Jump to ratings and reviews
Rate this book

Nee Hinga Nodabyada Nanna

Rate this book
Nee Hinga Nodabyaada Nanna [Paperback] Ravi Belegere

419 pages, Paperback

First published September 1, 2003

67 people are currently reading
747 people want to read

About the author

Ravi Belagere

112 books420 followers
Ravi Belagere was a writer and journalist based in Bengaluru, Karnataka, India. He was the editor of Kannada language tabloid Hi Bangalore,which he founded along with R. T. Vittalamurthy, Ra. Somanath, Jogi, and I. H. Sangam Dev. He used to run a show called Crime Diary, which used to air on a regional Kannada-language channel ETV Kannada, that focused on crime in Karnataka, and he started Prarthana, a school for children in Bangalore.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
103 (53%)
4 stars
59 (30%)
3 stars
21 (10%)
2 stars
3 (1%)
1 star
8 (4%)
Displaying 1 - 20 of 20 reviews
Profile Image for Spoorthi  Chandrashekhar.
62 reviews16 followers
November 27, 2024
ಪ್ರೀತಿ ಬದುಕಿನ ಅಸ್ಮಿತೆಯಾ? ಪ್ರೀತಿ ಕೇವಲ ನೆಪವಾ? ಗರ್ವ? ಅಥವಾ ಸಿಗಲೇಬೇಕು ಎನ್ನುವ ಅಂಶವಾ?
"ಹೇಳಿ ಹೋಗು ಕಾರಣ" ಆದಮೇಲೆ ರವಿ ಬೆಳಗೆರೆ ಅವರ ಮತ್ತೊಂದು ಕಾಡುವ ಕಾದಂಬರಿ ಎಂದರೆ ಅದು "ನೀ ಹಿಂಗ ನೋಡಬ್ಯಾಡ ನನ್ನ".
ಪ್ರೀತಿ ಸಮುದ್ರವಾ? ಮೌನದ ಸರೋವರವಾ? ನದಿಯಾ? ಇಲ್ಲ ಕಳೆದು ಹೋದ ಕನಸಾ? ಅಬ್ಬಾ! ದೀರ್ಘ ಕಾಲದವರೆಗೂ ಕಾಡುವ ಪುಸ್ತಕ.
ಶಿಶಿರ ಚಂದ್ರ, ಶ್ರಾವಣಿ ನಮ್ಮನ್ನ ಓದು ಮುಗಿಯುವ ತನಕ ಕಾಯುವ, ಕಾಡುವ ಪಾತ್ರಗಳು. ಇನ್ನೂ ಇದರ ಮಧ್ಯೆ ರೌದ್ರವಾಗಿ ನರ್ತಿಸುವ ಜಗನ್ಮೋಹನ್ ಒಂದೆಡೆಯಾದರೆ, ಕಾಷ್ಠ ಮೌನ ಗೌರಿಯಲ್ಲಿ ಸೆಳೆಯುವ ಮೃಣಾಲಿನಿ ಇನ್ನೊಂದೆಡೆ, ದೇವತೆಗಳು ಕುಡಿಯಬಹುದಾದ ಕಾಫಿ ಗಿರಿಬಾಬು ಮಾಡಿಕೊಡುವನು, the tough lady ಶರ್ಮಿಳಾ ಇನ್ನೊಂದೆಡೆ ಯಾವುದೋ ಪ್ರೀತಿ, ಮಮಕಾರಕ್ಕೆ ಹತೋರೆಯುವಳು. ಇವರೆಲ್ಲರ ಮಧ್ಯೆ ಪ್ರಶಾಂತತೆಯ ಪ್ರಶಾಂತಿನಿ ಹಿಗೂ ಗೋಮತಿ ನಮ್ಮೆಲ್ಲರ ಮನ ಸೆಳೆಯುವಳು, ಹೌದು ದೈವಸಹಾಯಂ ನಮ್ಮನ್ನು ನೋಡುವನು.
Why ರವಿ ಬೆಳಗೆರೆ ಅಂದರೆ ಆತ ಕಥೆಯನ್ನು ಬಿಗಿಯಾಗಿ ಹೆಣೆದು, ಓದುಗರನ್ನು ಕಟ್ಟಿ ಕುರಿಸುವ ಮಹಾನ್ ಚಾಣಕ್ಯ, that's why I always say you can forget him but you can't neglect him.
೩೦೦ ಪುಟಗಳು ಆದಮೇಲೆ ನಿಜವಾದ ತ್ರಿಲ್. ನನಗೆ ಪುಸ್ತಕಕ್ಕಿಂತ ಹೆಚ್ಚಾಗಿ ಯಾವುದೋ ಸೀರೀಸ್ ನೋಡ್ತಿದ್ದೀನಿ ಅನ್ನೋ ಸೆಳೆತ, ಕೆಲವು ಸಂದರ್ಭಗಳು ನನ್ನ ನಿದ್ದೆಯನ್ನೇ ಕೆಡಿಸಿದವು, ಇನ್ನೋ ಕೆಲವು ನನಗೆ ಭಯ ಹುಟ್ಟಿಸಿದವು. ಎಷ್ಟೋ ಪುಟಗಳು ತ್ರಿಲ್ ಅನ್ನಿಸಿದಾಗ ಕಿರುಚಿದ್ದು ಉಂಟು. ಒಟ್ನಲ್ಲಿ ನನ್ನ ಪ್ರತಿ ನಿಮಿಷವನ್ನು ಸಾರ್ಥಕಗೊಳಿಸಿದ ಕಾದಂಬರಿ.
ನನ್ನದೇ ಪುಸ್ತಕ ಬಿಡುಗಡೆ ಮಾಡಿದ ನಂತರ ಒಂದು ಹೊಸ ಓದು‌. ಐದು ತಿಂಗಳಿಂದ ಬಿಟ್ಟ ಹವ್ಯಾಸ ಈಗ ಮತ್ತೆ ಶುರು. ವರ್ಷದ ಮೊದಲ ಓದು ಶುರುವಾಗಿದೆ.
ಈ ಪುಸ್ತಕವನ್ನು ಕೊಂಡು ಓದಿ, ನಿಮಗೂ ರವಿ ಬೆಳಗೆರೆ ಅವರ ಬರಹಗಳು ಹುಚ್ಚು ಹಿಡಿಸಲಿ, ಏಕೆಂದರೆ ಯಾರು ಕೊಡದ ಪ್ರೀತಿ ಒಮ್ಮೊಮ್ಮೆ ಇಂಥಹಾ ಕಾದಂಬರಿಗಳು ನಮಗೆ ಪ್ರೀತಿಸಲು ಹೇಳಿಕೊಡುತ್ತದೆ. ನೆನಪಿರಲಿ ಇದು ಪ್ರೇಮ ಪುಸ್ತಕ.

