ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. 'ಭಿನ್ನಬಿಂಬ' ಕೃತಿಯ ಹಿನ್ನಲೆಯಲ್ಲಿ ಮುಖ್ಯವಾಗಿ ಕೆಲಸ ಮಾಡಿರುವುದು ಅವರ ಈ ಬಗೆಯ ಪ್ರವೃತ್ತಿಯೇ. ಜೊತೆಗೆ ಧರ್ಮ ವಿಜ್ಞಾನಗಳನ್ನು ಕುರಿತ ತೌಲನಿಕ ಚರ್ಚೆ ಇಲ್ಲಿದೆ. ಚರಿತ್ರೆಯ ವಿಸ್ಮೃತಿಯ ಪರಿಣಾಮಗಳೇನೆಂಬುದನ್ನು ಅತ್ಯಂತ ಕುತೂಹಲದ ಧಾಟಿಯಲ್ಲಿ ನಿರೂಪಿಸುವ 'ನಿಧಿಯ ಅವತರಣೆ' ಲೇಖನವಿದೆ. ಎಲ್ಲ ಲೇಖನಗಳು ಓದುಗರನ್ನು ಆಲೋಚನೆಗೆ ಹಚ್ಚುವಷ್ಟು ಪರಿಣಾಮಕಾರಿಯಾಗಿವೆ.
ವಿಜ್ಞಾನ, ಚರಿತ್ರೆ, ಧರ್ಮಗಳ ಮುಖಾಮುಖಿಯಲ್ಲಿ ತಿಳಿದುಕೊಳ್ಳಬೇಕಾದ ಸತ್ಯದ ಅನಾವರಣನ್ನು ಇಲ್ಲಿನ ಲೇಖನಗಳು ಮಾಡುತ್ತವೇ. ಇಂಗ್ಲಿಷ್‌ನಲ್ಲಿ ಅನೇಕ ಸಂಶೋಧನಾ ಲೇಖನಗಳನ್ನು ಬರೆದಿರುವ ಗಣೇಶಯ್ಯ ಅವರ ಮೊದಲ ಆ ಸ್ವರೂಪದ ಕನ್ನಡದ ಕೃತಿ ಭಿನ್ನಬಿಂಬ.
Dr. K.N. Ganeshaiah is an agricultural scientist and professor at the University of Agricultural Sciences, Bangalore. He is also a novelist specializing in thrillers, and writes in the Kannada language.
Education: Ph. D. University of Agricultural Sciences, Bangalore, India, l983 M.Sc. (Agri.) in Genetics & Plant Breeding, UAS, Bangalore, l979 B.Sc (Agri.), University of Agricultural Sciences, Bangalore, l976.
Prof Ganeshaiah has pioneered a new style of writing novels and short stories in Kannada that seamlessly mixes facts and fiction in the form of thrillers. Through this style, his writings have captured a new generation of readers in Kannada contributing to the growth of story writing in Kannada.
Though an agriculture scientist, his novels and stories bring to the reader, the lesser-known and hidden facts of history along with science. Some of his novels are also aimed at bringing the most complicated elements of science to the general reader.
Recognizing the novelty in the style of writing, he was awarded Kannada Sahitya Academy Datti Award for his novel Kanaka Musuku, which combines both history and science. As some experts have inferred, his thrillers have drawn a large number of new readers to Kannada.
