Jump to ratings and reviews
Rate this book

ಹೇಳಿ ಹೋಗು ಕಾರಣ | Heli Hogu Kaarana

Rate this book
Book by Ravi Belagere

Paperback

719 people are currently reading
5741 people want to read

About the author

Ravi Belagere

105 books409 followers
Ravi Belagere was a writer and journalist based in Bengaluru, Karnataka, India. He was the editor of Kannada language tabloid Hi Bangalore,which he founded along with R. T. Vittalamurthy, Ra. Somanath, Jogi, and I. H. Sangam Dev. He used to run a show called Crime Diary, which used to air on a regional Kannada-language channel ETV Kannada, that focused on crime in Karnataka, and he started Prarthana, a school for children in Bangalore.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
562 (56%)
4 stars
229 (22%)
3 stars
89 (8%)
2 stars
34 (3%)
1 star
89 (8%)
Displaying 1 - 30 of 77 reviews
Profile Image for Sowmya K A Mysore.
40 reviews35 followers
August 31, 2021
ಪುಸ್ತಕ ವಿಮರ್ಶೆ : "ಹೇಳಿ ಹೋಗು ಕಾರಣ"
ಲೇಖಕರು: ರವಿ ಬೆಳಗೆರೆ

ಪುಸ್ತಕ ವಿಮರ್ಶೆ ಹೀಗೆಯೇ ಇರಬೇಕು‌ ಎಂಬ ನಿಯಮವಿದೆಯೇ? ಗೊತ್ತಿಲ್ಲ. ಆದರೆ ಒಂದು 'ಪುಸ್ತಕ' ಹೀಗೆಯೇ ಇರಬೇಕು ಎಂಬ ನಿಯಮ ಇರಲಿಕ್ಕಿಲ್ಲ. ಇಲ್ಲದಿದ್ದರೆ ಹಿಂದೆಂದೂ ಓದಿರದ 'ಹೊಸ ರೀತಿಯ' ಈ ಪುಸ್ತಕ ಇರುತ್ತಲೇ ಇರಲಿಲ್ಲ.

ಬೆನ್ನುಡಿ ಓದಿದರೆ ಇದು ಪ್ರೀತಿಸಿ ಮೋಸ ಮಾಡುವ (?) ಹುಡುಗಿಯ ಕಥೆ ಇರಬಹುದು ಎಂದೆನಿಸುತ್ತದೆ. ಮದುವೆಯಾಗಿ ಮಕ್ಕಳಿರುವ ನಾನು ಸಹ 'ಇದನ್ನು ಓದಿ ನಾನು ಮಾಡುವಂಥದ್ದೇನಿಲ್ಲ' ಅಂತಲೇ ಕಾಲ ಕಳೆಯುತ್ತಿದ್ದೆ. ಆದರೆ ಒಮ್ಮೆ ಅಕಸ್ಮಾತ್ತಾಗಿ ಈ ಪುಸ್ತಕ ಹಿಡಿದೆ.

ಕಂಡಿದ್ದು ಬೇರೆಯದೇ ಪ್ರಪಂಚ!!!

ಪುಸ್ತಕದಲ್ಲಿನ ಪ್ರತೀ ಬರಹದಲ್ಲಿಯೂ, ಪ್ರತೀ ಸಾಲಿನಲ್ಲಿಯೂ ಯಾವುದೋ ಒಂದು ಜೀವನಾನುಭವವಿದೆ. ಆ ಘಟನೆಗಳು ನಮಗೆ ಏನೋ ಸೂಚ್ಯವಾಗಿ ಹೇಳುತ್ತವೆ... ಒಬ್ಬನೇ ಮನುಷ್ಯನಿಗೆ ಇಷ್ಟೊಂದು ಪ್ರಪಂಚ ಜ್ಞಾನ ಇರಲು ಸಾಧ್ಯವಾ ಅಂತ ಗಾಬರಿಯಾಗುವಷ್ಟು ಪಾತ್ರ ಪ್ರಪಂಚ ದೊಡ್ಡದಿದೆ. ತನಗೆ ಗೊತ್ತಿರುವುದನ್ನು, ಹೇಳಿದ್ದನ್ನು, ಕೇಳಿದ್ದನ್ನು ಸಂದರ್ಭಕ್ಕೆ ತಕ್ಕಂತೆ ತನ್ನ ಬರಹದೊಳಗೆ ಇಳಿಸುವ ಚಾಕಚಕ್ಯತೆ ಲೇಖಕನಿಗೆ ಬೇಕಿರುತ್ತದೆ. ಅದು ಇವರಿಗೆ ಸಹಜವಾಗಿಯೇ ಸಿದ್ಧಿಸಿದೆ.

ಬರಹದ ಶೈಲಿ ಅಂತೂ... ಓದಿಯೇ ಸವಿಯಬೇಕು.

ಮೊದಲ ಬಾರಿ ಇದನ್ನು ಓದುತ್ತಿದ್ದಾಗ, ಬಹುಶಃ ಲೇಖಕರು ತಮಗೆ ಕಂಡ ಪ್ರತಿಯೊಂದನ್ನೂ ಈ ಕಥೆಯೊಳಗೆ ತಂದಿದ್ದಾರೆ ಅಂತಲೇ ಅಂದುಕೊಂಡಿದ್ದೆ. ಆದರೆ ಪುಸ್ತಕ ಮುಗಿದಾಗ ಗೊತ್ತಾಯ್ತು.... ಇಲ್ಲಿನ‌ ಪ್ರತಿಯೊಂದು ಪಾತ್ರವನ್ನೂ ಚೆನ್ನಾಗಿ ಯೋಚಿಸಿಯೇ-ಯೋಜಿಸಿಯೇ ತರಲಾಗಿದೆ ಅಂತ.

ಬಹುದೊಡ್ಡ ಕಥಾವಸ್ತು ಇದು.‌

ಆದರೆ ಎಲ್ಲಿಯೂ ಅನಗತ್ಯವಾಗಿ ಎಳೆದು ಬೋರ್ ಮಾಡುವುದಿಲ್ಲ. ಇನ್ನೇನು ಪುಸ್ತಕ ಮುಗಿಯುವ ಹಂತದಲ್ಲಿದೆ ಎನ್ನುವಾಗ ಕೆಳಗಿಡಲು ಮನಸ್ಸೇ ಬರುವುದಿಲ್ಲ. 'ಮುಂದೇನಾಯ್ತು?' ಅಂತ ಈಗಲೇ-ಈ ಕೂಡಲೇ ತಿಳಿಯಲೇ ಬೇಕು ಅಂತ ಮನಸ್ಸು ಹಠ ಮಾಡುತ್ತದೆ. ಕಡೆಗೆ ಏನಾಗಿರಬಹುದೆಂದು ನಾನಾ ಥರ ಯೋಚಿಸಿ ನಮ್ಮ ಮನಸ್ಸು ಸುಸ್ತಾಗುತ್ತದೆ.

ಆದರೆ ನಾವು ಯೋಚಿಸುವುದೇ ಒಂದು.. ಅಲ್ಲಿ ಆಗುವುದೇ ಒಂದು...

ಹಾಗಾದರೆ ಒಂದೇ ಬಾರಿ ಓದಲಾಗುವುದಾ ಈ ಪುಸ್ತಕವನ್ನು......???

ಖಂಡಿತಾ ಇಲ್ಲ. ಇದೊಂದು ರೀತಿ ಪರ್ಸನಾಲಿಟಿ ಡೆವೆಲಪ್ಮೆಂಟ್‌ನ ಹಾಗಿರುವ ಕಥಾವಸ್ತು. ಇದರಲ್ಲಿರುವ ನಾನಾ ಪಾತ್ರಗಳು, ನಮಗೆ ನಾನಾ ರೀತಿಯ ಪ್ರಪಂಚವನ್ನು‌ ಪರಿಚಯಿಸುತ್ತವೆ. ಪ್ರಾರ್ಥನಾ, ಊರ್ಮಿಳಾ, ಹಿಮವಂತ, ದೇಬ್, ರಸೂಲ್, ಸುಜಯ್ ಎಲ್ಲರೂ ಒಂದೊಂದು ಪಾಠ ಕಲಿಸುತ್ತಾರೆ.

ಈಗ ಕಥೆಯ ಕೊನೆಗೆ ಏನಾಗಬಹುದು ಎಂಬ ಕುತೂಹಲದಿಂದ ಅವಸರ-ಅವಸರವಾಗಿ ಓದಿದ್ದೆ. ಮತ್ತೊಮ್ಮೆ ಕುಳಿತು ನಿರಾಳವಾಗಿ ಓದಬೇಕಿದೆ. ಓದುತ್ತಾ ಪ್ರತೀ ಪಾತ್ರ ವಿಮರ್ಶೆಯಲ್ಲಿಯೂ ಕಳೆದುಹೋಗಬೇಕಿದೆ...

