Jump to ratings and reviews
Rate this book

ಅಳಿದ ಮೇಲೆ | Alida Mele

Rate this book
"Alida Mele" (Life after Death) is the unraveling character of a dead person who leaves behind a vague letter with some clues to his friend the author. The saga of search for the persons mentioned in the letter, provides several insights in human mind and behavior.

Paperback

First published January 1, 1960

27 people are currently reading
412 people want to read

About the author

Kota Shivarama Karanth

95 books451 followers
Kota Shivaram Karanth was a Kannada writer, social activist, environmentalist, Yakshagana artist, film maker and thinker. He was described as the "Rabindranath Tagore of Modern India who has been one of the finest novelists-activists since independence"by Ramachandra Guha. He was the third person among eight recipients of Jnanpith Award for Kannada the highest literary honour conferred by the Govt. of India.

Shivaram Karanth was born on 10 October 1902, in Kota near Udupi in the Udupi district of Karnataka to a Kannada family.He was influenced by Gandhi's principles and took part in Indian Independence movement while he was in college. He did not complete his education and went to participate in the Non-cooperation movement and canvassed for khadi and swadeshi for five years up to 1927. By that time Karanth had already started writing fiction-detective novels, to begin with as well as plays.

Karanth was an intellectual and environmentalist who tremendously contributed to art and culture of Karnataka. He is considered one of the greatest novelist in Kannada. Apart from his 47 novels, he also wrote 31 plays, four short stories, six books of essays and sketches, thirteen books on art, 2 volumes of poems, 9 encyclopedias, and 100+ of articles on various issues and subjects, including a history of world art in Kannada and a work on Chalukyan sculpture and architecture, a standard treatise on the Yakshagana (with which dramatic form, his name is identified), a three volume book of knowledge for children, a four volume encyclopedia on science for grown ups, 240 children's books, six books on travel, two books on birds, three Travelogues, an autobiography.

He has received several literary awards,.Namely, Jnanpith Award, Padma Bhushan, Sahitya Academy award and Pampa Award.

He passed away on 9th December 1997 in Manipal, Karnataka.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
129 (57%)
4 stars
73 (32%)
3 stars
14 (6%)
2 stars
3 (1%)
1 star
4 (1%)
Displaying 1 - 30 of 31 reviews
Profile Image for Nayaz Riyazulla.
425 reviews94 followers
September 13, 2022
ಒಬ್ಬ ಮನುಷ್ಯನ ಜಗತ್ತು ಬದುಕಿದ್ದಾಗ ಒಂದು ನೋಟ ಕಂಡರೆ, ಆತ "ಅಳಿದ ಮೇಲೆ" ಆ ಜೀವನದ ನೋಟ ವಿಭಿನ್ನ ರೂಪದಲ್ಲಿರುತ್ತದೆ. ಹಾಗಾಗಿ, ಪ್ರತಿ ಜೀವನಗಾಥೆಯೂ ಒಂದೊಂದು ಪಾಠ. ಯಾವುದೇ ಜೀವನ ಪರಿಪೂರ್ಣವಲ್ಲ, ನಾವು ಮಾಡುವ ಕೆಲಸ ನೂರಾರಿದ್ದರೂ ನಮ್ಮ ಆಯಸ್ಸು ಕಾಯುವುದಿಲ್ಲ. ಹಾಗೆಯೇ ಸಿಕ್ಕ ಗೆಳೆಯನ ಮೂಲಕ ತನ್ನ ಜೀವನದ ಪರಿಪೂರ್ಣತೆಯನ್ನು ಕಂಡುಕೊಳ್ಳುವ ನಾಯಕ ಯಶವಂತರಾಯರ ಕಥೆಯಿದು.

ಅವರ ಜೀವನದ ಹಲವು ಅಪೂರ್ಣ ಕಾರ್ಯ ನೆರವೇರಿಸುವ ಕ್ರಿಯೆಯಲ್ಲಿ ನಿರೂಪಕ, ಯಶವಂತರಾಯರ ಜೀವನದ ಪೂರ್ಣರೂಪ ತಿಳಿಯುತ್ತಾನೆ. ಈ ಕ್ರಿಯೆಯಲ್ಲೇ ಜೀವನದ ಹಲವು ಪಾಠಗಳನ್ನು, ಸಂಬಂಧಗಳ ಮೌಲ್ಯಗಳನ್ನು ಸಹ ತಿಳಿದುಕೊಳ್ಳುತ್ತಾನೆ.

ಕಾರಂತರು, ಕುವೆಂಪು ಮತ್ತು ಭೈರಪ್ಪರಂತ ಲೇಖಕರು ನಮ್ಮ ಸಾಹಿತ್ಯ ಲೋಕದಲ್ಲಿ ಮೇರುಪ್ರತಿಭೆಗಳಾಗಿ ನಿಲ್ಲೋಕೆ ಮುಖ್ಯ ಕಾರಣವೇ, ತಮ್ಮ ಕೃತಿಗಳಲ್ಲಿ ತತ್ವಜ್ಞಾನ ಮತ್ತು ಧರ್ಮಶಾಸ್ತ್ರದ ಸಾರವನ್ನು ಸಮರ್ಥವಾಗಿ ತರುವುದರಿಂದ. ಇಲ್ಲೂ ತತ್ವಜ್ಞಾನದ ಅನೇಕ ಮಜಲುಗಳು ವಿವಿಧ ರೂಪವಾಗಿ ಓದುಗನಿಗೆ ದಕ್ಕಿದೆ.
Profile Image for Ashish Iyer.
874 reviews636 followers
August 30, 2020
यह लेखक की एक साधारण कहानी है जो एक मृत व्यक्ति के जीवन के इतिहास पर नज़र रखने वाली यात्रा के बारे में है जिसे वह पहली बार ट्रेन में कुछ वर्षों के अंतराल में मिला था। जैसा कि व्यक्ति का इतिहास और चरित्र अप्रकाशित है, वह अपने साथ कई अन्य विशिष्ट चरित्रों और दृश्यों को लाता है और लेखक ने खुद को मुश्किल परिस्थितियों से निपटने के लिए। कारंत की लेखन शैली वास्तव में अनुसरण करने में आसान है और मनोरंजक भी। यह मेरी पहली शिवराम कारंत की पहली पुस्तक है। यह पुस्तक पहले कन्नड़ में प्रकाशित हुई थी, जिसे मैंने हिंदी में पढ़ा|
Profile Image for Prashanth Bhat.
2,162 reviews140 followers
February 28, 2020
ಅಳಿದ ಮೇಲೆ (ಮರು ಓದಿನ ಟಿಪ್ಪಣಿ)

ಶಿವರಾಮ ಕಾರಂತರ ಕಾದಂಬರಿಗಳು ಒಂದೊಂದು ಪ್ರಾಯದ ಅವಸ್ಥೆಯ ‌ಓದಿಗೆ ಒಂದೊಂದು ತೆರನಾದ ಅನುಭವ ಕೊಟ್ಟಿದೆ.
ಯೌವ್ವನಾವಸ್ಥೆಯಲ್ಲಿ ಓದಲು ಕಷ್ಟವಾದ ಅವರ ಕಾದಂಬರಿಗಳು ಈಗ ಪ್ರಾಯ ಜಾಸ್ತಿಯಾಗುತ್ತಿದ್ದಂತೆ ಓದುವಾಗ ಬಾಳಿನ ಸತ್ಯಗಳ ಬರೆದ ಮಹತ್ಗಂಥ್ರವಾಗಿ ಕಾಣುವುದು ಸೋಜಿಗವೆನಲ್ಲ.

