'ತಳುಕು ರಾಮಸ್ವಾಮಯ್ಯ ಸುಬ್ಬರಾಯ' ಅವರು ಕನ್ನಡದ ಮೊದಲ ಪ್ರಾಧ್ಯಾಪಕರಾದ ತಳುಕಿನ ವೆಂಕಣ್ಣಯ್ಯನವರ ತಮ್ಮನವರ ಮಗ. ಇವರು ಹುಟ್ಟಿದ್ದು ೧೯೧೯ರಲ್ಲಿ. ಅವರು ಬರೆದ 'ನಾಗರಹಾವು' ಕಾದಂಬರಿಯಲ್ಲಿನ ರಾಮಾಚಾರಿಯ ಪಾತ್ರದಂತೆಯೇ ಅವರು ಛಲದ ಮನುಷ್ಯರಾಗಿದ್ದವರು. ಬಹಳ ಕಷ್ಟದಲ್ಲಿ ಜೀವಿಸಿದವರು. ಇವರ ಕೃತಿಗಳಾದ ಕಂಬನಿಯ ಕುಯಿಲು, ರಕ್ತರಾತ್ರಿ, ಮತ್ತು ತಿರುಗುಬಾಣ, ಚಿತ್ರದುರ್ಗದ ಇತಿಹಾಸವನ್ನು ಬಹಳ ರಸವತ್ತಾಗಿ ಚಿತ್ರಿಸಿವೆ ಎಂದು ವಿಮರ್ಶಕರ ಅಭಿಪ್ರಾಯ. ಏಪ್ರಿಲ್ ೧೦, ೧೯೮೪ರಲ್ಲಿ ಹೃದಯಾಘಾತವಾಗಿ ಬೆಂಗಳೂರಿನ ರಾಜಾಜಿನಗರದಲ್ಲಿರುವ 'ವರಲಕ್ಷ್ಮಿ ನರ್ಸಿಂಗ್ ಹೋಂ'ನಲ್ಲಿ ನಿಧನ ಹೊಂದಿದರು.
ಶ್ರೀಚಕ್ರೋಪಾಸನೆಯ ಕುರಿತಾದ ಕತೆ. ಒಂದು ಸಿದ್ದಿಯನ್ನು ಒಲಿಸಿಕೊಳ್ಳುವುದು ಸುಲಭ. ಆದರೆ ಅದನ್ನು ಕಾಪಾಡಿಕೊಳ್ಳುವುದು ಕಷ್ಟ. ಇಲ್ಲಿ ಬರುವ ಶಾಸ್ತ್ರಿಗಳ ಕತೆಯೂ ಇದಕ್ಕೆ ಹೊರತಾಗಿಲ್ಲ. ತ.ರಾ.ಸು ಅವರು ಮುಗಿಸಿದ್ದ ಅರ್ಧ ಕಾದಂಬರಿಯನ್ನು ಅವರ ಕಾಲಾನಂತರ ಅವರ ಆಪ್ತರಾದ ನಾ.ಪ್ರಭಾಕರ್ ಪೂರ್ಣಗೊಳಿಸಿದ್ದಾರೆ.
ಶ್ರೀ ಚಕ್ರ ಉಪಾಸನೆಯ ಸಾಧಕನ ಕತೆ. ಅದರಲ್ಲಿ ಎದುರಾಗುವ ತೊಡಕುಗಳ ,ವಾಸನೆಗಳ ಚಿತ್ರಣ..ಅರ್ಧ ಕಾದಂಬರಿ ಆದಾಗ ತರಾಸು ತೀರಿಕೊಂಡ ಕಾರಣ ಅವರ ಶಿಷ್ಯ ಪ್ರಭಾಕರ ಅವರು ಮುಗಿಸಿದ ಕೃತಿ. ತರಾಸು ಶೈಲಿ ಅನನ್ಯ.
