Jump to ratings and reviews
Rate this book

ಕುಸುಮಬಾಲೆ | Kusumabale

Rate this book
Devanoora Mahadeva leads us to a world of spirits ruled by a strong sense of justice. As we listen in, their conversation introduces four generations of a family: Akkamahadevamma, her son Yaada, his son Somappa and the main protagonist, Somappa's daughter, Kusuma. In this intricately woven cosmos, death casts its shadow. Following the different voices around, we come face to face with the harsh realities of Dalit life.
Steered by the nuances of folk tale and oral tradition, this extraordinary account of feudal oppression presents a rare blend of poetry and prose. A modern classic, when it first appeared in 1988, Kusumabale marked a turning point in modern Kannada literature.

108 pages, Paperback

First published April 1, 2015

Loading...
Loading...

About the author

Devanura Mahadeva

9 books55 followers

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
56 (41%)
4 stars
46 (33%)
3 stars
25 (18%)
2 stars
4 (2%)
1 star
5 (3%)
Displaying 1 - 15 of 15 reviews
Profile Image for Nayaz Riyazulla.
453 reviews93 followers
July 7, 2025
ಮರು ಓದು

ಮಹಾದೇವರು ತಮ್ಮಲ್ಲಿರುವ ಸಕಲ ಕಲಾ ರಸವನ್ನು ಎರಕವಾ ಹೊಯ್ದು ಬರೆದಿರುವ ಈ ಕೃತಿ ಯಾವ ಕಾಲಕ್ಕೂ ಪ್ರಸ್ತುತ, ಇದನ್ನು ಮತ್ತೆ ಮತ್ತೆ ಓದುವುದು ಅರಿತುಕೊಳ್ಳುವುದು ಮುಖ್ಯ.

ಮೊದಲ ಓದಿಗೆ ಟಿಪ್ಪಣಿ

ಅಬ್ಬಾ... ಕೊನೆಗೂ ಕುಸುಮಬಾಲೆ ಪೂರ್ತಿ ಓದ್ಬಿಟ್ಟೆ, ಎರಡು ಬಾರಿ ಅರ್ಧ ಓದಿ, ಒಮ್ಮೆ ಅರ್ಧಕ್ಕಿಂತ ಹೆಚ್ಚು ಓದಿ ಕೈ ಚೆಲ್ಲಿದ್ದೆ.. ಈ ಬಾರಿ ಓದಲೇಬೇಕು ಅನ್ನೋ ದೃಢ ನಿರ್ಧಾರ ಮಾಡಿ ಓದಿ ಬಿಟ್ಟೆ...

ಮಹಾದೇವರು, ಒಂದು ದಿನ ಯಾವುದೊ ಸಾವಿಗೆ ಹೋದಾಗ ಅಲ್ಲಿ ನೆರದಿದ್ದ ಒಬ್ಬರು, ಸಾರ್ ನಿನ್ನೆ ಬರಬೇಕಿತ್ತು ರಕ್ತದ ಕಲೆಗಳನ್ನು ನೋಡಬಹುದಿತ್ತು ಅಂದರಂತೆ (ಮಹಾದೇವರು ಸಂದರ್ಶನ ಒಂದರಲ್ಲಿ ಹೇಳಿದ ಮಾತಿದು) ಈ ಮಾತು ಅವರಿಗೆ ಈ ಪುಸ್ತಕ ಬರೆಯುದಕ್ಕೆ ಕಿಡಿ ಮೂಡಿಸಿತು.

