What do you think?

ರೋಲ್ ಕ್ಯಾಮೆರಾ ಮರ್ಡರ್ | Role Camera Murder
'ನಾವು ಹೋಗ್ತಿರೋ ಜಾಗ ಸರಿಯಿಲ್ಲ ಅನ್ನೋದು ನಿನಗೂ ಗೊತ್ತು. ಭಾರತದ ಟಾಪ್ - 10 ಹಾಂಟೆಡ್ ಜಾಗಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ, ಮನುಷ್ಯ ಸಂಪರ್ಕವಿಲ್ಲದ, ದ್ವೀಪದ ನಡುವೆಯಿರೋ ಪಾಳು ಬಿದ್ದ ಹಳೆಯ ಬ್ರಿಟಿಷ್ ಬಂಗಲೆಯದು. ಅದನ್ನು ವಶಪಡಿಸಿಕೊಳ್ಳೋಕೆ ಅಂತ ಹೋದ ಎಷ್ಟೋ ಮೀನುಗಾರರು ಬದುಕಿ ಬ೦ದಿಲ್ವಂತೆ! ಮನುಷ್ಯರ ರಕ್ತ ಹೀರುವ ರಾಕ್ಷಸ ಜಾಗವದು ಅಂತ ಈ ಸಮುದ್ರದ ಅಂಚಿನಲ್ಲಿರುವ ಊರಿನವರು ಮಾತಾಡ್ತಾರೆ. ಜೊತೆಗೆ ಈಗಲೂ ಆ ದ್ವೀಪದ ತೀರದಲ್ಲಿ ಮನುಷ್ಕರ ಮೂಳೆಗಳು ಸಿಕ್ಕಾವಂತೆ! ಅಂತಹದರಲ್ಲಿ ಆ ಜಾಗವನ್ನೇ ನೋಡದ ನಾವು ಆ ಜಾಗದಲ್ಲಿ ಇಪ್ಪತ್ತು ದಿನಗಳ ಶೂಟಿಂಗ್ ಪ್ಲಾನ್ ಮಾಡಿದ್ದೇವೆ. ಆದ್ದರಿಂದ ಆದಷ್ಟು ಬೇಗ ಶೂಟಿಂಗ್ ಮುಗಿಸಿಕೊಂಡು ಅಲ್ಲಿಂದ ಬಂದರೆ ಈ ಹಡಗಿನಲ್ಲಿರುವ ಎಲ್ಲರಿಗೂ ಒಳ್ಳೆಯದು' ಎಂದು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಮಧುಕರ್ ಅಯ್ಯಪ್ಪನು ತನ್ನ ಭಯ ಮಿಶ್ರಿತ ದನಿಯಲ್ಲಿ ಹೇಳಿ ಮುಗಿಸುತ್ತಿದ್ದಂತೆ ಅದಕ್ಕೆ ಪ್ರತಿಯಾಗಿ ಸಣ್ಣಗೆ ನಕ್ಕ ನಿರ್ದೇಶಕ ಪ್ರಭುದೇಸಾಯಿ ಯು "ಆ ಜಾಗದ ಬಗ್ಗೆ ಗೊತ್ತಿದ್ದೇ ಅಲ್ಲಿಗೆ ಹೋಗ್ತಿರೋದು. ಊರಿನವರು ಕಟ್ಟಿಕೊಂಡಿರುವ ಕತೆಗಳನ್ನೇಲ್ಲಾ ನಂಬಿಕೊಂಡು ಕೂತ್ರೆ ನನ್ನ ಸಿನಿಮಾ ಆಗಲ್ಲ ಈ ಸಿನಿಮಾ ನನ್ನ ಎಷ್ಟೋ ದಿನಗಳ ಕನಸು' ಎನ್ನುತ್ತಾ ತನ್ನ ಕೈಯಲ್ಲಿಡಿದಿದ್ದ ಬೈನಾಕುಲರ್ ನಿಂದ ತನ್ನೆದುರಿಗಿದ್ದ ದ್ವೀಪದತ್ತ ದೃಷ್ಟಿಹರಿಸಿದ.