In recognition of his novel contribution to Kannada Literature, Prof Ganeshaiah has also been honored with the Honorary President of Kolar District Sahitya Parishat during 2013
Prof Ganeshaiah has written Nine novels, and 41 short/long stories (in eight collections) and over 63 essays in the areas related Science and Society. His recent book Sasya Sagga on the wonders of plant life as told through his own journey in the field of botany and evolution has attracted your readers. Several of his novels and stories were serialized in Kannada Weekly Magazines
ಗಣೇಶಯ್ಯನವರ ಈ ಕೃತಿ ಹಲವು ಲೇಖನಗಳ ಸಂಕಲನ. ೧. ವಿಜ್ಞಾನ ಮತ್ತು ಕಾವ್ಯ ಪ್ರಕಾರಗಳ ಮಧ್ಯದ ಜೋಡಣೆ. ೨. ಧರ್ಮ ಮತ್ತು ವಿಜ್ಞಾನದ ಬಿಂಬ - ಪ್ರತಿಬಿಂಬ. ೩. ಭಾರತೀಯ ಚರಿತ್ರೆಯನ್ನು ಅರಿಯದೆಯೆ ಅದರ ಬಗ್ಗೆ ಅತೀಯಾಗಿ ಅಭಿಮಾನ ತೋರಿ ಸಾಮಾಜಿಕ ಅನಾಹುತಕ್ಕೆ ಕಾರಣವಾಗುವ "ವೈಚಾರಿಕ ಭಂಡತನ". ೪. ನಮ್ಮ ಚರಿತ್ರೆಯ ಮರಿವಿನಿಂದ, ನಮ್ಮ ಸಂಪದಗಳು ಹೇಗೆ ಮಾಯವಾಗಿವೆ ಎಂಬ ಬಗ್ಗೆ "ನಿಧಿಯ ಅವತರಣೆ".
ಈ ಎಲ್ಲಾ ಲೇಖನಗಳು ಓದುಗರನ್ನು ಚಿಂತನೆಗೆ ಹಚ್ಚುವಂತಿವೆ. ಒಬ್ಬ ವಿಜ್ಞಾನಿ ಮತ್ತು ಇತಿಹಾಸಕಾರನ ದೃಷ್ಟಿಕೋನ ಮತ್ತು ವಿಚಾರಗಳು ಇಲ್ಲಿವೆ.
ಇಷ್ಟದ ಸಾಲುಗಳಲ್ಲೊಂದು: ನಮ್ಮ ಸಂಸ್ಕೃತಿ, ಚರಿತ್ರೆಯ ಬಗೆಗಿನ ಭಂಡತನದ ಬಗ್ಗೆ:
"ನಮ್ಮ ಸಂಸ್ಕೃತಿ ಅನಾದಿ ಕಾಲದ್ದು, ನಮ್ಮ ದೇಶಕ್ಕೆ ಭವ್ಯವಾದ ಚರಿತ್ರೆ ಇದೆ. ನಮ್ಮ ಪೂರ್ವಜರಿಗೆ ಎಲ್ಲವೂ ವೇದ್ಯವಾಗಿತ್ತು; ಅವರು ಬರೆದಿರುವುದನ್ನು ಡಿಕೋಡ್ ಮಾಡಿದರೆ ಸಾಕು ಈಗಿನ ವಿಜ್ಞಾನದ ಅದ್ಭುತ ಅವಿಷ್ಕಾರಗಳೆ ಅಲ್ಲಿ ಅಡಗಿವೆ.. - ಹೀಗೆ ಬುರುಡೆ ಬಿಡುವಲ್ಲಿ ನಾವು ನಿಸ್ಸಿಮರು. ಅದಕ್ಕೆ ಹುಚ್ಚು ಹುಚ್ಚು ಆಧಾರಗಳನ್ನೂ ಹುಡುಕಿ ತೆಗೆಯುತ್ತೇವೆ ಕೂಡ ಪೋಸ್ಟ್ ಮಾಸ್ಟಮ್ ಆಗಿ. ಡಾರ್ವಿನ್, ಮನುಷ್ಯನು ಸರಳ ಜೀವಿಗಳಿಂದ ಹಂತ ಹಂತವಾಗಿ ವಿಕಾಸಗೊಂಡ ಒಂದು ಸಂಕೀರ್ಣ ಪ್ರಭೇದ ಎಂದು ವಾದಿಸಿದ ಕೂಡಲೆ, ನಮ್ಮ ದಶಾವತಾರಗಳನ್ನು ತೋರಿಸಿ, ಅಗೋ ನಮ್ಮವರಿಗೆ ಅದು ಗೊತ್ತಿತ್ತು ಎಂದು ಘೋಷಿಸಿಬಿಡುತ್ತೇವೆ- ಅದರ ಪರಿಣಾಮದ ಬಗ್ಗೆ ಯೋಚಿಸದೆ. ಇಂತಹ ಕುರುಡು ಪ್ರೇಮದಿಂದ, ಇವೆಲ್ಲಕ್ಕೂ ಮಿಗಿಲಾದ ಅಪಾಯ ಒಂದಿದೆ; ಮುಂದಿನ ಜನಾಂಗಕ್ಕೂ ಈ ದೇಶದ ಚರಿತ್ರೆ ಮತ್ತು ಸಂಸ್ಕೃತಿಯ ಬಗ್ಗೆ ನಮ್ಮ ಎಲ್ಲ ಕುರುಡು ನಂಬಿಕೆಗಳನ್ನೂ ಸತ್ಯವೆಂದು ಬೋಧಿಸಿ, ನಂಬಿಸಿ, ಬೆನ್ನು ತಟ್ಟಿಕೊಂಡು, ತಟ್ಟಿಸಿಕೊಂಡು, ಸ್ವಪ್ರಶಂಸೆಯಲ್ಲಿಯೆ ತೃಪ್ತಿ ಪಟ್ಟುಕೊಳ್ಳುವುದರ ಜೊತೆಗೆ, ಅಂತಹ ಹುಸಿ ಸಂತೃಪ್ತಿಯನ್ನು ಎಳೆ ಮನಗಳಲ್ಲಿಯೂ ತುಂಬಿ, ನಮ್ಮ ಸಂಸ್ಕೃತಿಯ ಎಲ್ಲ ಅವಶೇಷಗಳನ್ನೂ ಯಾವುದೆ ಅವಲೋಕನೆಯಿಲ್ಲದೆ ಸ್ವೀಕರಿಸಲು ಪ್ರೇರೇಪಿಸಿ, ಅವರನ್ನು ವಿಚಾರವಂತಿಕೆಯಲ್ಲಿ ಮತ್ತು ಚಿಂತನೆಯಲ್ಲಿ ನಿರ್ವೀಯ್ರರನ್ನಾಗಿಸುವ ಸಾಧ್ಯತೆಯ ಅಪಾಯವಿದೆ."
ಈ ಪುಸ್ತಕದಲ್ಲಿ ಬರುವ ಎಲ್ಲಾ ಲೇಖನಗಳೂ ಕೂಡ ವಿಭಿನ್ನವಾದ ವಿಷಯಗಳ ಕುರಿತು ಚರ್ಚಿಸಲ್ಪಡುತ್ವೆ. ಪ್ರಕೃತಿಯ ವೈಶಿಷ್ಟ್ಯದ ಕುರಿತಾಗಿರಬಹುದು, ವಿಜ್ಞಾನ ಧರ್ಮಗಳ ತಿಕ್ಕಾಟವಿರಬಹುದು, ವಿಜ್ಞಾನ ಸಾಹಿತ್ಯವಾಗಿರಬಹುದು, ಒಟ್ಟಿನಲ್ಲಿ ನಮ್ಮ ಗಣೇಶಯ್ಯನವರು ತಮ್ಮ ಸುತ್ತಲಿನ ವಿಚಾರಗಳನ್ನ ಒಂದು ವೈಚಾರಿಕ ನೆಲೆಗಟ್ಟಿನಲ್ಲಿ ನೋಡುವ ಹಾಗೂ ಅವುಗಳನ್ನು ಸಿದ್ಧಾಂತಿಕವಿಗಿ ವಿಶ್ಲೇಷಣೆ ಮಾಡುವ ಪರಿ ಅವರ ಲೇಖನಗಳಲ್ಲಿ ಕಾಣಬಹುದು. ಹಲವರಿಗೆ ಅವುಗಳು ರುಚಿಸದೇ ಇರಬಹುದು ಆದರೆ ಅವರ ದೃಷ್ಟಿಕೋನದಲ್ಲಿ ನೋಡಿದಾಗ ವಿಷಯಗಳ ಎಷ್ಟೋ ಆಯಾಮಗಳು ತೆರೆದುಕೊಳ್ಳುವವು. ವಿಶ್ವಸತ್ಯವನ್ನ ವಿನೂತನವಾಗಿ ತೆರೆದಿಡಲು ಪ್ರಯತ್ನಿಸುವ ಅವರ ಪ್ರಯತ್ನವೂ ಸಫಲವಾಗುವುದು!
