This novel is a bit stodgy and incident - heavy in its weave. Yet in its blending of complexity of detail and vitality of theme, in its delightfully graphic depiction of village Karnataka and finally in its suggestion that there is a way out of the claustrophobia of caste, it is a contribution to Kannada and Indian literature.
Subramanya Raje Urs (Kannada: ಸುಬ್ರಮಣ್ಯ ರಾಜೇ ಅರಸ್; 1916–1998) popularly known as Chaduranga was a very famous Kannada author from Mysore. He wrote four novels Sarvamangala, Uyyale, Vaishakha and Hejjala and a few other short stories. Chaduranga was honoured with the Karnataka State Rajyotsava award, the State Sahitya Academy award, the Central Sahitya Academy award, and an honorary doctorate by the Mysore University in 1993.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ. ಚದುರಂಗರ ಕೃತಿಯ ಓದುತ್ತಾ ಹೋದ ಹಾಗೆ ನಾನು ಯಾಕೆ ಇವರ ಜಾಸ್ತಿ ಓದಲಿಲ್ಲ ಎಂಬುದಕ್ಕೆ ಹಠಾತ್ತಾಗಿ ಕಾರಣ ಹೊಳೆಯಿತು. ಇವರ ಈ ಹಿಂದಿನ ಕೃತಿ ನಾನು ಓದಿದ್ದು ' ಮೃಗಯಾ' ಎಂಬ ಕಥಾಸಂಕಲನ. ಅದನ್ನು ಓದಿದ್ದು ಎಂಟನೇ ಕ್ಲಾಸಿನಲ್ಲಿ. ಆಗ ಅದರಲ್ಲಿ ಬಂದ ಲೈಂಗಿಕ ವಿವರಗಳು ,ಅನೈತಿಕ ಸಂಬಂಧಗಳು ಷಾಕ್‌ನಂತೆ ಎದುರಾಗಿ ಬೆಚ್ಚಗೆ ಮಾಡಿದ್ದೂ ಆಮೇಲೆ ಹೇವರಿಕೆ ಹುಟ್ಟಿಸಿದ್ದು ಇದನ್ನು ಓದುವಾಗ ನೆನಪಾಯಿತು. ಆಮೇಲೆ ಹೆಜ್ಜಾಲ ಕೃತಿ ಇ ಬುಕ್ ಲಭ್ಯ ಇದ್ದರೂ ಓದಲು ಹಿಂಜರಿದಿದ್ದೆ. ಈಗ ಎಷ್ಟೋ ದಿನಗಳಿಂದ ಬಾಕಿ ಇದ್ದ ಈ ಕೃತಿ ಓದಲು ಶುರು ಮಾಡಿದೆ. ಅಪ್ಪಟ ಗ್ರಾಮ್ಯ ಭಾಷೆಯ ಚಿತ್ರಣ ಚೆನ್ನಾಗಿದ್ದರೂ ಯಾವುದರ ಭಯ ಇತ್ತೋ ಅದೇ ಆಯಿತು. ಲೈಂಗಿಕ ವಿವರಣೆ ಹೊಸತಲ್ಲ. ಈಗ ವಯಸ್ಸೂ ಆಯಿತು. ಆದರೆ ವ್ಯಕ್ತಿತ್ವ ಚಿತ್ರಣ ಅಷ್ಟು ಗಾಢವಾಗಿ ಮಾಡಿ ಕೊನೆಗೆ ಈ ರೀತಿಯಾದ ಬದಲಾವಣೆ ಯಾಕೋ ಅಸ್ವಸ್ಥನನ್ನಾಗಿ ಮಾಡಿತು. ಚದುರಂಗರ ಕೃತಿಗಳಲ್ಲಿ ಇದು ಸಾಮಾನ್ಯವೋ ಏನೋ. ಇಡೀ ಕೃತಿಯ ಸ್ವಾರಸ್ಯ ಬೋರ್‌ವೆಲ್ ಪಂಪಿನಿಂದ ನೀರು ಕುಡಿದಾಗ ಒಂದು ತುಕ್ಕು ಕಹಿ ಬಾಯಿಯೆಲ್ಲ ಆಗ್ತದಲ್ಲ. ಹಾಗೇ ಇದು ಆಯಿತು.
