ಶಿರ್ಲೆ ಅರೋರ ಎಂಬ ಲೇಖಕಿ ಬರೆದಿರುವ ಈ ಕೃತಿ ಮೊದಲು ಪ್ರಕಟಗೊಂಡದ್ದು 1960ರಲ್ಲಿ, ನಮ್ಮ ಸ್ವಾತಂತ್ರ್ಯೋತ್ತರ ಭಾರತವನ್ನು ಲೇಖಕಿ ತಮ್ಮ ದೃಷ್ಟಿಕೋನದಲ್ಲಿ ಇಷ್ಟು ಚಂದವಾಗಿ ಹಿಡಿದಿದ್ದಾರೆ ಎಂಬುದು ಬಹು ಅಭಿಮಾನದ ಮಾತು. ಲೇಖಕಿ ಮೂಲತಃ ಅಮೇರಿಕಾದ ಕ್ಯಾಲಿಫೋರ್ನಿಯಾದವರು. ಭಾರತೀಯರಾದ ಅರೋರ ಅವರನ್ನು ವಿವಾಹವಾಗಿ ಭಾರತದ ಕೊದೈಕನಲ್ ರಲ್ಲಿ ತಂಗುತ್ತಾರೆ. ಅಲ್ಲಿನ ಪರಿಸರದಲ್ಲಿ ಕಟ್ಟಿರುವ ಚಂದದ ಕೃತಿಯೇ "what, then, Raman?".
ಇದು ರಾಮನ್ ಎಂಬ ಪುಟ್ಟ ಪುಸ್ತಕಪ್ರೇಮಿಯ ಕಥೆ. ಇದೇ ಕಾರಣಕ್ಕೆ ಇದನ್ನು ಎಲ್ಲ ಪುಸ್ತಕ ಪ್ರೇಮಿಗಳು ಓದಲೇಬೇಕೆಂದು ತಾಕೀತು ಮಾಡುತ್ತೇನೆ. ಕಥೆ ನಡೆಯುವುದು ಬೆಟ್ಟದ ತಪ್ಪಲಿನ ಒಂದು ಹಳ್ಳಿಯಲ್ಲಿ. ರಾಮನ್ ಎಂಬ ಪುಟ್ಟ ಹುಡುಗ ಕಿತ್ತು ತಿನ್ನುವ ಬಡತನದ ಮನೆಯಲ್ಲಿ ಹಿರಿಮಗನಾಗಿ ಜನಿಸಿರುತ್ತಾನೆ. ತಂದೆ ಬಡವನಾದರೂ ಮಗ ಓದಿ ಜ್ಞಾನವನ್ನು ಸಂಪಾದಿಸುವ ಆಸೆಯನ್ನು ಚಿವುಟದೇ ಪೋಷಿಸುವ ಸುಮನಸ್ಕ. ಇವರ ಉತ್ತಮ ದುಡಿಮೆಗೆ ಆಧಾರ ಬೇಸಿಗೆ ಕಾಲದಲ್ಲಿ ಬೆಟ್ಟದ ತಮ್ಮ ಬಂಗಲೆಗೆ ಬಂದು ತಂಗುವ ವಿದೇಶಿಗಳು. ಇವರು ಬೆಟ್ಟವನ್ನು ತೊರೆದರೆ, ಅನ್ನಕ್ಕೂ ಆಗಸ ನೋಡುವ ಕರ್ಮ ರಾಮನ್ ಕುಟುಂಬದ್ದು. ರಾಮನ್ ನ ತಂದೆ ಹೆಚ್ಚಿನ ದುಡಿಮೆಗೆ ಸೀಮೆಗೆ ಹೊರಟಾಗ ರಾಮನ್ ಹಿರಿಯ ಮಗನಾಗಿ ಶಾಲೆ ಬಿಟ್ಟು ಮನೆಯ ದುಡಿಮೆಗೆ ಕೈ ಜೋಡಿಸುವ ಧರ್ಮಸಂಕಟಕ್ಕೆ ಬೀಳುತ್ತಾನೆ. ಆದರೆ ತಂದೆ ಅವನಿಗೊಂದು ದತ್ತಿಯನ್ನು ಘೋಷಿಸಿ ಹೋಗುತ್ತಾರೆ. ರಾಮನ್ ದುಡಿಯುವ ಪ್ರತಿ ರೂಪಾಯಿಗೂ ಒಂದು ನಯಾ ಪೈಸೆ ರಾಮನದ್ದು.
