It is the year 1857. A great uprising — what would come to be known as the first war of Indian independence — has broken out. Two brothers, emissaries of a northern king, on a mission to garner the support of the southern rulers, wander lost and hungry in a forest not far from their destination. They are captured and one of them is hung by the British. Caught in the rough and tumble of the mutiny, the other brother settles down in a place that was never meant to be more than a temporary refuge. He spends his life far away from home among people who do not speak his language. The novel spans the story of three generations of his family living under the burden of inherited nostalgia, a story that unfolds with all its flying fancies and stumbling follies on the threshold between tradition and modernity. Set against the backdrop of the freedom movement, the novel explores the lives of the people of the Dharwad region of Karnataka; their acts of faith and the realpolitik of ritual. Masterfully and sensitively translated from the Kannada, A Handful of Sesame is funny, tragic, ironic, satirical, lyrical and deeply allegorical of a young, modern nation.
A Handful of Sesame is brilliant translation of Halla Banta Halla. Its an amazing book written on North Karnataka. It describes social angst with family angles. This book gives good insight of the social and political commotion in the village in a span of a century from First war of independence till Independence. Lovely Kannada literature. Read the book, you will get transported to that era.
Maithreyi’s English translation of Shrinivas Vaidya’s Halla Bantu Halla opens a world from a distant epoch. Bringing for the non native especially, a nuanced imagery of the life of a family as lived in its everydayness with socio political changes during and resulting from India’s struggle for freedom.
Written with the backdrop of India’s struggle for independence, spanning a time period of almost a hundred years from the mutiny of 1857 to Mahatma Gandhi’s assassination, this book chronicles the life of a Hindu Brahmin family over a century in a town called Navalgund in Karnataka. It is the narrative of a family, whose seed originated in Kanpur in Northern India but which took roots in the small Southern Indian town of Navalgund during a period of political upheaval and then made it a home for generations to come. This story, as Tabish Khair notes in the foreword, thus also becomes a story of internal migration, recording the adoption and assimilation of cultural and religious practices in everyday living. More than that, it offers us a window into the socio-cultural mores of a family affected and shaped by changing times.
The major characters that inhabit the world of A Handful of Sesame are diverse and non uni-dimensional. They evolve with the progressing narrative, forging the complex web of relationships within a large family that change as the time moves. Vaidya’s skilful portrayal brings forth the nuances in their interactions and connections which tie them as a family.
Struggle for freedom, which remains a constant in the background, is employed to portray the rising collective consciousness across the nation which influenced the lives of ordinary people. We are offered glimpses into how the events like Salt Satyagraha or Congress meetings had an effect on the routine life of people of a small town like Navalgund. The author also offers a peek into the larger social construct surrounding the Panth family, which though fragmented by caste and religion, lived in harmony with each other.
ಹಳ್ಳ ಬಂತು ಹಳ್ಳ ಒಂದು ಶತಮಾನದ ಭಾರತದ ಗ್ರಾಮೀಣ ಆತ್ಮಕಥೆಯಂತಿದೆ. ಕಮಲಾಚಾರ್ಯ ಎಂಬುವವರು ಉತ್ತರ ಭಾರತದಿಂದ ನವಲಗುಂದ ಎನ್ನು ಗ್ರಾಮಕ್ಕೆ ವಲಸೆ ಬಂದು ಇಲ್ಲಿಯವನೇ ಆಗಿ ಅವರನ ಮಗನಾದ ವಾಸುದೇವಾಚಾರ್ಯರ ಎಂಬವರ ಅವಿಭಕ್ತ ಕುಟುಂಬದ ಕಥೆ ಹೇಳುತ್ತಾ ದೇಶದ ಒಂದು ಆಯಾಮದ ಇತಿಹಾಸವನ್ನೇ ಹೇಳುತ್ತಾ ಹೋಗುತ್ತದೆ. ಕಾದಂಬರಿಯಲ್ಲಿನ ಯಾವ ಘಟನೆಯೂ, ಎಲ್ಲಿಯೂ ನಾಟಕೀಯ ಸ್ವರೂಪ ಪಡೆದುಕೊಳ್ಳುವುದಿಲ್ಲ. ಅಷ್ಟರ ಮಟ್ಟಿಗೆ ವಾಸ್ತವವಾಗಿ ರೂಪಿತಗೊಂಡಿರುವ ಕೃತಿ ಇದು. ಕೌಟುಂಬಿಕ ತಲ್ಲಣಗಳೊಂದಿಗೆ ಸಾಮಾಜಿಕ ತಲ್ಲಣಗಳನ್ನು ವಿವರಿಸುತ್ತಾ ಸಾಗುತ್ತದೆ. ಕನ್ನಡ ಸಾಹಿತ್ಯದಲ್ಲಿ ಶ್ರೇಷ್ಟ ಸಾಹಿತ್ಯ ಸೇರಬಲ್ಲ ಕೃತಿ ಕೂಡ ಇದು ಎಂದರೆ ನನ್ನ ಮಟ್ಟಿಗೆ ತಪ್ಪಾಗಲಾರದು. ಈ ಕಾದಂಬರಿಯಲ್ಲಿ ಕಾಡುವ ಪಾತ್ರಗಳೆಂದರೆ ವಾಸುದೇವಾಚಾರ್ಯ, ತುಳಸಾಬಾಯಿ, ನಾರಾಯಣ, ರುಕ್ಮಾ, ರಾಮು, ಅಂಬಕ್ಕ... ಹೀಗೆ ಒಂದೊಂದು ಪಾತ್ರಗಳು ಕಾದಂಬರಿ ಓದಿ ಮುಗಿಸಿದ ಮೇಲೂ ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತವೆ ಹಾಗೂ ಹೊಸ ಆಲೋಚನೆಗಳಿಗೆ ದಾರಿಮಾಡಿಕೊಡುತ್ತವೆ. ಈ ಕಾದಂಬರಿ ಹಳ್ಳ ಬಂತು ಹಳ್ಳ ಎಂಬ ಹೆಸರಿನಂತೆ ಪ್ರತೀಕವನ್ನು ಹಳ್ಳವೇ ಪಡೆದುಕೊಂಡು ಚಿತ್ರಿತವಾಗಿದೆ. ನದಿ ಮೂಲದಿಂದ ಪ್ರಾರಂಭವಾಗಿ ಸಾಗರಮ್ ಪ್ರತಿ ಗೆ ಕೊನೆಗೊಳ್ಳುತ್ತದೆ. ಮೂಲತಃ ಸಂಪ್ರದಾಯದಿಂದ ಕೂಡಿದ ಪಂತರ ಕುಟುಂಬ ನಂತರ ಅದು ದುರ್ಭಲಗೊಂದು ಅದರ ಪ್ರತಿಫಲವಾಗಿ ಬದುಕಿನ ಸಾದ್ಯತೆಗಳನ್ನು ಹುಡುಕುತ್ತಾ ಸಾಗುತ್ತದೆ. ಕಾದಂಬರಿಯನ್ನು ಓದುತ್ತಾ ಓದುತ್ತಾ ಶ್ರೀನಿವಾಸ ವೈದ್ಯರ ಜೀವನಾನುಭವ ನಮ್ಮನ್ನು ಬೆರಗುಗೊಳಿಸದೇ ಇರಲಾರದು. ಬೆಳಗಾವಿ ಹುಬ್ಳಿ ಕಡೆಯ ಮರಾಠಿ ಮಿಶ್ರಿತ ಉತ್ತರ ಕರ್ನಾಟಕದ ಸೊಗಡಿನ ಭಾಷೆ ಕಾದಂಬಿಯ ಇನ್ನೊಂದು ಮೆರುಗು. ಕೆ.ವಿ ಅಕ್ಷರರವರು ಹೇಳುವಂತೆ “ಸಮಕಾಲಿನ ರಾಜಿಕೀಯ ರೋಗಗಳಿಗೆ ತುಂಬಾ ಭಿನ್ನ ರೀತಿಯ ಚಿಕಿತ್ಸೆಗೆ ತೊಡಗುವ ಇಂಥ “ವೈದ್ಯಗುಣ” ಇರುವ ಕಾರಣದಿಂದಲೇ ಶ್ರೀನಿವಾಸ ವೈದ್ಯರ ಸಾಹಿತ್ಯದ ಬಗ್ಗೆ ತುಂಬ ಉತ್ಸುಕನಾಗಿದ್ದೇನೆ” ಹಾಗೇನೆ ಎಂ.ಎಸ್. ಆಶಾದೇವಿ ಅವರ ಪ್ರಕಾರ "ವಾಸ್ತವನ್ನು ಅದರ ಕರಾಳ ಮುಖಗಳಲ್ಲಿ ಎದುರಿಸುತ್ತಲೇ ಬದುಕಿನ ಬಗೆಗಿನ ಪ್ರೀತಿಯನ್ನು ಹೆಚ್ಚಿಸುವುದೇ ಶ್ರೀನಿವಾಸ ವ್ಯೆದ್ಯ (Shrinivas Vaidya) ಬರವಣಿಗೆಯ ಶಕ್ತಿ". ಇದು ನನ್ನ ಅಭಿಪ್ರಾಯ ಸಹ ಹೌದು.