Many authors erased from the history of Kannada literature, "Chaduranga" is one of them. Till its artistic cover on the lonely bookshelves of Sapna book house longing to tell its stories, I never heard of the "Vaishaka" book. I started reading a few days back, and because of the local Kannada language used in narration, it was not an easy read. The story mainly revolves around the Mysuru region, Especially around the villages I grew up and traveled to. Until and unless you are familiar with the Kannada language spoken here, You wouldn't finish this book. The story is composed of village life with versatile characters with lots of exposure to rural life. The main protagonist in the book is a "Lakkha", But there are many characters who play a major role throughout the story. After reading this book, You will understand the Varna system practiced in a village and its exploitation by powerful people as per their needs. Though the book had some sort of abrupt ending, the Contents of the book open up many questions about the functioning society of that era. Though it's a fictional story, the Author has done a tremendous job in presenting reality for what it is without any distortion. Presenting the narrowness and broadness of life through fiction is not an easy task, Reading this book gives you the same journey you experienced through "Kanoora Hegadati" and "Marali Mannige". The story is burning with lust, it buries each character and composes a dark story with its indomitable power. The lust that burns everyone in this story also opens up a reader to the struggle of women and the unfortunate life of deprived people. There are so many things to learn from this book Because each character excavated like mine till its core. Maybe I can't fit everything I want to say in this review. if you liked Kuvempu and Karanta's works, This is your choice.
೧೯೮೧ ರಲ್ಲಿ ಪ್ರಕಟವಾದ ಈ ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದೆ. ನಾ ಓದಿದ ಚದುರಂಗರ ಮೊದಲ ಈ ಕೃತಿ ಮೈಸೂರು, ಮಂಡ್ಯಕಡೆಯ ಅಪ್ಪಟ ಗ್ರಾಮ್ಯಭಾಷೆಯಿಂದ ಕೂಡಿದ್ದು ಅಜ್ಜ ಅಜ್ಜಿಯರ ಮಾತುಗಳ ಶೈಲಿಯ ಜೊತೆಗೆ ಇಡೀ ತಲೆಮಾರಿನ ಧಾಟಿಯನ್ನೇ ಕಣ್ಣಮುಂದೆ ತರಿಸಿತು. ದರಮನಹಳ್ಳಿ ಎಂಬ ಹಳ್ಳಿಯಲ್ಲಿ ನಡೆಯುವ ಈ ಕತೆ ಹೊಲಗೇರಿಯ ಲಕ್ಕನ ಸುತ್ತಲೂ ನಡೆಯುತ್ತದೆ. ಬ್ರಾಹ್ಮಣ ವಿಧವೆಯ ಆಸೆಗಳು ಬಲಶಾಲಿಯಾಗಿ ದೇಹವನ್ನು ನರಳಿಸಿದಾಗ ಅದನ್ನು ತಣಿಸಲು ಅಡ್ಡದಾರಿ ಹಿಡಿಯುವ ರುಕ್ಮಿಣಿಯಿಂದ ಕತೆಯು ರೋಚಕವಾಗುತ್ತಾ ಸಾಗುತ್ತದೆ. ಲಕ್ಕನ ವ್ಯಕ್ತಿತ್ವವನ್ನು ಪ್ರಶ್ನಿಸುವ ಊರಿನ ಆಳುವ ವರ್ಗವೆನಿಸಿಕೊಂಡ ಬ್ರಾಹ್ಮಣ, ಗೌಡ, ಪಟೇಲರ ದೌರ್ಜನ್ಯಗಳನ್ನು ಅತಿಸೂಕ್ಷ್ಮವಾಗಿ ಎತ್ತಿಹಿಡಿಯುತ್ತಾ ಮಾನವನ ಮನಸ್ಸಿನ ಸಂಕೀರ್ಣತೆ, ಸಮಾಜದ ಬದಲಾವಣೆಗಳು ಮತ್ತು ವ್ಯಕ್ತಿಯ ಒಳಜಗತ್ತಿನ ಸಂಘರ್ಷಗಳನ್ನು ಸೂಕ್ಷ್ಮವಾಗಿ ಬಿತ್ತುತ್ತಾ, ಕೆದಕುತ್ತಾ ಓದುಗನಲ್ಲಿ ನೈತಿಕ ಪ್ರಶ್ನೆಗಳನ್ನು ಹುಟ್ಟಿಸುತ್ತದೆ.
