Jump to ratings and reviews
Rate this book

ಮಿ೦ಚುಳ್ಳಿ | Minchulli

Rate this book
Author vividly describes about birds found in Karnataka - specially in Western Ghats.

Paperback

4 people are currently reading
105 people want to read

About the author

K.P. Poornachandra Tejaswi

59 books1,106 followers
K.P. Purnachandra Tejaswi was a prominent Kannada writer, novelist, photographer, ornithologist, publisher, painter and environmentalist. He made a great impression in the "Navya" period of Kannada literature and and inaugurated the bandaya sahitya.

Tejaswi was born on September 8, 1938. His father is the famous poet, Rashtrakavi Kuvempu. He completed his education in Mysore. Tejaswi has written in almost all forms of literature including poems, short stories, novels, travel literature, plays and science fiction. He has translated several English books to Kannada. His famous translations include the series on Kenneth Anderson's hunting expeditions and Henri Charrière's Papillon.

He has won several awards for his contribution to literature such as the Rajyotsava and Kannada Sahitya Academy awards.

Poornachandra Tejaswi died of cardiac arrest at the age of 69

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
40 (66%)
4 stars
16 (26%)
3 stars
3 (5%)
2 stars
0 (0%)
1 star
1 (1%)
Displaying 1 - 5 of 5 reviews
Profile Image for Abhiram's  Book Olavu.
117 reviews5 followers
September 21, 2025
ನನಗೆ ಈ ಸುತ್ತಮುತ್ತ ಹಾರಾಡುವ ಪಕ್ಷಿಗಳ ಮೇಲೆ ಕುತೂಹಲಾಸಕ್ತಿಗಳು ಬೀರುವ ಹಾಗೆ ಮಾಡಿದ್ದೇ ತೇಜಸ್ವಿ ಅವರು, ಹಾಗೆಯೆ ಅವರ ಈ ಪುಸ್ತಕಗಳು ಅಂತ ಹೇಳಬಹುದು! ತೇಜಸ್ವಿ ಅವರ ಕೃತಿಗಳನ್ನ ಓದದೆ ಹೋಗಿದ್ದ್ರೆ ನನಗೆ ಈ ಪಕ್ಷಿ ಲೋಕದ ಅದರ ಜೊತೆಗೆ ಪರಿಸರದ ಮೇಲೂ ಸೂಕ್ಷ್ಮ ದೃಷ್ಟಿ ಮತ್ತು ಅರಿವು ಮೂಡ್ತಿರ್ಲಿಲ್ಲವೇನೊ! ಮಲೆನಾಡಿನ ಮಕ್ಕಳ ಪರಿಸ್ಥಿತಿಯೇ ಹೀಗಿರುವುದು ಎಷ್ಟು ವಿಷಾದನೀಯ ಅಲ್ಲವೆ?!

ನನಗೆ ಕುವೆಂಪು ಅವರ ಇಷ್ಟಪಕ್ಷಿಯಾದ ಕಾಚಾಣವನ್ನ ನೋಡಬೇಕು ಅಂತ ತುಂಬಾ ದಿನದ ಬಯಕೆ ಇತ್ತು. Greater racket tailed drongo ಕಾಣಸಿಗುವುದು ತುಂಬಾ ವಿರಳ. ತೇಜಸ್ವಿ ಅವರೇ ಹೇಳುವ ಹಾಗೆ ಇದು ಜನ ದತ್ತಣ್ಣಿಯಿಂದ ದೂರವಿರುವ ಹಕ್ಕಿ! ಮೊನ್ನೆ ಜೈಪುರದ ತೂಗು ಸೇತುವೆಗೆ ಹೋದಾಗ ಒಂದು ಜೋಡಿ ಕಾಚಾಣಗಳ ನಲಿದಾಟವನ್ನ ನೋಡಿದ್ದು ಹಾಗೆಯೇ ಅಲ್ಲಿ ಹೇರಳವಾಗಿದ್ದ ಮಂಗಟ್ಟೆ ಹಕ್ಕಿಗಳನ್ನ ನೋಡಿ ಸಂತೋಷವಾಯ್ತು. ಇದನ್ನ ಯಾಕೆ ಇಲ್ಲಿ ಪ್ರಸ್ತುತಪಡಿಸಿದೆ ಎಂದರೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸೂಕ್ಷ್ಮ ದೃಷ್ಟಿ ಹರಿಸಿಸಲು ನನಗೆ ತೇಜಸ್ವಿ ಅವರ ಬರಹ ಎಷ್ಟು ಮುಖ್ಯ ಹಾಗೂ ಉತ್ತೇಜನಕಾರಿ ಅನ್ನೊದಕ್ಕೆ!