ಕನ್ನಡ ಸಾಹಿತ್ಯದ ಕಳೆದ ಶತಮಾನದ ಪ್ರಮುಖ ಕಾದಂಬರಿಗಳ ಗಮನಿಸಿದರೆ ಅವುಗಳ ಕಥಾವಸ್ತು ತಲೆಮಾರುಗಳ ಜೀವನ ಗತಿಯ ಚಿತ್ರಣವೂ ಆ ಚಿತ್ರಣದಲ್ಲಿ ಮೊದಲ ತಲೆಮಾರಿನ ಬಡತನದ ಅನ್ನಕ್ಕೂ ತತ್ವಾರದ ಬದುಕೂ ನಂತರದ ತಲೆಮಾರು ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡು ಅವರಲ್ಲಿ ಹೆಚ್ಚಿನವರು ಹಾಳು ಬಿದ್ದು ಕೆಲವರು ಸ್ವಾತಂತ್ರ್ಯ ಚಳುವಳಿಗೆ ಬಿದ್ದು ನೆಲೆ ಕಳಕೊಂಡು ಹೀಗೆ ಬೆಳೆಯುತ್ತದೆ.
ಶ್ರೀನಿವಾಸ ವೈದ್ಯರ ಕಥನ ಕಲೆ ಇದೇ ಕತೆಯನ್ನು ಅತ್ಯಂತ ರಸವತ್ತಾಗಿ ಹೇಳುತ್ತದೆ. ಎಲ್ಲೋ ಹೊರಟವರು ಎಲ್ಲೋ ನೆಲೆಯಾಗಿ ಕುಟುಂಬ ರೆಂಬೆ ಕೊಂಬೆ ಬೆಳೆಸಿಕೊಂಡು ಕಾಲದ ಗತಿಯಲ್ಲಿ ತಮ್ಮನ್ನು ಉಳಿಸಿಕೊಳ್ಳುವ ಹೋರಾಟ ಇದು. ಮುಖ್ಯ ಪಾತ್ರ ವಾಸುದೇವಾಚಾರ್ಯರು ಆದರೂ ಹೆಚ್ಚಿನ ಎಲ್ಲ ಪೋಷಕ ಪಾತ್ರಗಳು ಸಮಾನ ತೂಕ ಹೊಂದಿವೆ. ಮೇಲ್ನೋಟಕ್ಕೆ ಬ್ರಾಹ್ಮಣ ಕುಟುಂಬವೊಂದರ ಚಿತ್ರಣ ಎನಿಸಿದರೂ ಇದು ಒಂದು ಊರಿನ ಕತೆಯೇ. ಇದರ ಸಮೃದ್ಧ ಭಾಷಾ ಬಳಕೆ ಓದುಗರ ಹಿಡಿದಿಡುತ್ತದೆ.
ಈ ಕಾದಂಬರಿಯ ಮೊದಲ ಬಾರಿ ಓದುವಾಗ ಗೆಳೆಯರೊಬ್ಬರು ' ಇದವರ ಕುಟುಂಬದ ಮೂಲ ಪುರುಷರ ಕತೆಯೋ' ಎಂದಿದ್ದರು. ಅಷ್ಟು ನಿಜ ಎನಿಸುವ ಚಿತ್ರಣ. ಹಾಗೆ ಶ್ರೀನಿವಾಸ ವೈದ್ಯರು ಇದ್ದಾಗ ಭಯದಿಂದ ಒಮ್ಮೆ ಫೋನ್ ಮಾಡಿ ' ಮುಂದಿನ ಕಾದಂಬರಿ ಯಾವಾಗ ಸರ್? ' ಎಂದು ಅಧಿಕಪ್ರಸಂಗ ಕೇಳಿದ್ದೆ.ಆಗ ' ಯಂಗ್ ಮ್ಯಾನ್ ನನಗೀಗ ಎಂಬತ್ತು ದಾಟಿದೆ. ಇನ್ನೇನು ಬರೆಯಲಿ? ' ಎಂದಿದ್ದರು. ಹೌದು. ವೈದ್ಯರು ಬರೆಯಲು ಶುರು ಮಾಡಿದ್ದು ಬಹಳ ಲೇಟು. ಆದರೆ ಅನುಭವದ ಗಟ್ಟಿಯಲ್ಲಿ ಅವರು ಬರೆದದ್ದೆಲ್ಲ ಚಿನ್ನವೇ. ಹಾಸ್ಯ ಲೇಖನಗಳು, ಕಥೆಗಳು ,ಮಾರ್ಕೆಸನ ಕಾದಂಬರಿಯ ಅನುವಾದ ,ಕಾದಂಬರಿ ಹೀಗೆ ಸಮೃದ್ಧ ಬರಹಗಾರ. ಮರು ಓದಿಗೂ ಅದೇ ಖುಷಿ ಕೊಟ್ಟವರು.
I took almost 8 days to finish this book. I don’t remember the last time I took that long to finish a book that’s just over 230 pages. That’s not a reflection on the book, but a reflection on some scattered work schedules on my part, and an absolute inability to focus for longer than a page. English translations of Kannada works are rare and Maithreyi Karnoor has done a superb job with this. I know from the love she has put in that this is as faithful a reproduction of the original language as you can get in a translated work.
What about the book itself? A sweeping bildungsroman set in pre-Independence India and tracing the lives of one Brahmin family. Shrinivas Vaidya’s canvas is vast, and he traces everything from changing societal norms to migration to women rights to the Independence movement.
Ultimately, it became a reflection of life itself - the struggles, regrets, moments, and memories that all coalesce to form this beautiful prism we call living.