ರಾಮನ ಅದೃಷ್ಟವೆಂಬಂತೆ ಬೆಟ್ಟದ ಹೂಗಳ ಚಿತ್ರ ಬಿಡಿಸಿ ಕಲೆಹಾಕಿ ಪುಸ್ತಕ ಮಾಡುತ್ತಿದ್ದ ಒಬ್ಬ ವಿದೇಶಿ ಮಹಿಳೆಯ ಪರಿಚಯವಾಗುತ್ತದೆ. ಆಕೆಗೆ ಬೆಟ್ಟದ ಹೂಗಳನ್ನು ಹುಡುಕಿ ತಂದು ಆಕೆಯಿಂದ ತನ್ನ ಪರಿಶ್ರಮಕ್ಕೆ ದುಡ್ಡು ತೆಗೆದುಕೊಂಡು ತನ್ನ ಮೀಸಲಿನ ದುಡ್ಡು ಕೂಡಿಟ್ಟು ಮಿಕ್ಕಿದ್ದನ್ನು ತಾಯಿಗೆ ಕೊಡುತ್ತಿರುತ್ತಾನೆ. ಇದೇ ಸಮಯದಲ್ಲಿ ಪುಸ್ತಕ ವ್ಯಾಪಾರಿ ತುಂಬುಸ್ವಾಮಿಯ ಅಂಗಡಿಯಲ್ಲಿನ ಒಂದು ರಾಮಾಯಣ ಪುಸ್ತಕ ರಾಮನ್ಗೆ ಓದುವ ಅತೀವ ಹಂಬಲ ಮೂಡಿಸುತ್ತದೆ. ಆದರೆ ಅದರ ಬೆಲೆ 6.50 ರೂಪಾಯಿಗಳು, ಅಂದರೆ ರಾಮನ್ ಕೈಗೆ ನಿಲುಕದ್ದು. ಆದರೆ ಆ ಪುಸ್ತಕದ ಮೋಹ ಆತನ ನಿದ್ದೆಯನ್ನು ಸಹ ಕೆಡಿಸುತ್ತದೆ. ಅನಂತರ ಪರಂಗಿ ಮಹಿಳೆ ದಟ್ಟಡವಿಯಲ್ಲಿ ಸಿಗುವ ಆರ್ಕಿಡ್ಸ್ ಗಿಡಗಳನ್ನು ತಂದುಕೊಟ್ಟರೆ ಒಂದು ಪ್ರಬೇಧಕ್ಕೆ ಮೂರು ರೂಪಾಯಿ ಕೊಡುವುದಾಗಿ ಹೇಳುತ್ತಾರೆ. ರಾಮನ್ ಕಾಡಿಗೆ ಹೋಗಿ ಮೂರು ಪ್ರಬೇಧಗಳ ಆರ್ಚಿಡ್ಸ್ ಗಿಡ ತಂದು 9 ರೂಪಾಯಿಗಳನ್ನು ಗಳಿಸುತ್ತಾನೆ. 3 ರೂಪಾಯಿ ತಾಯಿಗೆ ಕೊಟ್ಟು ತನ್ನ 6.50 ರೂಪಾಯಿಗಳನ್ನು ಜೇಬಲಿಟ್ಟು ರಾಮಾಯಣ ಪುಸ್ತಕ ಕೊಳ್ಳುವ ಸಂದರ್ಭಕ್ಕೆ ತನ್ನ ಜವಾಬ್ದಾರಿ ನೆನಪಾಗುತ್ತದೆ. ಅಂತ್ಯ ನಿರ್ಗಣ್ಣಾಗಿಸುತ್ತದೆ.
