'ಬದುಕು ಬದಲಿಸಬಹುದು' ಸರಣಿಯ ಮೂರನೇ ಪುಸ್ತಕವಿದು. ಇದನ್ನೇ ಮೊದಲು ಓದಿದೆ. ನಿಜಕ್ಕೂ ಬದುಕು ಬದಲಿಸಬಹುದಾದ ಅಂಕಣಗಳೇ ಈ ಪುಸ್ತಕವಾಗಿದೆ. ಪ್ರೀತಿಯ ಅಮ್ಮನನ್ನ ಸ್ತನದ ಕ್ಯಾನ್ಸರ್‌ನಿಂದಾಗಿ ಕಳೆದುಕೊಂಡವನು ನಾನು. ಇಲ್ಲಿನ ಹಲವು ಅಂಕಣಗಳು ಕ್ಯಾನ್ಸರ್ ವಿಚಾರವಾಗಿಯೇ ಇವೆ. ಆದ್ದರಿಂದ ಇದು ನನಗೆ ಹೆಚ್ಚು ತಾಕಿತೇನೊ.. ಹಾಗಂತ ಉಳಿದವರಿಗೆ ತಾಕೊಲ್ಲ ಅಂತಲ್ಲ.. ನಿಮ್ಮ ಆತ್ಮೀಯರಲ್ಲೆ ಒಬ್ಬರು ಕ್ಯಾನ್ಸರ್ ಸುಳಿಯಲ್ಲಿ ನಲುಗುತ್ತಿರಬಹುದು.. (ಸುಳಿಗೆ ಸಿಲುಕದಿರಲಿ ಎಂಬುದೇ ನನ್ನ ಆಶಯ). ಅಂತವರಿಗೆ ಒಂದು ಆಶಾವಾದ ತುಂಬುತ್ತದೆ. ಕ್ಯಾನ್ಸರ್ ಸುಳಿಗೆ ಸಿಲುಕದಿರಲು ಹೀಗೆ ಮಾಡಿ ಅನ್ನೋ ಉಪಾಯಗಳೂ ಇಲ್ಲಿವೆ. ಒಟ್ಟಾರೆ ಪುಸ್ತಕ ನಿಮ್ಮಲ್ಲಿ ಪಾಸಿಟಿವ್ ಎನರ್ಜಿ ತುಂಬುತ್ತದೆ. ಓದಿ.. ಕ್ಯಾನ್ಸರ್ ಹೊರತಾದ ವಿಚಾರಗಳೂ ಇವೆ..
ಹೆಚ್ಚಿನ ಕಥೆಗಳು ಕ್ಯಾನ್ಸರ್ ಗೆದ್ದು ಬಂದವರ ಕಥೆಗಳು, ಅಲೋಪತಿ ಜತೆ ಪರ್ಯಾಯ ಚಿಕಿತ್ಸೆ ವಿವರಗಳು, ನಮ್ಮ ನಿತ್ಯ ಜೀವನದ, ಕ್ಯಾನ್ಸರ್ ತಡೆಯಬಹುದಾದ ಆಹಾರ ಕ್ರಮಗಳ ವಿವರಗಳು ಹೆಚ್ಚಿನ ಕಥೆಗಳ ಸಾರಾಂಶ. ಕ್ಯಾನ್ಸರ್ ಜಯಿಸಿ ಬಂದವರ ಕಥೆಗಳನ್ನು ಓದ್ತಾ ಇದ್ರೆ, ಮೈ ಝುಮ್ಮ್ ಅನ್ಸತ್ತೆ. ಕ್ಯಾನ್ಸರ್ ಅಲ್ಲದೆ ಬೇರೆ ವಿಚಾರಗಳು ಸಹ ಇದೆ ಉಳಿದ ಕಥೆಗಳಲ್ಲಿ. ನಮ್ಮ ಸುತ್ತ ಮುತ್ತ ಆಗುವ ವಿಚಾರಗಳೇ. ಆದ್ರೆ ನೋಡುವ ಕೋನ ವ್ಯಕ್ತಿ ಇಂದ ವ್ಯಕ್ತಿಗೆ ಭಿನ್ನ. ಓದಿದ ನಂತರ ಮನಸಿಗ್ಗೆ ಏನೋ ಒಂಥರಾ ಹಿತ ನೆಮ್ಮದಿ. ಚೆನ್ನಾಗಿದೆ 😊