ರಾಜ ನಿಷ್ಠೆ, ಪತಿಧರ್ಮ, ಧರ್ಮನಿಷ್ಠೆ, ಕರ್ಮ ನಿಷ್ಠೆ ಈ ರೀತ್ಯ ಉತ್ತಮೋತ್ತಮ ಗುಣಗಳನ್ನು ಸಾರುವ ಪುಸ್ತಕವಿದು. ಶಾಂತಲೆ ಎಂಬ ಹೆಸರು ನೃತ್ಯಲೋಕದಲ್ಲಿ ಜನಜನಿತವೇ. ನೃತ್ಯ ಸಂಗೀತಗಳನ್ನು ಒಳಗೊಂಡಂತೆ ಅದರಾಚೆಗೆ ಶಾಂತಲಾದೇವಿಯನ್ನು ಪರಿಚಯಿಸುವ ಅಪ್ರತಿಮ ಪುಸ್ತಕ - ಶಾಂತಲಾ.
ಪುಸ್ತಕದ ಹೆಸರು ಶಾಂತಲಾ ಅಂತಿದ್ದರೂ ಪುಸ್ತಕದಲ್ಲಿ ಕರ್ನಾಟಕದ ವೈಭವವನ್ನು ಜಗತ್ತಿಗೆ ಸಾರಿದ ರಾಜ ವಿಷ್ಣುವರ್ಧನರ ಆಳ್ವಿಕೆಯ ಅವಧಿಯು ಕೂಡ ಕಾಣಸಿಗುತ್ತದೆ. ನಮಗೆಲ್ಲರಿಗೂ ತಿಳಿದಿರುವಂತೆ ಕರ್ನಾಟಕ ಶಿಲ್ಪಕಲೆಯಲ್ಲಿ ಹೊಯ್ಸಳ ವಂಶಕ್ಕೆ ತನ್ನದೇ ಆದ ಪಾಲಿದೆ. ವಿಷ್ಣುವರ್ಧನನ ಕಾಲದಲ್ಲಿ ಕಟ್ಟಿಸಲಾದ ಹಲಕೆಲವು ದೇವಸ್ಥಾನಗಳ ವೃತ್ತಾಂತವಿರುವುದು ಈ ಪುಸ್ತಕದ ಅತಿಪ್ರಮುಖ ವಿಶೇಷಗಳಲ್ಲೊಂದು..!! ಹೊಯ್ಸಳೇಶ್ವರ ಮತ್ತು ಶಾಂತಲೇಶ್ವರ ದೇವಸ್ಥಾನಗಳು ಬೇರೆ ಬೇರೆಯಿದ್ದರೂ ಒಂದೇ ದ್ವಾರವಿದೆ. ಕಾರಣವನ್ನೂ ಪುಸ್ತಕವನ್ನು ಓದಿ ತಿಳಿದುಕೊಳ್ಳಿ
ಐತಿಹಾಸಿಕ ಕಾದಂಬರಿಯಲ್ಲಿ ರಕ್ತಪಾತ, ಕೊಲೆಗಳು, ರಾಜ್ಯ ದ್ರೋಹದಂತಹ ವಿಷಯಗಳಿರುವುದು ಸಾಮಾನ್ಯ. ಶಾಂತಲಾ ಪುಸ್ತಕವು ಅದಕ್ಕೆ ಬಹುಪಾಲು ಹೊರತಾಗಿದೆ. ಪುಸ್ತಕದಲ್ಲಿ ಮಾನವ ಸಂಬಂಧಗಳು, ಪ್ರೀತಿ ಪ್ರೇಮಾದರಗಳು ಓದನ್ನು ಆಪ್ಯಾಯಮಾನವಾಗಿಸುತ್ತವೆ.
ರಾಜ ಮಾತೆ, ಮಾರಸಿಂಗಯ್ಯ, ಗಂಗರಾಜ, ಕುವರ ವಿಷ್ಣು, ಲಕ್ಷ್ಮಿದೇವಿ ಸೇರಿದಂತೆ ಮತ್ತಷ್ಟು ಪಾತ್ರಗಳಿವೆ. ಇಡೀ ಪುಸ್ತಕವನ್ನು ಪುನಃ ಪುನಃ ಓದಬೇಕೆನಿಸಿದರೂ, ಸಾಕಷ್ಟು ಮೋಹಕವಾದ ದೃಶ್ಯಗಳಿದ್ದರೂ ಕುವರ ವಿಷ್ಣುವಿಗೆ ಬಿದ್ದ ಕನಸಿನ ದೃಶ್ಯ ಮತ್ತು ಶಿವಗಂಗೆಯ ದೃಶ್ಯಗಳು ವಿಶೇಷವಾಗಿ ಅಚ್ಚಾಗಿ ನಿಲ್ಲುತ್ತವೆ.
ಹೆಚ್ಚೇನನ್ನಾದರೂ ಹೇಳಿದರೇ ರಸಭಂಗವಾಗಿ ಓದುವ ಸುಖ ಹಾಳಾದೀತು!!! ಕನ್ನಡದ ಮಹೋನ್ನತ ಪುಸ್ತಕಗಳಲ್ಲಿ ಒಂದಾದ ಶಾಂತಲಾವನ್ನು ಒಮ್ಮೆ ಓದಿ :)
Nrutya Saraswati Shaantala an excellent novel written by Shri K V Iyer which takes you to true events occurred around 1000CE. The life of Hoysala dynasty, the majesty of the King Vishnuvardhana, the love-compassion-sacrifice of celebrated goddesses Shantala and Lakshmi, the sacrifice and veeratva of Kuvara are so beautifully penned. You will be proud to have been born in India where these souls lived and uphelded their kartavyanishte, deshabhakti and saatvikaguna.
If you have read this novel, you will for sure visit Beluru and Halebidu temples and perhaps even drop few tears with joy and sadness!
You will also proudly say Queen Shantala is Hoysala RajyaLakshmi!!
The beauty of the novel if had to be visualized would look like a bell curve. However, when it peaks, it breaks the graph. A must read for anyone who has visited the Belur and Halebid temples. I can assure that if someone has not visited the Belur Halebid temples, they would after reading this book! Having visited them a couple of times already, even I feel like going back, but now it will seem even more beautiful and full of life. Kuvara Vishnu's dream is the best part of the novel where he brings to life the layers of the temple wall one after the other like a grand carnival!
