Yashwant Vithoba Chittal was a Kannada fiction writer born in Hanehalli, Uttara Kannada District
He completed his primary school education from his village school and his high school from the Gibbs High School, Kumta (1944).Later he did his Bachelors in science and Bachelors in technology both from Bombay University being a top ranker and gold medalist in the year 1955 and master's degree in chemical engineering from Stevens Institute of Technology, United States, and simultaneously pursued a career in science and technology along with literature. His contributions in the field of Polymer Science and synthetic resins was well recognized and he was selected as Fellow of Plastics and Rubber Institute, London.
He is well know for his short stories as well as novels earning him Karnataka Sahitya Academy Award, Sahitya Academy Award, Vardhamana Award, Adikavi Pampa Award etc
ಯಶವಂತ ಚಿತ್ತಾಲರ ಐದು ಕಾದಂಬರಿಗಳ ಪೈಕಿ ನಾಲ್ಕು ಕಾದಂಬರಿಗಳನ್ನು ಓದಿಯಾಗಿತ್ತು. ಆದರೆ ಮೇಲಿನ ಕೃತಿಯನ್ನು ಓದಲು ಧೈರ್ಯ ಸಾಕಾಗಿರಲಿಲ್ಲ. ಅದಕ್ಕೆ ಕಾರಣ ಅವರ ಶೈಲಿ ಮತ್ತು ೩೯೬ ಪುಟಗಳ ಬೃಹತ್ ಕಾದಂಬರಿ ಎಂಬುದು. ಅವರನ್ನು ಓದಲು ಬೇಕಾಗುವ ಸಮಯ ಇತರರಿಗಿಂತ ಮೂರ್ನಾಲ್ಕು ಪಟ್ಟು ಹೆಚ್ಚು. ಇತರೆ ಲೇಖಕರಂತೆ ಒಂದೇ ಗುಕ್ಕಿನಲ್ಲಿ ಅವರು ಕೃತಿಗಳನ್ನು ಓದಲಾಗುವುದದಿಲ್ಲ. ಆದರೂ ಬಹಳ ಗಂಭೀರವಾಗಿ ಮತ್ತು ಗಹನವಾಗಿರುವ ಅವರ ಕೃತಿಗಳು ಓದುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ.
ವ್ಯಕ್ತಿಯೊಬ್ಬನ ಮನಸ್ಸಿನೊಳಗೆ ನಡೆಯಬಹುದಾದ ಹೊಯ್ದಾಟಗಳು, ತುಮುಲಗಳು, ಮನಸ್ಸಾನ್ನಾವರಿಸುವ ಗಾಢ ವಿಷಾದ ಭಾವಗಳನ್ನು ಅಷ್ಟೇ ದಟ್ಟವಾಗಿ ವಿವರಿಸುವಲ್ಲಿ ಚಿತ್ತಾಲರು ಎತ್ತಿದ ಕೈ. ಅವರ ವಿವರಗಳ ತೀವ್ರತೆ ನಮ್ಮಲ್ಲಿಯೂ ವಿಷಾದದ ಹೊಗೆಯನ್ನೆಬ್ಬಿಸಿ ಭಾವನೆಗಳನ್ನು ಮಸುಕಾಗಿಸುತ್ತವೆ. ಯಾವುದೇ ಕೃತಿಯನ್ನು ಕಾಲಾನುಕ್ರಮದಲ್ಲಿ ಜೋಡಿಸದೆ ತುಂಡು ತುಂಡು ಚಿತ್ರಣಗಳಾಗಿ ಕೊನೆಗೆ ಎಲ್ಲವನ್ನು ಒಂದು ಬಿಂದುವಿನಲ್ಲಿ ಸೇರಿಸುತ್ತಾ ಕೆಲವು ವಿಚಾರಗಳನ್ನು ವಾಚಕರ ಊಹೆಗೆ ಬಿಡುವುದು ಅವರ ಜಾಣ್ಮೆ ಗೆ ಉದಾಹರಣೆ…
ತಾನಾಯಿತು ತನ್ನ ಪಾಡಾಯಿತು ಎಂದು ಜೀವಿಸುವ ಒಬ್ಬ ಸಾಮಾನ್ಯ ವ್ಯಕ್ತಿಯ ಮನೆಯ ಮೇಲೆ ಭೂ ಮಾಫಿಯಾದ ಕಣ್ಣು ಬೀಳುತ್ತದೆ. ಎಷ್ಟೇ ಆಸೆ ಆಮಿಷಗಳನ್ನು ಒಡ್ಡಿದರೂ ವಿಚಲಿತನಾಗದ ಪುರುಷೋತ್ತಮನ ಸುತ್ತ ಅವರ ಕಬಂಧ ಬಾಹುಗಳು ಸುತ್ತುವರೆಯುತ್ತವೆ. ಎಲ್ಲಿಯವರೆಗೆಂದರೆ ಅವನ ಇಡೀ ಜೀವಮಾನದಲ್ಲಿ ಎರಡೇ ಬಾರಿ ಹೋಗಿದ್ದ ಹನೇಹಳ್ಳಿಯ ಕುಟುಂಬದ ದಾಯಾದಿ ಕಲಹ, ಸರ್ಪಹತ್ಯಾ ದೋಷ, ಉಢಾಳನಾಗಿದ್ದ, ಹದಿಹರೆಯದಲ್ಲಿಯೇ ವೇಶ್ಯೆಯ ಮಗಳನ್ನು ಹಾರಿಸಿಕೊಂಡು ಹೋದನೆಂಬ ಅಪಖ್ಯಾತಿಗೆ ತುತ್ತಾದ ಮಂಜುನಾಥ, ವೆಂಕಟದಾಸು, ನಾಥಾನಿ ಕುಟುಂಬ ಮತ್ತು ವಿಲಾಸರಾವ್ ಎಂಬ ರಾಜಕೀಯ ಪುಢಾರಿಗಳ ಕುತಂತ್ರ ಒಂದಕ್ಕೊಂದು ತಳುಕುಹಾಕಿಕೊಂಡು ಮುಂದೇನು ಮುಂದೇನು ಎಂಬಂತೆ ಪ್ರತಿಯೊಂದು ಅಧ್ಯಾಯವೂ ಕುತೂಹಲವನ್ನು ಕೆರಳಿಸುತ್ತಾ ಹೋಗುತ್ತದೆ. ಪುರುಷೋತ್ತಮನ ಮುತ್ತಜ್ಜ ಮತ್ತು ಆತನ ಡೈರಿ, ಸದಾಶಿವ ಮಾಮ, ಸುಬ್ಬರಾಯರು ಶ್ರೀಧರನ ಕುಟುಂಬ ತಮಗರಿವಿಲ್ಲದಂತೆಯೇ ಈ ಸುಳಿಯೊಳಗೆ ಸಿಕ್ಕಿ ಒದ್ದಾಡುತ್ತದೆ. ತಮ್ಮ ಕಾರ್ಯಸಾಧನೆಗೋಸ್ಕರ ಒಬ್ಬರು ಮೇಲೆ ಒಬ್ಬರು ನಡೆಸುವ ತಂತ್ರ ಪ್ರತಿತಂತ್ರಗಳು ಮನುಷ್ಯ ಮನಸ್ಸಿನ ಆಸೆ ದುರಾಸೆಗಳನ್ನು, ಶಕ್ತಿ ಮಿತಿಗಳನ್ನು, ಮನೋದೌರ್ಬಲ್ಯಗಳನ್ನು ಬಹಳ ವಿಸ್ತಾರವಾಗಿ ಮಾರ್ಮಿಕವಾಗಿ ಅನಾವರಣಗೊಳಿಸುತ್ತದೆ.
