Jump to ratings and reviews
Rate this book

ಸಮೀಕ್ಷೆ | Sameekshe

Rate this book

Paperback

1 person is currently reading
36 people want to read

About the author

Kota Shivarama Karanth

94 books451 followers
Kota Shivaram Karanth was a Kannada writer, social activist, environmentalist, Yakshagana artist, film maker and thinker. He was described as the "Rabindranath Tagore of Modern India who has been one of the finest novelists-activists since independence"by Ramachandra Guha. He was the third person among eight recipients of Jnanpith Award for Kannada the highest literary honour conferred by the Govt. of India.

Shivaram Karanth was born on 10 October 1902, in Kota near Udupi in the Udupi district of Karnataka to a Kannada family.He was influenced by Gandhi's principles and took part in Indian Independence movement while he was in college. He did not complete his education and went to participate in the Non-cooperation movement and canvassed for khadi and swadeshi for five years up to 1927. By that time Karanth had already started writing fiction-detective novels, to begin with as well as plays.

Karanth was an intellectual and environmentalist who tremendously contributed to art and culture of Karnataka. He is considered one of the greatest novelist in Kannada. Apart from his 47 novels, he also wrote 31 plays, four short stories, six books of essays and sketches, thirteen books on art, 2 volumes of poems, 9 encyclopedias, and 100+ of articles on various issues and subjects, including a history of world art in Kannada and a work on Chalukyan sculpture and architecture, a standard treatise on the Yakshagana (with which dramatic form, his name is identified), a three volume book of knowledge for children, a four volume encyclopedia on science for grown ups, 240 children's books, six books on travel, two books on birds, three Travelogues, an autobiography.

He has received several literary awards,.Namely, Jnanpith Award, Padma Bhushan, Sahitya Academy award and Pampa Award.

He passed away on 9th December 1997 in Manipal, Karnataka.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
10 (58%)
4 stars
7 (41%)
3 stars
0 (0%)
2 stars
0 (0%)
1 star
0 (0%)
Displaying 1 - 3 of 3 reviews
Profile Image for Karthikeya Bhat.
110 reviews13 followers
September 15, 2022
ಸಮೀಕ್ಷೆ:
ಡಾ॥ ಕೆ. ಶಿವರಾಮ ಕಾರಂತ

ಹಂಗಲೂರು, ಬ್ರಹ್ಮಾವರ, ನುಗ್ಗೇಹಳ್ಳಿಯ ಸುತ್ತಮುತ್ತಲಲ್ಲಿ ನಡೆಯುವ ಕಥೆ ಸಮೀಕ್ಷೆ. ಹಂಗಲೂರಿಗೆ ಬಂದ ಶ್ರೀನಿವಾಸನಿಗೆ (ಶೀನ) ಸಂತೋಷವೂ ಇಲ್ಲ, ದುಃಖವೂ ಇಲ್ಲ, ಅದೊಂದರಲ್ಲಿಯೇ ಅಲ್ಲ, ಎಲ್ಲದರಲ್ಲೂ ಹಾಗೆಯೇ. ಬ್ರಹ್ಮಾವರದಿಂದ ಹಂಗಲೂರಿಗೆ ಬಂದು ನೆಲಸಿದ ಶ್ರೀನಿವಾಸನು ತನ್ನ ಬಾಳಿನ ಸಮೀಕ್ಷೆಯನ್ನು ನೆನೆಯುತ್ತಾ ಹೋಗುತ್ತಾನೆ. ಶಾರದೆಯನ್ನು ಮದುವೆಯಾದ ಪ್ರಸಂಗ, ತನ್ನ ಜೀವನದಲ್ಲಿ ತನ್ನ ಸ್ನೇಹಿತ ವಾಸುವಿನ ಮಗಳಾದ ಸುವಾಸಿನಿಯ ಪಾತ್ರ, ಅನಿರೀಕ್ಷಿತವಾಗಿ ತನ್ನ ಕೆಲವು ಬಾಲ್ಯ ಸ್ನೇಹಿತರ ಭೇಟಿಯಾದಾಗ ತನ್ನಲ್ಲುಂಟಾದ ಬದಲಾವಣೆಗಳು ಹಾಗು ಅವರಿಂದ ಕಲಿತ ಕೆಲವು ಜೀವನಾಂಶಗಳು, ಇನ್ನೂ ಹಲವು.