ಅತ್ತ ಸುಮಾರು ವರ್ಷಗಳಿಂದ ಕೊಳೆತ ಶವಗಳನ್ನು ತನ್ನೆದುರಿಗಿರಿಸಿಕೊಂಡು, ನೂರಾರು ಗರುಡಗಳಿಗೆ ತನ್ನ ಒಡಲಿನಲ್ಲಿ ಜಾಗಕೊಟ್ಟು "ಗರುಡಗಿರಿ" ಎಂಬ ಹೆಸರು ಪಡೆದಿದ್ದ ನಿಗೂಢ ದ್ವೀಪವು, ಇದೀಗ ಹದಿನಾರು ಜನರಿರುವ ಸಿನಿಮಾ ತಂಡದ ಬರುವಿಕೆಗಾಗಿ ಆಗಿನಿಂದ ಕಾದು ಕುಳಿತಂತೆ ತೋರುತ್ತಿತ್ತು!!

232 pages, Paperback
First published January 1, 2025
About the author
Kowshik Koodurasthe
17 books17 followersವೃತ್ತಿಯಿಂದ ಸಹಾಯಕ ನಿರ್ದೇಶಕರಾಗಿರುವ ಕೌಶಿಕ್ ಕೂಡುರಸ್ತೆ ಅವರು ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೂಡುರಸ್ತೆ ಗ್ರಾಮದವರು. ತಂದೆ-ಹೆಚ್.ಎಸ್. ತಮ್ಮೇಗೌಡ, ತಾಯಿ ಭಾಗ್ಯ ಆಚಾರ್ಯ ಇನ್ಸ್ಟಿಟ್ಯೂಟಿನಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಹೃದಯದ ಮಾತು’ ಇವರ ಮೊದಲ ಪ್ರಕಟಿತ ಕವನ ಸಂಕಲನ.
‘ಇಂತಿ ನಿಮ್ಮ ಆತ್ಮೀಯ’ ಎಂಬ ಕಾದಂಬರಿಯು ಇವರ ಎರಡನೆಯ ಪ್ರಕಟಿತ ಕೃತಿಯಾಗಿದ್ದು ಎರಡನೇ ಮುದ್ರಣವನ್ನು ಕಂಡಿದೆ. ಈ ಕಾದಂಬರಿಯು ‘ಬಹ್ರೇನ್ ಕನ್ನಡ ಡಿಂಡಿಮ’ ಸಮಾರಂಭದಲ್ಲಿ ಪ್ರದರ್ಶನಗೊಂಡಿದೆ. ಗ್ರಿಫಿನ್ಸ್ ಗುರುಕುಲ ಎಂಬ ಸಂಸ್ಥೆಗೆ ಬಿಸಿನೆಸ್ ಕುರಿತಾದ ‘ಬಿಸಿನೆಸ್ ಮತ್ತು ನಾನು’ ಹಾಗೂ ‘ಬಿಸಿನೆಸ್ ಚಾಣಕ್ಯ’ ಎಂಬ ಪುಸ್ತಕಗಳನ್ನು ನಿರೂಪಣೆ ಮಾಡಿಕೊಟ್ಟಿದ್ದಾರೆ. ಇವರು ‘ದಾನವ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದು, ‘ಆಟೋಶಂಕ್ರಿ’ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ.
ತಾನು ಬರೆದ ಕಾದಂಬರಿಗಳನ್ನು ಸಿನಿಮಾರೂಪಕ್ಕೆ ತಂದು ನಿರ್ದೇಶಕನಾಗೇಕೆಂಬುದು ಇವರ ಗುರಿ. ಇವರ ಪತ್ತೇದಾರಿಯ ಕಾದಂಬರಿಗಳಾದ ‘ಕಾಲಯ ತಸ್ಮೈ ನಮಃ’, ಮತ್ತು ‘ಸ್ವಪ್ನದ ಬೆನ್ನೇರಿ’ಯನ್ನು ಸ್ನೇಹ ಬುಕ್ ಹೌಸ್ ನವರು ಪ್ರಕಟಿಸಿದ್ದಾರೆ. ಜೊತೆಗೆ ಮತ್ತೊಂದು ಪತ್ತೇದಾರಿಯ ಕಾದಂಬರಿ ‘ತ್ಯಾಗರಾಜ್ ಕಾಲೋನಿ’ ಪ್ರಕಟಗೊಂಡಿದೆ.