ಈ ಕೆಳಗಿನ ಸಾಲುಗಳು ಅವರ ಬರಹದ ಝಲಕ್ಕನ್ನು ಸ್ಪಷ್ಟಪಡಿಸುತ್ತವೆ.
"ಬದುಕಿಗೆ ಅರ್ಥವೇನು? ಎಂಬ ಪ್ರಶ್ನೆ ವ್ಯಕ್ತಿಗೆ ಸೇರಿದ್ದಲ್ಲ. ಬದುಕೇ ಈ ಪ್ರಶ್ನೆಯನ್ನು ವ್ಯಕ್ತಿಗೆ ಹಾಕುತ್ತದೆಯಂತೆ. ಜೀವನದ ಸಾರ್ಥಕತೆಯನ್ನು ಪ್ರಶ್ನಿಸಹಚ್ಚುವ ದುರ್ಧರ ಪ್ರಸಂಗಗಳು ಬದುಕು ನಮಗೆ ಹಾಕುವ ಪ್ರಶ್ನೆಗಳಿಗೆ ಉದಾಹರಣೆಗಳು. ಬುದ್ಧನಿಗೆ ಎದುರಾದ ಜರ್ಜರಿತನಾದ ಮುದುಕ, ರೋಗಿ, ಹೆಣ ಮತ್ತು ಬೈರಾಗಿ ಅವನಿಗೆದುರಾದ ಪ್ರಶ್ನೆಗಳಾಗಿದ್ದವು. ಆ ಮಹಾಚೈತನ್ಯ ಜವಾಬು ಕೊಟ್ಟದ್ದು ಎಂತಹಾ ಭವ್ಯ ಕ್ರಿಯೆಯಿಂದ?"
"ಸಾವಿನ ಎದುರು ಪ್ರಶ್ನಿಸಿಕೊಳ್ಳಬೇಕಾದದ್ದು ನಮ್ಮ ಅಹಂಕಾರವನ್ನೇ ಹೊರತು ಬದುಕುವ ಉದ್ದೇಶವನ್ನಲ್ಲ"
ಮನೋವ್ಯಾಪಾರಗಳ ಸಂಧಿಗ್ಧತೆಗಳನ್ನು ಗಾಢವಾಗಿ ಅವಲೋಕಿಸಿ ಬಗೆದಷ್ಟೂ ಆಳಕ್ಕೆ ಇಳಿಯುವಂತೆ ಚಿತ್ರಿಸುವ ಚಿತ್ತಾಲರ ಕೃತಿಗಳು ದಕ್ಕಿದವರಿಗೆ ದಕ್ಕಿದಷ್ಟು ಎಂಬಂತೆ…. ಅವು ಸ್ಫುರಿಸುವ ಭಾವಗಳು ಹಿಗೇಯೇ ಮತ್ತು ಇಷ್ಟೇ ಎಂದು ಹೇಳಲಾಗುವುದಿಲ್ಲ. ವಯಸ್ಸು ಮತ್ತು ಮನಸ್ಸು ಮಾಗಿದಾಗ ಚಿತ್ತಾಲರು ಮತ್ತಷ್ಟು ಹೊಸ ಹೊಳಹನ್ನು ನೀಡಬಹುದು ಎಂಬ ಸದಾಶಯದೊಂದಿಗೆ ಅವರ ಎಲ್ಲಾ ಕಾದಂಬರಿಗಳನ್ನು ಓದಿದ ಧನ್ಯತೆ ಇದೆ….
ಕೃತಿ: ಪುರುಷೋತ್ತಮ ಲೇಖಕರು: ಯಶವಂತ ಚಿತ್ತಾಲ ಪ್ರಕಾಶಕರು: ಸಾಹಿತ್ಯ ಭಂಡಾರ ಬಳೇಪೇಟೆ ಬೆಂಗಳೂರು
ಶಿಕಾರಿಯಲ್ಲಿ ಚಿತ್ತಾಲರು ಸೃಷ್ಟಿಸಿರುವ ನಾಗನಾಥನ ಪಾತ್ರ ಇಷ್ಟವಾಗಿತ್ತು. Mr. Naganath, you are my inspiration after reading shikari novel. ಶಿಕಾರಿ ನಾಗನಾಥನ ಕಥೆಯನ್ನು ಹೇಳುತ್ತದೆ, ಹಾಗೆಯೇ ಇಲ್ಲಿ ಬರುವ ಪುರುಷೋತ್ತಮನ ಪಾತ್ರವೂ ಮನಃಸ್ಸೆಳೆಯಿತು. ಒಂದಲ್ಲಾ ಒಂದು ರೀತಿ ಇವರಿಬ್ಬರ ಪಾತ್ರಗಳು ನನಗೆ ಸ್ಪೂರ್ತಿದಾಯಕ. ಚಿತ್ತಾಲರ ಕೃತಿಗಳನ್ನು ಓದುವುದು ಸುಲಭವಲ್ಲ, ಓದಿ ಅರ್ಥಮಾಡಿಕೊಳ್ಳುವುದು ಕಷ್ಟಕರವೆ ಆದರೆ ಅರ್ಥವಾದರೆ ಅದರ ಮಜವೇ ಬೇರೆ. ೩೮೯ ಪುಟಗಳನ್ನು ಹೊಂದಿದ ಈ ಕಾದಂಬರಿಯನ್ನು ೨ ಸಲ ಓದಲು ಪ್ರಯತ್ನಪಟ್ಟು ಮಧ್ಯದಲ್ಲೇ ನಿಲ್ಲಿಸಿದ್ದೆ ಆದರೆ ಈ ಬಾರಿ ಪಟ್ಟು ಹಿಡಿದು ಈ ಬೃಹತ್ ಕಾದಂಬರಿಯನ್ನು ಓದಿ ಮುಗಿಸಿದಾಗ ಆನಂದವಾಯಿತು. ದಾದರಿನಲ್ಲಿ ಒಂದು ಮನೆಯನ್ನೇ ಕೇಂದ್ರವಾಗಿಟ್ಟುಕೊಂಡು ಪುರುಷೋತ್ತಮ ಪಾತ್ರದ ಮೂಲಕ ಆತನ ಮನೆಯ ಮೇಲೆ ನಡೆಯುವ ಭೂ ಮಾಫೀಯ, ಅದಕ್ಕೆ ಕಾರಣಕರ್ತರು ಯಾರು ಎಂಬ ಸಂಶೋಧನೆಯೇ ಈ ಕೃತಿಯ ಮೂಲವಸ್ತು.
