Prof. who is a senior scholar and speaker. K.S. Narayanacharya was originally from Kanakanahalli in Bangalore district (now Kanakapura).
Father: K.N. Srinivas Desikachar. Mother: Ranganayakamma. He belongs to a family of Vedic scholars. B.Sc from Maharaja College, Mysore. graduates. After B.A. Graduated with Honors and Masters in Modern English Literature. Completed this Ph.D in W.B. Yates and T.S. Studied Indian culture on Eliot's poetry.
He retired as a professor of English at Karnataka College, Dharwad and as the principal of that college. Currently residing in Bangalore. Specializing in the Vedas, Ramayana, Mahabharata and Bhagavata, he wrote works on the economics of Bendre and Kautilya. Expert in Sanskrit, Kannada and English. He has authored more than 180 books and delivered more than 200 lectures
Works : Introduction to Vedic Culture, Ramayanasahsree, Geetaratnanidhi, The world of Ramayana character, Agastya, Acharya Chanakya, Tiruppavai, Tirumalai, Stotraratnam, Basic Concepts of Vishitadvaita, Who Killed Mahatma Gandhi?
ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು.
ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ಮಹಾಭಾರತ, ಭಾಗವತಗಳಲ್ಲಿ ವಿಶೇಷ ಪರಿಣಿತಿ ಪಡೆದಿದ್ದು, ಬೇಂದ್ರೆ ಮತ್ತು ಕೌಟಿಲ್ಯನ ಅರ್ಥಶಾಸ್ತ್ರದ ಬಗ್ಗೆ ಕೃತಿ ರಚಿಸಿದ್ದಾರೆ. ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪರಿಣಿತರು. ಸುಮಾರು 180ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದು, ಸುಮಾರು 200ಕ್ಕೂ ಅಧಿಕ ಉಪನ್ಯಾಸಗಳನ್ನು ನೀಡಿದ್ದಾರೆ