ಬ್ರಿಟಿಷ್ ಆಳ್ವಿಕೆಯ ದಂಗೆಗಳು,ಹೋರಾಟಗಳು ನಮಗೆಲ್ಲ ತಿಳಿದಿರುವ ವಿಚಾರ. ಆದರೆ ಆ ಕಾಲದ ಜನ ಸಾಮಾನ್ಯ ಬದುಕು ಹೇಗಿದ್ದಿರಬಹುದು ? ಆ ಸಮಯದಲ್ಲಿ ಸಮಾಜದಲ್ಲಾದ ಕೆಲ ಕ್ಷಿಪ್ರ ಬದಲಾವಣೆಗೆ ಜನರು ಹೇಗೆ ಒಗ್ಗಿಕೊಂಡರು? ಆ ಕಾಲ ಹಳೆಯ ಸಂಪ್ರದಾಯದ ಹಾಗೂ ಹೊಸ ಜೀವನ ಶೈಲಿಯ ಸಂಧಿ ಕಾಲವೇ ? ನಾಯಕರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದವರ ಕುಟುಂಬದವರ ಮನಸ್ಥಿತಿ ಹೇಗಿರಬಹುದು? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರದಂತಿದೆ ಶ್ರೀನಿವಾಸ ವೈದ್ಯ ಅವರು ಬರೆದಿರುವ ‘ಹಳ್ಳ ಬಂತು ಹಳ್ಳ ’ ಕಾದಂಬರಿ. . ೧೮೫೯ ರ ಸಿಪಾಯಿ ದಂಗೆಯಿಂದ ಶುರುವಾಗುವ ಕಥೆ ಮಹಾತ್ಮ ಗಾಂಧಿ ಅವರ ಅಂತ್ಯದೊಂದಿಗೆ ಕೊನೆಯಾಗುತ್ತದೆ. ಹಾಗಂತ ಇಲ್ಲಿಯ ಕಥಾ ವಸ್ತು ಪೂರ್ಣವಾಗಿ ಸ್ವಾತಂತ್ರ್ಯ ಹೋರಾಟದ್ದಲ್ಲ. ಬದಲಾಗಿ ಆ ಕಾಲಘಟ್ಟದಲ್ಲಿ ಜೀವಿಸಿದ ಒಂದು ಕುಟುಂಬ ವು ತನ್ನ ಅಸ್ತಿತ್ವಕ್ಕೆ ಜೀವನದೊಂದಿಗೆ ನಡೆಸಿದ ಹೋರಾಟದ್ದು !! . ವಾಸುದೇವ ಆಚಾರ್ಯರು , ತುಳಸಕ್ಕ , ಅಂಬಕ್ಕ , ನಾರಾಯಣ , ರುಕುಮಾ , ರಾಮು ನೆನಪಿನಲ್ಲಿ ಉಳಿಯುತ್ತಾರೆ. ಸೋನಿಯ ಸಾವು ಕರುಳು ಹಿಂಡುತ್ತದೆ. ಕುಟುಂಬವನ್ನು ನಡೆಸುವುದರಲ್ಲಿ ವಾಸುದೇವ ಆಚಾರ್ಯರು ಮಾದರಿಯಾಗುತ್ತಾರೆ. ನೂರು ಆಸೆಗಳ ಮನದಲ್ಲಿ ಬಚ್ಚಿಟ್ಟ ರುಕುಮ ಅಂತಃಕರಣ ಕಲಕುತ್ತಾಳೆ. . ಪ್ಲೇಗ್ ರೋಗ,ಯುದ್ಧ,ಕ್ವಿಟ್ ಇಂಡಿಯಾ ಚಳುವಳಿ, ಉಳುವವನೇ ಹೊಲದೊಡೆಯ ಕಾಯಿದೆ,ಬಾಂಬೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶ,ಪೊಲೀಸರ ದೌರ್ಜನ್ಯ,ಮೊದಲು ಕಾಣಿಸಿಕೊಂಡ ಮೋಟಾರು ಗಾಡಿ , ಬೆಲೆ ಏರಿಕೆ - ಹೀಗೇ ಹಲವು ಸಂಗತಿಗಳು ಸ್ವಾತಂತ್ರ್ಯ ಪೂರ್ವ ಭಾರತದ ಅನಾವರಣ ಮಾಡಿಸುತ್ತದೆ ! . ಓದುತ್ತಾ ನಾವೂ ಕಥೆಯ ಭಾಗವಾಗುವುದರಲ್ಲಿ ಸಂಶಯವಿಲ್ಲ. ಶ್ರೀನಿವಾಸ ವೈದ್ಯರು ಅದ್ಬುತವಾಗಿ ಕಥೆ ಹೆಣೆದಿದ್ದಾರೆ. ತಪ್ಪದೇ ಓದಿ :)
ವೈದ್ಯರು ಇಂತಹ ಶ್ರೇಷ್ಠ ಕಥನ ಕಲೆಯನ್ನು ಮೊದಲ ಕಾದಂಬರಿಯಲ್ಲೇ ಸಿದ್ದಿಸಿಕೊಂಡಿರುವುದು ಅಭಿನಂದನೆಗೆ ಅರ್ಹವಾದದ್ದು. 1857ರ ಸಿಪಾಯಿ ದಂಗೆಯ ಕಾಲಾವಧಿಯಿಂದ ಶುರುವಾಗುವ ಈ ಕೃತಿ 1948ರವರೆಗೂ ವಿಶಾಲವಾಗಿ ಹರಡಿದೆ. ಒಂದು ಕುಟುಂಬದ ಮೂರು ಸಂತತಿಯ ಕಥೆಯ ಮೂಲಕ ನವಲಗುಂದ ಮತ್ತು ಧಾರವಾಡದ ಪ್ರಾಂತದ (ಭಾರತ ದೇಶದ ಪ್ರತಿನಿಧಿಯಾಗಿ) ಸಾಂಸ್ಕೃತಿಕ ಪಲ್ಲಟವನ್ನು ಅತ್ಯದ್ಭುತವಾಗಿ ಸೆರೆ ಹಿಡಿದಿದೆ. ಕಾದಂಬರಿಯಲ್ಲಿನ ಸಂಭಾಷಣೆ, ಪಾತ್ರ ಪೋಷಣೆ ಕಾದಂಬರಿಯನ್ನು ಪ್ರಬಲವಾಗಿಸಿದೆ.
೧೮೫೭ರ ಸಿಪಾಯಿ ದಂಗೆಯನ್ನು ಓದಿದ್ದೇವೆ. ಮಹಾತ್ಮರ ಹುತಾತ್ಮರ ಕಥೆಗಳನ್ನು ಕೇಳಿದ್ದೇವೆ. ಡಾಕ್ಯುಮೆಂಟರಿಗಳನ್ನು ನೋಡಿದ್ದೇವೆ ರೋಮಾಂಚಿತಗೊಂಡಿದ್ದೇವೆ. ಆದರೆ ಈ ಪುಸ್ತಕದಲ್ಲಿ ಶ್ರೀನಿವಾಸ ವೈದ್ಯರು ಎಂಬ ಅಪರೂಪದ ಬರಹಗಾರ ಸ್ವಾತಂತ್ರ್ಯ ಪೂರ್ವ ಭಾರತವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿಕೊಟ್ಟಿದ್ದಾರೆ. ಒಂದು ಪಾತ್ರವಾಗಿ ಬರಹದಾಳಕ್ಕೆ ಓದುಗ ಇಳಿಯುತ್ತಾನೆ. ಹಳ್ಳದಲ್ಲಿ ನೀರು ನಿಂತರೂ ಸುಳಿಯಂತೆ ಕಥೆಯೊಳಗೆ ಎಳೆದುಕೊಂಡು ಹೋಗುತ್ತದೆ. ೨೮೧ ಪುಟಗಳ ಕರುಳು ಹಿಂಡುವಿಕೆ, ಬದುಕನ್ನು ಪ್ರಶ್ನಿಸುವಿಕೆ, ದಂಗೆ, ಸ್ವಾತಂತ್ರ್ಯಪೂರ್ವದ ಸಂಘರ್ಷ, ಹಣಕಾಸು, ರೋಗ ರುಜಿನಗಳು, ಸಾಮಾಜಿಕ ಧೋರಣೆ, ಧಾರಣೆ, ಉದ್ಧರಿ, ಹಾರುವರ ಪರಿಪಾಟಲು, ಉಳ್ಳವರ ಶೋಷಣೆ, ಬಲಿದಾನ, ಹಪಹಪಿ, ಕ್ರೋಧ, ಅಸಹಾಯಕತೆ ಎಲ್ಲದರ ಒಟ್ಟು ಸಾರ್ಥಕ ಓದು - ಹಳ್ಳ ಬಂತು ಹಳ್ಳ.
ಕಥೆಯಲ್ಲಿ ಬರುವ ಯಾವ ಪಾತ್ರಗಳನ್ನು ಇಲ್ಲಿ ತೆಗೆದುಕೊಳ್ಳುವುದಿಲ್ಲ. ಸಿಪಾಯಿದಂಗೆಯ ಸಮಯದಲ್ಲಿ ನವಲಗುಂದ ಪ್ರದೇಶದ ಮುಖ್ಯಸ್ಥನ ಬಳಿ ಸಿಕ್ಕಿಹಾಕಿಕೊಳ್ಳುವ ಇಬ್ಬರು ಅಣ್ಣ ತಮ್ಮಂದಿರಿಂದ ಕಥೆಯು ಶುರುವಾಗುತ್ತದೆ. ಇಬ್ಬರೂ ಉತ್ತರ ಭಾರತದ ಮೂಲದವರದಾದ್ದರಿಂದ ಭಾಷೆಯ ತೊಂದರೆಯಾಗುತ್ತದೆ. ಆ ಮುಖ್ಯಸ್ಥನ ಬಳಿ ಕೆಲಸಕ್ಕಿರುವ ದುಭಾಷಿಯೋರ್ವನ ಸಹಾಯದಿಂದ ಈ ಇಬ್ಬರು ಸಹೋದರರ ಪೂರ್ವಾಪರ ಪತ್ತೆಯಾಗುತ್ತದೆ. ದಂಗೆಯ ಕಾಲವಾದದ್ದರಿಂದ ಸೆರೆಯಲ್ಲಿಡಲು ನಿರ್ಧರಿಸುತ್ತಾರೆ. ಒಂದು ದಿನ ಅಣ್ಣ ತಪ್ಪಿಸಿಕೊಂಡು ಹೋಗಿ ಹತನಾಗುತ್ತಾನೆ. ತಮ್ಮನಿಗೆ ವೈದ್ಯ ವೃತ್ತಿ ಗೊತ್ತಿದ್ದ ಕಾರಣದಿಂದ ಅನಾರೋಗ್ಯ ಪೀಡಿತ ಮುಖ್ಯಸ್ಥನ ಶುಶ್ರೂಷೆ ಮಾಡುತ್ತಾನೆ. ಅಭಿಮಾನ ಬೆಳೆದ ಕಾರಣದಿಂದಾಗಿ ಅವನಿಗೆ ನವಲಗುಂದದಲ್ಲಿಯೇ ಒಂದು ಸಂಸಾರ ಮಾಡಿಕೊಡುತ್ತಾರೆ. ನಂತರ ಹಳ್ಳ ಬಂತು ಹಳ್ಳ ನದಿಯಂತೆ ಹರಿಯುತ್ತದೆ.