************
ಕೆ.ಎ.ಸೌಮ್ಯ
ಮೈಸೂರು
Profile Image for That dorky lady.
375 reviews73 followers
not-my-cup-of-tea
December 10, 2021
ಎಷ್ಟೇ ಕಷ್ಟಪಟ್ರೂ ಹದಿನೈದು ಪುಟದ ಮೇಲೆ ಓದಲಾಗ್ಲಿಲ್ಲ. Not my cuppa tea. ಬಹುಶಃ ಟೀನೇಜಿನ ದಿನಗಳಲ್ಲಿ ಓದಲು ಕೈಗೆತ್ಕೊಂಡಿದ್ರೆ ಇಷ್ಟವಾಗ್ತಿತ್ತೋ ಏನೋ, ಈಗಂತೂ ಸಾಧ್ಯವೇಯಿಲ್ಲ. ಅಷ್ಟು ಕಷ್ಟಪಟ್ಟು ಓದುವುದಾದ್ರೂ ಯಾಕೆ ಅಂತನ್ನಿಸಿ ನಿಲ್ಲಿಸ್ತಾಯಿದ್ದೇನೆ.
Its not that I don't like romantic novels coz I do.. Just that; the style of rb's writing makes me nauseous these days (sorry, I am not prejudiced, I used to like his columns once upon a time but not anymore it seems).
Have heard many people appreciate this book. So many 'non readers' read and praised this book. ಹಾಗಾಗಿ ಚೆನ್ನಾಗೇ ಇರಬಹುದು ಅಂದ್ಕೊಳ್ತಿನಿ. Its just not for me. So I dare not rate it.
Profile Image for Spoorthi  Chandrashekhar.
60 reviews16 followers
January 27, 2022
"ಪ್ರೀತಿ ಹುಟ್ಟೋಕೆ ಕಾರಣ ಬೇಕಾಗಲ್ಲಾ, ಆದರೆ ಪ್ರೀತಿಸಿದವರಿಂದ ದೂರ ಹೋಗಬೇಕಾದರೆ ಕಾರಣಗಳಿಗೆ ಮೀತಿಯೇ ಇರೋದಿಲ್ಲ". "ಹೇಳಿ ಹೋಗು ಕಾರಣ" ಇದೊಂದು ಭಾವ ಪರವಶದಿಂದ ಕೂಡಿದ ಪ್ರೇಮ ಕಾದಂಬರಿ.
ಅಕ್ಷರ ರಾಕ್ಷಸರಾದ ಬೆಳಗೆರೆ ಪ್ರತಿಯೊಂದು ಸಂದರ್ಭವನ್ನು ನೈಜತೆಯಿಂದ ಬಿಂಬಿಸಿದ್ದಾರೆ. ಕೆಲವು ಸನ್ನಿವೇಶಗಳಲ್ಲಿ, ರವಿ ಬೆಳಗೆರೆ ಅವರ ರಾಕ್ಷಸತ್ವದ ಬರಹವನ್ನು ಕಾಣಬಹುದು. ಬೇಷರತ್ತಾಗಿ, ನಿರಂತರವಾಗಿ, ದೈವೀ ಭಾವವಾಗಿ ಪ್ರೀತಿಸಿದ್ದು ಹಿಮವಂತ, ತಾನು ಮಾಡುವ ಕೆಲಸಗಳಿಗೆ ಕಾರಣವಿಲ್ಲದೆ ದ್ವಂದ್ವದ ಬದುಕನ್ನು ಕಟ್ಟಿಕೊಳ್ಳಲು ಹೊರಟವಳು ಆ ನಿರ್ದಯಿ ಹುಡುಗಿ ಪ್ರಾರ್ಥನಾ. ಇವರುಗಳ ಮಧ್ಯೆ ನಿಷ್ಠೆಯಂತೆ ಕಂಡದ್ದು ಉರ್ಮಿಳಾವಾದರೆ, ಶ್ರೀಮಂತ ಬದುಕಿನ ಮಧ್ಯೆದಲ್ಲಿ ಪ್ರೀತಿಯ ಬಲೆಯನ್ನು ಕಟ್ಟಿದವನು ದೇಬೂ. ಗೆಳೆಯನಾಗಿ ಹಿಮವಂತನ ಶ್ರಮಕ್ಕೆ ರಸೂಲ್ ನಿಂತರೆ, ಹಿಮವಂತನನ್ನು ದೈವತ್ವದಂತೆ ಕಾಣುವವಳು ಕಸೂತಿ ಕಾವೇರಮ್ಮ.
ಪ್ರಸ್ತುತ ಈ ಕಾದಂಬರಿಯು ಪ್ರೀತಿ, ಕಾಮ, ತ್ಯಾಗ, ನೋವು, ದ್ವೇಷ, ಜೀವನ, ಜವಾಬ್ದಾರಿ ಮತ್ತು ಸಂಬಂಧಗಳ ಮಧ್ಯೆ ಚಲಿ‌ಸುತ್ತದೆ‌‌. ರೋಚಕ ತಿರುವುಗಳ ಜೊತೆ ಭಯನಕವಾದ ಘಟ್ಟಗಳು, ಗದ್ಗದಿತವಾದ ಸನ್ನಿವೇಶಗಳು ಓದುಗರನ್ನು ಸೆಳೆಯುತ್ತದೆ. ಪ್ರೇಯಸಿಯಲ್ಲಿ ತಾಯಿಯ ಮಮತೆ ಕಾಣುವ ಸಂದರ್ಭ ಎರಡು ನಿಮಿಷ ನಮ್ಮನ್ನು ಮೌನಿಯಾಗಿ ಮಾಡಿಬಿಡುತ್ತದೆ. ಕಟ್ಟಿದ ಆಸ್ಪತ್ರೆ ಕನಸಾಗಿಯೇ ಉಳಿದಿದೆ, ಹಿಮವಂತನ ಪ್ರೀತಿ ದಿಗ್ಭ್ರಮೆಯ ಶೋಕ ಸಾಗರದಲ್ಲಿ ಮುಳುಗಿದೆ. ಕಾದಂಬರಿಯ ಅಂತ್ಯದಲ್ಲಿ ಕಣ್ಣಂಚಿನಲ್ಲಿ ಹನಿಯಾಗಿ ಜಾರುವುದಂತೂ ಖಚಿತ. ಪ್ರತಿ ಹದಿಹರೆಯದವರು ಓದಲೇ ಬೇಕಾದ ಕಾದಂಬರಿ (ಸಾಧ್ಯವಾದರೆ ನಿಮಗೆ ೨೪ ವರ್ಷ ತುಂಬುವುದರೊಳಗೆ ಓದಿ).
Profile Image for Padmashree.
41 reviews15 followers
Read
November 6, 2021
ನನಗೆ ಈ ಪುಸ್ತಕ ಇಷ್ಟ ಆಗೋಲ್ವೇನೋ ಅಂತ ಎಲ್ಲೋ ಒಂದು ಕಡೆ ಅನ್ನಿಸ್ತಾ ಇದ್ರೂ ಅಷ್ಟೊಂದು ಜನ ಇಷ್ಟ ಪಟ್ಟ ಪುಸ್ತಕ ಹೇಗಿದೆ ನೋಡ್ಬೇಕು ಅಂತ ತಗೊಂಡಿದ್ದೆ. ಆದ್ರೆ ಯಾಕೋ ಓದೋಕೆ ಆಗ್ಲಿಲ್ಲ. ಹಾಗಾಗಿ ಸದ್ಯಕ್ಕೆ ನಿಲ್ಲಿಸ್ತಾ ಇದ್ದೀನಿ. ಮುಂದೇನಾದ್ರು ಇದ್ನ ಪೂರ್ತಿ ಓದಿದ್ರೆ ಆಗ ರೇಟಿಂಗ್ ಕೊಡ್ತೀನಿ.
Profile Image for Mallikarjuna M.
51 reviews14 followers
February 28, 2022
ಹಲವು ವರ್ಷಗಳಿಂದ ಈ ಪುಸ್ತಕ ಕಂಡಿದ್ದರೂ, Top 10 ಪಟ್ಟಿಗಳಲ್ಲಿ ನೋಡಿದ್ದರೂ ಪ್ರಾಯಶಃ ನನ್ನ ಅಭಿರುಚಿಯ ಪುಸ್ತಕವಲ್ಲವೇನೋ ಅಂದುಕೊಂಡು "ಹೇಳಿ ಹೋಗು ಕಾರಣ"ವನ್ನು ಓದುವ ಗೋಜಿಗೆ ಹೋಗಿರಲಿಲ್ಲ.
Goodreadsನಲ್ಲಿ ಓದಿದ reviewsಗಳಿಂದ ಈ ಪುಸ್ತಕ ಓದುವ ಮನಸ್ಸಾಯಿತು, ಇಷ್ಟು ದಿನ ಓದದೇ ಹಾಗೆ ಉಳಿಸಿದಕ್ಕೆ ಖೇದವಾಯಿತು 😁

ಪ್ರೀತಿಯ ತೀವ್ರತೆ, ತುಮುಲ, ಆಶಾವಾದ-ಅವಕಾಶವಾದ, ಅಸ್ತಿತ್ವ, ಪ್ರೀತಿ ಹುಟ್ಟಿಸುವ ದ್ವೇಷ, ಪ್ರೀತಿ ದೊರಕಿಸಿಕೊಡುವ ಅಸ್ಮಿತೆ ಎಲ್ಲವನ್ನೂ ರವಿ ಬೆಳಗೆರೆಯವರು ಅದ್ಭುತವಾಗಿ ಅಕ್ಷರಗಳಲ್ಲಿ ಕಟ್ಟಿ ಹಾಕಿ ಉಣಬಡಿಸಿದ್ದಾರೆ.

ಬಾಲ್ಯದಿಂದಲೇ ಪ್ರೀತಿಯಿಂದ ವಂಚಿತನಾದ ಹಿಮವಂತ ನೆಲ-ಮುಗಿಲೆನ್ನದೇ ಪ್ರಾರ್ಥನಳಿಗಾಗಿ ಪ್ರೀತಿಯನ್ನು ಮೊಗೆ ಮೊಗೆದು ಕಟ್ಟಿಕೊಡುತ್ತಾನೆ. ಆದರೆ ಪ್ರೀತಿ ಕೊಟ್ಟಿ-ಕೊಳ್ಳುವ ಒಡಂಬಡಿಕೆಯಲ್ಲ, ಹಿಮವಂತನಿಗೆ ಪ್ರೀತಿ ದೊರೆಯುತ್ತದೆಯೋ, ದೊರೆತು ಎಷ್ಟು ಸುಖಿಯಾಗಿರುತ್ತಾನೆ ಅಥವಾ ದೊರೆಯದೇ ಎಷ್ಟು ಹತಾಶನಾಗುತ್ತಾನೆ ಎಂದು ತಿಳಿಯಲು ಈ ಕಾದಂಬರಿಯನ್ನೊಮ್ಮೆ ಓದಿ 👍
Profile Image for Gowthami.
31 reviews8 followers
Read
August 11, 2025
ನನಗೆ ಈ ಪ್ರೀತಿ ಪ್ರೇಮದ ಕಾದಂಬರಿಗಳು ಹಿಡಿಸಲ್ಲ ಎಂದಲ್ಲ ಆದರೆ ತುಂಬಾ ಕಾದಂಬರಿಗಳಲ್ಲಿ "ಅಪ್ರಬುದ್ಧ ಪ್ರೀತಿಯ ವಿಜೃಂಭಣೆ"ಯನ್ನು ನೋಡಿ ನನಗೂ ಈ ವಿಭಾಗಕ್ಕೂ ಅಷ್ಟಕ್ಕಷ್ಟೇ ಎನ್ನುವಂತಾಗಿದೆ.
ಇಲ್ಲಿಯೂ ಅದೇ ರೀತಿಯ ಪಾತ್ರಗಳ ಸುತ್ತಲೇ ಕಥೆ ಹೆಣೆದು " ದೈವಿಕ ಪ್ರೀತಿ " ಎಂದಿದ್ದಾರೆ ಲೇಖಕರು.

ಒಂದು ನವಿರಾದ ಪ್ರೇಮ ಕಥೆ ಅಥವಾ ತ್ಯಾಗದ ಕಥೆ ಅಂದುಕೊಂಡವಳಿಗೆ ಇಲ್ಲಿ ಇರುವುದು ಕೇವಲ ತಿಕ್ಕಲು ಪ್ರೇಮಿಗಳು ಮತ್ತು ಅವರ ಸ್ವಾರ್ಥಗಳು ಎಂದು ಕಾಲ ಕಳೆದಂತೆ ಅರಿವಾಗ ತೊಡಗಿತ್ತು .

ಇಲ್ಲಿ ಬರುವ ಹಿಮವಂತನಿಗೆ ಹೆಣ್ಣು ಓದಿ ದೊಡ್ಡ ಸಾಧನೆ ಮಾಡಬೇಕು , ಸ್ವಾತಂತ್ರಳಾಗಿರಬೇಕು ಎಂಬ ಉದ್ದೇಶ ಹಾಗೂ ಆಲೋಚನೆ ಎರಡೂ ಇವೆ ಆದರೆ  ಭಾವನಾತ್ಮಕ ಪ್ರಬುದ್ಧತೆ ಮಾತ್ರ ಸೊನ್ನೆ . ಇನ್ನು ಪ್ರಾರ್ಥನಾಳ, ದೇಬುವಿನ ಊಸರವಳ್ಳಿಯಂತಹ ಗುಣಗಳು ಸಹಿಸಲಸಾಧ್ಯ. ಊರ್ಮಿಳೆಯ ಪಾತ್ರ ಒಂದು ಬಿಟ್ಟರೆ ಮತ್ಯಾವುದೂ ಇಲ್ಲಿ ಸಹ್ಯ ಎನಿಸಲೇ ಇಲ್ಲ ಈ ಪಾತ್ರವೂ ಸಹ ಕೊನೆಕೊನೆಗೆ ತನ್ನ ಗಟ್ಟಿತನ ಕಳೆದುಕೊಂಡು ಹಿಮವಂತ ಹಿಮವಂತ ಅಂತ ಅವನ ಹಿಂದೆಯೇ ಸುತ್ತುವುದೂ ಸ್ವಲ್ಪ ಮಟ್ಟಿಗೆ ಇರುಸು ಮುರುಸು ಮಾಡಿತು.