Sri Chakreshwari ತ.ರಾ.ಸು ಎಂದೇ ಖ್ಯಾತರಾದ 'ತಳುಕು ರಾಮಸ್ವಾಮಯ್ಯ ಸುಬ್ಬರಾಯ' ರ ಬಗ್ಗೆ ಕೇಳದ ಕನ್ನಡಿಗನಿಲ್ಲ. ಕನ್ನಡ ಭಾಷೆಯಲ್ಲಿ ಅವರು ರಚಿಸಿದ ಕಾದಂಬರಿಗಳ ಮಹತ್ವ ಬಹು ಅಮೂಲ್ಯ. ಅಂತಹ ಒಂದು ಕಾದಂಬರಿ ಶ್ರೀಚಕ್ರೇಶ್ವರಿ ಓದಿದ ನಂತರ “ಈ ಕಾದಂಬರಿಯ ವಿಷಯದ ಬಗ್ಗೆ ಬರೆಯಲು ಇವನು ಸರ್ವಥಾ ಶಕ್ತನಲ್ಲ” ಅನ್ನಿಸಿತು. ಸುಮಾರು ಒಂದು ವರ್ಷದ ಹಿಂದೆ ಗೆಳೆಯರಾದ ಶ್ರೀ ಸೂರಾಲು ತಂತ್ರಿಗಳು ಈ ಕಾದಂಬರಿಯ ಬಗ್ಗೆ ಬರೆದ ಒಂದು ಬರಹವನ್ನೋದಿ ಈ ಕೃತಿಯನ್ನು ತರಿಸಿದ್ದೆನಾದರೂ ಓದುವ ಮನ ಬಂದಿರಲಿಲ್ಲ. ನಿನ್ನೆ (೨೮/೦೯/೨೦೧೯ ರಂದು) ಈ ಕಾದಂಬರಿಯನ್ನು ರಾತ್ರಿ ಹನ್ನೊಂದು ಗಂಟೆಗೆ ಹಿಡಿದು ಕುಳಿತೆ. ಮುಗಿಸಿದಾಗ ರಾತ್ರಿ ಮೂರು ಗಂಟೆ. ಅಬ್ಬ..ರೋಮಾಂಚನ. ನಡುನಡುವೆ ತಾಯಿಯನ್ನು ನೆನೆದು ಕಣ್ಣೀರು. ಊಹೂಂ, ಈ ಕಾದಂಬರಿಯ ವಿಷಯದ ಬಗ್ಗೆ ವಿಮರ್ಶೆ ಮಾಡಲು ನಾನು ಶಕ್ತನಲ್ಲ ಅಂತ ಮೊದಲೇ ಹೇಳಿದೆನಲ್ಲ.. ಆದರೂ ಇದರಲ್ಲಿ ಬರುವ ನಾಲ್ಕಾರು ಮಾತುಗಳನ್ನು ಹಂಚಿಕೊಳ್ಳುವ ಬಯಕೆ.
ಇದು ತ.ರಾ.ಸುಬ್ಬರಾಯರ ಕೊನೆಯ ಕಾದಂಬರಿ. ಈ ಕಾದಂಬರಿ ರಚನೆ ಮುಗಿಯುವ ಹೊತ್ತಿಗೆ ಅವರ ದೇಹಾಂತ್ಯವಾದರೂ, ಶ್ರೀಯುತ ನಾ.ಪ್ರಭಾಕರ್ ಅವರು ತ.ರಾ.ಸು ಅವರು ಹೇಳಿದ ಕಥಾಹಂದರ, ವಿಷಯ ಮತ್ತು ಟಿಪ್ಪಣಿಗಳನ್ನು ಆಧಾರವಾಗಿ ಇಟ್ಟುಕೊಂಡು ಈ ಕಾದಂಬರಿಯನ್ನು ಸಂಪೂರ್ಣಗೊಳಿಸುತ್ತಾರೆ. ಕಥೆ ಹೇಳಲು ಹೋಗುವುದಿಲ್ಲ. ಆದರೆ ಆ ಕಾಲಘಟ್ಟದ ಕೆಲವು ವರ್ಣನೆಗಳನ್ನು ಕಾದಂಬರಿಯ ನಡುವೆ ದಾಖಲಿಸಿದ ಬಗೆ ಸೊಗಸಾಗಿದೆ. ಚಕ್ರಪಲ್ಲಿ ಎಂಬ ಊರಿನ ಬಗ್ಗೆ, ಅಲ್ಲಿಯ ಜನರ, ಲೋಕವ್ಯವಹಾರದ ಬಗ್ಗೆ ತ.ರಾ.ಸು ಅವರು ಸಾಂಬಮೂರ್ತಿಯ ತಂದೆಯ ಬಾಯಲ್ಲಿ ನುಡಿಸಿದ ನುಡಿಗಳವು.
“ ಆ ಕಾಲದ ಸಾಧು-ಸನ್ಯಾಸಿಗಳಿಗೆ ಬೇಕಾಗಿದ್ದುದು ಭಿಕ್ಷೆಯಲ್ಲ- ಮುಕ್ತಿ. ಆ ಗುರಿಸಾಧನೆಗೆ ಬೇಕಾದ ಜಪ,ತಪ,ಅನುಷ್ಠಾನವಲ್ಲದೆ ಬೇರೆ ಚಿಂತೆಯೇ ಅವರಿಗಿರುತ್ತಿರಲಿಲ್ಲ. ಅಣ್ಣ ಸಿಕ್ಕರೆ ಸರಿ- ಇಲ್ಲವಾದರೆ, ಈ ಘಟ ಶೋಷಣೆಯಾಗಿ ಮುಕ್ತಿಯ ದಿನ ಮತ್ತಷ್ಟು ಹತ್ತಿರವಾಯಿತು ಎಂದು ಹಿಗ್ಗುವ ಜನ “ ಎಂಬುದಾಗಿ ಆ ಕಾಲದ ಸಾಧು-ಸನ್ಯಾಸಿಗಳ ಬಗ್ಗೆ ವಿವರಿಸುತ್ತಾರೆ.