ಅಕ್ಕಮಹಾದೇವಿ ತನ್ನ ಗಂಡನ ಅಗಲಿಕೆಯಿಂದ ನೊಂದು ಆಸ್ತಿ ಪಾಲು ಕೇಳಲು ಬಂದು ಅವಮಾನಿತಗೊಂಡು ತನ್ನ ಮಗು ಯಾಡನೊಂದಿಗೆ ಒಂದು ಟೀ ಅಂಗಡಿ ತೆರದು, ಯಾಡ ಧನ ಕುರಿಗಳನ್ನು ಮೇಯಿಸಿಕೊಂಡು ಗೌಡರಿಗೆ ಮೋಸ ಮಾಡಿ ಒಂದು ಸುಸ್ಥಿತಿಗೆ ಬರುತ್ತಾರೆ... ಯಾಡನ ಮಗನಿಗೆ ಒಂದು ಹೆಣ್ಣು ಮಗು ಹುಟ್ಟುತ್ತದೆ ಅದೇ "ಕುಸುಮಿ", ಇದೇ ಊರಿನಲ್ಲಿ ಬಿ ಎ ನಪಾಸಾದ ಒಬ್ಬ ದಲಿತ ಹುಡುಗ ಚನ್ನ ಕೊಂಚ ಓದು ತಿಳಿದಿರುವುದಾಗಿ ಹೆಸರು ಮಾಡಿರುತ್ತಾನೆ... ಕುಸುಮಿ ಮತ್ತು ಚನ್ನನ ಸಂಬಂಧವನ್ನು ಅರಿತು ಚನ್ನನ ಕೊಲೆಯಾಗುವುದು... ಚನ್ನನ ರಕ್ತದ ಕಲೆಯನ್ನು ಕಾಣಲು ಅಲ್ಲಿ ವಾಸವಿರುವ ಒಂದು ಅಜ್ಜಿ ಸುಣ್ಣದಿಂದ ಆ ಕಲೆಯನ್ನು ಮುಚ್ಚಿ ಕೂರುತ್ತಾಳೆ.. ಇಲ್ಲಿಗೆ ಕಾದಂಬರಿ ಮುಗಿಯುತ್ತದೆ.

ಇಲ್ಲಿ ಲೇಖಕರು ದಲಿತರ ಆಗಿನ ನೈಜ ಚಿತ್ರಣವನ್ನು, ಮೂಢನಂಬಿಕೆಗಳು ಹೇಗೆ ಹಳ್ಳಿಯ ಸೊಗಸನ್ನು ಹಾಳುಗೇಡುವುತ್ತಿದೆ ಎಂದು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ... ಕುಸುಮಿಗೆ ಹುಚ್ಚು ಹಿಡಿದಿದೆ ಎಂದು ಮಂತ್ರವಾದಿಗಳ ಸಹಾಯದಿಂದ ಹುಚ್ಚು ಬಿಡಿಸಲು ಹಿಂಸಿಸಿದಾಗ ಓದು ಬರಹ ತಿಳಿಯದ ಕುಸುಮಿ "I want to be in my home" ಅಂದು ಮೂಕವಿಸ್ಮಿತಗೊಳ್ಳಿಸುತ್ತಾಳೆ. ಈ ರೀತಿಯ ಸನ್ನಿವೇಶಗಳು ಬಹಳವಿದ್ದು ತುಂಬಾ ಇಷ್ಟವಾಗುತ್ತದೆ.

ಈ ಕಡೆ ಚನ್ನ ಸತ್ತಿಲ್ಲ, ಮುಂಬೈಯಲ್ಲಿ ಸ್ಟಾರ್ ಹೋಟೆಲ್ನಲ್ಲಿ ಮ್ಯಾನೇಜರ್ ಆಗಿದ್ದಾನೆ ಅಂತ ಕಾಯುವ ಅವರ ಕೇರಿ ಮತ್ತು ಹೆತ್ತವರ ಜೀವ ನಮ್ಮನ್ನು ಬಹಳ ಡಿಸ್ಟರ್ಬ್ ಮಾಡುತ್ತದೆ.

ಇದೊಂದು cult classic.. ಕನ್ನಡದ ಟಾಪ್ 10 ಕೃತಿಗಳಲ್ಲಿ ಈ ಕೃತಿಯು ಖಂಡಿತ ಒಂದು ♥
Profile Image for Bharath Manchashetty.
203 reviews3 followers
March 21, 2026
ಎರಡನೇ ಸಲದ ಮರು ಓದು.