ರಾಸಾಯನಿಕ ವೃತ್ತಿಯಲ್ಲಿ ಕಾರ್ಯನಿರ್ವಸಿತ್ತಾ ವೃತ್ತಿ ಜೀವನದಲ್ಲಿ ಹಾಗು ವೈಯಕ್ತಿಕ ಜೀವನದಲ್ಲಿ ಯಾರಿಗೂ ಅಪಕಾರಮಾಡದೆ ತಾನಾಯಿತು ತನ್ನ ಕೆಲಸವಾಯಿತು ತನ್ನ ಸಂಸಾರವಾಯಿತು ಎಂದು ಸುಖದಿಂದ ಜೀವನ ನಡೆಸುತ್ತಿರುವ ಸಮಯದಲ್ಲಿ ತನ್ನ ಮನೆಯ ಮೇಲೆ ಕೆಲವರ ಕಣ್ಣು ಬೀಳುತ್ತದೆ, ಇದರಲ್ಲಿ ಯಾರೆಲ್ಲಾ ಒಳಗೊಂಡಿದ್ದಾರೆ ಎಂಬುದನ್ನು ಸಂಶೋಧಿಸುತ್ತಾನೆ, ಈ ಸಂಶೋಧನೆಯ ಸಮಯದಲ್ಲಿ ತನ್ನ ಹುಟ್ಟಿನ ಕುರಿತು, ತನ್ನ ಸಂಬಂಧಗಳ ಕುರಿತು, ಹೇಮಾ ತನ್ನನ್ನು ಇಷ್ಟಪಟ್ಟು ಮದುವೆಯಾಗಿ ತನ್ನನ್ನು ತ್ಯಜಿಸಿಹೋದ ಕಾರಣವಾದರೂ ಏನೆಂಬುದನ್ನು ಕಂಡುಕೊಳ್ಳುತ್ತಾನೆ. ಎರೆಡು ಬಾರಿ ಹನೇಹಳ್ಳಿಗೆ ಭೇಟಿನೀಡಿದಾಗ ಸಾಂತಯ್ಯನು ತನ್ನ ಮುತ್ತಜ್ಜನಿರುವ ಕಾಲದಲ್ಲಿ ಹನೇಹಳ್ಳಿಯಲ್ಲಿರುವ ತನ್ನ ಮನೆಯಲ್ಲಿ ದೇವರಕೋಣೆಯಲ್ಲಿ ಸೇರಿಕೊಂಡ ಸರ್ಪವನ್ನು ಓಡಿಸಲು ಹೋಗಿ ಆತನಿಗರಿವಿಲ್ಲದೆಯೇ ಅದರ ಹತ್ಯಾ ಮಾಡುವ ಪ್ರಸಂಗವು, ಆ ಸರ್ಪ ದೋಷದ ಕುರಿತು ತಾಯಿ ಸಾವಿತ್ರಿಯಿಂದ ತಿಳಿದು ಆಶ್ಚರ್ಯಪಡುತ್ತಾನೆ. ಇವರ ಪೂರ್ವಜರು ಗೋವೆಯಿಂದ ಬಂದು ಹನೇಹಳ್ಳಿಯಲ್ಲಿ ನೆಲೆಸಲು ಕಾರಣ ಕಡೆಯವರೆಗೂ ಆತನಿಗೆ ಉತ್ತರಸಿಗುವುದಿಲ್ಲ. ಪುರುಷೋತ್ತಮನ ಮುತ್ತಜ್ಜರು ಹನೇಹಳ್ಳಿಗೆ ಬಂದು ಅದರಲ್ಲಿ ಪದ್ಮನಾಭ ನೆಲಸಿದ್ದು ಸಮುದ್ರದ ಕಡೆಯ ತಗ್ಗಿನಲ್ಲಿ, ರಾಮಚಂದ್ರನು ನೆಲಸಿದ್ದು ಎತ್ತರದ ಗುಡ್ಡದಲ್ಲಿ, ಆದ್ದರಿಂದ ಮೇಲಿನಮನೆ ಕೆಳಗಿನಮನೆ ಎಂದು ವಿಂಗಡನೆಯಾಗಿ ಅಣ್ಣ ತಮ್ಮಂದಿರಲ್ಲೇ ದಾಯಾದಿ ಕಲಹಗಳು ಎರ್ಪಟ್ಟಿದ್ದ ವಿಷಯವನ್ನೂ ಕಂಡುಕೊಳ್ಳುತ್ತಾನೆ. ತನ್ನ ಮುತ್ತಜ್ಜನು ಮದುವೆಯಾಗದೆ ತನ್ನ ತಾಯಿ ಸಾವಿತ್ರಿಯನ್ನು ಎಲ್ಲಿಂದಲೋ ತಂದು ಸ್ವಂತ ಮೊಮ್ಮಗಳೆಂದು ಸಾಕಿದ ವಿವರವನ್ನು ಹಾಗು ತನ್ನ ಆಸ್ಥಿಗೆ ಸಾವಿತ್ರಿಗೂ ಹಕ್ಕು ಇರುವ ವಿಷಯ ಆ ಡೈರಿಯಲ್ಲಿ ಬರೆದಿದ್ದನ್ನು ನೆನೆದು ಮುತ್ತಜ್ಜನ ಬಗ್ಗೆ ಹೆಮ್ಮೆಪಡುತ್ತಾನೆ.
ಒಂದು ದಿನ ಹಠಾತ್ತಾಗಿ ತನ್ನ ದಾಯಾದಿ ಮಂಜುನಾಥನು ಅವನ ಅಣ್ಣ ಶ್ರೀಧರನೊಡನೆ ಬಂದು ತನ್ನ ತಂದೆ ಕೊಲೆಯಾಗಿರಬೇಕು ಅಥವಾ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಹೇಳಿದಾಗ ನಂಬಲು ಸಾಧ್ಯವಾಗುವುದಿಲ್ಲ, ತಾಯಿಯ ಬಳಿ ಕೇಳಿದರೆ ತಂದೆಯು ಆತ್ಮಹತ್ಯೆ ಮಾಡಿಕೊಳ್ಳುವಂಥ ಹೇಡಿಯಲ್ಲ ಎಂದಳು, ಆದರೂ ತಂದೆಯ ಸಾವಿನ ಕುರಿತು ಮುಚ್ಚಿಟ್ಟಿದ್ದಳು. ಈ ಮಂಜುನಾಥನು ಬಂದು ಹೇಳುವುದಕ್ಕೆ ಕಾರಣವಾದರೂ ಏನು, ಹಾಗು ಇವನು ಹನೇಹಳ್ಳಿಯ ಕೆಳಗಿನ ಮನೆಯವನೋ ಅಥವಾ ಮೇಲಿನ ಮನೆಯವನೋ, ತಂದೆಯ ಸಾವಿನ ಕಾರಣವಾದರೂ ಏನು ಎಂಬುದನ್ನು ಎರಡನೆ ಬಾರಿ ಹನೇಹಳ್ಳಿಗೆ ಹೋದಾಗ ಮುತ್ತಜ್ಜನ ಡೈರಿಯನ್ನು ಓದಿದಾಗ ತನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಮದುವೆಯಾಗಿ ಎರಡು ವರ್ಷ ಕೂಡ ಆಗಿರಲಿಲ್ಲ ತನ್ನ ಹೆಂಡತಿ ಹೇಮಾ ಒಂದು ವರ್ಷದ ಎಳೆ ಕೂಸಿನೊಡನೆ ಮನೆ ಬಿಟ್ಟು ಅಮೇರಿಕಾಕ್ಕೆ ಹೊರಟು ಹೋದ ಕಾರಣ ಮೊದಲು ಯಾರಿಗೂ ತಿಳಿಯಲಿಲ್ಲ ಆದರೆ ಈ ಮನೆಯ ಗಲಾಟೆಯಲ್ಲಿ ಆಕೆಯಿಂದ ಬರುವ ಪತ್ರದಲ್ಲಿ ತನನ್ನು ತ್ಯಜಿಸಿ ಹೋದದ್ದಾದರೂ ಏಕೆ ಎಂಬುದನ್ನು ತಿಳಿಸಿ ಹೇಳಿದಾಗ ಪುರುಷೋತ್ತಮನು ಕಣ್ಣೀರು ಸುರಿಸುತ್ತಾನೆ. ಈ ಮನೆಯನ್ನು ಆಕ್ರಮಣ ಮಾಡಲು ಹೊರಟ ಪ್ರತಿಯೊಬ್ಬರ ಗುಣಗಳನ್ನು, ಹಾಗು ತನ್ನಲ್ಲಿರುವ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು, ಈ ಮನೆಯ ಪ್ರಸಂಗದಿಂದ ತುಂಬಾ ಹತ್ತಿರದವರನ್ನು ಭೇಟಿಯಾದ ನಂತರ ತನ್ನಲಾದ ಬದಲಾವಣೆಗಳನ್ನು ಪುರುಷೋತ್ತಮನು ಗ್ರಹಿಸುತ್ತಾನೆ.