ಅಳಿದ ಮೇಲೆ ಕಾದಂಬರಿಯ ಇಡಿಯ ಸಾರ ಮೊದಲೆರಡು ಪುಟಗಳಲ್ಲೇ ಇದೆ. ತಾನು ಸಂದ ಬಳಿಕ ವ್ಯಕ್ತಿಯು ಏನನ್ನು ಉಳಿಸಿಹೋಗುತ್ತಾನೆ.ಜೀವನದಲ್ಲಿ ಅವನು ಪಡೆದುಕೊಂಡದ್ದೆಷ್ಟು? ಕೊಟ್ಟದ್ದೆಷ್ಟು? ಎಂಬಿತ್ಯಾದಿ ಲೆಕ್ಕಾಚಾರಗಳ ಮೇಲೆ ಬದುಕು ನಡೆಯುವುದಿಲ್ಲ. ಆದರೆ ಅಷ್ಟು ಸಮಯ ಒದಗಿಬಂದರೆ ನಮಗೆ ಅಥವಾ ಇತರರಿಗೆ ನಮ್ಮ ಬದುಕಿನ ಬಗ್ಗೆ ಅದು ತಕ್ಕಡಿಯ ಯಾವ ಕೊನೆ ಹೆಚ್ಚು ತೂಗೀತು ಎಂಬುದರ ಬಗ್ಗೆ ಕುತೂಹಲವಿದ್ದೇ ಇದೆ.
ಈ‌ ಹಿನ್ನೆಲೆಯಲ್ಲಿ ನೋಡುವಾಗ ಯಶವಂತರಾಯ ಮತ್ತು ನಿರೂಪಕರ ವಿಶಿಷ್ಟ ಸಂಬಂಧ, ಯಶವಂತರಾಯರ ನಿಧನದ ಬಳಿಕ ನಿರೂಪಕ ತನ್ನ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ಮಾಡುವುದು ವಿಶಿಷ್ಟವಾಗಿ ಕಾಣುತ್ತದೆ. ಕಾದಂಬರಿ ಇದಷ್ಟೇ ಅಲ್ಲದೆ ಮನುಷ್ಯರ ಕುಃ ಬುದ್ಧಿಯನ್ನೂ ಹೇಳುತ್ತದೆ.
ಅಳಿದ ಮೇಲೆ‌ ಮನುಷ್ಯ ಗತಿಸಿದ ನಂತರ ಅವನ‌ ಜೀವಿತದ ಬಗ್ಗೆ (ಇನ್ನು ಬದಲಾಯಿಸಲಾಗದ) ಮೂರನೆಯ ವ್ಯಕ್ತಿ ನೋಡುವ ನೋಟ. ಅದರಲ್ಲಿ ತಪ್ಪು ಒಪ್ಪುಗಳಿಗಿಂತ ಮೀರಿದ ವಾಸ್ತವವಿದೆ. ಹಾಗಾಗಿಯೇ ನಿರೂಪಕ ಎಲ್ಲೂ ತೀರ್ಪುಗಾರನಾಗುವುದಿಲ್ಲ.
Profile Image for Aadharsha Kundapura.
60 reviews
June 4, 2024
ಕಾರಂತರ ಪುಸ್ತಕಗಳೇ ಹಾಗೆ. ಅನ್ವೇಷಣೆ, ಹುಡುಕಾಟ ಅಲೆದಾಟ, ಹಾಗೆ ಹತ್ತು ಹಲವು ವಿಭಿನ್ನ ರೀತಿಯ ವ್ಯಕ್ತಿತ್ವಗಳು ಹಾಗು ಜೀವನ ಮೌಲ್ಯಗಳನ್ನು ತಿಳಿಸುವ ಅಪೂರ್ವವಾದ ಬರವಣಿಗೆ ಅವರದ್ದು.

ಸತ್ತು ಮಣ್ಣು ಸೇರಿದ ಮೇಲೆ ಆತನು ನೋಡಲಾಗದ ಪ್ರಪಂಚ ಹಾಗು ಅತನನ್ನು ನೋಡಿದ ಪ್ರಪಂಚ ಅಳಿದ ಮೇಲೆ ಯಾವ ರೀತಿಯದ್ದಾಗಿರಬಹುದು..

ತಾನು ಸತ್ತ ಮೇಲೆ ತಾನು ಮಾಡಬೇಕಾಗಿರುವ ಉಳಿದ ಕೆಲಸವನ್ನು ಆರು ವರ್ಷಗಳ ಹಿಂದೆ ಪರಿಚಯವಾಗಿರುವ ಸ್ನೇಹಿತನಿಗೆ ಪತ್ರದ ರೀತಿಯಲ್ಲಿ ತಿಳಿಸುತ್ತಾರೆ ಯಶವಂತರಾಯರು. ತನ್ನಲ್ಲಿರುವ ಹಣ ಯಾರು ಯಾರಿಗೆ ಸೇರಬೇಕೆಂಬುದು ಸ್ಪಷ್ಟವಾಗಿ ವಿವರಿಸಿರುತ್ತಾರೆ.‌ ತನ್ನ ಆಪ್ತ ಸ್ನೇಹಿತನ ಜೀವದ ಜಾಡು ಹಿಡಿದು ಹೋಗುವ ಲೇಖಕರಿಗೆ ಅದೆಷ್ಟೋ ವಿಭಿನ್ನವಾದ ವ್ಯಕ್ತಿತ್ವಗಳು ಪರಿಚಯವಾಗುತ್ತದೆ. ತನ್ನ ಆಪ್ತ ಸ್ನೇಹಿತನನ್ನು ಕೆಲವರು ದೇವರ ಸ್ಥಾನದಲ್ಲಿಟ್ಟು ನೋಡಿದರೆ ಕೆಲವರು ಕಾಲು ಕಸದಂತಿರಿಸಿದ್ದರು. ಯಾವುದು ಸರಿ ಯಾವುದು ತಪ್ಪು ಅದು ಅವರವರ ದೃಷ್ಟಿಕೋನ. ಅವರ ಜನ್ಮ ವೃತ್ತಾಂತ ತಿಳಿಯಲು ಲೇಖಕರ ಅನ್ವೇಷಣೆ ಹುಡುಕಾಟ ಕೊನೆ ಮುಟ್ಟುವುದೇ? ಇಲ್ಲವೊ? ಎನ್ನುವುದೆ ಈ ಕಾದಂಬರಿ.

ಅಳಿದ ಮೇಲೆ
🖊ಶಿವರಾಮ ಕಾರಂತ
173 reviews22 followers
May 1, 2021
#ಪುಸ್ತಕ_ಪಯಣ_೨೦೨೧

ಕೃತಿ: ಅಳಿದ‌ ಮೇಲೆ

ಲೇಖಕರು: ಡಾ. ಕೆ ಶಿವರಾಮ ಕಾರಂತ

ಪ್ರಕಾಶಕರು: ಸಪ್ನ ಬುಕ್ ಹೌಸ್ ಬೆಂಗಳೂರು


ಯಶವಂತರಾಯರು ಈ ಕಥೆಯ ಕಥಾನಾಯಕ. ರೈಲು ಪ್ರಯಾಣದ ಸಂದರ್ಭದಲ್ಲಿ ಕಥೆಯ ನಿರೂಪಕನಿಗೆ ಮತ್ತು ಯಶವಂತರಾಯರಿಗೆ ಪರಿಚಯವಾಗಿ,ಪರಿಚಯ‌ ಸ್ನೇಹ ವಿಶ್ವಾಸಕ್ಕೆ ಮಾರ್ಪಡುತ್ತದೆ. ಆದರೆ ಬದುಕಿರುವವರೆಗೂ ನಿರೂಪಕನಿಗೆ ಯಶವಂತರಾಯರ ಬದುಕಿನ ವಿವರಗಳು ನಿಗೂಢವಾಗಿಯೇ ಉಳಿದಿರುತ್ತವೆ. ತಾನು ಅಸುನೀಗುವ ಸಂದರ್ಭದಲ್ಲಿ ನಿರೂಪಕನಿಗೆ ಕಳುಹಿಸಿದ ಪತ್ರ ಹಾಗೂ ಅವರ ಆತ್ಮ ವೃತ್ತಾಂತದ ಪುಸ್ತಕದ ಮೂಲಕ ಅವರ ಬದುಕಿನ ವಿವರಗಳು ತೆರೆದುಕೊಳ್ಳುತ್ತವೆ.. 


ಇಲ್ಲಿ ಯಶವಂತರಾಯರು ಓದುಗರೊಂದಿಗೆ ನೇರವಾಗಿ ಮುಖಾಮುಖಿಯಾಗುವುದಿಲ್ಲ. ಅವರ ಪತ್ರದಲ್ಲಿನ ಅಪೇಕ್ಷೆಯಂತೆ ನಿರೂಪಕರು ಅವರು ಹುಟ್ಟಿದ ಬೆನಕನ ಹಳ್ಳಿ, ನೆಲೆನಿಂತ ಕುಮಟೆಗೆ ಹೋಗಿ ಅವರಿಗೆ ಸಂಬಂಧಪಟ್ಟ ವ್ಯಕ್ತಿಗಳನ್ನು ಕಂಡು ಮಾತನಾಡಿಸಿದಾಗ ಅವರ ಜೀವನವು ಅನಾವರಣಗೊಳ್ಳುತ್ತದೆ. ಬಾಲ್ಯದಲ್ಲಿ ನಾನಾ ಕಷ್ಟಗಳನ್ನು ಅನುಭವಿಸಿದ ಅವರು ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೂ ಮನೆಯ ಯಜಮಾನಿಕೆ ಸಿಕ್ಕಿದೆ ಬಳಿಕ ಯಶವಂತರಾಯರು ಸಾಲದು ಸುಳಿಗೆ ಸಿಕ್ಕಿದ್ದೇಕೆ? ಕುಮಟೆಗೆ ಹೋಗಿ ತನ್ನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಂಡರೂ ಮತ್ತೆ ಅಲ್ಲಿಂದ ಹೋಗಿ ಮುಂಬಯಿಯಲ್ಲಿ ನೆಲೆಸಿದ್ದೇಕೆ? ಅವರು ಹೆಸರಿಸಿದ ವ್ಯಕ್ತಿಗಳು ಅವರು ವ್ಯಕ್ತಿತ್ವವನ್ನು ರೂಪಿಸುವಲ್ಲಿ ವಹಿಸಿದ ಪಾತ್ರಗಳೇನು? ಯಶವಂತರಾಯರ ವಹಿಸಿದ ಕೆಲಸವನ್ನು ನಿರ್ವಹಿಸಲು ನಿರೂಪಕರಿಗೆ ಸಾಧ್ಯವಾಯಿತೇ? ಎಂಬುದು ಓದಿ ತಿಳಿದುಕೊಳ್ಳುವುದು ಉತ್ತಮ.