ತಾನು ಒಬ್ಬರನ್ನು ಓದಿಸುವೆ ಎಂದ ಮಾತ್ರಕ್ಕೆ ಅವರಿಗೆ ನನ್ನಲ್ಲಿ ಗೌರವ , ಭಯ , ಭಕ್ತಿ, ಆಕರ್ಷಣೆ ಇರಬಹುದೇ ವಿನಃ ಪ್ರೀತಿ ಎನ್ನುವುದು ಹುಟ್ಟಲೇ ಬೇಕೆಂದಿಲ್ಲ, ಅಕಸ್ಮಾತ್ ಹುಟ್ಟಿದ್ದರೂ ಅದು ಕಾಲ ಕಳೆದಂತೆ ಆಕೆ/ಆತನೊಳಗಿರುವ ಭಾವನೆ ಬದಲಾವಣೆ ಹೊಂದಬಹುದು , ಪ್ರೀತಿ ಮತ್ತು ಆಕರ್ಷಣೆ ಎರಡರ ವ್ಯತ್ಯಾಸ ತಿಳಿಯದೆ ಹೋದಾಗ ಮೋಸ ಮಾಡುವುದಕ್ಕಿಂತ ಪರಸ್ಪರ ಒಪ್ಪಿಗೆಯಿಂದ ದೂರಾಗಬಹುದು ,ಪ್ರೀತಿಯೆಂದರೆ ಭಾವನಾತ್ಮಕ ಹೌದು ಆದರೆ ಕೇವಲ ಗಮ್ಯಗಳ ಬಗ್ಗೆ ಅಷ್ಟೇ ಅಲ್ಲದೆ ಪ್ರೀತಿಯ ಮಾತುಗಳು ಸಹ ಬೇಕು ಎಂಬುವ ತಿಳುವಳಿಕೆ ಇಲ್ಲಿನ ಯಾವುದೇ ಪಾತ್ರಗಳಿಗೆ ಇಲ್ಲದೇ ಹೋದದ್ದು ವಿಪರ್ಯಾಸ .

ಹಿಮವಂತ , ಪ್ರಾರ್ಥನಾ , ದೇಬು , ಊರ್ಮಿಳಾ ಇವರೆಲ್ಲರ ದೃಷ್ಟಿಕೋನದಿಂದ ಪ್ರೀತಿ ವಿವಿಧ ಆಕಾರ ಪಡೆದಿದೆ. ಎಲ್ಲರನ್ನೂ ಸಮನಾಗಿ ಚಿತ್ರಿಸಿದ್ದರೆ ಹಾಗೂ ಕಾದಂಬರಿಯಲ್ಲಿ ವಾಮಾಚಾರ ಇರದೇ ಹೋಗಿದ್ದರೆ ಖಂಡಿತ ಒಂದು ಬೇರೆಯದೇ ಆದ ಅನುಭವ , ಸಂದೇಶ , ತರ್ಕಬದ್ಧ ಕಥೆ ಕೊಡಬಹುದಾಗಿತ್ತು . ಆದರೆ ಎಲ್ಲವೂ ಹಿಮವಂತನ ದೃಷ್ಟಿಕೋನದಿಂದಲೇ ಇದೆ.

ಎಲ್ಲದಕ್ಕಿಂತ ಈ Mr. Perfect ಪಾತ್ರದ ಬಗ್ಗೆ ಹೇಸಿಗೆ ಅನ್ನಿಸಿದ್ದು ತಾನು ಪ್ರೀತಿಸಿದ ಹುಡುಗಿ ಮುಂದೊಮ್ಮೆ ಮೋಸ ಮಾಡಬಹುದಾ ? ಎಂಬ ಅನುಮಾನದಿಂದ , ಮುಂಚೆಯೇ ಅವಳ ಕೂದಲು, ಒಳ ಉಡುಪುಗಳನ್ನು ತೆಗೆದಿರಿಸಿಕೊಳ್ಳುವುದು. ಇದು ಯಾವ ರೀತಿಯಿಂದ ಪ್ರೀತಿ? ಮಾನಸಿಕ ಅನ್ನಬಹುದು.

ಪ್ರೀತಿಯೆಂದರೆ ಒಬ್ಬರು ಮತ್ತೊಬ್ಬರನ್ನ ಅರಿತುಕೊಳ್ಳಬೇಕು , ಪರಸ್ಪರ ನಂಬಿಕೆ , ಗೌರವ ಇದ್ದ ಕಡೆ ಪ್ರೀತಿ ಇರತ್ತೆ. ಎರಡು ಹೃದಯಗಳು ಸೇರಬೇಕು , ಮಿಡಿಯಬೇಕು , ಪರಸ್ಪರ ಪೋಷಿಸಿಕೊಂಡು ಜೊತೆಗೆ ಸಾಗಬೇಕು .

ಇದು ಪ್ರೀತಿನಾ ಅಥವಾ ಆಕರ್ಷಣೆನಾ ಅಥವಾ ಆರಾಧನೆನಾ ಎಂಬ ಸ್ಪಷ್ಟತೆ ಕಾಲ ಕಳೆದಂತೆ ಅರಿವಿಗೆ ಬರುತ್ತೆ ವಿನಃ " ನೀನು ನನ್ನವಳು ನಾನು ನಿನ್ನವನು" ಅಂದ ಮಾತ್ರಕ್ಕೆ ಆಗುವ ಮಾತೆ? ಭಾವನಾತ್ಮಕ ಪ್ರಬುದ್ಧತೆ ಇಲ್ಲದ ಪ್ರೀತಿ ಉಳಿದೀತೆ? ಕೃತಕತೆ , ಅತಿರೇಕತೆಯ ಒಳಗೊಂಡ ಕಾದಂಬರಿಯ ಓದುವ ಬದಲು ಬೇರೆ ಏನಾದರೂ ಓದುವುದು ಒಳಿತು.

- ಪುಸ್ತಕ ಭೃತ
Profile Image for mahesh.
271 reviews26 followers
November 21, 2021
It must be the first book I have ever read in the "Romance" genre. My close friend suggested me this book despite knowing my indifference to Romantic novels. Never felt the need to read, So it stayed in my book collection for a long time. But there was this sudden question bothering me, What is this so-called romance and love? , What is this romance deceiving people to give promises that they can't keep? What is this love that people often use to mask the mountain of lies?

Three days back, I have determined to spend short time given by nature in this little life for the genre I hate the most. Surprisingly, I liked this book by the time I reached the last words of the ending pages.
Have I changed my perspective about romance?
No, the idea of romance in a relationship is still a horse shit. But the "Himavant" character in the book left a spark that I can't keep alive. Only for that one character, I am giving "5" stars.

When I closed the book, There are a few questions left unanswered with me.
Can we love someone without a set of rules?
Can we have a world where love itself be the rule?
I have tried to dig deep more into the question by asking friends and myself, The received answers made me uneasy even though I lived with them till now.

"Himavanta" is a god as he was admired throughout the book. Though Book didn't convince me to read one more romantic novel. It opens my eyes to a new perspective about devotion(love), life, god, and pain.
Profile Image for Pooja.
6 reviews3 followers
May 14, 2025
ಹೇಳಿ ಹೋಗು ಕಾರಣ
ತುಂಬಾ ಕಾಡಿದಂತಹ ಕಾದಂಬರಿ.
ಮನಸನ್ನು ಒಂದು ಬೇರೆ ಲೋಕಕ್ಕೆ ಕರ್ಕೊಂಡು ಹೋಗಿ ಎಲ್ಲ ರೀತಿಯ ಎಮೋಶನ್ಸ್ ನಾ ಅನುಭವಿಸಬೇಕು ಅಂಥಾ ಅನ್ಸಿದ್ರೆ ಈ ಕಾದಂಬರಿ ಓದಿ.
ಬಹುಶಃ ಈ ಪುಸ್ತಕ ಓದಿ ಫೀಲ್ ಮಾಡ್ಕೊಳೋ ಕೊನೆ ಜನರೇಶನ್, ನಮ್ ಜನರೇಶನ್ ಅನ್ಸುತ್ತೆ ಅಂದ್ರೆ 90s ಕಿಡ್ಸ್. ಮತ್ತು ನಮ್ಮ ಮುಂದಿನ ಪೀಳಿಗೆ ನೆಕ್ಸ್ಟ್ ಜನರೇಷನ್ ಅಂಥಾ ಮುಖವಾಡ ಹಕ್ಕೊಂಡಿರೋ 90s ಕಿಡ್ಸ್ ಮನಸು ಇರೋರಿಗೆ ಮಾತ್ರ.

ಈ ಪುಸ್ತಕ ಓದಿದ ಮೇಲೆ:
ಮಾನಸಿಕವಾಗಿ ಒಂದಾದ್ರೂ ಕೂಡ ತಮ್ಮ ಗುರಿ ತಲುಪುವವರೆಗೂ ಮತ್ತು ಮದುವೆ ಆಗೋವರೆಗೂ ದೈಹಿಕವಾಗಿ ಮುಂದುವರೆಯೋದು, ಅಥವಾ ನಮ್ಮ ಆಸೆ ಆಕಾಂಕ್ಷೆಗಳಿಗೆ ಒತ್ತು ಕೊಟ್ಟು ಗುರಿಯಿಂದ ಡಿಸ್ಟ್ರಾಕ್ಟ್ ಆಗೋದು ಬೇಡ ಅಂತ ಅಂದುಕೊಳ್ಳೋ ಹಿಮವಂತ ಸರಿನಾ?

ಹಿಮವಂತ ದೇವರಂತ ವ್ಯಕ್ತಿತ್ವದವನು ದೇವರನ್ನ ಬರಿ ಪೂಜಿಸಬಹುದು ಆರಾಧಿಸಬಹುದು ಆದರೆ ಪ್ರೀತಿ?ಪ್ರೀತಿ ಮಾಡೋಕಾಗಲ್ಲ ಅಂತ ಅಂದ್ಕೊಂಡು ಹಿಮವಂತನ ಬಿಟ್ಟು ಹೋದ ಪ್ರಾರ್ಥನಾ ಸರಿನಾ?

ಒಣ ಮಡಿವಂತಿಕೆ ಬಿಟ್ಟು ಆಸೆಗಳನ್ನು ನೇರವಾಗಿ ಹೇಳುತ್ತಾ ಜೀವನ ಮಾಡುವ ಊರ್ಮಿಳೆ ಸರಿನಾ?
ಮದುವೆ ಎಂಬುದು ಸಮಾಜದಿಂದ ಯಾವತ್ತೋ ಒಂದಿನ ಕೇಳಿ ಪಡೆದುಕೊಳ್ಳುವ ಸರ್ಟಿಫಿಕೇಟು. ಅದಕ್ಕಾಗಿ ಇವತ್ತಿನ ಸಾಯಂಕಾಲದ ಸಂತೋಷವನ್ನು ಏಕೆ ಮುಂದೂಡಬೇಕು ಎಂದು ಕೇಳುವ ದೇಬ್ ಬಾಬು ಸರಿನಾ?

ಹಿಮವಂತನನ್ನು ದೇವರಾಗಿ ಮಾಡಿದ ಆ ಪ್ರೀತಿ,
ಕಾಲ ಚಕ್ರ ಉರುಳಿದಂತೆ ಅವನನ್ನು ರಾಕ್ಷಸನನ್ನಾಗಿ ಮಾಡಿತು.
ಮತ್ತೆ ಅದೇ ಪ್ರೀತಿ ಹಿಮವಂತನನ್ನು ದೇವರಾಗಿ ಮಾಡುವ ಕಥೆ ಇದು.

ಯಾವದೂ ಸರಿ ಯಾವುದು ತಪ್ಪು ಅದು ಅವರವರ ವಿಚಾರ ವಿಮರ್ಶೆ ವಿವೇಚನೆಗೆ ಬಿಟ್ಟಿದ್ದು. ಅದೇನೋ ಪರ್ಸ್ಪೆಕ್ಟೆವ್ ಅಂತಾರಲ್ಲ ಅದು.
ನಾವು ಯಾವದೂ ಸರಿ ಯಾವದೂ ತಪ್ಪು ಅಂತ ಹೇಳೋಕಾಗಲ್ಲ. ಹೇಳಲುಬಾರ್ದು ಯಾಕಂದ್ರೆ ನಾವೆಲ್ಲರೂ ಜೀವನದಲ್ಲಿ ಅದೇ ತರಹ ಸಮಯ ಸಂದರ್ಭದ ಸುಳಿಗೆ ಸಿಕ್ಕಿ ಏನೇನೋ ನಿರ್ಧಾರ ಮಾಡ್ತೀವಿ. ಅದು ಒಬ್ಬರಿಗೆ ತಪ್ಪು ಒಬ್ಬರಿಗೆ ಸರಿ. ಇದೇ ಜೀವನ.
ಈ ಪುಸ್ತಕವನ್ನು ಸ್ವಲ್ಪ ವರ್ಷ ಹಿಂದೆಯೇ ಅಂದರೆ ಟೀನೇಜ್ ಅಲ್ಲಿ ಓದಿದ್ರೆ ಇನ್ನು ಕನೆಕ್ಟ್ ಆಗ್ತಿತ್ತು ಎಲ್ಲ ವ್ಯಕ್ತಿತ್ವಗಳು.