Ratings & Reviews
Friends & Following
Create a free account to discover what your friends think of this book!
Community Reviews
Displaying 1 - 6 of 6 reviews
January 12, 2026
ರೋಲ್ ಕ್ಯಾಮೆರಾ ಮರ್ಡರ್ - Kowshik Koodurasthe
ಕನ್ನಡದಲ್ಲಿ ನಿಯಮಿತವಾಗಿ ಅದೂ ಪತ್ತೇದಾರಿ ಕಾದಂಬರಿ ಪ್ರಕಾರದಲ್ಲಿ ಬರೆಯುತ್ತಿರುವವರಲ್ಲಿ ಕೌಶಿಕ್ ಒಬ್ಬರೇ ಎದ್ದು ಕಾಣುವ ಹೆಸರು. ಒಬ್ಬನೇ ಪತ್ತೇದಾರನ ಇಟ್ಟುಕೊಂಡು ಸರಣಿ ಪುಸ್ತಕಗಳ ಬರೆಯುತ್ತಿರುವ ಸದ್ಯದ ಏಕೈಕ ಲೇಖಕ ಎಂದೂ ಹೇಳಬಹುದು.
ಇಂತಹ ಕೃತಿಗಳಿಗೆ ಅಧ್ಯಯನವೂ ಅಗತ್ಯ.
ಕೌಶಿಕ್ ಬರೆಯುವ ಕತೆಗಳು ವಿಭಿನ್ನ.
ಈ ಕಾದಂಬರಿ ಅಗಾಥಾ ಕ್ರಿಸ್ಟಿ ಅವರ ದೆನ್ ದೇರ್ ವೆರ್ ನನ್ ಹಾಗೂ ಉಪೇಂದ್ರರ ಶ್ ಸಿನಿಮಾ ಎರಡನ್ನೂ ನೆನಪಿಸುತ್ತದೆ. ಆದರೆ ಇವೆರಡಕ್ಕಿಂತ ಭಿನ್ನ ಕತೆ ಇದರದು.
ಕೊನೆಯವರೆಗೆ ಸಸ್ಪೆನ್ಸ್ ಕಾಯ್ದುಕೊಂಡಿ ಇದೊಂದು ಹಾರರ್ ಕತೆಯೇ ಎಂಬಷ್ಟರ ಮಟ್ಟಿಗೆ ಕುತೂಹಲ ಕಾಯ್ದುಕೊಂಡರು.
ಮಜಾ ಕೊಟ್ಟ ಓದು.

November 23, 2025
ಈ ಪುಸ್ತಕ ಸ್ಟ್ರಿಕ್ಟ್ ಆಗಿ ಕೌಶಿಕ್ ಅವರ ಪುಸ್ತಕಗಳನ್ನ ರೆಗುಲರ್ ಆಗಿ ಓದುವ ಓದುಗರು ಅಥವಾ ಕ್ಯಾರೆಕ್ಟರ್ ಡೆವಲಪ್ಮೆಂಟ್ ಇಲ್ಲದೆ ಇರುವ ಥ್ರಿಲರ್ ಕತೆಗಳನ್ನ ಇಷ್ಟ ಪಡೋರು ಓದಿದ್ರೆ ಸೂಕ್ತ.
ಒಂದು ಸಿನಿಮಾ ತಂಡ ಒಂದು ದ್ವೀಪಕ್ಕೆ ಹೋಗಿ ಅಲ್ಲಿದ್ದ ಹಾಂಟೆಡ್ ಬಂಗಲೆಯಲ್ಲಿ ಶೂಟಿಂಗ್ ಮಾಡಲು ನಿರ್ಧರಿಸುತ್ತೆ. ಶೂಟಿಂಗ್ ಸೀನ್ಸ್, ಅನಿರೀಕ್ಷಿತ ಘಟನೆಗಳು, ಸಾವುಗಳು, ಅಲ್ಲಲ್ಲಿ ಪಾತ್ರಗಳ ನಡುವೆ ವೈಮನಸ್ಯ, ಹೀಗೆ ಹಲವು ಹಳೆಯ ಸಿನಿಮಾಗಳ ಘಟನೆಗಳನ್ನು ನೆನಪಿಸುವಂತಹ ವಿಚಾರಗಳು.
