಾರಿ ಕಾಣದೆ ಅದು ಲಿಂಗದಲ್ಲಿ ಜಡೆ ಇರುವುದಾಗಿ ತಿಳಿಸಿದಾಗ ಪಾಳೆಗಾರರು ನಂಬದೆ ಪರೀಕ್ಷಿಸಲು ಹೊರಟಾಗ ವೀರಣ್ಣನ ಭಕ್ತಿಗೆ ಶಿವನು ಮೆಚ್ಚಿ ಕೂದಲು ಲಿಂದಗದ ಮೇಲೆ ಬಿಟ್ಟಿದ್ದನಂತೆ, ಪಾಳೆಯಗಾರರು ಇದು ಮೋಸವಿರಬಹುದೆಂದು ಕೂದಲು ಎಳೆದಾಗ ರಕ್ತ ಬರುತ್ತದೆ ಅದನ್ನು ಕಂಡ ವೀರಣ್ಣ ನನ್ನಪ್ಪ ನನ್ನ ಮಾನ ಉಳಿಸಲು ನೀನು ರಕ್ತ ಸುರಿಸಬೇಕೆ ಎಂದು ತನ್ನ ತಲೆಯನ್ನೇ ಕತ್ತರಿಸಿಕೊಂಡನಂತೆ ಅದರ ನೆನಪಿಗೆ ಆ ದೃಶ್ಯವನ್ನು ಕಲ್ಲಿನ ಮೇಲೆ ಕೆತ್ತಿ ವೀರಣ್ಣ ಕಲ್ಲು ಎಂದು ಹೆಸರಿಟ್ಟರಂತೆ. ಇದನ್ನು ಕಂಡ ವೆಂಕಟಸುಬ್ಬಯ್ಯ ಇನ್ನು ತನ್ನ ಸಂಗೀತ ಇನ್ನು ತನ್ನ ದೇವರನ್ನು ಹುಡುಕುವುದೆಂದು ಇನ್ನು ಯಾರು ಕರೆದರೂ ಹೋಗಿ ಹಾಡುವುದಿಲ್ಲವೆಂದು, ಕೇಳಲು ಬಯಸಿದರೆ ತನ್ನ ಮನೆಗೆ ಬಂದು ಕೇಳಲಿ ಎಂದು ತನ್ನ ದೇವರನ್ನು ಹುಡುಕಲು ಹೊರಡುತ್ತಾರೆ.
ಶಾಲಾ ಸಮಯದಲ್ಲಿ ಗೋಪಾಲಚಾರ್ಯರು ವೆಂಕಟಸುಬ್ಬಯ್ಯನವರ ಗುರುಗಳಾಗಿದ್ದರು ಅವರನ್ನು ಭೇಟಿಯಾದಾಗ ಕೆಲವು ಮಾಹಿತಿಗಳು ದೊರತವು, ವಿದ್ಯೆ ಆತನಿಗೆ ಹತ್ತಲಿಲ್ಲವೆಂದು ಪಾಠ ಕಲಿಸುವಾಗ ಆತನ ಧ್ಯಾನ ಹಕ್ಕಿಯ ಕೂಗಿನ ಮೇಲೆ ಇರುತ್ತಿತ್ತು, ತಾನು ಹಕ್ಕಿಯಾಗಿಯೇ ಹಾಡಬೇಕೆಂಬ ಬಯಕೆ ಆ ಸಣ್ಣವಯಸ್ಸಿಗೆ ಇತ್ತಂತೆ ಇದನ್ನು ಕಂಡ ಗುರುಗಳು ಈತನು ಒಳ್ಳೆಯ ಸಂಗೀತಗಾರನಾಗುವುದರಲ್ಲಿ ಸಂಶಯವೇ ಇಲ್ಲವೆಂದು ಆತನಿಗೆ ಆಶೀರ್ವಾದ ಮಾಡುತ್ತಾರೆ. ತಾಯಿ ತಂದೆಗೆ ಯೋಚನೆ ಹೇಗಪ್ಪ ಮುಂದೆ ತನ್ನ ಮಗನ ಕಥೆಯಂದು ಆದರೆ ವೆಂಕಟಸುಬ್ಬಯ್ಯನವರಿಗೆ ಮಾವನಾದ ಅನಂತಯ್ಯನವರು ಸಂಗೀತ ಕಲೆಯುವುದಕ್ಕೆ ತುಂಬಾ ಪ್ರೋತ್ಸಾಹಿಸುತ್ತಿದ್ದರು, ಅವರಿಗೆ ಸುಬ್ಬಯ್ಯನವರಿಗೆ ತಂದೆ ತಾಯಿಗಿಂತ ಹೆಚ್ಚು ಅನಂತಯ್ಯನವರೇ, ತಂದೆಯ ಮಾತಿನ ಪ್ರಕಾರ ಜ್ಯೋತಿಷ್ಯವನ್ನು, ತನಗಿಷ್ಟವಾದ ಸಂಗೀತವನ್ನು ಎರಡು ಕಲಿಯೆಂದು ಪ್ರೋತ್ಸಾಹಿಸುತ್ತಾರೆ.
ನಂತರ ಬಯಲುನಾಟಕವಾಡಿಸುವ ಚಿನ್ನಪ್ಪನಿಂದ ಹಲವಾರು ಮಾಹಿತಿಗಳು ದೊರೆಯುತ್ತವೆ. ಮೊದಲು ಪಾಠ ಹೇಳಿಕೊಡುತ್ತಿದ್ದವರು ತಿರುಮಲಯ್ಯನವರು, ಯಾವುದೋ ಘಟನೆಯಿಂದ ಅವರಿಬ್ಬರಲ್ಲಿ ಸಂಗೀತ ಪೈಪೋಟಿ ನಡೆದಾಗ ಗುರುಗಳಾದ ತಿರುಮಲಯ್ಯನವರು ಸೋತು ಸುಬ್ಬಯ್ಯನವರಿಗೆ ತಲೆ ಬಾಗಿ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಪೈಪೋಟಿಯಲ್ಲಿ ವೆಂಕಟಸುಬ್ಬಯ್ಯನವರೇ ಚೆನ್ನಾಗಿ ಹಾಡಿ ಕೀರ್ತಿ ಪಡೆದುಕೊಂಡಿರುತ್ತಾರೆ ಆದರೂ ಯಾವ ಗುರುವೂ ಸುಬ್ಬಯ್ಯನವರನ್ನು ಶಿಷ್ಯನನ್ನಾಗಿ ಸ್ವೀಕರಿಸಲು ಮುಂದೆಬರಲಿಲ್ಲ, ಇದು ಗುರುಗಳ ಶಾಪವೇ ಇರಬಹುದು ಹಾಗು ತಾನು ಗುರುಗಳ ಜೊತೆ ಪಂದ್ಯ ಕಟ್ಟಬಾರದಿತ್ತೆಂದು ವ್ಯಥೆಪಡುತ್ತಾರೆ. ಅಂದಿನಿಂದ ಗುರುಗಳನ್ನು ಹುಡುಕುವುದೇ ಮುಖ್ಯ ಕೆಲಸವಾಗುತ್ತದೆ.
ಒಂದು ದಿನ ಭಿಕಾರಿಯಾದ ಸದಾನಂದ ಬುವಾರ ಭೇಟಿಯಾಗುತ್ತದೆ. ಅವರು ಹಾಡುವುದರಲ್ಲಿ ನಿಸ್ಸೀಮರು, ಅವರನ್ನು ಗುರುಗಳಾಗಿ ಪಡೆಯಲು ಶತ ಸಾಹಸ ಮಾಡಿದಾಗ ಬುವಾ ಕರುಣಿಸಿ ಸಂಗೀತ ಕಲಿಸುಕೊಡುತ್ತಾರೆ, ಕಷ್ಟಪಟ್ಟು ಕಲುತು ಒಳ್ಳೆಯ ಹೆಸರನ್ನೂ ಪಡೆಯುತ್ತಾರೆ, ಯಾವುದೋ ಒಂದು ಕಛೇರಿಯಲ್ಲಿ ಬುವಾರವರಿಗೆ ಸನ್ಮಾನ ಮಾಡಲು ಹೊರಟಾಗ ಅದನ್ನು ಒಪ್ಪದೇ ತನ್ನ ಶಿಷ್ಯನಿಗೆ ತಂಬೂರಿ ಕೊಡಿ ಅಷ್ಟೇ ಸಾಕು ಎಂದು ಕೇಳಿದಾಗ ವೆಂಕಟಸುಬ್ಬಯ್ಯನವರಿಗೆ ತಂಬೂರಿ ಸಿಗುತ್ತದೆ, ನಂತರ ಇನ್ನೂ ಹೆಚ್ಚು ಸಂಗೀತಭ್ಯಾಸವನ್ನು ಮುಂದುವರೆಸಿ ಹಲವಾರು ಕಛೇರಿಗಳನ್ನು ಕೊಡಲು ದಾರಿಮಾಡಿಕೊಡುತ್ತದೆ, ಇದರಿಂದ ವೆಂಕಟಸುಬ್ಬಯ್ಯನವರ ಕೀರ್ತಿ ದುರ್ಗದ ಸುತ್ತಮುತ್ತಲೆಲ್ಲಾ ಹರಡಿ ಅವರ ಸಂಗೀತವನ್ನು ಕೇಳಲು ಗುಂಪು ಗುಂಪಾಗಿ ಬರುತ್ತಿದ್ದರು. ಇದನ್ನು ಕಂಡ ಬುವಾ ಒಂದು ದಿನ ಇನ್ನು ನೀನು ಸಂಗೀತದಲ್ಲಿ ಫಳಗಿದೆ ನನ್ನ ಅವಶ್ಯಕತೆ ಇನ್ನಿಲ್ಲಾ, ಹೆಣ್ಣಿನ ಮೋಹ ಬೇಡ, ಅವರ ಬಲೆಗೆ ಬೀಳದೇ ಯಾವುದಾದರು ಒಂದು ರಾಗದಲ್ಲಿ ನಿಸ್ಸೀಮನಾಗು ಎಂದು ಆಶೀರ್ವಾದ ಮಾಡಿ ಹೊರಟು ಹೋಗುತ್ತಾರೆ. ಅಂದಿನಿಂದ ವೆಂಕಟಸುಬ್ಬಯ್ಯನವರಿಗೆ ರಾಗವನ್ನು ಒಲಿಸಿಕೊಳ್ಳುವ ಹೊಸ ಹುಚ್ಚು ಹಿಡಿಯಿತು.