ಈ ಪುಸ್ತಕದಲ್ಲಿ ದಂಗೆಗಿಂತ ಹೆಚ್ಚು ಕಾಡುವುದು ೧೮೦೦ ಮತ್ತು ೧೯೫೦ರ ನಡುವಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆ. ಈಗ ಟಿಪ್ಸಿನಂತೆ ಕೊಡುವ ಹತ್ತರ ನೋಟಿಗೆ ಆಗ ರಕ್ತದಷ್ಟೇ ಬೆಲೆಯಿತ್ತು. ದುಡ್ಡಿನ ಮಾತನ್ನು ಬದಿಗಿರಿಸಿ ನೋಡಿದರೇ ಇದು ಕೇವಲ ಸ್ವಾತಂತ್ರ್ಯ ಹೋರಾಟದ ಕುರಿತು ಬರೆದ ಪುಸ್ತಕವಲ್ಲ. "ಇಲ್ಲೊಂದು ಜೀವವಿದೆ. ಒಂದು ಚೈತನ್ಯವಿದೆ, ಸವಿಯದೇ ಸವೆದುಹೋದ ದೇಹವೊಂದರ ಅಳಲಿದೆ. ಬದುಕುವ ಬದುಕಿಸುವ ಬದುಕಿ ಬಾಳಿಸುವ ನಿಸ್ವಾರ್ಥ ಚೇತನವೊಂದು ದಿನಗಟ್ಟಲೇ ಸ್ಮೃತಿಯಲ್ಲಿ ಸೇರಿಹೋಗುತ್ತದೆ. ಎಲ್ಲವನ್ನು ಎದುರಿಸಿ ಹಲ್ಲು ಕಚ್ಚಿ ಬದುಕಿ ಸಾರ್ಥಕತೆ ಕಂಡ ಜೀವವದು"
"ಎಷ್ಟು ಬದುಕಿದರೇನು? ಕೊನೆಗೊಂದಿಷ್ಟು ಸಾರ್ಥಕ್ಯವಿರದಿರೇ"
ಆ ಜೀವ ಯಾರು ಎಂದು ನಿಮ್ಮೊಳಗೆ ಒಂದು ಸಣ್ಣ ಜಿಜ್ಞಾಸೆ ಮೂಡಿದ್ದರೆ ದಯವಿಟ್ಟು ಇದೊಂದು ಪುಸ್ತಕ ಓದಿಕೊಳ್ಳಿ. ಅಂದಹಾಗೇ ಈತ ಉತ್ತರದಿಂದ ಓಡಿಬಂದು ನವಲಗುಂದದ ಮುಖ್ಯಸ್ಥನಿಗೆ ಚಿಕಿತ್ಸೆ ಕೊಟ್ಟ ಸಹೋದರನಲ್ಲ.
ಒಬ್ಬ ಓದುಗನಾಗಿ ಬರೆಯಲಾಗದೇ ಎಷ್ಟೋ ವಿಷಯಗಳನ್ನು ನನ್ನೊಳಗೆ ಹುದುಗಿಸಿಕೊಂಡು ಅವಲೋಕಿಸಿಕೊಳ್ಳುತ್ತಿದ್ದೇನೆ. ಇಂದು ಮತ್ತು ಅಂದಿನ ಅಜಗಜಾಂತರ ವ್ಯತ್ಯಾಸ, ಒಬ್ಬ ಮನುಷ್ಯ ಜೀವಿತಾವಧಿಯಲ್ಲಿ ಬಂದುಹೋಗುವ ಸನ್ನಿವೇಶಗಳು, ಹುಟ್ಟು ಸಾವು, ವಿವಾಹ ವೈಧವ್ಯ, ಮಡಿ ಮೈಲಿಗೆ, ಶಾಸ್ತ್ರ ಸಂಪ್ರದಾಯ ಎಲ್ಲವೂ ಸೇರಿದಂತೆ ವಿಭಿನ್ನ ಚಿಂತನೆಗಳೆಡೆಗೆ ಈ ಪುಸ್ತಕ ಕರೆದುಕೊಂಡು ಹೋಯಿತು. ಸಾಂಪ್ರದಾಯಿಕ ಸಾಮಾಜಿಕ ಸಾಂಸ್ಕೃತಿಕ ಹಳ್ಳಕ್ಕೆ ಒಂದು ಸೇತುವೆ ಕಟ್ಟಿಕೊಡದೇ ಹೋಗಿದ್ದರೇ ಇಂದು ಬದುಕು ಹೀಗಿರುತ್ತಿರಲಿಲ್ಲವೇನೋ.
ಅಪರೂಪದ ಪುಸ್ತಕವೆಂದಷ್ಟೇ ಹೇಳಬಲ್ಲೆ. ಎಂದಿನಂತೆ ನೀವು ಈಗಾಗಲೇ ಈ ಪುಸ್ತಕವನ್ನು ಓದಿದ್ದರೇ ನಿಮ್ಮ ಅಭಿಪ್ರಾಯವನ್ನು ನನ್ನೊಂದಿಗೂ ಹಂಚಿಕೊಳ್ಳಿ.
Roots - A lot gets spoken, these days, about taking pride in where one is from. But is that part of one's identity as constant as the propagandists want us to believe? Are we all just bound to our place of ancestors? Is culture as static as those in power claim? Or is one's identity & values just a culmination of one's lived experiences as an individual?
"A Handful of Sesame" / "Halla Bantu Halla" attempts to shine light on that introspection. It narrates the changes in the ethos of a Brahmin family as times change & the family members migrate to different places. What these changes mean to the individual and the collective are implied effectively through the life stories of different characters. The historical events strictly remain as the backdrop.
The choice of a Brahmin household - a community that is typically associated with superiority & purity, per the lores & mores, is a powerful selection in enabling discussion about individuals & society. Through the 'black sheeps' of the family & the language spoken in daily life, there is an attempt to dispel some of the stereotypes associated with the community.
My only peeve is - I felt the women characters didn't get enough time or focus considering they were more multidimensional than the male characters were & they were often at the center of some major personal tragedies. I would love to know more about what those changing times meant for women & their identities, in depth.
Great translation effort considering I was able to appreciate the lyrical quality of Kannada as spoken there & the nuances of life in North Karnataka, esp the how lives of Kannadiga & Marathi impact each other. Kudos for that.
ಪುಸ್ತಕ ಓದಲು ಪ್ರಾರಂಭಿಸಿದಾಗಿನಿಂದ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ಇರಬಹುದೆಂದುಕೊಂಡು ಓದು ಮುಂದುವರಿಸಿದಾಗ, ಇದೊಂದು ಕುಟುಂಬದ ಕಥೆ ಎಂಬುದು ಅರಿವಾಗತೊಡಗಿ, ಪುಸ್ತಕ ಓದಿ ಮುಗಿಸಿದಾಗ ಅನಿಸಿದ್ದು ಇಷ್ಟು,"ಇದು ಕುಟುಂಬದ ಕಥೆಯಲ್ಲ, ನಮ್ಮ-ನಿಮ್ಮೆಲ್ಲರ ಕುಟುಂಬದ ಕಥೆ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಮೊದಲ್ಗೊಂಡು ಗಾಂಧೀಜಿಯವರ ಸಾವಿನ ಕಾಲದವರೆಗಿನ ಭಾರತದ ಹಳ್ಳಿಗಳ ಜನ ಜೀವನದ ಕಥೆ....
ಒಂದು ನದಿಯ ಹುಟ್ಟಿನಿಂದ ತೊಡಗಿ ಸಾಗರ ಸೇರುವವರೆಗಿನ ವಿವಿಧ ಹಂತಗಳನ್ನು ಸೂಚಿಸುವ ಅಧ್ಯಾಯಗಳ ಮೂಲಕ ಸುಮಾರು ಒಂದು ಶತಮಾನದವರೆಗೆ ಸಮಾಜದಲ್ಲಿ ಆಗುವ ಸ್ಥಿತ್ಯಂತರಗಳನ್ನು ಒಂದು ಕುಟುಂಬದ ಕಥೆಯಾಗಿ ಕಟ್ಟಿಕೊಡುತ್ತಾರೆ ಲೇಖಕರು. ಈ ತಂತ್ರವು ಓದುಗನನ್ನು ಮೊದಲಿನಿಂದ ಕೊನೆಯವರೆಗೂ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.
ಊರುಗಳು ಬೆಳೆದಂತೆ ಸಮಾಜವು ಬೆಳೆಯುತ್ತಾ ಹೋಗಿ, ಹೊಸತನಕ್ಕೆ ತೆರೆದುಕೊಳ್ಳುತ್ತದೆ. ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆ ಮತ್ತು ವೈದ್ಯ ವಿದ್ಯೆಯನ್ನು ಮೈಗೂಡಿಸಿಕೊಂಡ ಒಂದು ಕುಟುಂಬ ವ್ಯವಸ್ಥೆ ಆಧುನಿಕತೆಯ ಕಡೆಗೆ ಹೊರಳುವಾಗ ಉಂಟಾಗುವ ಅಡೆತಡೆಗಳು, ಅನುಭವಿಸುವ ಮಾನಸಿಕ ಕಿರಿಕಿರಿ ಮತ್ತು ಅವೆಲ್ಲವನ್ನು ಜೀರ್ಣಿಸಿಕೊಂಡು ಸಂಪ್ರದಾಯವು ತನ್ನತನವನ್ನು ಉಳಿಸಿಕೊಳ್ಳುವ ಬಗೆಯನ್ನು ಲೇಖಕರು ವಿವರಿಸಿದ್ದಾರೆ.