ಹೊಯ್ಸಳ ವಿಷ್ಣುವರ್ಧನ, ರಾಣಿ ಶಾಂತಲೆಯ ಬಗೆಗಿನ ಅತಿ ಹೆಚ್ಚು ಮಾಹಿತಿಯುಳ್ಳ ಅತ್ಯಮೂಲ್ಯ ಕಾದಂಬರಿ ಶಾಂತಲಾ. ತ.ರಾ.ಸು ಅವರು ದುರ್ಗದ ನಾಯಕರ ಬಗೆಗಿನ ಐತಿಹಾಸಿಕ ಕಾದಂಬರಿಯ ರೀತಿ ಕೆ.ವಿ.ಅಯ್ಯರ್ ಅವರು ಓದುಗರನ್ನು ಹೊಯ್ಸಳ ಸಾಮ್ರಾಜ್ಯದ ಗತಕಾಲಕ್ಕೆ ಕೊಂಡೊಯ್ಯುತ್ತಾರೆ. ಮೊದಲಿಗೆ ರಾಣಿ ಶಾಂತಲಾ, ರಾಜ ವಿಷ್ಣುವರ್ಧನನ ಬಗೆಗೆ ಲಭ್ಯವಿರುವ ಶಾಸನಗಳ ಸಾಲನ್ನು ಬರೆದಿದ್ದಾರೆ. ಕಥೆಯಲ್ಲಿ ಬರಲಿರುವ ಪಾತ್ರಗಳ, ಸ್ಥಳನಾಮಗಳ ಸಂಕ್ಷಿಪ್ತ ಪರಿಚಯ ಮಾಡಿರುವುದು ಓದುಗರಿಗೆ ನೈಜ ಇತಿಹಾಸದಲ್ಲಿ ಆಸಕ್ತಿ ಬೆಳೆಸುವಲ್ಲಿ ಪ್ರೇರಣೆಯಾಗಿದೆ. ವಿಷ್ಣುವರ್ಧನ ಬೇಲೂರಿನ ಚೆನ್ನಕೇಶವ ದೇವಸ್ಥಾನ, ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ನಿರ್ಮಾಣ, ವಿಷ್ಣುವರ್ಧನನ ವಿವಾಹ ಸಮಾರಂಭ, ವಿಷ್ಣುವರ್ಧನನ ಯುದ್ದ ಕೌಶಲ, ರಾಣಿ ಶಾಂತಲೆಯ ಕಲಾನೈಪುಣ್ಯ ಇನ್ನಿತರ ನೂರಾರು ಸಂಗತಿಗಳನ್ನೊಳಗೊಂಡ ಪರಿಪೂರ್ಣ ಕಾದಂಬರಿ ಎಂದರೆ ತಪ್ಪಾಗಲಾರದು. ಹೊಯ್ಸಳ ವಿಷ್ಣುವರ್ಧನನ ಬಗೆಗೆ ತ.ರಾ.ಸು ಅವರು ಒಂದು ಸಣ್ಣ ಕಾದಂಬರಿ( ಕೀರ್ತಿನಾರಾಯಣ/ಹೊಯ್ಸಳೇಶ್ವರ) ಬರೆದಿದ್ದರೂ, ಶಾಂತಲಾ ಕಾದಂಬರಿಯಲ್ಲಿ ಇನ್ನೂ ಹೆಚ್ಚಿನ ಮಾಹಿತಿ ಹಾಗೂ ಕಥೆಯನ್ನೊಳಗೊಂಡಿದೆ. ಅದಲ್ಲದೆ ಹೊಯ್ಸಳರಿಗೆ ಸಂಬಂಧಿಸಿದ ಶಾಸನಗಳನ್ನು ಉಲ್ಲೇಖಿಸಿ ನೈಜ ಇತಿಹಾಸಕ್ಕೆ ಧಕ್ಕೆ ಬಾರದ ರೀತಿ ಕಥೆಯನ್ನು ಹೆಣೆದಿದ್ದಾರೆ.
ಕೆ.ವಿ.ಅಯ್ಯರ್ ಅವರು ಅರಮನೆಯ ಸೌಂದರ್ಯವನ್ನು, ವಿವಾಹೋತ್ಸವವನ್ನು ವಿವರಿಸುವಾಗ ಸ್ವಲ್ಪ ದೀರ್ಘವಾಯಿತು ಎಂದು ಕೆಲವು ಕಡೆ ಅನ್ನಿಸಿದರೂ ಹೊಯ್ಸಳರ ಕಾಲಕ್ಕೆ ನಮ್ಮನ್ನು ಕೊಂಡೊಯ್ದು ಹೊಯ್ಸಳರ ವೈಭವವನ್ನು ಕಣ್ಣಿಗೆ ಕಟ್ಟುವಂತೆ ಹೇಳುವಲ್ಲಿ ಗೆದ್ದಿದ್ದಾರೆ. ಕನ್ನಡದ ಅಮೂಲ್ಯ ಕಾದಂಬರಿಗಳಲ್ಲಿ ಇದೂ ಒಂದು ಎಂದು ಹೇಳಬಹುದು.
ಕಾದಂಬರಿ ಶ್ರೋತೃವಿನ ಮನ ಮುಟ್ಟಲು ಈ ಕೆಳಗಿನ ಮೂರು ಬಹು ಮುಖ್ಯ ಅಂಶಗಳಿರಬೇಕೆಂದು ಬುಧರು ಒಪ್ಪುತ್ತಾರೆ. ೧.ವಿಷಯ ೨.ವಿಚಾರ ೩.ವರ್ಣನೆ ಈ ಮೂರರಲ್ಲಿ ಯಾವುದಕ್ಕೆ ಚ್ಯುತಿಯಾದರು ಅದು ಸಾರಹೀನವಾಗುತ್ತದೆ ಎಂದು ವಿಮಾಂಸಕರು , ವಿರ್ಮಶಕರು ಬಹಳೆಡೆ ಪ್ರಸ್ತಾಪಿಸಿದ್ದಾರೆ.
ಕಾದಂಬರಿಯ ವಿಷಯ ಲೇಖಕನ ಸ್ವಾತಂತ್ರ್ಯ.ಅಯಾ ವಿಷಯಕ್ಕೆ ತಕ್ಕಂತೆ ಪಾತ್ರ ಸೃಷ್ಟಿ ಹಾಗು ಬೆಳವಣಿಗೆ ಆಗಬೇಕು.ಮತ್ತು ಪಾತ್ರಗಳು ಲೇಖಕನ ಅಧೀನವೆ ವಿನಾ ಪಾತ್ರಗಳ ಅಧೀನ ಲೇಖಕನಲ್ಲ.