ಈ ಕೃತಿಯಲ್ಲಿನ ಪಾತ್ರಗಳು ಎಷ್ಟು ಮುಗ್ಧವೆಂದರೆ…. ಹತ್ತು ರೂಪಾಯಿ ಸಾಲ ತೀರಿಸಲು ವರ್ಷಾನುಘಟ್ಟಲೆ ಜೀವನವನ್ನು ಜೀತದಲ್ಲಿ ಸವೆಸುತ್ತಾರೆ, ಜ್ವರ ಬಂದಾಗ ನಾಲ್ಕು ಮೆಣಸಿನ ಕಾಳುಗಳನ್ನು ಗಂಜಿಯ ಜೊತೆ ಉಂಡು ನರಳಿ ಬಸವಳಿಯುತ್ತಾ ಕೂಲಿಗಾಗಿ ಪರದಾಡುತ್ತಾರೆ, ಒಂದು ಸೀರೆ-ಪಂಚೆಯಲ್ಲಿ ವರ್ಷಪೂರ್ತಿ ಕಳೆಯುತ್ತಾರೆ, ಅಸ್ಪೃಶ್ಯತನವನ್ನು ಪ್ರಶ್ನಿಸಲಾಗದೇ ಅವಿದ್ಯಾವಂತರಾಗಿಯೇ ಉಳಿಯುವ ಜನಸಂಖ್ಯೆ ವೃದ್ದಿಯಾಗುತ್ತಲೇ ಇದೆ, ಋತುಮತಿಯಾಗದ ಹೊಲೆಯ ಹೆಣ್ಣಿನ ಮೇಲೆ ಬಿದ್ದು ತೀಟೆ ತೀರಿಸ್ಕೊಳ್ಳುವ ವರ್ಗ ಊರಿನ ಅನ್ಯಾಯದಲ್ಲಿ ನ್ಯಾಯ ಕೊಡಿಸುವ ಹೋರಾಟದಲ್ಲಿ ಭಾಗಿಯಾಗುತ್ತದೆ. ಬ್ರಾಹ್ಮಣ ಹೆಣ್ಣಿಂದ ಉಂಟಾಗುವ ಸಂದರ್ಭಕ್ಕೆ ಹೊಲೆಯನನ್ನು ಕಂಬಕ್ಕೆ ಕಟ್ಟಿ ಸಾಯುವಂತೆ ಹೊಡೆದು ಬಹಿಷ್ಕರಿಸಿ ಊರಿಂದಲೇ ಅಟ್ಟುತ್ತಾರೆ. ಹೊಲತಿಯ ದೇಹಮಾತ್ರ ಪ್ರತಿಯೊಬ್ಬರಿಗೂ ಬಲಿತ ರಸಪುರಿಯ ಹಣ್ಣಿನಹಾಗೆ ಕಾಣುತ್ತಾಳೆ. ಬೇರೆಯವರ ಜೀವನದಲ್ಲಿನ ನ್ಯೂನತೆಗಳು ಮತ್ತೊಬ್ಬರ ಸ್ವಾರ್ಥವೇ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವ ವರ್ಗ ಇವತ್ತಿಗೂ ಯಾವತ್ತಿಗೂ ಇರುವಂತದ್ದೇ. ಕೊನೆಯಲ್ಲಿ ಬರುವ ಆನೆ ಜನ್ಮ ಕೊಡುವ ಪ್ರಸಂಗದ ರೂಪಕತೆ ಮನುಷ್ಯನ ಕೆನ್ನೆಗೆ ತಟ್ ಅಂತ ಹೊಡೆದಂತಿದೆ.