ಕೃತಿಗಳು : ವೇದ ಸಂಸ್ಕೃತಿಯ ಪರಿಚಯ, ರಾಮಾಯಣಸಹಶ್ರೀ, ಗೀತಾರತ್ನನಿಧಿ, ರಾಮಾಯಣ ಪಾತ್ರ ಪ್ರಪಂಚ, ಅಗಸ್ತ್ಯ, ಆಚಾರ್ಯ ಚಾಣಕ್ಯ, ತಿರುಪ್ಪಾವೈ, ತಿರುಮಲೈ, ಸ್ತೋತ್ರರತ್ನಂ, ವಿಶಿಷ್ಟಾದ್ವೈತ ಮೂಲ ಪರಿಕಲ್ಪನೆಗಳು, ಮಹಾತ್ಮಗಾಂಧಿಯನ್ನು ಕೊಂದಿದ್ದು ಯಾರು? ಸುಭಾಷರ ಕಣ್ಮರೆ, ವಾಲ್ಮೀಕಿ ಯಾರು?, ಮತಾಂತರ, ಶ್ರೀ ರಾಮಜನ್ಮಭೂಮಿ ತೀರ್ಪು, ಮಹಾಮಾತೆ ಕುಂತಿ ಕಣ್ತೆರೆದಾಗ, ದೇವಕಿಯ ಚಿಂತನೆಗಳು, ಮಹಾ ಪ್ರಸ್ಥಾನ, ಕೃಷ್ಣಾವತಾರದ ಕೊನೆಯ ಗಳಿಗೆಗಳು-ಈ ಕೃತಿಯು ಅಪಾರ ಸಂಖ್ಯೆಯಲ್ಲಿ ಓದುಗರನ್ನು ಸೆಳೆದಿದ್ದು, ಸುಮಾರು 20000ಕ್ಕೂ ಅಧಿಕ ಕೃತಿಗಳು ಮಾರಾಟವಾಗಿವೆ. ‘ಶ್ರೀ ರಾಮಾವತಾರ ಸಂಪೂರ್ಣವಾದಾಗ’ ಕೃತಿಯು ಸಹ ಮಾರಾಟದಲ್ಲಿ ದಾಖಲೆ ನಿರ್ಮಿಸಿದೆ. ಶ್ರೀರಾಮಾಯಾಣದ ಮಹಾಪ್ರಸಂಗಗಳು, ಶ್ರೀಮದ್ ರಾಮಾಯಣದ ಮಹಾಪ್ರಸಂಗಗಳು, ವೇದ ಸಂಸ್ಕೃತಿಯನ್ನು 10 ಕೃತಿಗಳಲ್ಲಿ ಪರಿಚಯಿಸಿದ್ದಾರೆ. ರಾಮಾಯಣ, ರಾಮಕಥಾ ಸಾರ, ರಾಮಾಯಣ ಪಾತ್ರ ಪರಿಚಯ, ರಾಮಾಯಣ ಸಾಹಶ್ರೀ, ಮಹಾಭಾರತ ಪಾತ್ರ ಪರಿಚಯ, ವನದಲ್ಲಿ ಪಾಂಡವರು, ರಾಜಸೂಯದ ರಾಜಕೀಯ, ಶ್ರೀಕೃಷ್ಣ ಮತ್ತು ಮಹಾಭಾರತ ಯುದ್ಧ, ಆ ಹದಿನೆಂಟು ದಿನಗಳು (2 ಬೃಹತ್ ಸಂಪುಟಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಗೊಂಡಿವೆ) ಗುರುದೇವ ರಾನಡೆ ಅವರ ಉಪನ್ಯಾಸ ಸರಣಿ ಮಾಲಿಕೆಯ ಮಹಾಭಾರತದಲ್ಲಿ ಶ್ರೀಕೃಷ್ಣನ ಪಾತ್ರ, ವನಪರ್ವ, ವಿರಾಟಪರ್ವ ಸೇರಿದಂತೆ ಮಹಾಭಾರತ, ರಾಮಾಯಣ, ವೇದ ಸಂಸ್ಕೃತಿ, ಸನಾತನ ಪರಂಪರೆಯ ಹತ್ತು ಹಲವು ಕೃತಿಗಳನ್ನು ರಚಿಸಿದ್ದಾರೆ. ಸಮಾಕಾಲೀನ ವಿಷಯಗಳಿಗೂ ಅವರು ಸ್ಪಂದಿಸಿ ಬರೆದ ಹಲವಾರು ಲೇಖನಗಳು ಕನ್ನಡ ಹಾಗೂ ಇಂಗ್ಲಿಷ್ ಪತ್ರಿಕೆ, ಪಾಕ್ಷಿಕ, ಮಾಸಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಪ್ರಶಸ್ತಿ-ಪುರಸ್ಕಾರಗಳು ರಾಮಾಯಣ, ಭಾಗವತ, ಮಹಾಭಾರತ, ವೇದಗಳು, ಭಗವದ್ಗೀತೆ, ಹರಿದಾಸ ಸಾಹಿತ್ಯ ಪ್ರಸಾರಕ್ಕಾಗಿ ಪ್ರೊ.,ಕೆ.ಎಸ್. ನಾರಾಯಣಾಚಾರ್ಯ ಅವರಿಗೆ ಬೆಂಗಳೂರಿನಲ್ಲಿ ಜರುಗಿದ ( 2016), ವಿಶ್ವ ರಾಮಾಯಣ ಸಮ್ಮೇಳನದಲ್ಲಿ ಇವರಿಗೆ ‘ವಾಲ್ಮೀಕಿ ಪ್ರಶಸ್ತಿ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವು ಡಿ.ಲಿಟ್ ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ವಿದ್ವನ್ಮಣಿ, ವೇದಭೂಷಣ, ಗಮಕ ರತ್ನಾಕರ, ಕರ್ನಾಟಕ ಕಲಾಶ್ರೀ, ಉಪನ್ಯಾಸ ಕೇಸರಿ ಬಿರುದು ಸಂದಿವೆ. ಕನ್ನಡ, ಇಂಗ್ಲಿಷ್ ಹಾಗೂ ತಮಿಳು ಭಾಷೆಯಲ್ಲಿ ರಾಮಾಯಣವನ್ನು ಆಧಿಕೃತವಾಗಿ ಉಪನ್ಯಾಸ ನೀಡುವ ವಿದ್ವತ್ ಗಾಗಿ ಸಾಹಿತ್ಯಾಸಕ್ತರು ಅವರಿಗೆ ‘ರಾಮಾಯಣಾಚಾರ್ಯರು’ ಎಂದೇ ಕರೆಯುತ್ತಾರೆ.