ಬ್ರಹ್ಮಾವರದಲ್ಲಿ ಶಿಕ್ಷಣ ಮುಗಿಸಿ ಅಲ್ಲೇ ಶಾಲೆಯ ಉಪಾಧ್ಯಾಯನಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ, ಬ್ರಹ್ಮ ಚರ್ಯೆಯನ್ನು ಪಾಲಿಸಬೇಕೆಂಬುದು ಆತನ ಮನೋಭಿಲಾಷೆ, ಆದರೆ ಅದನ್ನು ತುಂಡು ಮಾಡಿದುದು ತನ್ನ ಬಾಲ್ಯ ಸ್ನೇಹಿತ ರಾಮಚಂದ್ರ, ರಾಮಚಂದ್ರ ಸನ್ನಿಪಾತವಾಗಿ ಹಾಸಿಗೆ ಹಿಡಿದಾಗ ಅವನ ಶುಶ್ರೂಶೆಯಲ್ಲಿ ಶೀನನು ತೊಡಗುತ್ತಾನೆ, ಇದರಿಂದ ಶೀನನು ಭವ್ಯ ವ್ಯಕ್ತಿಯಾಗಿ ಕಾಣಿಸುತ್ತಾನೆ. ತನ್ನ ತಂಗಿ ಶಾರದೆಯನ್ನು ಕೊಟ್ಚು ಮದುವೆ ಮಾಡಲು ನಿಶ್ಚಯಿಸಿ ಶೀನನಲ್ಲಿ ಕೇಳಿಕೊಂಡಾಗ ಶಾರದೆಯನ್ನು ವಿವಾಹವಾಗಲು ಒಪ್ಪಿಕೊಳ್ಳುತ್ತಾನೆ, ಕಾರಣ ವಿವಾಹದಿಂದ ಗೆಳೆಯನಿಗೆ ಸೌಖ್ಯವಾಗಲೆಂದು, ಆ ಚಿಕ್ಕ ಆಪೇಕ್ಷೆಯಿಂದ ತನ್ನ ಗೆಳೆಯನನ್ನು ಉಳಿಸುವುದು ತನ್ನ ಕರ್ತವ್ಯವೆಂದು ಮದುವೆಯಾಗುತ್ತಾನೆ, ರಾಮಚಂದ್ರ ಬದುಕುಳಿಯುತ್ತಾನೆ, ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡ ರಾಮಚಂದ್ರ, ಶಾರದೆಯನ್ನು ಸಾಕಿ ಸಲುಹಿದ್ದೇ ಅವರ ಅತ್ತೆ ಗಂಗಮ್ಮ. ಸನ್ನಿಪಾತದಿಂದ ರಾಮಚಂದ್ರ ಚೇತರಿಸಿಕೊಳ್ಳುತ್ತಿರುವಾಗ ಗಂಗಮ್ಮ ಆತನೊಬ್ಬನಿಂದ ಆಸ್ತಿ ಪಾಸ್ತಿ ನೋಡಿಕೊಳ್ಳುವುದಕ್ಕೆ ಕಷ್ಟವಾದೀತೆಂದು ಆಕೆಯ ತಮ್ಮನಾದ ವೆಂಕಟರಮಣನು ಮನೆಯಲ್ಲಿದ್ದು ನೆರವಾಗುತ್ತಾನೆಂದು ಕೇಳಿಕೊಂಡಾಗ ಒಪ್ಪಿಕೊಳ್ಳುತ್ತಾನೆ. ಆದರೆ ವೆಂಕಟರಮಣನು ಆಸ್ತಿ ಹೊಡೆಯಲು ಹೊಂಚುಹಾಕಿ ರಾಮಚಂದ್ರನಿಗೆ ಮದ್ದು ಮಾಡಿಸಿದ ಪರಿಣಾಮ ಆತನು ಯಾರನ್ನೂ ಗುರುತಿಸಲಾಗುವಷ್ಟು ಬುದ್ಧಿ ಕಳೆದುಕೊಂಡಾಗ ಗಂಗಮ್ಮನ ಮನಸ್ಸಿಗೆ ಸಂಕಟವಾಗುತ್ತದೆ, ಆ ಮನೆಯಲ್ಲಿ ಕೆಲಸ ಮಾಡುವ ಸೂರ ಇನ್ನಿತರ ಕೆಲಸಗಾರರ ಸಹಾಯದಿಂದ ಹಾಗು ಶೀನನ ನೆರವಿನಿಂದ ವೆಂಕಟರಮಣನನ್ನು ಹಂಗಲೂರನ್ನು ಬಿಡುವಹಾಗೆ ಮಾಡುತ್ತಾರೆ.