ಮೊದಲ ನೂರು ನೂರಿಪ್ಪತ್ತು ಪುಟಗಳಲ್ಲಿ ಕತೆಯು ಸಹಜವಾಗಿ ಸಾಗುತ್ತೆ, ಥ್ರಿಲ್ಲರ್ ಕಾದಂಬರಿಗಳಲ್ಲಿ ಆಗಾಗ ಬರುವಂತಹ ಯಾವುದೇ ವಾವ್ ಮೊಮೆಂಟ್ಸ್ ನೋಡಲು ಸಿಗಲ್ಲ. ಮುಂದಿನ ಕೆಲವು ಅಧ್ಯಾಯಗಳಲ್ಲಿ ಕತೆಯು ಪಿಕಪ್ ಆಗುತ್ತೆ.
ಕೊನೆಯ ಮೂವತ್ತು ಮೂವತ್ತೈದು ಪುಟಗಳೇ ಕೌಶಿಕ್ ಅವರ ಸ್ಟ್ರಾಂಗ್ ರೈಟಿಂಗ್ ನೋಡಬಹುದು. ಸಿಕ್ಕಾಪಟ್ಟೆ ಕನ್ಫ್ಯೂಸ್ ಆಗೋ ಸಾಧ್ಯತೆಗಳು, ಅಷ್ಟೂ ಪುಟಗಳನ್ನ ಒಮ್ಮೆಲೇ ಓದಿದ್ರೆ ಸೂಕ್ತ. ಹಲವು ಲೇಯರ್ಗಳಲ್ಲಿ ಹಾಗೂ ಟೈಮ್ಲೈನ್ಗಳ್ಳಲ್ಲಿ ಕತೆ ಸಾಗುತ್ತೆ.
ಅವರ ಇತರ ಕಾದಂಬರಿಗಳಲ್ಲಿ ನೋಡಿದಂತೆ ಪ್ರತಿಯೊಂದು ಕೊಲೆಗೂ ಕ್ಲಿಯರ್ ಎಕ್ಸ್ಪ್ಲನೇಷನ್ ಇದ್ದೆ ಇರುತ್ತೆ, ಎಲ್ಲೂ ಪ್ರಶ್ನೆಗಳು ಉಳಿಯದೆ ಮುಗಿಸುವಂತಹ ಕಲೆಗೆ ಮೆಚ್ಚುಗೆ. ಹಲವು ಸೈನ್ಟಿಫಿಕ್ ಪದಗಳ ಬಳಕೆ, ಅದರ ವಿವರಣೆ ಹಾಗೂ ಪ್ರಯೋಗವನ್ನ ಕತೆಗೆ/ಪಾತ್ರಗಳಿಗೆ ಸೂಕ್ತವಾಗಿ ಬಳಸಿದ್ದಾರೆ.

November 20, 2025
ರೋಲ್ ಕ್ಯಾಮೆರ ಮರ್ಡರ್. ನೋಡ್ತಾ ಇದ್ದಂಗೆ ಕ್ಯಾಚಿ ಆಗಿರೋ ಟೈಟಲ್ ಮತ್ತೆ ಮುಖಪುಟ ತನ್ನಷ್ಟಕ್ಕೆ ಸೆಳೆಯುವುದು. ಹಾಗೇ ಮೊದಲೇ ಕೌಷಿಕ್ ಅವರ ಬರವಣಿಗೆ ಗೊತ್ತಿದ್ದವರಿಗೆ ಇದ್ಯಾವುದು ಬೇಕಾಗಿಲ್ಲ😉. ಒಂದೆರಡು ದಿನಗಳಲ್ಲಿ ಓದಿ ಮುಗಿಸುವಂತ ಬರವಣಿಗೆ ಸಸ್ಪೆನ್ಸ್, ಮಿಸ್ಟರಿ, ಕ್ರೈಂ, ಹೊರರ್‌ಗಳಿಂದನೇ ತುಂಬಿರುವುದರಿಂದ ಎಲ್ಲೂ ಬೋರ್ ಹೊಡಿಸುವುದಿಲ್ಲ.