ಕಥೆ ಹೇಳೋದು ಕಾದಂಬರಿಯ ಉದ್ದೇಶವಲ್ಲ ಎನ್ನುವುದು ಈ ಕೃತಿಯ ಶಕ್ತಿ. ಕಾದಂಬರಿಕಾರನ ಕಲಾವಂತಿಕೆ, ಸೃಜನಶೀಲತೆ ಪಾತ್ರಗಳನ್ನು ಉಬ್ಬಿಸಿ ತಗ್ಗಿಸಿ ಓದುಗನ ಪ್ರಜ್ಞೆಯನ್ನು ಕದಡಿದ ನೀರಿನಂತೆ ನಿರ್ಮಲಗೊಳಿಸದೆ, ಶಾಂತವಾಗಿ ಹರಿಯುವ ತಿಳಿನೀರು ಕೂಡ ತನ್ನ ಸ್ಥಾನವನ್ನು ಉತ್ತಮರೀತಿಯಲ್ಲೇ ಸೇರುವ ಬಗೆಯೂ ಕೂಡ ವಿಶಿಷ್ಟವೇ. ಊರಿನ ಅಂತರಂಗದ ಎಳೆಗಳನ್ನು ಪ್ರತೀ ಪುಟದಲ್ಲಿ ಸಾವಧಾನವಾಗಿ ಬಿಚ್ಚಿಡುತ್ತಾ ಹೋಗುವ ಲೇಖಕರ ಶೈಲಿ ಬಹುಮೆಚ್ಚಿಗೆಯಾಯಿತು. ಕತೆಗೆ ಸಂಬಂದಿಸಿದಲ್ಲದ ಕೆಲವು ಪ್ರಸಂಗಗಳು ಬೇಡವೆನಿಸಿದರೂ ಒಟ್ಟಾರೆಯಾಗಿ ಊರಿನ ಚಿತ್ರಣದಲ್ಲಿ ಇರಲೇಬೇಕಾಗುತ್ತದೆ. ವ್ಯಕ್ತಿ-ಕುಟುಂಬ ಮುಖ್ಯವಲ್ಲದಿದ್ದರೂ ಹಳ್ಳಿಯಲ್ಲಿ ಎಲ್ಲರ ಕಷ್ಟ ಸುಖಗಳನ್ನು ಅಲ್ಪಸ್ವಲ್ಪವಾದರೂ ಹಂಚಿಕೊಳ್ಳಲೇಬೇಕು. ಹಳ್ಳಿಯಲ್ಲಿ ಬೆಳೆದ 90’s ತಲೆಮಾರಿಗೆ ಈ ಕೃತಿಯ ಪ್ರತೀ ಪಾತ್ರವೂ ಪರಿಚಯವಿದ್ದೇ ಇರುತ್ತದೆ. ಲೇಖಕರ ಅಪ್ಪಟ ಗ್ರಾಮ್ಯಭಾಷೆಯ ��ಳಕೆ ಕೃತಿಯನ್ನು ತಬ್ಬಿಮಲಗಿ ರಂಗೇರಿಸಿದೆ.
"Vaishaka," a Kannada novel penned by Chaduranga, delves into the intricate tapestry of caste hierarchy, age-old traditions, and deeply ingrained beliefs. The narrative unfolds in the quaint village of Darumanahalli, nestled near Hunsur. Set against the backdrop of this village, the novel intricately weaves together the lives of individuals from both upper and lower castes, exploring themes of greed, love, and the essence of humanity.
Chaduranga's storytelling transports readers into a world where societal divisions shape destinies. As the characters navigate the complexities of their social positions, some find themselves benefiting while others fall victim to deceit. The narrative echoes the age-old Kannada proverb, "there is no place for good people on earth," leaving readers with a lingering sense of the overarching theme.
One of the novel's most distinctive and commendable features is its masterful utilization of the local language. The vivid portrayal of Darumanahalli and its inhabitants is heightened by the seamless integration of the Kannada dialect, creating an immersive reading experience.
In "Vaishaka," Chaduranga skillfully unravels the intricate threads of caste dynamics, tradition, and human nature. Through the lens of this compelling tale, readers are compelled to reflect on the intricacies of societal norms and the enduring quest for justice and compassion.
