BeeChi (1913–1980) was a well-known humorist in the Kannada language. His real name was Rayasam Bheemasena Rao. He preferred to write his pen name bilingually as ಬೀchi. He was also known as Karnataka's George Bernard Shaw.
#ಮಸ್ತಕಬೆಳಗಿದಪುಸ್ತಕ ಪುಸ್ತಕ: ಕಾಣದ ಸುಂದರಿ ಲೇಖಕರು:ಬೀchi ಪ್ರಕಾಶಕರು: ಬೀಚಿ ಪ್ರಕಾಶನ ಬೆಂಗಳೂರು
ತುಂಬಾ ದಿನಗಳ ನಂತರ ಶ್ರೀಯುತ ಬೀಚಿ ಅವರ ಪುಸ್ತಕವನ್ನು ಓದಿದೆ. ಅದೇ ತೆಳು ಹಾಸ್ಯದ ಶೈಲಿ. ಈ ನವಿರಾದ ಹಾಸ್ಯಭರಿತ ಪುಸ್ತಕವನ್ನು ಓದುವುದೇ ಒಂದು ಹೊಸ ಅನುಭವ. ಹಾಸ್ಯದಲ್ಲೇ ನಮ್ಮಲ್ಲಿರುವ ಹುಳುಕುಗಳನ್ನು ಎತ್ತಿ ತೋರಿಸುವ ಅವರ ಬರಹಗಳು ಕಚಗುಳಿ ಇಡುವುದರ ಜೊತೆ ನಮ್ಮ ಬಗ್ಗೆ ನಾವೇ ಒಳನೋಟ ಹರಿಸುವಂತೆ ಮಾಡುತ್ತದೆ.
ಸಮಯ ಸಂದರ್ಭಗಳು ಏನೇ ಇರಲಿ ಯಾವುದೇ ವ್ಯಕ್ತಿ ಒಂದು ತಪ್ಪು ಹೆಜ್ಜೆ ಇಟ್ಟರೂ ಸಾಕು, ಅವನನ್ನು/ಅವಳನ್ನು ಬಿಡದೆ ಕಾಡುತ್ತದೆ ನಮ್ಮ ಸಮಾಜ. ಅದೂ ಹೆಣ್ಣಾಗಿದ್ದರೆ ಮುಗಿದೇ ಹೋಯಿತು. ಅವರನ್ನು ಇನ್ನಿಲ್ಲದಂತೆ ಮತ್ತೆ ಮೇಲೆಳಲಾಗದಂತೆ ಕೆಳಕ್ಕೆ ತಳ್ಳಿ ಹಾಕುತ್ತದೆ. ಎಷ್ಟೋ ಸಂದರ್ಭಗಳಲ್ಲಿ ನಾವು ಸಹ ಗೊತ್ತಿದ್ದೋ ಇಲ್ಲದೆಯೋ ಅದರಲ್ಲಿ ಭಾಗಿಯಾಗಿ, ನಮ್ಮ ಕಾಣಿಕೆಯನ್ನು ಸಲ್ಲಿಸಿರುತ್ತೇವೆ.
ಇನ್ನೊಬ್ಬರ ಗುಣಾವಗುಣಗಳನ್ನು ವಿಮರ್ಶಿಸುವ ಈ ಸಮಾಜ ಅಥವಾ ನಾವುಗಳು ನಮ್ಮ ತಪ್ಪುಗಳಿಗೆ ಜಾಣ ಕುರುಡರಾಗುತ್ತೇವೆ ಇಲ್ಲವೇ ನೂರೊಂದು ಸಮರ್ಥನೆಗಳು ತಯಾರಾಗಿರುತ್ತವೆ. ಈ ಕೃತಿಯಲ್ಲಿ ಲೇಖಕರು ಹೇಳ ಹೊರಟಿದ್ದು ಸಜ್ಜನರೆನಸಿಕೊಂಡವರ ಹುಳುಕುಗಳನ್ನು,ಕೆಟ್ಟವರ ಸನ್ನಡತೆಯನ್ನು
ಕೆಲವು ಪುಸ್ತಕಗಳನ್ನು ಓದುವುದೆಂದರೆ ನಮ್ಮನ್ನು ನಾವೇ ಓದಿಕೊಂಡಂತೆ. ಈ ಕೃತಿಯೂ ಅದೇ ಸಾಲಿಗೆ ಸೇರುತ್ತದೆ. ಆದರೆ ಬೀಚಿಯವರು ಹೇಳಿದಂತೆ "ಕನ್ನಡಿಯನ್ನು ತೋರಿಸಬಹುದು, ನೋಡುವ ಕಣ್ಣುಗಳಿಂದ ಬೇಕಷ್ಟೇ"