ಚಾಣಕ್ಯ ಈ ಹೆಸರನ್ನ ಕೇಳದ ಭಾರತೀಯರು ತೀರ ವಿರಳ. ಒಬ್ಬ ಅಸಾಮಾನ್ಯ ಐತಿಹಾಸಿಕ ವ್ಯಕ್ತಿ. ಅಮರಕೃತಿ ಅರ್ಥಶಾಸ್ತ್ರದ ಬರೆದ ಕೌಟಲ್ಯನು ಇವನೇ ಈತನೇ ವಿಶ್ಣುಗುಪ್ತ. ಕಾಮಸೂತ್ರ ಬರೆದ ವಾತ್ಸಾಯನನು ಇವನೇ. ಇನ್ನು ತುಂಬಾ ಹೆಸರುಗಳನ್ನ ಹೊಂದಿರೋ ಒಬ್ಬ ನಿಗೂಢ ವ್ಯಕ್ತಿ. ಚಾಣಕ್ಯನ ಕುರಿತಾದ ನಾ ಓದಿದ ಮೊದಲ ಪುಸ್ತಕ. ಪ್ರೊ ಕೆ ಎಸ್ ನಾರಾಯಣಾಚಾರ್ಯರ ವಿದ್ವತ್ತಿಗೆ ಕೈ ಗನ್ನಡಿ ಈ ಪುಸ್ತಕ. ಆತನೊಬ್ಬ ಧರ್ಮ ಪರಿವೃಜಕ, ಮಂತ್ರತಂತ್ರಶಕ್ತಿ ಮೂಲಕ ಸಾಮ್ರಾಜ್ಯ ಸ್ಥಾಪನೆಗೆ ಕಾರಣನಾದ ಪರಾಕ್ರಮಿ. ರಾಷ್ಟ್ರಪ್ರೇಮ ಪರಿಕಲ್ಪನೆ ಮೂಡಿಸಿದ ಮೇಧಾವಿ.ಸಜ್ಜನ ಸದ್ಭಕ್ತರ ಆರಾಧ್ಯ ದೈವ. ಶಿಷ್ಯರೇ ಅವನಿಗೆ ಮಕ್ಕಳು. ಇಷ್ಟೆಲ್ಲಾ ಹೇಳಿದ ಮೇಲೆ ಇದು ಅವನ ವ್ಯಕ್ತಿತ್ವವನ್ನು ಸಾರುವ ಕಥಾನಕ ಅಂತ ಹೇಳುವ ಅಗತ್ಯವಿಲ್ಲ. ಶ.ಪೋ 326ನೇ ವರ್ಷದ ಒಂದು ಪ್ರಾತಃ ಕಾಲದಲ್ಲಿ ಮಗಧದಲ್ಲಿ ನವನಂದರ ಸೊಕ್ಕಿನ ಆಡಳಿತದ ಅವಧಿಯಲ್ಲಿ ಅರಾಜಕತೆಯ ತಾಂಡವ ಆಡುತ್ತಿದ್ದ ಸಮಯ. ಅನ್ನ ಸತ್ರದಲ್ಲಿ ಬ್ರಾಹ್ಮಣರಿಗೆ ದಿನ ಅನ್ನ ಸಂತರ್ಪಣೆ ನಡೆಯುತ್ತಿತ್ತು. ಹೀಗೆ ತನ್ನ ಶಿಷ್ಯರರೊಡನೆ ಅನ್ನಸತ್ರಕ್ಕೆ ತಾನೂ ಬಂದಿದ್ದ ಅಲ್ಲಿ ನವನಂದರಿಂದ ಆಗುವ ಅಪಮಾನ ಮಾಗಾಧರಾಜ್ಯದ ನಿರ್ನಾಮದ ಸಂಕಲ್ಪಕ್ಕೆ ನಾಂದಿ ಹಾಡಿತು. ತನ್ನ ಪ್ರೀತಿಯ ಶಿಷ್ಯನಾದ ಚಂದ್ರಗುಪ್ತನಿಗೆ ಪಟ್ಟಾಭಿಷೇಕ ಮಾಡಿ ಮತ್ತೆ ಧರ್ಮ ಸಂರಕ್ಷಣೆ ಮಾಡುವ ಗುರಿಯೊಂದಿಗೆ ಹೊರಡುವ ಒಂದು ರೋಚಕ ಕಾದಂಬರಿ. ಪುಸ್ತಕದ ತುಂಬಾ ಅಧ್ಭುತ ಸನ್ನಿವೇಶಗಳನ್ನು ಕಟ್ಟಿ ಕೊಟ್ಟಿದ್ದಾರೆ ಆಚಾರ್ಯರು. ಅರ್ಥಶಸ್ತ್ರದಲ್ಲಿ ಹೇಳಿರುವಂತೆ "ರಾಜನು ಜನಹಿತಕ್ಕೆ ಬದ್ಧನೇ ಹೊರತು ಜನಪ್ರಿಯತೆಗಲ್ಲ!"ಎಂದು ಸಾರುವ ತತ್ವ ಜ್ಞಾನಿ ವಿಷ್ಣುಗುಪ್ತನ ಜನನ ವಾದದ್ದು ನಮ್ಮ ರಾಷ್ಟ್ರದ ಪುಣ್ಯ..
