What do you think?

ಮಿಹಿರಾಕುಲ | Mihirakula
'ಕಥೆಯ ವಸ್ತು ಮತ್ತು ಮೌಲ್ಯಗಳನ್ನು ಓದುಗನಿಗೆ ಮುಟ್ಟಿಸುವುದೇ ಯಾವುದೇ ಕಥೆಯ ಪ್ರಮುಖ ಉದ್ದೇಶ' ಎಂಬ ನಂಬಿಕೆನ್ನಿಟ್ಟುಕೊಂಡು ಅದನ್ನು ಯಶಸ್ವಿಯಾಗಿ ಮಾಡುತ್ತಾ ಬಂದಿರುವವರು ಗಣೇಶಯ್ಯನವರು. ತಮ್ಮ ವೈಜ್ಞಾನಿಕ ಐತಿಹಾಸಿಕ ಕಥಾನಕಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸಮಾರ್ಗವನ್ನು ತೆರೆದ ಮಾರ್ಗ ಪ್ರವರ್ತಕರಿವರು.
ಮಿಹಿರಾಕುಲ ಕಥಾ ಸಂಕಲನ ವೈವಿಧ್ಯಮಯ ಕಥಾವಸ್ತುಗಳನ್ನು ಹೊಂದಿರುವ ಕೃತಿ. ಹೂಣರ ರಾಜನೊಬ್ಬ ಕಾಶ್ಮೀರದಲ್ಲಿ ಶಿವಾಲಯ ನಿರ್ಮಿಸಿದ ಕತೆ, ಟ್ರಾವರ್ನಿಯರ್ ಎಂಬ ಫ್ರೆಂಚ್ ಯಾತ್ರಿಕ ದಕ್ಷಿಣ ಭಾರತದಿಂದ ವಜ್ರವನ್ನು ಹೊತ್ತೊಯ್ದ ಕತೆ, ಅಕ್ಬರನನ್ನು ಅನಾರ್ಕಲಿ ಸಂದಿಗ್ಧತೆಗೆ ಸಿಲುಕಿಸಿದ ಕತೆ ಹೀಗೆ ಮೂರು ಕತೆಗಳು ಚರಿತ್ರೆಯ ವಿಭಿನ್ನ ಕಥಾವಸ್ತುಗಳನ್ನು ಹೊಂದಿದ್ದರೆ, 'ಆದಿನೆಲೆ' ಕತೆ ಚರ್ಚೆಗೊಳಗಾಗಬೇಕಾದ ಪ್ರಸ್ತುತ ಸನ್ನಿವೇಶವನ್ನು ಕುರಿತದ್ದು.
ಎಂದಿನಂತೆ ಈ ಕತೆಗಳಲ್ಲಿ ಗಣೇಶಯ್ಯನವರ ವಿಶಿಷ್ಟ ಛಾಪಿದೆ. ಅವರ ಸಂಶೋಧನಾ ದೃಷ್ಟಿ, ಕುತೂಹಲಕರ ಶೈಲಿ, ಭರಪೂರ ಮಾಹಿತಿ ಎಲ್ಲವೂ ಸೇರಿದೆ.

128 pages, Paperback
First published March 1, 2015
About the author
K.N. Ganeshaiah
44 books171 followersDr. K.N. Ganeshaiah is an agricultural scientist and professor at the University of Agricultural Sciences, Bangalore. He is also a novelist specializing in thrillers, and writes in the Kannada language.
Education:
Ph. D. University of Agricultural Sciences, Bangalore, India, l983
M.Sc. (Agri.) in Genetics & Plant Breeding, UAS, Bangalore, l979
B.Sc (Agri.), University of Agricultural Sciences, Bangalore, l976.
Prof Ganeshaiah has pioneered a new style of writing novels and short stories in Kannada that seamlessly mixes facts and fiction in the form of thrillers. Through this style, his writings have captured a new generation of readers in Kannada contributing to the growth of story writing in Kannada.
Though an agriculture scientist, his novels and stories bring to the reader, the lesser-known and hidden facts of history along with science. Some of
his novels are also aimed at bringing the most complicated elements of science to the general reader.