೨೦೨೦ ರಲ್ಲಿ ಈ ಕೃತಿಯನ್ನು ಓದಿ, ಇದು ಕನ್ನಡ ಭಾಷೆಯ ಬೇರೆಯ ಅವತಾರವೇ ಎನಿಸಿದ್ದುಂಟು. ಸಾಮಾನ್ಯ ರೇಖೆಯಲ್ಲಿನ ಕಥೆ/ಕಾದಂಬರಿಗಳನ್ನು ಓದಿ ರೂಢಿ ಇದ್ದ ನನಗೆ ಮತ್ತೊಂದು ಹೊಸ ಅನುಭವ ಅವತ್ತಿಗೆ ಎಷ್ಟು ಕೊಟ್ಟಿತೋ ಅದಕ್ಕೂ ಹೆಚ್ಚಿನ ಪ್ರಮಾಣ ಈಸಲದ ಓದಿನಲ್ಲಿ ಕೊಟ್ಟಿತು . ಓದುಗನಿಗೆ ಕೆಲವು ಕೃತಿಗಳ ಅನುಭವ ಧಕ್ಕುತ್ತವೆ-ಕೆಲವನ್ನು ಧಕ್ಕಿಸಿಕೊಳ್ಳಬೇಕಾಗುತ್ತದೆ.

೧೯೮೮ ರಲ್ಲಿ ಪ್ರಕಟವಾದ ಈ ಕೃತಿ ಆ ವರ್ಷದಲ್ಲಿ ಮತ್ತು ಪ್ರಸ್ತುತವಾಗಿಯೂ ಹಲವಾರು ಟೀಕೆಗಳನ್ನು-ಹೊಗಳಿಕೆಯನ್ನು ಗಳಿಸಿಕೊಳ್ಳುತ್ತಿದೆ. ಹಲವರ ಅಭಿಪ್ರಾಯವೆಂದರೆ “ಇದನ್ನು ಕನ್ನಡಕ್ಕೆ ಅನುವಾದ ಮಾಡಬೇಕೆನ್ನೆವುದು, ಅರ್ಥವಾಗದ ಭಾಷೆ, ಓದಿದ ನಂತರವೂ ಮುಖ್ಯ ಕಥಾವಸ್ತುವು ಓದುಗನಿಗೆ ಧಕ್ಕದೆ ಇರುವುದು…ಇತ್ಯಾದಿ. ಮುಖ್ಯವಾಗಿ ನಂಜನಗೂಡು ಪ್ರಾಂತ್ಯದಲ್ಲಿನ ಗಪದ್ಯ ಭಾಷೆಯಲ್ಲಿ ಮೈತಳೆದ ಕೃತಿಯಲ್ಲಿ ಪ್ರವೇಶ ಪಡೆಯಬೇಕಂದರೆ ನಾವು ಕೂಡ ಒಂದು ಅದೃಶ್ಯ ಪಾತ್ರವಾಗಲೇಬೇಕು. ತುಸು ಸಮಯ ಮತ್ತು ಏಕಾಗ್ರತೆಯನ್ನು ಬೇಡುವ ಕೃತಿಯೆಂದರೆ ತಪ್ಪಿಲ್ಲ.

ಗೌಡರ ಹೆಣ್ಣನ್ನು ಪ್ರೀತಿಸಿದಕ್ಕಾಗಿ ಚನ್ನನ ಮರ್ಯಾದೇಹತ್ಯೆಯ ಕೊಲೆಯಲ್ಲಿ ಕೃತಿಯು ಕವಲೊಡೆಯುತ್ತಾ ಊರಿನೊಳಗಿರುವ ದಲಿತರ ಬಡತನದ ಕಿಚ್ಚಿನ ಬೇಗುದಿಯೊಳಗೆ ಕತೆ ಸಾಗುತ್ತಾ ಹೋಗುತ್ತದೆ. magical realism ನಲ್ಲಿ ಮಾತಾಡುವ ಮಂಚ, ಕತ್ತಲಾದ ನಂತರ ಮಾತನಾಡುವ ಅಸದೃಶ ಜೋತಮ್ಮರು, ಉದ್ಧಾರಕ್ಕಾಗಿ ದುಡಿಯುವ ಹೋರಾಟಗಾರು… ಮತ್ತೂ ಅನೇಕ ಮುಖ್ಯಭೂಮಿಕೆಯ ಕೃತಿ ನಾಲ್ಕು ತಲೆಮಾರಿನ ಕತೆಯನ್ನು ೧೦೦ ಪುಟಗಳಲ್ಲಿ ಹೇಳುತ್ತದೆ. ಸಿದ್ಧಾಂತಗಳನ್ನು ಮಡಿಲಿನಲ್ಲಿ ಕಟ್ಟಿಕೊಳ್ಳದೆ, ದಲಿತರ ಗೋಳನ್ನು ಮನಮುಟ್ಟುವಂತೆ ಹೇಳದೇ ಓದುಗನಿಗೆ ಯಾತನೆಯಾಗದಂತ ಒಂದು ವಾಕ್ಯವೂ ಕೃತಿಯಲ್ಲಿಲ್ಲವೆಂದೇ ನನ್ನ ಭಾವನೆ. ಆದರೂ ಸಮಗ್ರವಾಗಿ ನೋಡಿದಾಗ ಕೃತಿಯಲ್ಲಿನ ಕಥಾವಸ್ತು, ಪಾತ್ರಗಳು ಓದುಗನ ಸೂಕ್ಷ್ಮ ಪ್ರಜ್ಞೆಯನ್ನು ಜಾಗೃತಗೊಳಿಸುವುದರಲ್ಲಿ ಸಂದೇಹವಿಲ್ಲ. ಅಸದೃಶವಾಗಿ ಕೊಲೆಯಾಗಿ ಕಣ್ಮರೆಯಾಗುವ ಚನ್ನನು ಗಾಸಿಪ್ ಆಗಿ ಮುಂಬಯಿಯಲ್ಲಿ ನೆಲೆಗಾಣುವ ವಿವರಣೆ ಹಲವು ಊರುಗಳಲ್ಲಿ ವಾಸ್ತವವಾಗಿ ನಡೆದಿದೆ. ಮೊದಲ ಒಂದು ಪುಟದಲ್ಲಿನ ವಿವರಣೆ ಒಂದು ಕಾದಂಬರಿಯಾಗಬಲ್ಲ ಶಕ್ತಿ ಹೊಂದಿದೆ.

ಹೆಣ್ಣಿನ ಮುಟ್ಟನ್ನು ತೊಳೆಯುವ ಹೊಲೆರಾ ಅಮಾಸ, ಶುದ್ಧವಾದ ಸೀರೆಯನ್ನು ಕೊಳ್ಳುವ ಸಾಬಿ, ಜಮೀನ್ದಾರಿ ಒಡೆತನದ ರೊಚ್ಚನ್ನು ೧೬ ಎಳನೀರು ಕುಡಿದು ಅರಗಿಸಿಕೊಳ್ಳುವ ಗಾರಸಿದ್ಮಾವ, ದೊಡ್ಡವರೆಂದಟ್ಕೆ ಬೀಡಿ ಕೇಳುವ ಚನ್ನನ ಅಪ್ಪ, ಮೌಡ್ಯತೆಯಲ್ಲಿ ನಂಬಿಕೆಯನ್ನಿಟ್ಟು ಜೀವ ಉಳಿಸಲು ಹೋರಾಡುವ ಈರಿ ಮತ್ತು ತೂರಮ್ಮ, ಜೋಳಿಗೆ ಹೊತ್ತು ಹೋರಾಟಗಾರನಾದ ನಾಗರಾಜ, ಅಜ್ಞಾತವಾಗಿ ಕೊಲೆಯಾದ ಚನ್ನ, ಮಾನಸಿಕವಾಗಿ ಕೊಲೆಯಾದ ಕುಸುಮಬಾಲೆ, ಬದುಕನ್ನು ಕಟ್ಟಿಕೊಳ್ಳಲು ಹೋರಾಡುವ ಅಕಾಮ್ಮಾದೇವಿ, ಸೂಕ್ಷಚತುರ ಯಾಡ, ಜೊಲ್ಲುಮೋರು ಪರ್ಸಾದ…etc. ಕೊನೆಯ ಅಧ್ಯಾಯದಲ್ಲಿ ಬರುವ ಚನ್ನನ ತಂದೆ-ತಾಯಿಯ ಮುಗ್ಧತೆ ಕಣ್ತುಂಬುತ್ತವೆ. ಇವೆಲ್ಲವೂ ಕೃತಿಯನ್ನು ಓದಿದ ನಂತರವೂ ಮನಕಲಕುವವು.