ಇನ್ನೂ ಕಥೆಗೆ ಬಂದರೆ ಒಂದೂ ನಿಗೂಢ ದ್ವೀಪದಲ್ಲಿ ಶೂಟಿಂಗೆ ತೆರಳುವ ಒಂದು ತಂಡದಲ್ಲಿ ಅಚಾನಕ್ಕಾಗಿ ನಡೆಯುವ ಸಾವುಗಳು. ಆ ಸಾವುಗಳಿಗೆ ಕಾರಣ ಯಾರು? ಆ ದ್ವೀಪದಲ್ಲಿರುವ ದುಷ್ಟ ಶಕ್ತಿಗಳಾ ಅಥವಾ ಅವೆಲ್ಲ ಪ್ರೀ ಪ್ಲಾನ್ಡ್ ಮರ್ಡರಾ ಎನ್ನುವುದರ ಸುತ್ತಾ ಕಥೆ ಸಾಗುತ್ತದೆ..
ಬರವಣಿಗೆಯ ವಿಚಾರದಲ್ಲಿ ಕೌಷಿಕ್ ಅವರು ಈ ಬಾರಿ ಸಕ್ಕತ್ತಾಗಿ ಆಟ ಆಡಿದ್ದಾರೆ. ಆ ದ್ವೀಪದಲ್ಲಿ ನೆಡೆಯುವ ವಾಸ್ತವಿಕ ಘಟನೆಗಳು ಮತ್ತು ಅಲ್ಲಿ ನೆಡೆಯುವ ಫಿಲ್ಮ್ ಸ್ಕ್ರಿಪ್ಟ್‌ಗಳನ್ನು ಒಂದೊಂದು ಕಡೆ ನಾಜೂಕಾಗಿ ಹೆಣೆದು ಗೊತ್ತಿಲ್ಲದಂತೆ ಅಲ್ಲಿ ನೆಡೆಯುವ ಫಿಲಂ ಒಳಗಡೆ ಕರೆದುಕೊಂಡು ಹೋಗುತ್ತದೆ. ಮೊದಲ ಕೆಲವು ಪುಟಗಳಲ್ಲಿ ಹಿಂದೆ ಬರೆದ ಕೆಲವು ಪುಸ್ತಕಗಳಷ್ಟು ರೋಚಕತೆ ಇಲ್ಲವೆನಿಸುತ್ತಿದ್ದಂತೆ ಗೊಂದಲಗಳು ಹುಟ್ಟಿಕೊಳ್ಳಲು ಶುರುವಾಗಿತ್ತು. ಕೊನೆಯ 3೦ ಪುಟಗಳು ತಲೆಗೆ ಸರಿಯಾಗಿ ಹುಳ ಬಿಟ್ಟವು. ಕೊನೆಯ 30 ಪುಟಗಳನ್ನು ತುಂಬ ಎಚ್ಚರದಿಂದ ಓದಬೇಕು. ಯಾವ್ದೊ ಒಂದು ಲೂಪ್ ಕ್ರಿಯೆಟ್ ಮಾಡಿ ಅಲ್ಲೇ ಪದೇ ಪದೇ ಸುತ್ತುವಂತೆ ಮಾಡಿದ್ದಾರೆ. ಕಾದಂಬರಿ ಒಳಗೊಂದು ಸಿನೆಮಾ ಸ್ಕ್ರಿಪ್ಟ್, ಆ ಸಿನೆಮಾದೊಳಗೊಂದು ಇನ್ನೊಂದು ಸ್ಕ್ರಿಪ್ಟ್, ಸ್ವಲ್ಪ ಗೊಂದಲಗಳನ್ನು ಉಂಟು ಮಾಡುತ್ತದೆ. ಇಸವಿಗಳನೆಲ್ಲ ನೋಟ್ ಮಾಡ್ಕೊಂಡು ಓದಿ. ಇಷ್ಟವಾಗುತ್ತದೆ..