This is similar to Rao Bahadur's Gramayana. As opposed to Gramayana it is more close, personal and intricate. Some the plot twist choices intrigues me - from the time of it's writing to my reading it has been about 40 years - now few things appear forced and few are unwanted. The novel picks pace in the latter half but only up till near end. At the climax stage it wanders and plot seems distracted. Best parts are reminisces of the protagonist - fate of his cousin. Some parts are excellent read better than Gramayana (I read that about 15yrs back) - on the hindsight I feel Vaishaakha is more reasonable without magical/fabricated appearance of protagonist when other characters need it.
ಈ ಕಾದಂಬರಿಯು ಬಹಳ ವಿಭಿನ್ನವಾಗಿದೆ, ಕಾರಣ ಇಲ್ಲಿ ಉಪಯೋಗಿಸಿರುವ ಭಾಷೆಯ ಪ್ರಯೋಗ. ಇಲ್ಲಿ ಮಂಡ್ಯ, ಮೈಸೂರು ಪ್ರಾಂತ್ಯದ ಗ್ರಾಮೀಣ ಭಾಷೆಯನ್ನು ಬಳಸಲಾಗಿದೆ. ಇದನ್ನ ಓದುತ್ತಾ ಕುಳಿತ ನನಗೆ ಮೊದಮೊದಲು ಬಹಳ ಇಷ್ಟ ವಾಯಿತು. ಅನಂತರ ಇದನ್ನ ಓದಿ ಮೋಗಿಸುವ ಸಾಹಸ ಮಾಡಬೇಕೋ ಬೇಡವೋ ಎಂದು ಪ್ರಶ್ನಿಸಿಕೊಂಡು, ಹಿಡಿದಮೇಲೆ ಮುಗಿಸ ಬೇಕು, ಅರ್ಧ ಓದಿದ ಕಾದಂಬರಿ ಇದಾಗುವದು ಬೇಡ ಎಂದು ಮುಂದುವರಿಸಿದೆ. ಕಾರಣ ಇದರ ತಂತ್ರ, ಭಾಷಾ ಪ್ರಯೋಗ ಹಾಗೂ ಕತೆಯು ನಿಧಾನಗತಿಂಯಿಂದ ಸಾಗಿ ಮುಂದುವರಿದು ಸ್ವರಸ್ಯವಾಗತೊಡಗುವಲ್ಲಿ ಅರ್ಧ ಕಾದಂಬರಿ ಮುಗಿಯುತ್ತದೆ. ಲೇಖಕರು ತಮ್ಮ ವಿಚಾರ ಮಂಡಿಸಲು ಹೋಗಿ ಹಲವು ಕಡೆ ಕತೆ ದಾರಿ ತಪ್ಪಿದಂತೆ ಅನಿಸುತ್ತದೆ. ಇದು ಒಳಗೊಂಡಿರುವ ವಿಚಾರವೆಂದರೆ, ಗ್ರಾಮೀಣ ಜನಜೀವನ, ಜಾತಿಯ ವ್ಯವಸ್ಥೆಗಳು, ದಲಿತರ ಮೇಲಿನ ದೌರ್ಜನ್ಯ, ಮೂಢನಂಬಿಕೆ, ಅಸ್ಪರ್ಶ್ಯತೆ ಹಾಗೂ ಜನಪದ ಕತೆಗಳು, ಗಾದೆಗಳು, ಪದ್ಯ ಹೀಗೆ ಹತ್ತುಹಲವು. ವಿಚಾರಗಳು ಚೆನ್ನಾಗಿದ್ದರೂ, ಪ್ರಯೋಗಗಳೂ ಹೆಚ್ಚಾಯಿತೇನೋ ನನಗದು ತಿಳಿಯದು. ಕಾದಂಬರಿ ಮುಕ್ತಾಯವು ಗಡಿಬಿಡಿಯಲ್ಲಿ ಮುಗಿದಹಾಗೆ ಅನಿಸಿತು. ಇದರ ಭಾಷಾಶೈಲಿಯನ್ನು ಸವಿಯಲು ಬಯಸುವರು ಇದನ್ನ ಖಂಡಿತವಾಗಿ ಓದಿರಿ.