This has been my first ever book of PuChanTe sir. Truly the collection of stories can be relate to even current affairs and scenarios. How come they were so accurate on their thoughts. ನಿಮಗೊಂದು ಧನ್ಯವಾದಗಳು ಪೂರ್ಣಚಂದ್ರ ತೇಜಸ್ವಿ avare.🙏
ಕೆ ಪಿ ಪೂರ್ಣಚಂದ್ರ ತೇಜಸ್ವಿ ಎಂಬ ಹೆಸರು ಕೇಳಿದ ತಕ್ಷಣ ನನ್ನ ಕಿವಿಗಳು ನೆಟ್ಟಗಾಗುತ್ತವೆ. ಅವರ ಪುಸ್ತಕಗಳು ಮಾಯಾಜಾಲವಿದ್ದಂತೆ. ಎಷ್ಟು ಓದಿದ್ರೂ, ಇನ್ನೂ ಓದಬೇಕು ಎಂಬ ಹಂಬಲ. ಅಂತಹ ಪುಸ್ತಕಗಳಲ್ಲಿ 'ಅಬಚೂರಿನ ಪೋಸ್ಟಾಫೀಸು' ಒಂದು.ಏಳು ಸಣ್ಣ ಕಥೆಗಳಿರುವ ಈ ಪುಸ್ತಕ ನನ್ನನ್ನು ಬೇರೆ ಲೋಕಕ್ಕೆ ಒಯ್ಯಿತು. ಮೊದಲ ಕಥೆ ಅಬಚೂರಿನ ಪೋಸ್ಟಾಫೀಸು.ಬೋಬಣ್ಣನ ಪೋಸ್ಟಫಿಸಿನಲ್ಲಿ ಪತ್ರ ಗಳ ಸಂಖ್ಯೆ ಕಡಿಮೆ ಆದಾಗ ಕಾಲ ಹರಣಕ್ಕೆ ಕುತೂಹಲ ದಿಂದ ತೆರೆದ ಒಂದು ಪತ್ರ ಅವನ ಸಂಪೂರ್ಣ ಜೀವನವನ್ನೇ ಬದಲಾಯಿಸಿತು.ನಂತರ ಬೇಲಾಯದನ ಹೆಸರಿಗೆ ಯಾರೋ ಬರೆದ ಪತ್ರ ಅಬಚೂರಿನಲ್ಲಿ ಪ್ರಖ್ಯಾತವಾದ ಘಟನೆ ಬೋಬಣ್ಣನಿಂದ ಅವನ ಹೆಂಡತಿಯನ್ನು ದೂರ ಮಾಡಿತು. ಕೊನೆಗೆ ಬೋಬಣ್ಣನೇ ಆ ಪತ್ರ ಬರೆದಿದ್ದ ಎಂಬ ಆರೋಪ ಬಂತು. ಊರಿನವರೆಲ್ಲ ಅವನ ಮನೆಗೆ ಮುತ್ತಿಗೆ ಹಾಕಿದರು.ಬೋಬಣ್ಣ ಅವರಿಂದ ತಪ್ಪಿಸಿಕೊಂಡು ಹಿಂದಿರುಗಿ ನೋಡದೆ ಓಡಿ ಓಡಿ ಕತ್ತಲಲ್ಲಿ ಕಣ್ಮರೆಯಾದ. ನಂತರ ಕುಬಿ ಮತ್ತು ಇಯಾಲ ಎಂಬ ಕಥೆ ಕುಬಿ ಡಾಕ್ಟರ್ ನ ಸಮಾಜದ ಪರವಾಗಿನ ಕಾಳಜಿ, ಇಯಾಲಳ ಕೊಲೆ, ಕೊಲೆಗಾರನ ಪತ್ತೆ, ಕೊಲೆಗಾರ ಅನುಭವಿಸಿದ ಶಿಕ್ಷೆ ಯ ಜೊತೆಗೆ ರಾಜಕೀಯದ ಗಾಳಿಯು ಸ್ವಲ್ಪ ಸಮ್ಮಿಲನವಾಗಿದೆ. ತುಕ್ಕೋಜಿ ಎಂಬ ಕಥೆಯು ತಂದೆ ತಾಯಿ ತಮ್ಮ ಇಷ್ಟ ಬಂದಂತೆ ಮಗನನ್ನು ಬಳಸಿಕೊಂಡು, ಆ ಮುಗ್ಧ ಮಗುವಿನ ಮೇಲೆ ಆದ ಪರಿಣಾಮ, ಅವರು ಕೊನೆಗೆ ತಮ್ಮ ತಪ್ಪನ್ನು ಅರಿತುಕೊಂಡ ಬಗೆ ಶ್ಲಾಘನೀಯ. ಈ ಕಥೆಯ ಕೊನೆಯ ಸಾಲುಗಳು ನನ್ನ ಮನಸ್ಸಿಗೆ ಏನೋ ಪರಿಣಾಮ ಬೀರಿದವು. "ನೀಳವಾದ ಪ್ರಶಾಂತ ಮುಖದ ಡ್ರೈವರ್ ಕಿಟ್ಟುವನ್ನು ಎತ್ತಿಕೊಂಡು ಕ್ರಾಲರಿನಿಂದ ಇಳಿದು ಬಂದ. ಅದೇ ನಿರ್ಭೀತ ದೃಢ ಹೆಜ್ಜೆ ಇಡುತ್ತಾ ಅದೇ ನಗೆಮೊಗದೊಡನೆ ಬಂದು ಕಿಟ್ಟುವನ್ನು ಇಳಿಸಿದ. ಅವನ ಮುಖದಲ್ಲಿ ಯಾವುದೋ ಅನಂತವಾದ ಸಹನೆ ಸಹಾನುಭೂತಿಗಳನ್ನು ಇಬ್ಬರೂ ಕಂಡರು. ಸರೋಜ ತುಕ್ಕೋಜಿ ಇಬ್ಬರಿಗೂ ತಮ್ಮನ್ನಾವರಿಸಿದ್ದ ಭ್ರಾಂತಿ ಸಂದೇಹಗಳ ಬಗೆಗೆ ವಿಪರೀತ ನಾಚಿಕೆಯಾಗಿತ್ತು. ಡ್ರೈವರ್ ಎಲ್ಲ ಅರಿತವನಂತೆ "ಬರುತ್ತೇನೆ" ಎಂದು ಮಾತ್ರ ಹೇಳಿ ಹೊರಟುಹೋದ. ತಬರನ ಕಥೆ ಸ್ವಾತಂತ್ರ್ಯದ ನಂತರ ಸಾಮಾನ್ಯ ಜನರು ಅನುಭವಿಸಿದ ಕಷ್ಟಗಳನ್ನು ಬಿಂಬಿಸುವ ಅದ್ಭುತ ಕಥೆ. ಅವನು ಹೇಗೆ ತನ್ನ ಪಿಂಚಣಿ ಹಣಕ್ಕಾಗಿ ಕಾದು ಕಾದು, ಈ ಸಮಯದಲ್ಲೇ ತನ್ನ ಹೆಂಡತಿಯನ್ನು ಕಳೆದುಕೊಂಡು ಮರುಳನಾದ ಎಂಬುದನ್ನು ಚೆನ್ನಾಗಿ ವರ್ಣಿಸಲಾಗಿದೆ. ಇದನ್ನು ಬಿಟ್ಟು ಅವನತಿ, ತ್ಯಕ್ತ ಮತ್ತು ಡೇರ್ ಡೆವಿಲ್ ಮುಸ್ತಫಾ ಎಂಬ ಕಥೆಗಳನ್ನು ಒಳಗೊಂಡ 110 ಪುಟದ ಈ ಪುಸ್ತಕ ತೇಜಸ್ವಿ ಅವರ ಅದ್ಬುತ ಪುಸ್ತಗಳಲ್ಲಿ ಒಂದು.
The plot of ‘Abachurina Post Office’ centers around the transformation of Abachuru, a small village in India, as it moves towards modernity. The story isn’t just about the post office, but also the lives, dreams, and challenges of the villagers. It captures the essence of rural Karnataka, with characters that are simple yet relatable.
A must-read for all Kannada book lovers out there!