- ಅಯ್ಯರ್ ಅವರು ಬಹು ಸೊಗಸಾದ ವಿಷಯವನ್ನೆ ಆಯ್ದುಕೊಂಡಿದ್ದಾರೆ.ಪಾತ್ರಗಳು ಸಹಾ ಚನ್ನಾಗಿ ಮೂಡಿಬಂದಿವೆ. ಹ್ಯೊಸಳರ ರಾಷ್ಟ್ರಭಕ್ತಿ ,ಕಲಾ ಪ್ರಾಮುಖ್ಯತೆ, ತ್ಯಾಗ,ಶೌರ್ಯ, ಹೃದಯವೈಶಾಲ್ಯಗಳು ವಿಷಯಕ್ಕೆ ಪುಷ್ಟಿಕರಿಸಿದೆ. ಬಹುಮಟ್ಟಿಗೆ ಕನ್ನಡಿಗರಿಗೆ ಶಾಂತಳ ನಾಟ್ಯರಾಣಿಯಂದೆ ಪರಿಚಯ. ಹೀಗಿದ್ದಲ್ಲಿ ವಿಷಯ ಪ್ರಸ್ತಾವನೆಯಲ್ಲಿ ನಾಟ್ಯದ ಬಗೆಗಳ ಬಗ್ಗೆ, ಸಂಗತಿಗಳ ಬಗ್ಗೆ ತಿಳಯಹೇಳಬೇಕ್ಕಾದ್ದು ಮೂಲ ಅಗತ್ಯ. ಕೆಲವೆಡೆ ಮಾತ್ರ ಶಾಂತಲೆಯ ಗಾನದ ಬಗ್ಗೆ ಪ್ರಸ್ತಾಪವಿದೆ ಆದರೆ ಈದಾವುದರ ಸೂಕ್ಷ್ಮ ಮತ್ತು ಕೂಲಂಕಷ ವಿಷಯ ವ್ಯಕ್ತವಾಗಿಲ್ಲ.
ಶಿಲ್ಪಕಲೆಗೆ ತಾಯಿಯ ಬಸಿರ�� ಹ್ಯೊಸಳರ ರಾಜ್ಯ. ಅಯ್ಯರ್ ರವರು ಇತಿಹಾಸಕಾರಾದ್ದರಿಂದ , ಶಿಲ್ಪಕಲೆ ಮತ್ತು ಇತಿಹಾಸ ಇವರ ಅನುಯಾಯಿಗಳು. ಹೀಗಿದ್ದರೂ ಬೇಲೂರು (ವೇಲಾಪುರಿ) ಮತ್ತ ಹಳೆಬೀಡು (ದ್ವಾರವತಿ) ದೇವಾಲಯಗಳ ಬಗ್ಗೆ ಧೀರ್ಘ ಪ್ರಸ್ತಾಪವೂ ಇಲ್ಲ.
ಒಟ್ಟಿನಲ್ಲಿ ವಿಷಯ ಸಾದಾರಣವಾಗಿದೆ.
ಇನ್ನೂ ವಿಚಾರದತ್ತ ಗಮನಿಸುವ.l ವಿಷಯಗಳಿನ್ನು ಗುರಿಯೆಡೆಗೆ ಕರೆದೊಯ್ಯುವ ಹಾದಿಯೆ ವಿಚಾರ.ಇದು ಹಾದಿ ಯಾವುದು ಎಂಬುದನ್ನು ಮಾತ್ರ ಸಾರುವುದು.ಹಾದಿಯ ರೂಪು ರೇಖೆಗಳನ್ನು ವರ್ಣನೆ ಸೂಚಿಸುತ್ತದೆ.
ಲೇಖಕನು ಯಾವ ಹಾದಿಯನ್ನು ಬೇಕಾದರೂ ಆಯ್ಕೆ ಮಾಡಬಹುದು. ಉದಾಹರಣೆಗೆ : ತರ್ಕ, ಅನುಕಂಪ, ಸ್ತುತಿ ,ಪಕ್ಷಪಾತ,ಹಿಂಸೆ, ಅಹಿಂಸೆ,ಪ್ರೇಮ,ಅಸಂಬದ್ಧ ಇತ್ಯಾದಿ..
