Jump to ratings and reviews
Rate this book

ಓಡಿ ಹೋಗಲು ಪ್ರೇಯಸಿಯ ಆಧಾರ್ ಕಾರ್ಡ್ ಕಡ್ಡಾಯ ಮತ್ತು ಇತರ ಕೇಸ್‌ಗಳು | Odi Hogalu Preyasiya Adhaar Kaddaya Mattu Itara Casegalu

Rate this book

88 pages, Paperback

Published May 6, 2026

Loading...
Loading...

About the author

Ankith C

1 book

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
4 (66%)
4 stars
1 (16%)
3 stars
1 (16%)
2 stars
0 (0%)
1 star
0 (0%)
Displaying 1 - 2 of 2 reviews
Profile Image for That dorky lady.
434 reviews86 followers
September 26, 2026
ನನ್ನ ಮಟ್ಟಿಗೆ ಈ ವರ್ಷದ ಉತ್ತಮ ಹತ್ತು ಓದುಗಳ ಪಟ್ಟಿಯೇನಾದರೂ ಮಾಡಿದರೆ, ಖಂಡಿತಾ ಅಂಕಿತ್ ಅವರ ಓಡಿ ಹೋಗಲು ಪ್ರೇಯಸಿಯ ಆಧಾರ್ ಖಡ್ಡಾಯ ಮತ್ತು ಇತರ ಕೇಸುಗಳು ಪುಸ್ತಕವೂ ಅದರಲ್ಲೊಂದಾಗಿರುತ್ತದೆ.


ಚಿಕ್ಕಮಕ್ಕಳಿಗೆ ಪಂಚತಂತ್ರ ಕತೆಗಳನ್ನು ಹೇಳುತ್ತಾ ಜೀವನದ ಪಾಠಗಳನ್ನು ಕಲಿಸುವಂತೆಯೇ, non-fiction ಓದು ಎಂದರೆ ಬೋರಿಂಗ್ ಎಂದು ಮೂಗು ಮುರಿಯುವ ನನ್ನಂತವರಿಗೂ ಸ್ವಲ್ಪವೂ ಬೇಸರವಾಗದಂತೆ ಕಾನೂನಿನ ಚಿಕ್ಕಪುಟ್ಟ ವಿಷಯಗಳನ್ನು ಕಥೆಗಳ ರೀತಿ ಹೇಳುತ್ತಾ ಅರ್ಥಮಾಡಿಸುವ ಅಂಕಿತ್ ಸಿ. ಅವರ ಸರಳ ಬರಹ ಶೈಲಿ ಮೆಚ್ಚುಗೆಯಾಯ್ತು.


ಇವರು ಸ್ವತಃ ಸಾಹಿತ್ಯಾಸಕ್ತರೂ ಕೂಡ ಅನ್ನೋದಕ್ಕೆ ಪುಸ್ತಕದಲ್ಲೇ ಸಾಕಷ್ಟು ಉದಾಹರಣೆಗಳಿವೆ. ಅವರ ಸಾಹಿತ್ಯದ ಓದು, ವಿದ್ಯಾಭ್ಯಾಸ ಎರಡರ ಒಳ್ಳೆಯ ಕಾಂಬಿನೇಷನ್ ಇಲ್ಲಿರುವ ಕೇಸುಗಳು ಮತ್ತು ಅವುಗಳನ್ನು ಪ್ರಸ್ತುತಪಡಿಸಿದ ರೀತಿಯಲ್ಲಿ ಕಾಣಿಸುತ್ತದೆ.


ಪ್ರತಿ ಕೇಸಿನ ನಂತರ ಅಗತ್ಯವಾಗಿ ಗಮನಿಸಬೇಕಾದ ವಿಷಯವನ್ನು ಚಿಕ್ಕದಾಗಿ ಹೈಲೈಟ್ ಮಾಡಿರುವ ರೀತಿ ಚೆನ್ನಾಗಿದೆ. ಪ್ರತಿ ಕೇಸು ಅಥವಾ ಕಥೆಗೆ ನೀಡಿರುವ ಹೆಡಿಂಗ್‌ಗಳು ಗಮನ ಸೆಳೆಯುವಂತಿವೆ.

I specially liked 'ಸಮುದ್ರಯಾನದಲ್ಲಿ ತರುಣನನ್ನು ಕೊಂದು ತಿಂದ್ರು' & 'ಓಡಿ ಹೋಗಲು ಪ್ರೇಯಸಿಯ ಆಧಾರ್ ಖಡ್ಡಾಯ' . ಏನಪ್ಪ ಇದು,ರೋಚಕ ವಿಷಯ! ಅಂತ ಒಂದಾದಮೇಲೊಂದು ಕೇಸ್ ಓದುತ್ತಾ ಪುಸ್ತಕ ಮುಗಿಯುವುದೇ ಗೊತ್ತಾಗೋದಿಲ್ಲ.