ನನಷ್ಟಿದ ಸಾಲುಗಳು:
ಪ್ರೀತಿಯೆಂಬುದು ನಿಯತ್ತು ಬೇಡುತ್ತದೆ, ಪ್ರಾಮಾಣಿಕತೆ ಬೇಡುತ್ತದೆ. ಹಗಲು-ರಾತ್ರಿ ದುಡಿದರೂ, ಕಟ್ಟಲಾಗದಂಥ ಕಂದಾಯ ಕೇಳುತ್ತದೆ.

ದೇವರನ್ನ ಪ್ರೀತಿಸೋಕೆ, ಪ್ರಾರ್ಥಿಸೋಕೆ ದೇಗುಲವೇ ಬೇಕಾ? ಪ್ರೀತಿಯ ಹಾಗೇನೇ ದೇವರು ಅನ್ನೋದು ಕೂಡ ಕೇವಲ ವಿಶ್ವಾಸ. ಪ್ರೀತಿಯನ್ನ, ದೇವರನ್ನ ಕಣ್ಣಿಂದ ನೋಡಕ್ಕಾಗಲ್ಲ. ಕೇವಲ ಫೀಲ್ ಮಾಡಬಹುದು. ಪಶ್ಚಾತ್ತಾಪ ಪಡೋದು ಕೂಡ ಅಷ್ಟೇ. ಅದಕ್ಕೆ ಕನ್ಫೆಷನ್ ಬಾಕ್ಸ್ ನ ಹಂಗು ಬೇಕಾಗಿಲ್ಲ.

ಜಗತ್ತಿನ ಯಾವ ಗಂಡಸು ಒಬ್ಬ ಹೆಂಗಸಿನೆಡಗಿನ ತನ್ನ ಭಾವನೆಗಳಿಗೆ "ಮಹಾನದಿ" ಅನ್ನೋ ಹೆಸರನ್ನು ಇಟ್ಟಿರಲಾರ. ನದಿಗೆ ಕೇವಲ ಪ್ರವಾಹ ಇರುವುದಿಲ್ಲ. ಅದರದು ಬರಿ ಸೆಳೆತವಲ್ಲ. ನದಿಗೊಂದು ಹರಹು, ಒಂದು ವಿಸ್ತಾರ ಇರುತ್ತದೆ. ನದಿ ಬದಲಾಗುತ್ತದೆ. ನದಿ ಬಯಲಾಗುತ್ತದೆ. ನದಿ ಗುಪ್ತಗಾಮಿನಿ. ನದಿ ಧುಮ್ಮುಕ್ಕಿದರೆ ಜಲಪಾತ. ನದಿ ಸುಮ್ಮನಿದ್ದರೆ ಮಹಾ ಗಂಭೀರ. ನದಿ ಭೋರ್ಗರೆದರೆ ರುದ್ರ ರುದ್ರ.