ಮಂಜುನಾಥನು ಹನೇಹಳ್ಳಿ ಬಿಡುವಾಗ ವೇಶ್ಯೆಯ ಮಗಳನ್ನು ಹಾರಿಸಿಕೊಂಡು ಹೋದನೆಂದು ಬಾಯಕ್ಕನಿಂದ ತಿಳಿಯುತ್ತಾನೆ, ಮುಂಬಯಿಯಲ್ಲಿದ್ದ ಬಾಯಕ್ಕ ಅತ್ತ ಪುರುಷೋತ್ತಮನಿಗೂ ಹಾಗು ಮಂಜುನಾಥನಿಗೂ ದಾಯಾದಿಯಾಗಬೇಕು. ತನ್ನ ಮನೆಯನ್ನು ತನ್ನಿಂದ ಕಿತ್ತುಕೊಳ್ಳುಲು ಹೊರಟಿರುವವರನ್ನು ಹಂತ ಹಂತವಾಗಿ ಸಂಶೋಧಿಸುತ್ತಾನೆ, ಇದರಲ್ಲಿ ಮಂಜುನಾಥನ ಕುತಂತ್ರವಿದೆಯೋ, ಅಥವಾ ಅವನ ಅಣ್ಣನಾದ ಶ್ರೀಧರ, ತಮ್ಮ ಗಣೇಶನ ಕುತಂತ್ರವಿದೆಯೋ ಹಾಗು ಗಣೇಶನ ಮಾವನಾದ ವೆಂಕಟದಾಸು ಇದರಲ್ಲಿ ಒಳಗೊಂಡಿದ್ದಾನೆಯೋ, ಅಥವಾ ರಾಮನಾಥಾನಿ ಕುಟುಂಬದವರು ಕಾರಣವೋ? ನಾಥಾನಿ ಕುಟುಂಬದವರಿಗೆ ದಾದರಿನಲ್ಲಿ ಅದೂ ಒಳ್ಳೆ ಜಾಗದಲ್ಲಿದ್ದ ತನ್ನ ಮನೆಯನ್ನು ಕೆಡವಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಮಾಡುವ ಯೋಜನೆಯಿದೆ ಎಂದು ತಿಳಿದು ಅವರ ಮೇಲೂ ಅನುಮಾನ ಬರತ್ತದೆ, ಅಥವಾ ವಿಲಾಸ್ ರಾವ್ ಎಂಬ ರಾಜಕೀಯ ಪುಢಾರಿಗಳ ಕುತಂತ್ರವೋ ಎಂಬುದನ್ನು ಎಲ್ಲರನ್ನು ಆ ಯಾ ಸಂಧರ್ಭದಲ್ಲಿ ಭೇಟಿಯಾಗುತ್ತಾ ಯಾರು ಈ ಮನೆಯನ್ನು ಆಕ್ರಮಣ ಮಾಡಲು ಹೊರಟಿರುವವರು ಇದರಲ್ಲಿ ಯಾರು ಮುಖ್ಯ ಪಾತ್ರವಹಿಸಿದವರು ಎಂಬುದನ್ನು ತಾಳ್ಮೆಯಿಂದ ವಿವರಗಳನ್ನು ಹುಡುಕುತ್ತಾನೆ. ಈ ಹುಡುಕಾಟದ ಸಂಧರ್ಭದಲ್ಲಿ ತನ್ನ ತಂಗಿಯನ್ನು, ತಾನು ಇಷ್ಟಪಟ್ಟಿದ್ದ ಮೀನಾಕ್ಷಿಯನ್ನು, ಆಕೆಯ ಮಗಳು ಸಾವಿತ್ರಿಯನ್ನು, ಮಂಜುನಾಥನು ತನ್ನ ತಮ್ಮನೆಂದು, ತನ್ನ ತಾಯಿ ಸದಾಶಿವ ಮಾವನನ್ನು ಇಷ್ಟಪಟ್ಟಿದ್ದರೂ ಕಾರಣಾಂತರಗಳಿಂದ ಮದುವೆಯಾಗದೆ ತನ್ನ ಪ್ರೀತಿಯನ್ನೇ ತ್ಯಾಗ ಮಾಡಿದ ಸದಾಶಿವ ಮಾವನ ವಿಚಾರವನ್ನು, ಹೇಮಾ ತ್ಯಜಿಸಿ ಹೋದ ನಿಜವಾದ ಕಾರಣ, ನಂತರ ಹೇಮಾ ಸಾಯುವ ಮುಂಚೆ ತನಗೆ ಪತ್ರ ಕಳುಹಿಸಿ ಮಗಳು ಜಾನಕಿಯ ಜವಾಬ್ದಾರಿಯನ್ನು ತನಗೊಪ್ಪಿಸಿದ ವಿಷಯಗಳೆಲ್ಲವನ್ನೂ ತಿಳಿಯುತ್ತಾನೆ. ಈ ಮನೆಯ ಪ್ರಕರಣದಿಂದ ಇವರೆಲ್ಲರ ಮನಸ್ಸಿನ ಮೇಲೆ ಆಗುವ ಆಘಾತಗಳನ್ನು, ದುಃಖಗಳನ್ನು, ಹತ್ತಿರದವರ ಸಾವುಗಳನ್ನು ಕಂಡು ಕುಗ್ಗಿಹೋಗುತ್ತಾನೆ. ತಾನು ಕೆಲಸವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ ಅದಕ್ಕೆ ಕಾರಣ ತನ್ನ ಬಾಸ್ ಆತನು ಯಾರು ಅಲ್ಲ ಈ ಮನೆಯ ಮೇಲೆ ಕಣ್ಣಿಟ್ಟಿದ್ದ ರಾಮನಾಥಾನಿ ತಮ್ಮ,ಇವರು ಸಿಂಧಿಗಳು ಆದರೂ ಇವೆಲ್ಲವನ್ನು ಎದುರಿಸಿ ಕಡೆಯಲ್ಲಿ ತನ್ನ ಮನೆಯನ್ನು ಆಕ್ರಮಣ ಮಾಡಲು ಹೊರಟಿರುವವರು ಯಾರು ಎಂಬುದನ್ನು ಕಂಡುಕೊಳ್ಳುತ್ತಾನೆ. ಮಂಜುನಾಥನೆ? ರಾಮನಾಥಾನಿಯೇ? ವೆಂಕಟದಾಸೂ? ವಿಲಾಸ್ ರಾವ್? ತನ್ನ ಬಾಸ್? ಪ್ರತಿ ಹಂತದಲ್ಲೂ ಎಲ್ಲರ ಮೇಲೂ ಅನುಮಾನ ಬರುತ್ತದೆ ಆದರೆ ಕಡೆಯಲ್ಲಿ ಯಾರು ಎಂಬುದನ್ನು ಪುರುಷೋತ್ತಮನು ಪತ್ತೆ ಹಚ್ಚುವುದು ಅತ್ಯದ್ಭುತವಾಗಿದೆ. ಈ ಸಂಶೋಧನೆಯಿಂದಲೇ ಸೀತೆಯ ಬಗ್ಗೆ, ಮೀನಾಕ್ಷಿಯ ಬಗ್ಗೆ, ಅಮ್ಮನ ಬಗ್ಗೆ, ಆಫೀಸಿನ ಎನ್ನಟ್ಟಳ ಬಗ್ಗೆ, ಕಲ್ಯಾಣಿ ಬಗ್ಗೆ, ಸದಾಶಿವಮಾವನ ಬಗ್ಗೆ, ಸುಬ್ಬರಾಯರ ಬಗ್ಗೆ, ಮಂಜುನಾಥ ಸೀತೆಯರ ಬಗ್ಗೆ, ಮುದ್ದು ಸರಸ್ವತಿಯ ಬಗ್ಗೆ ತಿಳಿದು ತನ್ನ ಮನೆಯ ಪ್ರಕರಣದಿಂದ ಈ ಎಲ್ಲರೂ ತನ್ನ ಜೀವನದಲ್ಲಿ ಬಂದು ಒಳ್ಳೆಯದೇ ಆಯಿತೆಂದು ಸಂತೋಷಪಡುತ್ತಾನೆ.