ಶ್ರೀಮಂತಿಕೆಯಲ್ಲಿ ಬೆಳೆದ ಶಾರದೆ ಮದುವೆಯಾಗಿ ಬ್ರಹ್ಮಾವರಕ್ಕೆ ಬಂದಾಗ ಹಾಡಿ ಮನೆಯನ್ನು ನೋಡಿ ಆಶ್ಚರ್ಯವಾಗುತ್ತದೆ, ಹಾಡಿ ಎಂದರೆ ಒಂದರ್ಥ ಕುರುಚಲು ಕಾಡು. ವಿಶಾಲವಾದ ಮನೆಯಲ್ಲಿ ಬೆಳೆದ ಆಕೆಗೆ ಈ ಇಕ್ಕಟ್ಟಿನ ಮನೆಯಲ್ಲಿ ಜೀವನ ಸಾಗಿಸಲು ಕಷ್ಟವಾಗುತ್ತದೆ, ಅದೇ ಸಮಯದಲ್ಲಿ ಶೀನನು ವಯಸ್ಸಾದ ತಂದೆ ತಾಯಿಯರನ್ನು ನೋಡಿಕೊಳ್ಳಲು ಹಾಗು ತನ್ನ ತಮ್ಮಂದಿರ ವಿದ್ಯಾಭ್ಯಾಸಕ್ಕಾಗಿ ತನ್ನ ಕೆಲಸವನ್ನು ಬಿಟ್ಟು ವ್ಯವಸಾಯದಲ್ಲಿ ತೊಡಗುತ್ತಾನೆ ಕಾರಣ ಅವರಿಗೆ ಆರ್ಥಿಕವಾಗಿ ಹೆಚ್ಚು ಸಹಾಯಮಾಡಲು, ಈ ಹುಚ್ಚುತನಕ್ಕೆ ಶಾರದೆಗೆ ಬೇಸರವಾಗುತ್ತದೆ, ಅಂತೂ ಸಂಸಾರ ನಡೆಸಬೇಕಲ್ಲ ಶೀನನ ಜೊತೆ ಮನಸ್ಸಿಲ್ಲದೆ, ಆತನ ಆದರ್ಶಗಳಿಗೆ ವಿರುದ್ಧವಾಗಿಯೇ ಜೀವನ ಸಾಗಿಸುತ್ತಾಳೆ. ಹೆಂಡತಿಯ ಮೈಬಯಕೆ, ಮನದ ಬಯಕೆಗಳು ಶೀನನ ಪಾಲಿಗೆ ಪ್ರಶ್ನೆಗಳಾಗಿಯೇ ಉಳಿಯಿತು. ರಾಮೇಶ್ವರಕ್ಕೆ ಹೋದರೆ ರಾಮಚಂದ್ರ ಗುಣವಾಗಬಹುದೆಂದು ಗಂಗಮ್ಮನ ಆಸೆ , ನಂಬಿಕೆಯಿಲ್ಲದಿದ್ದರೂ ಶೀನನ ಹಾಗು ಶಾರದೆಯ ಕೋರಿಕೆಯಂತೆ ರಾಮಚಂದ್ರನನ್ನು ರಾಮೇಶ್ವರ ದರ್ಶನ ಮಾಡಿಸುತ್ತಾನೆ, ಅಲ್ಲಿ ದೇವರ ದರ್ಶನದಿಂದಲೋ, ಸೇತು ಬಾವಿಯಲ್ಲಿ ಸ್ನಾನ ಮಾಡಿದರಿಂದಲೋ ರಾಮಚಂದ್ರ ಗುಣವಾಗುತ್ತಾನೆ, ಅವನ ಬದುಕು ತಿರುಗಿ ಸುಗಮವೂ, ಸಹನೀಯವೂ ಆದದ್ದನ್ನು ಕಂಡು ತನ್ನ ಬಾಳಿನ ಸಮೀಕ್ಷೆಯಲ್ಲಿ ರಾಮಚಂದ್ರನಿಗೆ ನೆರವಾದ ಪ್ರಸಂಗಗಳನ್ನು ನೆನೆಯುತ್ತಾನೆ.