ಒಬ್ಬ ಯಾವುದೇ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಹತ್ತು ಹಲವು ವ್ಯವಹಾರಗಳಲ್ಲಿ ತೊಡಗಿಕೊಂಡಿರುತ್ತಾನೆ. ಹಲವಾರು ಜನರ ಸಂಪರ್ಕಕ್ಕೆ ಬರುತ್ತಾನೆ. ಆದರೆ ಆ ವ್ಯಕ್ತಿ ಬಾಳೆ ಪಯಣ ಮುಗಿಸಿದ ಮೇಲೆ ಅವನನ್ನು ನೆನೆಯುವವರು ಯಾರು?ಯಾಕಾಗಿ ನೆನೆಯಬೇಕು? ಎಂಬುದು ನಾವು ಬಾಳ ದಾರಿಯಲ್ಲಿ ಮೂಡಿಸಿದ ಹೆಜ್ಜೆ ಗುರುತುಗಳ ಮೇಲೆ ಅವಲಂಬಿತವಾಗಿರುತ್ತದೆ. ಯಾವೊಬ್ಬ ವ್ಯಕ್ತಿಯೂ ಪರಿಪೂರ್ಣವಾಗಿರಲು ಸಾಧ್ಯವಿಲ್ಲ. ಆದರೆ ನಾವು ಹೊರಟು ಹೋಗುವ ಮುನ್ನ ಪಡೆದುದಕಿಂತ ಹೆಚ್ಚು ದಾನ ಮಾಡಿರಬೇಕು ಎಂಬ ಯಶವಂತರಾಯರ ಮಾತಿನಲ್ಲಿ ಕಾದಂಬರಿಯ ಆಶಯ ಅಡಗಿದೆ.


ನಮಸ್ಕಾರ,

ಅಮಿತ್ ಕಾಮತ್
Profile Image for Vasanth.
115 reviews22 followers
April 16, 2023
ಅಳಿದ ಮೇಲೆ ಉಳಿಯುವುದೇನು? ಸತ್ತಾಗ ಹೆಣವನ್ನೂ ಬಿಟ್ಟುಹೋಗುವ ನಾವು ಉಳಿಸಿ ಹೋಗಬೇಕಾದದ್ದಾದರೂ ಏನು? ಅಳಿದ ಮೇಲೂ ಸ್ಮರಣೆಯಲ್ಲಿರಲು ಗಳಿಸಬೇಕಾದುದು ಹಣ ಅಥವಾ ಆಸ್ತಿ ಪಾಸ್ತಿಯ? ನಮ್ಮನ್ನೆಲ್ಲ ಆಗಲಿರುವ ಮಹಾನ್ ವ್ಯಕ್ತಿಗಳ "ವ್ಯಕ್ತಿ ಚಿಹ್ನೆ" ಉಳಿದಿರುವುದು ಅವರ ಚರಿತ್ರೆಯಿಂದ, ಬದುಕಿದ ರೀತಿಯಿಂದ. ಅಲ್ಲವೇ? ಸಂಸಾರ ಮತ್ತು ಸಮಾಜದಿಂದ ಪಡೆದುದಕ್ಕಿಂತ ಹೆಚ್ಚಾಗಿ ಕೊಟ್ಟುಹೋಗುವುದು ಬಹಳ ಮುಖ್ಯವೆಂಬ ಮೌಲ್ಯವನ್ನು ಸಾರುವ ಕೃತಿಯಿದು. ಹಾಗಾದರೆ ನಾವು ಸಮಾಜ ಮತ್ತು ಸಂಸಾರಕ್ಕೆ ಮರಳಿ ಕೊಡಬೇಕಾದುದು ಏನು? ಅಳಿದ ಮೇಲೆ ಉಳಿಸಿದ್ದೇನೆಂದು ಅಳೆಯುವವರು ಯಾರು? ಹೌದು, ಬರೀ ಪ್ರಶ್ನೆಗಳೇ ನನ್ನಲಿ ತುಂಬಿವೆ.
Profile Image for Gowthami.
31 reviews9 followers
January 31, 2025
ಅಳಿದ ಮೇಲೆ ಉಳಿಯುವುದೇನು ? ಉಳಿಸಿಹೋಗುವುದೇನು? ಉಳಿಯಬೇಕಾದದ್ದೇನು?
ನಾವು ಅಳಿಯುವ ಮುನ್ನ ನಮ್ಮ ಸ್ಮರಣೆಗೆ ಇರುವ ಅಳಿದ ವ್ಯಕ್ತಿಗಳ ಮೇಲೆ ಬಗೆ ಬಗೆಯ ಅಭಿಪ್ರಾಯಗಳ ಬುತ್ತಿಯನ್ನೇ ಇರಿಸಿಕೊಂಡಿರುತ್ತೀವಿ , ಅವೆಲ್ಲಕ್ಕೂ ಒಂದು ಹಿನ್ನಲೆ ಇದ್ದಿರಬಹುದು/ ಇಲ್ಲದೇ ಇರಬಹುದು ಆದ್ರೆ ಅದೇ ಸರಿ ಇದೇ ತಪ್ಪು ಎಂದು ಖಂಡ ತುಂಡವಾಗಿ ನಿರ್ಧರಿಸುವ ನಾವು ಯಾವ ಹಿನ್ನಲೆ/ ನಂಬಿಕೆ/ಆಧಾರದ ಮೇಲೆ ಅಳಿದ ವ್ಯಕ್ತಿಗಳ ಜರೆಯುವುದು ? ಹೊಗಳುವುದು?

ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಮನುಷ್ಯನಲ್ಲಿ ಕೆಟ್ಟದ್ದು ಒಳ್ಳೆಯದು ಎರಡೂ ಉಂಟು, ಅವನ ಒಂದು ಮುಖವನ್ನು ಮಾತ್ರವೇ ಗಣನೆಗೆ ತೆಗೆದುಕೊಂಡು ಅವನ ಇಡೀ ಜೀವನವನ್ನೇ ಬಣ್ಣಿಸುವುದು ಸರಿಯಾದ ಕೆಲಸವೂ ಅಲ್ಲ .
ಇದೇ ವಸ್ತುವಿನ ಮೇಲೆ ಕಾರಂತರು ಬರೆದ ಕಾದಂಬರಿ " ಅಳಿದ ಮೇಲೆ" .

ಕಾದಂಬರಿಯ ಮೊದಲಲ್ಲೇ ಪಾತ್ರಗಳ ಮೂಲಕ ತೆರೆದುಕೊಳ್ಳದೆ ಜೀವನವನ್ನು ಒಂದು ಯಾತ್ರೆಗೆ ಹೋಲಿಸಿ ಬರೆದ ಪುಟಗಳು ಕಾಣಸಿಗುತ್ತದೆ . ಜೀವನದ ಬಗ್ಗೆ ಸ್ವಲ್ಪ ಜ್ಞಾನ ಕೊಟ್ಟ ನಂತರವೇ ನಮಗೆ ಕಾದಂಬರಿಯ ಶುರು ಕಾಣುವುದು .

೫-೬ ವರ್ಷಗಳ ಹಿಂದೆ ಆಕಸ್ಮಿಕವಾಗಿ ಪರಿಚಯವಾದ ಯಶವಂತ ರಾಯರ - ಕಾರಂತರ ಸ್ನೇಹ ಬೆಳೆದು ಆಗಾಗ ಅವರನ್ನು ಕಾಣಲು ಕಾರಂತರು ಮುಂಬಯಿಗೆ ಹೋಗುತ್ತಲಿದ್ದರು , ಆದರೆ ಅದೇಕೋ ಒಮ್ಮೆ ನಿಮ್ಮನ್ನು ಕಾಣಬೇಕು, ಏನೋ ಹೇಳಬೇಕು ಎಂದು ಕಾಗದ  ಬರೆದಿದ್ದರು ರಾಯರು. ಆದರೆ ಹೋಗುವ ಮುಂಚೆಯೇ "ಅಳಿದ" ಸ್ನೇಹಿತನ ಶವಸಂಸ್ಕಾರ ಮಾಡಿ ಬಂದ ಕಾರಂತರಿಗೆ "ಉಳಿದದ್ದು" ನೆನಪುಗಳು ,  ಅವರ ಸ್ನೇಹಿತರು "ಉಳಿಸಿ"ಹೋದ ತನ್ನ ವಸ್ತುಗಳು , ದುಡ್ಡು, ಪತ್ರಗಳು ,ಚಿತ್ರಗಳು ಹಾಗೂ ಡೈರಿ ಆದರೆ ಇದರಲ್ಲಿ "ಉಳಿಯಬೇಕಾದದ್ದು" ಏನು ?

ಡೈರಿ, ಪತ್ರ ಮತ್ತು ಚಿತ್ರಗಳ ಸಹಾಯದಿಂದ ಯಶವಂತರಾಯರ ಜೀವನದಲ್ಲಿ ಇದ್ದ ವ್ಯಕ್ತಿಗಳ ಜೊತೆ ಅವರಿಗಿರುವ ಸಂಬಂಧ ಏನು ? ಎಂತಹದ್ದು ? ಎಂದು ಬಿಡಿಸುತ್ತ ಸಾಗುವ ಪರಿ ಅಂತೂ ಮನುಷ್ಯನನ್ನು ಅರಿಯಲು ಮತ್ತೊಬ್ಬ ಅಷ್ಟೇ ಸೂಕ್ಷ್ಮ ಮನಸ್ಸುಳ್ಳ ಮನುಷ್ಯನಿಂದ ಮಾತ್ರ ಸಾಧ್ಯ ಎನ್ನುವುದು ಮನದಟ್ಟಾಗುತ್ತದೆ.

