Jump to ratings and reviews

ಅತೀತ - ಒಂದು ಅಲೌಕಿಕ ಪ್ರೇಮ ಕಥೆ | Ateeta - Ondu Aloukika Prema Kathe

ಶ್ರೀಯುತ ಅರ್ಜುನ್‌ದೇವಾಲದಕೆರೆ ಅಪ್ಪಟ ಮಲೆನಾಡಿನವರು. ನಮ್ಮೂರಿನವರು, ಪಶ್ಚಿಮಘಟ್ಟದ ಕಾಡೊಳಗಿಂದ ಎದ್ದು ಬಂದವರು. ಹಾಗಾಗಿ ಅವರಿಗೆ ಮಲೆನಾಡಿನ ಪಟ್ಟುವರಸೆಗಳೆಲ್ಲವೂ ಕರಗತ. ಮಲೆನಾಡಿನಲ್ಲೇ ಹುಟ್ಟಿದವರಿಗಲ್ಲದೆ ಬೇರೆಯವರಿಗೆ ಮಲೆನಾಡಿನ ವರ್ಣನೆ ಸಾಧ್ಯವಿಲ್ಲ. ಅಲ್ಲಿನ ಬದುಕು. ಹಳ್ಳಿ, ಗದ್ದೆ, ತೋಟ, ಶಿಕಾರಿ, ಅಲ್ಲಿನ ಬೆರಗು ಅಂಥವರೊಳಗೆ ಹಾಸುಹೊಕ್ಕಾಗಿರುತ್ತದೆ. ಮಲೆನಾಡಿನ ಕಾಡೊಳಗೆ ಭೋರ್ಗರೆದು ಸುರಿಯುವ ಮಳೆಗಾಲದ ಮಧ್ಯದ ಮಳೆಯ ವರ್ಣನೆಯನ್ನು ಬಯಲು ಸೀಮೆಯಲ್ಲಿ ಹುಟ್ಟಿದವರು ಎಂದಿಗೂ ವರ್ಣನೆ ಮಾಡಲು ಸಾಧ್ಯವಿಲ್ಲ. ಜೊತೆಗೆ ಅದನ್ನು ಕೃತಿಯೊಳಗೆ ತರಲು ಒಳನೋಟ ಬೇಕು. ಬರಹ ತಿಳಿದಿರಬೇಕು. ಅದಕ್ಕೊಂದು ರೂಪ ಕೊಡುವ ಶಕ್ತಿ ಬೇಕು. ಅರ್ಜುನ್ ಅವರಿಗೆ ಇದೆಲ್ಲವೂ ಕರಗತವಾಗಿದೆ. ಇದರಲ್ಲಿ ಮೇಲೆ ಹೇಳಿದ ಎಲ್ಲದರ ಸಾರವೂ ಇದೆ. ಕತೆ, ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುತ್ತದೆ. ಅಲ್ಲಿನ ಆಡುಭಾಷೆಯನ್ನು ಧಾರಾಳವಾಗಿ ಬಳಸಿಕೊಂಡಿದ್ದಾರೆ. ಅದು ಕೃತಿಗೊಂದು ಕಳೆ ತಂದುಕೊಟ್ಟಿದೆ. ಅರ್ಜುನ್ ಅವರಿಗೆ ಬರಹವೂ ಹೊಸತಲ್ಲ. ಈಗಾಗಲೇ ಎರಡು ಕೃತಿಗಳನ್ನು ಹೊರಗೆ ತಂದವರು ಅವರು. ಹೃನ್ಮಯಿ ಅವರ ಮೂರನೆಯ ಕೃತಿ. ಅವರಿಗೆ ಸಿಟಿಯ ಅನುಭವವೂ ಇದೆ. ಕಾಡುಬದುಕಿನ ಅನುಭವವೂ ಇದೆ. ಎರಡರ ಸಮ್ಮಿಳನ ಅವರ ಕೃತಿಯಲ್ಲಿ ಮೂಡಿ ಬಂದಿದೆ. ಹಾಗಾಗಿ ಹಳ್ಳಿ ಬದುಕಿನ ತಾಜಾತನದ ಶಿಕಾರಿಯಿಂದ ಹಿಡಿದು ಸಿಟಿ ಬದುಕಿನ ಜೊತೆಗೆ ವಾಮಾಚಾರದ ಭಯಾನಕ ಲೋಕದಲ್ಲೂ ನಿಮ್ಮನ್ನು ಸುತ್ತಾಡಿಸುತ್ತಾರೆ. ಮಲೆನಾಡಿನಲ್ಲೇ ಹುಟ್ಟಿ ಅದರ ಒಳಗೆ ನಿಂತು ನೋಡುತ್ತಾ ಬರೆಯುವವರು ಬೆರಳೆಣಿಕೆಯಷ್ಟು, ಇತ್ತೀಚೆಗೆ ಅವರ ಸಂಖ್ಯೆ ಸ್ವಲ್ಪಮಟ್ಟಿಗೆ ಹೆಚ್ಚುತ್ತಿದೆ. ಮಲೆನಾಡಿನ ಪರಿಚಯವೂ ಹೊರಜಗತ್ತಿಗೆ ಆಗುತ್ತಿದೆ. ಪಶ್ಚಿಮಘಟ್ಟ ಎಂದಿಗೂ ನಿಗೂಢವೇ. ಎಷ್ಟು ಜನ ಬರೆದರೂ ಅಲ್ಲಿರುವ ಸರಕು ಖಾಲಿಯಾಗುವುದಿಲ್ಲ. ಯುವ ಪೀಳಿಗೆಯ ಬರಹಗಾರರಲ್ಲಿ ಅರ್ಜುನ್ ದೇವಾಲದಕೆರೆಯವರು ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಅವರಿಂದ ಇನ್ನೂ ಬಹಳಷ್ಟನ್ನು ನಿರೀಕ್ಷಿಸಬಹುದು.
-ಗಿರಿಮನೆ ಶ್ಯಾಮರಾವ್

