Jump to ratings and reviews
Rate this book

ಇದು ಕತೆಯಲ್ಲಾ ಜೀವನ | Idu Katheyalla Jeeva

Rate this book
‘ಇದು ಕತೆಯಲ್ಲ ಜೀವನ’ ವಸುಮತಿ ಉಡುಪ ಅವರ ಕಥಾ ಸಂಕಲನವಾಗಿದ್ದು, ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಬಿಡಿ ಕತೆಗಳನ್ನು ಒಗ್ಗೂಡಿಸಿರುವ ಗುಚ್ಛ ಈ ಕಥಾಸಂಕಲನ. ಇವು ಕಲ್ಪನೆಗಿಂತಾ ವಾಸ್ತವಕ್ಕೆ ಹೆಚ್ಚು ಒತ್ತುಕೊಟ್ಟು ಬರೆದ ಕತೆಗಳು. ಅನುದ್ದೇಶಪೂರ್ವಕವಾಗಿ ಸಂಕಲನದ ಹಲವು ಕತೆಗಳು ಇಳಿವಯಸ್ಸಿನ ತವಕತಲ್ಲಣಗಳನ್ನು ಬಿಂಬಿಸುವ ಕತೆಗಳಾಗಿ ರೂಪುಗೊಂಡಿರುವುದು ವಯೋಮಾನಕ್ಕೆ ತಕ್ಕಂತೆ ಯೋಚನಾಧಾಟಿ ಕೂಡಾ ಬದಲಾಗುವುದನ್ನು ಸಾಂಕೇತಿಕವಾಗಿ ತೋರಿಸುತ್ತದೆ. ಉಳಿದಂತೆ ಹೆಚ್ಚಿನ ಕತೆಗಳು ಜೀವನದ ಹಲವು ಮಗ್ಗುಲುಗಳನ್ನು ಅನಾವರಣಗೊಳಿಸುತ್ತವೆ. ಬದುಕಿನ ಹತ್ತು ಹಲವಾರು ಹಳವಂಡಗಳಲ್ಲಿ, ಬಾಳಿನ ಕುಲುಮೆಯಲ್ಲಿ ಬೆಂದು ನೊಂದರೂ ತಮ್ಮದೇ ರೀತಿಯಲ್ಲಿ ಪ್ರತಿರೋಧಿಸುತ್ತಾ, ಜೀವನದ ಕಟು ಸತ್ಯವನ್ನು ಅರಿಯುತ್ತಾ ಮಾನವೀಯ ಮೂರ್ತಿಗಳಾಗಿ ನಿಲ್ಲುವ ಇಲ್ಲಿನ ಹಲವಾರು ಪಾತ್ರಗಳ ಕಥೆ ಹೃದಯಸ್ಪರ್ಶಿಯಾಗಿ ಚಿತ್ರಿತಗೊಂಡಿದೆ.

112 pages, Paperback

Published January 1, 2025

About the author

Vasumathi Udupa

13 books5 followers
ಲೇಖಕಿ ವಸುಮತಿ ಉಡುಪ ಅವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕಿರಣಕೆರೆಯಲ್ಲಿ 1948 ಏಪ್ರಿಲ್ 18ರಂದು ಜನಿಸಿದರು. ತಾಯಿ ತ್ರಿಪುರಾಂಬ, ತಂದೆ ರಂಗಾಭಟ್ಟರು. ತೀರ್ಥಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಇವರು ಬರೆದ ಕಥೆಗಳು ಕರ್ನಾಟಕದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಲವು ಕಥೆಗಳು ವಿವಿಧ ಭಾಷೆಗೆ ಅನುವಾದಗೊಂಡಿವೆ.

ಪರಿವರ್ತನೆ, ಸಂಬಂಧಗಳು, ಅನವರತ, ಅವ್ಯಕ್ತ ವಸುಮತಿ ಅವರ ಪ್ರಮುಖ ಕಾದಂಬರಿಗಳು. ಬಂದನಾ ಹುಲಿರಾಯನು, ವಿಕಲ್ಪ, ಶೇಷ ಪ್ರಶ್ನೆ ಅವರ ಕತಾ ಸಂಕಲನ. ‘ಸೀತಾಳದಂಡೆ’ ಮತ್ತೊಂದು ಪ್ರಬಂಧ ಸಂಕಲನ. ಅವರ ಹಲವಾರು ಕತೆಗಳು ಹಿಂದಿ, ತೆಲುಗು ಭಾಷೆಗೆ ಅನುವಾದಗೊಂಡಿದೆ. ಅವರ ಸಾಹಿತ್ಯ ಸೇವೆಗೆ ‘ಅಳಸಿಂಗ ಪ್ರಶಸ್ತಿ, ರಾಮಕ್ಕ ಪದ್ಮಕ್ಕ ಗ್ರಂಥಾಲಯ ಕಾದಂಬರಿ ಬಹುಮಾನ, ಮುಂಬೈ ಕನ್ನಡಿಗರ ಕೂಟದ ಮಕ್ಕಳ ನಾಟಕ ರಚನಾ ಸ್ಪರ್ಧೆಯಲ್ಲಿ ಬಹುಮಾನ, ಕಥಾರಂಗಂ ಸಂಸ್ಥೆಯಿಂದ ಕನ್ನಡ ಕವಿತಾ ಪ್ರಶಸ್ತಿ, ದು.ನಿಂ. ಬೆಳಗಲಿ ಸಾಹಿತ್ಯ ಪ್ರಶಸ್ತಿ ಮುಂತಾದವು ಅವರನ್ನರಸಿವೆ. ಇವರ ಅಭಿಜಿತನ ಕತೆಗಳು (ಮಕ್ಕಳ ಸಾಹಿತ್ಯ) ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ದೊರೆತಿದೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
0 (0%)
4 stars
3 (100%)
3 stars
0 (0%)
2 stars
0 (0%)
1 star
0 (0%)
Displaying 1 - 2 of 2 reviews
Profile Image for Madhu B.
105 reviews10 followers
January 2, 2026
ತಮ್ಮ ಜೀವನಾನುಭವದಿಂದ ಮಾತ್ರ ಇಂತ ಕಥೆಗಳು ಬರೆಯೋಕೆ ಸಾಧ್ಯ. ಎಲ್ಲ ಕಥೆಯಲ್ಲೂ ಹೆಣ್ಣೇ ಪ್ರಧಾನ ಹಾಗು ಸಬಲೆ , ಎಲ್ಲವು ಎಲ್ಲೋ ಕೇಳಿದ, ನೋಡಿದ ಅಥವಾ ಓದಿದಿದ್ದು ಅನ್ನಿಸಿದರೂ ಕಥಾ ಶೈಲಿ ಇಂದ ಹೊಸತನಿಸುತ್ತೆ.ನಂಜು ನನಗೆ ಇಷ್ಟಆದ ಕಥೆ.
Displaying 1 - 2 of 2 reviews

Can't find what you're looking for?

Get help and learn more about the design.