ಇಲ್ಲಿ ವಿಧವೆಯೊಬ್ಬಳ ರೋದನೆ ಇದೆ. ಕನ್ಯೆಯಾಗಿಯೇ ಉಳಿದವಳ ವ್ಯಥೆ ಇದೆ. ಹಳ್ಳಿಹಳ್ಳಿಗಳಲ್ಲೂ ಸ್ವಾತಂತ್ರ್ಯ ಹೋರಾಟ ಪಸರಿಸಿದ ಬಗೆ ಇದೆ. ಸಂಪ್ರದಾಯಗಳ ನಡುವಿನ ಸಂಘರ್ಷವಿದೆ.
ನದಿಯೊಂದು ಹರಿಯುತ್ತಾ ಎಲ್ಲವನ್ನೂ ತನ್ನೊಳಗೆ ಜೀರ್ಣಿಸಿಕೊಂಡು ಮುಂದುವರೆಯುವಂತೆ, ಸಮಾಜದೊಳಗೆ ಆಗುವ ಪ್ರತಿಯೊಂದು ಬದಲಾವಣೆಗಳು ನಿಧಾನಕ್ಕೆ ಎಲ್ಲರೊಳಗೊಂದಾಗು ತ್ತವೆ. ಮೊದಲು ಕಷ್ಟವೆನಿಸಿದರೂ,ಬದಲಾವಣೆಗಳು ನಿಧಾನವಾಗಿ ಜನಜೀವನದಲ್ಲಿ ನೆಲೆ ನಿಂತು ಬಿಡುತ್ತವೆ ಎಂಬುದನ್ನು ಈ ಕಾದಂಬರಿಯುದ್ದಕ್ಕೂ ಕಾಣಬಹುದು.
A good novel which analyses the life of a village from 1857- 1947. It analyses the effect of the global changes on the simple life of the village. Good read.
ಒಂದೊಳ್ಳೆ ಪುಸ್ತಕ ಕೊಡುವ ಖುಷಿ ಅಷ್ಟಿಷ್ಟಲ್ಲ. ಈ ಪುಸ್ತಕ ಮುಗಿದಾಗ ಆವರಿಸುವ ತಂಪು, ಮನಸ್ಸಿಗೆ ಆಗುವ ಮುದ ಓದಿಯೇ ಅನುಭವಿಸಬೇಕು. ಹಾಗಂತ ಕಾದಂಬರಿ ಪೂರ್ತಿ ಸಂತಸದ ಬುಗ್ಗೆಯ? ಏನಲ್ಲ. ನೇಮ, ನಿಷ್ಠೆಯಿಂದ, ಕರ್ತವ್ಯ ಪರತೆಯಿಂದ ತನ್ನ ಪಾಲಿನ ಕರ್ಮವನ್ನು ಮುಗಿಸಿ ಇಹ ಲೋಕ ತ್ಯಜಿಸಿದ ವಾಸುದೇವಾಚಾರ್ಯ ಪಂತ ಎನ್ನುವ ಒಬ್ಬರ ಜೀವನದ ಕಥೆ, ಆಂತರ್ಯದ ಕಥೆ, ನಮ್ಮ ನಿಮ್ಮೆಲ್ಲರ ಕಥೆ.
ಮೊದಲನೆಯದಾಗಿ ಹಿಡಿಸಿದ್ದು ಕಥೆ ಹೇಳಿದ ಭಾಷೆ ಪೂರ್ತ ನಮ್ಮ ಧಾರವಾಡದ ಭಾಷೆ, ಭಾಳ ಜನಕ್ಕ ಈ ಕಡಿ ದಕ್ಷಿಣದ ಮಂದಿಗಿ ತಿಳಿಯಂಗಿಲ್ಲ, ಆದರೆ ನನಗ ಭಾಳ ಅಂದರೆ ಭಾಳ ಸೇರ್ತು.
1857 ರ ಸಿಪಾಯಿ ದಂಗೆಯ ಕಾಲದಲ್ಲಿ ಪಾಟ್ನಾದ ನಾನಾ ಸಾಹೇಬರು ಕಳುಹಿಸಿದ ವಾರ್ತೆಯನ್ನು ನರಗುಂದದ ಬಾಬಾ ಸಾಹೇಬರಿಗೆ ಮುಟ್ಟಿಸಲು ಬರುವ ಇಬ್ಬರು ಬ್ರಾಹ್ಮಣ ಅಣ್ಣ ತಮ್ಮಂದಿರು - ಕಮಲನಾಭ ಪಂತ - ಪದ್ಮನಾಭ ಪಂತ. ನವಲಗುಂದದ ದೇಸಾಯರ ಕೈಸೆರೆಯಾಗಿ, ಪಿಂಡಾರಿಗಳೇನೋ ಎಂಬ ಅನುಮಾನದಿಂದ ಶುರುವಾಗಿ, ಪದ್ಮನಾಭ ಪಂತ ತಪ್ಪಿಸಿಕೊಂಡು ಓಡಿಹೋಗಿ ನರಗುಂದದ ದಂಗೆಯಲ್ಲಿ ಬಲಿಯಾಗಿ ವೈದ್ಯನಾದ ಕಮಲನಾಥ್ ಪಂತ ನವಲಗುಂದದಲ್ಲಿ ದೇಸಾಯರ ಆರೈಕೆಗೆ ನಿಂತು, ಕಮಲಯ್ಯನಾಗಿ ಮುಂದೆ ಸಾವಿತ್ರಿ ಬಾಯಿ ಎಂಬ ಮಾಧ್ವ ಹುಡುಗಿಯನ್ನು ಮದುವೆಯಾಗಿ ಕಮಲಾಚಾರ್ ಪಂತ ಆದರು. ಅವರ ಮಗನೇ ಈ ವಾಸುದೇವಾಚಾರ್ಯ ಪಂತ, ಅವರ ವಂಶ ವೃಕ್ಷದ ಕಥೆಯೇ ಈ 'ಹಳ್ಳ ಬಂತು ಹಳ್ಳ'.
ಕಮಲಯ್ಯ ಮತ್ತು ಸಾವಿತ್ರಿ ಬಾಯಿಯ ಮಕ್ಕಳಾದ ವಾಸುದೇವ - ವಾಸಣ್ಣ, ವೆಂಕಟ - ವೆಂಕಣ್ಣ ಮತ್ತು ಅಂಬಕ್ಕ. ಬಾಲ ವಿಧವೆಯಾಗಿ ಮಡಿಯಾಗಿ ತವರು ಸೇರುವ ಅಂಬಕ್ಕ , ಮೂರು ಮಕ್ಕಳ ನಂತರ ಹೆಂಡತಿಯನ್ನು ಕಳಕೊಂಡು ವಿದುರನಾಗುವ ವೆಂಕಣ್ಣ, ಮನೆಗೆಲ್ಲ ಹಿರಿಯರಾಗಿ ಕಾಕಾ ಮತ್ತು ಅವ್ವ ಆಗುವ ವಾಸುದೇವಾಚಾರ್ಯ ಮತ್ತು ಧರ್ಮ ಪತ್ನಿ ತುಳಸಕ್ಕ. ಇವರ ವಂಶವೃಕ್ಷದ ಜೊತೆಗೆ ಹರಿದು ಬರುವ ದೇಶದಲ್ಲಾಗುವ ಬದಲಾವಣೆಗಳು, ಅಸಹಕಾರ ಚಳುವಳಿ, ಬಾಲಗಂಗಾಧರ ತಿಲಕರ, ನೆಹರೂ, ಗಾಂಧಿ, ಬೋಸರ ಕಾಲ.. ಕ್ವಿಟ್ ಇಂಡಿಯಾ ಚಳುವಳಿ, ಕೊನೆಗೆ ಹಣ್ಣು ಹಣ್ಣು ವಾಸುದೇವಾಚಾರ್ಯರೂ ಸಹ ನೋಡುವ ಸ್ವಾತಂತ್ರ್ಯ ಸಂಭ್ರಮ.