ಜೈಲಿನ ಹೊರಗಿರುವ ಕೋಟ್ಯಂತರ ಕೆಟ್ಟವರಿಗಿಂತ ಅಲ್ಲಿರುವ ಕೆಟ್ಟವರು ಮೇಲು. ಅವರು ಎಷ್ಟು ಕೆಟ್ಟವರೆಂಬುದು ಸಾಬೀತಾದರೂ ಆಗಿರುತ್ತದೆ.

ಅಳುವು ಕೂಡ ಮತ್ತೊಂದು ಜೀವಿಯ ಸಾಂಗತ್ಯ ಬೇಡುತ್ತದೆ. ಅಳುವುದಕ್ಕೊಂದು ನಂಬಿಗಸ್ಥ ಹೆಗಲಾದರೂ ಬೇಕು ಈ ಜಗತ್ತಿನಲ್ಲಿ.

ಆಡಬೇಕಾದ ಮಾತು ತಡವಾದಷ್ಟು ಸಂಬಂಧಕ್ಕೆ ನಂಜೇರುತ್ತ ಹೋಗುತ್ತದೆ.
Profile Image for Gowthami.
31 reviews9 followers
July 13, 2023
"ದೇವತೆಗಳು ಮಾತ್ರ ಕುಡಿಯುವಂತಹ ಕಾಫಿ" ☕ ಹೀಗೆ ಒಂದೊಳ್ಳೆ ಕಾಫಿಯ ಜೊತೆ ಶುರುಮಾಡಿದ ಈ ಪುಸ್ತಕವನ್ನ ಮುಗಿಸಿದ್ದು ಸಹ ಕಾಫಿಯ ಜೊತೆಗೆ.

ರವಿ ಬೆಳಗೆರೆ ಸರ್ ಅವರ ಬರಹ ಅಂದರೆ ಅಲ್ಲಿ ರೋಮಾಂಚನಕಾರಿ ಕಥಾ ವಸ್ತು , ನಿಗೂಢತೆ , ಪ್ರೀತಿ , ಮಾನವ ಸಂಬಂಧಗಳಿಗೆ ಪ್ರಾಮುಖ್ಯತೆ ಇಲ್ಲದೆ ಇರುವುದಿಲ್ಲ. ಓದುವಾಗ ಪಾತ್ರಗಳನ್ನು , ದೃಶ್ಯಗಳನ್ನು ಎಷ್ಟು ಚೆನ್ನಾಗಿ ಕಟ್ಟಿ ಕೊಡ್ತಾರೆ ಅನ್ನೋದು ಗೊತ್ತಿರೋ ವಿಷಯವೇ.

ಇಲ್ಲೂ ಹಾಗೆ ಒಬ್ಬ ಶಿಶಿರಚಂದ್ರ ನಂತಹ ಗಟ್ಟಿ ಹುಡುಗ ,ಒಂದು ಹುಡುಗಿಯ ಒಲಿಸಿಕೊಳ್ಳುವ ಸಲುವಾಗಿ ಕಟ್ಟಿದ ಬೆಟ್ ಗೆಲ್ತಾನ??? ಅಷ್ಟು ಟಫ್ ಗರ್ಲ್ ಎನಿಸಿಕೊಂಡ ಶ್ರಾವಣಿ ಸಿಗ್ತಾಳ???? ಹೀಗೇ ಇಲ್ಲಿಂದ ಶುರುವಾಗುವ ಕಥೆ ಎಲ್ಲೆಲ್ಲೋ ತಿರುವು ಪಡೆದು , ಅನೇಕ ಮಾನವ ಸಂಬಂಧಗಳ ನಡುವೆ ಉಂಟಾಗುವ ಸ್ನೇಹ , ನಿಸ್ವಾರ್ಥ ಪ್ರೀತಿ , ಮಮತೆ, ಸೇಡು .... ಅದೆಲ್ಲವನ್ನು ಶಿಶಿರ ದಾಟಿ ತನ್ನ ಗುರಿ ತಲುಪುತ್ತಾನ ????
ಇದು ತಿಳಿಯ ಬೇಕೆಂದರೆ ಪುಸ್ತಕ ಒಮ್ಮೆ ಓದಲೇ ಬೇಕು .

ಕೊಂಚ ದೊಡ್ಡ ಕಾದಂಬರಿ, ರವಿ ಬೆಳೆಗೆರೆ ಸರ್ ಅವ್ರ ರಿಪೀಟ್ ಮೋಡ್ ಇರುಸು ಮುರುಸು ಅನ್ನಿಸಿದರೂ ಸಹ ಕೊನೆ ತನಕ ಓದಿಸಿಕೊಂಡು ಹೋಗುವ ಗಟ್ಟಿ ತನ ರವಿ ಸರ್ ಬರವಣಿಗೆಗೆ ಚೆನ್ನಾಗಿ ಗೊತ್ತು .
23 reviews9 followers
April 30, 2022
ರವಿ ಬೆಳಗೆರೆ ಅವರ ಪುಸ್ತಕದಲ್ಲಿ ಸಾಮಾನ್ಯವಾಗಿ ಯಾವುದೇ ವಿಷಯ ಆದರೂ ಅದಕ್ಕೆ ತೀವ್ರತೆ ಜಾಸ್ತಿ ಇರತ್ತೆ. ಅದು ಪ್ರೀತಿ ಇರಲಿ ಕ್ರೌರ್ಯ ಇರಲಿ.
ಹಾಗೇ ಇಲ್ಲೂ ಕೂಡ ಒಂದು ಉತ್ಕಟ ಪ್ರೀತಿಯ ಕಥೆ ಇದೆ.