ಅದೇ ಸಮಯದಲ್ಲಿ ವೇಶ್ಯೆಯಾದ ಚಂದ್ರಸಾನಿಯ ಭೇಟಿಯಾಗುತ್ತದೆ, ಆಕೆಯನ್ನು ಕಾಣಲು ಸಾವಿರ ಹೊನ್ನು ಬೇಕೆಂದು ದಾಸಿಯರು ತಿಳಿಸಿದಾಗ ೨ ರಾಗಗಳನ್ನು ಒತ್ತಿಟ್ಟು ಸಾವಿರ ಹೊನ್ನು ತಂದು ದಾಸಿಯರಿಗೊಪ್ಪಿಸಿ ಚಂದ್ರಸಾನಿಯನ್ನು ಭೇಟಿಯಾಗಿ, ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ, ಅಂದಿನಿಂದ ಚಂದ್ರಿಯದೇ ಧ್ಯಾನ, ಅದರಿಂದ ಸಂಗೀತಭ್ಯಾಸವು ಕುಗ್ಗುತ್ತದೆ, ಇವರ ಸುದ್ಧಿ ಇಡೀ ದುರ್ಗಕ್ಕೆ ಹರಡಿ ನಗೆಪಾಲಾಗುತ್ತಾರೆ, ನಂತರ ಸುದ್ಧಿ ಅನಂತಯ್ಯನವರಿಗೆ ತಿಳಿದಾಗ ಹಾಗು ರಾಗಗಳನ್ನು ಒತ್ತೆ ಇಟ್ಟಿರುವುದು ತಿಳಿದಾಗ ಬೇಸರವಾಗುತ್ತದೆ. ಉಪಾಯವಾಗಿ ಅನಂತಯ್ಯನವರು ವೆಂಕಟಸುಬ್ಬಯ್ಯನವರ ಶ್ರೇಯಸ್ಸಿಗೋಸ್ಕರ ಆಕೆಯ ಮನವೊಲಿಸಿ ಅವರಿಬ್ಬರನ್ನು ಬೇರೆ ಮಾಡುತ್ತಾರೆ, ಚಂದ್ರಸಾನಿ ಅವರ ಹಿತವನ್ನು ಬಯಸಿ ತನ್ನ ಪ್ರೀತಿಯನ್ನೇ ತ್ಯಾಗ ಮಾಡುತ್ತಾಳೆ. ವೆಂಕಟಸುಬ್ಬಯ್ಯನವರಿಗೆ ಚಂದ್ರಸಾನಿ ಆದರ್ಶ ವ್ಯಕ್ತಿಯಾಗಿ ಕಾಣುತ್ತಾಳೆ. ಆಕೆಯ ಮೇಲಿನ ಪ್ರೀತಿಯಿಂದ ಹಾಗು ಗುರುಗಳಿಗೆ ಕೊಟ್ಟ ಮಾತಿನಂತೆ ಕಷ್ಟಪಟ್ಟು ಹಲವಾರು ರಾಗಗಳನ್ನು ಅಭ್ಯಾಸ ಮಾಡಿ ಕಡೆಯಲ್ಲಿ ಭೈರವಿ ರಾಗದಲ್ಲಿ ನಿಸ್ಸೀಮರಾಗುತ್ತಾರೆ. ಅವರ ಕೀರ್ತಿ ಇನ್ನೂ ಹೆಚ್ಚುತ್ತದೆ.
ಈ ಕೀರ್ತಿ ಟಿಪ್ಪುವುಗೂ ಮುಟ್ಟಿ ತನ್ನ ಬೇಗಂಗೆ ಅವರ ಹಾಡು ಕೇಳಲು ಬಯಸಿದಾಗ ವೆಂಕಟಸುಬ್ಬಯ್ಯನವರನ್ನು ಅರಮನೆಗೆ ಕರೆಸಿ ಹಾಡು ಹೇಳಲು ಒತ್ತಾಯಪಡಿಸಿದಾಗ ವೆಂಕಟಸುಬ್ಬಯ್ಯನವರು, ಕೇಳಬೇಕೆಂದರೆ ತನ್ನ ಮನೆಗೆ ಬಂದು ಕೇಳಬೇಕೆಂದು ಶರತ್ತು ಹಾಕುತ್ತಾರೆ, ಪಾಳೆಗಾರರ ಮಾತು ಮೀರಿದರೆ ಶಿಕ್ಷೆ, ನಾಲಿಗೆ ಕತ್ತರಿಸಲೂ ಯೋಚನೆ ಮಾಡುವುದಿಲ್ಲ ಹುಶಾರ್ ಎಂದು ಭೀತಿ ಹುಟ್ಟಿಸಿದರೂ ವೆಂಕಟಸುಬ್ಬಯ್ಯನವರು ಅವರ ಮಾತಿಗೆ ಬಗ್ಗದೆ ತಿರಸ್ಕರಿಸಿ ಹೊರಟು ಹೋಗುತ್ತಾರೆ. ಮರುದಿನ ವೆಂಕಟಸುಬ್ಬಯ್ಯನವರನ್ನು ಕಾಣಲು ಸ್ವತಃ ಹೊರಟ ಟಿಪ್ಪು ಆಗ ಸಂಗೀತಾಭ್ಯಾಸದಲ್ಲಿ ನಿರತರಾಗಿದ್ದ ಸುಬ್ಬಯ್ಯನವರ ಹಾಡುಗಳನ್ನು ಕೇಳಿ ತಲ್ಲೀನನಾಗಿಬಿಡುತ್ತಾನೆ ಹಾಗೆ ಬೆಳಗಿನವರೆಗೂ ಹಾಡುಗಳನ್ನೇ ಕೇಳುತ್ತಾ ಮೈಮರೆತುಬಿಡುತ್ತಾನೆ, ಹಾಡು ನಿಂತಾಗ ಹೋಗಿ ನೋಡಿದರೆ ನಾಲಿಗೆ ಕತ್ತರಿಸಿಕೊಂಡಿರುತ್ತಾರೆ,ನಾಲಿಗೆ ಕತ್ತರಿಸಲು ಟಿಪ್ಪುವಿಗೆ ಅವಕಾಶ ಬಿಡದೆ ಸುಬ್ಬಯ್ಯನವರೆ ಆ ಕೆಲಸವನ್ನು ಮಾಡಿ ಮುಗಿಸ���ರುತ್ತಾರೆ, ಸುಬ್ಬಯ್ಯನವರ ವಿದ್ಯೆ, ನಿಷ್ಟೆ, ನಡತೆಯನ್ನು ಕಂಡು ತಾನು ತಪ್ಪು ಮಾಡಿರುವನೆಂದು ಕಾಲ ಮೇಲೆ ಬಿದ್ದು ಟಿಪ್ಪು ಕಂಬನಿಗರೆಯುತ್ತಾನೆ. ಅವರಿಗೆ ಏನಾದರೂ ಮಾಡಲೇ ಬೇಕೆಂಬ ಹಟತೊಟ್ಟು ಅವರಿಗೆ ದಾನವಾಗಿ ತೆರೆಯೂರಲ್ಲಿ ಭೂಮಿಯನ್ನು ಕೊಟ್ಟು ಸತ್ಕರಿಸುತ್ತಾನೆ, ಒಂದು ದಿನ ನಾಲಿಗೆ ಇಲ್ಲದಿದ್ದರೂ ಸಂಗೀತ ಅಭ್ಯಾಸ ಮಾಡುತ್ತಲೇ ಪ್ರಾಣಬಿಟ್ಟರು ವೆಂಕಟಸುಬ್ಬಯ್ಯನವರು, ನಂತರ ಟಿಪ್ಪು ಸಕಲ ಮರ್ಯಾದೆಗಳಿಂದ ಮುಂದಿನ ಕಾರ್ಯಕ್ರಮದಲ್ಲಿ ಸಹಾಯ ಮಾಡುತ್ತಾನೆ. ಈ ಕಥೆ ಸುಬ್ರಹ್ಮಣ್ಯನಿಗೆ ವೆಂಕಟಸುಬ್ಬಯ್ಯನವರ ವಂಶಸ್ಥರೆೇ ಹೇಳುತ್ತಾರೆ, ಹೇಳುವ ಮೊದಲು ಹಣವನ್ನು ಪಡೆಯುತ್ತಾರೆ. ತಾನು ಊರಿಗೆ ಹೊರಟ ಸಂದರ್ಭದಲ್ಲಿ ಅವರ ಫಟ ಸಿಗುತ್ತದೆ ಅದು ಬೇಕಾದರೆ ೧೦ ರೂಪಾಯಿ ಬೇಡಿಕೆ ಹಾಕಿದಾಗ ದುಃಖವಾಗುತ್ತದೆ, ಆತನಲ್ಲಿ ೨ ರುಪಾಯಿ ಮಾತ್ರ ಇರುತ್ತದೆ , ಕಡೆಗೆ ೨ ರೂಪಾಯಿಗೆ ಫಟ ದಕ್ಕಿಸಿಕೊಂಡಾಗ • ನಿಮ್ಮ ಬಾಳಿಗೆ ನಾವು ಕೊಡುವ ಬೆಲೆ ಇಷ್ಟೇನೆ ಎನಿಸಿತು*.