ಕೊನೆಯಲ್ಲಿ ಎಲ್ಲ ಪ್ರೀತಿ ಮದುವೆಯಲ್ಲಿಯೇ ಒಂದಾಗಲ್ಲ. ಮದುವೆ ಆದರು ಆಗದೆ ಇದ್ದರೂ ಅಥವಾ ನಾವೇ ಹೋದರು ಪ್ರೀತಿ ಉಳಿಯುತ್ತೆ. ಯಾರಿಗೂ ತೊಂದರೆ ಆಗಲ್ಲ ಎಂದರೆ ಕೆಲವು ಸಂತೋಷದ ಘಳಿಗೆಯನ್ನು ಆ ಸಮಯಕ್ಕೆ ಅನುಭವಿಸಿಬಿಡಿ. ಯಾಕಂದ್ರೆ ಜೀವನ ತುಂಬಾ ಚಿಕ್ಕದು.

ಅಂತ ಅನಿಸಿತು.
Profile Image for Vasanth.
113 reviews22 followers
July 28, 2024
ಕಾಂಕ್ಷೆಗಳ ಮೇಲೆ ಹುಟ್ಟುವ ಪ್ರೀತಿ ಅವನಿಗೆ ಯಾವತ್ತೂ ಬೇಕಿರಲಿಲ್ಲ. ಅದು ಸದ್ದಿಲ್ಲದೇ ಸಂಭವಿಸುವ ಸಂಗತಿಯಾಗಿರಬೇಕು, ಯಾವ ವಿವರಣೆಗೂ ನಿಲುಕದಂತಹುದಾಗಿರಬೇಕು ಅದೇ ಪ್ರೀತಿ ಅನ್ನೋ ಮನೋಧರ್ಮವುಳ್ಳವನು ಅವನು. ಪ್ರೀತಿಸಿದ ಹುಡುಗಿ ತನ್ನ ಸಾವಿರಾರು ಕನಸುಗಳ ಒಟ್ಟು ಮೊತ್ತ, ಅವಳೇ ನನ್ನ ಜೀವನದ ಉದ್ದೇಶ, ಅವಳ ಮತ್ತು ನನ್ನ ಕನಸುಗಳು ಫಸಲೊಡೆಯುವಂತೆ ಮಾಡುವುದೇ ನನ್ನ ಕೊನೆಯ ಗುರಿ ಎಂದು ಪಣತೊಟ್ಟವನು ಅವನು. ಅವನ ಈ ಉದ್ದೇಶ, ಗುರಿ ಮತ್ತು ಕನಸುಗಳ ಮೂಲ ಅವಳು. ಈ ಎರಡು ಜೀವಗಳಿಗೆ ಮತ್ತೊಂದು ಆಸರೆಯಿರಲಿಲ್ಲ, ತಮ್ಮದೇ ಜೀವನ ರೂಪಿಸಿಕೊಳ್ಳುವುದಕ್ಕೆ ಸಮ್ಮತಿಸಿ ಕೈಹಿಡಿದು ನೆಡೆದವು. ಹೀಗೆ ಕೈಹಿಡಿದು ನೆಡೆಯುವ ಯುವ ಪ್ರೇಮಿಗಳು ತಮ್ಮ ಭವಿತವ್ಯದಲ್ಲಿ ನೆಡೆಯುವ ಘಟನೆಗಳನ್ನು ಊಹಿಸುವುದಕ್ಕಾದರೂ ಸಾಧ್ಯವೆ? ಇಲ್ಲಾ. ಅದು ಕಾದಂಬರಿಯಲ್ಲೂ ಸಾಧ್ಯವಾಗಿಲ್ಲ, ನಿಜ ಜೀವನದಲ್ಲೂ ಇಲ್ಲ.

ಉತ್ಕಟ ಪ್ರೇಮ ಕಥೆ ಹೇಳುವ, ಪ್ರೀತಿಯಲ್ಲಿನ ದಯೆ-ನಿರ್ದಯತೆ, ಪ್ರಾಮಾಣಿಕತೆ-ವಂಚನೆ, ಕ್ಷಮೆ-ಶಿಕ್ಷೆ, ಪ್ರೀತಿ-ದ್ವೇಷ, ಆಕರ್ಷಣೆ-ಗೊಂದಲ ಮತ್ತು ಬದುಕು-ಸಾವುಗಳೆಂಬ ಅಂಶಗಳುಳ್ಳ ಕಾದಂಬರಿ "ಹೇಳಿ ಹೋಗು ಕಾರಣ", ರವಿ ಬೆಳಗೆರೆಯವರ ಬರವಣಿಗೆ ಅದ್ಭುತ. ಈ ಎಲ್ಲ ಅಂಶಗಳು ವಾಸ್ತವಕ್ಕೆ ಹತ್ತಿರ ಅನ್ನಿಸಿಕೊಳ್ಳುತ್ತವೆಯಾದರೂ, ಮಾಟ ಮಂತ್ರಗಳ ಅವಶ್ಯಕೆತೆ ಕಥೆಗೆ ಇರಲಿಲ್ಲವೇನೋ ಅನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.

"ಒಂದು ಪದ, ಒಂದು ಶಬ್ದ, ಒಂದು ವಾಕ್ಯ ಗಂಟಲಲ್ಲೇ ಒಳಿದು ಹೋಗಿತ್ತು. ಅದೊಂದು ಪ್ರಶ್ನೆಯನ್ನು ಮನುಷ್ಯ ತಾನು ಪ್ರೀತಿಸಿದ ಹುಡುಗಿಯನ್ನು ಮತ್ಯಾವತ್ತೂ ಕೇಳಕೂಡದೆಂಬಂತೆ ಮೌನಿಯಾಗಿ ಹೋದ.

ಹೇಳಿ ಹೋಗು ಕಾರಣ..! ಅವನು ಕೇಳಲೇ ಇಲ್ಲ."
Profile Image for ಸುಶಾಂತ ಕುರಂದವಾಡ.
423 reviews25 followers
July 10, 2021
ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಅವರ ಬರಹಗಳು ಬಹಳ ನಿಖರ. ನಾವೇ ಆ ಭಾವಗಳನ್ನು ವ್ಯಕ್ತಪಡಿಸುತ್ತಿದ್ದೇವೆ ಏನೋ ಅಂತೇನಿಸಬೇಕು ಹಾಗಿರುತ್ತದೆ. ಹೇಳಿ ಹೋಗು ಕಾರಣ ಪುಸ್ತಕವೂ ಹಾಗೆಯೇ.
ತನ್ನ ಪ್ರೀತಿ, ಕನಸ್ಸು ಮತ್ತು ಜೀವನವನ್ನು ಧಾರೆ ಎರೆದ ಒಬ್ಬ ಪ್ರೇಮಿಗೆ ಆ ಪ್ರೀತಿಯ ಹುಡುಗಿ ಬೆರೆಯೊಬ್ಬನ ಜೊತೆಗೆ ಮದುವೆಯಾದಗ ಅವನ ಜೀವನದಲ್ಲಿಯಾಗುವ ಮಾರ್ಪಾಡುಗಳು ಈ ಪುಸ್ತಕದಲ್ಲಿ ಅತ್ಯಂತ ���ೃದಯಕ್ಕೆ ನಾಟುವಂತೆ ಬರೆದಿದ್ದಾರೆ ಬೆಳಗೆರೆಯವರು.
ಹಲವು ಬಾರಿ ಅನೇಕ ತರುಣ ತರುಣಿಯರ ಮನಸಿನಲ್ಲಿ ಈ ಪ್ರಶ್ನೆ ಉದ್ಭವಿಸುವುದುಂಟು ನಾವು ಯಾವ ಕಾರಣಕ್ಕೆ ಹುಡುಗ/ಹುಡುಗಿಯರನ್ನು ಪ್ರೀತಿಸುತ್ತೇವೆ? ಅವರ ಹಣಕ್ಕಾಗಿ? ಒಳ್ಳೆಯತನಕ್ಕಾಗಿ? Status ಗಾಗಿ ಅಥವಾ ದೇಹದ ಮನೋರಂಜನೆಗಾಗಿ? ಹೇಳಿ ಹೋಗು ಕಾರಣ ಪುಸ್ತಕ ಓದಿದ ಮೇಲೆ ಆ ಪ್ರಶ್ನೆಗೆ ಉತ್ತರ ಸಿಗುವುದು ಸುಲಭ ಎಂದು ನನಗನ್ನಿಸುತ್ತದೆ
Profile Image for Sangeetha.
62 reviews22 followers
October 3, 2017
Good book showing the ups and downs of early 20s life and how people change and choose what they want in life. Early 20s is the stage when a person dream big and try to achieve. It is the same age where person couldn't decide what is right and what is wrong. This book has the nice blend of love turning into hate, innocence turning into betray, confusion turning into determination, dreams turning into reality , truth turning into lie.
Profile Image for Aadharsha Kundapura.
60 reviews
September 12, 2023
ಪ್ರೀತಿನಾ? ಅವಶ್ಯಕತೆನಾ? ಆಕರ್ಷಣೆನಾ?
ಯಾವುದು ನಿಜವಾದ ಪ್ರೀತಿ? ಇನ್ನೊಬ್ಬರಿಂದ ತನ್ನ ಜೀವನ ಕಟ್ಟಿಕೊಳ್ಳುವ ಬಯಕೆ ಇರುವ ಮಹತ್ವಾಕಾಂಕ್ಷೆಯು ಪ್ರೀತಿನಾ? ಅಥವಾ ಅಂದಕ್ಕೆ ಮರುಳಾಗಿ ಆತನಲ್ಲಿರುವ ಕಾರು - ಭಂಗ್ಲೆಯ ಮೇಲಿನ ಮೋಹವು ಪ್ರೀತಿನಾ?
‌‌‌ ಅಲ್ಲ ಇದು ಪ್ರೀತಿ ಅಲ್ಲ... ಹಾಗಿದ್ದರೆ What is Love?
ಒಬ್ಬ ಮಧ್ಯಮ ವರ್ಗದ ಹುಡುಗ ತನ್ನ ಪ್ರೀತಿಯ ಹುಡುಗಿಯನ್ನು ಡಾಕ್ಟರ್ ಮಾಡಬೇಕೆಂಬ ದೊಡ್ಡದೊಂದು ಕನಸು ಕಟ್ಟಿಕೊಂಡು ತನ್ನ ಸರ್ವಸ್ವನೆಲ್ಲ ಅವಳಿಗಾಗಿ ಮುಡಿಪಿಡುತ್ತಾನೆ.
ಅವಳ ಓದಿನ ಐದು ವರ್ಷಗಳ ಗಡಿಯಲ್ಲಿ ತಾನೆ ಕಟ್ಟಿಕೊಂಡ ಕನಸುಗಳನ್ನು‌ ನನಸು ಮಾಡಲು ಇರುಳೆನ್ನದೆ ದುಡಿಯುತ್ತಾನೆ. ಕನಸಿನ ಜೊತೆ ಅವಳ ಹೆಸರಲ್ಲಿ ಒಂದು ಲೇಔಟ್ ಮತ್ತು ಒಂದು ಆಸ್ಪತ್ರೆಯು ತಲೆ ಎತ್ತುತ್ತಿರುತ್ತದೆ.
" ನೀನು ನಂಗೆ ಮೋಸ ಮಾಡುವುದಿಲ್ಲ. ಅಲ್ವಾ?"
ಅನ್ನುವ ಅವನ ಪ್ರಶ್ನೆಗೆ
ಅವಳ ಉತ್ತರ ಇದಾಗಿತ್ತು.
"ದೇವರಿಗಾ...?"
ಆದರೆ, ಸ್ಪುರದ್ರೂಪಿ ಆಕರ್ಷಕ ಹುಡುಗನ ನೀಲಿ Benz ಕಾರಿನ ಬಾಗಿಲು ಅವಳಿಗಾಗಿ ತೆರೆದಿರುವಾಗ ಎಲ್ಲೊ ಶಿವಾಮೊಗ್ಗದಲ್ಲಿ ಮಿಠಾಯಿ ಮಾರುವವನ ನೆನಪಾದರೂ ಎಲ್ಲಿಂದ ಆಗಬೇಕು.? ಜೀವನ ಕಟ್ಟಿಕೊಡಲು ಒದ್ದಾಡುತ್ತ ಬಿಸಿಲಿನ ಬೇಗೆಯಲ್ಲಿ ತನ್ನದೊಂದೆ‌ ಪ್ರಪಂಚವಾದ ತನ್ನ ಹುಡುಗಿಯ ಕನಸನ್ನು ನನಸು ಮಾಡಲು ನರಳುತ್ತಿರುವ ಆ ಜೀವ ಕನಸಲ್ಲೆ ಪ್ರಪಂಚ ಕಟ್ಟಿಕೊಳ್ಳುತ್ತಿತ್ತು.