ಲೇಖಕ ವಕೀಲರು ಇದನ್ನು ಒಂದು ಪುಸ್ತಕಕ್ಕೆ ಸೀಮಿತವಾಗಿಸದೇ, ಒಂದು ಸರಣಿಯ ರೂಪದಲ್ಲಿ ಹತ್ತಾರು ಇಂಥದೇ ಪುಸ್ತಕಗಳ ಮೂಲಕ ಇನ್ನಷ್ಟು ಕೇಸುಗಳನ್ನು ನಮಗೆ ಪರಿಚಯಿಸಲಿ ಎಂದು ಆಶಿಸುವೆ.

Liked it very much.
Profile Image for Vasanth.
146 reviews26 followers
September 26, 2026
ನಾನೊಂದು ವಿಷಯ confess ಮಾಡ್ಕೊಳ್ಲೇಬೇಕು. ಫರ್ಸ್ಟೈಮ್ ನನಗೆ ಈ ಪುಸ್ತಕ ಕಣ್ಣಿಗೆ ಬಿದ್ದಾಗ ಟೈಟಲ್ ಇಷ್ಟವಾಗಿರ್ಲಿಲ್ಲ. ಇದೇನು ‘ಪ್ರೇಯಸಿ’ ಅಂತೆ, ‘ಓಡಿಹೋಗೋಕೆ ಆಧಾರ್‌ಕಾರ್ಡ್’ ಅಂತೆ ಅಂದುಕೊಂಡು ಸುಮ್ನೆ ಆಗಿದ್ದೆ. ಆದರೆ ನನಗೆ ಪರಿಚಯವಿರುವ ಓದುಗರು ಓದಿ ಕೊಟ್ಟ ಒಳ್ಳೆಯ ಅಭಿಪ್ರಾಯವೇ ನಾನು ಈ ಪುಸ್ತಕ ಓದುವಂತೆ ಮಾಡ್ತು. ಮುಖಪುಟ ಮತ್ತೆ ಶೀರ್ಷಿಕೆಯ ಆಧಾರದ ಮೇಲೆ ಪುಸ್ತಕವನ್ನ ಓದಬೇಕೋ ಬೇಡವೋ ಅನ್ನೋ ನನ್ನ ಲೆಕ್ಕಾಚಾರ ಇನ್ಮುಂದೆ ಕೆಲಸಕ್ಕೆ ಬರಲ್ಲ ಅನ್ಸುತ್ತೆ. ಅದು ಹಾಗಿರ್ಲಿ. 😄

ಇಪ್ಪತ್ನಾಲ್ಕು ವರ್ಷದ ಕಾನೂನು ವಿದ್ಯಾರ್ಥಿ ಅಂಕಿತ್.ಸಿ ಅವರ “ಓಡಿ ಹೋಗಲು ಪ್ರೇಯಸಿಯ ಆಧಾರ್ ಕಡ್ಡಾಯ” ನೈಜ ಘಟನೆಗಳು ಮತ್ತು ಕಾನೂನು ಪ್ರಕರಣಗಳ ಆಧಾರಿತ ಕಥಾನಕ ಪುಸ್ತಕ.

ಈ ಕಥೆಗಳ ಮೂಲಕ ಕಾನೂನಿನ ಚೌಕಟ್ಟನ್ನು ಬಹಳ ಸರಳವಾಗಿ ಅರ್ಥಮಾಡಿಸುವ ಪ್ರಯತ್ನ ಇಲ್ಲಾಗಿದೆ. ಮತ್ತು ಆ ಪ್ರಯತ್ನದಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ ಅಂತಲೂ ಹೇಳಬಹುದು. ಕಾನೂನಿನ ಕತೆಗಳು ಅಂದಾಕ್ಷಣ ‘ಆ ಆಕ್ಟ್, ಈ ಸೆಕ್ಷನ್’ ಅಂತ ಟೆಕ್ನಿಕಲ್ ಆಗಿ ಹೋಗದೆ, ಕಾನೂನಿನ ವಿಷಯವೊಂದನ್ನು ಪರಿಚಯಿಸುವ ಮುನ್ನ ಅದಕ್ಕೊಂದು ಹಿಂದಿನ ಪ್ರಕರಣವನ್ನೋ ಅಥವಾ ತಮ್ಮ ಜೀವನದ ಘಟನೆಯನ್ನೋ ಅಡಿಪಾಯವಾಗಿ ಬಳಸಿಕೊಂಡಿರುವುದು ಈ ಪುಸ್ತಕದ ವಿಶೇಷತೆ. ಇದು ಲೇಖಕರ ಸೃಜನಶೀಲತೆಗೆ ಹಿಡಿದ ಕನ್ನಡಿ ಕೂಡ.

ಎಂಬತ್ನಾಲ್ಕು ಪುಟಗಳ ಚಿಕ್ಕ ಪುಸ್ತಕ. ಆದರೆ ಇದರೊಳಗಿರುವ ಮಾಹಿತಿ ದೊಡ್ಡದು - ಮುಖ್ಯವಾಗಿ, ಸಾರ್ವಜನಿಕರೆಲ್ಲರೂ ತಿಳಿದುಕೊಳ್ಳಬೇಕಾದಂತಹ ಮಾಹಿತಿ.

- ವಸಂತ್
25/09/2026
Displaying 1 - 2 of 2 reviews