ವೆಂಕಟಸುಬ್ಬಯ್ಯನವರ ಕಥೆ ರಾಯರಿಗೆ ತಿಳಿಸಿದಾಗ ಕಂಬನಿಗರೆದರು, ಕೊನೆಯಲ್ಲಿ ಈ ಎಲ್ಲಾ ಸಂಗತಿಗಳನ್ನು ತಿಳಿದ ವೆಂಕಟಸುಬ್ಬಯ್ಯನವರ ಬಗ್ಗೆ ಪುಸ್ತಕ ಬರೆಯಲು ಸೂಚಿಸಿದರು. ಇದು ಭೈರವಿ ವೆಂಕಟಸುಬ್ಬಯ್ಯನವರ ಕಥೆ.
ಹಂಸವೂ ಮೂಕವಾಗಿ ಕೊಳಗಳಲ್ಲಿ ತೇಲುವುದನ್ನಷ್ಟೇ ನಾವು ಕಂಡಿದ್ದೇವೆ, ಆದರೆ ಅವು ಸಾಯುವ ಮುನ್ನ ಬಾಯಿ ತೆರೆಯದೇ ಹಾಡು ಹಾಡಿ ಸಾಯುತ್ತವೆ, ಅದನ್ನು ಹಂಸಗೀತೆ ಎನ್ನುತ್ತಾರೆ. ಇಲ್ಲಿನ ಕಥೆಗೆ ಪೂರಕವಾಗಿ ಈ ಶೀರ್ಷಿಕೆ ಸೂಕ್ತ. ನನ್ನ ಓದಿನ ಆರಂಭ ದಿನಗಳಲ್ಲಿ ಈ ಕೃತಿಯನ್ನು ಓದಿ ತುಂಬಾ ಇಷ್ಟ ಪಟ್ಟಿದ್ದೆ, ಈಗೇಕೋ ಇದೊಂದು ಸಾಧಾರಣ ಕೃತಿ ಎನಿಸಿತು.
After reading this book I feel like visiting Chitradurga places which were narrated excellently by writer T.R.S.
Book is about a Singer Bhairavi Venkatasubbaiah... His not so normal childhood, his search for Sangeetha Guru, Pure love between him and prostitute Chandrasaani and finally him attaining the perfection in singing.
Focused mind, strong desire and hardest efforts are involved to attain the perfection. That's how he attain the divinity in singing.
This novel is also made into a film, cast by my favourite actor Ananthnag.
I picked this book because I loved Ta Ra Su's novels and my GR friends like Nayaz had rated this as 5 stars. The book is only about 200 pages long and by 100/110 page I was thinking this is a 3 star book and why have so many people rated so highly ... All that changed when Chandrasani character entered ... The book is what I would rate a 4.5 star book! Totally loved it ... What I find amazing is that the author who wrote durgasthamana (a war book, veera rasa) also wrote such a sensitive book like this .. The way he describes the love between Venkatasubbayya and Chandrasani had me hooked ... I highly recommend this book!
