ಮಾಸ್ತಿ ವೆಂಕಟೇಶ ಅಯ್ಯಂಗಾರರು ಕನ್ನಡದ ಒಬ್ಬ ಅಪ್ರತಿಮ ಲೇಖಕರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವ ಈ ಸಾಹಿತಿ ಶ್ರೀನಿವಾಸ ಎಂಬ ಕಾವ್ಯನಾಮದಡಿಯಲ್ಲಿ ಬರೆಯುತ್ತಿದರು. ಅನೇಕ ಸಣ್ಣ ಕಥೆಗಳನ್ನು ಬರೆದ ಮಾಸ್ತಿ 'ಸಣ್ಣ ಕಥೆಗಳ ಜನಕ' ಎಂದು ಕರೆಯಲ್ಪಡುತ್ತಿದ್ದರು. ಅವರು ತಮ್ಮ ಅಪ್ರತಿಮ ಸಾಹಿತ್ಯ ಕೃಷಿಯಿಂದಾಗಿ 'ಮಾಸ್ತಿ ಕನ್ನಡದ ಆಸ್ತಿ' ಎಂದು ಪ್ರಚಲಿತರಾಗಿದ್ದರು. ಕೊಡಗಿನ ಕಡೆಯ ರಾಜ ಚಿಕವೀರ ರಾಜೇಂದ್ರನನ್ನು ಕುರಿತು ಬರೆದ 'ಚಿಕವೀರ ರಾಜೇಂದ್ರ' ಎಂಬ ಕೃತಿಗೆ ೧೯೮೩ ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು.
ಶ್ರೀ ಮಾಸ್ತಿ ಅವರ ಬರವಣಿಗೆ ಹೇಗೆ ಅಂದ್ರೆ ಕಾದ ಕಬ್ಬಿಣದಂತೆ ಆದ ಭೂಮಿಗೆ ತಂಪಾದ ಮಳೆ ಸುರಿದ ಹಾಗೆ. ಈ ನನ್ನ ಓದಿನ ಸೋಜಿಗದ ಸಂಗತಿ ಏನ್ ಅಂದ್ರೆ ಮೊದಲನೇ ಕಥೆ ಕಾಮನ ಹಬ್ಬದ ಕುರಿತಾದ್ದು ಅದರ ಆಚರಣೆಯು ನಡೆಯಿತು ಮತ್ತು ಇನ್ನೊಂದು ಕಥೆ ಯುಗಾದಿಯದ್ದು ಮುಂದಿವಾರ ಯುಗಾದಿ. ಆಗಿನ ಆಚರಣೆಗಳು, ಜನರ ನಂಬಿಕೆ ಎಲ್ಲಿಯೂ ಯಾರನ್ನು ಹೀಯಾಳಿಸುವ ಅತ್ವ ವ್ಯಂಗ್ಯ ಮಾಡುವ ಒಂದೇ ಒಂದು ಪದ ಹುಡುಕಿದರೂ ಸಿಗಲ್ಲ. ಬಹುಶ ಮಾಸ್ತಿ ಒಬ್ಬರಿಗೇನೆ ಹೀಗೆ ಬರಿಯೋಕೆ ಸಾಧ್ಯವೇನೋ. ಕೆಲವ್ರು ಇರ್ತಾರೆ ಅವರು ಬರಿಯೋದೆ ಒಂದು ವರ್ಗ, ಜನರನ್ನ ಗುರಿಯಾಗಿ ಇಟ್ಟುಕೊಂಡು.
ಇತಿಹಾಸದ ಅಳಿಸಿ ಹೋದ ಅತವ ಮರೆತು ಹೋದ ಕಥೆಗಳು ಮತ್ತು ನೈಜ ಘಟನೆಗಳನ್ನ ಕೂಡಿಸಿ ಒಂದು ಸಂಕ್ಷಿಪ್ತ ಸಂಪುಟ ಮಾಡಿದ ಲೇಖಕರು ವಿರಳ. ಆ ವರ್ಗಕ್ಕೆ ಮಸ್ತಿಯರು ಸೇರುತ್ತಾರೆ.
ಒಟ್ಟು ೧೮ ಕಥೆಗಳು ಎಲ್ಲವೂ ವಿಭಿನ್ನ ವಿಶೇಷ!
ಈ ವರ್ಷದ ನೆಚ್ಚಿನ ಓದು.
ಕನ್ನಡಿಗರು ಓದಬೇಕಾದ ಲೇಖಕರು ಎಂದರೆ ಮಾಸ್ತಿ,ಗೊರೂರರು. ಇವರ ಪುಸ್ತಕಗಳು ಗತಕಾಲಕ್ಕೆ ಕರೆದೊಯ್ಯುತ್ತವೆ.
ಈ ಸಂಪುಟದಲ್ಲಿ 18 ಕಥೆಗಳಿದ್ದು, ಪ್ರತಿಯೊಂದೂ ಮಾಸ್ತಿಯವರ ವಿಶಿಷ್ಟ ಶೈಲಿಯನ್ನು ಪ್ರತಿಬಿಂಬಿಸುತ್ತದೆ. "ಕಾಮನ ಹಬ್ಬದ ಒಂದು ಕತೆ" ಯಿಂದ ಆರಂಭವಾಗುವ ಈ ಸಂಪುಟವು, "ಉಗ್ರಪ್ಪನ ಉಗಾದಿ" ಕತೆಯೊಂದಿಗೆ ಕೊನೆಗೊಳ್ಳುತ್ತದೆ. ಪ್ರತಿಯೊಂದು ಕತೆಯೂ ಆ ಕಾಲದ ಸಮಾಜದ ಒಂದೊಂದು ಮಗ್ಗಲನ್ನು ತೆರೆದಿಡುತ್ತದೆ.
ಮಾಸ್ತಿಯವರ ಭಾಷೆ ಸರಳ ಮತ್ತು ಸಹಜವಾಗಿದ್ದರೂ, ಅದರಲ್ಲಿ ಆಳವಾದ ಅರ್ಥ ಮತ್ತು ಸೂಕ್ಷ್ಮ ವಿವರಣೆಗಳಿವೆ. ಅವರು ಸಾಮಾಜಿಕ ಸಮಸ್ಯೆಗಳನ್ನು ನೇರವಾಗಿ ಟೀಕಿಸದೆ, ಕಥೆಯ ಮೂಲಕ ಓದುಗರಿಗೆ ಆಲೋಚನೆಗೆ ಅವಕಾಶ ನೀಡುತ್ತಾರೆ. ಈ ಸಂಪುಟದಲ್ಲಿನ ಕಥೆಗಳು ಆ ಕಾಲದ ಗ್ರಾಮೀಣ ಕರ್ನಾಟಕದ ಚಿತ್ರಣವನ್ನು ನಮ್ಮ ಮುಂದಿಡುತ್ತವೆ. ಜಾತಿ ವ್ಯವಸ್ಥೆ, ಮಹಿಳೆಯರ ಸ್ಥಿತಿಗತಿ, ಗ್ರಾಮೀಣ ಆರ್ಥಿಕತೆ, ಸಾಮಾಜಿಕ ನಂಬಿಕೆಗಳು - ಇವೆಲ್ಲವೂ ಕಥೆಗಳಲ್ಲಿ ಪ್ರತಿಬಿಂಬಿತವಾಗಿವೆ.
ಒಟ್ಟಾರೆಯಾಗಿ, "ಸಣ್ಣ ಕತೆಗಳು ಸಂಪುಟ - ೨" ಪುಸ್ತಕವು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕಥನ ಕೌಶಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ. ಇದು ಕೇವಲ ಕನ್ನಡ ಸಾಹಿತ್ಯ ಪ್ರಿಯರಿಗಷ್ಟೇ ಅಲ್ಲದೆ, ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಆಸಕ್ತಿ ಇರುವ ಎಲ್ಲರಿಗೂ ಓದಲೇಬೇಕಾದ ಕೃತಿಯಾಗಿದೆ.