ಶಿಶಿರ ಚಂದ್ರ ಬಡವ, ವೇಶ್ಯೆಯ ಮಗ ಹಾಗೂ ತಂದೆ ಯಾರು ಅಂತ ಗೊತ್ತಿಲ್ಲದವನು. ಬಹಳ ಬುದ್ದಿವಂತ. ಆದರೆ ತೀರಾ ದುಡ್ಡಿನ ಅವಶ್ಯಕತೆ ಬಿದ್ದಾಗ ಸರಗಳ್ಳತನ ಮಾಡುವವನು. ಅಂಥವನು ಕಾಲೇಜಿನಲ್ಲಿ ಶ್ರಾವಣಿ ಅನ್ನೋ ಅಘರ್ಭ ಶ್ರೀಮಂತ ಹುಡುಗಿಯನ್ನು ಇನ್ನು ಮೂರು ವರ್ಷದಲ್ಲಿ ನನ್ನನು ಪ್ರೀತಿಸುವಂತೆ ಮಾಡುತ್ತೇನೆ ಅಂತ ಬೆಟ್ ಕಟ್ಟುತ್ತಾನೆ.

ಆದರೆ ತನ್ನ ಪ್ರೇಮ ನಿವೇದನೆಯ ಮೊದಲ ಹೆಜ್ಜೆಯಲ್ಲೇ ಅವನು ಸರಗಳ್ಳ ಅಂತ ಶ್ರಾವಣಿ ಇಂದ ತಿರಸ್ಕೃತನಾಗುತ್ತಾನೆ.
ಬೆಟ್ ಗೆಲ್ಲಲ್ಲು ಅವನು ಏನೆಲ್ಲಾ ಮಾಡುತ್ತಾನೆ. ಇದೊಂದು ಪ್ರೀತಿಯ ವಿಷಯದಲ್ಲಿ ಎಷ್ಟೆಲ್ಲ ಜನರ ಜೀವನ ಬದಲಾಗುತ್ತೆ ಅನ್ನೋದು ಕಥೆಯ ಓಘ.

ಇಲ್ಲಿ ಹೆಜ್ಜೆ ಹೆಜ್ಜೆಗೂ ತಿರುವುಗಳಿವೆ, ರೋಚಕತೆ ಇದೆ ಕಥೆಯ ಗಟ್ಟಿ ಹಿಡಿತ ಇದೆ ಮತ್ತು ಪಾತ್ರಗಳ ಕಾಡುವಿಕೆ ಇದೆ. ಮುಂದೆ ಏನು ಅನ್ನೋ ಕುತೂಹಲ ಇದೆ.

ಒಂದು ಉತ್ತಮ ಓದಿಗೆ ಇಷ್ಟು ಸಾಕಲ್ಲವೇ.

ಕೊನೆಗೊಂದು ನನಗೆ ತುಂಬಾ ಇಷ್ಟ ಆದ ಸಾಲುಗಳು ನೀ ಹೀಂಗ ನೋಡಬ್ಯಾಡ ಪುಸ್ತಕದಿಂದ.