ಇದೊಂದು ಕಥೆಗಿಂತ ಸ್ವಲ್ಪ ಭಿನ್ನವಾಗಿರುವ ಬರಹ ಸಂಕಲನ. ಒಟ್ಟಾರೆ ಆರು ಲೇಖನಗಳನ್ನೊಳಗೊಂಡಿದೆ. ಗಣೇಶಯ್ಯನವರ ಇತರ ಪುಸ್ತಕ ಓದಿದವರಿಗೆ ಇದು ಸ್ವಲ್ಪ ನಿರಾಶೆಗೊಳಿಸಬಹುದು ಕಾರಣ ಯಾವುದೇ ಚಾರಿತ್ರಿಕ ಸತ್ಯದ ಕುರಿತಾಗಲಿ ಅಥವಾ ವೈಜ್ಞಾನಿಕ ಸಂಶೋಧನೆಯನ್ನಾಗಲಿ ಅದರ ಸುತ್ತ ಸುಂದರ ಕಥೆಯೊಂದನ್ನು ಹೆಣೆದು ನಿರೂಪಿಸುವ ಶೈಲಿಗೆ ಹೋಲಿಸಿದರೆ ಈ ಪುಸ್ತಕದ ಪ್ರಬಂಧಗಳು ಬಹಳವೇ ಭಿನ್ನವಿದೆ.
1. ವಸಂತದ ಸತ್ಯ-ಸೌಂದರ್ಯ - ಜೀವ ಜಗತ್ತೆ ನಡೆಯುತ್ತಿರುವುದು 'Survival of the Fittest' ಎನ್ನುವ ಸಿದ್ಧಾಂತದ ಮೇಲೆ. ಇದರ ನಿಲುವಿನಲ್ಲೇ ಸಸ್ಯಗಳಲ್ಲಿ ಸಂತಾನೋತ್ಪತ್ತಿ ಕ್ರಿಯೆ ಬೆಳೆದು ಬಂದ, ತಾನಿರುವ ಪರಿಸರಕ್ಕೆ ತಕ್ಕಂತೆ ಹೊಂದಿಕೊಂಡ ಬಗೆಯ ಕುರಿತಾದ ಲೇಖನ.
2. ಸಾವು : ಜೀವವಿಕಾಸದ ದೃಷ್ಟಿಯಲ್ಲಿ - ಜೀವಿಗಳಿಗೆ ಸಾವು ಏಕೆ ಬರುತ್ತದೆ? ಇದೇ ಪ್ರಶ್ನೆಯೆ ಕುರಿತಾಗೇ ಬರೆದ ಒಂದು ವೈಜ್ಞಾಜಿಕ ಬರಹ.
3. ವಿಚಾರವಂತಿಕೆಯ ಭಂಡತನ - ಇಂದಿನ ಬುದ್ದಿಜೀವಿಗಳ ಕುರಿತಾದ ಬರಹ.
4. ವಿಜ್ಞಾನ-ಧರ್ಮ : ಬಿಂಬ ಪ್ರತಿಬಿಂಬ - ಮೂಲದಲ್ಲಿ ಧರ್ಮವೂ ವೈಜ್ಞಾನಿಕತೆಯನ್ನು ಬೆಳೆಸುವ ದೃಷ್ಟಿಯಿಂದಲೇ ರೂಪುಗೊಂಡಿದ್ದು ಎಂದು ನಿರೂಪಿಸುವ ಲೇಖನ.