ಶಾಂತಲೆಯ ಸಹಜ ವ್ಯಕ್ತಿತ್ವಕ್ಕೆ ಮನಸೋತು ,ಶಾಂತಲೆಯ ಜೀವನ, ಹವ್ಯಾಸ ಎಲ್ಲವನ್ನೂ ಸ್ತುತಿ,ಪ್ರೇಮ ಹಾಗು ಪಕ್ಷಪಾತಗಳಲ್ಲಿ ವಿಚಾರ ಮಾಡಿದ್ದಾರೆ. ಕೆಲವೆಡೆ ಶಾಂತಲೆಯ ನಡೆ,ನುಡಿ,ಆಲೋಚನೆ, ನಿರ್ಣಯ ಅನುಚಿತವೆಂದು ತೋರಿದರೂ ವಾಸ್ತವವಾಗಿ, ಅಯ್ಯರ್ ಅವರು ಶಾಂತಲೆಯ ಪಕ್ಷಪಾತದಿಂದ ಅದು ಉಚಿತವೆಂದೇ ಸಾರಿದ್ದಾರೆ.
ವಿಷ್ಣುವರ್ಧನ, ಅತ್ತಿಮಬ್ಬೆ, ಕುಮಾರ ವಿಷ್ಣು, ಲಕ್ಷ್ಮಿ, ಮಾರಸಿಂಗರಾಯ,ಪೆರುಮಲೆ,ಅಮಾತ್ಯರ ಪಾತ್ರಗಳಲ್ಲಿ ತರ್ಕಬದ್ದ ವಿಚಾರಗಳನ್ನು ಕಾಣಬಹುದು.
ಅನುಭಂದ ಪಾತ್ರಗಳು ಅಹಿತಕರ ಘಟನೆಗಳನ್ನು ರಾಜರಿಗೆ,ಆಡಳಿತದವರಿಗೆ ಅರುಹುವ ಕೂಡಲೆ ಆತ್ಮಹತ್ಯೆ ಮಾಡಿಕೊಂಡಿವೆ. ಇಂತಹ ಮೂರು ನಾಲ್ಕು ಪ್ರಸಂಗಗಳನ್ನು ಕಾಣಬಹುದು. ಇದು ಙಗೆ ಅಸಂಬದ್ಧವೆಂದು ತೋರುತ್ತದೆ.
ವರ್ಣನೆ: ಕಾದಂಬರಿಯ ವಿಷಯ ಮತ್ತು ವಿಚಾರಗಳಲ್ಲಿ ಶ್ರೋತೃವಿನ ಮನಕೆ ಆಹ್ಲಾದವನ್ನುಂಟುಮಾಡುವುದು ಲೇಖಕನ ವರ್ಣನೆ. ಸನ್ನಿವೇಶಗಳು ರಸವತ್ತಾಗಿ ಮೂಡಿಬಂದಲ್ಲಿ ಶ್ರೋತೃವನ್ನು ಭಾವನಾತ್ಮಕ ಪ್ರಪಂಚದಲ್ಲಿ ತೇಲಾಡಿಸುತ್ತದೆ. ಇಲ್ಲವೇ ಅದು ನೀರಸವಾಗುತ್ತದೆ.
ಇಲ್ಲಿ ನನ್ನ ಗಮನಕ್ಕೆ ಬಂದತೆ ,ಕುಮಾರ ವಿಷ್ಣುವಿನ ಕನಸಿನ ವಿವರಣೆಯಲ್ಲಿ ದೈವಲೊಕ ದ್ವಾರವತಿಯ ದೇವಾಲಯದ ಉದ್ಘಾಟನೆಯ ಸಮಯದಲ್ಲಿ ಅಲ್ಲಿ ನೆರೆದುದು,ಬಾಹುಬಲಿ ಕಲ್ಲಿನ ನಂದಿಗಳನ್ನು ನಡೆಸಿತಂದ ದೃಶ್ಯದಲ್ಲಿ ಅದ್ಬುತ ರಸ ,ಶಾಂತಲೆಯ ಸಾವಿನಂದ ವಿಷ್ಣುವರ್ಧನನ ಶೋಕದ ಸಮಯದಲ್ಲಿ ಕರುಣಾ ರಸ ಬಿಟ್ಟರೆ ನೀರಸ ಎಲ್ಲೆಡೆ ಕಂಡುಬಂದಿದೆ.
ಯುದ್ದದ ವೀರೊಚಿತ ಸನ್ನಿವೇಶಗಳು ಅಯ್ಯರ್ ಅವರ ಕಲ್ಪನೆಇಂದ ದೂರವೆ ಉಳಿದಿವೆ.