ಜೊತೆಗೆ ರಾಯರ ಜೀವನದಲ್ಲಿ ಬರುವ ವ್ಯಕ್ತಿಗಳು ಯಾರು? ಅವರನ್ನು ಇನ್ನೂ ಅರಿಯಬೇಕು ಎನ್ನುವ ಉದ್ದೇಶದಿಂದ ಎಲ್ಲರನ್ನೂ ಭೇಟಿ ಮಾಡುವ ಬರುವ ಕಾರಂತರಿಗೆ ರಾಯರ ಬಗ್ಗೆ ಇರುವ ವಿವಿಧಾಭಿಪ್ರಾಯಾಗಳು ಪರಿಚಿತವಾಗುತ್ತದೆ , ಅದರ ಜೊತೆ ಇಲ್ಲಿ ಬರುವ ಪಾತ್ರಗಳ ಬಗ್ಗೆ ಸಹ ನಮಗೂ ಒಂದು ತೆರನಾದ ಭಾವ ಹುಟ್ಟುತ್ತದೆ.

ಪಾರೂತಿ ಅಜ್ಜಿಯ ನೋವು , ಆಸೆ  , ಅಸಹಾಯಕತೆ,  ಮೂಕಾಂಬಿಕ ಅಜ್ಜಿಯ ಮೂಕ ವೇದನೆ . ಸೀತಾರಾಮ ಹಾಗೂ ಕಮಲೆಯ ಡೌಲು. ಇಂದುಮತಿ ಹಾಗೂ ಸರಸಿಯ ವಾತ್ಸಲ್ಯ ತುಂಬಿದ ಪ್ರೀತಿ , ಜಲಜ - ಮಂಜಯ್ಯ ಮತ್ತು ಕುಟುಂಬದ ಅಸಹಾಯಾಕತೆಯ ಜೀವನದಲ್ಲೂ ಧೈರ್ಯ ಕೆಡದ ಮನಸ್ಸುಗಳು. ಮಕ್ಕಳ ಜೊತೆಗೆ ಮಕ್ಕಳಾಗಿ ಹೋದ ಕಾರಂತರು , ರಾಯರ- ಪಂಡಿತರ ಉತ್ತರ - ದಕ್ಷಿಣ ಧ್ರುವದಂತಿರುವ ಸ್ನೇಹ ಎಲ್ಲವೂ ಕಾಣಸಿಗುತ್ತದೆ.

ಇಷ್ಟೆಲ್ಲಾ ಓದಿದ ನಂತರ ಉಳಿಯಾಬೇಕಾದದ್ದು ಏನು ? ಎನ್ನುವ ಪ್ರಶ್ನೆಗೆ ಉತ್ತರ ಸಿಗಬಹುದು ಅಥವಾ ಸಿಗದೆ ಹೋಗಬಹುದು , ಸಿಕ್ಕಿದರೂ ಅದು ನನಗೆ ಸಿಕ್ಕ ಉತ್ತರವೇ ಆಗಬೇಕೆಂದಿಲ್ಲವಲ್ಲ, ರಾಯರು ಹೇಳುವಂತೆ ಮನುಷ್ಯ ನಡೆಯಬೇಕಾದದ್ದು ತಾನು ಕಂಡುಕೊಂಡ ನಂಬಿಕೆಯ ದಾರಿಯಲ್ಲಿ , ಆ ದಾರಿಯಲ್ಲಿ ಏನು ಸಿಗುತ್ತದೋ ಇಲ್ಲವೋ ಯಾರು ಬಲ್ಲರು ?

ಇದೆಲ್ಲದರ ಜೊತೆ ಮುಂಬಯಿಯ ಜನಾರಣ್ಯ, ದಕ್ಷಿಣ ಕನ್ನಡದ ಹಸಿರಿನ ಸೊಬಗು ಎಲ್ಲವನ್ನು ಎಂದಿನಂತೆ ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸಿ ನಮ್ಮನ್ನು ಕಲ್ಪನೆಯ ಲೋಕದಲ್ಲಿ ವಿಹರಿಸುವಂತೆ ಮಾಡುವುದು ಅವರಿಗೆ ಕರಗತ .

ಒಮ್ಮೆ ಓದಲೇಬೇಕಾದ ಕಾದಂಬರಿ ಇದು , ಓದಿ ಓದಿಸಿ 🙏

- ಪುಸ್ತಕ_ಭೃತ
Profile Image for Sanjay Manjunath.
201 reviews10 followers
October 20, 2023
ಮನುಷ್ಯ ಜೀವನದ ಬಣ್ಣಗಳೆಷ್ಟೋ!? ಒಂದೊಂದು ಬಣ್ಣ ಒಂದೊಂದು ತೆರನಾದದು. ಹಾಗೆ, ಒಬ್ಬೊಬ್ಬ ಮನುಷ್ಯನು ಒಂದೊಂದು ಬಗೆ.

ನಮ್ಮ ಜೀವನದಲ್ಲಿ ಬರುವ ವ್ಯಕ್ತಿಗಳು ಅನೇಕ. ನೆನಪಿನಲ್ಲುಳಿಯುವವರು ಕಮ್ಮಿ. ಅದರಲ್ಲೂ ಸುಂದರ ನೆನಪುಗಳನ್ನ ಬಿಟ್ಟು ಹೋಗುವವರು ತುಂಬಾ ಕಮ್ಮಿ.

ಅಂತಹ ಒಂದು ಸುಂದರ ನೆನಪುನ್ನ ಬಿಟ್ಟು ಹೋದ #ಯಶವಂತರಾಯ ಎಂಬ ವ್ಯಕ್ತಿಯ ಜೀವನವನ್ನು ಅರಿಯಲು ಕಾರಂತರು ಹೊರಡುವುದೇ "ಅಳಿದಮೇಲೆ".

ಯಶವಂತ ರಾಯರು ಸಾಯುವ ಮುನ್ನ ಕಳುಹಿಸಿದ ಡೈರಿ ರೂಪದ ಒಗಟಿನ ಬರಹಗಳನ್ನು ಇಟ್ಟುಕೊಂಡು ಅವರ ಜೀವನವನ್ನು ಒಂದು ಚೌಕಟ್ಟಿನೊಳಗೆ ಕಂಡುಕೊಳ್ಳಲು, ಯಶವಂತರು ನೀಡಿದ ನಾಲ್ಕು ವಿಳಾಸದಲ್ಲಿರುವ ವ್ಯಕ್ತಿಗಳನ್ನು ಅರಸುತ್ತಾ ಸಾಗುತ್ತಾರೆ ಲೇಖಕರು.

ಅದರ ಜೊತೆಗೆ, ಅವರ ಬರಹಗಳಲ್ಲಿ ಕಾಣಿಸಿದಂತಹ, ಯಶವಂತರ ಜೊತೆಯಲ್ಲೇ ಇದ್ದ ದಾದಾ ಎಂಬ ನಿರ್ಭಾವುಕನ ಬಗ್ಗೆ ಮತ್ತು ಯಾವುದೋ ಸಂದರ್ಭದಲ್ಲಿ ಅಂಟಿಕೊಂಡ, ಹಣ ಕೀಳುವ ಮೇರಿ ಎಂಬುವವಳ ಬಗ್ಗೆಯೂ ವಿಷಯಗಳು ಸಿಕ್ಕಿದಾಗ ಯಶವಂತರ ಸಾಧು ಜೀವನ ಅರಿವಾಗುತ್ತದೆ.

ವಿಳಾಸದಲ್ಲಿರುವ ನಾಲ್ಕು ವ್ಯಕ್ತಿಗಳಲ್ಲಿ.. ಮೊದಲನೆಯದಾಗಿ ಸಿಗುವ ಪಾರೋತಿ ಎಂಬ ಹೃದಯವಂತೆಯಿಂದ ಲೇಖಕರು ಜೀವನದರ್ಶನವನ್ನೇ ಕಂಡುಕೊಳ್ಳುತ್ತಾರೆ. ಜೊತೆಗೆ, ಯಶವಂತರ ಬಾಲ್ಯ, ಅವರ ತಂದೆತಾಯಿ, ಸಂಬಂಧಿಗಳೊಂದಿಗೆ ಉಂಟಾದ ಕಲಹ, ಆಸ್ತಿ ಕಳೆದುಕೊಂಡ ಬಗೆ, ಮೂಕಾಂಬೆ-ಪಾರೋತಿಯ ಗೆಳತನ, ಶಂಭು ಹೆಗಡೆ ಎಂಬ ಪಡಪೋಶಿ, ಬೆನಕಯ್ಯನ ಗುಡಿ, ಊರಿನ ಪರಿಸರ. ಹೀಗೆ ಎಲ್ಲವೂ ಬೆಸೆದುಕೊಂಡಿರುವ ಬಗೆಯಿಂದ ಯಶವಂತರ ಕಷ್ಟನಷ್ಟ ಜೀವನದ ಅರಿವಾಗುತ್ತದೆ.