ತ ರಾ ಸು ರವರ ಪ್ರಸಿದ್ದವಾದ ಕಾದಂಬರಿಗಳಲ್ಲಿ ಇದು ಒಂದು, ವೆಂಕಟಸುಬ್ಬಯ್ಯ ನವರು ಚಿತ್ರದುರ್ಗ'ದ ನಾಯಕರ ಕಾಲದಲ್ಲಿ ಒಬ್ಬ ಪ್ರತಿಭಾನ್ವಿತ ಹಾಡುಗಾರ'ರಾಗಿದ್ದರು. ಇವರು ಭೈರವಿ ರಾಗವನ್ನು ಹಾಡುವುದನ್ನು ಕೇಳಲೆಂದು ಅದೆಷ್ಟೋ ದೇಶಗಳಿಂದ ಸಂಗೀತ ಮೇಧಾವಿಗಳು ಬರುತ್ತಿದ್ದರು. ಕಾದಂಬರಿ ಯಲ್ಲಿ ತ ರಾ ಸು ರವರೆ ಕಥೆ ಹೇಳುವ ಪಾತ್ರವನ್ನು ವಹಿಸಿದ್ದಾರೆ, ಹಲವಾರು ಜನಗಳೊಡನೆ ವೆಂಕಟಸುಬ್ಬಯ್ಯ ನವರ ಬಗ್ಗೆ ಕೇಳುವುದನ್ನ ಭಾಗ ಭಾಗವನ್ನಾಗಿ ಮಾಡಿ ಬರೆದಿದ್ದಾರೆ. ವೆಂಕಟಸುಬ್ಬಯ್ಯ ರವರ ಬಾಲ್ಯ, ಅವರ ಗುರುವಿನೊಡನೆ ಜಗಳ, ಹೊಸ ಗುರುವಿನ ಹುಡುಕಾಟ, ಅವರ ಪ್ರೇಯಸಿ, ಸಂಗೀತವನ್ನು ದೇವರನ್ನಾಗಿ ಕಾಣುವುದು ಹಾಗು ಕೊನೆಯಲ್ಲಿ ಟಿಪ್ಪು ಸುಲ್ತಾನನ ಜೊತೆ ವಾದ ವಿವಾದಗಳು ಎಲ್ಲವು ಬಹಳ ರೋಮಾಂಚನವಾಗಿದೆ. ಇದನ್ನು ಚಲನಚಿತ್ರವನ್ನಾಗಿ ಕೂಡ ಮಾಡಿ, ರಾಷ್ಟ್ರೀಯ ಪ್ರಶಸ್ತಿಯು ಬಂದಿದೆ.
very neatly written novel. It explains Chithradurga Fort and surrounding areas very well. If one already visited these area, he/she can recall, else it will give good input to visit the place. The main characters are very well demonstrated.
ಕೃತಿ : ಹಂಸಗೀತೆ ಲೇಖಕರು : ತ.ರಾ.ಸು ಪ್ರಕಾಶನ : ಹೇಮಂತ ಸಾಹಿತ್ಯ ಬೆಲೆ : ೧೪೦ ಪುಟಗಳು : ೨೦೦
ವರ್ಷದ ಮೊದಲ ಓದು . ಸಾಮಾನ್ಯವಾಗಿ ಓದಿದ ಎಲ್ಲ ಪುಸ್ತಕಗಳ ಬಗ್ಗೆ ಪುಸ್ತಕ ಪರಿಚಯ ಲೇಖನ / ವಿಮರ್ಶೆ ಬರೆಯುವ ತಾಳ್ಮೆ ಮತ್ತು ಸಮಯ ಎರಡೂ ನನಗಿಲ್ಲ . ಆದರೆ ಕೆಲವು ಪುಸ್ತಕಗಳನ್ನು ಓದಿದ ಮೇಲೆ ಅದರ ಬಗ್ಗೆ ಇನ್ನೊಬ್ಬರ ಮುಂದೆ ಹೇಳದೇ ಹೋದರೆ ಮನಸಿಗೆ ಶಾಂತಿ ದೊರಕದಿರದು ಅನಿಸುತ್ತೆ . ತ.ರಾ.ಸು ಅವರ 'ಹಂಸಗೀತೆ' ಅದೇ ತರಹದ್ದು .
ಲೇಖಕರಿಗೆ ದಾನಶಾಸನದ ನಕಲು ಪ್ರತಿಯೊಂದು ಸಿಕ್ಕು , ಅದರಲ್ಲಿ ಟಿಪ್ಪುಸುಲ್ತಾನ್ ಚಿತ್ರದುರ್ಗದ ಭೈರವಿ ವೆಂಕಟಸುಬ್ಬಯ್ಯ ಎನ್ನುವವರಿಗೆ ದಾನ ಕೊಟ್ಟ ವಿಚಾರ ತಿಳಿಯುತ್ತೆ . ವೆಂಕಟಸುಬ್ಬಯ್ಯ ಭಾರಿ ಸಂಗೀತ ವಿದ್ವಾಂಸನಂತೆ , ಟಿಪ್ಪುನ ಎದುರಿಗೆ ಹಾಡಲೊಪ್ಪದೆ , ತಮ್ಮ ನಾಲಿಗೆ ಕತ್ತರಿಸಿಕೊಂಡರಂತೆ , ಟಿಪ್ಪು ಮೆಚ್ಚಿ , ಅವರಿಗೆ ತೊರೆಯುರ ಬಳಿ ಜಮೀನು ಮಾನ್ಯ ಕೊಟ್ಟನಂತೆ . ವೆಂಕಟಸುಬ್ಬಯ್ಯನವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಲೇಖರ ಪ್ರಯತ್ನವೇ ಕಥೆಯ ಜೀವಾಳ .
