This tense, fast-paced story follows a young man from the world of theatre, fueled by his love for cinema and a desperate hunger for success in the film industry.
ಸಿಕ್ಕಾಪಟ್ಟೆ ಟೈಮಾಯ್ತು ನಾನು ಸರಿಯಾಗಿ ಓದದೆ. ಈ ಕಾದಂಬರಿಯನ್ನ ಮೊದಲು ಪೋಸ್ಟ್ ಹಾಕ್ತೀನಿ ಅಂತ ಹೇಳಿ ಸಹ ಸುಮಾರು ದಿನಗಳಾಗಿದ್ದವು. ಈ ಕಾದಂಬರಿಯ ಮುಖಪುಟ ನೋಡಿ ಇಲ್ಲಿ ಸೂಪರ್ ಹೀರೋ ಕತೆಯಿರುತ್ತೆ ಅಂತಂದುಕೊಂಡಿದ್ದೆ; ಆದ್ರೆ ಇಲ್ಲಿದ್ದದ್ದು ಸೂಪರ್ ಹೀರೋನ ಕತೆಯ (ಸೂಪರ್ ಪವರ್ ಇರೋವವನದ್ದಲ್ಲ). ಇಲ್ಲಿ ಕಾದಂಬರಿ ಮುಗಿದರೆ ಸಿನೆಮಾದ ಮಧ್ಯಂತರ ತರಹ ಕತೆ ಮುಗಿಯುತ್ತೆ. ಇದು ಜೆನ್ಯೂನ್ ಆಗಿ ಎರಡನೇ ಭಾಗದ ಕತೆಗೆ ಸರಿಯಾಯ್ತು ಅನಿಸುತ್ತೆಯೆ ಹೊರತು, ಸುಮ್ ಸುಮ್ನೆ ಎರಡೆರಡು ಭಾಗ ಮಾಡಿದ್ರು ಅನಿಸಲ್ಲ. ಸಾಮಾನ್ಯವಾಗಿ ಈತರದ, ಸಾಧಾರಣ ಎಲ್ಲಾ ಪುಸ್ತಕಗಳು ನಿರೂಪಣೆಯಲ್ಲೇ ಸಾಗ್ತಾ ಇದ್ದಿದ್ದರಿಂದ, ಹೀಗೆ ದೃಶ್ಯಗಳಲ್ಲಿ ಕತೆಯನ್ನ ಹೇಳಿದ್ದು ಒಂದು ವಿಶೇಷ ಅನುಭವ ಕೊಡ್ತು. ಬರವಣಿಗೆ ಸಹ ಪಟಪಟ ಅಂತ ಓದಿಸಿಕೊಂಡು ಹೋಗ್ತಾ ಇತ್ತು. ಕಾದಂಬರಿ ಶುರುವಾಗುವಾಗ ಸುಮಾರು ಪಾತ್ರಗಳೆಲ್ಲ ಬಂದು ಕತೆಯನ್ನ ನೆನಪು ಇಟ್ಟುಕೊಳ್ಳುವುದು ಕಷ್ಟ ಆಗ್ತಾ ಇತ್ತು ನನಗೆ; ಯಾರ್‍ಯಾರು ಎಲ್ಲೆಲ್ಲಿದ್ರು ಅಂತ. ಆದ್ರೆ ಕಾದಂಬರಿ ಸಾಗ್ತಾ ಎರಡೆರಡು ಪಾತ್ರಗಳ ಕತೆಯನ್ನ ಸೇರಿಸುತ್ತ ಬಂದಿದ್ದು ಕತೆಯನ್ನ ಆರಾಮಾಗಿ ಅರ್ಥಮಾಡಿಕೊಳ್ಳೋದು ಸುಲಭವಾಗಿತ್ತು; ಅದಕ್ಕಿಂತಲೂ ಕತೆಯಲ್ಲಿ ನಾನೆ ಇನ್ವಾಲ್ವ್ ಆಗಿದ್ದೆ. ಕತೆ ಮುಂದೇನು ಆಗುತ್ತೆ ಅಂತ ನಾನು ಕಾಯ್ತಾ ಇದ್ದೆ. ಬೇಗಬೇಗ ಮುಂದೆಂತ ಆಗುತ್ತೆ ಅಂತ ಕಾಯ್ತಾ ಓದ್ತಾ ಇದ್ದೆ. ಒಟ್ಟಲ್ಲಿ ಕಾದಂಬರಿ ಓದಿ ಖುಷಿ ಸಿಕ್ತು. ಕತೆಯಲ್ಲಿ ಎಲ್ಲಾ ಮನುಷ್ಯ ಸ್ವಭಾವಗಳು ಇದೆ ಅನಿಸ್ತು; ಒಟ್ನಲ್ಲಿ ಖುಷಿಯಾಯ್ತು ಗುರು ಓದಿ. ಜೈ
ಕಟೌಟ್ ಭಾಗ -೧ ರಂಗಭೂಮಿಯಿಂದ ಆರಂಭವಾಗಿ ಚಿತ್ರಮಂದಿರದಲ್ಲಿ ಅಂತ್ಯಕಾಣುವ ಕಥಾವಸ್ತು...ಚಿತ್ರಕಥೆ ರೂಪದಲ್ಲಿರುವ ಈ ಕಾದಂಬರಿಯ ಬರವಣಿಗೆ ಶೈಲಿಯು ವಿಭಿನ್ನವಾಗಿದ್ದು ಓದು ಒಂದು ಹೊಸ ಅನುಭವ ನೀಡುತ್ತದೆ. ಒಬ್ಬ ರಂಗಭೂಮಿ ಕಲಾವಿದನಾಗಿ ಮತ್ತೊಬ್ಬ ಸಿನಿಮಾ ಅಭಿಮಾನಿಯಾಗಿ ಇಬ್ಬರು ತಮ್ಮನ್ನು ತಾವು ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳಲು ಮತ್ತು ಯಶಸ್ಸು ಕಾಣಲು ತೊಡಗಿಸಿಕೊಂಡ ರೀತಿ ಮತ್ತು ಅವರ ತೊಳಲಾಟವನ್ನು ಲೇಖಕ ಚೆನ್ನಾಗಿ ಬರೆದಿದ್ದಾರೆ. ಒಂದೊಳ್ಳೆ ಅಂತ್ಯ ಕಂಡ ಈ ಪುಸ್ತಕವು ಇದರ ಭಾಗ ೨ ರ ನಿರೀಕ್ಷೆ ಹುಟ್ಟಿಸುವುದು ಖಂಡಿತ.
ಕಟೌಟ್ ಒಂದು ವಿಭಿನ್ನವಾದ ಪುಸ್ತಕ. ಕಥೆ ಸಾಗುವ ದಾರಿ ಹೊಸದಾಗಿದೆ. ಸಾಮಾನ್ಯವಾಗಿ ಕಾಣುವ ಕಥೆಯ ಸ್ಥಳ ಪರಿಚಯ, ವಸ್ತು ವಿವರಣೆ ಹಾಗು ಉದ್ದನೆಯ ಸಂಭಾಷಣೆ ಇಲ್ಲಿಲ್ಲ. ಕಥೆ ಬಹು ವೇಗವಾಗಿ ಸಾಗುತ್ತದೆ. ಕನ್ನಡದಲ್ಲಿ ಹೊಸ ಪ್ರಯೋಗವೆಂದೇ ಹೇಳಬಹುದು ಚಿತ್ರರಂಗದಲ್ಲಿ ಹೆಸರು ಮಾಡಲು ಜನರು ಎದುರಿಸುವ ಹೋರಾಟ, ಕನಸು, ವಿಫಲ ಪ್ರಯತ್ನಗಳನ್ನು ತೋರಿಸಲಾಗಿದೆ. 2ನೆ ಭಾಗದ ನಿರೀಕ್ಷೆಯಲ್ಲಿ...