ಎರಡನೆಯದಾಗಿ ಸಿಗುವ ಯಶವಂತರ ಮಗಳ ಗಂಡ ಮಂಜಯ್ಯ ಎಂಬುವವರಿಂದ ಯಶವಂತರ ಉಪಕಾರ ಜೀವನ. ಜೊತೆಗೆ, ಅವರ ಮಗಳಾದ ಜಲಜಳೂ ಬಡತನದಲ್ಲೂ ನಡೆಸುತ್ತಿರುವ ತೃಪ್ತಿಯ ಜೀವನ, ಅವಳ ಚಿನಕುರುಳಿಯಂಥ ಮಕ್ಕಳು, ಹಾಗೆ ಯಶವಂತರ ಮಗನಾದ ಸೀತಾರಾಮ ಎಂಬ ಹಣದ ಭೂತ ಮತ್ತು ಯಶವಂತರ ಜಗಳಗಂಟಿ ಪತ್ನಿಯಿಂದ ತೊಂದರೆಗಳನ್ನ ಅನುಭವಿಸಿ, ಮುಂಬೈ ಎಂಬ ದಟ್ಟಾರಣ್ಯಕ್ಕೆ ಬಂದ ಕಾರಣಗಳ ಅರಿವಾಗುತ್ತದೆ.

ಮೂರನೆಯದಾಗಿ ಪತ್ನಿಯಿಂದ ಕಳೆದುಕೊಂಡ ಸಂತೋಷದ ಚಿಲುಮೆಯನ್ನು ಮತ್ತೆ ಉದ್ದೀಪಿಸಿದ ಸರಸಿ ಎಂಬ ಚೇತನದ ಬಗ್ಗೆ ಮತ್ತು ಅವಳ ಮಕ್ಕಳಾದ ಶೀನ ಹಾಗೂ ಇಂದುಮತಿ ಬಗ್ಗೆ. ಇಂದುಮತಿ ತೋರಿದ ಕಾಳಜಿ ಮತ್ತು ಅದರಿಂದ ಸಿಕ್ಕ ಸಂತೋಷದ ಕ್ಷಣಗಳಿಂದ ಯಶವಂತರ ಮತ್ತೊಂದು ಬಗೆಯ ವ್ಯಕ್ತಿತ್ವ ಪರಿಚಯವಾಗುತ್ತದೆ.

ಕೊನೆಯದಾಗಿ ಸಿಕ್ಕ ವಿಷ್ಣುಪಂತ್ ಎಂಬ ಬರಹಗಾರರ ಮೂಲಕ ಯಶವಂತರಿಗೆ ಇದ್ದ ದೈವಿಕ ಜಿಜ್ಞಾಸೆಗಳ ಬಗ್ಗೆ, ವಿಚಾರಧಾರೆಗಳ ಬಗ್ಗೆ, ವಿರುದ್ಧ ಅಭಿಪ್ರಾಯಗಳಿದ್ದರೂ ಅದನ್ನು ಗೌರವಿಸುತ್ತಿದ್ದ ಬಗ್ಗೆ, ಅರಿವಾದಾಗ ಅವರದು ಉನ್ನತ ವ್ಯಕ್ತಿತ್ವ ಅನಿಸುತ್ತದೆ.

ಹೀಗೆ ಕಾರಂತರು, ಯಶವಂತರ ಜೀವನವನ್ನು ತೆರೆದಿಡುತ್ತಾ, ಜೀವನಕ್ಕೆ ಬೇಕಾದ ಮೌಲ್ಯಗಳನ್ನು ದಾಟಿಸುತ್ತಾರೆ ಓದುಗರಿಗೆ. ಉತ್ತಮ ಕೃತಿ.
This entire review has been hidden because of spoilers.
Profile Image for Chaitra.
187 reviews
December 26, 2020
"Alida Mele" Yet another book by Sri K Shivaram Karanth and yet another beautiful exploration into the life of a deceased friend, Yashwanth.

An accidental meeting in a train compartment led to a beautiful friendship between the author and the central character of the book, Yashwanth. A brotherly affiliation so pure that despite Yashwanth had a family of his own far away from Mumbai he trusts his friend with his half finished jobs.

And that's when the author plunges into Yashwanth's personal diaries, his odd looking paintings with hidden views and the books he loved. The author figures out there's a past which Yashwanth left behind years ago and seeks to find its trail in order to finish the job his beloved dead friend wanted him to do.

We live through the tales on Yashwanth recalled by long lost friends and families and discover various truth about him. We meet his foster mother and his cousins whose hands were thrust with family rivalry. We meet Yashwanth's own family and have hard trouble understanding their views on him as Yashwanth is this beautiful human who sheltered a complete stranger, Ganpath, and gave him a life. A man who fostered many lives with what's little left with him.

We move through Yashwanth's pain and loss. His sadness and the days of dark. The way he decided that he's done with the life he's leading and left home never turning back.

We come to know the extended family he had whom he loved and who he loved him.

In the end, we come to know that Yashwanth indeed could paint so well and his brushes didn't just paint odd paintings but also a beautiful portrait of a long lost lady who loved him with all her heart.