ಲೇಖಕರು ಲಿಂಗಜೋಯಿಸರನ್ನು , ಏಕನಾಥೇಶ್ವರಿ ದೇವಾಲಯದ ಪೂಜಾರಿ ವೀರಭದ್ರಪ್ಪನ್ನು , ಕುರುಮರಡಿಯ ಚಿನ್ನಪ್ಪನನ್ನ ಕೊನೆಗೆ ಪುಟ್ಟತಾಯಮ್ಮನನ್ನ ಭೇಟಿ ಮಾಡಿ ವೆಂಕಟಸುಬ್ಬಯ್ಯನವರ ಬಗ್ಗೆ ಮಾಹಿತಿ ಕಲೆಹಾಕುತ್ತಾರೆ .
ಹಿಡಂಬೇಶ್ವವರ ಗುಡಿಯ ಅರ್ಚಕ ವೀರಣ್ಣ ತನ್ನ ತಲೆಯನ್ನೇ ಕತ್ತರಿಸಿಕೊಳ್ಳುವ ಕಥೆ ಓದಿದಾಗ ಆಗುವ ರೋಮಾಂಚನ , ವೆಂಕಟಸುಬ್ಬಯ್ಯ ತನ್ನ ಗುರು ತಿರುಮಲಯ್ಯನನ್ನು ಸಂಗೀತ ಸ್ಪರ್ಧೆಯಲ್ಲಿ ಸೋಲಿಸಿದ ಮೇಲೆ ತಿರುಮಲಯ್ಯ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಾಗ , ಅವನಿಗೆ ಗರ್ವವಿದ್ದರೂ ಸಾಯಬಾರದಿತ್ತು ಅನ್ನೋ ಕಸಿವಿಸಿ , ಸದಾನಂದ ಬುವಾರ ಗುರುಗಳು ಸಂಗೀತ ಕಲಿಸುವ ಮುಂಚೆ ವೆಂಕಟಸುಬ್ಬಯ್ಯನಿಗೆ ಕಾಡಿಸುವ ಪರಿ , ವೆಂಕಟಸುಬ್ಬಯ್ಯನಿಗೆ ಹಾಡಿನ ಹುಚ್ಚು ಬಿಟ್ಟು ಚಂದ್ರಸಾನಿಯ ಹುಚ್ಚು ಹಿಡಿದ ಆಕಸ್ಮಿಕ ಗಳಿಗೆ , ಅವಳ ಮೋಹಕ್ಕೆ ಬಿದ್ದು , ಅವಳನ್ನು ನೋಡಲು ಸಾವಿರ ಹೊನ್ನು ಕೊಡಬೇಕು ಅಂತ ಗೊತ್ತಾದಾಗ , ರಾಗವೆರಡು ಒತ್ತೆಯಿಟ್ಟು ಸಾವಿರ ಹೊನ್ನು ಹೊಂದಿಸಿದ್ದು , ಟಿಪ್ಪುನ ಎದಿರು ಹಾಡಲು ಒಪ್ಪದ ವೆಂಕಟಸುಬ್ಬಯ್ಯ ತನ್ನ ನಾಲಿಗೆ ಕತ್ತರಿಸಿಕೊಂಡಾಗ , ನೂರಾರು ಯುದ್ಧ , ರಕ್ತಪಾತ ನೋಡಿದ ಟಿಪ್ಪುವೂ ಕತ್ತರಿಸಿದ ನಾಲಿಗೆ ನೋಡಿ ಹೆದರಿ ಗಡಗಡ ನಡುಗಿದ್ದು - ಇವೆಲ್ಲ ಓದಿದ ಮೇಲೆ ಕಥೆ ಹೇಳುವುದರಲ್ಲಿ ತ.ರಾ.ಸು ನಿಸ್ಸಿಮರು ಅಂತ ಅನಿಸಿತು .
ಕಥೆಯ ಕೊನೆಯಲ್ಲಿ ತ.ರಾ.ಸು ಹೇಳುವಂತೆ - 'ಓದಿದ ಕಣ್ಣಿನಿಂದ ಒಂದು ಹನಿ ಉರುಳಿದರೆ - ಅದೇ ದರಿದ್ರ ವರ್ತಮಾನಕಾಲ, ಭವ್ಯ ಗತಕಾಲಕ್ಕೆ ನೀಡುವ ಅಣಿಮುತ್ತಿನ ಕಾಣಿಕೆ ' . ನನ್ನ ಕಣ್ಣಲ್ಲಿ ಕಣ್ಣೀರು ಬರದೇ ಇದ್ದರೂ , ಹಿರಿಯೂರ ಪಕ್ಕದಲ್ಲಿ ಇರುವ ತೊರೆಯೂರಿಗೆ ಹೋಗಿ ವೆಂಕಟಸುಬ್ಬಯ್ಯ ಪ್ರಾಣ ಬಿಟ್ಟ ಅಮ್ಮನವರ ಗುಡಿಗೆ ಹೋಗಿಬರಬೇಕು ಅನಿಸಬೇಕಾದರೆ , ನನಗೆ 'ಹಂಸಗೀತೆ' ಪುಸ್ತಕ ಅದೆಷ್ಟು ಇಷ್ಟವಾಗಿರಬೇಕು ?
ಎಂದಿನಂತೆ ನನಗಿಷ್ಟವಾದ ಸಾಲುಗಳು : ೧. ಬರೀ ಅಕ್ಷರ ಓದಿದರೆ ಬಂತೆ ಭಾಗ್ಯ ? ೨. ಮುದುಕರ ಮಾತು , ಕುಡಿದೋರ ನಡೆ ಹಾಗೆ . ಎಲ್ಲಿಂದ ಎಲ್ಲಿಗೂ ಓಡಾಡುತ್ತೆ . ೩. ನೆರಳು ನಂಬಿ ಬದುಕಬಾರದು ೪. ಮನಸ್ಸಿಗೆ ಯಾವುದಾದರೂ ಕೆಲಸ ಬೇಡವಾದಾಗ , ಅದು ತೋರಿಕೆಗೆ ಸಹಜವೆಂದೇ ಕಾಣುವ ನೆಪಕ್ಕೆ ಜೋತುಬಿದ್ದು , ಆ ಕೆಲಸ ಮಾಡುವುದನ್ನು ತಪ್ಪಿಸಿಕೊಳ್ಳುತ್ತದೆ . ೫. ಮನುಷ್ಯ ಜೀವ ಆಷಾಢದ ಮೋಡವಿದ್ದಂತೆ ! ಗಾಳಿ ಬಿಸಿದರೆ ಬಯಲು ೬. ಒಲ್ಲದ ಕುದುರೆಗೆ ನೀರು ಕುಡಿಸುವುದು ಯಾರಿಗೆ ಸಾಧ್ಯ ? ೭. ಅಪ್ರಿಯವಾದ ಸತ್ಯವನ್ನು ಆಡಬಾರದು ೮ .ಮನುಷ್ಯನಿಗೆ ಅವನ ಅಹಂಕಾರವೇ ಪರಮ ವೈರಿ ೯. ಕೆಲವು ವೇಳೆ ಕಟುವಾದರೂ , ಸತ್ಯವನ್ನು ಮರೆಮಾಚದೆ ಹೇಳುವುದು ಆಪ್ತರ ಕರ್ತವ್ಯ . ೧೦. ಸಾತ್ವಿಕ ಅತೃಪ್ತಿ , ಪ್ರಗತಿಯ ತಾಯಿ .
ತ. ರಾ. ಸು. ಅವರ ಹಂಸಗೀತೆ ಹೆಸರೇ ಹೇಳುವಂತೆ ಸಂಗೀತಕ್ಕೆ ಸಂಬಂಧಪಟ್ಟ, ಚಿತ್ರದುರ್ಗ ಆಸ್ಥಾನದಲ್ಲಿ ಹಾಡುತ್ತಿದ್ದ ಒಬ್ಬ ಸಂಗೀತಗಾರನೊಬ್ಬನ ಬಾಳಿನ ಹಂದರದ ಮೇಲೆ ರಚನೆಯಾಗಿರುವ ಕಾದಂಬರಿ. ತ. ರಾ. ಸು ಅವರು ಚಿತ್ರದುರ್ಗದ ಇತಿಹಾಸದ ಕುರಿತು ಐತಿಹಾಸಿಕ ಕಾದಂಬರಿ ಸರಣಿಯನ್ನೇ ಬರೆದಿದ್ದಾರೆ, ಹಾಗಾಗಿ “ಹಂಸಗೀತೆ”ಯೂ ಇತಿಹಾಸದ ಯಾವುದೋ ನೈಜಘಟನೆಯ ಸುತ್ತ ಹೆಣೆದಿರುವ ಕಾದಂಬರಿಯೆಂದು ತಿಳಿದಿದ್ದೆ, ಮುನ್ನುಡಿ ಓದಿದಾಗಲೇ ತಿಳಿದಿದ್ದು ಈ ಕಾದಂಬರಿಯ ಕಥೆ ಪಾತ್ರಗಳೆಲ್ಲವೂ ಕಲ್ಪನಾಸೃಷ್ಟಿಯೆಂದು. ಆದರೆ ಎಲ್ಲಿಯೂ ನನಗೆ ಇದೊಂದು ಕಾಲ್ಪನಿಕ ಕಾದಂಬರಿ ಎನಿಸಲೇ ಇಲ್ಲ, ತ. ರಾ. ಸು.ಅವರ ವಿಶಾಲವಾದ ಭಾಷಾಸಮೃದ್ಧಿ, ಚಿತ್ರದುರ್ಗ ಆಸ್ಥಾನದ ಚಿತ್ರಮಯವಾದ ವರ್ಣನೆ, ಅಂತಃಕರಣ ಉಕ್ಕಿಬರುವ ಕಾವ್ಯಮಯ ಸಂಭಾಷಣೆ, ಇವೆಲ್ಲವೂ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ಭಾಷೆ ಮತ್ತು ಬರವಣಿಗೆ ಎಷ್ಟು ಉತ್ಕೃಷ್ಟವಾಗಿದೆ ಎಂದರೆ, ಕೆಲವೊಂದು ಸಾಲುಗಳನ್ನು ಹತ್ತು ಬಾರಿ ಓದಿದ್ದೇನೆ, ಓದನ್ನು ನಿಲ್ಲಿಸಿ ಅದೇ ಸಾಲುಗಳ ಬಗ್ಗೆ ಯೋಚಿಸಿದ್ದೇನೆ ಸಹ.
