Read this book when I was in highschool and I really loved this book so much after Pavitrayuddha. It's cinematic in the theme and the nationalist couple, Abhimanyu and his wife are kinda cute and inspiring. Would look forward to read this book again.
My mother introduced me to Yandamoori Veerendranath ji's books and I loved reading those fast paced adventurous books. Some of them, I was too young to grasp but my crushing over fictional characters sort of began from Veerendranath books themselves.
I literally loved reading this book. A great read indeed
ಇದನ್ನು ನಾನು ಬಹಳ ವರ್ಷಗಳ ಹಿಂದೆ ಓದಿದ್ದೆ. ಆಗ ತಾನೇ world trade center ಮೇಲೆ ಅಟ್ಯಾಕ್ ನಡೆದು "ಬಿನ್ ಲಾಡೆನ್" ಹೆಸರು ಮುಂಚೂಣಿಯಲ್ಲಿತ್ತು. ಆದರೆ 'ಈ ಭಯೋತ್ಪಾದಕ ಸಂಘಟನೆಗಳನ್ನು ಬೆಳೆಸಿದ್ದೇ ಅಮೆರಿಕಾ, ಅದೂ ರಷ್ಯಾ ಮೇಲಿನ ಸೇಡಿನಿಂದ' ಅಂತ ಅರ್ಥ ಮಾಡಿಕೊಳ್ಳುವಷ್ಟು ಪ್ರಬುದ್ಧತೆ ನನಗೆ ಬಂದಿರಲಿಲ್ಲ.
ಹಾಗಾಗಿ ಆಗ ಈ ಕಾದಂಬರಿಯನ್ನು ಕೇವಲ ಸಿನಿಮೀಯ ಮಾದರಿಯಲ್ಲಿ ಓದಿದ್ದೆ.
ಈಗ ಮತ್ತೊಮ್ಮೆ ಇದನ್ನು ಕೈಗೆ ಹಿಡಿದಾಗ ಬೇರೆಯ ರೀತಿಯೇ ಕಾಣಲು ಶುರುವಾಯ್ತು.
ಪ್ರೊಫೆಸರ್ ಮುಕುಲಾನಂದ್ ಅನ್ನುವ ಪಾತ್ರ ನನ್ನನ್ನು ರೊಚ್ಚಿಗೆಬ್ಬಿಸಿತು. 'ಭಯೋತ್ಪಾದಕರು ಹೋರಾಡಲು ಕಾಶ್ಮೀರವೇ ಬೇಕಿಲ್ಲ. ಕಾಶ್ಮೀರ ಸ್ವತಂತ್ರವಾದರೆ ಕನ್ಯಾಕುಮಾರಿಗಾಗಿ ಹೋರಾಡುತ್ತಾರೆ' ಎಂಬ ಸತ್ಯ ನನ್ನನ್ನು ದಿಗ್ಭ್ರಮೆಗೊಳಿಸಿತು. ಅವರ ಹೋರಾಟವೆಲ್ಲಾ ಕೇವಲ ಅವರ ಹೊಟ್ಟೆಪಾಡಿಗಾಗಿ ಅಂತ ಅರ್ಥವಾಯ್ತು. ಹೊಟ್ಟೆಯ ಹಸಿವು ಎಂಥಾದ್ದು ಎಂದರೆ... ಕಾರಣವಿಲ್ಲದೇ ನೆರೆ ರಾಷ್ಟ್ರದ ಮುಗ್ಧ ಜನಗಳನ್ನು ಕರುಣೆ ಇಲ್ಲದೇ ಸಾಯಿಸುವಷ್ಟು..
ಅಭಿಮನ್ಯು, ಮಧೂಲಿಕಾರಂತ ಎಷ್ಟೋ ಜನ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಅದು ಯಾವುದೂ ಬೆಳಕಿಗೆ ಬರುವುದಿಲ್ಲ. ಈ ಕಾದಂಬರಿಯಲ್ಲಿ ಅವರ ತ್ಯಾಗಕ್ಕೆ ಯಾವುದರಿಂದಲೂ ಬೆಲೆ ಕಟ್ಟಲು ಬರುವುದಿಲ್ಲ. ಅಕಸ್ಮಾತ್ ಸಾಧ್ಯವಾದರೆ ಅದು ನಮ್ಮಕಣ್ಣೀರಿನಿಂದ ಮಾತ್ರ....
ಯಂಡಮೂರಿಯವರು ವ್ಯಕ್ತಿಗಳ ಜೊತೆ ವ್ಯಕ್ತಿತ್ವವನ್ನೂ ವಿವರಿಸುತ್ತಾರೆ. ಅಮಾನುಲ್ಲಾ, ಶೇರ್ ಖಾನ್, ರಾಮಾನುಜನ್, ತಾಲಿಬಾನಿಗಳು ಇವರ ವ್ಯಕ್ತಿತ್ವ ಕೂಡ ಪರಿಚಯ ಆಗುತ್ತದೆ.