As usual I savoured the book. It was so deep and phenomenological that for a long while as I got associated with Yashwanth's character I began to feel that he was someone I knew, someone I had lost somewhere far. A great read indeed.
Profile Image for Sindhu.
27 reviews11 followers
February 29, 2020
ಕಾರಂತರ ಅಳಿದ ಮೇಲೆ ಕೃತಿ ಒಂದು ಅಪೂರ್ವ ಅನುಭವವನ್ನ ನೀಡೋ ಪುಸ್ತಕ.ವಿಭಿನ್ನ ಜನರ ಮನಸ್ಥಿತಿ,ಸಂಬಂಧಗಳು,ಸಂಬಂಧಗಳ ಮೇಲೆ ಹಣ ಬೀರೋ ಪ್ರಭಾವ ಇದೆಲ್ಲವನ್ನ ಈ ಪುಸ್ತಕ ತುಂಬಾ ಚೆನ್ನಾಗಿ ಅರ್ಥಮಾಡಿಸತ್ತೆ.ಪುಸ್ತಕಗಳನ್ನ ಒಂದೊಂದು ಹಂತದಲ್ಲಿ ಓದಿದಾಗಲೂ ಒಂದೊಂದು ರೀತಿಯಲ್ಲಿ ಮನಸ್ಸು ಅರ್ಥೈಸತ್ತೆ.ಇದೇ ಪುಸ್ತಕವನ್ನ ಕೆಲ ವರ್ಷಗಳ ಹಿಂ��ೆ ಓದಿದ್ರೆ ಇದೆಂಥ ಬೇಸರ ಹುಟ್ಟಿಸುವ ಪುಸ್ತಕವಪ್ಪಾ! ಅನ್ನಿಸುತ್ತಿತ್ತೇನೋ.ಆದರೆ ಅನುಭವಗಳಗೆ ತೆರೆದುಕೊಂಡಂತೆಲ್ಲಾ ಅರೆ,ಈ ಪುಸ್ತಕದಲ್ಲಿ ಎಷ್ಟು ಚಂದವಾಗಿ ಜೀವನ ಸತ್ಯವನ್ನ ಬರೆದಿದ್ದಾರಲ್ಲಾ ಎಂದನಿಸದೆ ಇರದು.
ಯಶವಂತರಾಯರ ಮರಣದಿಂದ ನಿರೂಪಕರ ಹೆಗಲಿಗೇರುವ ಹಣದ ಜವಾಬ್ದಾರಿ ವಿವಿಧ ರೀತಿಯ ಮನಸ್ಥತ್ವಗಳನ್ನ ಪರಿಚಯಿಸುತ್ತಾ ಹೋಗತ್ತೆ.ಪಾರ್ವತಮ್ಮನವರಲ್ಲಿ ಒಂದಿಷ್ಟು ಮೂಕಜ್ಜಿಯ ಹೋಲಿಕೆಗಳು ಕಂಡುಬಂದರೂ ಮನುಷ್ಯರ ಕೆಟ್ಟ ಗುಣಗಳನ್ನ ನೋಡಿದಾಗಲೆಲ್ಲ ಅವರನ್ನ ದೂರದೆ ಅದೂ ಒಂದು ಜನನಾವಸ್ಥೆ ಬಿಡು ಮಗು ಅನ್ನೋ ನಿರ್ಲಿಪ್ತತೆ ಬರಲು ಅದೆಷ್ಟು ತಪಸ್ಸು ಮಾಡಿರಬೇಕು.
ಯಶವಂತರಾಯರ ಮಗಳ ಕುಟುಂಬ ತಂದೆಯ ಮೇಲೆ ಪ್ರೀತ್ಯಾದಾರಗಳನ್ನ ಹೊಂದಿದ್ದ ಸಂಸ್ಕಾರವಂತ ಕುಟುಂಬ.
ಇನ್ನು ಹೆಂಡತಿ ಮಗ ನಾಣ್ಯದ ಇನ್ನೊಂದು ಮುಖ.ಕೃತಘ್ನ ಜನ.
ಈ ಪುಸ್ತಕದಲ್ಲಿ ಆ ಸ್ಥಳದ ಪರಿಸರವೂ ಮುಖ್ಯವೇ.ನಿರೂಪಕರ ಪಯಣದೊಂದಿಗೇ ನಾವೂ ಅಲ್ಲೆಲ್ಲಾ ಸುತ್ತಾಡಿ ಬಂದಂಥಾ ಅನುಭವ ನೀಡತ್ತೆ ಪುಸ್ತಕ.
Profile Image for Krishna Kulkarni.
19 reviews3 followers
February 6, 2016
The narrator's story associated with an old man, who lived in Mumbai, his life, people he associated with. A must read.
2 reviews1 follower
June 2, 2021
After reading this book we can understand how human's are interdependent,the different perspective of people.
This is now one of my favourite book.
Profile Image for ಸುಶಾಂತ ಕುರಂದವಾಡ.
429 reviews25 followers
March 17, 2023
ಕಾದಂಬರಿಯಲ್ಲಿ ಕಾರಂತರು ನಿರೂಪಕರಾದರೆ ಯಶವಂತರಾಯರು ಕಥಾನಾಯಕರು. ರೈಲು ಪ್ರಯಾಣದಲ್ಲಿ ಮುಖಾಮುಖಿಯಾದ ಯಶವಂತರಾಯರು ಮತ್ತು ಕಾರಂತರು ತಮ್ಮ ಜೀವನದ ಅಲ್ಪಸ್ವಲ್ಪ ಅಂಶಗಳನ್ನು ಹಂಚಿಕೊಳ್ಳುತ್ತಾರೆ ಅದರಿಂದ ಇಬ್ಬರೂ ಸನೀಹವಾಗುತ್ತಾರೆ. ಮುಂದೆ ಎಷ್ಟೋ ದಿನಗಳ ತರುವಾಯ ಕಾರಂತರಿಗೆ ಯಶವಂತರಾಯರಿಂದ ಕೊನೆಯ ದಿನಗಳಲ್ಲಿ ಪತ್ರವೊಂದು ತಲುಪುತ್ತದೆ. ಆದರೆ ಅವರು ಅಲ್ಲಿ ಹೋಗುವ ಮುಂಚೆಯೇ ಯಶವಂತರಾಯರು ಕೊನೆಯುಸಿರೆಳೆದಿರುತ್ತಾರೆ. ಅಲ್ಲಿ ಅವರಿಗೆ ದೊರೆತಿದ್ದು ಯಶವಂತರಾಯರದೊಂದು ಪತ್ರ, ಅವರು ಬರೆದಿಟ್ಟ ಕೆಲವು ಚಿತ್ರಗಳು, ಹದಿನೈದು ಸಾವಿರ ರೂಪಾಯಿಗಳ ಡ್ರಾಫ್ಟ್ ಕಾರಂತರ ಹೆಸರಿಗೆ ಬರೆದಿಟ್ಟಿದ್ದು ಸಿಗುತ್ತದೆ. ಅಲ್ಲಿ ರಾಯರು ತಾವು ಗತಿಸಿ ಹೋದರೆ ಮುಂದೆ ಏನು ಕೆಲಸಗಳಾಗಬೇಕು ಅಂತ ಬರೆದಿಟ್ಟಿರುತ್ತಾರೆ. ಕಾರಂತರು ರಾಯರ ಬಯಕೆಗಳನ್ನು ಈಡೇರಿಸಲು ಮುಂದಾಗುತ್ತಾರೆ.
ಮುಂಬೈಯಲ್ಲಿ ನೆಲೆಸಿದ್ದ ಯಶವಂತರಾಯರ ಬಾಲ್ಯ ಜೀವನವನ್ನು ತಿಳಿದು ಮಲೆನಾಡಿಗೆ ಪ್ರಯಾಣ ಬೆಳೆಸುತ್ತಾರೆ. ಬೇರೆ ಬೇರೆ ಜಾಗಗಳಲ್ಲಿ ಯಶವಂತರಾಯರ ಬಗ್ಗೆ ಆಯಾ ಜನರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಸಿಸುತ್ತಾರೆ. ಕೆಲವರು ಅವರ ಕುಟುಂಬಸ್ಥರಾದರೆ ಕೆಲವರು ಗೆಳೆಯರು. ಆದರೆ ಕಾದಂಬರಿಯಲ್ಲಿ ಯಶವಂತರಾಯರನ್ನು ತಾಯಿಯಂತೆ ಬೆಳೆಸಿದ ಪಾರ್ವತಮ್ಮನ ಪಾತ್ರ ಮನದಲ್ಲಿ ನೆಲೆಸುತ್ತದೆ. ಆದರೆ ಅವಳ ಬಗ್ಗೆ ಯಶವಂತರಾಯರ ಮಕ್ಕಳ ಬಾಯಲ್ಲಿ ತಿರಸ್ಕಾರದ ನುಡಿಗಳು ಬಂದಾಗ ಕಾರಂತರಿಗೆ ತಾವು ಅವಳಿಗಾಗಿ ಮಾಡಿದ್ದು ತಪ್ಪೇ ಅಂತ ಕ್ಷಣಕ್ಕೊಮ್ಮೆ ಅನಿಸಿದ್ದುಂಟು.
ಕಾದಂಬರಿಯಲ್ಲಿ ಒಬ್ಬ ವ್ಯಕ್ತಿ ಗತಿಸಿದ ನಂತರ ಅವರ ಸುತ್ತ ಹೆಣೆದಿರುವ ಕಥೆಗಳು ಹೇಗೆ ಉದ್ಭವಿಸುತ್ತವೆ ಅದರ ಮೇಲೆ ಒಟ್ಟು ಒತ್ತು ನೀಡಲಾಗಿದೆ. ವ್ಯಕ್ತಿಯು ಒಳ್ಳೆಯವನೇ ಆಗಿದ್ದರೂ ಬೇರೆಯವರ ಕಣ್ಣಿನಲ್ಲಿ ಆ ವ್ಯಕ್ತಿ ಬೇರೆಯವನೇ ಆಗಿರುತ್ತಾನೆ. ಆ ಕಥೆ ಜನರ ಬಾಯಿಯಿಂದ ಬಾಯಿಗೆ ಹರಿದುಹೋಗಿ ಮನುಷ್ಯನ ಮೂಲ ಗುಣಗಳೇ ನಶಿಸಿಹೋಗುತ್ತವೆ. ಈ ಅಭಿಪ್ರಾಯವನ್ನು ಕಾರಂತರು ಬಹು ಚೆನ್ನಾಗಿ ಈ ಕಾದಂಬರಿಯ ಮೂಲಕ ತಿಳಿಸಿಕೊಟ್ಟಿದ್ದಾರೆ.
18 reviews
August 15, 2025
ಅಳಿದ ಮೇಲೆ
ಅಜ್ಞಾತ ರೈಲು ಸಹಚರಿಯೋರ್ವನ ಜೀವನ ಕಥೆ.
ಕಥೆ ಓದುವಾಗ ಮುಂಚೆ ನೋಡಿದ್ದ "Kings of the Road" ಸಿನೆಮಾ ಹಲವು ಬಾರಿ ಜ್ಞಾಪಕಕ್ಕೆ ಮೂಡಿಬಂತು. ಪಯಣದ ದಾರಿಯಲ್ಲಿ ಪರಿಚಯವಾದ ಅಪರೂಪದ ವ್ಯಕ್ತಿಯ ಜೀವನಾನುಭಗಳು, ಅದರಿಂದ ನಮ್ಮಲ್ಲಿ ಉಂಟಾಗುವ ಅನ್ವೇಷಣೆ ಮತ್ತು ಆತ್ಮಾವಲೋಕನದ ಭಾವ ಒಂದೇ. ಕಥೆಯ ಗತಿ ಕೊಂಚ ನಿಧಾನ. ಆದರೆ ಅಲ್ಲಲ್ಲಿ ಹೇರಳವಾಗಿ ಬಳಕೆಯಾಗಿರುವ ಉಪಮೆಗಳು ನಮ್ಮನ್ನು ವಿಚಾರಲೋಕಕ್ಕೆ ದೂಡುತ್ತವೆ.