286 pages, Paperback

Published November 2, 2022

Loading...
Loading...

About the author

Arjun Devaladakere

3 books1 follower

Ratings & Reviews

What do you think?

Friends & Following

Create a free account to discover what your friends think of this book!

Community Reviews

5 stars
0 (0%)
4 stars
4 (100%)
3 stars
0 (0%)
2 stars
0 (0%)
1 star
0 (0%)
Displaying 1 - 3 of 3 reviews
Profile Image for Harish BS.
42 reviews2 followers
September 23, 2026
‘ಅತೀತ’ ಪುಸ್ತಕದ ಮೊದಲ 70 ಪುಟಗಳು ನನಗೆ ಸಂಪೂರ್ಣವಾಗಿ ಕ್ರಿಂಜ್ ಅನಿಸಿದವು. ಐದು ವರ್ಷದ ಹುಡುಗಿಗೆ ಪ್ರೀತಿ ಮೂಡುವುದು, ಮೊದಲ ಪಿರಿಯಡ್ಸ್‌ನಲ್ಲಿ ರಕ್ತ ಬರುವುದನ್ನು ಕಂಡು ಆಕೆಯ ಬಾಯ್‌ಫ್ರೆಂಡ್ ಸ್ಯಾನಿಟರಿ ಪ್ಯಾಡ್ ತಂದುಕೊಡುವುದು—ಇವೆಲ್ಲಾ ನನಗೆ ತುಂಬಾ ಅತಿರೇಕವಾಗಿ ಮತ್ತು ಅಸಹಜವಾಗಿ ಅನಿಸಿತು. ಇದು ಮೊದಲ 70 ಪುಟಗಳಲ್ಲಿ ಕಂಡುಬರುವ ಕ್ರಿಂಜ್ ಅಂಶಗಳಿಗೆ ಒಂದು ಉದಾಹರಣೆ ಮಾತ್ರ.

ಪಾತ್ರಗಳ ಹೆಸರುಗಳೂ ನನಗೆ ಅಷ್ಟಾಗಿ ಇಷ್ಟವಾಗಲಿಲ್ಲ. ವಿಶೇಷವಾಗಿ ನಾಯಕಿಯ ಹೆಸರು ತುಂಬಾ ಕ್ಲಿಷ್ಟವಾಗಿದ್ದು, ಆ ಹೆಸರಿನ ಕಾರಣಕ್ಕೇ ಆ ಪಾತ್ರದೊಂದಿಗೆ ನನಗೆ ಅಷ್ಟು ಕನೆಕ್ಟ್ ಆಗಲು ಸಾಧ್ಯವಾಗಲಿಲ್ಲ.