ದೇವರನ್ನು ಪೂಜೆ ಮಾಡಬಹುದು ಆದರೆ ಪ್ರೀತಿಸಲು ಸಾಧ್ಯವೇ? ಅವಳ ಮನಸ್ಸಿನಲ್ಲಿ ಮೂಡಿದ ಈ ಪ್ರಶ್ನೆ ಅಮಾಯಕನ ಪರಿಶುದ್ಧ ಪ್ರೀತಿಗೆ ಅಂತ್ಯ ಹಾಡಿತು..

"ಒಂದು ಪದ, ಒಂದು ಶಬ್ದ, ಒಂದು ವಾಕ್ಯ ಅವನ ಗಂಟಲಲ್ಲೆ ಉಳಿದು ಹೋಗಿತ್ತು. ಅದೊಂದು ಪ್ರಶ್ನೆಯನ್ನು ಹಿಮವಂತನೆಂಬ ಮನುಷ್ಯ ತಾನು ಪ್ರೀತಿಸಿದ ಹುಡುಗಿಯನ್ನು ಮತ್ಯಾವತ್ತೂ ಕೇಳಕೂಡದೆಂಬಂತೆ ಮೌನಿಯಾಗಿ ಹೋದ.

ಹೇಳಿ ಹೋಗು ಕಾರಣ? ಅವನು ಕೇಳಲೇ ಇಲ್ಲ"
Profile Image for Uday Bhagwat.
12 reviews4 followers
December 7, 2016
An emotional heart breaking love story about, true love and betrayal between, a simple boy and a practical girl.
A must for most of us :)
Profile Image for Bhumika Rao.
17 reviews2 followers
February 26, 2022
ಬೆಳಗಿನ ಮೂರನೇ ಜಾವದ‌ ಅಪರಾತ್ರಿಯ ನಿಮಿಷದಲ್ಲಿ ಮುಗಿದು ಹೋದ ಅರ್ಧ ಕನಸ್ಸು...! ಹಿಮವಂತ, ಪ್ರಾರ್ಥನಾ,‌ ದೇಬು, ಊರ್ಮಿಳೆಯರ ಜೀವನ ಇಂದು ಸುಖಮಯ...! ಆದರೆ ದೇವರಿಗೂ ಮೋಸವಾಗಬಹುದೆಂಬ ಸತ್ಯದರ್ಶನ...... ಹೇಳಿ ಹೋಗು ಕಾರಣ❤️
Profile Image for Rathish Kumar.
53 reviews3 followers
January 8, 2026
ರವಿ ಬೆಳಗೆರೆ ಅವರ 'ಹೇಳಿ ಹೋಗು ಕಾರಣ' ಕೇವಲ ಒಂದು ಪ್ರೇಮ ಕಥೆಯಲ್ಲ, ಅದು ಯೌವ್ವನದ ಮನೋವಿಜ್ಞಾನದ ಸಂವಿಧಾನ. ಇತ್ತೀಚಿನ ಸೋಷಿಯಲ್ ಮೀಡಿಯಾ ಹೈಪ್‌ನಿಂದ ಪ್ರೇರಿತನಾಗಿ ಓದಲು ಶುರು ಮಾಡಿದ ಈ ಕೃತಿ, ಕೇವಲ 3 ದಿನಗಳಲ್ಲಿ (ದಿನಕ್ಕೆ 2 ಗಂಟೆಯಂತೆ) ನನ್ನನ್ನು ಪೂರ್ತಿಯಾಗಿ ಆವರಿಸಿಕೊಂಡಿತು. 14 ವರ್ಷಗಳ ಹಿಂದೆ ಕೈಗೆ ಸಿಕ್ಕರೂ ಓದಿಸಿಕೊಳ್ಳಲಾಗದ ಈ ಪುಸ್ತಕ, ಇಂದು ನನ್ನಲ್ಲಿ ಉಂಟುಮಾಡಿದ ತಿಳುವಳಿಕೆಗಳು(Realizations) ಅಪಾರ.

ಈ ಕಾದಂಬರಿ ಹಿಮವಂತ, ಪ್ರಾರ್ಥನಾ, ಊರ್ಮಿಳಾ ಮತ್ತು ದೇಬ್ ಎಂಬ ನಾಲ್ವರು ಯುವಜನರ ಸುತ್ತ ಸುತ್ತುವ 'ಚತುರ್ಮುಖ ಪ್ರೇಮ ಕಾವ್ಯ'. ಆದರೆ ಇದರ ಆಳದಲ್ಲಿ ಇರುವುದು ಶೇರ್ ಮಾರುಕಟ್ಟೆಯ ಏರಿಳಿತದಂತಿರುವ ಯುವ ಮನಸುಗಳ ಚಂಚಲತೆ.

ಹಿಮವಂತ: ಕಥೆಯ ಆರಂಭದಲ್ಲಿ ಇಷ್ಟವಾಗುವ ಹಿಮವಂತ, ಪ್ರಾರ್ಥನಾಳ ನಿಶ್ಚಿತಾರ್ಥದ ನಂತರ ಮಸುಕಾಗುತ್ತಾ ಹೋಗುತ್ತಾನೆ. ಉಪೇಂದ್ರ ಚಿತ್ರದಲ್ಲಿನ ಪ್ರೇಮ ಹಾಗೂ ಕೀರ್ತಿಯನ್ನು ನೆಚ್ಚಿ ರತಿಯನ್ನು ದೂರವಿಟ್ಟು ಕೈಸುಟ್ಟುಕೊಂಡ ಉದ್ಯಮಿಯಂತೆ. ಒಬ್ಬ ಬಂಗಾರದ ಮನುಷ್ಯ ಕೊನೆಗೆ ಮಾಟಗಾರನಾಗುವುದು ಅರಗಿಸಿಕೊಳ್ಳಲು ಕಷ್ಟ. ಅತಿಯಾದುದ್ದೆಲ್ಲವೂ ಕೊನೆಗೆ ಮುಟ್ಟಿಸುವ ಆತಂಕದ (Anxiety) ಪ್ರತಿರೂಪ ಈತ.

ಪ್ರಾರ್ಥನಾ: ಹೆಣ್ಣಿನ ಸಹಜ ಗುಣಗಳಾದ ಆಯ್ಕೆಯ ಗೊಂದಲ, ಭದ್ರತೆಯ ಹಂಬಲ ಮತ್ತು ಸಾಮಾಜಿಕ ವ್ಯಕ್ತಿತ್ವ ಉಳಿಸಿಕೊಳ್ಳಲು ಮಾಡುವ 'ವಂಚನೆ'ಯನ್ನು ಈ ಪಾತ್ರ ಅದ್ಭುತವಾಗಿ ಪ್ರತಿನಿಧಿಸುತ್ತದೆ. ಬದುಕು ಮತ್ತು ಬೆಳವಣಿಗೆಗಾಗಿ ಅವಳು ಮಾಡುವ ತಂತ್ರಗಳು ವಾಸ್ತವಕ್ಕೆ ಹತ್ತಿರವಾಗಿವೆ.

ಊರ್ಮಿಳಾ: ಇಡೀ ಕಾದಂಬರಿಯಲ್ಲಿ ನನಗೆ ಅತ್ಯಂತ ಆಪ್ತವಾದ ಪಾತ್ರ. ಅವಳು ಪ್ರಾಮಾಣಿಕತೆಯ (Honesty) ಸಂಕೇತ. ಪರಿಪೂರ್ಣ ವ್ಯಕ್ತಿತ್ವ.

ದೇಬ್: ಶ್ರೀಮಂತಿಕೆ ಮತ್ತು ಆಸ್ತಿ ಇರುವ ಇಂದಿನ ಬಹುತೇಕ ಯುವಕರ ಪ್ರತಿನಿಧಿ. ಈ ಪಾತ್ರದ ಪ್ರತಿ ನಡುವಳಿಕೆ ಒಬ್ಬ perfect ರೋಮಿಯೋ ನನ್ನು ತೋರಿಸುತ್ತದೆ. ನನಗೆ ಇಷ್ಟವಾಗದೇ ಇದ್ದದ್ದು ದೇಬ್ ಎಂಬ ಹೆಸರು 😂. ಬಂಗಾಳಿ ಬದಲು ಆಂಧ್ರದ ಹುಡುಗ ಆಗಬಹುದಿತ್ತು, ದೇವೂ ಅಂತ ಹೆಸರಿಟ್ಟುಕೊಂಡು, ಇನ್ನೂ ಹೆಚ್ಚಿನ native feel ಬರ್ತಿತ್ತು.

ಇನ್ನು 'ರಸೂಲ್ ಜಮಾದಾರ್' ಪಾತ್ರ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಗಮನ ಸೆಳೆಯುತ್ತದೆ. ಅದು ನಮ್ಮ ಪಕ್ಕದ ಮನೆಯವನಂತೆ ಕಥೆಯುದ್ದಕ್ಕೂ ಸಮಾಧಾನ ಮಾಡಲು ನಿಂತಿರುತ್ತದೆ.

ಈ ಪುಸ್ತಕವು ಯುವಕ ಯುವತಿಯರ ಮನಸ್ಸಿನ ಹಿನ್ನೆಲೆಯಲ್ಲಿ ನಡೆಯುವ ಲೆಕ್ಕಾಚಾರಗಳ, ನಿರ್ಧಾರಗಳ, ಭಾವನೆಗಳ ಬಗ್ಗೆ ಗಹನವಾದ ಸತ್ಯವನ್ನು ಹೇಳುತ್ತದೆ. ಹೆಣ್ಣುಗಳು ಜನ್ಮಜಾತವಾಗಿಯೇ ಸ್ಪಷ್ಟತೆ ಉಳ್ಳವರು; ಅವರಿಗೆ ಪ್ರೀತಿಯ ಜೊತೆಗೆ ಭದ್ರತೆ ಮತ್ತು ಆರ್ಥಿಕ ಸೌಕರ್ಯದ ಅಗತ್ಯವಿರುತ್ತದೆ. ಗಂಡು ಕಟ್ಟಿರುವ ಈ ಸಾಮಾಜಿಕ ವ್ಯವಸ್ಥೆಗೆ ಹೆಣ್ಣಿನ ಬೆಂಬಲ ಅನಿವಾರ್ಯ, ಆದರೆ ಅದನ್ನು ಮೀರಿ ನಿಲ್ಲುವ ಅವಳ 'Raw Nature' ಅನ್ನು ಎದುರಿಸುವ ಶಕ್ತಿ ಗಂಡಿಗಿಲ್ಲ ಎಂಬುದನ್ನು ಈ ಕಥೆ ಸೂಚ್ಯವಾಗಿ ಹೇಳುತ್ತದೆ.