ಹಾಗೊಂದು ಗಮನ ಸೆಳೆದ ಉಪಮೆ, "ಹಾಲು, ನೀರು, ಮಜ್ಜಿಗೆ, ಮಡಿಕೆ ಮತ್ತು ತಾಮ್ರದ ಪಾತ್ರೆಗಳ" ಸಂಯೋಜನೆಗಳಿಂದ ವರ್ಣಿಸಲ್ಪಟ್ಟ ವಿವಿಧ ತೆರನ ಮಾನವ ಸಂಸಾರ ಜೀವನ.
Profile Image for இரா  ஏழுமலை .
140 reviews8 followers
January 18, 2026
பயணங்களில் சந்திக்கும் ஒரு நபர் நெருங்கிய நண்பராகி விடுகிறார். அவர் இறந்த பின், அவரது டைரியை அடிப்படையாக வைத்து அவரது முழு வாழ்க்கையையும் பின்தொடர்ந்து சென்று, அவரின் வாழ்வை எடை போடும் ஒரு நாவல். பெரிதாக ஈர்க்கவில்லை; ஆனால் மனிதன் வாழ்வு, பிறப்பு–இறப்பு, நன்மை–தீமைகள், வாழ்வின் அர்த்தமின்மை பற்றி கேள்வி எழுப்பும் நாவல்.
Profile Image for Mahesh.
89 reviews
January 23, 2016
"ಅಳಿದ ಮೇಲೆ" ಶ್ರೀ ಶಿವರಾಮ ಕಾರಂತರ ಇನ್ನೊಂದು ಚೆಂದದ ಕಾದಂಬರಿ. ಕಥೆಯ ಎಳೆ ಬಹಳ ಕಡಿಮೆ ಆದರೆ ಅದನ್ನು ಪರಿಚಯಿಸುವ ಬಗೆ, ಕಥೆಯ ಎಳೆಯನ್ನು ಹೆಣೆಯುವ ಕಲೆ, ಕಾರಂತರನ್ನು ' ಖಾರಂತರು' ಎಂದು ಸಂಭೋದಿಸಿದನ್ನು ನಾನು ಹೀಗೆ ಕೇಳಿ ತಿಳಿದು ಅವರು ತುಂಬಾ ಗಂಭೀರ ಸ್ವಭಾವದ ಲೇಖಕ ಎಂದು ತಿಳಿದಿದ್ದೆ, ಆದರೆ ಅವರ ಕೃತಿಗಳನ್ನು ಓದಿದಾಗ ಅವರ ಕೃತಿಗಳಲ್ಲಿ ಹಲವು ಪ್ರಸಂಗಗಳನ್ನು ಓದುವಾಗ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಕಲೆ ಬೆರಗುಗೊಳಿಸುತ್ತವೆ.
ಅವರ ಭಾವಚಿತ್ರ ಕಂಡಾಗ ಇವರು ಬಹಳ ಮೌನಿ, ಜನ ಸಂಪರ್ಕ ಬಹಳ ಕಡಿಮೆ ಅನ್ನಿಸುತ್ತೆ ಆದರೆ ಅವರ ಕೃತಿ ಓದಿದಾಗ ಅವರಿಗೆ ಜನ ಸಂಪರ್ಕ ವ್ಯಾಪಕ ಹಾಗೂ ಅವರ ಸುತ್ತಾಟ ನೋಡಿಯೇ ಅವರಿಗೆ " ಕಡಲತೀರದ ಭಾರ್ಗವ " ಎನ್ನುವ ಬಿರುದು ಬಹಳ ಒಪ್ಪುವಂತದ್ದು.

ಈ ಕಾದಂಬರಿ ಓದುವಂತೆ ಸಲಹೆ ನೀಡಿದ ಗೆಳೆಯ ಪ್ರಕಾಶಕ, 'ಅರವಿಂದ್ ಇಂಡಿಯಾ ಬುಕ್ಸ್' ನ ಸಚಿನ್ ಗೆ ಧನ್ಯವಾದಗಳು.
Profile Image for Shreeshail Magadum.
11 reviews8 followers
February 28, 2020
ಇದೊಂದು ಕಾದಂಬರಿ ಓದಿದ ಮೇಲೆ ಇಷ್ಟು ದಿನ ಯಾಕೆ ಓದಲಿಲ್ಲ ಅನ್ನುವ ಕೊರಗು ಕಾಡಿತು. ಶಿವರಾಮ ಕಾರಂತರ ಜೀವನದ ದಟ್ಟ ಅನುವದಿಂದ ಕಟ್ಟಿಕೊಟ್ಟ ಕಾದಂಬರಿ ಅಳಿದಮೇಲೆ. ಒಬ್ಬ ವ್ಯಕ್ತಿಯ ಸಾವಿನ ನಂತರ ಅವನ ಜೀವನವನ್ನು ಮೆಲುಕು ಹಾಕುವ ಕಥಾವಸ್ತು.
ಮೊದಲಿಗೆ ಕಥಾನಾಯಕ ಯಶವಂತನ ಜೀವನವನ್ನು ಅಳೆದು ತೂಗಿ ಲೆಕ್ಕ ಹಾಕಲು ಹೊರಟಿರುವ ನಿರೂಪಕ ಆ ಪಾತ್ರದೊಂದಿಗೆ ಹಬ್ಬಿರುವ ವ್ಯಕ್ತಿಗಳು ಹಾಗೂ ಘಟನೆಗಳು ಮೆಲುಕು ಹಾಕಿ ಯವಂತನ ಘನ ವ್ಯಕ್ತಿತ್ವವನ್ನು ಪರಿಚಯ ಮಾಡಿಕೊಡುತ್ತಾರೆ. ಎಲ್ಲ ಘಟನೆಗಳ ಪೋಣಿಸುವಿಕೆಯ ಕುಸುರಿ, ನಿರೂಪಣೆ ಶೈಲಿ ಹಾಗೂ ಲೇಖಕನೆ ನಿರೂಪಕನಾಗಿ ಒಳಗೊಳ್ಳುವಿಕೆ ತುಂಬಾ ಚನ್ನಾಗಿ ಮೂಡಿ ಬಂದಿದೆ.
3 reviews
March 6, 2018
I don't think any other writer in Kannada could explain the human nature and behaviour as Shivaram Karanth does. The good heart of poor people and the bad of the rich ones are very true even at this time. Only regret after reading this book is wish I had read it earlier. I would recommend this book to everyone.
Profile Image for Rashmi  Rao.
16 reviews1 follower
March 16, 2019
Amazing piece of work by legendary Karanth. Characters are well etched and are relatable yet strange. It's worth a second read. The author surprised me with his foresight as this book was written way back in 80's. I couldn't read anything else after this piece. The plot is haunting.
Profile Image for Sangeetha.
62 reviews22 followers
December 18, 2017
Good one but not so great.

ಒಂಥರ ಸಾಮಾನ್ಯ ಮಧ್ಯ��ಹ್ನದ ಮನೆ ಊಟದ ಥರ.
ನಾಲಿಗೆ ಚಪ್ಪರಿಸುವಂತೆ ಇಲ್ಲದಿದ್ದರೂ ಮನಸಿಗೆ ಹಿತ
3 reviews
March 13, 2019
Yashwantha rayaru ,parvathamma, manjayyanavar kutumbha mathe mathe nenapaguthare
Profile Image for Santhosh L.
2 reviews3 followers
December 17, 2019
A decent one,shows the perspective of different people when a person's death happens.
1 review
April 1, 2020
ಅಳಿದ ಮೇಲೆ ಉಳಿದ ಯಶವಂತರಾಯರ ಚಿತ್ರಣ. ನಾನು ಹುಬ್ಬಳ್ಳಿಯಲ್ಲಿ 1964-65 ರಲ್ಲಿ ಓದುತ್ತಿದ್ದಾಗ ಪಿ.ಯು.ಸಿ ಗೆ ಇದ್ದ ಪುಸ್ತುಕವಾಗಿದ್ದು ಅಂದಿನಿಂದಲೂ ಕಾರಾಂತರು ಚಿತ್ರಿಸಿದ ಯಶವಂತರಾಯರ ಚಿತ್ರ ಚಿತ್ತದಿಂದ ಮರೆಯಾಗಿಲ್ಲ.
This entire review has been hidden because of spoilers.
Profile Image for Sushma Moodbidri.
12 reviews7 followers
April 4, 2023
ಪುಸ್ತಕ          : ಅಳಿದ ಮೇಲೆ

ಲೇಖಕರು       : ಡಾ|| ಕೆ. ಶಿವರಾಮ ಕಾರಂತ

ಮುಂಬೈಯಲ್ಲಿ ನಿಗೂಢವಾಗಿ ಒಬ್ಬನೇ ಬದುಕುತ್ತಿದ್ದ ಯಶವಂತರಾಯರು, ಯಾರಿಲ್ಲೂ ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡವರಲ್ಲ. ತಮ್ಮಷ್ಟಕ್ಕೇ ತಾವಿರುವವರು, ಮನೆಕೆಲಸಕ್ಕೆ ಅಂತ ಇರುವ ‘ದಾದ’ನ ಮೇಲೆ ವಿಶೇಷ ಮಮತೆ ಇರುವರು. ದಾದ ಅದೆಷ್ಟೇ ಮೋಸಗಳನ್ನು ಮಾಡಿದರೂ, ಏನೂ ನಡೆದೇ ಇಲ್ಲವೆನ್ನುವಂತೆ ವೈರಾಗ್ಯ ಹೊತ್ತು ಕೂತ ಯಶವಂತರಾಯರ ಬಗ್ಗೆ ಪುಸ್ತಕದ ನಿರೂಪಕ ಕಾರಂತರಿಗೆ ಒಂದು ಸಣ್ಣ ಕುತೂಹಲ.

ಇಂತಹ ಯಶಮಂತರಾಯರು ಮರಣ ಹೊಂದಿದ ಮೇಲೆ, ಕಾರಂತರಿಗೆ ಅವರ ಜೀವನದ ಎಳೆಗಳು ಬಿಚ್ಚುತ್ತಾ ಹೋಗುತ್ತದೆ. ಏನೂ ಇಲ್ಲವೇನೋ ಎಂಬಂದಿತ್ತ ಮನುಷ್ಯನ ಜೀವನದಲ್ಲಿ ಏನೇನೆಲ್ಲಾ ನಡೆದಿದೆ! ಇಲ್ಲಿ ನಮಗೆ ಎಲ್ಲೂ ಯಶವಂತರಾಯರು ನೇರವಾಗಿ ಮುಖಮುಖಾಯಾಗೋದಿಲ್ಲ. ಆದರೆ ಅವರ ಜೀವನದಲ್ಲಿ ಬಂದು ಹೋದ ಇತರರ ಮೂಲಕ, ಪರಿಚಯವಾಗುತ್ತಾ ಹೋಗುತ್ತಾರೆ.