“ ಈಗಿನ ಕಾಲವನ್ನು ಸಮಾಜವಾದದ ಯುಗ ಎಂದು ಹೇಳುತ್ತಾರೆ, ಕೂಡಿ ದುಡಿ, ಹಂಚಿಕೊಂಡು ತಿನ್ನು ಎನ್ನುವುದು ಈ ಯುಗದ ಆದರ್ಶವಂತೆ, ತುಂಬಿದ ಊರಿನಲ್ಲಿ ಯಾರೂ ಉಪವಾಸವಿರಬಾರದು ಎಂಬುದು ಧ್ಯೇಯವಂತೆ. ಕೇಳಲಿಕ್ಕೆ ಹೇಳಲಿಕ್ಕೆ ಇದೆಲ್ಲಾ ತುಂಬಾ ಚೆನ್ನಾಗಿದೆ, ಆದರೆ ಇರುವುದು ಮಾತ್ರ ಇದಕ್ಕೆ ತದ್ವಿರುದ್ಧ- ಎಲ್ಲರಿಗೆ ಎಲ್ಲರೂ ಅಲ್ಲ, ಯಾರಿಗೆ ಯಾರೂ ಇಲ್ಲ- ಬಾಯಲ್ಲಿ ಬಾಷಣ, ಘೋಷಣೆ, ಕಡತದಲ್ಲಿ ಕಾಯಿದೆ-ಇಷ್ಟೇ ನಾವು ಸಾಧಿಸಿರೋದು. ಅದಲ್ಲಾಂದ್ರೆ ಹೇಳು- ಈಗಿನಷ್ಟು ಹಸಿವು, ದಾರಿದ್ರ್ಯ, ನಿರುದ್ಯೋಗ, ಜಾತಿ ಜಗಳ, ವರ್ಗಮಾರಾಮಾರಿ, ಊರು ಸತ್ತರೇನು ಎಂಬ ಹೊಣೆಗೇಡಿತನ – ಯಾವ ಪುಂಡುಪಾಳೆಯಗಾರರ ಕಾಲದಲ್ಲಾದರೂ ಇತ್ತೇ? “ ಎಂದು ಹೇಳುವ ಮೂಲಕ ಆ ಕಾಲಘಟ್ಟದ ವಾಸ್ತವವನ್ನು ನಮ್ಮೆದುರು ತೆರೆದಿಡುತ್ತಾರೆ ಶ್ರೀ ತ.ರಾ.ಸು ಅವರು.
“ ನಿಜವಾಗಿಯೂ ಅತೃಪ್ತಿಗಿಂತ ದಾರುಣವಾದ ಬಡತನ ಯಾವುದಿದೆ, ಭೂಮಿಯ ಮೇಲೆ? ಹರಿಶ್ಚಂದ್ರನ ಬೆನ್ನು ಹತ್ತಿದ ನಕ್ಷತ್ರಿಕನಿಗಿಂತ ಹೀನಾಯ ಈ ಅತೃಪ್ತಿ-ಅದಿಲ್ಲದವನು ಕುಬೇರ ! “ ಎಂಬ ಮಾತುಗಳನ್ನಾಡುವ ಮೂಲಕ ಮಾನವನ ಚತುರ್ವಿಧ ಪುರುಷಾರ್ಥಗಳಿಗೆ ದಾರಿ ತೋರುತ್ತಾರೆ ಸುಬ್ಬರಾಯರು.
ಮನಮುಟ್ಟುವ ಇಂತಹ ಉನ್ನತ ಸಾಮಾಜಿಕ ಪರಿಕಲ್ಪನೆಯ ಬಗ್ಗೆ ಹೇಳುತ್ತಲೇ ನಮ್ಮನ್ನು ಆ ಚಕ್ರಪಲ್ಲಿ ಎಂಬ ಮಾಯಾನಗರಿಯ ಒಳಗೆ ಕರೆದೊಯ್ಯುವ ಸುಬ್ಬರಾಯರು, ನಂತರ ಕಟ್ಟಿಕೊಡುವ ಲೋಕ ನಿಧಾನವಾಗಿನಮ್ಮ ಆಸಕ್ತಿಯನ್ನು ಕೆರಳಿಸುವುದಷ್ಟೇ ಅಲ್ಲದೇ, ನಮ್ಮ ಬೆನ್ನುಮೂಳೆಯ ಕೆಳಗಿಂದ ತಣ್ಣಗಿನ ಚಳಿಯನ್ನೂ ಹುಟ್ಟುಹಾಕುತ್ತದೆ.