ನಂತರ ಕಾಡುವ ಗಂಟಲಿನ ಕ್ಯಾನ್ಸರ್.. ಅಂತರ್ಮುಖಿಯಾಗಿ ತಮ್ಮ ಇಡೀ ಜೀವನವನ್ನು ಒಮ್ಮೆ ಮೌನವಾಗಿ ಅವಲೋಕನ ಮಾಡಿಕೊಳ್ಳುವ ವಾಸುದೇವಾಚಾರ್ಯರು. ತಮ್ಮ ಇಡೀ ಜೀವನವನ್ನು ಜತನದಿಂದ ಶಿಸ್ತಿನಿಂದ ಇದ್ದರೂ ದುಷ್ಟನಾದ ಮಗ ಬೋಧರಾಯ, ಸ್ವಾತಂತ್ರ್ಯ ಸಂಗ್ರಾಮದ ಜ್ವಾಲೆಗೆ ಆಹುತಿಯಾಗುವ ಇನ್ನೊಬ್ಬ ಮಗ ರಾಮಚಂದ್ರ, 12 ನೆ ವಯಸ್ಸಿಗೆ ಗಂಡನ ಮನೆ ಸೇರಿದ 10ತಿಂಗಳಿಗೆ ಅತ್ತೆ ಮನೆಯವರು ಬಾವಿಗೆ ನೂಕಿ ಕೊಂದ ಮಗಳು ಸೋನಕ್ಕ. ಪ್ಲೇಗ್ ಮಾರಿಗೆ ಬಲಿಯಾದ ತಮ್ಮ ವೆಂಕಣ್ಣ, ಮನೆ ತುಂಬಾ ತಿನ್ನುವ ಬಾಯಿಗಳು ಏಕೈಕ ಆಸರೆ ವಾಸಣ್ಣಾ.
ಕಂಗೆಟ್ಟಾಗ ಮೊರೆ ಹೋಗುವ ಕುಲದೈವ ಲಕ್ಷ್ಮಿ ನರಸಿಂಹ, ಅವರ ಆತ್ಮ ಸಂಗಾತಿ ಮಾರುತಿ ರಾಯ, ಸ್ನೇಹಿತ, ಹಿತೈಷಿಗಳಾದ ಅಪಾವರು, ನಿಷ್ಠೆಯಿಂದ ಯಾರಿಂದಲೂ ಒಂದು ರೂಪಾಯಿ ತೆಗೆದುಕೊಳ್ಳದೆ ಮಾಡಿದ ವೈದ್ಯ ವೃತ್ತಿ ಈ ಎಲ್ಲವನ್ನೂ ನೆನೆಯುತ್ತಾ, ಕೊನೆಯ ದಿನ ಮನೆಯ ಎಲ್ಲ ದೇವರ ದರ್ಶನ ಮಾಡುತ್ತಾ - ಲಕ್ಷ್ಮಿ ನರಸಿಂಹ, ಶ್ರೀ ಮಠದ ಸ್ವಾಮಿಗಳು ನೀಡಿದ ಕೃಷ್ಣನ ಮೂರ್ತಿ, ಮನೆಯಲ್ಲಿರುವ ಮೂರು ಸಾಲಿಗ್ರಾಮ, ರಾಯರ ಬೃಂದಾವನ - ಎಲ್ಲ ನೋಡಿ ಕಣ್ತುಂಬಿಕೊಂಡು ಏಕಾದಶಿಯ ದಿನ ಬೆಳಗ್ಗೆ ಅವರ ಇಷ್ಟ ದೈವ ಮಾರುತಿರಾಯ ಅವರನ್ನು ಭೂ ಲೋಕದಿಂದ ಕರೆದುಕೊಂಡು ಹೋಗುತ್ತಾನೆ. ಇಡೀ ಊರಿಗೆ ಊರು, ಪಕ್ಕದ ಊರಿನ ಜನರು, ಜಾತಿ, ಮತ, ಧರ್ಮದ ಯಾವ ಹಂಗಿಲ್ಲದೆ ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತದೆ.
ವಂಶದ ಕವಲುಗಳು ಬೆಳೆಯುತ್ತಾ ಧಾರವಾಡ, ಮುಂಬೈ, ಮೀರಜ್ ಇಲ್ಲೆಲ್ಲಾ ಕಡೆ ಬೆಳೆದು ಬೇರು ಬಿಡುವುದು. ಅಂತರ್ಜಾತೀಯ ಮದುವೆಗಳು, ಕನ್ನಡ - ಮರಾಠಿ ಭಾಷೆಯ ತಿಕ್ಕಾಟ, ಸಂಪ್ರದಾಯ - ಆಚರಣೆಗಳ ಹಿಂದೆ ಇರುವ ನಿಷ್ಠೆ - ನೋವು, ಆದರ, ಹವಣಿಕೆ, ಎಲ್ಲವೂ ಲೇಖಕರು ಅತ್ಯದ್ಭುತವಾಗಿ ನಿರೂಪಿಸಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಕೃತಿ. ಎಲ್ಲರೂ ಓದಲೇ ಬೇಕಾದ ಕೃತಿ. ಓದು ಸಂಪನ್ನವಾದಾಗ ಆಗುವ ಖುಷಿ ಅನುಭವಿಸಿಯೇ ತಿಳಿಯಬೇಕು!
This entire review has been hidden because of spoilers.
Shrinivas Vaidya’s A Handful of Sesame, originally written in Kannada as Halla Bantu Halla, opens during the turbulent times of the 1857 uprising against the East India Company. Two Brahmin brothers, Kamalnabh and Padmanabh Panth, set out from Kashi to join the rebellion but face adversity. Padmanabh’s tragic death and Kamalnabh’s eventual settlement in the southern town of Navalgund mark the beginning of a multigenerational saga. The narrative then goes on to chronicle the lives of the Panth family over nearly a century, encompassing their personal struggles, and cultural shifts.
First published in 2004, the novel, which garnered the Sahitya Akademi Award, is a fine exploration of family, history, and culture set against the backdrop of India’s colonial upheavals and early steps toward modernity.
I loved how Vaidya immerses us in the everyday life of a Brahmin family, with his rich portrayal of rituals, dialects, and social structures. He introduces a host of characters, and for the longest time I struggled to keep track of who’s who. But as the story developed so did the characters, with each one having their own personal experiences. This is particularly evident in how the novel weaves local events, like the opening of English schools, into the lives of the Panth family, subtly illustrating how modernity affected life.
The characters also evolve in different ways - for example, Kamalnabh’s transformation into Kamalayya and his integration into Navalgund life sets the stage for the way his son, Vasanna who grows into being the family’s linchpin. Secondary characters, from Vasanna’s wife, Tulsakka, to Venkanna, are neither idealized nor trivialized but serve to reflect the intricacies of familial relationships and individual desires.
Another aspect that I liked was how, unlike many Indian novels that frame tradition and modernity in conflict, A Handful of Sesame portrays the gradual adoption of Western ways of life like schools, professions, infrastructure, etc.
All this also means the novel moves at a snail’s pace. Events and conversations are recounted in detail and there are some repetitions. It reflects life to the T but that’s also a bit of a drawback, if I can say so. There were times when I did feel the story drag and caught myself wishing things would move on to the next turning point.
The English translation by Maithreyi Karnoor is exemplary. She manages to render the north Karnataka dialect into English with cultural and linguistic fidelity. Karnoor preserves the novel’s essence, ensuring that its poetic nuances and cultural richness are not lost.
Definitely read it but expect to take some time to finish.
*ಹಳ್ಳ ಬಂತು ಹಳ್ಳ:* *ಶ್ರೀನಿವಾಸ ವೈದ್ಯ* *ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಾದಂಬರಿ*
ಹಳ್ಳದಲ್ಲಿ ನೀರು ಹರೀತನೆ ಇದ್ದರೆ ಜೀವ. ಹಳೆ ನೀರಿನ ಜೊತೆ ಹೊಸ ನೀರು ಸೇರಿ ಹರಿಯುವುದೇ ಅದರ ಧರ್ಮ. ಅಡೆತಡೆಗಳು ಇದ್ದರೂ ನಿರಂತರ ಹರಿಯುವುದೇ ಅದರ ಗುಣ. ಒಮ್ಮೆ ಶಾಂತ, ಒಮ್ಮೆ ರಭಸ.
ನವಲಗುಂದದ ಬ್ರಾಹ್ಮಣ ಕುಟುಂಬದ ಕಥೆಯ ಜೊತೆ, ೧೮೫೭ ರ ಸಿಪಾಯಿದಂಗೆಯಿಂದ ಆರಂಭವಾಗಿ ಗಾಂಧೀಜಿಯವರ ಸಾವಿನ ಕಾಲದವರೆಗೂ ಹರಡಿಕೊಂಡಿರುವ ಈ ಕಾದಂಬರಿಯಲ್ಲಿ ಆ ಕಾಲಘಟ್ಟದಲ್ಲಿ ನಡೆಯುವ ಸಾಮಾಜಿಕ,ಆರ್ಥಿಕ,ಧಾರ್ಮಿಕ ಬದಲಾವಣೆಗಳು ವಾಸುದೇವಾಚಾರ್ಯ ಪಂತರ ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರಿತು ಎನ್ನುವುದನ್ನು ಧಾರವಾಡ ಬ್ರಾಹ್ಮಣ ಕನ್ನಡ ಭಾಷೆಯಲ್ಲಿ ವೈದ್ಯರು ಸೊಗಸಾಗಿ ವಿವರಿಸಿದ್ದಾರೆ. ಮೂರು ತಲೆಮಾರುಗಳು ಈ ಬದಲಾವಣೆಯನ್ನು ಹೇಗೆ ಒಪ್ಪಿಕೊಳ್ಳುತ್ತಾರೆ ಎಂದು ಕಣ್ಣಿಗೆ ಕಟ್ಟುವ ಹಾಗೆ ಹೇಳಿದ್ದಾರೆ.