ಈ ಮನುಷ್ಯನ ಗುಣವೇ ಹೀಗೆಯಾ? ತನ್ನ ದುರಾಸೆಗೋಸ್ಕರ ತಾನು ಬದುಕಲು ಇತರರ ಮೇಲೆ ದೈಹಿಕವಾಗಿ ಮಾನಸಿಕವಾಗಿ ನೋಯಿಸುವ ಕೆಟ್ಟಗುಣದ ಕುರಿತು ಸಂಕಟಪಡುತ್ತಾನೆ. ಆದರೂ ಎಷ್ಟೇ ಅಡ್ಡಿ ಆತಾಂಕಗಳು ಬಂದರೂ ಎಲ್ಲೂ ತನ್ನ ಧೈರ್ಯ ಕಳೆದುಕೊಳ್ಳದೆ, ತಾಳ್ಮೆಯಿಂದ ಪರಿಸ್ಥಿತಿಯನ್ನು ಎದುರಿಸುವ ಪುರುಷೋತ್ತಮನು ನಮಗೆ ಮಾರ್ಗದರ್ಶಕನಾಗುತ್ತಾನೆ.
ಆಯ್ದ ಕೆಲವು ಸಾಲುಗಳು:
*ಮನುಷ್ಯ ತನ್ನ ಅನುಭವಗಳಲ್ಲಿ ತೀರ ಒಬ್ಬಂಟಿ ನೋಡು, ಇನ್ನೊಬ್ಬರ ನೋವು ಊಹಿಸಬಲ್ಲೆವು,ಅನುಭವಿಸಲಾರೆವು.*
*ನಮ್ಮ ಮಾತಿನಿಂದ ಯಾರನ್ನೂ ಬದಲಿಸಲಾರೆವು, ಏನನ್ನೂ ಬದಲಿಸಲಾರೆವು, ಆದರೂ ನಾವು ಸಿಲಿಕಿಕೊಂಡ ಕೆಲವು ಸನ್ನಿವೇಶಗಳಲ್ಲಿ ಇನ್ನೊಬ್ಬರ ಅನುಭವ ನಮಗೆ ತಿಳಿಯದನೇ ನಮ್ಮ ನೆರವಿಗೆ ಬರುವುದುಂಟು.*
*ಬದುಕಿಗೆ ಅರ್ಥವೇನು? ಎಂಬ ಪ್ರಶ್ನೆ ವ್ಯಕ್ತಿಗೆ ಸೇರಿದ್ದಲ್ಲ. ಬದುಕೇ ಈ ಪ್ರಶ್ನೆಯನ್ನು ವ್ಯಕ್ತಿಗೆ ಹಾಕುತ್ತದೆಯಂತೆ. ಜೀವನದ ಸಾರ್ಥಕತೆಯನ್ನು ಪ್ರಶ್ನಿಸಹಚ್ಚುವ ದುರ್ಧರ ಪ್ರಸಂಗಗಳು ಬದುಕು ನಮಗೆ ಹಾಕುವ ಪ್ರಶ್ನೆಗಳಿಗೆ ಉದಾಹರಣೆಗಳು. ಬುದ್ಧನಿಗೆ ಎದುರಾದ ಜರ್ಜರಿತನಾದ ಮುದುಕ, ರೋಗಿ, ಹೆಣ ಮತ್ತು ಬೈರಾಗಿ ಅವನಿಗೆದುರಾದ ಪ್ರಶ್ನೆಗಳಾಗಿದ್ದವು. ಆ ಮಹಾಚೈತನ್ಯ ಜವಾಬು ಕೊಟ್ಟದ್ದು ಎಂತಹಾ ಭವ್ಯ ಕ್ರಿಯೆಯಿಂದ?*.
ಕೃತಿ: ಪುರುಷೋತ್ತಮ ಲೇಖಕರು: ಯಶವಂತ ಚಿತ್ತಾಲ ಪ್ರಕಾಶಕರು: ಸಾಹಿತ್ಯ ಭಂಡಾರ ಬಳೇಪೇಟೆ ಬೆಂಗಳೂರು
ಶಿಕಾರಿಯಲ್ಲಿ ಚಿತ್ತಾಲರು ಸೃಷ್ಟಿಸಿರುವ ನಾಗನಾಥನ ಪಾತ್ರ ಇಷ್ಟವಾಗಿತ್ತು. Mr. Naganath, you are my inspiration after reading shikari novel. ಶಿಕಾರಿ ನಾಗನಾಥನ ಕಥೆಯನ್ನು ಹೇಳುತ್ತದೆ, ಹಾಗೆಯೇ ಇಲ್ಲಿ ಬರುವ ಪುರುಷೋತ್ತಮನ ಪಾತ್ರವೂ ಮನಃಸ್ಸೆಳೆಯಿತು. ಒಂದಲ್ಲಾ ಒಂದು ರೀತಿ ಇವರಿಬ್ಬರ ಪಾತ್ರಗಳು ನನಗೆ ಸ್ಪೂರ್ತಿದಾಯಕ. ಚಿತ್ತಾಲರ ಕೃತಿಗಳನ್ನು ಓದುವುದು ಸುಲಭವಲ್ಲ, ಓದಿ ಅರ್ಥಮಾಡಿಕೊಳ್ಳುವುದು ಕಷ್ಟಕರವೆ ಆದರೆ ಅರ್ಥವಾದರೆ ಅದರ ಮಜವೇ ಬೇರೆ. ೩೮೯ ಪುಟಗಳನ್ನು ಹೊಂದಿದ ಈ ಕಾದಂಬರಿಯನ್ನು ೨ ಸಲ ಓದಲು ಪ್ರಯತ್ನಪಟ್ಟು ಮಧ್ಯದಲ್ಲೇ ನಿಲ್ಲಿಸಿದ್ದೆ ಆದರೆ ಈ ಬಾರಿ ಪಟ್ಟು ಹಿಡಿದು ಈ ಬೃಹತ್ ಕಾದಂಬರಿಯನ್ನು ಓದಿ ಮುಗಿಸಿದಾಗ ಆನಂದವಾಯಿತು. ದಾದರಿನಲ್ಲಿ ಒಂದು ಮನೆಯನ್ನೇ ಕೇಂದ್ರವಾಗಿಟ್ಟುಕೊಂಡು ಪುರುಷೋತ್ತಮ ಪಾತ್ರದ ಮೂಲಕ ಆತನ ಮನೆಯ ಮೇಲೆ ನಡೆಯುವ ಭೂ ಮಾಫೀಯ, ಅದಕ್ಕೆ ಕಾರಣಕರ್ತರು ಯಾರು ಎಂಬ ಸಂಶೋಧನೆಯೇ ಈ ಕೃತಿಯ ಮೂಲವಸ್ತು.