Recognizing the novelty in the style of writing, he was awarded Kannada Sahitya Academy Datti Award for his novel Kanaka Musuku, which combines both history and science. As some experts have inferred, his thrillers have drawn a large number of new readers to Kannada.
In recognition of his novel contribution to Kannada Literature, Prof Ganeshaiah has also been honored with the Honorary President of Kolar District Sahitya Parishat during 2013
Prof Ganeshaiah has written Nine novels, and 41 short/long stories (in eight collections) and over 63 essays in the areas related Science and Society. His recent book Sasya Sagga on the wonders of plant life as told through his own journey in the field of botany and evolution has attracted your readers. Several of his novels and stories were serialized in Kannada Weekly Magazines

Ratings & Reviews
Friends & Following
Create a free account to discover what your friends think of this book!
Community Reviews
Displaying 1 - 11 of 11 reviews
May 9, 2023
ಚಿಕ್ಕ ಚೊಕ್ಕ ೪ ಕಥೆಗಳು. ಇತಿಹಾಸದ ಗರ್ಭದಲ್ಲಿ ಅವಿತಿರುವ ಸತ್ಯಗಳನ್ನು ಹೊರ ಹಾಕುವ ಪ್ರಯತ್ನ
February 11, 2022
#ಅಕ್ಷರವಿಹಾರ_೨೦೨೨
ಕೃತಿ: ಮಿಹಿರಾಕುಲ
ಲೇಖಕರು: ಕೆ.ಎನ್.ಗಣೇಶಯ್ಯ
ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು
ಕಳೆದ ತಿಂಗಳು ನಡೆದ ವಾರ್ಷಿಕೋತ್ಸವದ ಅಭಿಯಾನದಲ್ಲಿ ವೀಣಾ ಮೇಡಂ ಅವರಿಂದ ಈ ಕೃತಿ ಬಹುಮಾನವಾಗಿ ದೊರೆಯಿತು. ಅವರಿಗೆ ಹೃತ್ಪೂರ್ವಕ ವಂದನೆಗಳು. ತಮ್ಮ ಎಂದಿನ ಶೈಲಿಯಂತೆ ಐತಿಹಾಸಿಕ ಎಳೆಯನ್ನಿಟ್ಟುಕೊಂಡ ಮೂರು ಕಥೆಗಳು ಮತ್ತು ಪ್ರಸಕ್ತ ವಿದ್ಯಮಾನಗಳ ಬಗ್ಗೆ ಬೆಳಕು ಚೆಲ್ಲುವ ಒಂದು ವಿಶಿಷ್ಟ ಕಥೆ ಸೇರಿರುವ ಕಥಾಸಂಕಲನ "ಮಿಹಿರಾಕುಲ".