ರಾಮಚಂದ್ರನು ಶೀನನಿಗೆ ನುಗ್ಗೆೇಹಳ್ಳಿಯಲ್ಲಿ ಜಮೀನನ್ನು ಕೊಟ್ಟಾಗ ಅವನ ಒತ್ತಾಯಕ್ಕೆ ಹೂ ಅನ್ನಬೇಕಾಯಿತು, ಏನೋ ಜಮೀನಿನ ವಿಚಾರದಲ್ಲಿ ಸಾಹುಕಾರ ನರಸಿಂಹಯ್ಯನವರನ್ನು ಕಾಣಲು ಹೋದಾಗ ಆಶ್ಚರ್ಯವಾಗುತ್ತದೆ ಆತನು ತನ್ನ ಬಾಲ್ಯ ಸ್ನೇಹಿತ ನರಸಿಂನೆಂದು, ಸಹಾಯಕ್ಕೆ ನರಸಿಂಹ ನೆರವಾಗದಿದ್ದಾಗ ಆತನು ಒಮ್ಮೆ ಅನಾರೋಗ್ಯಗಿಂದ ಹಾಸಿಗೆ ಹಿಡಿದಾಗ ತಾನು ಸೇವೆ ಮಾಡಿದ್ದು ಮರೆತಿದ್ದನ್ನು ನೆನೆದು ಮರಗುತ್ತಾನೆ, ನರಸಿಂಹ ತನ್ನ ಚಿಕ್ಕಪ್ಪನ ಮಗ ಮಾಧವಯ್ಯನ ಆಸ್ತಿಯನ್ನು ಕಬಳಿಸಿ ಅಹಂಕಾರದಿಂದ ಮೆರೆಯುತ್ತಿರುತ್ತಾನೆ, ಮಾಧವಯ್ಯ ಶೀನನ ಸಹಾಯದಿಂದ ಕೋರ್ಟಿಗೆ ಅರ್ಜಿ ಸಲ್ಲಿಸಿ ನರಸಿಂಹನಿಗೆ ತನ್ನ ಎಲ್ಲಾ ಆಸ್ತಿಯನ್ನು ಕೊಡಬೇಕಾದಲ್ಲಿ ಶೀನನನ್ನು ಸಂದರ್ಶಿಸಿ ಸಂಧಾನ ಮಾಡಿಸಿ ಅವರವರ ಪಾಲನ್ನು ಹಂಚಿಕೊಂಡು ಶೀನನಲ್ಲಿ ನರಸಿಂಹನು ಕ್ಷಮೆ ಕೋರುತ್ತಾನೆ. ಮಕ್ಕಳಾಗದೆ ಶಾರದೆ ಎಷ್ಟೋ ದೇವರಿಗೆ ಹರಿಕೆ ಹೊತ್ತಳು ಫಲಕಾರಿಯಾಗಲಿಲ್ಲ,ಅಕ್ಕಲಕೋಟೆಯಲ್ಲಿ ಬುವಾಜಿ ಸ್ವಾಮಿಜಿಯ ದರ್ಶನ ಪಡೆಯಲು ಶೀನನಿಗೆ ಕೇಳಿಕೊಂಡಾಗ ಅದರಲ್ಲಿ ನಂಬಿಕೆ ಇಲ್ಲದಿದ್ದರೂ ಒಪ್ಪಿಕೊಂಡ, ಅಲ್ಲಿ ಹೋಗಿ ನೋಡಿದರೆ ಆ ಸ್ವಾಮೀಜಿ ಯಾರು ಅಲ್ಲ ಆತನ ಮಿತ್ರ ಭೋಜನು, ಇದರಿಂದ ಹೆಂಡತಿಗೆ ಅವನ ವಿಷಯ ತಿಳಿಸಿ ಇಂತಹ ಮೂಢನಂಬಿಕೆಗಳಿಂದ ದೂರವಿರಲು ಹೇಳಿ, ಭೋಜನ ನಿಜರೂಪವನ್ನು ಯಾರಿಗೂ ತಿಳಿಸದೆ, ಆತನ ಜೀವನ ಸಾಗಿಸಲು ತಾನೇಕೆ ಆತನನ್ನು ಕಳ್ಳ ಸ್ವಾಮಿಯೆಂದು ಲೋಕಕ್ಕೆ ತೋರಿಸಿ ಆತನಿಗೂ ಜನರಿಗೂ ದುಃಖಪಡಿಸಬೇಕೆಂದು ಸುಮ್ಮನಾದನು.