ಪುಸ್ತಕ: ಆಚಾರ್ಯ ಚಾಣಕ್ಯ ಲೇಖಕರು: ಕೆ ಎಸ್ ನಾರಾಯಣಾಚಾರ್ಯರು
ಗುರು ಶಿಷ್ಯರ ಉದಾಹರಣೆಗೆ ಹೋಲುವ ಅದ್ಭುತ ಜೋಡಿಯೆಂದರೆ ಆಚಾರ್ಯ ಚಾಣಕ್ಯ ಮತ್ತು ಚಂದ್ರಗುಪ್ತ ಮೌರ್ಯ. ಅವರ ನಡುವಣ ನಡೆದ ಪ್ರಸಂಗಗಳನ್ನು ಐತಿಹಾಸಿಕ ಕಾದಂಬರಿಯನ್ನಾಗಿ ಲೇಖಕರು ಅದ್ಭುತವಾಗಿ ಬರೆದಿದ್ದಾರೆ. ಕ್ರಿ ಪೂ ೩೨೬ ನೇ ವರ್ಷ ಮಗಧರಾಜ್ಯದ ಕೇ೦ದ್ರವಾದ ಪಾಟಲೀಪುತ್ರದಲ್ಲಿಯ ಸಮಯವು ಅಶುಭವೆನಿಸಿತ್ತು. ಕಾರಣ ನವನ೦ದರ ಸೊಕ್ಕಿನ ಆದಳಿತ. ಅವರ ಪೂರ್ವಜನರ ಕಾಲದಿ೦ದ ಅಲ್ಲಿ ಬ್ರಾಹ್ಮಣರಿಗೆ ಮಧ್ಯಾಹ್ನ ಅನ್ನಸ೦ತರ್ಪಣೆ ನಡೆಯುತ್ತಿತ್ತು. ಆದರೆ ದೊರೆ ಮಹಾನ೦ದಿಯ ಸಾಕುಮಗ ಮಹಾಪದ್ಮನು ಕ್ಷೌರನೆ೦ದೆನಿಸಿಕೊ೦ಡವನು, ಎಲ್ಲೋ ಹೊರಗೆ ಶಸ್ತ್ರವಿದ್ಯೆಯನ್ನು ಕಲಿತು ಶೂರನಾಗಿಕೊ೦ಡು ಸ್ವರಾಜ್ಯಕ್ಕೆ ಮರಳಿದನು. ಅಲ್ಲಿ ಬ೦ದು ಅವನು ಸೆನಾಧಿಪತಿಯಾಗಿ, ಉಪಾಯವಾಗಿ ದೊರೆಯನ್ನು ಕೊ೦ದು ತಾನೇ ಸಿ೦ಹಾಧಿಪತಿಯಾದನು. ಈ ಮಹಾನ೦ದನು ಅಪ್ಪಟ ಬ್ರಾಹ್ಮಣ ಮತ್ತು ಕ್ಷತ್ರೀಯ ದ್ವೆಷಿಯಾಗಿದ್ದನು. ಒ೦ದು ಸಲ ಚಾಣಕ್ಯನು ಪಾಟಲೀಪುತ್ರದಲ್ಲಿ ನಡೆಯುತ್ತಿದ್ದ ಅನ್ನಸ೦ತರ್ಪಣೆಯಲ್ಲಿ ಭಾಗಿಯಾಗಲು ಬ೦ದಾಗ ಚ೦ದ್ರಗುಪ್ತನನ್ನು ಕಾಣುತ್ತಾನೆ. ಮೊದಲೇ ಅವನಲ್ಲಿ ಅನೇಕ ವಿದ್ಯೆಗಳನ್ನು ಕಲಿತು ಸ್ವಸ್ಠಾನಕ್ಕೆ ಬ೦ದಿರುತ್ತಾನೆ. ಚ೦ದ್ರಗುಪ್ತನು ಮಗಧರಾಜ್ಯದ ದೊರೆ ಮಹಾನ೦ದಿಯ ಮಗ ಮೌರ್ಯನ ಮಗ, ನ್ಯಾಯಯುತವಾಗಿ ಮಗಧರಾಜ್ಯ ಅವನಿಗೆ ದಕ್ಕಬೇಕಾಗಿದ್ದು ಆದರೆ ಮಹಾನ೦ದನ ಕಪಟದ ಪರಿಣಾಮವಾಗಿ ಅವನಿಗೆ ದೊರೆಯುವುದಿಲ್ಲ. ಈ ಅನ್ನಸ೦ತರ್ಪಣೆಯಲ್ಲಿ ಒ೦ದು ಬ೦ಗಾರದ ತಟ್ಟೆಯಿಟ್ಟಿರಲು, ಅದಕ್ಕೆ ಆಚಾರ್ಯ ಚಾಣಕ್ಯನೇ ಶ್ರೇಷ್ಠವೆ೦ದು ಅಲ್ಲಿಯ ಜನರು ಹೇಳಿದಾಗ ಅಲ್ಲಿ ಅವರು ಆಸೀನರಾಗುತ್ತಾರೆ. ಆದರೆ ಆ ತಟ್ಟೆ ಕೇವಲ ವಿದ್ವನ್ಮಣಿ ರಾಜಪುರೋಹಿತ ಸುಬ೦ಧುವಿಗೆ ಮೀಸಲಾಗಿರಲ್ಪಟ್ಟಿರುತ್ತದೆ. ಚಾಣಕ್ಯನು ಅವನನ್ನು ಸೋಲಿಸಿ ಅದೇ ಜಾಗವನ್ನು ಅಲ೦ಕರಿಸುತೇನೆ೦ದು ಹೇಳಿದಾಗ ನ೦ದನ ಅಪ್ಪಣೆಯ ಮೇರೆಗೆ ರಾಜ ದೂತನು ಚಾಣಕ್ಯನನ್ನು ಜುತ್ತುಹಿಡಿದು ಮೇಲೆಳೆದ. ಚಾಣಕ್ಯನಿಗೆ ಅದು ದೊಡ್ಡ ಅಪಮಾನ. ಆ ಕ್ಷಣವೇ ಚಾಣಕ್ಯನು ಪ್ರತಿಜ್ಞೆಯನ್ನು ಮಾಡುತ್ತಾನೆ. ಅದೇನೆ೦ದರೆ ಮಹಾನ೦ದರ ಪತನ ಮತ್ತು ಆ ಜಾಗದಲ್ಲಿ ಚಾಣಕ್ಯನ ಆಯ್ಕೆಯ ಯೋಗ್ಯ ಅರಸನ ಪ್ರತಿಷ್ಥಾಪನ. ನ೦ದರು ಅದನ್ನು ಅಷ್ಟು ಅದನ್ನು ತಲೆಗೆ ಹಾಕಿಕೊಳ್ಳುವುದಿಲ್ಲ. ಚಾಣಕ್ಯನು ಇ೦ದುಶರ್ಮರ ಆಶ್ರಮಕ್ಕೆ ಬ೦ದು ಅಲ್ಲಿ ಮಗಧದಲ್ಲಿ ಜರುಗಿದ ಘಟನೆಯನ್ನು ವಿವರಿಸುತ್ತಾನೆ. ಆ ದಿನ ರಾತ್ರಿಯೇ ಚಂದ್ರಗುಪ್ತನ ಆಗಮನವಾಗುತ್ತದೆ. ಚಂದ್ರಗುಪ್ತ, ಚಾಣಕ್ಯ ಮತ್ತು ಇಂದುಶರ್ಮರು ನಂದರ ಸೊಕ್ಕು ಮುರಿದು ಅಲ್ಲಿ ತಪ್ಪಿಹೋದ ಚಂದ್ರಗುಪ್ತನ ಅಧಿಕಾರವನ್ನು ಮತ್ತೆ ಮರಳಿಸಲು ಸಂಚುಹೂಡುತ್ತಾರೆ. ಅದರ ಪ್ರಕಾರ ಚಂದ್ರಗುಪ್ತನು ಸೈನ್ಯವನ್ನು ಕಟ್ಟುವುದು, ಚಾಣಕ್ಯನು ಇದೆಲ್ಲ ನಿರ್ವಹಿಸುವುದು, ಇಂದುಶರ್ಮನು ಜೀವಸಿದ್ಧಿಯಾಗಿ ನಂದರನ್ನು ದಾರಿತಪ್ಪಿಸಿ ಚಂದ್ರಗುಪ್ತನಿಗೆ ಸಹಾಯಮಾಡುವುದು. ಅಲ್ಲಿ ಹೋಗಿ ಇಂದುಶರ್ಮನು ಮಾಡಿದ ಮೊದಲ ಕೆಲಸವೆಂದರೆ ಅಮಾತ್ಯನಾದಂತಹ ರಾಕ್ಷಸನ ಹೃದಯ ಗೆಲ್ಲುವುದು. ಅದರಲ್ಲಿ ಅವನು ಜಯಶಾಲಿಯಾಗುತ್ತಾನೆ. ಇದರ ಜೊತೆಗೆ ಅಲ್ಲಿ ಚಂದ್ರಗುಪ್ತ ಚಾಣಕ್ಯಾನೊಲಗೂಡಿ ಹಲವಾರು ಚಿಕ್ಕದೇಶದ ದೊರೆಗಳನ್ನು ಮನವೊಲಿಸಿ ನಂದರ ವಿರುದ್ಧ ಹೋರಾಡಲು ಅವರನ್ನು ತಮ್ಮ ಜೊತೆ ಕೈಗೂಡಿಸಿಗೊಳ್ಳುತ್ತಾರೆ. ವಿದ್ಯುಲ್ಲೇಖಿ ಎಂಬುವಳನ್ನು ಚಂದ್ರಗುಪ್ತನಿಗೆ ಚಾಣಕ್ಯರು ಕಟ್ಟಿಹಾಕುತ್ತಾರೆ. ಇದರ ಜೊತೆಗೆ ಚಾಣಕ್ಯರ ತಂತ್ರ ಮತ್ತು ಗೂಢಚಾರಿಗಳ ಸಂಪರ್ಕಗಳು ಅವರಿಗೆ ಸುದ್ದಿಗಳನ್ನು ನೀಡಲು ಬರುತ್ತಿದ್ದ ಬಗೆಗಳು ಚಕಿತಗೊಳಿಸುತ್ತವೆ. ಆದರೆ ರಾಕ್ಷಸ ಹೂಡಿದ ಪ್ರತಿತಂತ್ರವೂ ಅಷ್ಟೇ ಕರಾರುವಾಕಾಗಿರುತ್ತಿದ್ದವು ಆದರೆ ಅವು ಎಷ್ಟೋ ಸಲ ಚಾಣಕ್ಯನ ಮುಂದೆ ಮುರಿದುಬೀಳುತ್ತಿದ್ದವು. ಒಂದು ಸಂದರ್ಭದಿಂದ ರಾಕ್ಷಸನಿಗೆ ಜೀವಸಿದ್ಧಿಯ ಮೇಲೆ ಸಂಶಯ ಮೂಡಿ, ಅವನ ಚಲನವಲನಗಳನ್ನು ಪರೀಕ್ಷಿಸುವಂತೆ ಆಜ್ಞೆ ಮಾಡುತ್ತಾನೆ. ಹಾಗೆಯೇ ಅವನನ್ನು ಪರೀಕ್ಷೆಗೊಳಪಡಿಸುತ್ತಾನೆ, ಜೀವಸಿದ್ಧಿ ಅದರಲ್ಲಿ ಜಯಶಾಲಿಯೂ ಆಗುತ್ತಾನೆ. ಆ ಸಂದರ್ಭವೂ ಸಹ ತುಂಬಾ ರೋಚಕವಾದದ್ದು. ಈ ನಡುವೆ ಚಂದ್ರಗುಪ್ತ ಆರಾಮಾಗಿ ಇರಲು ಚಾಣಕ್ಯನು ಅವನಿಗೆ ಧರ್ಮವನ್ನು ತಿಳಿಹೇಳಬೇಕಾಗಿ ಬರುತ್ತದೆ. ಅದರಲ್ಲಿ ಬರುವ ಶಾಸ್ತ್ರ ಮತ್ತು ಜ್ಞಾನ ಭಂಡಾರ ಸೊಗಸನ್ನು ಓದಿಯೇ ತೀರಬೇಕು. ಅಂದರೆ ಚಾಣಕ್ಯನ ಬುದ್ಧಿವಂತಿಕೆ, ಸಮಯಪ್ರಜ್ಞೆ ಮತ್ತು ಮುಂದಾಲೋಚನೆಯ ಬಗ್ಗೆ ನಮಗೆ ಹೆಮ್ಮೆಯಾಗುತ್ತದೆ. ಯಾವ ಭಯವೂ ಇಲ್ಲದೇ ಆರಾಮಾಗಿ ನ೦ದರು ಇರಲು, ಯಜ್ಞಶಾಲೆಗೆ ಬ೦ದಾಗ ಚಾಣಕ್ಯನ ನಿಜ ತ೦ತ್ರ ಆಗ ತಿಳಿಯುತ್ತದೆ. ನಂದರ ಪತನದ ನಂತರ ರಾಕ್ಷಸನು ಮತ್ತೊಂದಿಷ್ಟು ತಂತ್ರ ಹೂಡಿದರೂ ಚಾಣಕ್ಯನ ತಂತ್ರಗಳ ಮುಂದೆ ಅವೆಲ್ಲವೂ ಧೂಳಿಪಟವಾಗುತ್ತವೆ. ಮುಂದೆ ಚಂದ್ರಗುಪ್ತನಿಗೆ ಪಟ್ಟಾಭಿಷೇಕ ಮಾಡಿ ಅಲ್ಲಿ ರಾಕ್ಷಸನನ್ನು ಮತ್ತೆ ಅಮಾತ್ಯರನ್ನಾಗಿ ಮಾಡಿ ಕೂಡಿಸುತ್ತಾನೆ. ತಾನೊಬ್ಬ ಗುರು, ಅಲ್ಲಿಯ ಅಮಾತ್ಯ ಸ್ಥಾನಕ್ಕೆ ತಾನು ಸೂಕ್ತವಲ್ಲವೆಂದು ತಿಳಿದು ಮತ್ತೆ ಜಾಗಕ್ಕೆ ಮರಳುತ್ತಾನೆ. ಆದರೆ ದಿನೇ ದಿನೇ ಚಂದ್ರಗುಪ್ತ ಆಧ್ಯಾತ್ಮದ ಕಡೆ ಒಲವು ತೋರಿಸಲು ಶುರುಮಾಡುತ್ತಾನೆ. ಕೊನೆಗೊಂದು ದಿನ ಚಾಣಕ್ಯನ ಸಮಕ್ಷಮದಲ್ಲಿ ತಾನು ಸನ್ಯಾಸಿಯಾಗುವೆನೆಂದು ಹೇಳಿದಾಗ ಚಾಣಕ್ಯನು ಅವನ ಮಾತಿಗೆ ನಕ್ಕು, ಕ್ಷತ್ರಿಯನಾಗಿ ರಾಜ್ಯ ನಡೆಸಬೇಕು ಹೊರತು ತಮ್ಮ ಪ್ರಜೆಗಳನ್ನು ನಡುನೀರಿನಲ್ಲಿ ಬಿಡುವುದು ಅಯೋಗ್ಯರ ಮಾತು ಅಂತ ತಿಳಿಸಿ ಹೇಳಿ ಮತ್ತೆ ಅವನನ್ನು ರಾಜ್ಯವನ್ನು ಮುಂದುವರೆಸಲು ಬೇಕಾದ ಉತ್ತೇಜನ ನೀಡಿ ತಮ್ಮ ಸ್ಥಾನ ತಕ್ಷಶಿಲೆಗೆ ಮರಳುತ್ತಾರೆ. ಅಲ್ಲಿ ಶಿಷ್ಯರೊಡನೆ ತನ್ನ ಸಮಯವನ್ನು ಕಳೆಯುತ್ತಿರುವಾಗ, ಒಂದು ಸಮಯದಲ್ಲಿ ಶಿಷ್ಯ ನಾರಾಯಣ ಶರ್ಮ ಹೇಳಿದ ಮಾತುಗಳಿಂದ ಸಂತುಷ್ಟಗೊಂಡ ಆಚಾರ್ಯರು ಅಲ್ಲೇ ಕೊನೆಯುಸಿರೆಳೆಯುತ್ತಾರೆ. ಮಗಧರಾಜ್ಯದಲ್ಲಿ ಚಂದ್ರಗುಪ್ತನ ಆರೋಗ್ಯದಲ್ಲಿ ಕ್ಷೀಣತೆಗೊಂಡಾಗ ಇಂದುಶರ್ಮರು ಚಾಣಕ್ಯರನ್ನು ಕಾಣಲು ತಕ್ಷಶಿಲೆಗೆ ಪ್ರಯಾಣ ಬೆಳಿಸಿ, ಅವರು ತಕ್ಷಶಿಲೆಯನ್ನು ತಲುಪುವುದರೊಳಗೆ ಆಚಾರ್ಯರ ಅಂತಿಮ ಕಾರ್ಯ ಮುಗಿದು ಹೋಗಿರುತ್ತದೆ. ಅವರ ಮರಣಾನಂತರ ಕೆಲವೇ ದಿನಗಳಲ್ಲಿ ಚಂದ್ರಗುಪ್ತನ ವ್ಯಾಧಿ ಇಮ್ಮಡಿಗೊಂದು ಅವನು ಅಸುನೀಗಿದ. ಚಾಣಕ್ಯ ಮತ್ತು ಚಂದ್ರಗುಪ್ತರ ಗುರು ಶಿಷ್ಯರು ಮಗಧದಂತಹ ದೊಡ್ಡ ಸಾಮ್ರಾಜ್ಯವನ್ನು ಮಣಿಸಿ, ಚಾಣಕ್ಯ ತನ್ನ ಸೇಡು ಮತ್ತು ಚಂದ್ರಗುಪ್ತ ತನ್ನ ರಾಜ್ಯವನ್ನು ತೀರಿಸಿಕೊಳ್ಳುತ್ತಾನೆ. ಮುಂದೆ ಬಂದ ಬಿಂದುಸಾರ ಎಷ್ಟು ಕಷ್ಟಪಟ್ಟು ಚಾಣಕ್ಯರ ಅರ್ಥಶಾಸ್ತ್ರವನ್ನು ಎದುರಿಸಲು ಬಿಗುವಾದ ಯತ್ನ ಮಾಡಿದರೂ ರಾಜ್ಯವು ಕ್ಷಾಮದಿಂದ ಮೇಲೇಳಲಿಲ್ಲ.
ಪ್ರತಿ ಅಧ್ಯಾಯದಲ್ಲೂ ರೋಚಕತೆ ಹೆಚ್ಚಾಗುತ್ತಾ ಸಾಗುತ್ತದೆ. ಚಾಣಕ್ಯನ ತಂತ್ರ - ಪ್ರತಿತಂತ್ರಗಳನ್ನು ಎಳೆ ಎಳೆಯಾಗಿ ವರ್ಣಿಸಿರುವ ರೀತಿ ಓದುಗನನ್ನು ಪೂರ್ತಿಯಾಗಿ ಕಥೆಯಲ್ಲಿ ಮುಳುಗುವಂತೆ ಮಾಡುತ್ತೆ.
ಇದನ್ನು ಓದುವಾಗ ಆಗುವ ರೋಮಾಂಚನಕಾರಿ ಅನುಭವ ವರ್ಣಿಸಲು ಕಷ್ಟಸಾಧ್ಯ!! ಅದನ್ನು ನೀವೇ ಓದಿ ಅನುಭವಿಸಬೇಕು.
This book is simply seeing Chanakya through a very narrow minded ness! Chanakya’s greatest virtues have been misrepresented! Fiction, definitely not an actual representation of Chanakya!