ರಾಸಾಯನಿಕ ವೃತ್ತಿಯಲ್ಲಿ ಕಾರ್ಯನಿರ್ವಸಿತ್ತಾ ವೃತ್ತಿ ಜೀವನದಲ್ಲಿ ಹಾಗು ವೈಯಕ್ತಿಕ ಜೀವನದಲ್ಲಿ ಯಾರಿಗೂ ಅಪಕಾರಮಾಡದೆ ತಾನಾಯಿತು ತನ್ನ ಕೆಲಸವಾಯಿತು ತನ್ನ ಸಂಸಾರವಾಯಿತು ಎಂದು ಸುಖದಿಂದ ಜೀವನ ನಡೆಸುತ್ತಿರುವ ಸಮಯದಲ್ಲಿ ತನ್ನ ಮನೆಯ ಮೇಲೆ ಕೆಲವರ ಕಣ್ಣು ಬೀಳುತ್ತದೆ, ಇದರಲ್ಲಿ ಯಾರೆಲ್ಲಾ ಒಳಗೊಂಡಿದ್ದಾರೆ ಎಂಬುದನ್ನು ಸಂಶೋಧಿಸುತ್ತಾನೆ, ಈ ಸಂಶೋಧನೆಯ ಸಮಯದಲ್ಲಿ ತನ್ನ ಹುಟ್ಟಿನ ಕುರಿತು, ತನ್ನ ಸಂಬಂಧಗಳ ಕುರಿತು, ಹೇಮಾ ತನ್ನನ್ನು ಇಷ್ಟಪಟ್ಟು ಮದುವೆಯಾಗಿ ತನ್ನನ್ನು ತ್ಯಜಿಸಿಹೋದ ಕಾರಣವಾದರೂ ಏನೆಂಬುದನ್ನು ಕಂಡುಕೊಳ್ಳುತ್ತಾನೆ. ಎರೆಡು ಬಾರಿ ಹನೇಹಳ್ಳಿಗೆ ಭೇಟಿನೀಡಿದಾಗ ಸಾಂತಯ್ಯನು ತನ್ನ ಮುತ್ತಜ್ಜನಿರುವ ಕಾಲದಲ್ಲಿ ಹನೇಹಳ್ಳಿಯಲ್ಲಿರುವ ತನ್ನ ಮನೆಯಲ್ಲಿ ದೇವರಕೋಣೆಯಲ್ಲಿ ಸೇರಿಕೊಂಡ ಸರ್ಪವನ್ನು ಓಡಿಸಲು ಹೋಗಿ ಆತನಿಗರಿವಿಲ್ಲದೆಯೇ ಅದರ ಹತ್ಯಾ ಮಾಡುವ ಪ್ರಸಂಗವು, ಆ ಸರ್ಪ ದೋಷದ ಕುರಿತು ತಾಯಿ ಸಾವಿತ್ರಿಯಿಂದ ತಿಳಿದು ಆಶ್ಚರ್ಯಪಡುತ್ತಾನೆ. ಇವರ ಪೂರ್ವಜರು ಗೋವೆಯಿಂದ ಬಂದು ಹನೇಹಳ್ಳಿಯಲ್ಲಿ ನೆಲೆಸಲು ಕಾರಣ ಕಡೆಯವರೆಗೂ ಆತನಿಗೆ ಉತ್ತರಸಿಗುವುದಿಲ್ಲ. ಪುರುಷೋತ್ತಮನ ಮುತ್ತಜ್ಜರು ಹನೇಹಳ್ಳಿಗೆ ಬಂದು ಅದರಲ್ಲಿ ಪದ್ಮನಾಭ ನೆಲಸಿದ್ದು ಸಮುದ್ರದ ಕಡೆಯ ತಗ್ಗಿನಲ್ಲಿ, ರಾಮಚಂದ್ರನು ನೆಲಸಿದ್ದು ಎತ್ತರದ ಗುಡ್ಡದಲ್ಲಿ, ಆದ್ದರಿಂದ ಮೇಲಿನಮನೆ ಕೆಳಗಿನಮನೆ ಎಂದು ವಿಂಗಡನೆಯಾಗಿ ಅಣ್ಣ ತಮ್ಮಂದಿರಲ್ಲೇ ದಾಯಾದಿ ಕಲಹಗಳು ಎರ್ಪಟ್ಟಿದ್ದ ವಿಷಯವನ್ನೂ ಕಂಡುಕೊಳ್ಳುತ್ತಾನೆ. ತನ್ನ ಮುತ್ತಜ್ಜನು ಮದುವೆಯಾಗದೆ ತನ್ನ ತಾಯಿ ಸಾವಿತ್ರಿಯನ್ನು ಎಲ್ಲಿಂದಲೋ ತಂದು ಸ್ವಂತ ಮೊಮ್ಮಗಳೆಂದು ಸಾಕಿದ ವಿವರವನ್ನು ಹಾಗು ತನ್ನ ಆಸ್ಥಿಗೆ ಸಾವಿತ್ರಿಗೂ ಹಕ್ಕು ಇರುವ ವಿಷಯ ಆ ಡೈರಿಯಲ್ಲಿ ಬರೆದಿದ್ದನ್ನು ನೆನೆದು ಮುತ್ತಜ್ಜನ ಬಗ್ಗೆ ಹೆಮ್ಮೆಪಡುತ್ತಾನೆ.