ಆದರೆ ಮೊದಲ 70 ಪುಟಗಳನ್ನು ದಾಟಿದ ನಂತರ ಕಥೆ ನಿಜವಾಗಿಯೂ ಆಸಕ್ತಿದಾಯಕವಾಗುತ್ತದೆ. ಬರವಣಿಗೆ ಅದ್ಭುತವಾಗಿದೆ ಮತ್ತು ಕಥೆಯೂ ಚೆನ್ನಾಗಿ ಮೂಡಿಬಂದಿದೆ. ಮಂತ್ರ ಮಾಟದ ಬಗ್ಗೆ ಲೇಖಕರು ಸಾಕಷ್ಟು ಸಂಶೋಧನೆ ಮಾಡಿದ್ದಾರೆ ಎಂಬುದು ಕಥೆಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ಆದರೆ ಕೆಲವೆಡೆ ಕಥೆಯನ್ನು ಅನಗತ್ಯವಾಗಿ ಎಳೆದಿದ್ದಾರೆ. ಆ ಭಾಗಗಳನ್ನು ಸ್ವಲ್ಪ ಕಡಿಮೆ ಮಾಡಿದ್ದರೆ ಪುಸ್ತಕ ಇನ್ನಷ್ಟು ಉತ್ತಮವಾಗಿರುತ್ತಿತ್ತು.

ಈ ಕೆಲವು ಸಮಸ್ಯೆಗಳನ್ನು ಬದಿಗಿಟ್ಟರೆ, ‘ಅತೀತ’ ಒಟ್ಟಾರೆ ಒಳ್ಳೆಯ ಓದು. ಮೊದಲ 70 ಪುಟಗಳು ಸ್ವಲ್ಪ ಕಷ್ಟವಾದರೂ, ಅದನ್ನು ದಾಟಿದ ನಂತರ ಕಥೆ ನಿಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ.
Profile Image for Vasanth.
144 reviews26 followers
September 23, 2026
“ಅತೀತ” - ಅಲೌಕಿಕ ಪ್ರೇಮ ಕಥೆಯೂ ಹೌದು, ಆ ಪ್ರೀತಿಯನ್ನು ಕಾಪಾಡಿಕೊಳ್ಳುಲು ಅಲೌಕಿಕ ಜಗತ್ತಿನೊಳಗೆ ನೆಡೆಯುವ ಹೋರಾಟದ ಕಥೆಯೂ ಹೌದು.

ನನಗೆ ಮೊದಲ ಐವತ್ತು ಪುಟಗಳು ಕಥೆ ಬಹಳ ನೀರಸವಾಗಿದೆ ಎನಿಸುವಂತೆ ಮಾಡಿದ್ದು ಇಲ್ಲಿದ್ದ ಪ್ರೇಮಕಥೆಯ ಆರಂಭ, ಎಷ್ಟೇ ಪ್ರಯತ್ನ ಪಟ್ಟರೂ ನಾಲ್ಕನೇ ವಯಸ್ಸಿನ ಹುಡುಗಿಗೆ ಪ್ರೇಮಾಂಕುರವಾಗುತ್ತೆ, ಹದಿನಾಲ್ಕನೇ ವಯಸ್ಸಿನವರೆಗೂ ಅದನ್ನೆಲ್ಲಾ ನೆನೆಪಿನಲ್ಲಿಟ್ಟುಕೊಂಡು ಇಷ್ಟ ಪಟ್ಟ ಹುಡುಗನಿಗೆ “ನನ್ನನ್ನು ಮದುವೆ ಆಗ್ತಿಯಾ?” ಎಂದು ಪತ್ರ ಬರೆಯುವ ಅಪಕ್ವವೆನಿಸುವ ಸನ್ನಿವೇಶಗಳು. ನಮ್ಮ ನಾಯಕಿಯ ಆ ವಯಸ್ಸಿಗೆ ಮೀರಿದ ಯೋಚನೆ ಮತ್ತು ವರ್ತನೆಯ ಹಿಂದೆ ಯಾವುದೋ ದೈವಿಕ ಅನೂಹ್ಯ ಶಕ್ತಿಯಿದೆ ಎಂದು ಲೇಖಕರು ಓದುಗರನ್ನ ಅಲ್ಲಲ್ಲಿ ಎಚ್ಚರಿಸುತ್ತಿದ್ದರೂ ಸಹ ನನಗೆ ಈ ಪ್ರೀತಿಯ ಆರಂಭ ನನ್ನನ್ನ ಮನವೊಲಿಸಲೇ ಇಲ್ಲ ಅಥವಾ ನನ್ನ ಮನಸ್ಸು ಅದನ್ನೊಪ್ಪಿಕೊಳ್ಳೋಕೆ ತಯಾರಿರಲಿಲ್ಲ. ಹೀಗಿದ್ದರೂ ಪುಸ್ತಕವನ್ನ ಪೂರ್ಣ ಓದುವಂತೆ ಮಾಡಿದ್ದು ಲೇಖಕರು ಮೊದಲ ಪುಟದಿಂದಲೇ “ಇದು ಕೇವಲ ಪ್ರೇಮಕಥೆಯಲ್ಲ, ಇಲ್ಲಿ ನೀವು ಕಾಣಬೇಕಾದ ಬೇರೆಯದೇ ಲೋಕವಿದೆ” ಎನ್ನುವಂತಹ nonlinear ನಿರೂಪಣೆ.

ಎಂಬತ್ತು ಪುಟಗಳ ನಂತರ ಕಥೆಯಲ್ಲೊಂದು ದೊಡ್ಡ ತಿರುವು, that’s when you enter the real world of ಅತೀತ. ಪ್ರೀತಿಸಿದ ಹುಡುಗಿಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಮ್ಮ ನಾಯಕ ಡಿಟೆಕ್ಟಿವ್ ಆಗುತ್ತಾನೆ, ಅಲೌಕಿಕ ವಿಷಯಗಳನ್ನು ತಿರಸ್ಕರಿಸುವ ಅವನು ಅಘೋರಿಯಾಗಿಯೂ ಬದಲಾಗುತ್ತಾನೆ. ಒಟ್ಟಿನಲ್ಲಿ, ಓದುಗನನ್ನು ಹಿಡಿದಿಟ್ಟು ಕೊನೆಯವರೆಗೂ ಓದಿಸಿಕೊಳ್ಳುವ ಎಲ್ಲಾ ಥ್ರಿಲ್ಲಿಂಗ್ ಅಂಶಗಳು ಈ ಕಾದಂಬರಿಯಲ್ಲಿವೆ.

ಮಲೆನಾಡಿನ ಚಿತ್ರಣ ಚೆನ್ನಾಗಿ ಮೂಡಿಬಂದಿದೆ. ಯಾರದ್ದೋ ಮೈಮೇಲೆ ದೇವರು ಬಂದು ಏನೋ ಹೇಳುತ್ತದೆ ಎನ್ನುವ ವಿಚಾರವನ್ನು ನಂಬುವುದು ಬಿಡುವುದು ವೈಯಕ್ತಿಕ ಆಯ್ಕೆಯಾದರೂ , ಚೌಡಮ್ಮ ದೇವಿರಮ್ಮ ಹಾಗೂ ಇತರ ದೈವ - ದೇವರುಗಳ ಪಾತ್ರಗಳು ಕಥೆಗೆ ಪೂರಕವಾಗಿವೆ. ಅಘೋರಿಗಳ ಲೋಕ, ಅವರ ಆಚಾರ ವಿಚಾರಗಳ ಚಿತ್ರಣವೂ ಅಷ್ಟೇ. “ಅತೀತ”ದ ಮುಂದುವರೆದ ಭಾಗವಾದ “ಅಭೀರ”ದಲ್ಲಿ ಅಘೋರಿಗಳ ಲೋಕ ಮತ್ತಷ್ಟು ಆಳವಾಗಿ ಪರಿಚಯವಾಗುತ್ತದೆ ಎನ್ನುವ ನಿರೀಕ್ಷೆಯಿದೆ. Overall, it is a good read.

- ವಸಂತ್
೩೧/೦೫/೨೦೨೬
Profile Image for Ashwini.
41 reviews4 followers
September 29, 2026
ಪ್ರೇಮ ಮತ್ತು ಅಲೌಕಿಕ ಲೋಕವನ್ನು ಹದವಾಗಿ ಬರೆಸಿ ಹೆಣದಂತ ಪುಸ್ತಕ. ಮೊದಲ ಅಂದು 75 ಪುಟಗಳು ಸ್ವಲ್ಪ ಆಸಕ್ತಿಕರವಾಗಿಲ್ಲ ಅನ್ನಿಸಿದರು. ಮಹಂತ ಒಮ್ಮೆ ತಾಂತ್ರಿಕ ಲೋಕಕ್ಕೆ ಕಾಲಿಡುತ್ತಿದ್ದಂತೆ ಪುಸ್ತಕ ನಮ್ಮನ್ನ ಆವರಿಸಿ ಬಿಡುತ್ತದೆ. ಒಂದು ಚಂದದ ಓದಿನ ಅನುಭವವನ್ನು ಕೊಟ್ಟಂತ ಪುಸ್ತಕ
Displaying 1 - 3 of 3 reviews