ವಿರೂಪಾಕ್ಷ ಶಾಸ್ತ್ರಿಗಳ ಒಂದು ದುಡುಕಿನ ನಿರ್ಧಾರ, ಅದರಿಂದ ಮುಂದೆ ಅವರ ಮಗ ಶಂಕರ ಶಾಸ್ತ್ರಿಗಳ ಬದುಕಿನಲ್ಲಿ ತಂದೊಡ್ಡುವ ಪರಿಸ್ಥಿತಿಗಳು, ಅವರ ಮಡದಿ ಅನ್ನಪೂರ್ಣಮ್ಮನ ತೊಳಲಾಟಗಳು, ಅವರ ಮಗ ಸಣ್ಣಶಾಸ್ತ್ರಿಯ ಹುಚ್ಚುತನ, ಎಲ್ಲವೂ ದೈವನಿಯಾಮಕವೇ ಅಥವಾ ಸ್ವಯಂಕೃತ ಪರಿಸ್ಥಿತಿಯೇ ಎಂಬುದನ್ನು ಇವನಂತಹ ಅಜ್ಞಾನಿಗೆ ವಿಮರ್ಶಿಸಲು ಸಾಧ್ಯವಿಲ್ಲ.
ಲಲಿತಾಸಹಸ್ರನಾಮಸ್ತೋತ್ರ ಪ್ರಾರಂಭವಾಗುವುದೇ “ ಶ್ರೀಮಾತಾ ಶ್ರೀ ಮಹಾರಾಜ್ಞೀ ಶ್ರೀಮತ್ಸಿಂಹಾಸನೇಶ್ವರೀ “ ಎಂಬ ವಾಖ್ಯದಿಂದ.
ಶ್ರೀಮಾತಾ ಎಂದರೆ ಶ್ರೀಮಾತೆ, ತಾಯಿ, ಅಮ್ಮ, ಜನನಿ. ನಾವೆಲ್ಲರೂ ತಾಯಗರ್ಭದಿಂದಲೇ ಜನಿಸಿದವರು. ಆ ಮಾತೆಯೇ ನಮ್ಮೆಲ್ಲರ ಸೃಷ್ಟಿಕರ್ತಳು. ಆಕೆಯೇ ಎಲ್ಲರ, ಎಲ್ಲದರ ಉತ್ಪತ್ತಿಗೆ ಕಾರಣಳು. ಶ್ರೀ ಎಂದರೆ ಮೋಕ್ಷವೂ ಹೌದು. ಸೃಷ್ಟಿ-ಸ್ಥಿತಿ-ಲಯ ಕಾರ್ಯಗಳಲ್ಲಿ ಮೊದಲನೆಯದಾದ ಸೃಷ್ಟಿಗೆ ಅವಳೇ ಕಾರಣ ಎಂಬುದನ್ನು ತಿಳಿಸಲು ಶ್ರೀಮಾತಾ ಎಂಬ ಪದ ಬಳಕೆಯಾಗಿದೆ.
ಶ್ರೀ ಮಹಾರಾಜ್ಞೀ ಎಂದು ಎರಡನೆಯ ಪದವನ್ನು ಸ್ಥಿತಿಯನ್ನು ಸೂಚಿಸಲು ಬಳಸಲಾಗಿದೆ. ಶ್ರೀ ಮಹಾರಾಜ್ಞೀ ಎಂದರೆ ಸಕಲ ಪ್ರಪಂಚವನ್ನು ಪಾಲಿಸುವವಳು ಎಂದರ್ಥ. ರಾಜ್ಞೀ ಎಂದರೆ ಆಳ್ವಿಕೆ ನಡೆಸುವವಳು ಎನ್ನಬಹುದು. ಹಾಗೆಯೇ
ಮೂರನೆಯದಾಗಿ ಶ್ರೀಮತ್ಸಿಂಹಾಸನೇಶ್ವರೀ ಎಂದರೆ ಸಿಂಹವನ್ನೇ ಆಸನವಾಗಿ ಉಳ್ಳವಳು ಎಂದರ್ಥ. ಸಿಂಹಾಸನ ಎಂದರೆ ಉತ್ತಮವಾದ ಆಸನ ಎಂಬ ಅರ್ಥವಿದ್ದರೂ, ದೇವೀ ಪುರಾಣದ ನಾಮನಿರ್ವಚನಾಧ್ಯಾಯದಲ್ಲಿ ಹೀಗೆ ಹೇಳಿದೆ : ದೇವಿಯು ಕನ್ಯೆಯಾಗಿರುವಾಗ ಸಿಂಹದ ಮೇಲೆ ಕುಳಿತುಕೊಂಡು ಮಹಿಷನನ್ನು ವಧಿಸಿದಳು. ಆದುದರಿಂದ ದೇವಿಯು ಮಹಿಷಘ್ನೀ ಎಂದೂ ಸಿಂಹಾಸನೇಶ್ವರಿಯೆಂದೂ ಹೇಳಲ್ಪಟ್ಟಿದ್ದಾಳೆ. “ ಸಿಂಹಮಾರುಹ್ಯ ಕನ್ಯಾತ್ವೇ ನಿಹತೋ ಮಹಿಷೋsನಯಾ | ಮಹಿಷಘ್ನೀ ತತೋ ದೇವಿ ತಥಾ ಸಿಂಹಾಸನೇಶ್ವರಿ || “ ಅಥವಾ ಸಿಂಹ ಶಬ್ದಕ್ಕೆ ಹಿಂಸೆ ಎಂಬ ಅರ್ಥವೂ ಇದ್ದು, ಆಸನ ಎಂದರೆ ಹೊರದೂಡು ; ಈಶ್ವರೀ ಎಂದರೆ ಸಮರ್ಥಳಾದವಳು ಎಂಬ ಅರ್ಥವೂ ಇರುವ ಕಾರಣ, ಒಟ್ಟಾಗಿ ಜಗತ್ತನ್ನು ಸಂಹರಿಸುವವಳು ಎಂದರೆ ಲಯಕಾರಕಳೂ ಹೌದು ಎಂದು ಹೇಳಬಹುದು. ಸೃಷ್ಟಿ-ಸ್ಥಿತಿ-ಲಯ ಕಾರ್ಯಗಳನ್ನು ಮಾಡುವವಳು ಅವಳೇ ಆ ತ್ರಿಪುರಸುಂದರೀ ಮಹಾತಾಯಿಯೇ ಹೌದು ಎಂಬುದನ್ನು ಮೊದಲ ವಾಖ್ಯದಲ್ಲಿ ಹೇಳಲಾಗಿದೆ.
ಶ್ರೀ ಎಂದರೆ ಶ್ರೀಚಕ್ರವೂ ಹೌದು. “ ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ | “ ಎಂಬ ಮಹಾಲಕ್ಷ್ಮ್ಯಾಷ್ಟಕ ಸ್ತೋತ್ರದಲ್ಲಿ ಆಕೆಯನ್ನು ಮಹಾಮಾಯೇ ಎಂದು ವರ್ಣಿಸಲಾಗಿದೆ. ಹಾಗೆಯೇ ಶ್ರೀಪೀಠೇ ಎಂದರೆ ಶ್ರೀಚಕ್ರ ಎಂಬ ಅರ್ಥದಲ್ಲೂ ವರ್ಣಿಸಲಾಗಿದೆ. ಆಕೆ ಸರ್ವವರದೆಯೂ ಹೌದು, ಸರ್ವದುಷ್ಟ ಭಯಂಕರಿಯೂ ಹೌದು. ಪರಬ್ರಹ್ಮ ಸ್ವರೂಪಿಣಿಯೂ ಹೌದು. ಇಂತಹ ಮಹಾದೇವಿಯನ್ನು ಪಡೆಯಲು ಹೊರಡುವ ವಿರೂಪಾಕ್ಷ ಶಾಸ್ತ್ರಿಗಳು, ಅದಕ್ಕೆ ತಾವು ಅರ್ಹರೋ ಅಲ್ಲವೋ ಎಂಬುದನ್ನರಿಯದೆ ದುಡುಕಿ ಅವಳನ್ನು ಬಯಸುತ್ತಾರೆ. ಅವರ ಉದ್ದೇಶ ಒಳ್ಳೆಯದೇ ಇದ್ದರೂ, ಅವಳಾಗಿ ಬರಬೇಕು, ಅವಳ ಇಚ್ಚೆಯಂತೆ ನಾವು ನಡೆಯಬೇಕು ಎಂಬುದು ಅವರಿಗೆ ಹೊಳೆಯದೆ ಇದ್ದಿದ್ದೇ ಈ ಕಾದಂಬರಿಯ ಮೂಲಹೇತು.
ಸಕಲವನ್ನೂ ತಾಯಿ ಎಂದು ಭಾವಿಸುವುದು, ಅಥವಾ ಸಕಲವನ್ನೂ ಬ್ರಹ್ಮಸ್ವರೂಪ ಎಂದು ಭಾವಿಸುವುದು, ,ಮಾಯೆಯ ಮುಸುಗಿನೊಳಗೆ ಹೊಕ್ಕ ಮಾನವರಿಗೆ ಬಲುಕಠಿಣ. ಅದಕ್ಕೆ ಸಾಧನೆ ಬೇಕು. ಗುರಿ ಬೇಕು. ಗುರು ಬೇಕು. ಶಿಷ್ಯನನ್ನು ಗುರುವಾಗಿಸುವ ಗುರು ಬೇಕು. ಜನ್ಮಾಂತರದ ಸಂಸ್ಕಾರ ಬೇಕು. ಸಾಧನೆಯ ಉತ್ತುಂಗಕ್ಕೇರಬೇಕು. ಆ ಉತ್ತುಂಗಕ್ಕೇರಿ ನಿಂತವರು ��ಾಧಾರಣ ಮಾನವರಿಗೆ ವಿಚಿತ್ರವೆಂಬಂತೆ ತೋರುತ್ತಾರೆ. ಅವರು ಸುಲಭಕ್ಕೆ ಅರ್ಥವಾಗುವುದಿಲ್ಲ. ಅಂತಹ ಅರ್ಥವಾಗದ ಪಾತ್ರಗಳನ್ನು ಸುಬ್ಬರಾಯರು ಇಲ್ಲಿ ಕಟ್ಟಿಕೊಟ್ಟಿದ್ದ��ರೆ.