#ಮಿಹಿರಾಕುಲ
ಪಶ್ಚಿಮ ಚೀನಾ ಟರ್ಕಿ ಕಡೆಯವರಾದ ಹಾಗೂ ಪ್ರಕೃತಿ ಆರಾಧಕರಾದ ಹೂಣರ ರಾಜ ಮಿಹಿರಾಕುಲ ಭಾರತದ ಕಾಶ್ಮೀರದಲ್ಲಿ ತನ್ನ ಹೆಸರಿನಲ್ಲಿಯೇ ಕಟ್ಟಿಸಿದ ಶಿವಾಲಯದ ಕಥೆ. ಈಗಿನ ಪಾಕಿಸ್ತಾನದ ಸಿಯಾಲ್ ಕೋಟ್(ಸಾಕಾಲ್)ನಲ್ಲಿದ್ದುಕೊಂಡ ಆತ ಭಾರತದ ಗುಪ್ತ ವಂಶದ ಬಾಲಾದಿತ್ಯನ ಮೇಲೆ ದಾಳಿ ಮಾಡಿ ಯುದ್ಧವನ್ನು ಗೆಲ್ಲುವ ಸನಿಹದಲ್ಲಿದ್ದರೂ ಬಾಲಾದಿತ್ಯನಿಂದ ಸೆರೆಯಾಗುತ್ತಾನೆ ಎಂಬುದು ಪ್ರಚಲಿತ ಕಥೆ. ಆತ ಕ್ರೂರಿ, ವಿಕೃತ ಮನಸ್ಸಿನವ ಹಿಂಸಾಪ್ರವೃತ್ತಿಯಲ್ಲಿ ಸುಖ ಕಾಣುತ್ತಿದ್ದವನು ಬೌದ್ಧ ಧರ್ಮವನ್ನು ಅತೀವವಾಗಿ ದ್ವೇಷಿಸುತ್ತಿದ್ದವ ಎಂಬುದು ಜನಜನಿತ. ಆದರೆ ಬಾಲಾದಿತ್ಯನ ಮೇಲಿನ ಯುದ್ಧ ಮತ್ತು ಬೌದ್ಧ ಧರ್ಮದ ದ್ವೇಷಕ್ಕೆ ಏನಾದರೂ ಸಂಬಂಧವಿದೆಯೇ? ಬಾಲಾದಿತ್ಯನ ತಾಯಿ ಮತ್ತು ಮಿಹಿರಾಕುಲನಿಗೆ ಏನಾದರೂ ನಂಟಿದೆಯೇ? ಮಗಧದಲ್ಲಿ ಸೆರೆಯಾದ ಮಿಹಿರಾಕುಲ ಶ್ರೀನಗರ ತಲುಪಿದ್ದು ಹೇಗೆ? ಕೊನೆಯಲ್ಲಿ ಕ್ರೂರಿ ರಾಜ ಆತ್ಮಹತ್ಯೆಗೆ ಯಾಕೆ ಶರಣಾದ ಎಂಬುದು ಕಥೆಯ ಒಟ್ಟು ಸಾರಾಂಶ…..
#ಗಂಡೀಕೋಟೆ
ಪೆಮ್ಮಸಾನಿ ನಾಯಕರ ಅಧೀನದಲ್ಲಿದ್ದ, ನೈಸರ್ಗಿಕವಾಗಿ ಪ್ರಪಾತ ಕಂದರಗಳ ರಕ್ಷಣೆ ಹೊಂದಿದ್ದು ಶತಮಾನಗಳ ಕಾಲ ಶತ್ರುಗಳಿಗೆ ಅಬೇಧ್ಯವಾಗಿದ್ದ ಕೋಟೆಯ ಪತನಕ್ಕೆ ಕಾರಣಗಳೇನಿರಬಹುದು? ಇತಿಹಾಸದಲ್ಲಿ ಉಲ್ಲೇಖಿಸಿರುವಂತೆ ರಾಜ್ಯದ ಮಂತ್ರಿಯು ಶತ್ರುಗಳೊಂದಿಗೆ ಮಾಡಿಕೊಂಡ ಒಪ್ಪಂದವೇ? ಕೋಟೆಯನ್ನು ವಶಪಡಿಸಿಕೊಳ್ಳಲು ಘನಘೋರ ಯುದ್ಧ ನಡೆದಿರಬಹುದಾದ ಸಾಧ್ಯತೆ ಎಷ್ಟು? ಟ್ರಾವರ್ನಿಯರ್ ಎಂಬ ಫ್ರೆಂಚ್ ಯಾತ್ರಿಕನ ಕೈಗೆ ಗಂಡೀಕೋಟೆಯ ಅಮೂಲ್ಯ ವಜ್ರ ದೊರಕಿದ್ದು ಹೇಗೆ ಎಂಬುದರ ಸುತ್ತ ಈ ಕಥೆಯನ್ನು ಹೆಣೆಯಲಾಗಿದೆ.
#ಮಲಿನಾಲಿಂಗನ
ಜನಮಾನಸದಲ್ಲಿ ಅಮರ ಪ್ರೇಮಿಗಳೆಂದು ಅಚ್ಚೊತ್ತಿರುವ ಸಲೀಂ ಅನಾರ್ಕಲಿ ಪ್ರೇಮ ಕಥೆಯ ಭಿನ್ನ ಹಿನ್ನೆಲೆಯ ಕಥೆ. ಅವರಿಬ್ಬರ ಪ್ರೇಮಕ್ಕೆ ಅಕ್ಬರ್ ತೀವ್ರ ವಿರೋಧ ಏಕೆ ವ್ಯಕ್ತಪಡಿಸಿದ? ಅನಾರ್ಕಲಿಯನ್ನು ಸುತ್ತಲೂ ಗೋಡೆ ಕಟ್ಟಿ ಸಮಾಧಿ ಮಾಡಿದ್ದು ಏಕೆ? ಏಕೆ ಗಲ್ಲಿಗೇರಿಸಲಿಲ್ಲ ಅಥವಾ ಸುಡಲಿಲ್ಲ? ಅನಾರ್ಕಲಿ ತನ್ನ ನೃತ್ಯದಲ್ಲಿ ಬಳಸುತ್ತಿದ್ದ ಪಾರಿವಾಳಗಳನ್ನು ಪಳಗಿಸುತ್ತಿದ್ದ ರೀತಿಗೆ ಅಕ್ಬರ್ ಮನಸೋತಿದ್ದು ಏಕೆ? ಓದಿ ನೋಡಿ…….