ನಾನು ಒದಿದ ಮುದ್ರಣದಲ್ಲಿ ಕೆಲವೆಡೆ ಕಾಗುಣಿತ ಲೋಪದೋಷಗಳು ಕಂಡುಬಂದಿವೆ.ಮುದ್ರಣದ ಮುನ್ನ ಪರಿಶೀಲನೆಯ ಕಡಿಮೆ ಕಾರ್ಯ ಯಶಸ್ವಿಯಾಗಿಲ್ಲ.ಪ್ರಾಯಶಃ ಇನ್ನೂ ಹೆಚ್ಚು ಹ್ಯೊಸಳರ ಕಾಲದ ವಿಷಯ ಸಂಗ್ರಹ ಮಾಡಿದ ನಂತರ ಮುದ್ರಿಸಿದ್ದರೆ ಒಳಿತಿತ್ತೇನೋ ಎಂಬುದು ನನ್ನ ಅಭಿಪ್ರಾಯ.
A historical fiction very high on aesthetics. This work definitely renews one's curiosity with Hoysala temples in Belur and Halebidu. The best part is the narration of Kuvara Vishnu's dream during the inauguration of Hoysaleshwara Shanthaleshwara temple- it is like 'Prashasthi' to its sculptors. Wonderful way to learn about Hoysala times .
By the end of this book you will realise that there’s something very wrong about the whole book, the ending, the love depicted. Whatever is put in words seems like sarcasm than love. I don’t know how so many ppl have loved this book so much or i might have missed something huge. Kethamalla builds a beautiful temple and gifts to it the king n queen. The king decides to marry his daughter upon death of his queen? Writing seems random n pointless at times.
This entire review has been hidden because of spoilers.
ಕಾದಂಬರಿ ಶ್ರೋತೃವಿನ ಮನ ಮುಟ್ಟಲು ಈ ಕೆಳಗಿನ ಮೂರು ಬಹು ಮುಖ್ಯ ಅಂಶಗಳಿರಬೇಕೆಂದು ಬುಧರು ಒಪ್ಪುತ್ತಾರೆ. ೧.ವಿಷಯ ೨.ವಿಚಾರ ೩.ವರ್ಣನೆ ಈ ಮೂರರಲ್ಲಿ ಯಾವುದಕ್ಕೆ ಚ್ಯುತಿಯಾದರು ಅದು ಸಾರಹೀನವಾಗುತ್ತದೆ ಎಂದು ವಿಮಾಂಸಕರು , ವಿರ್ಮಶಕರು ಬಹಳೆಡೆ ಪ್ರಸ್ತಾಪಿಸಿದ್ದಾರೆ.
ಕಾದಂಬರಿಯ ವಿಷಯ ಲೇಖಕನ ಸ್ವಾತಂತ್ರ್ಯ.ಅಯಾ ವಿಷಯಕ್ಕೆ ತಕ್ಕಂತೆ ಪಾತ್ರ ಸೃಷ್ಟಿ ಹಾಗು ಬೆಳವಣಿಗೆ ಆಗಬೇಕು.ಮತ್ತು ಪಾತ್ರಗಳು ಲೇಖಕನ ಅಧೀನವೆ ವಿನಾ ಪಾತ್ರಗಳ ಅಧೀನ ಲೇಖಕನಲ್ಲ.
- ಅಯ್ಯರ್ ಅವರು ಬಹು ಸೊಗಸಾದ ವಿಷಯವನ್ನೆ ಆಯ್ದುಕೊಂಡಿದ್ದಾರೆ.ಪಾತ್ರಗಳು ಸಹಾ ಚನ್ನಾಗಿ ಮೂಡಿಬಂದಿವೆ. ಹ್ಯೊಸಳರ ರಾಷ್ಟ್ರಭಕ್ತಿ ,ಕಲಾ ಪ್ರಾಮುಖ್ಯತೆ, ತ್ಯಾಗ,ಶೌರ್ಯ, ಹೃದಯವೈಶಾಲ್ಯಗಳು ವಿಷಯಕ್ಕೆ ಪುಷ್ಟಿಕರಿಸಿದೆ. ಬಹುಮಟ್ಟಿಗೆ ಕನ್ನಡಿಗರಿಗೆ ಶಾಂತಳ ನಾಟ್ಯರಾಣಿಯಂದೆ ಪರಿಚಯ. ಹೀಗಿದ್ದಲ್ಲಿ ವಿಷಯ ಪ್ರಸ್ತಾವನೆಯಲ್ಲಿ ನಾಟ್ಯದ ಬಗೆಗಳ ಬಗ್ಗೆ, ಸಂಗತಿಗಳ ಬಗ್ಗೆ ತಿಳಯಹೇಳಬೇಕ್ಕಾದ್ದು ಮೂಲ ಅಗತ್ಯ. ಕೆಲವೆಡೆ ಮಾತ್ರ ಶಾಂತಲೆಯ ಗಾನದ ಬಗ್ಗೆ ಪ್ರಸ್ತಾಪವಿದೆ ಆದರೆ ಈದಾವುದರ ಸೂಕ್ಷ್ಮ ಮತ್ತು ಕೂಲಂಕಷ ವಿಷಯ ವ್ಯಕ್ತವಾಗಿಲ್ಲ.