ಮತ್ತು, ಆ ತಾಯಿಯ ನಡೆಯನ್ನು ಅರ್ಥಮಾಡಿಕೊಳ್ಳುವುದು ನಮ್ಮಿಂದ ಸಾಧ್ಯವೇ? ಹೀಗಾಗಬೇಕಿತ್ತು, ಹಾಗಾಗಬಾರದಿತ್ತು ಎಂದು ನಾವು ಹೇಳಬಹುದು, ಆದರೆ ಅದು ನಮ್ಮಿಚ್ಚೆಯಂತೆ ನಡೆಯುತ್ತದೆಯೇ ? ಇದೆನ್ನೇ ಸುಬ್ಬರಾಯರು ಕಾದಂಬರಿಯ ಕೊನೆಯಲ್ಲಿ ಸಾಂಬಮೂರ್ತಿಯ ತಂದೆಯವರಿಂದ ಹೇಳಿಸುತ್ತಾರೆ. “ ಹೀಗಾಗಬೇಕಿತ್ತು, ಹೀಗಾಗಬಾರದಿತ್ತು ಎಂದು ಹೇಳುವುದಕ್ಕೆ ನಾವು ಯಾರು? ಇಷ್ಟು ಹೊತ್ತು ಇದೆಲ್ಲ ಕೇಳಿದ ನೀನು ಕಲಿತದ್ದು ಇದೇ ಏನು? ನಮ್ಮ ಇಚ್ಚೆಗೆ ಏನೂ ಬೆಲೆಯಿಲ್ಲ. ಯಾವುದು ಹೇಗಾಗಬೇಕೋ ಹಾಗೇ ಆಗುತ್ತದೆ. ಸುಮ್ಮನೆ ಚಪಲದ ಮಾತು ಆಡುತ್ತೇವೆ, ಅಷ್ಟೇ. ನಮ್ಮ ಇಚ್ಚೆಯಲ್ಲೇ ದೋಷವಿದ್ದರೆ ಯಾರೇನು ಮಾಡಲು ಸಾಧ್ಯ? ವಿರೂಪಾಕ್ಷ ಶಾಸ್ತ್ರಿಗಳ ಬಯಕೆಯಲ್ಲಿನ ದೋಷದಿಂದ ಶಂಕರಶಾಸ್ತ್ರಿಗಳಿಗೆ ತಾಯಿ ಒಲಿದುಬಂದಿದ್ದಳು- ಹೂವಾಗಿ ಅಲ್ಲ, ಸಿಡಿಲಾಗಿ ! ಇದಕ್ಕೆ ಯಾರು ಹೊಣೆ ? “ ಎನ್ನುತ್ತಾರೆ ಅವರು.
ಇಲ್ಲಿ ಕಾದಂಬರಿಯ ಕಥೆ, ವಿವರಣೆ ಇತ್ಯಾದಿಗಳನ್ನು ಹೇಳಲು ಹೋಗುವುದಿಲ್ಲ ನಾನು. ಅದನ್ನು ನೀವೇ ಓದಿ ಅರಿಯಬೇಕು. ಯಾರಿಗೆಷ್ಟು ದಕ್ಕುತ್ತದೆಯೋ ಅದು ಅವರವರಿಗೆ ಬಿಟ್ಟಿದ್ದು.