ಕೃತಿಯನ್ನು ಇದೇ ಭಾಷೆಯಲ್ಲಿ ಬರೆದುದು ಲೇಖಕರ ಶಕ್ತಿಯಾಗಿದೆ, ಓದುಗರಿಗೆ ಕನ್ನಡದ ಮತ್ತೊಂದು ಮಗ್ಗುಲುಕೂಡ. ದೇವರಿಗೆ ಪ್ರಾರ್ಥನೆ ಸಲ್ಲಿಸುವ ಪ್ರತೀ ವ್ಯಕ್ತಿ ತನಗೆ ಗೊತ್ತಿರುವ ಭಾಷೆಯಲ್ಲೇ ಪ್ರಾರ್ಥಿಸಬೇಕಲ್ಲವ..!ಹಾಗೆ.

ಒಂದು ಓದಿಗೆ ಧಕ್ಕುವ ಸುಲಭ ಓದಲ್ಲ, ಮಂಥನದ ಓದು ಅವಶ್ಯಕ.
Profile Image for Vaidya.
264 reviews82 followers
July 2, 2024
ಮೊದಲನೇ ಓದಿಗೆ ಅಷ್ಟು ಅರ್ಥವಾಗಿಲ್ಲ. ಭಾಷೆ ನಿಧಾನವಾಗಿ ಓದಿ ಅರ್ಥ ಮಾಡ್ಕೋಬೇಕು. ಜೋರಾಗಿ ಓದಿ ಅರ್ಥ ಮಾಡ್ಕೋಬೇಕು. ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ನ ಕಥೆಗಳನ್ನು ನೆನಪು ಮಾಡಿಸಿತು. ಅವನ ಕಥೆಗಳಂತೆ ಕಥೆಗಳಲ್ಲಿ ಒಂದು ಸೌಂದರ್ಯ ಮತ್ತು ಒಳಗಿನ ಅಡಗಿರುವ ಅರ್ಥ. ಮತ್ತೆ ಓದಲು ಆಹ್ವಾನಿಸುತ್ತದೆ. ಆದರೂ ಹೋಗ್ತಾ ಹೋಗ್ತಾ ಯಾವುದೋ ಒಂದು ಕ್ಷಣದಲ್ಲಿ ಓಹ್! ಎಂದು ಕೆಲವು ಅರ್ಥಗಳು ಅರಿವಾಗುತ್ತವೆ. ಅಲ್ಲಿಯ ತನಕ ತಡಕೋ ಬೇಕು, ಅಂಥ ಪುಸ್ತಕ ಇದು.