ಮಾಧ್ವ ಸಂಪ್ರದಾಯಸ್ಥ, ವೈದ್ಯ ಮತ್ತು ವೈದಿಕ ವೃತ್ತಿ ಮಾಡುವ ವಾಸುದೇವಚಾರ್ಯರು ಕೂಡು ಕುಟುಂಬದ ನೊಗ ಹೊತ್ತವರು, ಸಿಡುಕು ಸ್ವಭಾವದವರು ಹೊಸತನಕ್ಕೆ ಹೊಂದಿಕೊಳ್ಳಲು ಅವರಿಂದ ಸಾಧ್ಯವಾಗುವುದಿಲ್ಲ.ಹೊಸ ಜಾಗ, ಹೊಸ ಪದ್ದತಿಗಳು,ಹೊಸ ವಿಚಾರಧಾರಣೆಗಳಿಗೆ ಗೊಂದಲ ಉಂಟುಮಾಡುತ್ತದೆ. ಅವರ ಮತ್ತು ಅವರ ತಮ್ಮನ ಮಕ್ಕಳು ಅವರವರ ದಾರಿಗೆ ಕವಲಾಗಿ ಕಡೆತನಕ ಇವರು ನವಲಗುಂದಕ್ಕೇನೆ ಅಂಟಿಕೊಂಡವರು. ತುಳಸಕ್ಕ, ರುಕಮ, ಅಂಬಕ್ಕ, ನಾರಾಯಣ ನೆನಪಿನಲ್ಲಿ ಉಳಿಯುವ ಪಾತ್ರಗಳು. ಕೊನೆ ತಲೆಮಾರಿನ ಹುಡುಗರು ಆಗಿನ ಕಾಲಕ್ಕೆ ಹೊಸದಾಗಿ ಬಂದ ಕ್ರಾಂತಿಗಳಿಗೆ ಮನಃಪೂರ್ವಕವಾಗಿ ಪರಿವರ್ತನೆಗೊಂಡವರು. ಸ್ತ್ರೀ ಶಿಕ್ಷಣ, ಸಬಲೀಕರಣ, ಮನೋರಂಜನೆ, ಉದ್ಯೋಗ, ವಿವಾಹ ಎಲ್ಲವೂ ಸ್ವಾತಂತ್ರ್ಯ ಭಾರತದ ಹೊತ್ತಿಗೆ ಹೇಗೆ ಮಾರ್ಪಾಟುಗೊಂಡವು ಎಂಬುದನ್ನು ಕೂಡ ವೈದ್ಯರು ವಿವರಿಸಿದ್ದಾರೆ. ಹಾಗೆನೇ ಒಂದು ಕೂಡು ಕುಟುಂಬದ ಸಂಪ್ರದಾಯಗಳು ಕ್ರಮೇಣ ಕಳಚಿಕೊಂಡು ಆಧುನಿಕತಗೆ ಹೇಗೆ ತೆರೆದುಕೊಂಡು ಬದುಕನ್ನು ಮುಂದುವರೆಸಿತು ಎಂದು ಹಳ್ಳದ ರೂಪಗಳನ್ನು ಕೊಟ್ಟು ಚಿಂತನೆಗೆ ಹಚ್ಚಿದ್ದಾರೆ.
“ಶ್ರೀನಿವಾಸ ವೈದ್ಯರ ನಾನು ಓದಿದ ಮೊದಲ ಕೃತಿ. ಇದು ಕೂಡ ಲೇಖಕರ ಮೊದಲ ಕಾದಂಬರಿ. ಯಾವ ಕಡೆಯಿಂದಲೂ ಮೊದಲ ಕೃತಿ ಎನ್ನಿಸುವುದೇ ಇಲ್ಲ. ಬರವಣಿಗೆಯ ಶೈಲಿಗೆ ನಿಜಕ್ಕೂ ಮಂತ್ರಮುಗ್ಧನಾಗಿದ್ದೆ. ಕೃತಿಯಲ್ಲಿನ ಪಾತ್ರಗಳು ಎಲ್ಲೂ ಕೃತಕವಾಗಿಲ್ಲವೆಂದು ಓದಿನ ಅನುಭವ ತಿಳಿಸುತ್ತದೆ. ಕನ್ನಡದ ಶ್ರೇಷ್ಠ ಕೃತಿಗಳಲ್ಲಿ ಸ್ಥಾನ ಪಡೆದಿರುವ ಕೃತಿ ಓದಿದ ನಂತರವೂ ತುಂಬಾ ಕಾಡಿದ್ದು ನಿಜ.”
“೧೮೫೭ ರ ಸಿಪಾಯಿ ದಂಗೆಯಲ್ಲಿ ಪ್ರಾರಂಭವಾಗುವ ಕಮಲಾಚಾರ್ಯ ಪಂಥದವರ ಕುಟುಂಬದ ಬೇರು ಧಾರವಾಡ ದೇಸಗತಿಯ ದೇಸಾಯಿಯವರ ಅಧಿಕಾರಕ್ಕೆ ಸಿಲುಕಿ ನವಲಗುಂದದಲ್ಲಿ ಬೇರೂರತ್ತದೆ. ವೈದ್ಯರಾಗಿರುವ ಪಂಥರು ದೇಸಾಯಿಯವರ ಆರೋಗ್ಯ ಶುಶ್ರೂಷೆಯಲ್ಲಿ ತೊಡಗಿ ಸಂಸಾರಸಮೇತರಾಗಿ ನೆಲೆಯೂರುತ್ತಾರೆ.”
“ಒಂದು ಕುಟುಂಬವು ಉತ್ತಮ ಸಂಸ್ಕಾರವಂತನಿಂದ ಹೇಗೆ ಉನ್ನತ ಮಟ್ಟಕ್ಕೆ ಹೋಗುತ್ತದೆಂದು ವಾಸುದೇವಾಚಾರ್ಯರ ಪಾತ್ರ ಸಾಕ್ಷಿಯಾಗುತ್ತದೆ. ಮೊದಲ ತಲೆಮಾರಿನ ಬಡತನ, ಎರಡನೇ ತಲೆಮಾರಿನ ಆಧುನಿಕ ಶಿಕ್ಷಣದ ಜೊತೆಗೆ ಸ್ವಾತಂತ್ರ್ಯ ಹೋರಾಟದ ರಾಜಕೀಯ ಕೊನೆಯ ತಲೆಮಾರಿನಲ್ಲಿ ಒಬ್ಬಬ್ಬರ ಬದುಕೂ ಬೇರೆ-ಬೇರೆ ರಾಜ್ಯಗಳಲ್ಲಿ ನೆಲೆ ಕಂಡುಕೊಳ್ಳುತ್ತವೆ. ಮೇಲ್ನೋಟಕ್ಕೆ ಅವಿಭಕ್ತ ಬ್ರಾಹ್ಮಣ ಕುಟುಂಬದ ಕಥೆ ಎನಿಸಿದರೂ ಜೊತೆಯಾಗಿ ಒಂದು ಊರಿನ, ದೇಶದ ಕಥೆಯನ್ನೇ ಎಳೆಯಾಗಿ ರಚಿಸಿದ್ದಾರೆ.”
“ವಾಸುದೇವ ಆಚಾರ್ಯರು, ತುಳಸಕ್ಕ, ಅಂಬಕ್ಕ , ನಾರಾಯಣ, ರುಕುಮಾ, ಬೋಧ, ರಾಮು ನೆನಪಿನಲ್ಲಿ ಉಳಿಯುತ್ತಾರೆ. ಸೋನಿಯ ಹಠಾತ್ತನೆ ಸಾವು ಕೊನೆಯವರೆಗೂ ಕಾಡುತ್ತದೆ. ಕುಟುಂಬವನ್ನು ನಡೆಸುವುದರಲ್ಲಿ ವಾಸುದೇವ ಆಚಾರ್ಯರು ಮಡಿಯಿಂದ ಮಾದರಿಯಾಗುತ್ತಾರೆ. ವಿಧವೆಯಾದ ಅಂಬಕ್ಕನ ಅಂತರಂಗ ಮತ್ತು ಕನ್ಯೆಯಾಗಿಯೇ ಉಳಿದ ರುಕುಮಾನ ಅಂತರಂಗವು ಹೆಚ್ಚು ಅಂತಃಕರಣವಾಗಿದೆ.