" ಅವರನ್ನು ನಾವೆಷ್ಟೇ ಪ್ರೀತಿಸಿದರೂ, ಏನೇ ಗೌರವದಿಂದ ಕಂಡರೂ ಅಮ್ಮಂದಿರಿಗೆ ಒಂದು ಬದುಕು ಖಾಸಗಿಯಾದ್ದು ಅಂತ ಇರುತ್ತೆ. ಕಾಮನೆಗಳಿರ್ತವೆ. ವಾಂಛೆಗಳಿರ್ತವೆ. ಅರ್ಧಕ್ಕೆ ಮುರುಟಿ ಹೋದ ಆಸೆಗಳಿರ್ತವೆ. ಅದನ್ನು ಅರ್ಥ ಮಾಡಿಕೊಳ್ಳದೆ, ಅವುಗಳನ್ನು ಈಡೇರಿಸಿಕೊಳ್ಳದೇನೆ ಅವರು ಸತ್ತು ಹೋಗಲಿ, ಸತ್ತು ಹೋಗುವ ತನಕ ಅವರು ಅಮ್ಮನ ರೋಲ್ ಪ್ಲೇ ಮಾಡುತ್ತಲೇ ಇರಲಿ ಅಂತ ಮಕ್ಕಳು ಬಯಸ್ತ ಇರ್ತಾರೆ. ಅಮ್ಮನಿಗೆ ಅಂತ ಒಂದು ಇಮೇಜ್ ಕೊಟ್ಟು ಕೂಡಿಸಿಬಿಡ್ತಾರೆ. ಅದರಾಚೆ ಅಮ್ಮನಿಗೊಂದು ತನ್ನದೇ ಆದ ಬದುಕು ಇದೆ. ಅದನ್ನ ನಾವು ಒಪ್ಪಿಕೊಳ್ಳೋದೇ ಇಲ್ಲ. "
Profile Image for Vishal Vishu.
73 reviews3 followers
February 7, 2017
When one looks at the cover of the book and the title one would feel that this is just going to be a romantic melo drama of a love bound couple.
The novel also begins on the same lines where in the male protagonist Shishir who is the intelligent,cunning youngster wants to engage with a charming and beautiful Shravani .
There is so much tension created in their relationship journey which is devoid of any kind of lust and a unique bonding of love. Just when I thought the plot will go on in the same lines comes the most unexpected twist.
Here comes the hidden face of the novel , the mystery, the murder, the revenge, the desire, the lust for power and chunk of heart shrilling realities.
Would not want to add more as the end is something none would be able to predict when one starts reading.
Ravi BELAGERE, you beauty. He has penned down a master piece that would compete with the thrillers of Sidney Sheldon, Robert Ludlum, Alistair Maclean and many more. The power of the words he has used to engage the readers is extra ordinary and lives one spell bound.
MUST READ FOR ANYONE WHO READS KANNADA
Profile Image for Mallikarjuna M.
51 reviews14 followers
December 15, 2023
ಬುದ್ಧಿವಂತ ಹುಡುಗ ಶಿಶಿರಚಂದ್ರ ಶ್ರೀಮಂತ ಸುಂದರ ಹುಡುಗಿ ಶ್ರಾವಣಿಯನ್ನು ಪ್ರೀತಿಸುವ ಬೆಟ್ ಕಟ್ಟಿ, ನಂತರ ನಡೆಯುವ ಗೊಂಚಲು-ಗೊಂಚಲು ಘಟನೆಗಳನ್ನು, ಮನುಷ್ಯ ಪ್ರಪಂಚದ ಅರಿಷಡ್ವರ್ಗಗಳೊಂದಿಗೆ ಬಂಧಿಸಿ ಅಕ್ಷರ ರಾಕ್ಷಸ ರವಿ ಬೆಳಗೆರೆಯವರು ಉತ್ಕಟವಾಗಿ ಅತಿ ತೀವ್ರತೆಯಿಂದ ಜೋಡಿಸಿರುವ ಕಾದಂಬರಿ ಇದಾಗಿದೆ. ಕಾದಂಬರಿ ದ್ವೀತಿಯಾರ್ಧದಲ್ಲಿ ಸ್ವಲ್ಲ ಟ್ವಿಸ್ಟ್ ಗಳು ಜಾಸ್ತಿಯಿದ್ದು ಕಾದಂಬರಿ ದೀರ್ಘವಾಯಿತು ಎನಿಸಿದರೂ ಬೆಳಗೆರೆಯವರು ಬಳಸಿರುವ ಸುಂದರ ಕನ್ನಡ ಓದಿಸಿಕೊಂಡು ಹೋಗುತ್ತದೆ 💛❤️
Profile Image for Bhumika Rao.
17 reviews2 followers
July 1, 2023
ರವಿ ಬೆಳಗೆರೆಯವರ 'ಹೇಳಿ ಹೋಗು ಕಾರ��' ಓದಿದ ಬಳಿಕ 'ನೀ ಹಿಂಗ ನೋಡಬ್ಯಾಡ ನನ್ನ' ಪುಸ್ತಕವನ್ನು ಓದಲು ನನ್ನ ಸ್ನೇಹಿತೆ ಹೇಳಿದಳು. ಈ ಪುಸ್ತಕ 'ಹೇಳಿ ಹೋಗು ಕಾರಣ'ದ ಕಥಾವಸ್ತುವಿನಿಂದ ದೂರವಿದ್ದರೂ ಪ್ರೀತಿಯ ತೀಕ್ಷ್ಣತೆ ಒಂದೇ.