ಇನ್ನು ಕೌಷಿಕ್ ಅವರು ಇನ್ಪಯರ್ ಆಗಿರುವ ಲೇಖಕರು, ನಿರ್ದೇಶಕರ ಹೆಸರುಗಳು, ನಾವು ಕೇಳದ ಕೆಲವು ಮಾನಸಿಕ ಕಾಯಿಲೆಗಳು, ಕೆಲವು ಸಸ್ಯ, ಪ್ರಾಣಿಗಳ ಬಗ್ಗೆಯೂ ಕೂಡ ತಿಳಿಸಿ ಕೊಟ್ಟಿದ್ದಾರೆ. ಒಟ್ನಲ್ಲಿ ಒಂದೊಳ್ಳೆ ಪುಸ್ತಕ.

January 27, 2026
suspense thriller with a bit of horror cinema ನೋಡಿದ ಹಾಗೆ ಇತ್ತು.
ಒಂದು ದ್ವೀಪದಲ್ಲಿರೂ ಬಂಗಲೆ ಅಲ್ಲಿ ಆಗೋ ಕೊಲೆಗಳು(?) ಮತ್ತು ಅದರ ಸುತ್ತ ನಡೆಯೋ investigation.. ಚೆನ್ನಾಗಿದೆ.
ಕಥೆಯೊಳಗೆ ಕಥೆಯೊಳಗೆ ಕಥೆ!
last 30 ಚಿಲ್ಲರೆ pages ಅನ್ನು 2 ಸಾರಿ ಓದಿದೆ. ಆದರೂ ನಂಗೆ ಅರ್ಥ ಆಗಿದ್ದು ಸರಿ ಇದೆಯೋ ಇಲ್ಲವೋ ಅನ್ನೋ doubt ಇದೆ 😐

November 22, 2025
ವಾವ್… ನಿಜ ಹೇಳಬೇಕು ಅಂದ್ರೆ ಮೊದಲ ನೂರು ಪುಟಗಳು ನನಗೆ ಬೋರಿಂಗ್ ಆಗಿದ್ವು. ಯಾಕ್ ಗುರು ಕತೆ ಮುಂದೆ ಹೋಗ್ತಾನೇ ಇಲ್ವಲ್ಲ ಅನಿಸ್ತಾ ಇತ್ತು. ಆಲ್‌ರೈಟ್ ಮುಂದಕ್ ಹೋಗ್ಲಿ ಕತೆ ಅಂತ ಅಂದುಕೊಳ್ತಾ ಇದ್ದೆ. ನೂರು ಪುಟಗಳ ನಂತರ ಕತೆ ಆಸಕ್ತಿ ಹುಟ್ಟಿಸೋಕೆ ಶುರುಮಾಡ್ತು.