ತನ್ನ ಆಪ್ತಮಿತ್ರ ವಾಸುದೇವನ ಪತ್ತೆಯಾದಾಗ ಅವನು ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿ ಸೆರೆಮನೆ ಕಂಡು ಹುಚ್ಚನಾಗಿದ್ದನ್ನು ಹಾಗು ತನ್ನ ಪತ್ನಿ ಹಾಗು ಮಗಳು ಸುವಾಸಿನಿಯನ್ನು ತಿರಸ್ಕರಿಸಿದಾಗ ಅನ್ಯಜಾತಿಯವರಾದರೇನು ತನಗೆ ಮಕ್ಕಳಿಲ್ಲವೆಂದು ತಾನು ಹಾಗು ಶಾರದೆಯೇ ಸುವಾಸಿನಿಯನ್ನು ಸಾಕಿ ಸಲುಹಿ, ನಂತರ ಆಕೆಗೆ ಒಳ್ಳೆ ಸಂಬಂಧ ಹುಡುಕಿ ವಿವಾಹಮಾಡುತ್ತಾನೆ, ರಾಮಚಂದ್ರ ಅನಾರೋಗ್ಯದಿಂದ ತೀರಿಹೋಗುತ್ತಾನೆ, ಶಾರದೆ ಗರ್ಭವತಿ ಯಾಗುತ್ತಾಳೆ, ನಂತರ ಗಂಡು ಮಗುವಿನ ಜನನ, ಸುವಾಸಿನಿಗೆ ಹೆಣ್ಣು ಮಗು, ಅತ್ತ ಆ ಇಬ್ಬರು ಮಕ್ಕಳಿಗೆ ತಂದೆಯೂ ಆಗಿ ಅಜ್ದನೂ ಆಗಿ ತನ್ನ ಬಾಳನ್ನು ಸಾಗಿಸುತ್ತಾನೆ, ಅತ್ತ ವಾಸುದೇವನೂ ದೂರಹೋಗಿ ಸುವಾಸಿನಿಯು ಗಂಡುಮನೆಗೆ ಹೋಗಿ ತನ್ನ ಜೀವನದಲ್ಲಿ ಆಪ್ತರನ್ನು ಕಳೆದುಕೊಂಡು ಒಂಟಿಯಾಗುತ್ತಾನೆ.

*ಹೀಗೆ ಶೀನನ ಪಾತ್ರ ಶಾರದೆ, ರಾಮಚಂದ್ರ, ಗಂಗಮ್ಮ, ನರಸಿಂಹ, ಮಾಧವಯ್ಯ, ವಾಸುದೇವ, ಸುವಾಸಿನಿ,ಭೋಜ, ಕಾಳ ಜೀವನದಲ್ಲಿ ಹೇಗೆ ಮುಖ್ಯವಾದವು ಎಂಬುದನ್ನು
ಕಾರಂತರು ಕೆಲವು ವ್ಯಕ್ತಿಗಳನ್ನು ಮುಂದಕ್ಕಿರಿಸಿಕೊಂಡು, ಅವರ ಬಾಳಿನ ಸಮೀಕ್ಷೆಯನ್ನು ವಿವರಿಸಿದ್ದಾರೆ. ಯಾವುದು ಸಾರ್ಥಕ , ಯಾವುದು ನಿರರ್ಥಕ? ಈ ಅರ್ಥ ಯಶಸ್ಸಿನ ದೃಷ್ಟಿಯಿಂದಲ್ಲ-ಜೀವನ ಅರ್ಥವತ್ತಾಗಿ, ರಸವತ್ತಾಗಿ, ಸಹ್ಯವಾಗಿ ಕಾಣಿಸಬೇಕೆಂಬ ದೃಷ್ಟಿಯಿಂದ.*

