Sudha Murty was born in 1950 in Shiggaon in north Karnataka. She did her MTech in computer science, and is now the chairperson of the Infosys Foundation. A prolific writer in English and Kannada, she has written nine novels, four technical books, three travelogues, one collection of short stories, three collections of non-fiction pieces and two books for children.
Her books have been translated into all the major Indian languages and have sold over three lakh copies around the country. She was the recipient of the R.K. Narayan's Award for Literature and the Padma Shri in 2006.
ಸುಧಾ ಮೂರ್ತಿ ಅವರ ಈ ಪ್ರವಾಸ ಕಥನ ನಂಗೆ ಎಲ್ಲ ಪ್ರವಾಸ ಕಥನಗಳಿಗಿಂತ ಬಿನ್ನ ಅನಿಸ್ತು. ಅವರೇ ತಮ್ಮ ಪುಸ್ತಕದ ಕೊನೆಯ ನುಡಿಯಲ್ಲಿ ಹೇಳಿದಂತೆ, ನೋಡಿದ ಎಲ್ಲವನ್ನೂ ತುಂಬಾ ಡೀಟೇಲ್ ಆಗಿ ಬರೆದಿಲ್ಲ, ಇನ್ನೂ ಸ್ವಲ್ಪ ಇದ್ದಿದ್ದರೆ ಚೆನ್ನಾಗಿ ಇರುತ್ತಿತ್ತೇನೋ ಎನ್ನುವ ಅಭಿಪ್ರಾಯ ಬಂದಿದ್ದು ಸುಳ್ಳಲ್ಲ. ಪುಸ್ತಕದ ಕೊನೆಯ ವರೆಗೂ ಸಹ ಬೇರೆ ಭಾಷೆಯ ಅನೇಕ ಹೆಸರುಗಳನ್ನು, ಊರಿನ ಹೆಸರುಗಳನ್ನು, ಪದಗಳ ಅರ್ಥಗಳನ್ನು ಕನ್ನಡದಲ್ಲಿ ತಿಳಿಸಿ ನಮಗೂ ಕಾಂಬೋಡಿಯಾ ದೇಶಕ್ಕೂ ಇರುವ ಅನೇಕ ಸಾಮ್ಯತೆಗಳನ್ನು ಹೇಳಿದ್ದಾರೆ. ಧನ್ಯವಾದಗಳು.
ಶ್ರೀಮತಿ ಸುಧಾಮೂರ್ತಿ ಎಂದರೆ ಸದಾ ಸರಳತೆಯ ಮೂರ್ತಿ ಎಂದೇ ಖ್ಯಾತಿ ಅದು ಇವರ ಬರವಣಿಗೆ ಹಾಗು ತಮ್ಮ ಪ್ರವಾಸಾನುಭವದಲ್ಲೂ ಕಾಣಿಸುತ್ತದೆ. ಸಾಮಾನ್ಯರಿಗಿಂತ ಉನ್ನತ ಶ್ರೇಣಿಯ ವೃಂದದವರಿಂದ ಕೂಡಿದ ಮಂದಿಯ ಜೊತೆಯಲ್ಲಿ ಇಂಡೋಚೀನ ಪ್ರಾಂತ್ಯದ ದೇಶಗಳಾದ ಲಾವೋಸ್,ಕಾಂಬೋಡಿಯ,ವಿಯೆಟ್ನಾಂ ಹಾಗು ಥೈಲ್ಯಾಂಡ್ ಒಳಗೊಂಡ ದೇಶಗಳ ಪ್ರವಾಸ ಕಥನ ' ಕಾವೇರಿಯಿಂದ ಮೇಕಾಂಗಿಗೆ '. ಪ್ರವಾಸಕ್ಕೂ ಮೊದಲು ಅವರು ನೋಡುವ ಸ್ಥಳದ ಬಗ್ಗೆ ಪೂರ್ವಾಪರ ತಿಳಿದುಕೊಂಡ ಬಗ್ಗೆ ಬೆರಗು ಮೂಡುತ್ತದೆ ಏಕೆಂದರೆ ಆಕೆ ಇದಕೆಲ್ಲ ಸಮಯ ಹೇಗೆ ಹೊದಿಸುತ್ತಾರೆಂದು? ಈಗಿನ ಕಾಲದ ಬಹುಮಂದಿಗೆ ಪ್ರವಾಸವೆಂದರೆ ಸ್ಥಳ ಪುರಾಣಕ್ಕಿಂತ ಹೊಟ್ಟೆ ಮತ್ತು ಬಟ್ಟೆಯೇ ಪ್ರಧಾನ ಆದರೆ ಕಂಡಿದ್ದನೆಲ್ಲಾ ಕೊಳ್ಳಬಹುದಾದ ವ್ಯಕ್ತಿಯಾದರು ಬರಿ ತಾವು ನೋಡಬೇಕಾದ ಜಾಗ, ಜನ ಹಾಗು ಅಲ್ಲಿನ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳುವ ಹಪಹಪಿ ಬಹಳ ಮೆಚ್ಚುವಂತದ್ದು. ಸಸ್ಯಾಹಾರಿಗಳಿಗೆ ವಿದೇಶ ಪ್ರವಾಸ ಪ್ರಯಾಸವಾಗುವುದು ಅವರ ಆಹಾರದಿಂದಲೇ ಜಾಸ್ತಿ ಅದನ್ನೂ ಸಹ ಅಡಚಣೆ ಅನ್ನದೇ ಆ ಪ್ರೇಕ್ಷಣೀಯ ಸ್ಥಳವನ್ನೇ ಮುಖ್ಯವಾಗಿಸಿಕೊಂಡರೆ ಆಹಾರವೆಲ್ಲ ನಗಣ್ಯವಾಗಿಸಬಹುದು ಎಂದು ಬಹಳ ಅರ್ಥಗರ್ಭಿತವಾಗಿ ಬರೆದಿದ್ದಾರೆ. ನಾವು ಭಾರತೀಯರು ಗರ್ವ ಪಡಬೇಕಾದ ಎಷ್ಟೋ ಅಂಶಗಳು ಈ ಪ್ರವಾಸಕಥನದಲ್ಲಿ ಬರೆದಿದ್ದಾರೆ ನಮ್ಮ ಸಂಸ್ಕೃತಿ ಅದರಲ್ಲೂ ನಮ್ಮ ರಾಮಾಯಣ ಮತ್ತು ಮಹಾಭಾರತ ಆ ದೇಶಗಳಲ್ಲಿ ಎಷ್ಟು ಹಾಸು ಹೊಕ್ಕಿದೆ ಎನ್ನುವುದಕ್ಕೆ ಇವರ ಲೇಖನ ಬಹಳ ಉಪಯುಕ್ತ .
I have read this book in the original language of Kannada. It is a simple and educative travelogue of her journey through the south east Asian countries of Cambodia, Vietnam, Laos and Thailand.