ಅನುವಾದವೊಂದು ೨೦೧೯ನಲ್ಲಿ ಬಿಡುಗಡೆಯಾಯ್ತ. ಅದನ್ನೂ ಜೊತೆಗೆ ಓದಬೇಕು.
Profile Image for Abhiram's  Book Olavu.
119 reviews5 followers
June 26, 2025
ಪಿಯುಸಿನಲ್ಲಿ ಮಹಾದೇವರವರು ಬರೆದ 'ಡಾಂಬರು ಬಂದುದು' ಎನ್ನುವ ನೈಜ ಪ್ರಸಂಗ ನಮಗೆ ಪಾಠವಾಗಿತ್ತು. ಆಗ ನಮ್ಮ ಶಿಕ್ಷಕರಾದ ನಾಗಣ್ಣ ಸರ್ ಪಾಠಮಾಡುವಾಗ ಲೇಖಕರು ಬಗೆಗೆ ಮತ್ತು ಅವರ ಬರಹದ ಬಗೆಗೆ ಪರಿಚಯ ಮಾಡಿಕೊಟ್ಟಿದ್ದರು. ವಿಶೇಷವಾಗಿ 'ಕುಸುಮಬಾಲೆ' ಬಗ್ಗೆ ಹೇಳಿದ್ದರಿಂದ ನನಗೆ ಈ ಪುಸ್ತಕವನ್ನ ಓದುವ ಹುಮ್ಮಸ್ಸು ಬಂದಿತ್ತು. ಅದೃಷ್ಟಕ್ಕೆ ನಾನು ಧರ್ಮಸ್ಥಳದ ಸಾಹಿತ್ಯ ಸಮ್ಮೇಳನಕ್ಕೆ ಹೋದಾಗ ಈ ಪುಸ್ತಕ ಕಣ್ಣಿಗೆ ಬಿತ್ತು ಮತ್ತು ನಾನು ಇದನ್ನು ಕೊಂಡು ತಂದೆ ಕೂಡ. ಪುಸ್ತಕ ತಂದು ಎರಡು ಮೂರು ಪುಟ ತಿರುವಿದ ಮೇಲೆಯೇ ನನ್ನ ಎಲ್ಲಾ ಹುಮ್ಮಸ್ಸೂ ಕರಗಿ ಹೋಯಿತು ಮತ್ತು ಕುಸುಮಬಾಲೆ ಮೂಲೆ ಸೇರಿದಳು. ಅದಾಗಿ ಎಷ್ಟೋ ವರ್ಷಗಳಾದ ಮೇಲೆ ಈಗ ನಾನು ಈ ಪುಸ್ತಕವನ್ನ ಧೈರ್ಯ ಮಾಡಿ ಓದಿದೆ; ಅದೂ ಪಿಡಿಎಫ್ ದಯೆಯಿಂದ!

ಅಬ್ಬಬ್ಬಾ ಅಂದರೆ ತೊಂಬತ್ತು ಪುಟಗಳೂ ಆಗದ ಈ ಪುಸ್ತಕ ಒಂದು ಹೋರಾಟದ, ಒಂದು ಸಂಗ್ರಾಮದ, ಒಂದು ಹೀನಾಯ ಪದ್ಧತಿಯ, ಒಂದು ಕ್ರೌರ್ಯದ, ಒಂದು ಸವಿಯಾದ ಪ್ರೇಮಕಥೆಯ, ಒಂದು ಜೀವನ ಶೈಲಿಯ, ಒಂದು ಚೆಲುವ ಸಂಸ್ಕೃತಿಯ, ನವಿರಾದ ಹಾಸ್ಯದ, ಗ್ರಾಮೀಣ ಸೊಗಡಿನ 'ಮಹಾಕಾವ್ಯ'. ಮಹಾದೇವರವರು ನಂಜನಗೂಡು ಪ್ರದೇಶದ ಸುತ್ತಮುತ್ತಲಿನ ಆಡುಭಾಷೆಯನ್ನು ಲಯವಾಗಿ ಪೋಣಿಸಿ ಜಾತಿ ವ್ಯವಸ್ಥೆಯ ರೂಕ್ಷ ಕರಾಳ ಮುಖವನ್ನು ಓದುಗರಿಗೆ ಪರಿಚಯಿಸಿ ಅವರ ಹೃದ��ವನ್ನು ಮೀಟುವರು ಮತ್ತು ಅಂತರಾಳವನ್ನು ತಮ್ಮ ಬರಹದ ಮುಖೇನ ಕೆದಕುವರೂ ಕೂಡ. ಒಟ್ಟಿನಲ್ಲಿ, ಸಾರ್ವಕಾಲಿಕ ಸತ್ಯಗಾಥೆಯಾದ ಈ ಕಾವ್ಯವು ನೊಂದ ಮುಗ್ಧ ಬದುಕುಗಳ ಧ್ವನಿಯಾಗಿದೆ.