*ಕಾರ್ತಿಕೇಯ*
Profile Image for Bharath Manchashetty.
137 reviews3 followers
October 26, 2025
“ಹಂಗಲೂರು, ಬ್ರಹ್ಮಾವರ, ನುಗ್ಗೇಹಳ್ಳಿಯ ಸುತ್ತಮುತ್ತಲಲ್ಲಿ ನಡೆಯುವ ಕಥೆ ಸಮೀಕ್ಷೆ. ಹಂಗಲೂರಿಗೆ ಬಂದ ಶ್ರೀನಿವಾಸನಿಗೆ (ಶೀನ) ಸಂತೋಷವೂ ಇಲ್ಲ, ದುಃಖವೂ ಇಲ್ಲ, ಅದೊಂದರಲ್ಲಿಯೇ ಅಲ್ಲ, ಎಲ್ಲದರಲ್ಲೂ ಹಾಗೆಯೇ. ಬ್ರಹ್ಮಾವರದಿಂದ ಹಂಗಲೂರಿಗೆ ಬಂದು ನೆಲಸಿದ ಶ್ರೀನಿವಾಸನು ತನ್ನ ಬಾಳಿನ ಸಮೀಕ್ಷೆಯನ್ನು ನೆನೆಯುತ್ತಾ ಹೋಗುತ್ತಾನೆ. ಶಾರದೆಯನ್ನು ಮದುವೆಯಾದ ಪ್ರಸಂಗ, ತನ್ನ ಜೀವನದಲ್ಲಿ ತನ್ನ ಸ್ನೇಹಿತ ವಾಸುವಿನ ಮಗಳಾದ ಸುವಾಸಿನಿಯ ಪಾತ್ರ, ಅನಿರೀಕ್ಷಿತವಾಗಿ ತನ್ನ ಕೆಲವು ಬಾಲ್ಯ ಸ್ನೇಹಿತರ ಭೇಟಿಯಾದಾಗ ತನ್ನಲ್ಲುಂಟಾದ ಬದಲಾವಣೆಗಳು ಹಾಗು ಅವರಿಂದ ಕಲಿತ ಕೆಲವು ಜೀವನಾಂಶಗಳು, ಇನ್ನೂ ಹಲವು.

ಜೀವನದಲ್ಲಿ ಮುಖ್ಯವಾದವು ಎಂಬುದನ್ನು
ಕಾರಂತರು ಕೆಲವು ವ್ಯಕ್ತಿಗಳನ್ನು ಮುಂದಕ್ಕಿರಿಸಿಕೊಂಡು, ಅವರ ಬಾಳಿನ ಸಮೀಕ್ಷೆಯನ್ನು ವಿವರಿಸಿದ್ದಾರೆ. ಯಾವುದು ಸಾರ್ಥಕ , ಯಾವುದು ನಿರರ್ಥಕ? ಈ ಅರ್ಥ ಯಶಸ್ಸಿನ ದೃಷ್ಟಿಯಿಂದಲ್ಲ-ಜೀವನ ಅರ್ಥವತ್ತಾಗಿ, ರಸವತ್ತಾಗಿ, ಸಹ್ಯವಾಗಿ ಕಾಣಿಸಬೇಕೆಂಬ ದೃಷ್ಟಿಯಿಂದ.”

ಕೃತಿ- ಸಮೀಕ್ಷೆ
ಲೇಖಕರು- ಡಾ. ಕೆ. ಶಿವರಾಮ ಕಾರಂತ.
ಓದಿದ್ದು 05/2020
Displaying 1 - 3 of 3 reviews

Can't find what you're looking for?

Get help and learn more about the design.