"18ರ ವಯಸ್ಸು ಹುಚ್ಚು ಕೋಡಿ ಮನಸ್ಸು" ಎಂಬಂತೆ ಶುರುವಾಗುವ ಈ ಕಥೆ, ಮುಂದೆ ಹೋಗುತ್ತ ಬಹಳ ಗಂಭೀರ ಆಯಾಮ ಪಡೆದುಕೊಳ್ಳುತ್ತದೆ. ಒಂದು ಹುಡುಗಾಟಿಕೆಯ ಬೆಟ್ ನಿಂದ ಶುರುವಾದ ಸಂಬಂಧ ಕಥೆ ಮುನ್ನಡೆದಂತೆ ಒಂದು ಸುಂದರ ಅನುಬಂಧವಾಗುತ್ತದೆ. ಕಿರಿಯ ವಯಸ್ಸಿನ ಶ್ರಾವಣಿಯ ಪ್ರಬುದ್ಧತೆ, ಕ್ರೂರ ಜಗತ್ತಿನಲ್ಲಿ ಒಬ್ಬಂಟಿಯಾಗಿ ಬೆಳೆದು ನಿಂತ ಶಿಶಿರರ ವ್ಯಕ್ತಿತ್ವಗಳು ಬಹಳ ಇಷ್ಟವಾಗುತ್ತದೆ. ಇವರ ಜೊತೆಗೆ ಬರುವ ಪಾತ್ರಗಳು, ಸನ್ನಿವೇಶಗಳು ಊಹಿಸಲಸಾಧ್ಯವಾದ ತಿರುವುಗಳನ್ನು ಪಡೆಯುತ್ತಾ ಹೋಗುತ್ತದೆ.

ಶ್ರಾವಣಿ ಎಂಬ ಸುಂದರ ಜಾಣೆಗೆ ಶಿಶಿರಚಂದ್ರ ಎಂಬ ಚಾಣಾಕ್ಷ್ಯನ ಪರಿಚಯ ಅದ್ಯಾವಾಗ ಪ್ರೇಮಕ್ಕೆ ತಿರುಗುತ್ತದೆ ಎಂಬುದು ತಿಳಿಯದಂತೆ, ಓದುಗನ ಮನಸ್ಸಿನ ಮೂಲೆಯಲ್ಲಿ ಇವರ ಪ್ರೀತಿ ಸಫಲ್ಯಗೊಳ್ಳಲಿ ಎಂಬಂತಾಗುವಂತೆ ಬರೆದಿದ್ದರೆ ಲೇಖಕರು.
ಪ್ರೀತಿ ಎಂದರೇನು? ಕೇವಲ ಒಬ್ಬರನ್ನೊಬ್ಬರು ನೋಡಿಕೊಂಡು ಜೊತೆಗೆ ಸುತ್ತಾಡುವುದೇ? ಅದಕ್ಕಿಂತ ಮಿಗಿಲಾಗಿ ಹೆತ್ತವರನ್ನು ಪ್ರೀತಿಸುವುದಲ್ಲವೇ? ಇಲ್ಲಿ ಕೇವಲ ಒಂದು ಹೆಣ್ಣು ಮತ್ತು ಗಂಡಿನ ಸ್ನೇಹ-ಪ್ರೇಮ ಅಲ್ಲದೆ ಅವರು ತಮ್ಮ ಪರಿವಾರಗಳನ್ನು ಕಾಪಾಡಿಕೊಳ್ಳುವ ಸಂಗತಿ ಅಪೂರ್ವ.

ಆ ಟಫ್ ಗರ್ಲ್ ಶಿಶಿರನ ನಿಸ್ವಾರ್ಥ ಪ್ರೀತಿಗೆ ಸೋಲುತ್ತಾಳ? ನೀವೇ ನೋಡಿ...
ಈ ಪುಸ್ತಕ ಕೇವಲ ಒಂದು ಪ್ರೇಮ ಕಾದಂಬರಿ ಅಲ್ಲದೆ ಒಂದು ರೋಮಾಂಚಕ ಕಾದಂಬರಿ ಎಂದರೆ ತಪ್ಪಾಗಲಾರದು. ನಿಮಗೆ ಕೇವಲ ಪ್ರೇಮ, ಪ್ರಣಯ, ಕುತೂಹಲಕಾರಿ ಪುಸ್ತಕಗಳನ್ನು ಓದಿ, ಬೇಸರವಾಗಿದ್ದರೆ ಇದನ್ನು ಒಮ್ಮೆ ಓದಿರಿ. ನಿಮಗೂ ಕಥಾನಾಯಕನಂತಹ ಪ್ರೇಮಿ ಬೇಕು ಅಥವಾ ಅವನಂತೆ ತೀವ್ರವಾಗಿ ಪ್ರೇಮಿಸಬೇಕು ಎಂದೆನಿಸದಿರಲಾರದು.
Profile Image for Vasanth.
115 reviews22 followers
July 28, 2024
ರವಿ ಬೆಳಗೆರೆಯವರ ಬರವಣಿಗೆಯೇ ಹಾಗೆ, ನಿಜವಾಗಿಯೂ ಅವರ ಬರವಣಿಗೆಯಲ್ಲೊಂದು ಮಾಂತ್ರಿಕತೆಯಿದೆ, ಓದುಗರನ್ನು ಹಿಡಿದಿಟ್ಟುಕೊಳ್ಳುವ ಆವರಿಸಿಕೊಳ್ಳುವ ಅದೆಂತಹುದೋ ಅನೂಹ್ಯ ಶಕ್ತಿಯಿದೆ. ಮನುಷ್ಯ ಸಂಬಂಧಗಳಲ್ಲಿನ ಕಾರುಣ್ಯವನ್ನು ಜೊತೆಜೊತೆಗೆ ನಿರ್ದಯತೆಯನ್ನೂ ತೆರೆದಿಡುವ ಗಟ್ಟಿತನ ಅವರ ಬರವಣಿಗೆಯಲ್ಲಿದೆ. ಅವರ ಈ ರೀತಿಯ ಬರವಣಿಗೆಗೆ ಬಹುದೊಡ್ಡ ದೃಷ್ಟಾಂತ “ನೀ ಹೀಂಗ ನೋಡಬ್ಯಾಡ ನನ್ನ” ಕಾದಂಬರಿ ಎಂದು ಹೇಳಬಹುದು.