#ಆದಿನೆಲೆ
ಈ ಕಥಾ ಸಂಕಲನದಲ್ಲಿ ನನಗೆ ಮೆಚ್ಚುಗೆಯಾದ ಕಥೆ. ಇಲ್ಲಿ ಲೇಖಕರು ತಮ್ಮ ಎಂದಿನ ಕಥನ ಶೈಲಿಯನ್ನು, ಐತಿಹಾಸಿಕ ವಿಚಾರಗಳನ್ನು ಬಿಟ್ಟು ನಮ್ಮ ಸಮಾಜದಲ್ಲಿ ಶೋಷಿತ ವರ್ಗಗಳ ಹೆಸರಿನಲ್ಲಿ ನಡೆಯುವ ದೌರ್ಜನ್ಯವನ್ನು ಚಿತ್ರಿಸಿದ ಕಥೆ. ಆದಿಮ ಸಂಸ್ಕೃತಿ ಮತ್ತು ಕಲೆಯನ್ನು ಕುರಿತಾಗಿ ಭಾಷಣ ಮಾಡುವಾಗ ದಲಿತ ಜನಾಂಗವನ್ನು ನಿಂದಿಸಿದರು ಎಂಬ ಮೊಕದ್ದಮೆಯನ್ನು ದಾಖಲಿಸಿ ಪ್ರೊ. ಚಂದ್ರಶೇಖರ ಅವರನ್ನು ದಸ್ತಗಿರಿ ಮಾಡಲಾಗುತ್ತದೆ. ತದನಂತರ ಲೇಖಕರು ಕಥೆಯನ್ನು ಬಹಳ ಮಾರ್ಮಿಕವಾಗಿ ಬೆಳೆಸಿಕೊಂಡು ಹೋಗಿ ಇಂದಿನ ಸಮಾಜದ ಹುಳುಕುಗಳನ್ನು ಬಯಲಿಗೆಳೆಯುತ್ತಾರೆ. ಈ ಕೇಸನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸುವ ಎಲ್ಲಾ ವರ್ಗಗಳ ಮಂದಿಗೂ ಸರಿಯಾಗಿ ಝಾಡಿಸಿದ್ದು ಓದಲು ಬಹಳ ಮಜಾ ಕೊಡುತ್ತದೆ. ಯಾವುದೇ ಒಂದು ಕಲೆ ಅಥವಾ ಸಂಸ್ಕೃತಿ ಅಳಿದು ಹೋಗದಂತೆ ಮಾಡಬೇಕಾದರೆ ಅದರ ಮೂಲದಲ್ಲಿಯೇ ಅದನ್ನು ಬೆಳೆಯಲು ಬಿಡಬೇಕು. ವರ್ಷಕ್ಕೊಮ್ಮೆ ಅವರನ್ನು ಕರೆಯಿಸಿ, ಕಾರ್ಯಕ್ರಮಗಳನ್ನು ಆಯೋಜಿಸಿ, ಅವರ ಮೂಲದಿಂದ ಬೇರ್ಪಡಿಸಿದರೆ ಎಷ್ಟು ಕೃತಕವಾಗುತ್ತದೆ ಎಂಬುದನ್ನು ಬಹಳ ಮನಮುಟ್ಟುವಂತೆ ಲೇಖಕರು ಸಸ್ಯ ಮತ್ತು ಪ್ರಾಣಿಗಳ ವಿಕಾಸದ ತಳಹದಿಯಲ್ಲಿ ವಿಶ್ಲೇಸಿದ ರೀತಿ ರಸವತ್ತಾಗಿದೆ.