‘ಅಳಿದ ಮೇಲೆ’ ಉಳಿದದ್ದೇನು ಅನ್ನುವ ಪ್ರಶ್ನೆಗೆ ಈ ಕಾದಂಬರಿ ಸೂಕ್ತವಾಗಿ ಉತ್ತರಿಸುತ್ತೆ. ಮನುಷ್ಯನ ಜೀವನ ಸರಿ ತಪ್ಪುಗಳನ್ನು ಮೀರಿ, ಮತ್ತೇನೋ ಇದೆ.. ಇಲ್ಲಿ ನಾವ್ಯಾರೂ ನಿರ್ಣಾಯಕರಾಗಲು ಸಾದ್ಯವಿಲ್ಲ ಅನ್ನೋದನ್ನು ಸಾಬೀತು ಮಾಡುತ್ತೆ.

ಕಾಡಿದ ಕೆಲವು ಸಾಲುಗಳು :

·       ಎಷ್ಟೇ ಗಟ್ಟಿ ಮನುಷ್ಯನೇ ಇರಲಿ, ಹೊಗಳಿಕೆ ಕಿವಿಗೊಟ್ಟನೆಂದರೆ ಬಲೆಗೆ ಬೀಳುತ್ತಾನೆ.

·       ಉಣ್ಣಿ ಇದ್ದಷ್ಟು ದಿನ ಸ್ನೇಹವಿದೆ, ಅದಿಲ್ಲದೇ ಹೋದರೆ ಬರಿಯ ಗಾಯ

·       ಹಿರಿಯರ ಶಾಪ ಬಿಡಬೇಕಲ್ಲ. ಬಿದಿರಿನ ಬೇರಿನಷ್ಟೇ ಅದರ ಬೇರೂ ಬಲ.

·       ಈ ಮುದುಕಿ ಹಾಗಲ್ಲ – ಇದು ಹಡೆದು ಗೊತ್ತಿಲ್ಲದ ಹೆಣ್ಣಾದಾರೂ, ಹಡೆಯುವುದಕ್ಕಾಗಿ ಹುಟ್ಟಿದ ಹೆಣ್ಣು. ತನ್ನ ಕೂಸಿಲ್ಲದಾಗ, ತಮ್ಮ ಬಳಗದ ಇನ್ನೊಂದು ಕೂಸನ್ನು ತನ್ನದೇ ಎಂಬ ಮೋಹದಿಂದ, ತಾನೇ ಸಾಕಿ ಬೆಳೆಯಿಸುವಷ್ಟು ಮಮತೆ ಇದ್ದವಳು; ಅನುಕಂಪವಿದ್ದವಳು. ಅಂತ ತಾದಾತ್ಮ್ಯ ಪಡೆದಂತೆ ಕಾಣುತ್ತದೆ. ಯಶವಂತ ಮರೆಯಾದರೂ ಅವಳ ಪಾರ್ವತಿ ಇನ್ನೂ ಬದುಕಿದ್ದಾಳೆ. ಹಿರಿಯರ ಶಾಪದ ದಳ್ಳುರಿಯ ದೂರದ ದಂಡೆಯಲ್ಲಿ ನಿಂತಿದ್ದಾಳೆ.

·       ಕೊಡುವುದು ಏನಿದ್ದರೂ ಯಾವಾಗಲೂ ಇದ್ದವರಿಗೇ; ಇಲ್ಲದವರಿಗೆ ಯಾರಾದರೂ ಕೊಡುತ್ತಾರೆಯೇ?
Profile Image for Vidya Ramakrishna.
267 reviews18 followers
July 24, 2022
ಪ್ರಯಾಣದ ವೇಳೆಯಲ್ಲಿ ಭೇಟಿಯಾಗಿ ಹತ್ತಿರದವರಾದ ಒಬ್ಬ ಸ್ನೇಹಿತರು ಅಳಿದ ಮೇಲೆ ಅವರ ಹಿನ್ನೆಲೆ, ಸಂಬಂಧಗಳನ್ನು ಹುಡುಕುತ್ತಾ ಹೋದ ಲೇಖಕರಿಗೆ ಆದ ಅನುಭವದ ಹಿನ್ನಲೆಯಲ್ಲಿ ಮಾನವನ ಗುಣಾವಗುಣಗಳ ಅವಲೋಕನ ಮಾಡುವ ಕಥಾವಸ್ತು. ಸುಮಾರು 60 ವರ್ಷಗಳಿಗೂ ಹಿಂದೆ ಪ್ರಕಾಶನ ಕಂಡ ಪುಸ್ತಕ, ಮನುಷ್ಯರ ಗುಣಸ್ವಭಾವ, ಧರ್ಮಗಳ ನೆಲೆಯಿಂದ ಎಂದಿಗೂ ಸಲ್ಲುವ ಸಾರ್ವಕಾಲಿಕ ಸತ್ಯ. ಕಾರಂತರ ಸುಲಭವಾಗಿ ಓದಿಸಿಕೊಂಡು ಹೋಗುವ ಆಡಂಬರವಿಲ್ಲದ ಶೈಲಿ, ಹಗುರ ಹಾಸ್ಯ ಲೇಪನದೊಂದಿಗೆ ಬಹಳ ವಾಸ್ತವಿಕವಾಗಿ ಕಥೆ ಹೆಣೆದ ರೀತಿ, ಸ್ಥಳ, ವಸ್ತುಗಳ ಪರಿಚಯ ಕೊಡುವ ರೀತಿ ನನಗೆ ಯಾವಾಗಲೂ ಮೆಚ್ಚು.

ಕತೆಯ ಮುಖ್ಯ ಪಾತ್ರವಾದ ಯಶವಂತರ ಮಾರ್ಮಿಕ ವ್ಯಕ್ತಿತ್ವದ ಜೊತೆಗೆ ಪಾರ್ವತಮ್ಮ, ಮಂಜಯ್ಯ, ಜಲಜ, ಸಭಾಹಿತರು, ಇಂದುಮತಿಯರ ವ್ಯಕ್ತಿತ್ವಗಳು ಬಹಳ ಹಿಡಿಸಿದವು. ಜೊತೆಗೆ ಆ ಕಾಲದ ಕರಾವಳಿಯ ಜನರ ಆಡಂಬರವಿಲ್ಲದ ಸರಳ ಜೀವನ ಶೈಲಿ, ವಿಶ್ವಾಸಪೂರ್ವಕ ಆತಿಥ್ಯ, ಹಿರಿಯ ಜೀವಗಳ ತುಂಬಿದ ಕೊಡದಂತ ಬದುಕು, ಅವರ ಅನುಭವಗಳ ವಿಶಾಲತೆ ಎಲ್ಲಾ ಓದಲು ಬಹಳ ಹಿತವಾಯಿತು.
Profile Image for Rajesh Arumugam.
144 reviews3 followers
October 4, 2022
தாம் உலகத்தினிடமிருந்து, சமுதாயத்தினிடமிருந்து பெற்றதைவிடக் குறைவாகத் திருப்பித்தரக்கூடாது, மிகுதியாகத் தர முற்பட வேண்டும் என்று வாழ்ந்த ஒரு மனிதரின் கதை. மகத்தான கதாபாத்திரங்கள், காட்சிகள், உரையாடல்கள். எழுத்தாளர் எஸ்.ராமகிருஷ்ணநுக்கு நன்றி. அவருடைய தூத்துக்குடி சலூன் நிகழ்ச்சி உரையை கேட்டப்பின்பு இதனை வாசித்தேன். இல்லை என்றால் வாசித்து இருக்க மாட்டேன்.
Profile Image for Ashwin.
51 reviews3 followers
September 21, 2021
When I started reading this, going by its title I thought this might be philosophical. It was not. There is a practical story Mr. Karantha has created around the death of his friend Yashavanta.
Nice book. I want to read this again.
Profile Image for Ruthvik Kadsur.
29 reviews
August 26, 2025
ಅಳಿದಮೇಲೆ - ಹೆಚ್ಚಾಗಿ,ಉತ್ತರಕನ್ನಡ ಜಿಲ್ಲೆಯಲ್ಲಿ ನಡೆಯುವ ಈ ಕಥೆಯು, ಲೇಖಕರ ಸ್ನೇಹಿತನ ನಿಧನ ಮತ್ತು ಸಂಬಂಧಗಳಲ್ಲಿ ಆಸ್ತಿ ಮತ್ತು ಅಂತಸ್ತು ಹೇಗೆ ಕೊಳಕು ಪಾತ್ರವನ್ನು ವಹಿಸುತ್ತದೆ ಎಂಬುದರ ಮೇಲೆ ಕೇಂದ್ರೀಕರಿಸುತ್ತದೆ. ಮನುಷ್ಯನ ಒಳ್ಳೆಯತನ ಮತ್ತು ಕೆಟ್ಟತನಗಳನ್ನು ಬಿಚ್ಚಿಡುವ ಅಪರಿಚಿತ ಸತ್ಯಗಳು ಹೊರಹೊಮ್ಮುತ್ತವೆ.
Profile Image for Venkatagiri.
23 reviews
December 1, 2021
ಡಾ ಶಿವರಾಮ ಕಾರಂತರ ಮತ್ತೊಂದು ಮೇರುಕೃತಿ !
Displaying 1 - 30 of 31 reviews

Can't find what you're looking for?

Get help and learn more about the design.