ಕಾದಂಬರಿಯಲ್ಲಿ ಬರುವ 'ಮಾಟ-ಮಂತ್ರ'ದ (Black Magic) ಎಳೆ ನನಗೆ ಇಷ್ಟವಾಗಲಿಲ್ಲ. ನಮ್ಮ ರವಿ Black magic ಬಿಟ್ಟು ಬೇರೆ ಏನಾದ್ರೂ use ಮಾಡ್ಬೋದಿತ್ತು, ಕಥೆ ಇನ್ನೂ ಬಲಿಷ್ಠವಾಗಿರುತ್ತಿತ್ತು. ಅಂತ್ಯವು ಅಂದುಕೊಂಡಷ್ಟು ತೀವ್ರವಾಗಿಲ್ಲದಿದ್ದರೂ, ಸಾಗಿ ಬಂದ ಹಾದಿ ರೋಚಕವಾಗಿದೆ. ಆದರೂ, climax ಬಗ್ಗೆ ಹೆಚ್ಚಿನ ನಿರೀಕ್ಷೆಗಳಿದ್ದವು.

ಪ್ರತಿ ಯುವಕ ಯುವತಿಯರು ಒಮ್ಮೆಯಾದರೂ ಓದಲೇಬೇಕಾದ ಪುಸ್ತಕವಿದು. ಇದು ಕೇವಲ ಮನರಂಜನೆಯಲ್ಲ, ನಮ್ಮ ಒಳ ಮನಸ್ಸನ್ನು (Subconscious mind) ಕೆದಕಿ, ನಮ್ಮ ಗತಕಾಲದ ನೆನಪುಗಳನ್ನು ಮುಖಾಮುಖಿ ಮಾಡಿಸುವ ಕನ್ನಡಿ.
Profile Image for Vinod.
33 reviews2 followers
October 31, 2024
I wouldn’t categorize this book solely as a romantic novel. Anyone fascinated by the complexities of human emotions and the drama that comes with it will find this book compelling. True to the eccentric and electric personality of the late Mr. Ravi Belagere, he writes this novel with passion and without holding back. You can almost imagine him sipping his expensive whisky while writing, not before or after, but during the process.

By the time you’re halfway through the book, you’re already immersed in a web of mind games—sometimes exhausting, yet always keeping you on edge. As you navigate the world of the characters, filled with lust, deceit, heartbreak, and integrity, you experience the emotional rollercoaster right alongside them.

The novel delves deep into love, from its initial spark to the devastation of heartbreak. Belagere's writing is raw, lyrical, poignant, capturing the intricacies of love and loss with sensitivity. This love isn’t uplifting; it’s disturbing. Far from being idyllic, the love in this story is toxic and destructive. It forces the reader to confront the darker side of human nature and empathize with characters who make morally questionable decisions. That’s what I appreciated most about Ravi’s writing—it's blunt and unflinching, leaving readers emotionally wrecked.

Along with the physical copy of the book, what made the experience even more engaging for me was the audiobook, available on YouTube, narrated by Preetham Gowda. Link to the Audiobook: https://www.youtube.com/playlist?list=PLgp7rlNB7EJK5T6RW-knWqWzte6beTDU_ He masterfully uses voice modulation, emphasis, and background music to bring the story to life. Even the opening theme sets the tone beautifully. He deserves more views & subscribers for all his hard work.

For me, this was one of the few satisfying reads of the year—definitely worth a spot on my shelf. If I ever want to revisit that bittersweet feeling, flipping through a few pages will surely do the trick.
28 reviews
June 11, 2024
ಕನ್ನಡದಲ್ಲಿ Young Adult ಕೃತಿಗಳು ಬಹಳ ಕಡಿಮೆ ಆ ಸಾಲಿಗೆ ಸೇರುವಂತಹ ಕೃತಿ ಇದು.

ಇದೊಂದು ಪ್ರೇಮ ಕಥೆ ಒಲವು, ಗೆಲವು, ಧ್ವೇಷ , ತಿರಸ್ಕಾರ ಎಲ್ಲವೂ ಇದೆ. ಮುಖ್ಯ ಪಾತ್ರಗಳು ಹಿಮವಂತ್, ಪ್ರಾರ್ಥನ, ದೇಬ್ ಹಾಗೂ ಊರ್ಮಿಳಾ.

ಪ್ರೀತಿಯೆಂಬ ಮಾಯೆಯಲ್ಲಿ ಬಿದ್ದಿರುವ ಹಿಮವಂತನೊಂದಿದೆ ಕಥೆ ಶುರು ಆಗುತ್ತದೆ, ಈ ಮಾಯೆಯೇ ಅವನಿಗೆ ಸಂಕಲ್ಪ ಹಾಗೂ ಗುರಿ ನೀಡುತ್ತದೆ, ಆ ಸಂಕಲ್ಪ ಪೂರೈಸಲು ಅವನ ಎಡಬಿಡದೆ ಶ್ರಮ ಪ್ರೀತಿಯ ಶಕ್ತಿಯನ್ನು ತೋರುತ್ತದೆ ಆದರೆ ಆ ಪ್ರೀತಿಯೇ ಇಲ್ಲವಾದಾಗ ಹಿಮ ಬಂಡೆಯಂತಹ ವ್ಯಕ್ತಿತ್ವದ ಹಿಮವಂತನನ್ನೇ ಹೇಗೆ ಕುಗ್ಗಿಸಿ ನೀಡುತ್ತದೆ ಎಂಬದನ್ನು ಚೆನ್ನಾಗಿ ಕಟ್ಟಿ ಕೊಟ್ಟಿದ್ದಾರೆ.

ಹಿಮವಂತ್ ಹಾಗೂ ದೇಬ್ ವ್ಯಕ್ತಿತ್ವಗಳನ್ನು ವಿಮರ್ಶಿಸುತ್ತಾ ಸಂಬಂಧದಲ್ಲಿ ಇರಬೇಕಾದ ಪ್ರಾಮಾಣಿಕತೆ, ಪರಸ್ಪರ ಗೌರವ ಹಾಗೂ ಕನಸುಗಳ ಬಗ್ಗೆ ವರ್ಣಿಸಿದ್ದಾರೆ. ಕೆಲವು ಸಂಬಂಧಗಳು ಕೇವಲ ಅವಲಂಬನೆ/ಅವಶ್ಯಕತೆ ಇರುವ ತನಕ ಇರುವುದು ಹಾಗೂ ಪ್ರೇಮಿಗಳ ನಡುವೆ ಅಂತರ ಹೆಚ್ಚಾದಷ್ಟು ಪ್ರೇಮ ಹೇಗೆ ವಿರಹವಾಗಿ ನಂತರ ಕ್ಷೀಣವಾಗಿ ಹೋಗುತ್ತದೆ ಎಂಬುದೆಲ್ಲಾ ನೀವೇನಾದರೂ ಭಗ್ನ ಪ್ರೇಮಿಯಾಗಿದ್ದರೆ ಇನ್ನು ಸ್ಪಷ್ಟವಾಗಿ ಅರ್ಥವಾಗುತ್ತದೆ.

ಎಸ್ ಎಲ್ ಭರಪ್ಪನವರ ದೂರ ಸರಿದರು ಕೃತಿಯಲ್ಲಿರುವ ಪ್ರೀತಿಯ ತೀವ್ರತೆ ಇಲ್ಲಿ ಇಲ್ಲ ಪ್ರೇಮವನ್ನು ಕೂಡ ಅವಕಾಶದಂತೆ ಬಳಸಲಾಗಿದೆ. ಲೇಖಕರು ನಡುವೆ ಇಂಗ್ಲೀಷ್ ಪದಗಳನ್ನು ನಿರಾಯಾಸವಾಗಿ ಬಳಸಿದ್ದಾರೆ ಆ ಕೆಟ್ಟ ಪದ್ಧತಿ ನನಗೆ ಇಷ್ಟವಾಗಲಿಲ್ಲ.

ಇನ್ನು ಕಥೆಯಲ್ಲಿ ಕೆಲವೊಂದು ಅಂತೀಂದ್ರಿಯ ಶಕ್ತಿಯನ್ನು negative ಆಗಿ ಬಳಸುವ ರೀತಿ ಸರಿ ಎನಿಸಲಿಲ್ಲ, ಅತೀಂದ್ರಿಯ ಶಕ್ತಿಯನ್ನು ಕಥೆಯ ಭಾಗವಾಗಿ ಹೇಗೆ ಬಳಸಬಹುದು ಎಂಬುದನ್ನು ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ನೋಡಿ ಅರಿಯಬಹುದು.

ಹಿಮವಂತನ ಪಾತ್ರ ಕೆಲವೊಮ್ಮೆ ನನಗೆ ಒಂದು ಸ್ಪಷ್ಟ ವ್ಯಕ್ತಿತ್ವಕ್ಕೆ ಸಿಗದ ವಿಚಿತ್ರವೆನಿಸಿತು, ಊರ್ಮಿಳಲ ಒಪ್ಪಲು ಕಷ್ಟ ಆಗುವಂತಹ ಹಠಾತ್ ಬದಲಾವಣೆ ಹಾಗೂ ಕಥೆಯ ಅಂತ್ಯ ಹೀಗೆ ಇರಬೇಕು ಎಂದು ಸಿನಿಮೀಯ ರೀತಿಯ ಅಂತ್ಯ ನೀಡಿದ್ದು ಯಾಕೋ ರುಚಿಸಲಿಲ್ಲ.

ಕನ್ನಡದಲ್ಲಿ Young Adult ಪುಸ್ತಕಗಳ ಸಂಖ್ಯೆಯೇ ಕಡಿಮೆ ಒಮ್ಮೆ ಓದಲು ಅಡ್ಡಿಯಿಲ್ಲ ಆದರೆ ದರ ಸ್ವಲ್ಪ ಧುಭಾರಿ ಆಯಿತೇನೋ.
Profile Image for Srilekha CB.
7 reviews1 follower
May 17, 2025
ಏನಿಲ್ಲ ಈ ಪುಸ್ತಕದಲ್ಲಿ... ಕನಸಿದೆ, ಪ್ರೀತಿಯಿದೆ, ದ್ವೇಷವಿದೆ, ಸ್ನೇಹವಿದೆ, ಕಾಮವಿದೆ, ತಪಸ್ವಿಯಂತ, ತೀರ ಅಪರೂಪದ ವ್ಯಕ್ತಿತ್ವದ ಹಿಮವಂತನಿದ್ದಾನೆ... ಚಂಚಲ ಮನಸ್ಸುಳ್ಳ, ಅಮಾಯಕಿಯೋ, ಸ್ವಾರ್ಥಿಯೋ, ವಂಚಕಿಯೋ ಒಟ್ಟಿನಲ್ಲಿ ಪ್ರಾರ್ಥನಾ ಇದ್ದಾಳೆ.... ಹಿಮವಂತನನ್ನ, ಪ್ರಾರ್ಥನಾಳನ್ನ ತಾಯಿಯಂತೆ ಪ್ರೀತಿಸುವ, ಹೊರ ಜಗತ್ತಿಗೆ ಬಹಳ ಟಫ್ ಎನಿಸುವ ಊರ್ಮಿಳೆಯಿದ್ದಾಳೆ... ಮಹಾಬುದ್ಧಿವಂತ, ಮಹಾಸುಂದರ, ಮಹಾನ್ ಫ್ಲರ್ಟ್, ಸ್ತ್ರೀಲೋಲ ದೇಬ್ ಇದ್ದಾನೆ, ಇಲ್ಲಿ ಕನಸುಗಳಿವೆ, ಅರ್ಧಕ್ಕೆ ನಿಂತ ಕನಸುಗಳಿಂದ ಬಳಲಿದ ಜೀವಗಳಿವೆ, ಇಲ್ಲಿ ಜೀವನ ಪಾಠಗಳಿವೆ, ಬಹಳ ಬಹಳ ಅಚ್ಚುಕಟ್ಟಾದ ಬರವಣಿಗೆಯಿದೆ, ರವಿ ಬೆಳಗೆರೆಯವರಿಗೆ ಅಕ್ಷರ ಮಾಂತ್ರಿಕ ಎನ್ನುವ ಬಿರುದು ಅತಿಶಯೋಕ್ತಿಯಲ್ಲ ಎಂದ ಪುರಾವೆಯಿದೆ...