ಭಗವಂತನನ್ನು ಬೇಡುವಾಗ ನಿನಗೆ ಹೇಗೆ ಇಚ್ಚೆಯೋ ಹಾಗೆ ಅನುಗ್ರಹಿಸು ದೇವಾ ಎಂದು ಕೇಳದೇ, ನನಗೆ ಏನು ಇಚ್ಚೆಯೋ ಅದನ್ನು ನೀಡು ದೇವಾ ಎಂದರೆ ಕೆಲವೊಮ್ಮೆ ಅನರ್ಥವೇ ಆಗಬಹುದು ಎಂಬುದನ್ನು ಇಲ್ಲಿ ಸುಬ್ಬರಾಯರು ಬಹಳ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ನಮ್ಮ ಯೋಗ್ಯತೆಯನ್ನು ಅರಿಯದೆ ನಾವು ಕೆಲವೊಮ್ಮೆ ಭಗವಂತನ ಬಳಿ ವರ ಬೇಡುತ್ತೇವೆ. ಆತ ಅನುಗ್ರಹಿಸಿದರೆ ಅದನ್ನು ಹೊಂದುವ ಯೋಗ್ಯತೆ, ನಿರ್ವಹಿಸುವ ಶಕ್ತಿ ನಮಗಿರುವುದಿಲ್ಲ. ಹಾಗಾಗಿ “ ಯಥಾಯೋಗ್ಯಂ ತಥಾ ಕುರು “ ಎಂದು ಅವನ ಮೇಲೆ ಭಾರ ಹಾಕಿ ನಮ್ಮ ಕರ್ತವ್ಯವನ್ನು ಮಾಡುತ್ತಿರಬೇಕು ಎಂಬುದು ಸಾರಾಂಶ. ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮ ಹೇಳಿದ್ದೂ ಅದೇ ಅಲ್ಲವೇ. ================================ ಪುಸ್ತಕದ ಹೆಸರು : ಶ್ರೀಚಕ್ರೇಶ್ವರಿ ಲೇಖಕರು : ತ.ರಾ.ಸು. ಪ್ರಕಾಶಕರು : ಹೇಮಂತ ಸಾಹಿತ್ಯ ಬೆಲೆ : 120 ರೂಪಾಯಿಗಳು. ಪುಟಗಳು : 192 ದೊರೆಯುವ ಸ್ಥಳಗಳು : ಕನ್ನಡಲೋಕ (ನಾನು ತರಿಸಿದ್ದು) ================================ ಪುಸ್ತಕದ ಬಗ್ಗೆ Sooralu Thanthri ಯವರ ಬರಹದ ಕೊಂಡಿ : https://m.facebook.com/story.php?stor...
ಲೇಖಕರೇ ಹೇಳಿರುವಂತೆ ಯಾರೋ ಹಿರಿಯರು ಹೇಳಿದ ಶ್ರೀಚಕ್ರೋಪಾಸಕರ ಜೀವನದ ಘಟನೆ ಅವಲಂಬಿಸಿ ಹೆಣೆದ ಕಾದಂಬರಿ. ತ.ರಾ.ಸು ಅವರು ಅರ್ಧ ಬರೆದು ಮುಗಿಸುವ ಹೊತ್ತಿಗೆ ಇಹ ಲೋಕ ತ್ಯಜಿಸಿದ ಕಾರಣ ಅವರ ಶಿಷ್ಯ ಪೂರ್ಣ ಗೊಳಿಸಿದರು. ಬಹುಶಃ ಇದಕ್ಕೆ ಈ ಪುಸ್ತಕ ರುಚಿಸಲಿಲ್ಲವೋ ಏನೋ , ಕಥೆ ತುಂಬಾ ಎಳೆದೆ ಹಾಗೆ ಆಯ್ತು , ಬೇಡದೆ ಇರುವ ವಿಷಯಗಳ ಧೀರ್ಘವಾಗಿ ಎಳೆದದ್ದು, ತಾಯಿ ಲಲಿತಾಂಬೆಗೆ ಎಲ್ಲರೂ ಮಕ್ಕಳು ಎಂದ ಮೇಲೂ ಸಹ ಒಬ್ಬರ ತಪ್ಪಿಗೆ ಇಡೀ ಕುಟುಂಬಕ್ಕೆ ಶಿಕ್ಷೆ ಕೊಡುತ್ತಾಳೆ ಎನ್ನುವಂತೆ ಬಿಂಬಿಸಿರುವುದು. ನಿಜಕ್ಕೂ ಮೊದಲು ಎಷ್ಟು ಕೂತೂಹಲ ಇತ್ತೋ ಅಷ್ಟೇ ಬೇಸರ , ಹಿಂಸೆ ಕೊನೆ ಕೊನೆಗೆ.
ತ.ರಾ.ಸು. ಅವರ 'ಶ್ರೀ ಚಕ್ರೇಶ್ವರಿ' ಕಾದಂಬರಿ ನಮ್ಮ ದೈವಿಕ ಶಕ್ತಿಯೊಂದಿಗಿನ ಸಂಬಂಧದ ಒಂದು ಆಳವಾದ ಅನ್ವೇಷಣೆ. ಇಲ್ಲಿ ವಿರೂಪಾಕ್ಷ ಶಾಸ್ತ್ರಿಗಳು ತಮ್ಮ ಮಗ ಶಂಕರ ಶಾಸ್ತ್ರಿಗಳು ಶ್ರೀಚಕ್ರೋಪಾಸನೆ ಮಾಡಬೇಕೆಂದು ಬಯಸುತ್ತಾರೆ. ಆದರೆ ದೈವಿಕ ಶಕ್ತಿಯೊಂದಿಗೆ ನಮ್ಮ ಸಂಬಂಧ ಎಷ್ಟು ಸೂಕ್ಷ್ಮವಾದದ್ದು ಎಂಬುದನ್ನು ಕಾದಂಬರಿ ತೋರಿಸುತ್ತದೆ.