ಒಂದು ದಿನ ಹಠಾತ್ತಾಗಿ ತನ್ನ ದಾಯಾದಿ ಮಂಜುನಾಥನು ಅವನ ಅಣ್ಣ ಶ್ರೀಧರನೊಡನೆ ಬಂದು ತನ್ನ ತಂದೆ ಕೊಲೆಯಾಗಿರಬೇಕು ಅಥವಾ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಹೇಳಿದಾಗ ನಂಬಲು ಸಾಧ್ಯವಾಗುವುದಿಲ್ಲ, ತಾಯಿಯ ಬಳಿ ಕೇಳಿದರೆ ತಂದೆಯು ಆತ್ಮಹತ್ಯೆ ಮಾಡಿಕೊಳ್ಳುವಂಥ ಹೇಡಿಯಲ್ಲ ಎಂದಳು, ಆದರೂ ತಂದೆಯ ಸಾವಿನ ಕುರಿತು ಮುಚ್ಚಿಟ್ಟಿದ್ದಳು. ಈ ಮಂಜುನಾಥನು ಬಂದು ಹೇಳುವುದಕ್ಕೆ ಕಾರಣವಾದರೂ ಏನು, ಹಾಗು ಇವನು ಹನೇಹಳ್ಳಿಯ ಕೆಳಗಿನ ಮನೆಯವನೋ ಅಥವಾ ಮೇಲಿನ ಮನೆಯವನೋ, ತಂದೆಯ ಸಾವಿನ ಕಾರಣವಾದರೂ ಏನು ಎಂಬುದನ್ನು ಎರಡನೆ ಬಾರಿ ಹನೇಹಳ್ಳಿಗೆ ಹೋದಾಗ ಮುತ್ತಜ್ಜನ ಡೈರಿಯನ್ನು ಓದಿದಾಗ ತನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಮದುವೆಯಾಗಿ ಎರಡು ವರ್ಷ ಕೂಡ ಆಗಿರಲಿಲ್ಲ ತನ್ನ ಹೆಂಡತಿ ಹೇಮಾ ಒಂದು ವರ್ಷದ ಎಳೆ ಕೂಸಿನೊಡನೆ ಮನೆ ಬಿಟ್ಟು ಅಮೇರಿಕಾಕ್ಕೆ ಹೊರಟು ಹೋದ ಕಾರಣ ಮೊದಲು ಯಾರಿಗೂ ತಿಳಿಯಲಿಲ್ಲ ಆದರೆ ಈ ಮನೆಯ ಗಲಾಟೆಯಲ್ಲಿ ಆಕೆಯಿಂದ ಬರುವ ಪತ್ರದಲ್ಲಿ ತನನ್ನು ತ್ಯಜಿಸಿ ಹೋದದ್ದಾದರೂ ಏಕೆ ಎಂಬುದನ್ನು ತಿಳಿಸಿ ಹೇಳಿದಾಗ ಪುರುಷೋತ್ತಮನು ಕಣ್ಣೀರು ಸುರಿಸುತ್ತಾನೆ. ಈ ಮ���ೆಯನ್ನು ಆಕ್ರಮಣ ಮಾಡಲು ಹೊರಟ ಪ್ರತಿಯೊಬ್ಬರ ಗುಣಗಳನ್ನು, ಹಾಗು ತನ್ನಲ್ಲಿರುವ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು, ಈ ಮನೆಯ ಪ್ರಸಂಗದಿಂದ ತುಂಬಾ ಹತ್ತಿರದವರನ್ನು ಭೇಟಿಯಾದ ನಂತರ ತನ್ನಲಾದ ಬದಲಾವಣೆಗಳನ್ನು ಪುರುಷೋತ್ತಮನು ಗ್ರಹಿಸುತ್ತಾನೆ.
ಮಂಜುನಾಥನು ಹನೇಹಳ್ಳಿ ಬಿಡುವಾಗ ವೇಶ್ಯೆಯ ಮಗಳನ್ನು ಹಾರಿಸಿಕೊಂಡು ಹೋದನೆಂದು ಬಾಯಕ್ಕನಿಂದ ತಿಳಿಯುತ್ತಾನೆ, ಮುಂಬಯಿಯಲ್ಲಿದ್ದ ಬಾಯಕ್ಕ ಅತ್ತ ಪುರುಷೋತ್ತಮನಿಗೂ ಹಾಗು ಮಂಜುನಾಥನಿಗೂ ದಾಯಾದಿಯಾಗಬೇಕು. ತನ್ನ ಮನೆಯನ್ನು ತನ್ನಿಂದ ಕಿತ್ತುಕೊಳ್ಳುಲು ಹೊರಟಿರುವವರನ್ನು ಹಂತ ಹಂತವಾಗಿ ಸಂಶೋಧಿಸುತ್ತಾನೆ, ಇದರಲ್ಲಿ ಮಂಜುನಾಥನ ಕುತಂತ್ರವಿದೆಯೋ, ಅಥವಾ ಅವನ ಅಣ್ಣನಾದ ಶ್ರೀಧರ, ತಮ್ಮ ಗಣೇಶನ ಕುತಂತ್ರವಿದೆಯೋ ಹಾಗು ಗಣೇಶನ ಮಾವನಾದ ವೆಂಕಟದಾಸು ಇದರಲ್ಲಿ ಒಳಗೊಂಡಿದ್ದಾನೆಯೋ, ಅಥವಾ ರಾಮನಾಥಾನಿ ಕುಟುಂಬದವರು ಕಾರಣವೋ? ನಾಥಾನಿ ಕುಟುಂಬದವರಿಗೆ ದಾದರಿನಲ್ಲಿ ಅದೂ ಒಳ್ಳೆ ಜಾಗದಲ್ಲಿದ್ದ ತನ್ನ ಮನೆಯನ್ನು ಕೆಡವಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಮಾಡುವ ಯೋಜನೆಯಿದೆ ಎಂದು ತಿಳಿದು ಅವರ ಮೇಲೂ ಅನುಮಾನ ಬರತ್ತದೆ, ಅಥವಾ ವಿಲಾಸ್ ರಾವ್ ಎಂಬ ರಾಜಕೀಯ ಪುಢಾರಿಗಳ ಕುತಂತ್ರವೋ ಎಂಬುದನ್ನು ಎಲ್ಲರನ್ನು ಆ ಯಾ ಸಂಧರ್ಭದಲ್ಲಿ ಭೇಟಿಯಾಗುತ್ತಾ ಯಾರು ಈ ಮನೆಯನ್ನು ಆಕ್ರಮಣ ಮಾಡಲು ಹೊರಟಿರುವವರು ಇದರಲ್ಲಿ ಯಾರು ಮುಖ್ಯ ಪಾತ್ರವಹಿಸಿದವರು ಎಂಬುದನ್ನು ತಾಳ್ಮೆಯಿಂದ ವಿವರಗಳನ್ನು ಹುಡುಕುತ್ತಾನೆ. ಈ ಹುಡುಕಾಟದ ಸಂಧರ್ಭದಲ್ಲಿ ತನ್ನ ತಂಗಿಯನ್ನು, ತಾನು ಇಷ್ಟಪಟ್ಟಿದ್ದ ಮೀನಾಕ್ಷಿಯನ್ನು, ಆಕೆಯ ಮಗಳು ಸಾವಿತ್ರಿಯನ್ನು, ಮಂಜುನಾಥನು ತನ್ನ ತಮ್ಮನೆಂದು, ತನ್ನ ತಾಯಿ ಸದಾಶಿವ ಮಾವನನ್ನು ಇಷ್ಟಪಟ್ಟಿದ್ದರೂ ಕಾರಣಾಂತರಗಳಿಂದ ಮದುವೆಯಾಗದೆ ತನ್ನ ಪ್ರೀತಿಯನ್ನೇ ತ್ಯಾಗ ಮಾಡಿದ ಸದಾಶಿವ ಮಾವನ ವಿಚಾರವನ್ನು, ಹೇಮಾ ತ್ಯಜಿಸಿ ಹೋದ ನಿಜವಾದ ಕಾರಣ, ನಂತರ ಹೇಮಾ ಸಾಯುವ ಮುಂಚೆ ತನಗೆ ಪತ್ರ ಕಳುಹಿಸಿ ಮಗಳು ಜಾನಕಿಯ ಜವಾಬ್ದಾರಿಯನ್ನು ತನಗೊಪ್ಪಿಸಿದ ವಿಷಯಗಳೆಲ್ಲವನ್ನೂ ತಿಳಿಯುತ್ತಾನೆ. ಈ ಮನೆಯ ಪ್ರಕರಣದಿಂದ ಇವರೆಲ್ಲರ ಮನಸ್ಸಿನ ಮೇಲೆ ಆಗುವ ಆಘಾತಗಳನ್ನು, ದುಃಖಗಳನ್ನು, ಹತ್ತಿರದವರ ಸಾವುಗಳನ್ನು ಕಂಡು ಕುಗ್ಗಿಹೋಗುತ್ತಾನೆ. ತಾನು ಕೆಲಸವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ ಅದಕ್ಕೆ ಕಾರಣ ತನ್ನ ಬಾಸ್ ಆತನು ಯಾರು ಅಲ್ಲ ಈ ಮನೆಯ ಮೇಲೆ ಕಣ್ಣಿಟ್ಟಿದ್ದ ರಾಮನಾಥಾನಿ ತಮ್ಮ,ಇವರು ಸಿಂಧಿಗಳು ಆದರೂ ಇವೆಲ್ಲವನ್ನು ಎದುರಿಸಿ ಕಡೆಯಲ್ಲಿ ತನ್ನ ಮನೆಯನ್ನು ಆಕ್ರಮಣ ಮಾಡಲು ಹೊರಟಿರುವವರು ಯಾರು ಎಂಬುದನ್ನು ಕಂಡುಕೊಳ್ಳುತ್ತಾನೆ. ಮಂಜುನಾಥನೆ? ರಾಮನಾಥಾನಿಯೇ? ವೆಂಕಟದಾಸೂ? ವಿಲಾಸ್ ರಾವ್? ತನ್ನ ಬಾಸ್? ಪ್ರತಿ ಹಂತದಲ್ಲೂ ಎಲ್ಲರ ಮೇಲೂ ಅನುಮಾನ ಬರುತ್ತದೆ ಆದರೆ ಕಡೆಯಲ್ಲಿ ಯಾರು ಎಂಬುದನ್ನು ಪುರುಷೋತ್ತಮನು ಪತ್ತೆ ಹಚ್ಚುವುದು ಅತ್ಯದ್ಭುತವಾಗಿದೆ. ಈ ಸಂಶೋಧನೆಯಿಂದಲೇ ಸೀತೆಯ ಬಗ್ಗೆ, ಮೀನಾಕ್ಷಿಯ ಬಗ್ಗೆ, ಅಮ್ಮನ ಬಗ್ಗೆ, ಆಫೀಸಿನ ಎನ್ನಟ್ಟಳ ಬಗ್ಗೆ, ಕಲ್ಯಾಣಿ ಬಗ್ಗೆ, ಸದಾಶಿವಮಾವನ ಬಗ್ಗೆ, ಸುಬ್ಬರಾಯರ ಬಗ್ಗೆ, ಮಂಜುನಾಥ ಸೀತೆಯರ ಬಗ್ಗೆ, ಮುದ್ದು ಸರಸ್ವತಿಯ ಬಗ್ಗೆ ತಿಳಿದು ತನ್ನ ಮನೆಯ ಪ್ರಕರಣದಿಂದ ಈ ಎಲ್ಲರೂ ತನ್ನ ಜೀವನದಲ್ಲಿ ಬಂದು ಒಳ್ಳೆಯದೇ ಆಯಿತೆಂದು ಸಂತೋಷಪಡುತ್ತಾನೆ.
ಈ ಮನುಷ್ಯನ ಗುಣವೇ ಹೀಗೆಯಾ? ತನ್ನ ದುರಾಸೆಗೋಸ್ಕರ ತಾನು ಬದುಕಲು ಇತರರ ಮೇಲೆ ದೈಹಿಕವಾಗಿ ಮಾನಸಿಕವಾಗಿ ನೋಯಿಸುವ ಕೆಟ್ಟಗುಣದ ಕುರಿತು ಸಂಕಟಪಡುತ್ತಾನೆ. ಆದರೂ ಎಷ್ಟೇ ಅಡ್ಡಿ ಆತಾಂಕಗಳು ಬಂದರೂ ಎಲ್ಲೂ ತನ್ನ ಧೈರ್ಯ ಕಳೆದುಕೊಳ್ಳದೆ, ತಾಳ್ಮೆಯಿಂದ ಪರಿಸ್ಥಿತಿಯನ್ನು ಎದುರಿಸುವ ಪುರುಷೋತ್ತಮನು ನಮಗೆ ಮಾರ್ಗದರ್ಶಕನಾಗುತ್ತಾನೆ.
ಆಯ್ದ ಕೆಲವು ಸಾಲುಗಳು:
*ಮನುಷ್ಯ ತನ್ನ ಅನುಭವಗಳಲ್ಲಿ ತೀರ ಒಬ್ಬಂಟಿ ನೋಡು, ಇನ್ನೊಬ್ಬರ ನೋವು ಊಹಿಸಬಲ್ಲೆವು,ಅನುಭವಿಸಲಾರೆವು.*
*ನಮ್ಮ ಮಾತಿನಿಂದ ಯಾರನ್ನೂ ಬದಲಿಸಲಾರೆವು, ಏನನ್ನೂ ಬದಲಿಸಲಾರೆವು, ಆದರೂ ನಾವು ಸಿಲಿಕಿಕೊಂಡ ಕೆಲವು ಸನ್ನಿವೇಶಗಳಲ್ಲಿ ಇನ್ನೊಬ್ಬರ ಅನುಭವ ನಮಗೆ ತಿಳಿಯದನೇ ನಮ್ಮ ನೆರವಿಗೆ ಬರುವುದುಂಟು.*
*ಬದುಕಿಗೆ ಅರ್ಥವೇನು? ಎಂಬ ಪ್ರಶ್ನೆ ವ್ಯಕ್ತಿಗೆ ಸೇರಿದ್ದಲ್ಲ. ಬದುಕೇ ಈ ಪ್ರಶ್ನೆಯನ್ನು ವ್ಯಕ್ತಿಗೆ ಹಾಕುತ್ತದೆಯಂತೆ. ಜೀವನದ ಸಾರ್ಥಕತೆಯನ್ನು ಪ್ರಶ್ನಿಸಹಚ್ಚುವ ದುರ್ಧರ ಪ್ರಸಂಗಗಳು ಬದುಕು ನಮಗೆ ಹಾಕುವ ಪ್ರಶ್ನೆಗಳಿಗೆ ಉದಾಹರಣೆಗಳು. ಬುದ್ಧನಿಗೆ ಎದುರಾದ ಜರ್ಜರಿತನಾದ ಮುದುಕ, ರೋಗಿ, ಹೆಣ ಮತ್ತು ಬೈರಾಗಿ ಅವನಿಗೆದುರಾದ ಪ್ರಶ್ನೆಗಳಾಗಿದ್ದವು. ಆ ಮಹಾಚೈತನ್ಯ ಜವಾಬು ಕೊಟ್ಟದ್ದು ಎಂತಹಾ ಭವ್ಯ ಕ್ರಿಯೆಯಿಂದ?*.
Not as tight as his short stories, Chittala excels in weaving a story which is both personal and social. 'Its not what we are, it what we do'. One of the must reads for Kannada literature lovers. Difficult job for the one who wishes to translate to Englsih.