ಸದಾ ನಮ್ಮನ್ನು ಆಳುವ “ಪ್ರೀತಿ” ಕಾದಂಬರಿಯ ಬೆನ್ನೆಲುಬು. ಕಾದಂಬರಿಯನ್ನು ಈಗಾಗಲೇ ಓದಿದವರಿಗೆ ಇಷ್ಟವಾದಂತೆ ನನಗೂ ಆ ಎರಡು ಪಾತ್ರಗಳು ಹತ್ತಿರವಾದವು. ಹೌದು! ಅದೇ ಎರಡು ಪಾತ್ರಗಳು, ಶ್ರಾವಣಿ a tough girl, and ಶಿಶಿರಚಂದ್ರ a boy with soft eyes. ಹೇಳಿ ಹೋಗು ಕಾರಣದಲ್ಲಿನ ಹಿಮವಂತನೇ ಶಿಶಿರಚಂದ್ರನಿರಬಹುದು ಎನ್ನಿಸುವಷ್ಟು ನಿಷ್ಕಲ್ಮಶ ವ್ಯಕ್ತಿತ್ವವುಳ್ಳ ಪಾತ್ರವದು. ಕನ್ನಡದಲ್ಲಿ ನಾನು ಥ್ರಿಲ್ಲರ್ ಕಾದಂಬರಿಗಳನ್ನು ಹೆಚ್ಚಾಗಿ ಓದಿಲ್ಲ ಆದರೆ ೨೦೦೩ರಲ್ಲಿ ಹೊರಬಂದ ಈ ಕಾದಂಬರಿಯನ್ನು ೨೦೨೪ರಲ್ಲಿ ಒಂದು ವೆಬ್ ಸೀರಿಸ್ ಮಾಡಿದರೂ ದೊಡ್ಡ ಹಿಟ್ ಆಗುವ ಎಲ್ಲ ಥ್ರಿಲ್ಲಿಂಗ್ ಎಲಿಮೆಂಟ್ಸ್ಗಳು ಈ ಕಾದಂಬರಿಯಲ್ಲಿವೆ.

ಒಮ್ಮೆ ಓದಿ.
5 reviews
September 11, 2023
ನನಗೆ ತುಂಬಾ ಇಷ್ಟ ಆದ ಸಾಲುಗಳು ನೀ ಹೀಂಗ ನೋಡಬ್ಯಾಡ ಪುಸ್ತಕದಿಂದ.

* ದೇವತೆಗಳು ಕುಡಿಯುವಂತಹ ಕಾಫಿ
* Silence please ಇಲ್ಲಿ ಕನಸುಗಳು ಉಸಿರಾಡುತ್ತಿರುತ್ತವೆ
* ನಾವು ದುಡಿದ ದುಡ್ಡು ನಮ್ಮನ್ನು ಬದಲಾಯಿಸುವುದಿಲ್ಲ ದುಡಿಯೋದೇ ಬರುವ ದುಡ್ಡು ಮಾತ್ರ ಮನುಷ್ಯನನ್ನು ಕಲುಷಿತಗೊಳಿಸುತ್ತದೆ ✨🙂
Profile Image for Rakshith Kumar P.
23 reviews1 follower
May 27, 2017
Amazing Narration..... Connects well with the readers.... My first experience of ravi belgere writings.... Nice One... A must Read Book
1 review
Read
April 1, 2020
It is a good book
This entire review has been hidden because of spoilers.
11 reviews4 followers
December 22, 2024
ಪುಸ್ತಕದ ಮುಖಪುಟ ಮತ್ತು ಶೀರ್ಷಿಕೆಯನ್ನು ನೋಡಿದಾಗ ಇದು ಕೇವಲ "ಪ್ರೇಮ ಬಂಧಿತ ಜೋಡಿಯ ಅಥವಾ ರೊಮ್ಯಾಂಟಿಕ್ ಮೆಲೋ ಡ್ರಾಮಾ" ಎಂದು ಭಾವಿಸುತ್ತಾವೆ.