ನಂದ್ಯಾವತ್ತು ಒಂದು ಸಣ್ ಕಂಪ್ಲೇಟ್ ಇತ್ತು. ಕೌಶಿಕ್ ಕಾದಂಬರಿಲಿ ಕತೆ ಡೈರೆಕ್ಟ್ ಥ್ರಿಲ್ ಕೊಡುತ್ತೆ ಹೊರತು ಯೋಚ್ನೆ ಮಾಡೋಕೆ, ನಂಗ್ ತಲೆ ಕರ್ಚು ಮಾಡೋಕೆ ಬಿಡ್ತಾ ಇಲ್ಲ ಅಂದಿತ್ತು. ಆದ್ರೆ ಈ ಕಾದಂಬರಿಯಲ್ಲಿ ಆ ಪ್ರಾಬ್ಲಮ್ ಇಲ್ಲ. ಕೊನೆ ಮೂರು ಅಧ್ಯಾಗಳಲ್ಲಿ ಬಂದ ಅನುಮಾನಗಳು, ಅದಕ್ಕಿದ್ದ ಲೂಸ್ ಎಂಡ್‌ಗಳು, ಅದನ್ನ ಕ್ಲಿಯರ್ ಮಾಡಿದ ರೀತಿ, ಕೊನೆ ಅಧ್ಯಾಯ ಓದಿದ ಮೇಲೂ ತಲೆ ಕರ್ಚು ಮಾಡಬೇಕಾಗಿ ಬಂದಿದ್ದು, ಮೂರು ಇಸವಿಗಳನ್ನು ಇಟ್ಟುಕೊಂಡು ಕೊನೆಯಲ್ಲಿ ಕತೇಲಿ ಆಟ ಆಡಿದ ರೀತಿ ಸಖತ್ ಇಷ್ಟ ಆಯ್ತು. ಹಿಮಂವತನ ಈಕತೆಯಲ್ಲಿ ಪ್ರೆಸೆಂಟ್ ಮಾಡಿದ ರೀತಿ ಇಂಪ್ರೆಸ್ಸಿಂಗ್ ಅನಿಸ್ತು. ಮತ್ತೆ ಸುಮಾರು ಸಿನೆಮಾದ ರೆಫೆರೆನ್ಸುಗಳೆಲ್ಲ ಇಲ್ಲಿದೆಯಲ್ವಾ ಅಂತಿದ್ದಾಗ ಅದರ ಕ್ರೆಡಿಟ್ಸ್‌ನ ಕತೆಯಲ್ಲೆ ಕೊಟ್ಟಿದ್ದಕ್ಕೆ ಕೌಶಿಕ್‌ಗೆ ಕ್ರೆಡಿಟ್ ಕೊಡಬೇಕು.
ಆದ್ರುನು ಪ್ರತೀ ಮೂರು ಮೂರು ಪುಟಗಳಿಗೆ ಅಧ್ಯಾಯಗಳು ಕೊನೆಯಾಗ್ತಾ ಇದ್ದದ್ದು, ಪ್ರತೀ ಅಧ್ಯಾಯದಲ್ಲೂ ಏನಾದರೊಂದು ಟ್ವಿಸ್ಟು, ಸಸ್ಪೆನ್ಸು ನಡೀತಾ ಇದ್ದದ್ದು ತುಂಬಾ ಆಬಿಯಸ್ ಆಗಿ ಬರ್ತಾ ಬರ್ತಾ ಅದು ಅಷ್ಟು ಮಜಾ ಕೊಡ್ತಾ ಇರ್ಲಿಲ್ಲ; ಮೂರು, ಎರಡು ಪುಟಗಳಲ್ಲಿ ಅಧ್ಯಾಗಳು ಮುಗೀತಾ ಇದ್ದಿದ್ದರಿಂದ ಉಸಿರಾಡೋಕೆ ಜಾಗ ಸಿಗ್ತಾ ಇರ್ಲಿಲ್ಲ. ಗುಟ್ಟು ರಟ್ಟಾಗುವ ಸೀನುಗಳಲ್ಲಿ ಒಂದರಲ್ಲಿ ಇವೆಲ್ಲ ಹಿಮಂತ್‌ಗೆ ಹೇಗೆ ಗೊತ್ತಾಯ್ತು ಅನ್ನೋದಕ್ಕೆ ಜಸ್ಟಿಫಿಕೇಶನ್ ಬೇಕಿತ್ತು ಅನಿಸ್ತು.
ಓವರಾಲ್ ರೈಟಿಂಗ್ ಬೆಟರಾಗಿದೆ, ಕನ್ಫ್ಯೂಸ್ ಮಾಡೋದು ಈ ಕಾದಂಬರಿಯ ಹೈಲೈಟು, ನೂರು ಪುಟಗಳ ನಂತರ ನಮ್ಮ ತಾಳ್ಮೆಗೆ ನ್ಯಾಯ ಸಿಗುತ್ತೆ. ಮಜಾ ಇದೆ. ಓದಿ. ಜೈ!

March 11, 2026
again a great and thrilling writings by Kowshik sir🫡
Displaying 1 - 6 of 6 reviews