ಕೊನೆಯದಾಗಿ," ಸತ್ಯವೆಂದರೆ ಘಟಿಸುವುದು. ಘಟಿಸಿದ್ದು ಮಾತ್ರ ಸತ್ಯ. ಘಟಿಸಿಯಾದ ಮೇಲೆ ಆ ಕ್ಷಣಿಕ ಘಟನೆ ಕಾಲಗರ್ಭದಲ್ಲಿ ಮಾಯವಾಗುತ್ತದೆ. ಆಮೇಲೆ ಸತ್ಯ ಘಟನೆಗಳ ಬಿಂಬಗಳು ಬದುಕುಳಿದ ಪಳೆಯುಳಿಕೆಗಳಲ್ಲಿ, ಸಾಕ್ಷಿಯಾದವರ ನೆನಪುಗಳಲ್ಲಿ ಉಳಿದುಕೊಂಡು ಸಾಕ್ಷಿದಾರರ ನೆನಪುಗಳು ಅವರವರ ಭಾಷಾ ಪ್ರತಿಭೆಗೆ ತಕ್ಕಂತೆ ರೂಪ ಪಡೆದು ಅಥವಾ ಅವರವರ ಮನಸ್ಸಿನ ಓಲೈಕೆಗೆ ತಕ್ಕಂತೆ ಆಕಾರಗೊಂಡು ನೂರಾರು ವೇಷಗಳಲ್ಲಿ ಹೊರಹೊಮ್ಮಿ ಮತ್ತಷ್ಟು ಜನರ ನೆನಪಿನಂಗಳ ಹೊಕ್ಕು ಹೊಸ ವೇಷ ಧರಿಸಿ ಬದುಕುತ್ತವೆ. ಹೀಗೆ ನಿರಂತರವಾಗಿ ನೆನಪುಗಳ ಸರಮಾಲೆಗಳಲ್ಲಿ ಬದುಕುವ ಸತ್ಯದ ಬಿಂಬಗಳನ್ನು ಬೊಂಬೆಗಳನ್ನು ನಾವು ನಿಜವಾದ ಚರಿತ್ರೆ ಎಂದು ನಂಬಿ ಸ್ವೀಕರಿಸುತ್ತೇವೆ…. "ಮಿಹಿರಾಕುಲ" ಕಥೆಯ ಈ ಸಾಲುಗಳನ್ನು ಐತಿಹಾಸಿಕ ವ್ಯಕ್ತಿಗಳ ಬಗ್ಗೆ, ಐತಿಹಾಸಿಕ ಘಟನೆಗಳನ್ನು ತಮಗೆ ತೋಚಿದಂತೆ ಅಥವಾ ತಮ್ಮ ರಾಜಕೀಯ ಆಸಕ್ತಿ ಅಥವಾ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯನಿಸುವವರು ಗಮನಿಸುವುದು ಒಳಿತು….
ನಮಸ್ಕಾರ,
ಅಮಿತ್ ಕಾಮತ್

January 18, 2022
ಡಾ.ಕೆ.ಏನ್.ಗಣೇಶಯ್ಯ ಅವರ ಪುಸ್ತಕಗಳ ಬಗ್ಗೆ ತುಂಬಾ ಕೇಳಿದ್ದೆ ಆದರೆ ಓದಿರಲಿಲ್ಲ, ನಾನು ಓದಿದ ಅವರ ಮೊದಲನೇಯ ಪುಸ್ತಕ ಈ ಮಿಹಿರಾಕುಲ, ಇದೊಂದು ಕಥಾ ಸಂಕಲನವಾಗಿದ್ದು ಒಟ್ಟು ೪ ಕಥೆಗಳನ್ನು ಒಳಗೊಂಡಿದೆ. ಈ ನಾಲ್ಕು ಕಥಾ ಸಂಕಲನದಲ್ಲಿ ನಂಗಿಷ್ಟ ವಾದದ್ದು ಕಾಗಿನೆಲೆ ಎಂಬ ಕಥೆ. ಉಳಿದ ಕಥೆಗಳು ಒಂದಕ್ಕಿಂತ ಒಂದು ಚೆನ್ನಾಗಿ ಇದ್ದು ನನ್ನ ಗಮನ ಬೇರೆ ಎಲ್ಲೆಡೆ ಹೋಗದಂತೆ ತುಂಬಾ ಸೋಜಿಗದಿಂದ ಓದಿಸಿಕೊಂಡು ಹೋದವು.