ಶಿಲ್ಪಕಲೆಗೆ ತಾಯಿಯ ಬಸಿರು ಹ್ಯೊಸಳರ ರಾಜ್ಯ. ಅಯ್ಯರ್ ರವರು ಇತಿಹಾಸಕಾರಾದ್ದರಿಂದ , ಶಿಲ್ಪಕಲೆ ಮತ್ತು ಇತಿಹಾಸ ಇವರ ಅನುಯಾಯಿಗಳು. ಹೀಗಿದ್ದರೂ ಬೇಲೂರು (ವೇಲಾಪುರಿ) ಮತ್ತ ಹಳೆಬೀಡು (ದ್ವಾರವತಿ) ದೇವಾಲಯಗಳ ಬಗ್ಗೆ ಧೀರ್ಘ ಪ್ರಸ್ತಾಪವೂ ಇಲ್ಲ.
ಒಟ್ಟಿನಲ್ಲಿ ವಿಷಯ ಸಾದಾರಣವಾಗಿದೆ.
ಇನ್ನೂ ವಿಚಾರದತ್ತ ಗಮನಿಸುವ.l ವಿಷಯಗಳಿನ್ನು ಗುರಿಯೆಡೆಗೆ ಕರೆದೊಯ್ಯುವ ಹಾದಿಯೆ ವಿಚಾರ.ಇದು ಹಾದಿ ಯಾವುದು ಎಂಬುದನ್ನು ಮಾತ್ರ ಸಾರುವುದು.ಹಾದಿಯ ರೂಪು ರೇಖೆಗಳನ್ನು ವರ್ಣನೆ ಸೂಚಿಸುತ್ತದೆ.
ಲೇಖಕನು ಯಾವ ಹಾದಿಯನ್ನು ಬೇಕಾದರೂ ಆಯ್ಕೆ ಮಾಡಬಹುದು. ಉದಾಹರಣೆಗೆ : ತರ್ಕ, ಅನುಕಂಪ, ಸ್ತುತಿ ,ಪಕ್ಷಪಾತ,ಹಿಂಸೆ, ಅಹಿಂಸೆ,ಪ್ರೇಮ,ಅಸಂಬದ್ಧ ಇತ್ಯಾದಿ..
ಶಾಂತಲೆಯ ಸಹಜ ವ್ಯಕ್ತಿತ್ವಕ್ಕೆ ಮನಸೋತು ,ಶಾಂತಲೆಯ ಜೀವನ, ಹವ್ಯಾಸ ಎಲ್ಲವನ್ನೂ ಸ್ತುತಿ,ಪ್ರೇಮ ಹಾಗು ಪಕ್ಷಪಾತಗಳಲ್ಲಿ ವಿಚಾರ ಮಾಡಿದ್ದಾರೆ. ಕೆಲವೆಡೆ ಶಾಂತಲೆಯ ನಡೆ,ನುಡಿ,ಆಲೋಚನೆ, ನಿರ್ಣಯ ಅನುಚಿತವೆಂದು ತೋರಿದರೂ ವಾಸ್ತವವಾಗಿ, ಅಯ್ಯರ್ ಅವರು ಶಾಂತಲೆಯ ಪಕ್ಷಪಾತದಿಂದ ಅದು ಉಚಿತವೆಂದೇ ಸಾರಿದ್ದಾರೆ.