“ಪ್ಲೇಗ್ ,ಯುದ್ಧ,ಕ್ವಿಟ್ ಇಂಡಿಯಾ ಚಳುವಳಿ, ಉಳುವವನೇ ಹೊಲದೊಡೆಯ, ಬಾಂಬೆಯಲ್ಲಿನ ಕಾಂಗ್ರೆಸ್ ಸಮಾವೇಶ,ಪೊಲೀಸರ ದೌರ್ಜನ್ಯ,ಮೊದಲು ಕಾಣಿಸಿಕೊಂಡ ಮೋಟಾರು ಗಾಡಿ , ಬೆಲೆ ಏರಿಕೆ - ಹೀಗೇ ಹಲವು ಸಂಗತಿಗಳು ಸ್ವಾತಂತ್ರ್ಯ ಪೂರ್ವ ಭಾರತದ ಅನಾವರಣ ಮಾಡಿಸುತ್ತದೆ !”
ಇದೊಂದು ಸಾಮಾಜಿಕ ಕಾದಂಬರಿ. ಸಿಪಾಯಿ ದಂಗೆಯ ಸಮಯದಲ್ಲಿ ಉತ್ತರ ಭಾರತದಿಂದ ಯಾವದೋ ಕೆಲಸದ ಮೇಲೆ ಬಂದು ನವಲಗುಂದದಲ್ಲಿ ಸಿಕ್ಕಿ ಹಾಕಿಕೊಂಡು, ಅನಿವಾರ್ಯವಾಗಿ ಅಲ್ಲೇ ಬದುಕು ಶುರು ಮಾಡಿದವರ ಕಥೆ. ವಾಸುದೇವಾಚಾರ್ಯರು ದೈವ ಭಕ್ತರು, ನಾಟಿ ವೈದ್ಯರು ಹಾಗೂ ಒಂದು ಅವಿಭಕ್ತ ಕುಟುಂಬದ ಹಿರಿಯ. ಅವರ ಕುಟುಂಬದ ಕಥೆಯೇ ಹಳ್ಳ ಬಂತು ಹಳ್ಳ. ಈ ಕಾದಂಬರಿಯಲ್ಲಿ ನನ್ನ ಗಮನ ಸೆಳೆದಿದ್ದು ಎರಡು ವಿಷಯ. ೧. ಧಾರವಾಡ ಸೀಮೆಯ ಭಾಷೆ ೨. ಜನಸಾಮಾನ್ಯರ ನಡುವಿನ ಸ್ವತಂತ್ರ ಹೋರಾಟ.
ನಾವು ಸ್ವತಂತ್ರ ಹೋರಾಟದ ಬಗ್ಗೆ, ಚಳುವಳಿಗಳ ಬಗ್ಗೆ, ಹಿಂಸೆ, ಅಹಿಂಸಾ ಸತ್ಯಾಗ್ರಹ, ಉಪ್ಪಿನ ಚಳುವಳಿ ಹೀಗೆ ಎಷ್ಟೋ ವಿಷಯಗಳ ಬಗ್ಗೆ ಕೇಳಿದ್ಧೀವಿ. ಆದ್ರೆ ಹಳ್ಳಿ ಹಳ್ಳಿಗಳಲ್ಲಿ ಸಾಮಾನ್ಯ ಜನರ ಮೇಲೆ ಹೋರಾಟದ ಪ್ರಭಾವ, ಅವರ ಪಾಲ್ಗೊಳ್ಳವಿಕೆ ಮತ್ತು ಹೋರಾಟಗಾರರ ಕುಟುಂಬದವರ ತಳಮಳ ಹೀಗೆ ಇವುಗಳ ಬಗ್ಗೆ ವಿವರವಾಗಿ ಈ ಕಾದಂಬರಿಯಲ್ಲಿ ಇದೆ.
ಆದರೆ ಇದು ಬರೀ ಸ್ವತಂತ್ರ ಹೋರಾಟದ ಕಥೆ ಅಲ್ಲ. ವಾಸುದೇವ ಆಚಾರ್ಯ ಅವರ ಕುಟುಂಬದ ಕಥೆ ಅದರ ಜೊತೆಗೆ ಸ್ವತಂತ್ರ ಹೋರಾಟ ತಳುಕು ಹಾಕಿಕೊಂಡಿದೆ.
ಮಾಡಿ ಮೈಲಿಗೆ ದೇವರು ಪೂಜೆ ಭಕ್ತಿ ಆಧುನಿಕತೆ ಸಮಾಜ ಹೀಗೆ ಎಲ್ಲಾ ವಿಷಯಗಳ ಹೂರಣ ಇದರಲ್ಲಿದೆ.
ಕಥೆಯನ್ನೆನೋ ಎಲ್ಲರೂ ಕಟ್ಟಬಹುದು. ಆದರೆ ಆ ಕಥೆಯೊಟ್ಟಿಗೆ ಓದುಗರನ್ನು ಬೆಸೆದು, ಮನಸ್ಸಿಗೆ ಬೇಸರಿಸದಂತೆ ಕಥೆ ಸಾಗಿಸೋದು ಒಂದು ಕಲೆ. ಶ್ರೀನಿವಾಸ ವೈದ್ಯರಿಗೆ ಈ ವಿದ್ಯೆ ತಾನಾಗಿಯೇ ಒಲಿದಿದೆ.ಈ ಕಾದಂಬರಿ ಓದಿದ ಎಲ್ಲರಿಗೂ ನನ್ನ ಈ ಮೆಚ್ಚಿಗೆಯಲ್ಲಿ ಸಹಮತವಿದೆ. ಬಾಳಿನಲ್ಲಿ ಅನಿರೀಕ್ಷಿತ ಆವರ್ತನೆಗಳನ್ನು ಎದುರಿಸಿ, ಜೀರ್ಣಿಸಿಕೊಂಡು ಸಾಗುವ ಮಾನವ ಬದುಕುಗಳ ಪಡಿಯಚ್ಚೆ ಈ ಕಾದಂಬರಿ.
ಕಾದಂಬರಿಯುದ್ದಕ್ಕೂ ಸ್ವಾತಂತ್ರ್ಯನಂತರದಲ್ಲಿ ಆಗಲಿರುವ ಬದಲಾವಣೆಯ ಛಾಯೆ ನೆರಳಿನಂತೆ ಸಾಗಿ ಬರುತ್ತವೆ. ಅದರೊಟ್ಟಿಗೆ ವಾಸುದೇವಾಚಾರ್ಯರನ್ನ ಕಾಡುವ ಅನಿಶ್ಚಿತ ಭವಿಷ್ಯತ್ತಿನ ಕಡೆಗೂ ಈ ಕಾದಂಬರಿ ಕಾಣ್ಣಾಯಿಸಿದೆ. ಒಂದೇ ಸಮಯದಲ್ಲಿ ತೀರಾ ವೈಯಕ್ತಿಕ ಹಾಗೂ ಸಾಮೂಹಿಕವಾದ ಎರಡು ನೆಲೆಗಳ ಹರಿವನ್ನ ಈ ಕಾದಂಬರಿ ಸಾಧಿಸಿದೆ. ತೀರಾ ವೈಯಕ್ತಿಕ ನೆಲೆಯನ್ನ ಲಕ್ಷದಲ್ಲಿಡುವ ನನಗೂ ಇಲ್ಲಿ ಮೆಚ್ಚಿಗೆಯಾದದ್ದು ಆಚಾರ್ಯರ ತಾಳ್ಮೆ, ಪ್ರೀತಿ ತುಂಬಿದ ಅಂತಃಕರಣ, ಜೀವನವನ್ನು ಎದುರಿಸಿ ಬೀಳ್ಕೊಂಡ ರೀತಿಗಳೇ, ಅವರೇ ಈ ಕಾದಂಬರಿಯ ಮೂಲ ಹರಿವು ಎಂಬುದು ನನ್ನ ಅನಿಸಿಕೆ. ತುಂಬು ಜೀವನ ಮುಖ್ಯವೇ ಹೊರತು ತುಂಬಾ ಇದ್ದರೆ ಮಾತ್ರ ಜೀವನವಲ್ಲ....ಎಂಬ ನನ್ನ ಆಸ್ಥೆಯನ್ನ ಮತ್ತೊಮ್ಮೆ ಈ ಕಾದಂಬರಿ ನೆನಪಿಸಿ ಅದನ್ನ ಇನ್ನಷ್ಟು ಗಟ್ಟಿಯಾಗಿಸಿತು.
Marathi mixed kannada language in a book is plus point...3 generations...3 different views...water can't be standstill so as life..flowing is the nature of water it will take everything on itz course yet it has itz own specificity....so as the story here also... characters of Vasudevacharya Ambaakka Tulasakka Narayana are well pictured.... changes in social and familial life in pre independence Era to independence is been well written...