5. ನಿಧಿಯ ಅವತರಣೆ - ನಿಧಿಯ ಶೇಖರಣೆ ಹಾಗೂ ಹುಡುಕಾಟದ ಕುರಿತು DIY (Do it Yourself) ಶೈಲಿಯ ಬರಹ.
6. ಕನ್ನಡಲ್ಲಿ ವಿಜ್ಞಾನಕಥಾ ಸಾಹಿತ್ಯ - Sci-fi ಎಂಬ Genre ಕನ್ನಡ ಸಾಹಿತ್ಯ ಲೋಕದಲ್ಲಿ ಇದೆಯೇ? ಇದ್ದರೆ ಅದು ಇಂದಿನ ಲೇಖಕರು ಮಾತ್ರ ಬರೆದವುಗಳೇ? ಹಳೆಯ ಯಾವುದೇ ಸಾಹಿತ್ಯದಲ್ಲಿ ತಮ್ಮ ಕಾಲಕ್ಕಿಂತ ಮುಂದಿನ ಕಾಲದ ಕುರಿತಾಗಿ ಯೋಚಿಸಿ ಬರೆದವು Scifi ಪುಸ್ತಕಗಳಿಲ್ಲವೇ? ಈ ರೀತಿಯ ಹಲವು ಪ್ರಶ್ನೆಗಳಿಗೆ ಉತ್ತರವನ್ನು ಗಣೇಶಯ್ಯನವರು ಕೊಟ್ಟಿದ್ದಾರೆ.
ಈ ಪುಸ್ತಕದ ಮೊದಲ ಲೇಖನ ವಸಂತದ ಸತ್ಯ ಸೌಂದರ್ಯ ಬೋರು ಹೊಡೆಸಿತು. ಸಾವು ಲೇಖನದ ವಿಜ್ಞಾನ, ಒಳಗುಟ್ಟು, ಸೂಕ್ಷ್ಮಜೀವಿಗಳ ಸಾವು ಬದುಕು ಇತ್ಯಾದಿ ನಿಜವಾಗಲೂ ಓದೋಕೆ ತುಂಬಾ ಆಸಕ್ತಿದಾಯಕವಾಗಿತ್ತು. ವಿಚಾರವಂತಿಕೆ ಬಡತನ ಲೇಖನ ಯಾಕೋ ವಯಸ್ಸಾದ ವ್ಯಕ್ತಿಯ ತಳಮಳದಂತಿತ್ತು. ವಿಜ್ಞಾನ ಧರ್ಮದ ಲೇಖನವು ಅಷ್ಟೇನೂ ಇಷ್ಟ ಆಗ್ಲಿಲ್ಲ. ಇನ್ನೂ ನಿಧಿಯ ಲೇಖನ ಓದುವಾಗ ಕಿವಿ ಅರಳಿತ್ತು. ಕನ್ನಡದಲ್ಲಿ ವಿಜ್ಞಾನ ಕಥಾಸಾಹಿತ್ಯ ಸಹ ಓದಿಸಿಕೊಂಡಿತು. ಒಟ್ಟಾರೆ ಹೇಳೋದಾದ್ರೆ ಕೆಲ ಲೇಖನಗಳಲ್ಲಿ ಬಂದ ಮಂಡನೆಗಳು ಲೇಖಕರು ತಮ್ಮ ಜ್ಞಾನ, ಅರಿವು, ತಿಳಿವುಗಳನ್ನೂ ಪ್ರೂವ್ ಮಾಡಬೇಕು ಅನಿಸುವಂತೆ ಬರೆದಂತೆ ಅನಿಸ್ತು. ವಿಜ್ಞಾನದ ವಿಷಯಗಳು ಓದಲು ಕುಶಿ ಕೊಟ್ಟರೂ ತುಂಬಾ ಕಡಿಮೆಯಿದೆ ಅನಿಸಿತು.