ವಿಷ್ಣುವರ್ಧನ, ಅತ್ತಿಮಬ್ಬೆ, ಕುಮಾರ ವಿಷ್ಣು, ಲಕ್ಷ್ಮಿ, ಮಾರಸಿಂಗರಾಯ,ಪೆರುಮಲೆ,ಅಮಾತ್ಯರ ಪಾತ್ರಗಳಲ್ಲಿ ತರ್ಕಬದ್ದ ವಿಚಾರಗಳನ್ನು ಕಾಣಬಹುದು.
ಅನುಭಂದ ಪಾತ್ರಗಳು ಅಹಿತಕರ ಘಟನೆಗಳನ್ನು ರಾಜರಿಗೆ,ಆಡಳಿತದವರಿಗೆ ಅರುಹುವ ಕೂಡಲೆ ಆತ್ಮಹತ್ಯೆ ಮಾಡಿಕೊಂಡಿವೆ. ಇಂತಹ ಮೂರು ನಾಲ್ಕು ಪ್ರಸಂಗಗಳನ್ನು ಕಾಣಬಹುದು. ಇದು ಙಗೆ ಅಸಂಬದ್ಧವೆಂದು ತೋರುತ್ತದೆ.
ವರ್ಣನೆ: ಕಾದಂಬರಿಯ ವಿಷಯ ಮತ್ತು ವಿಚಾರಗಳಲ್ಲಿ ಶ್ರೋತೃವಿನ ಮನಕೆ ಆಹ್ಲಾದವನ್ನುಂಟುಮಾಡುವುದು ಲೇಖಕನ ವರ್ಣನೆ. ಸನ್ನಿವೇಶಗಳು ರಸವತ್ತಾಗಿ ಮೂಡಿಬಂದಲ್ಲಿ ಶ್ರೋತೃವನ್ನು ಭಾವನಾತ್ಮಕ ಪ್ರಪಂಚದಲ್ಲಿ ತೇಲಾಡಿಸುತ್ತದೆ. ಇಲ್ಲವೇ ಅದು ನೀರಸವಾಗುತ್ತದೆ.
ಇಲ್ಲಿ ನನ್ನ ಗಮನಕ್ಕೆ ಬಂದತೆ ,ಕುಮಾರ ವಿಷ್ಣುವಿನ ಕನಸಿನ ವಿವರಣೆಯಲ್ಲಿ ದೈವಲೊಕ ದ್ವಾರವತಿಯ ದೇವಾಲಯದ ಉದ್ಘಾಟನೆಯ ಸಮಯದಲ್ಲಿ ಅಲ್ಲಿ ನೆರೆದುದು,ಬಾಹುಬಲಿ ಕಲ್ಲಿನ ನಂದಿಗಳನ್ನು ನಡೆಸಿತಂದ ದೃಶ್ಯದಲ್ಲಿ ಅದ್ಬುತ ರಸ ,ಶಾಂತಲೆಯ ಸಾವಿನಂದ ವಿಷ್ಣುವರ್ಧನನ ಶೋಕದ ಸಮಯದಲ್ಲಿ ಕರುಣಾ ರಸ ಬಿಟ್ಟರೆ ನೀರಸವಾದ ಎಲ್ಲೆಡೆ ಕಂಡುಬಂದಿದೆ.
ಯುದ್ದದ ವೀರೊಚಿತ ಸನ್ನಿವೇಶಗಳು ಅಯ್ಯರ್ ಅವರ ಕಲ್ಪನೆಇಂದ ದೂರವೆ ಉಳಿದಿವೆ.
ನಾನು ಒದಿದ ಮುದ್ರಣದಲ್ಲಿ ಕೆಲವೆಡೆ ಕಾಗುಣಿತ ಲೋಪದೋಷಗಳು ಕಂಡುಬಂದಿವೆ.ಮುದ್ರಣದ ಮುನ್ನ ಪರಿಶೀಲನೆಯ ಕಾರ್ಯ ಯಶಸ್ವಿಯಾಗಿಲ್ಲ.ಪ್ರಾಯಶಃ ಇನ್ನೂ ಹೆಚ್ಚು ಹ್ಯೊಸಳರ ಕಾಲದ ವಿಷಯ ಸಂಗ್ರಹ ಮಾಡಿದ ನಂತರ ಬ��ೆದಿದ್ದರೆ ಒಳಿತಿತ್ತೇನೋ ಎಂಬುದು ನನ್ನ ಅಭಿಪ್ರಾಯ.