ಕಾದಂಬರಿಯ ಅತ್ಯಂತ ಆಳವಾದ ಅಂಶವೆಂದರೆ - ದೈವಿಕ ಶಕ್ತಿಯು ನಮ್ಮ ಬಗ್ಗೆ ಎಲ್ಲವನ್ನೂ ಅರಿತಿರುವಾಗ, ನಾವು ಏನನ್ನು ಬೇಡಬೇಕು? ಏನು ಕೇಳಬೇಕು? ಈ ನಿಟ್ಟಿನಲ್ಲಿ ಕಾದಂಬರಿಯು ನಮ್ಮನ್ನು ಯೋಚಿಸುವಂತೆ ಮಾಡುತ್ತದೆ. ಅಲ್ಲದೆ, ನಮಗೆ ಏನು ಬೇಕು ಎಂದು ನಾವು ಹೇಳುವುದಕ್ಕಿಂತ, ಆ ಶಕ್ತಿಯ ಇಚ್ಛೆಗೆ ನಮ್ಮನ್ನು ಒಪ್ಪಿಸಿಕೊಡುವುದರಲ್ಲಿರುವ ವಿವೇಕವನ್ನು ತೋರಿಸುತ್ತದೆ.
ಕಾದಂಬರಿ ಪೂರ್ಣಗೊಳ್ಳುವ ಮುನ್ನವೇ ತ.ರಾ.ಸು ನಮ್ಮನ್ನಗಲಿದರು. ಅವರ ಆಪ್ತ ನಾ.ಪ್ರಭಾಕರ್ ಈ ಕೃತಿಯನ್ನು ಪೂರ್ಣಗೊಳಿಸಿದರು. ಈ ವಿಶಿಷ್ಟ ಕಾದಂಬರಿ ನಮ್ಮ ದೈನಂದಿನ ಜೀವನದಲ್ಲಿ ದೈವಿಕ ಶಕ್ತಿಯೊಂದಿಗಿನ ನಮ್ಮ ಸಂಬಂಧವನ್ನು ಪುನರ್ವಿಮರ್ಶಿಸಲು ಪ್ರೇರೇಪಿಸುತ್ತದೆ.
ತ.ರಾ.ಸು ಅವರು ಬರೆದ ಕೊನೆಯ ಕಾದಂಬರಿ ಶ್ರೀ ಚಕ್ರೇಶ್ವರಿ. ಸುಮಾರು 70 ಶೇಕಡ ಕಥೆಯನ್ನು ತ.ರಾ.ಸು ಬರೆದರೆ ಉಳಿದ ಕೊನೆಯ ಭಾಗವನ್ನು ಅವರ ಆಪ್ತರಾದ ಪ್ರಭಾಕರ ಅವರು ಪೂರ್ಣಗೊಳಿಸಿದ್ದಾರೆ. ಶ್ರೀ ಚಕ್ರೋಪಾಸನೆ, ದೇವಿ ಕ್ಷಮಾಪಣಾ ಸ್ತೋತ್ರದ ಮಹತ್ವವು ಈ ಕಾದಂಬರಿಯಲ್ಲಿ ಹೇಳಲಾಗಿದೆ. ವಿರೂಪಾಕ್ಷ ಶಾಸ್ತ್ರಿಗಳಿಗೆ ತಮಗೆ ಸಾಧ್ಯವಾಗದ ಶ್ರೀಚಕ್ರೋಪಾಸನೆ ತನ್ನ ಮಗನಾದ ಶಂಕರ ಶಾಸ್ತ್ರಿಗಳಾದರೂ ಮಾಡಬೇಕೆಂಬ ಮಹದಾಸೆಯಿಟ್ಟಿರುತ್ತಾರೆ. ಅದರಂತೆ ಶಂಕರ ಶಾಸ್ತ್ರಿಗಳಿಗೆ ಗುರುಗಳಾದ ವಿದ್ಯಾಶಂಕರರು ಶ್ರೀ ಚಕ್ರ ಉಪಾಸನೆ ಮಾಡಲು ಉಪದೇಶ ನೀಡುತ್ತಾರೆ. ಅದನ್ನು ಮಾಡುವಾಗ ಸಾಕ್ಷತ್ ದೇವಿಯು ಯಾವ ರೀತಿ ಶಾಸ್ತ್ರಿಗಳನ್ನು ಪರೀಕ್ಷೆಗೆ ಒಡ್ಡುತ್ತಾಳೆ, ಅದನ್ನು ಅವರು ಹೇಗೆ ಸಂಭಾಳಿಸುತ್ತಾರೆ ಎನ್ನುವುದೇ ಕಾದಂಬರಿಯ ಹಂದರ.
Chakreshwari by Ta. Ra. Su. captivated me with its intertwining threads of mystery and tragedy. It delves into the lives of a Purohit family whose yearning to worship the mighty Chakra inadvertently unleashes a curse that plagues their descendants.
A quick and compelling read that will stay with you long after the last page.
This entire review has been hidden because of spoilers.