ಮನುಷ್ಯನನ್ನು ದೇವರನ್ನಾಗಿಸಿ, ದೇವರನ್ನು ಪ್ರೀತಿಸಿ, ದೇವರನ್ನು ಅಭಿಮಾನಿಸಿ, ಮನುಷ್ಯ ಪ್ರೀತಿಯ ರುಚಿಯನ್ನು ಕಂಡು, ದೇವರನ್ನು ವಂಚಿಸಬಹುದೇ? ಎಂಬ ಪ್ರಶ್ನೆ ಕೇಳಿಕೊಂಡು... ಅದಕ್ಕೆ ಉತ್ತರವೆಂಬಂತೆ.. ದೇವರನ್ನು ಪೂಜಿಸಬಹುದು, ಪ್ರೀತಿಸಲಾಗದು, ಬದುಕನ್ನು ಹಂಚಿಕೊಳ್ಳಲಾಗದು, ಎಂದು ನಿರ್ಧರಿಸಿ, ನನಗೆ ಮನುಷ್ಯ ಪ್ರೀತೆಯೇ ಬೇಕು, ನನಗೆ ಸಾಧಾರಣ ಮನುಷ್ಯ ಸಾಕು, ದೇವರೆನಿಸಿಕೊಳ್ಳಬಲ್ಲ ಮನುಷ್ಯ ಬೇಡ ಎಂದು, ದೇವರನ್ನು ಕಾರಣ ಹೇಳದೆ ಬಿಟ್ಟು ಹೋದ ಪ್ರಾರ್ಥನಾಳ ಕಥೆಯೇ ಹೇಳಿ ಹೋಗು ಕಾರಣ. ದೇವರೆನ್ನಿಸಿಕೊಂಡ ಮನುಷ್ಯ ತನ್ನ ಕನಸುಗಳಿಗೆ ಮೋಸವಾದಾಗ, ಅವು ಅರ್ಧಕ್ಕೆ ನಿಂತಾಗ, ದ್ವೇಷವನ್ನು ತುಂಬಿಕೊಂಡು ರಾಕ್ಷಸನಾಗುವ ಹಿಮವಂತನ ಕತೆಯೇ ಹೇಳಿ ಹೋಗು karana...



It’s a completely different world… I literally felt like I was being hypnotized while reading this book. The characters didn’t let me sleep… and even if I forced myself to sleep, they came into my dreams and disturbed me so much. The trauma in the book transferred to my mind. Even with a headache, I couldn’t put the book down—it’s that addictive. The narration and characterization are perfect. I’m still trying to adjust to the real world after living in this imaginary one. What a great book!
Profile Image for Venu Kannadiga.
1 review
July 5, 2025
ಹೇಳಿ ಹೋಗು ಕಾರಣ ನಾನು ಬಹು ದಿನಗಳಿಂದ ಓದಬೇಕೆಂದು ಕನಸು ಕಟ್ಟಿಕೊಂಡಿರುವ ಕಾದಂಬರಿ. ನಾನು ಮೊಟ್ಟ ಮೊದಲ ಬಾರಿಗೆ ಪೂರ್ಣವಾಗಿ ಓದಿ ಮುಗಿಸಿದ ಕಾದಂಬರಿ. ಮುಗಿಸಿದೆ ಎಂದು ಖುಷಿಪಡುವುದೋ...... ದೇವರಿಗೆ ಮೋಸ ವಾಯಿತೆಂದೋ ದುಃಖ ಪಡುವುದು........
ಈಗಷ್ಟೇ ಕಾದಂಬರಿಯನ್ನು ಓದಿದ ನನಗೆ ನನ್ನ ಮನಸ್ಸಿನಲ್ಲಿ ಪ್ರಾರ್ಥನೆಗೆ ಕೇಳಿದೆ ಹೇಳಿ ಹೋಗು ಕಾರಣ........
ದೇವರ ಪ್ರೀತಿ ಶಿವಮೊಗ್ಗದ ಶಿವಮೂರ್ತಿ ಸರ್ಕಲ್ ನಲ್ಲಿ ಶುರುವಾಗಿ ದಾವಣಗೆರೆ, ಹೈದರಾಬಾದ್ ಎಲ್ಲಾ ಅಲೆದಾಡಿ ಮತ್ತೆ ಅದೇ ಶಿವಮೊಗ್ಗದ ಶಿವಮೂರ್ತಿ ಸರ್ಕಲ್ ನಲ್ಲಿ ಬಂದು ನಿಲ್ಲುತ್ತದೆ ಕನಸು ವರ್ಗಾವಣೆಯಾಗಿ.
ಒಂದು ಪದ, ಒಂದು ಶಬ್ದ, ಒಂದು ವಾಕ್ಯ, ಅವನ ಗಂಟಲಲ್ಲೇ ಉಳಿದು ಹೋಗಿತ್ತು ಅದೊಂದು ಪ್ರಶ್ನೆಯನ್ನು ಅವನು ತಾನು ಪ್ರೀತಿಸಿದ ಹುಡುಗಿಯನ್ನು ಮತ್ಯಾವತ್ತೂ ಹೇಳಿಕೊಡದೆಂಬಂತೆ ಮೌನಿಯಾಗಿ ಹೋದ ಹೇಳಿ ಹೋಗು ಕಾರಣ ಅವನ ಕೇಳಲೇ ಇಲ್ಲ ಅವಳು ಹೇಳಲೇ ಇಲ್ಲ
ಹಿಮವಂತ ನಿಸ್ವಾರ್ಥಪ್ರೀತಿ, ಪ್ರಾರ್ಥನಾಳ ಮೋಸ, ಊರ್ಮಿಳೆಯ ಊಹಿಸಲಾಗದ ಬದಲಾವಣೆ, ದೇಬ್ ಬಾಬುನ ಹುಡುಗಾಟ ಈ ಕಾದಂಬರಿಯಲ್ಲಿನ ಆಕರ್ಷಣೆಗಳು. ನನಗೆ ಸದಾ ಕಾಡುವ ಪಾತ್ರಗಳು
ಹಿಮವಂತ,ಊರ್ಮಿಳೆ
''ಬಿಟ್ಟು ಹೋಗುವವರು ನೆನಪುಗಳನ್ನು ಕೊಂದುಕೊಂಡೇ ಹೋಗಿರುತ್ತಾನೆ. ಆದರೆ ಉಳಿದು ಹೋದವರಿಗೆ ಬಿಟ್ಟು ಹೋದವರು ನೆನಪುಗಳು ಮಾತ್ರ ಉಳಿದಿರುತ್ತವೆ!......"
ಹಿಮವಂತ
Profile Image for pustakamare.
89 reviews13 followers
August 5, 2025
ನಿಮಗೆಲ್ಲ ಗೊತ್ತಿರೋವಂತೆ; ಸಿಕ್ಕಾಪಟ್ಟೆ ಜನ ಓದಿರೋವಂತೆ; ಭರ್ಜರಿ ಜನ ಅನಿಸಿಕೆ ಬರೆದಿರೋವಂತೆ ಭಯಂಕರ ಲವ್‌ಸ್ಟೋರಿಯಿದು. ಯಾವ ಲೆವೆಲ್‌ಗೆ ಅಂದ್ರೆ ಈಟೈಮಲ್ಲಿ ಇಂತದೇನಾದ್ರು ಆದ್ರೆ ಅದನ್ನ ಡೈರೆಕ್ಟ್ ಪವಾಡ ಅಂತ ಗಣನೆಗೆ ತಗೊಂಡು ಒಂದು ಧರ್ಮಾನೆ ಮಾಡಿಬಿಡಬಹುದು; ಅಹಂ ಪ್ರೇಮಾಸ್ಮಿ ಅಂತ.
ಇಲ್ಲೆ ಕತೆ ಬಗ್ಗೆ ಹೇಳಿ ನಿಮ್ಹತ್ರ ಬಯಿಸಿಕೊಳ್ಳೆ ಅಪರಾಧಕ್ಕೆ ಕೈ ಹಾಕದೆ ಪುಸ್ತಕ ನನಗೆ ಹೇಗೆ ಓದಿಸಿಕೊಂಡು ಹೋಯ್ತು ಅಂತ ಹೇಳ್ತೀನಿ. ಸಖತ್ ಕ್ರಿಂಜ್ ಅನಿಸಿತ್ತು; ಮೊದಲು ಓದಿದ್ದಾಗ. ಥೋ ಇದನ್ನ ಓದಬೇಕು ಅನಿಸಿತ್ತು. ಅದಕ್ಕೆ ಆ ಮಹಾನ್ ಪ್ರಾಜೆಕ್ಟ್‌ನ ಸ್ವಲ್ಪಮಟ್ಟಿಗೆ ಮುಂದೂಡಿದ್ದೆ; ಅರೆವರ್ಷಗಳ ಮಟ್ಟಿಗೆ. ಈಗ ಇನ್ನೊಂದು ರೌಂಡು ಪ್ರಯತ್ನಿಸೋಣ ಅಂತ ಶುರುಮಾಡಿದೆ. ಸಖತ್ ಆಸಕ್ತಿದಾಯಕವಾದ ಧಾರಾವಾಹಿ ನೋಡಿದಂತಾಯ್ತು. ಮುಂದೇನಾಗುತ್ತೆ ಈ ಜನ್ರ ಜೀವನದಲ್ಲಿ ಅನಿಸ್ತಿತ್ತು ಓದ್ತಾ ಹೋದ ಹಾಗೆ. ಕೆಲವೊಂದು ಅಲ್ಲೇ ಗಿರ್‍ಕಿ ಹೊಡೀತಾ ಇದೆ ಅಲ ಗುರು, ಇನ್ಯಾವಾಗ ಕತೆ ಮುಂದೇ ಹೋಗೋದು ಅನಿಸ್ತು. ಚೆನ್ನಾಗಿದೆ ಕತೆ. ಪಾತ್ರಗಳೆಲ್ಲ ತುಂಬಾ ಇಷ್ಟವಾಗುತ್ತವೆ. ಬೆಳಗೆರೆ ಮಾಂತ್ರಿಕವಾಗಿ ಬರೆದುಕೊಂಡು ಹೋಗಿದ್ದಾರೆ. ಈ ಕಾದಂಬರಿ ಓದ್ತಾ ಓದ್ತಾ ನನಗೆ ಫ್ಯೋದರ್ ದಾಸ್ತೋವ್‌ಸ್ಕಿ ಅವರ ಕತೆ 'White Nights' ನೆನಪಿಗೆ ಬಂತು.
ಚೆನ್ನಾಗಿದೆ, ಮಸ್ತಾಗಿ ಓದಿಸಿಕೊಂಡು ಹೋಗುತ್ತೆ. ವೆಬ್‌ಸಿರೀಸ್ ಆದ್ರೆ ಇನ್ನೂ ಮಜಾ ಸಿಗುತ್ತೆ. ಜೈ!
5 reviews
August 29, 2023
ಹೇಳಿ ಹೋಗು ಕಾರಣ
*ಹಿಮವಂತ್ ಪ್ರಾರ್ಥನಾಳನ್ನು ಡಾಕ್ಟರ್ ಓದಿಸಲು ಕಳಿಸಿದ್ದು ತಪ್ಪಾ?
*ಅವಳನ್ನು ಕಾಯ ವಾಚ ಮನಸ ಪ್ರೀತಿಸಿದ್ದು ತಪ್ಪಾ?
*ಅವಳಿಗಾಗಿ ಮನೆ ನರ್ಸಿಂಗ್ ಹೋಮ್ ಒಂದು ಊರೇ ಕಟ್ಟಲು ಹೊರಟಿದ್ದು ತಪ್ಪಾ?
*ಪ್ರಾರ್ಥನಾ ಹಿಮವಂತನನ್ನು ನೋಡಿ ಕಾಲಿಗೆ ಹಣೆ ಇಟ್ಟು ನಮಸ್ಕರಿಸಿದ್ದನ್ನು ದೇಬ್ ನೋಡಿದ್ದೇ ತಪ್ಪಾ?
*ಪ್ರಾರ್ಥನಾ ದೇಬ್ ನಾ ಲವ್ ಮಾಡಲು ಶುರು ಮಾಡಿದಾಗ ಅಕ್ಕನ ಸ್ಥಾನದಲ್ಲಿದ್ದು ಊರ್ಮಿಳ ಅದನ್ನು ತಡೆಯದೆ ಇದ್ದಿದ್ದು ತಪ್ಪಾ?


