What do you think?


Sakinala Muttu
ಖ್ಯಾತ ಕಥೆಗಾರ ವಿವೇಕ ಶಾನಭಾಗ ಅವರ ಕಾದಂಬರಿ-ಸಕೀನಾಳ ಮುತ್ತು. ಲೇಖಕರು ಹೇಳುವಂತೆ ‘ಏನೋ ಒಂದು ನಡೆದು ಅದಕ್ಕೆ ಕುಣಿಕೆ ಹಾಕಿ ಮತ್ತೇನೇನೋ ನಡೆಯುತ್ತ ಸಾಗುತ್ತದೆ. ಆದರೆ, ಕಾದಂಬರಿ ಇರುವುದು ನಡೆದಿದ್ದರ ಬಗ್ಗೆಯೋ ಅಥವಾ ನಡೆಯಿತೆಂದು ಗ್ರಹಿಸಲಾಗಿದ್ದರ ಬಗ್ಗೆಯೋ ಅಥವಾ ನಡೆಯಬಹುದಾದ ಸಾಧ್ಯತೆಗಳ ಬಗ್ಗೆಯೋ-ಇಂಥ ಪ್ರಶ್ನೆಗಳು ಈ ಕಾದಂಬರಿಯಲ್ಲಿ ಓದುಗನೆಂಬ ವಿಕ್ರಮನನ್ನು ಬೇತಾಳಗಳಾಗಿ ಕಾಡುತ್ತವೆ. ಹಾಗೆ ಕಥೆ ಕಾಣುವ ಮೂಲಕ ಓದುಗರಿಗೆ -ಸ್ವತಃ ಲೋಕವೇ ಹಾಗಿರಬಹುದೆ, ಸ್ಥಿರವೂ, ನಿಶ್ಚಿತವೂ ಎಂದು ತಿಳಿದ ಈ ಜೀವನ ವ್ಯಾಪಾರಗಳು ಕೇವಲ ಮನೋನಿರ್ಮಿತಗಳೆ? ಎಂಬೊಂದು ಗುಮಾನಿ ಉದ್ಭವಿಸಿದರೆ ಅದು ಕಾಕತಾಳೀಯವಾಗಿರಲಾರದೇನೋ...’ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
Audible Audio
Published July 22, 2025
Ratings & Reviews
Friends & Following
Create a free account to discover what your friends think of this book!
Community Reviews
Displaying 1 - 1 of 1 review
September 23, 2026
ವಿಷಯಗಳು ತೀರಾ ಸಾಂದರ್ಭಿಕವೆನಿಸಿದರೂ ಆ ಅನೌಪಚಾರಿಕತೆಯ ಮುಖವಾಡದಡಿಯಲ್ಲೆ ಸೂಕ್ಷ್ಮ ವಿಚಾರಗಳನ್ನು ಪುಸ್ತಕ ಸರಾಗವಾಗಿ ಹೊತ್ತು ಸಾಗುತ್ತದೆ.
Displaying 1 - 1 of 1 review