March 11, 2025
ಕೆಲವೊಂದು ಐತಿಹಾಸಿಕ ಘಟನೆಗಳು ನಾವು ತಿಳಿದುದುಕಿಂತ ಭಿನ್ನವಾಗಿರುತ್ತದೆ. ಇತಿಹಾಸ ಬಗೆದಷ್ಟು ಹೊಸ ವಿಚಾರವಿದೆ ಎಂದು ಹೇಳುವ ಪ್ರಯತ್ನ ಈ ಕಥಾಸಂಕಲನದಲ್ಲಿ ಇವೆ.
June 20, 2022
ಇದೊಂದು ನಾಲ್ಕು ಕಥೆಗಳ ಕಥಾಸಂಕಲನ.
1. ಮಿಹಿರಾಕುಲ - ಮಿಹಿರಗುಲ್ ಅಥವಾ ಮಿಹಿರಾಕುಲ ಎಂದು ಕರೆಸಿಕೊಳ್ಳುವ ಹೂಣರ ಬಹುಕ್ರೂರಿ ರಾಜನ ಜೀವನದಲ್ಲಿ ಅವನ ಕ್ರೂರತೆಯ ಕಾರಣಗಳನ್ನು ಹುಡಿಕಿ ಇತಿಹಾಸದ ಆಧಾರದ ಮೇಲೆ ಬರೆದ ಕಥೆಯಾಗಿದೆ.
2. ಗಂಡೀಕೋಟೆ - ಮೂರು ಕಡಿಯಲ್ಲಿ ಕಣಿವೆಯ ನಡುವೆ ನೀರಿನಿಂದ ಕೂಡಿರುವ ಒಂದು ಅಭೇದ್ಯ ಕೋಟೆಯನ್ನು ಗೋಲ್ಕೊಂಡದ ಸುಲ್ತಾನ ಮೀರ್ ಜುಮ್ಲ ಕಪಟದಿಂದ ಆಕ್ರಮಿಸಿಕೊಂಡ ಇತಿಹಾಸದ ಕಥೆ.
3. ಆದಿನೆಲೆ - ಇದು ಶೋಷಿತ ವರ್ಗದ ಕಲೆ, ಸಂಸ್ಕೃತಿಯ ರಕ್ಷಣೆಗೆಂದು ಹುಟ್ಟಿಕೊಂಡ ಒಂದು ಸಂಸ್ಥೆ ಸಮಾಜದಲ್ಲಿ ಯಾವ ರೀತಿಯ ಅಸಮಾನತೆ ಸ್ರಷ್ಟಿಸುತ್ತದೆ ಎಂದು ಬರೆದ ಕಥೆ.
4. ಮಲಿನಾಲಿಂಗನ - ಸಲೀಂ-ಅನಾರ್ಕಲಿಯ ಪ್ರೇಮದ ಬಗೆಗೆ ಹಲವಿರಿಗೆ ತಿಳಿಯದ ವಿಷಯಗಳನ್ನೊಳಗೊಂಡ ಕಥೆ.

March 21, 2019
ಕರುಣೆಯನ್ನೆ ಆಯುದವನ್ನಾಗಿ ಉಪಯೋಗಿಸಿ, ಒಂದು ಸಹೃದಯ ಜೀವಿಯನ್ನು ನಿಷ್ಕರುನಿಯನ್ನಾಗಿಸಿದ ದುರಂತ ಕಥೆ.
#Theme_of_ಮಿಹಿರಾಕುಲ
#Theme_of_ಮಿಹಿರಾಕುಲ
November 9, 2021
Naalkaralli mooru kathegalu chennagive.
July 31, 2022
Really , Awesome stories,I get lot of knowledge
Especially Malinalingana
Especially Malinalingana
March 26, 2015
collection of short stories based on history
April 19, 2017
History is precious. 😍
Displaying 1 - 11 of 11 reviews