ಭಾಷೆಯಂತೂ ಸುಂದರ ಮತ್ತು ಸುಲಲಿತ. ಭಾರತವನ್ನು ದೋಷಗಳಲ್ಲೇ ಹಿರಿಮೆಯನ್ನು ಕಂಡು ಪ್ರೀತಿಸುವ ಹೃದಯ ಮಾತ್ರ ಬರೆಯಲು ಸಾಧ್ಯವಾಗುವಂತೆ ಪ್ರೀತಿಯಿಂದ ಬರೆದಿದ್ದಾರೆ ಲೇಖಕರು. ಬಡತನ ಮತ್ತು ರಾಮನ್ ಪುಸ್ತಕ ಪ್ರೇಮದ ಸಮತೋಲನವನ್ನು ಅಮೋಘವಾಗಿ ನಿರ್ವಹಿಸಿದ್ದಾರೆ. ಒಂದು ಕಡೆ ರಾಮನ್ ತಾಯಿ ಹೇಳುವ ಮಾತೊಂದು ಕೇಳಿ "You would buy books when we have not enough food! You would fill your head with stories of battles that happened long ago, while now, right now, we have barely enough to eat. From day by day we are not sure of having money to buy rice for the next meal. Books! Books! Which one we need, tell me? Books or food?" ಈ ರೀತಿಯ ಚಿತ್ರಣ ಅನ್ಯ ದೇಶದ ಮಹಿಳೆಗೆ ತಿಳಿದು ಬರಬೇಕಂದರೆ ಆಕೆ ನಮ್ಮ ಸಮಾಜದಲ್ಲಿ ಎಷ್ಟು ಬೆರೆದ್ದಿರಬೇಡ. ಖುಷಿಯಾಯಿತು.
ಅಂದ ಹಾಗೆ ಈ ಕಥೆ ಎಲ್ಲೋ ಕೇಳಿದ್ದೀನಿ ಅಂತ ನಿಮಗೆ ಅನಿಸಿದರೆ, ಖಂಡಿತ ನಿಜ, ನೀವೆಲ್ಲರೂ ಈ ಕಥೆಯನ್ನು ಚಿತ್ರವಾಗಿ ನೋಡೇ ಇರುತ್ತೀರಾ. ಇದೇ ಪುಸ್ತಕವನ್ನು ದಿವಂಗತ ಪುನೀತ್ ಬಾಲನಟನಾಗಿ ಅಭಿನಯಿಸಿರುವ "ಬೆಟ್ಟದ ಹೂ" ಆಗಿ ತೆರೆಗೆ ತಂದದ್ದು. ❤️
Sweet little story of an Indian boy who loves to read and thinks of nothing but the next book he can buy (sounds familiar!), but must leave school to help his family put food on the table. None of the other children in the village have any education, so his devotion to reading and studying has led him to drift apart from them, but this solitude serves him well when he finds well-paying work seeking out unique flowers for a white woman with a seasonal home there.
I learned a few things, actually, from vocabulary to more about the climate in the hills, but more than anything, this book's biggest impact was making me crave rice. Rice with "pepper water," even, and I don't like much of anything spicy at all. Mostly because their daily supper has such a central focus, and it made me appreciate how satisfying a simple thing like being able to add seasoning can be when the other options are "totally plain rice" or "nothing at all."
From my 12yo son: It's a really fun book showing the love and closeness of the families of the hill people in India. It shows how everyone has to work just to eat. It also makes you realize how much we have, yet how little we need. It's a great book with love and compassion, and if someday the author wanted to write a sequel, I would probably read it.
From Mom: I appreciated the cultural value of Tiger on the Mountain in exposing my son to the reality of subsistence living in a gentle, gracious manner. I also enjoyed watching Raman's growth throughout the book, as he was the first in his village who learned to read, how he handled that schooling be taken from him for a time, and how he learned to step up to the responsibility as temporary head of the home while his father went to the plains to earn money for the family. He wrestles with multiple challenges throughout and he emerges beautifully victorious over his final, greatest challenge.
Read sometime in late elementary school. Enjoyed it then, but forgot the title. And yet, over 40 years later, remembered most of the plot and the hero, Raman.
My uncle gave me this book while I was in grade school and It’s been in my list for 30 years! I finally tried reading it and found it too boring. I can’t imagine kids these days reading it. Maybe it was good in the 60’s?
Nice short book about a small boy in India struggling with the pride of being the first in his community and family to be educated and trying to help his family's poverty.
Maybe a 3 1/2 star, but it was actually very good. Great intro to India lifestyle. Simple but still beautiful writing. There were times I wish there were more vivid descriptions of the environments and the flowers he finds to make money, but for a homeschool study on India this would be a good reader for 10 and up but I plan to read it aloud to my granddaughters who are younger. It has a very satisfying ending.
This is the touching story of a boy who is the first to learn to read in his family. This book really stresses the value of family, responsibility, and hard work. I would rate it higher but the ending was somewhat unsatisfying.
This is one of my favorite books to read aloud from TGTB! Raman is the first from his village to go to school. His love for books places him on a journey toward hard work and sacrifice for his family. You'll learn more about India, including the legend of the one eyed tiger and the flowers, like the iris, that grow in the Indian hills. A book not to be missed!