*ದೇಬ್ ಪ್ರಾರ್ಥನಾಳನ್ನು ಫ್ಲರ್ಟ್ ಮಾಡುವುದಕ್ಕೆ ಲವ್ ಮಾಡಿದವನು ಅವನಿಗೆ ಕಸೂತಿ ಕಾವೇರಮ್ಮನ ಸವಾಸ ಇದ್ದವನು ಸಿಕ್ಕ ಎಲ್ಲಾ ಹುಡುಗಿಯರ ಜೊತೆ ಫ್ಲಟ್ ಮಾಡುತ್ತಿದ್ದವನು ಆದರೆ ಪ್ರಾರ್ಥನಾ ಅವನನ್ನು ಕಾಯ ವಾಚ ಮನಸ ಪ್ರೀತಿಸುವ ಹಾಗೆ ಬದಲಾಯಿಸಿದಳು ಆದರೆ ಕಾಯ ವಾಚ ಮನಸ ಪ್ರೀತಿಸುತ್ತೇನೆ ಎಂದು ಹೇಳಿದ ಹಿಮವಂತ ಮರೆತೇ ಹೋಗಿದ್ದ
ಒಂದು ಹೆಣ್ಣು ಕಾರಿನ ವ್ಯಾಮೋಹಕ್ಕೆ ದುಡ್ಡಿನ ವ್ಯಾಮೋಹಕ್ಕೆ ಒಂದು ಗಂಡು ಅನುಮಾನಿಸಿದ ಕಾರಣಕ್ಕೂ ಮನಸ್ಸು ಬದಲಾಗುತ್ತಾ ಹೋಗುತ್ತದೆ ಇದನ್ನು ರವಿ ಬೆಳಗೆರೆಯವರು ಚೆನ್ನಾಗಿ ವರ್ಣಿಸಿದ್ದಾರೆ

ಇದು ಒಂದು ನೊಂದ ಮನದ ಪ್ರೇಮ ಕಾದಂಬರಿ 🦋💚
This entire review has been hidden because of spoilers.
Profile Image for Subramanya Raj.
6 reviews
Read
August 25, 2023
"ದೇವರಿಗೆ ಮನುಷ್ಯ ಮೋಸ ಮಾಡೋದಿಲ್ವಾ?"
ಇಂಥಾ ತುಂಬಾ ಪ್ರಶ್ನೆಗಳನ್ನ ಮತ್ತೆ ಮತ್ತೆ ಕೇಳುತ್ತಾರೆ. ಉತ್ತರ ನಮಗೆ ಸಿಗೋ ಹಾಗಿಲ್ಲದಿದ್ದರೆ, ಅದಕ್ಕೆ ಬೇಕಾಗಿರೋ ಮಾರ್ಗ ಇದರ ಪುಟಗಳಲ್ಲಿ ಸಿಗುತ್ತೆ. ಸಾತ್ವಿತ ನೆಲೆಯಿಂದ ತಾಮಸ್ವಿ ಹಾಗು ಅದರ ಪ್ರತಿಯಾಗಿ ಮಾಡೋ ಶಕ್ತಿ ಇರೋದು ಪ್ರೀತಿಗೊಂದೇ.

ಈ ಪುಸ್ತಕಾನ ಓದೋದು ಕೊಂಚ ಕಷ್ಟವೇ ಆಯಿತು. ಎರಡು ಬಾರಿ ನಿಲ್ಲಿಸಿ ಮತ್ತೆ ಓದಿದಾಗ, ಎಲ್ಲೋ ಒಂದು ಜಾಗದಿಂದ connect ಆಯ್ತು. ಆಗಿ ಹೋದ ಕೆಲವು ಘಟನೆಗಳಿಗೆ ಸ್ವಲ್ಪ ಸ್ಪಷ್ಟನೆ ದೊರೆತಂತಾಯಿತು. ಎಲ್ಲಾರಿಗು ಎಲ್ಲಿಯಾದರು ಚೂರು ಜಾಗವಾದರು ಹೀಗೆ ಹೌದು ಅನಿಸದೆ ಇರೋದಿಲ್ಲ. ಯಾಕೆಂದರೆ ಈ ಪಾತ್ರಗಳು ನಮ್ಮಂತೆಯೆ broken. ಅದರ ಮೇಲೆ ಲೇಖಕರು ರವಿ ಬೆಳಗೆರೆಯವರು, ಜನರಿಗೆ ಏನು ಕೇಳೋಕೆ ಬೇಕು ಅಂತ ಚೆನ್ನಾಗಿ ಬಲ್ಲವರವರು.

ಹೇಗೇಗೋ ಹೋಗಿ ಕೊನೆಗೆ ಸುಖಾಂತ್ಯ ಕಂಡಾಗ relief ಸಿಕ್ತು. ನೀವು ಓದ್ಬೇಕಾ ಬೇಡ್ವಾ ಅನೋದು ಈ ಪುಸ್ತಕದ ಹೆಸರಿನಿಂದಲೇ ತೀರ್ಮಾನಿಸ್ಬೋದು. It is exactly what it says!
3 reviews
July 23, 2025
ನಾನು ತುಂಬಾ ಜನರ ಬಾಯಲ್ಲಿ ಇ ಪುಸ್ತಕದ ಬಗ್ಗೆ ಕೇಳಿದ್ದೆ ..... ಏನ್ ಇದೆ ಹಂತಾ ವಿಷಯ ಇದರಲ್ಲಿ ಅಂತ ಕುತೂಹಲ ಇಂದ ಓದಿದೆ ರವಿ ಬೆಳಗೆರೆ ಅವರು ತುಂಬಾ ಚೆನ್ನಾಗಿ ಬರದಿದ್ದಾರೆ ಹಿಮವಂತ ತನ್ನ ಶಕ್ತಿ ಮೇರಿ ಕನಸನ್ನು ನನಸಾಗಕ್ಕೆ ಏನೆಲ್ಲ ಮಾಡಿದ ಆದರೆ ಪ್ರಾರ್ಥನ ಅವಳದೇ ಲೋಕದಲ್ಲಿ ಮೆರೆದಳು ಗೌರಮ್ಮ ತಾರಾ ಇರೊ ಹುಡ್ಗೀರ್ ತುಂಬ ಡೇಂಜರ್ ಅಂತ ಪುಸ್ತಕ ಓದಿ ಆದಮೇಲೆ ಗೊತ್ತಾಗತ್ತೆ ಹ ಮೋದ ಮೊದಲು ಉರ್ಮಿಳಾ ಇವಳು ಹೆಂತಾ ಹುಡುಗಿ ಅನ್ಸತ್ತೆ ಆದ್ರೆ ಆಮೇಲೆ ಅವಳೇ ಇಷ್ಟ ಆಗ್ತಾಳೆ ..... ಇ ಪುಸ್ತಕದಿಂದ ಒಂದು ಕಲಿ ಬಹುದು ನಾವು ಕನಸು ಕನಾಕ್ಕೆ ಯೋಗ್ಯತೆ ಇಲ್ಲ ಅಂತ ಪರಿಸ್ತಿಲಿ ಇದ್ದಾಗ ಯಾರೋ ಬಂದು ತಮ್ಮಸರ್ವಸ್ವವನ್ನ ತ್ಯಾಗ ಮಾಡಿ ಕನಸು ಕನೋತರ ಮಾಡಿ ಅದಕ್ಕೆ ಒಂದು ಜೀವ ಕೊಟ್ಟಿರುತ್ತಾರೆ ಅಂದಮೇಲೆ ನಮ್ಮ ಆಗುಹೋಗೂಗಳನ್ನ ನಮ್ಮನಿರ್ಧಾರ ಅವರಿಗೆ ತಿಳಿಸಬೇಕು ಎಲ್ಲಾ ಆದ್ಮೇಲೆ ಹೇಳಿದರೆ ಮೋಸದ ಪ್ರಾರ್ಥಳ ಪರಿಸ್ಥಿತಿ ಗತಿ 18 ರಿಂದ 25 ವರ್ಷದ ಪ್ರತಿ ಒಬ್ಬರು ಓದಲೇ ಬೇಕಾದ ಪುಸ್ತಕ
Profile Image for Chethan T.
28 reviews
August 23, 2018
Ravi Belagere is an expert in crafting stories on human emotions and relations. In this novel also, great emphasis is given to sensitize the emotions of love, care, sacrifice, betrayal, grudge and acceptance. Introduction of Black Magic hinders the flow a little but otherwise a must read.
By the end of it, we kinda fail to comprehend the exact characters whom we should empathized. Such is the roller coaster journey of the emotions the characters portray. Only Ravi Belagere can elevate the psyche of each and every character involved, the way it is done in this novel.
Well done, Hats Off!
Profile Image for Radheshyam Anandur.
3 reviews
September 11, 2024
ಹೇಳಿ ಹೋಗು ಕಾರಣ ಒಂದು ಹೃದಯಸ್ಪರ್ಶಿ ಕಾದಂಬರಿಯಾಗಿದೆ, ಇದು ಓದುವಿಕೆಯಲ್ಲಿ ಮಾನಸಿಕ ಆನಂದವನ್ನು ನೀಡುತ್ತದೆ. ನಾನು ಸಾಮಾನ್ಯವಾಗಿ ಒಂದೇ ಪುಸ್ತಕವನ್ನು ಮತ್ತೆಮತ್ತುಮತ್ತೆ ಓದುವುದು ಅಷ್ಟೇನೂ ಇಷ್ಟ ಪಡುವುದಿಲ್ಲ, ಆದರೆ ಈ ಪುಸ್ತಕವೇ ಒಂದು ಅಪವಾದವಾಗಿದೆ. ಕತೆನಡಿಯಲ್ಲಿ ಜೀವನದ ಹಲವು ಸವಾಲುಗಳು, ಭಾವನೆಗಳು, ಮತ್ತು ಮಾನಸಿಕ ಉದ್ವೇಗಗಳು ನಮ್ಮನ್ನು ಆಕರ್ಷಿಸುತ್ತವೆ. ಈ ಕಾದಂಬರಿಯು ಓದುಗರ ಮನಸ್ಸಿನಲ್ಲಿ ದೀರ್ಘಕಾಲದವರೆಗೆ ಉಳಿಯುವಂತೆ ಮಾಡಿದ ಪಾತ್ರಗಳು ಮತ್ತು ಕತೆಗಳು ಎಲ್ಲರಿಗೂ ತಲುಪಲು ಬಯಸುವಂತಹುದಾಗಿದೆ. ಪ್ರತೀ ಬಾರಿ ಓದಿದಾಗ ಹೊಸತು-ಹೊಸತು ಅಂಶಗಳು ಗಮನಕ್ಕೆ ಬರುತ್ತವೆ ಮತ್ತು ಹೊಸ ಆಲೋಚನೆಗಳನ್ನು ಪ್ರೇರೇಪಿಸುತ್ತದೆ.
ನಿಮ್ಮ ಓದಿನ ಪಟ್ಟಿಯಲ್ಲಿರುವುದನ್ನು ಖಂಡಿತವಾಗಿಯೂ ಸೇರಿಸಿಕೊಳ್ಳಬೇಕು, ಹೇಳಿ ಹೋಗು ಕಾರಣ ಪುಸ್ತಕ ನಿಮ್ಮನ್ನು ತಲುಪಿದರೆ ನೀವು ಅದನ್ನು ಒಮ್ಮೆ ಮಾತ್ರವಲ್ಲ, ಎರಡು, ಮೂರು ಬಾರಿ ಓದುವಂತೆ ಪ್ರೇರೇಪಿಸುತ್ತದೆ.
1 review
August 14, 2025
Really it's very nice novel I like Himu and Urmi... The characters were well-developed, and their journeys resonated with me. The plot was [mention if it was predictable or surprising]. Overall, I'd highly recommend this novel. "I recently finished reading [HELI HOGU KARANA] by [RAVI BEGERE],
he story captivated me with its engaging characters. Really I like more then that..
Displaying 1 - 30 of 77 reviews

Can't find what you're looking for?

Get help and learn more about the design.