ತೇಜಸ್ವಿ ಅವರೇ ಹೇಳುವ ಹಾಗೆ ಈ ಪುಸ್ತಕಗಳನ್ನ ಪರಿಸರದ ಪುಸ್ತಕಗಳು ಅಂತ ಓದದೆ, ಕಥೆ ಪುಸ್ತಕಗಳೆಂದು ಸ್ವೀಕರಿಸಿ ಓದಬೇಕು. ಆದರೆ ವಾಸ್ತವವಾಗಿ ಈ ಪುಸ್ತಕಗಳು ಪರಿಸರದ ಎನ್ಸೈಕ್ಲೋಪೀಡಿಯಾ ಎಂತೆನ್ನಿಸಿಕೊಳ್ಳಲು ಅತಿಶಯೋಕ್ತಿ ಆಗುವುದಿಲ್ಲ! ನಮ್ಮ ಸುತ್ತಮುತ್ತ ಹಾರಾಡುವ ಡೈನೋಸಾರ್ ಗಳಿಗ ಬಲು ಹತ್ತಿರದ ಸಂಬಂಧಿಗಳಾದ ವರ್ಣರಂಜಿತ ಪಕ್ಷಿಗಳ ಬಗೆಗೆ ಎಷ್ಟೋ ಕುತೂಹಲಕಾರಿಯಾದ ಹಾಗೂ ವೈಜ್ಞಾನಿಕ ಮಾಹಿತಿಗಳನ್ನು ತುಂಬಾ ಸೊಗಸಾಗಿ ಬರೆದಿರುವರು. ಜೊತೆಗೆ ಲೇಖಕರ ಪರಿಸರದ ಸುತ್ತ ಜರುಗಿದ ಎಷ್ಟೋ ಪ್ರಸಂಗಗಳು ಹಾಗೂ ಅದಕ್ಕೆ ಸಂಬಂಧಪಟ್ಟ ವ್ಯಕ್ತಿಗಳನ್ನ ಎಂದಿನಂತೆ ಹಾಸ್ಯಾಸ್ಪದವಾಗಿ, ಮನೋರಂಜಿತವಾಗಿ ಕಾಮಿಕಲ್ ರೀತಿಯಲ್ಲಿ ಚಿತ್ರಿಸಿದ್ದಾರೆ.

Bird man of India, ಸಲೀಂ ಅಲಿ ಅವರು ಸುಮಾರು ೮೫೦ಕ್ಕು ಹೆಚ್ಚು ಪಕ್ಷಿಗಳನ್ನು ಭಾರತ ಉಪ ಖಂಡದಲ್ಲಿ ವೀಕ್ಷಿಸಿ, ಉಲ್ಲೇಖಿಸಿರುವರು. ಹಾಗೆಯೇ ನನಗೆ ಹೆಮ್ಮೆಯ ಸಂಗತಿ ಒಂದೆಂದರೆ, ನನ್ನ ಗುರುಗಳಲ್ಲಿ ಒಬ್ಬರಾದ ಡಾ. ಮುರಳಿಧರ್ ರವರು ಸುಮಾರು ೮೦೦ ಪಕ್ಷಿಗಳನ್ನು ಗುರುತಿಸಿರುವರು ಹಾಗೂ ಸುಮಾರು ೬೦೩ ಪಕ್ಷಿಗಳನ್ನ ದಾಖಲಿಸಿರುವರು. ಭಾರತ ದೇಶದಲ್ಲಿ ಈವರೆಗೆ ಸುಮಾರು ೧೩೭೭ರಷ್ಟು ಬಗೆಯ ಹಕ್ಕಿಗಳು ದಾಖಲಿಸ್ಪಟ್ಟಿವೆ. ಇವುಗಳಲ್ಲಿ ಯಾರೆಲ್ಲ ಎಷ್ಟು ಹಕ್ಕಿಗಳನ್ನ ಗುರುತಿಸುವಿರಿ ಎನ್ನೊದನ್ನ ಕಾಮೆಂಟ್ ನಲ್ಲಿ ತಿಳಿಸಿ!
Profile Image for Reshma Hegde.
16 reviews4 followers
June 30, 2023
'ಕನ್ನಡನಾಡಿನ ಹಕ್ಕಿಗಳು - ಮಿಂಚುಳ್ಳಿ '
ಈ ಪುಸ್ತಕದಲ್ಲಿ ತೇಜಸ್ವಿಯವರು ಸುಮಾರು ಹದಿನೇಳು ಹಕ್ಕಿಗಳ ಪರಿಚಯವನ್ನು ನೀಡಿದ್ದಾರೆ.ಈ ಪುಸ್ತಕವನ್ನು ಯಾರೇ ಓದಿದರೂ ಅವರಿಗೆ ಹಕ್ಕಿಗಳ ಬಗ್ಗೆ ಕುತೂಹಲ ಮೂಡುವುದು ಸಹಜ. ಇದು ಕೇವಲ ಪಕ್ಷಿ ವೀಕ್ಷಕರ ಕೈಪಿಡಿಯಾಗಿರದೆ ಎಲ್ಲರಿಗೂ ಪಕ್ಷಿಗಳ ಬಗ್ಗೆ ಆಸಕ್ತಿ ಮೂಡಿಸಲು ಬರೆದಿರುವ ಪುಸ್ತಕವಾಗಿದೆ.
ಇಲ್ಲಿ ತೇಜಸ್ವಿಯವರು ಹಕ್ಕಿಗಳ ಬಗ್ಗೆ ವೈಜ್ಞಾನಿಕವಾಗಿ ಕೊಟ್ಟಿರುವ ಮಾಹಿತಿ ಓದುಗರ ಮನಸೆಳೆಯುವಂತಿದೆ.ಹಕ್ಕಿಗಳು ಆತ್ಮ ಮತ್ತು ವ್ಯಕ್ಕ್ತಿತ್ವ ಉಳ್ಳ ಜೀವಿಗಳಾಗಿ ಇಲ್ಲಿ ಮೂಡುತ್ತವೆ.
Profile Image for Prasanna.
9 reviews
January 5, 2021
Great insight on some of the common birds that we see around. Hats off to Poo Chan Te as always
Displaying 1 - 5 of 5 reviews

Can't find what you're looking for?

Get help and learn more about the design.