ವಿಪರ್ಯಾಸವೆಂದರೆ ಭಯೋತ್ಪಾದಕರ ವಿಷಯ ಇಂದಿಗೂ ಹಾಗೆಯೇ ಇದೆ. ಅದಕ್ಕೇ ಈ ಕಾದಂಬರಿ ಈಗಲೂ ಪ್ರಸ್ತುತ ಆಗಿರುವುದು.
ಇದು ಎಂಡಮೂರಿ ವೀರೇಂದ್ರನಾಥವರು ಬರೆದ ಒಂದು ಅತಿ ರೋಮಾಂಚಕ ಕಥೆ. ಇದರಲ್ಲಿ ವಾಸ್ತವಿಕತೆ ಹಾಗೂ ಕಲ್ಪನೆ, ಇವೆರಡೂ ಅಂಶಗಳು ಮೂಡಿ ಬಂದಿವೆ. ಕಥಾ ನಾಯಕ ಹಾಗೂ ನಾಯಕಿಯ ಪಾತ್ರಗಳು ಅತ್ಯಧ್ಬುತ. ನಾಯಕನನ್ನು ನೋಡಿದರೆ ಎಲ್ಲ ಭಾವನೆಗಳು ಅವನ ಬಗ್ಗೆ ಮೂಡುತ್ತವೆ - ಹೆಮ್ಮೆ, ಜುಗುಪ್ಸೆ, ಸಿಟ್ಟು ಇತ್ಯಾದಿ. ಮುಂದೇನಾಗುತ್ತದೆ ಎಂದು ಆತಂಕ ಓದುಗರನ್ನು ಸೆಳೆದಿಡುತ್ತದೆ. ಮತಾಂಧತೆ ಒಬ್ಬ ಮನುಷ್ಯನಿಂದ ಏನೆಲ್ಲಾ ಮಾಡಿಸುತ್ತದೆ ಹಾಗೂ ತಮ್ಮ ತಮ್ಮ ಸ್ವಾರ್ಥಕ್ಕೆ ಏನೆಲ್ಲಾ ಸಂಚುಗಳು ನಡೆಯುತ್ತವೆ ಎಂದು ತುಂಬಾ ಸೊಗಸಾಗಿ ವರ್ಣಿಸಿದ್ದಾರೆ ಲೇಖಕರು. ಇದು ಒಂದು ರೋಮಾಂಚಕಾರಿ ಮತ್ತೆ ಪತ್ತೇದಾರಿ ಕಾದಂಬರಿ ಆಗಿರಬಹುದು ಆದರೆ ಇದರಲ್ಲಿ ಅನೇಕ ಭಾವಗಳು ತುಂಬಿವೆ, ಪ್ರೇತಿ....ದೇಶ ಭಕ್ತಿ.....ಕರ್ತವ್ಯ ನಿಷ್ಠೆ..... ಸ್ವಾರ್ಥ......ಮತಾಂಧತೆ.....ಸಿಟ್ಟು.....ಆವೇಶ..... ಕ್ರೌರ್ಯ....ಇಷ್ಟೆಲ್ಲಾ ಭಾವಗಳನ್ನು ಬೆರೆತ ಈ ಕಥೆ ಹಾಗೂ ಕಥೆಯಲ್ಲಿ ಬರುವ ಎಲ್ಲ ಪಾತ್ರಗಳು ಅತಿ ಸುಂದರ.....
ಒಟ್ಟಿನಲ್ಲಿ ಹೇಳಬೇಕಂದರೆ ಇದು ಒಂದು ಅತ್ಯದ್ಭುತ ಹಾಗೂ ಪ್ರಸ್ತುತ ನಮ್ಮ ಜಗತ್ತಿನಲ್ಲಿ ನಡೆಯುತ್ತಿರುವ ಹಾಗೂ ನಡಿದೆರುವ ಎಷ್ಟೋ ವಿಧ್ವಂಸಕ ದುಷ್ಕೃತ್ಯಗಳಿಗೆ ಹಿಡಿದ ಕನ್ನಡಿಯಾಗಿದೆ. ನಮ್ಮ ರಕ್ಷಣಾ ಮತ್ತೆ ಬೇಹುಗಾರಿಕೆ ಇಲಾಖೆಯವರು ಒಂದು ದುರ್ಘಟನೆ ನಡೆದ ಮೇಲೆ ಅದರ ಬಗ್ಗೆ ಪರಿಶೋಧನೆ ಮಾಡುವದಕ್ಕಿಂತ ಅದು ನಡೆಯುವ ಮುಂಚೆ ಅದನ್ನು ಪತ್ತೆ ಮಾಡಿ ತಡೆದರೆ ಎಷ್ಟೆಲ್ಲಾ ನಷ್ಟಗಳನ್ನು ತಪ್ಪಿಸಬಹುದು ಎಂಬುದು ವಿಚಾರ ಮಾಡಬಹುದಾದ ವಿಷಯ. ಈ ಕಾದಂಬರಿಯನ್ನು ಓದಿದ ಮೇಲೆ ಇದು ನನ್ನ ವಯಕ್ತಿಕವಾದ ಅನಿಸಿಕೆ