ಎತ್ತಣ ಮಾಮರ ಎತ್ತಣ ಕೋಗಿಲೆ? ಎತ್ತಣಿಂದೆತ್ತ ಸಂಬಂಧವಯ್ಯ?!
ಬೆಟ್ಟದ ನೆಲ್ಲಿಯಕಾಯಿ ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯಾ ?!
ಗುಹೇಶ್ವರ ಲಿಂಗಕ್ಕೆಯೂ ಎನಗೆಯೂ ಎತ್ತಣಿಂದೆತ್ತ ಸಂಬಂಧವಯ್ಯ?!
~ ಅಲ್ಲಮ

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
~ ಕುವೆಂಪು
Profile Image for Mallikarjuna M.
51 reviews13 followers
December 16, 2022
ಲೇಖಕರು ಬಳಸಿರುವ ಕನ್ನಡ ಉಚ್ಚಾರಣೆಯ ಅರಿವಿದ್ದೂ, ಅದೇ ಉಚ್ಚಾರಣೆಯಲ್ಲಿ ಈ ಪುಸ್ತಕವನ್ನು ಗಟ್ಟಿಯಾಗಿ ಓದುವುದು ಅಥವಾ ಓದಿಸಿ ಆಲಿಸುವುದು ಒಂದು ದಿವ್ಯ ಅನುಭವ...❤️✅
Profile Image for Rathish Kumar.
53 reviews3 followers
November 4, 2024
Reading Kusuma Baale was both challenging and rewarding. The use of the Chamarajanagar dialect made it hard to follow at first, but watching the serial adaptation on YouTube helped me understand it better. Though normal Kannada would have made reading easier, the dialect added authenticity, similar to the slang in Jogi and Jogaiah.

A powerful moment is when Kusuma, who is illiterate, cries, “I want to be in my home.” This reflects her deep bond with Channa, her lover who knew English but was killed for their love. It felt as if Channa’s spirit spoke through her. Mahadeva’s portrayal of village life and its emotions is unforgettable.
Profile Image for Yashawanth Ramaswamy.
95 reviews8 followers
May 13, 2019
https://youtu.be/ttThgiKcaME
Good effort my ruthumana.com to bring this book as an audio book. The language used in this is really hard to read in the writing format so it is helpful for the readers to go for audio book format. It is the first kannada book which I read in audiobook format. The language of kusumabale is typical kannada which is used in some parts of rural Mysore. The book is all about the life's of oppressed people in 80's Karnataka.
4 reviews1 follower
March 24, 2022
A very unique novel in the way it experimented with language. I read in English and it was well translated keeping the spirit of the novel. The magical realism, humor and heartbreaking content are all juxtaposed to create a unique reading experience. The novel in itself feels incomplete and you may be left wondering what actually happened, but the journey is absolutely worth it.
Profile Image for Sanjay Manjunath.
213 reviews11 followers
January 30, 2024
#ಕುಸುಮಬಾಲೆ

ಗೊತ್ತಿಲ್ಲ. ಈ ಕಾದಂಬರಿ ನನ್ನೊಳಗೆ ಇಳಿಯಿತೋ..ಇಲ್ಲವೋ..!?

ಚೆನ್ನಾಗಿಲ್ಲ ಎಂದರೆ ತಪ್ಪಾಗುತ್ತದೆ. ಗದ್ಯ-ಪದ್ಯಗಳ ಸಮ್ಮಿಶ್ರಣದ ಪಾಕದಲ್ಲಿ ಹದಗೊಂಡ ಗಟ್ಟಿ ಕಥೆ ಇದೆ. ಚಂದವಿದೆ.