ಲೇಖಕರು ಸಂಗೀತವನ್ನು ಕಲೆಯಾಗಷ್ಟೇ ಅಲ್ಲದೆ ಪಾತ್ರಗಳ ಮೂಲಕ ತಾತ್ವಿಕ ಮತ್ತು ಆಧ್ಯಾತ್ಮಿಕ ನೆಲೆಯಲ್ಲೂ ಚರ್ಚಿಸಿರುವುದನ್ನು ಕಾಣಬಹುದು. ಸಂಗೀತದಲ್ಲಿ ಆಸಕ್ತಿಯಿರುವವರು ಅಥವಾ ಅಭ್ಯಾಸ ಮಾಡುತ್ತಿರುವವರು ಓದಲೇಬೇಕಾದ ಕೃತಿಯಿದು. ಮುಖ್ಯಪಾತ್ರವಾದ ಭೈರವಿ ವೆಂಕಟಸುಬ್ಬಯ್ಯನವರ ಜೀವನದ ಹಂದರ ಅದ್ಭುತವಾಗಿ ಮೂಡಿಬಂದಿದೆ, ಆತನ ಪ್ರೇಮಕಥೆ, ತ್ಯಾಗ, ಇಚ್ಛಾಶಕ್ತಿ ಮತ್ತು ಕೊನೆಯಲ್ಲಿ ಟಿಪ್ಪುವಿನೆದುರಲ್ಲಿ ಹಾಡಲು ಒಪ್ಪದೆ ತನ್ನ ನಾಲಿಗೆಯನ್ನೇ ಕತ್ತರಿಸಿಕೊಳ್ಳುವ ಸನ್ನಿವೇಶವಂತೂ ರೋಚಕವಾಗಿದೆ.
ಈ ಪುಸ್ತಕಕ್ಕೆ ವಿಮರ್ಶೆ ಬರಿಯುವಷ್ಟು ಸಾಮರ್ಥ್ಯ ನನ್ನಲ್ಲಿಲ್ಲವಾದರೂ ನನಗನಿಸಿದ ಕೆಲವು ವಿಷಯಗಳನ್ನು ಇಲ್ಲಿ ಹೇಳಲು ಬಯಸುತ್ತೇನೆ.
ಪುಸ್ತಕವನ್ನು ಓದುತ್ತಿದ್ದರೆ ನಾವೇ ಅಲ್ಲಿದ್ದೇವೆ ಅನ್ನಿಸುತ್ತದೆ. ವ್ಯಕ್ತಿ ಹಾಗೂ ವ್ಯಕ್ತಿ ಪರಿಚಯ ಕಣ್ಣಿಗೆ ಕಟ್ಟುವ ಹಾಗೆ ಬರೆದಿದ್ದಾರೆ ತ ರಾ ಸು ಅವರು.
ಈ ಕಾದಂಬರಿ ಹೋಗುವ ಧಾಟಿ, ಕಥೆಯನ್ನು ಅನಾವರಣಗೊಳಿಸುವ ಬಗೆ ತುಂಬಾ ಇಷ್ಟವಾಯಿತು. ಭೈರವಿ ವೆಂಕಟಸುಬ್ಬಯ್ಯ ಅನುಭವಿಸುವ ಎಲ್ಲಾ ನೋವು ನಲಿವುಗಳು ನಮ್ಮದೇ ಎಂದು ಭಾಸವಾಗುತ್ತದೆ.
ಕಾದಂಬರಿಯನ್ನು ಓದುವಾಗ ನಮ್ಮ ಗತಕಾಲದ ಎಷ್ಟೋ ಕಥೆಗಳು ನಮ್ಮನ್ನು ತಲುಪದೇ ನಾಶವಾಗಿವೆ ಎಂಬ ಸತ್ಯ ಬಹಳ ಕಟುವಾಗಿ ನನ್ನನ್ನು ಕಾಡಿತು. ನಮ್ಮ ಪುರಾತನ ದೇವಾಲಯಗಳು, ವಾಸ್ತುಶಿಲ್ಪಗಳ ಬಗ್ಗೆ ನಮಗೆ ಎಷ್ಟು ಕಡಿಮೆ ಕಾಳಜಿ ಇದೆ ಅದರ ಸಂರಕ್ಷಣೆಗೆ ನಾವು ಏನನ್ನೂ ಮಾಡುತ್ತಿಲ್ಲ ಎಂಬ ದುಃಖ ಬಹುಶಃ ನನ್ನಲ್ಲಿ ಹಾಗೆ ಉಳಿಯುತ್ತದೆ.
This was first book of Ta Ra Su Sir. Though i am a fan of Bhyrappa Sir. I enjoyed this book every bit.
Beautifully written. Some of the characters were just awesome including Chandrasani, Bhuva, Venkata Subbayya.
How a legend gets lost in history has been very well described in this novel. The dedication, the struggle, intention to go the distance to learn - all have been portrayed really well in this novel.
Tarasu builds the picture of the popular singer in front of reader eyes like a sculpture of beautiful godess. The prose about how nadopasana ( worship of the god through ) and brahmopasana ( worship of the god as brahman) actually the same. It alleviates the story to a different level altogether. One of the best tarasu novel I have read.
Never knew that something like this has happened in the history of Chitradurga. Its mostly onake obavva , madakarinayaka or some other palegara. Amazing narration and great story. Definitely it will be different feeling when I visit ekanatheshwari, hidambeshwara Temple in the fort.
ಚಿತ್ರದುರ್ಗದ ಆಸ್ಥಾನ ಸಂಗೀತ ವಿದ್ವಾಂಸರಾದಂತ ವೆಂಕಟಸುಬ್ಬಯ್ಯರ ಕಥೆ. ತರಾಸು ರವರು ಹೇಳಿದಂತೆ ಭವ್ಯ ಭೂತಕಾಲದಲ್ಲಿದ್ದ ಮಹಾನ್ ವ್ಯಕ್ತಿಗಳನ್ನ, ದರಿದ್ರ ವರ್ತಮಾನದಲ್ಲಿರುವ ನಾವುಗಳು ಓದಿ ತಿಳಿದಿಕೊಳ್ಳೋದೇ ನಾವುಗಳು ಅವರಿಗೆ ಕೊಡುವ ಒಂದು ಗೌರವ.
This is my first reading experience with Ta.Ra.Su book. It's a story of great singer Venkata subbayiah mainly concentrate on his childhood, the way he struggled to become singer, love and his death.. The heart touching narration takes place when he found his guru and love with prostitute Chandrasaani...