ಆದರೆ ಇದು ಮಾನವ ಸಂಬಂಧಗಳ ಕುರಿತು ಮತ್ತು ಅವರವರ ಭಾವಾತ್ಮಕ ತಕ್ಕಂತೆ ಅವರ ನಡುವಳಿಕೆ ಕುರಿತಾದ ಕಾದಂಬರಿ. ಯಾವುದೇ ರೀತಿಯ ಕಾಮ ಮತ್ತು ಪ್ರೀತಿಯ ಅನನ್ಯ ಬಂಧವಿಲ್ಲದ ಶಿಶಿರ್ ಮತ್ತು ಶ್ರಾವಣಿ ಸಂಬಂಧದ ಪ್ರಯಾಣದಲ್ಲಿ ತುಂಬಾ ಉದ್ವಿಗ್ನತೆ ಉಂಟಾದಾಗ ,ಊಹಿಸಲಾಗದಂತ ಅನಿರೀಕ್ಷಿತ ಟ್ವಿಸ್ಟ್ ಗಳು ಬರುತ್ತವೆ. ಕಾದಂಬರಿಯ ಗುಪ್ತ ಮುಖ, ನಿಗೂಢತೆ, ಕೊಲೆ, ಸೇಡು, ಆಸೆ, ಅಧಿಕಾರದ ಲಾಲಸೆ ಮತ್ತು ಹೃದಯ ರೋಮಾಂಚನಕಾರಿ ಸತ್ಯಗಳ ತುಣುಕು ಬರುತ್ತದೆ..
ಶಿಶಿರ್ ನ ಚಾಣಕ್ಯ ತನ / ಶ್ರಾವಣಿಯ ಅತಿಯಾದ ಬುದ್ಧಿವಂತಿಕೆ / ಪ್ರಶಾಂತಿ, ಶರ್ಮಿಳೆಯ ಮುಗ್ದತೆ . ಹೇಳಬೇಕೆಂದರೆ ಇದೊಂದು ಡಿಫರೆಂಟ್ ವೈರೆಟಿಯ ಥ್ರಿಲ್ಲರ್ ಕಾದಂಬರಿ..

" ನಾವು ಯಾರನ್ನೋ ತಕ್ಕೆ ಸಿಕ್ಕಿದೊಡವರ ಪ್ರೀತಿಸ್ತೇವೆ. ಅವರು ದುಃಖಿತರಾಗಿರುತ್ತಾರೆ. ಆಗ ಮತ್ತಷ್ಟು ಪ್ರೀತಿಸ್ತವೆ, ಎಷ್ಟೋ ಸಲ ನಮ್ಮ ಪ್ರೀತಿ ದುಃಖಕ್ಕೆ ರಿಲೇಟ್ ಆಗಿರುತ್ತೆ. ನಾವು ಪ್ರೀತಿಸ್ತಿರೋರು ದುಃಖಪಡುವಾಗ ಅವರನ್ನು ಅವುಚಿ ಎದೆಗೊತ್ತಿಕೊಂಡು ನಮ್ಮೆಲ್ಲ ಸಂತೋಷ ಅವರಿಗೆ ಕೊಟ್ಟುಬಿಡೋಣ ಅನ್ನಿಸ್ತಿರುತ್ತ. ಮನುಷ್ಯ ತನ್ನ Ego satisfy ಮಾಡಿಕೊಳ್ಳೋದೇ ಹೀಗೆ. ಆದರೆ ನಾವು ಅಷ್ಟೊಂದಾಗಿ ಪ್ರೀತಿಸ್ತಿರೋರು ದುಃಖದಿಂದ ಚೇತರಿಸಿಕೊಂಡು ಬಿಟ್ರೆ ನಮ್ಮ ego ಕಂಗಾಲಾಗುತ್ತೆ. ಅವರಿಗೀಗ ನಮ್ಮ ಅವಶ್ಯಕತೆ ಇಲ್ಲವೇನೋ ಅನ್ನಿಸೋಕೆ ಶುರುವಾಗುತ್ತೆ. Helpless ಆಗಿಬಿಡ್ತೀವಿ "

-ರವಿ ಬೆಳಗೆರೆ
This entire review has been hidden because of spoilers.
1 review
January 4, 2018
The main highlight of the book is the very strong characterization of Shravani and Sharathchandra.
But the novel tends to be over romantic at places. The twists in the storyline are good but are predictable at one or two instances.

Simple language is the strength of the book.
The book touches upon people of various strata of the society and the author provides sufficient details about their background.
The female characters in the book are built strongly and they obtain the centre stage which is indeed praiseworthy.
The book is worth reading.
Displaying 1 - 20 of 20 reviews

Can't find what you're looking for?

Get help and learn more about the design.