ಚಾಮರಾಜನಗರ ಕಡೆಯ ಭಾಷೆಯೂ ಅರ್ಥೈಸಿಕೊಳ್ಳಲು ಕಷ್ಟವಾಗುವುದಂತು ನಿಜ. ತುಂಬಾ ಕಡೆ ಓದಿದ್ದನ್ನೆ ಮತ್ತೆ-ಮತ್ತೆ ಓದಬೇಕಾಯಿತು. ಅದೇ ಈ ಕೃತಿಯ ಶಕ್ತಿ ಮತ್ತು ದೌರ್ಬಲ್ಯ ಎಂಬುದು ನನ್ನ ಅನಿಸಿಕೆ.

ಜಾಸ್ತಿ ಹೇಳಲು ಏನಿಲ್ಲ. ಮುಂದೆ ಯಾವಾಗಲಾದರೂ ಮತ್ತೊಮ್ಮೆ ಓದಬೇಕು ಅಷ್ಟೇ.
Profile Image for Sanju Naik R.
2 reviews1 follower
October 31, 2021
Sanju
This entire review has been hidden because of spoilers.
1 review1 follower
Want to Read
November 12, 2022
I want to read
This entire review has been hidden because of spoilers.
Profile Image for Devaraj k.
2 reviews
December 26, 2024
ಅನ್ಕೊಂಡಷ್ಟು ಸುಲಭವಾಗಿ ಓದಕ್ಕೆ ಆಗಲ್ಲ.
ಒಂದು ಸಲ ಶುರು ಮಾಡಿ ಆ ರಾಗ ತಾಳ ಸಿಕ್ಕುದ್ರೆ ಒಂದೇ ಏಟಿಗೆ ಮುಗಿಸಬೋದು.
ಕುಸುಮಬಾಲೆ ಒಂದು ಸುಂದರ ಪ್ರಪಂಚ.

ಓದಿದ ಮೇಲೆ ಧಾರಾವಾಹಿ ಕೂಡ ನೋಡಿ, ಇನ್ನು ಅರ್ಥ ಆಗುತ್ತೆ.
Profile Image for Ankur Sharma.
239 reviews34 followers
July 6, 2025
Have to say - this was a difficult one to read in the translated version.
Profile Image for Vinod.
33 reviews4 followers
December 6, 2024

Although this book is only a few pages long, it was a challenging read for me in Kannada. My average Bengaluru Kannadiga brain struggled to easily process the Chamrajanagara dialect. Additionally, reading this blend of prose and poetry in a way that allows the brain to fully grasp the characters' emotions is not an easy task. Fortunately, the audiobook https://www.youtube.com/watch?v=ttThgiKcaME&list=PL-ZK8MiyvFEGKBImt0ZvVEBaN2G_3ppJ0&ab_channel=%E0%B2%8B%E0%B2%A4%E0%B3%81%E0%B2%AE%E0%B2%BE%E0%B2%A8-Ruthumana narrated by A.M. Shivaswamy, produced by Ruthuman, helped resolve this issue. His narration of the dialect flows naturally, making it understandable.

Its absurd to call this as a Novel but instead be recognized as an epic poem, rooted in the folk traditions of Kannada, particularly spoken by folks in rural villages, who communicate in the natural, colloquial form of Prakrit Kannada, untouched by modern influences [… except for one key dialogue in English in the end….]

The true strength of this work lies in its ability to convey the essence of people’s lives through a colloquial language that transcends secular divides. It offers profound insight into the characters' inner worlds, exploring their thoughts and emotions with symbolism and personal reflection. The story’s richness comes from a simple, authentic portrayal of internal experiences, without relying on dramatic events or unnecessary complexity. The narrative critiques the caste system, using an open and playful expression of love and identity. No character who has relationships in this work is labeled or judged.

P.S: There is a Doordarshan show, created by the late Girish Karnad and Chaitanya in 2004, which rightly captures the emotions of Devanoor's characters. It is wonderfully made and enhances the understanding of the author's work.https://www.youtube.com/watch?v=jgRnty30SaM&ab_channel=ChaitanyaK.M

Displaying 1 - 15 of 15 reviews