Kota Shivaram Karanth was a Kannada writer, social activist, environmentalist, Yakshagana artist, film maker and thinker. He was described as the "Rabindranath Tagore of Modern India who has been one of the finest novelists-activists since independence"by Ramachandra Guha. He was the third person among eight recipients of Jnanpith Award for Kannada the highest literary honour conferred by the Govt. of India.
Shivaram Karanth was born on 10 October 1902, in Kota near Udupi in the Udupi district of Karnataka to a Kannada family.He was influenced by Gandhi's principles and took part in Indian Independence movement while he was in college. He did not complete his education and went to participate in the Non-cooperation movement and canvassed for khadi and swadeshi for five years up to 1927. By that time Karanth had already started writing fiction-detective novels, to begin with as well as plays.
Karanth was an intellectual and environmentalist who tremendously contributed to art and culture of Karnataka. He is considered one of the greatest novelist in Kannada. Apart from his 47 novels, he also wrote 31 plays, four short stories, six books of essays and sketches, thirteen books on art, 2 volumes of poems, 9 encyclopedias, and 100+ of articles on various issues and subjects, including a history of world art in Kannada and a work on Chalukyan sculpture and architecture, a standard treatise on the Yakshagana (with which dramatic form, his name is identified), a three volume book of knowledge for children, a four volume encyclopedia on science for grown ups, 240 children's books, six books on travel, two books on birds, three Travelogues, an autobiography.
He has received several literary awards,.Namely, Jnanpith Award, Padma Bhushan, Sahitya Academy award and Pampa Award.
He passed away on 9th December 1997 in Manipal, Karnataka.
ಈ ಕೃತಿಯನ್ನು ಕಾರಂತರು ರಚಿಸಿದ್ದು 1948ರಲ್ಲಿ. ಆಗಿನ ಕಾಲಕ್ಕೆ ಲೌಕಿಕ ಮತ್ತು ಅಲೌಕಿಕ ಜಗತ್ತಿನ ಸೂಕ್ಷ್ಮ ಸಂವೇದನೆಯನ್ನು ಎರಡು ಮುಖ್ಯ ಪಾತ್ರಗಳ ಮೂಲಕ ಒಂದೇ ಕೃತಿಯಲ್ಲಿ ಹೇಳುವ ಈ ಪ್ರಯತ್ನ ಕಾರಂತರಿಂದ ಮಾತ್ರ ಸಾಧ್ಯವೇನೋ.
ಈ ಒಂದು ಕೃತಿಯಿಂದ ನಾವು ಓದಿದ ಅನೇಕ ಕೃತಿಗಳು ಸ್ಮೃತಿಪಟಲದಿಂದ ಹಾದು ಹೋಗುತ್ತವೆ. ಭೈರಪ್ಪರ ನಿರಾಕರಣ, ತ್ರಿವೇಣಿರ ಕಾಶಿಯಾತ್ರೆ, ಭೈರಪ್ಪರ ಗೃಹಭಂಗ, ಸತ್ಯಕಾಮರ ಪುಸ್ತಕಗಳು ನೆನಪಾಗದೆ ಇರದು.
ನನಗೆ ಈ ಪುಸ್ತಕ ಕಂಡದ್ದು ಹೀಗೆ, ಇಲ್ಲಿ ಎರಡು ಮುಖ್ಯಪಾತ್ರಗಳು, ಒಂದು ಲೌಕಿಕ ಜೀವನದ ತನ್ನದೇ ಘೋರ ಚೌಕದಲ್ಲಿ ಸಿಕ್ಕು, ಹೆದರಿ ಅಲೌಕಿಕ ಜೀವನದ ಕಡೆ ಹೊರಳುವ ಶಂಕರರಾಯ. ಇನ್ನೊಂದು ಲೌಕಿಕ ಜೀವನದ ಆಗು ಹೋಗುಗಳಲ್ಲೇ ಪಾಠ ಕಲಿತು ಇನ್ನೊಬ್ಬರ ಕಾರ್ಪಣ್ಯಕ್ಕೆ ಮರುಗುವ ರುಕ್ಮಾಯಿ. ಇವೆರಡು ಪಾತ್ರಗಳು ಒಂದೇ ಕುಟುಂಬಕ್ಕೆ ವಿಧಿಯ ಶಕ್ತಿಗೆ ಸೋತು, ಒಂದು ಇರುವ ನಂಟನ್ನು ಕಳಚಿ ಹೋದರೆ, ಇನ್ನೊಂದು ಇರದ ನಂಟನ್ನು ಕಟ್ಟಿಕೊಳ್ಳುತ್ತದೆ. ಇವೆರಡರ ಯುದ್ಧದಲ್ಲಿ ಗೆಲ್ಲುವ ಪಟು ಯಾರು. ಗೆದ್ದಿದ್ದಕ್ಕೆ ಕಾರಣ? ಸೋತಿದ್ದಕ್ಕೆ ಕಾರಣ? ಕಾರಂತರು ಹೇಳಿಯೂ ಹೇಳದೇ ಹೋಗಿದ್ದಾರೆ.
ನನಗೆ ರುಕ್ಮಾಯಿ ಬಹಳ ಕಾಡುತ್ತಿದ್ದಾಳೆ. ನನಗೆ ಆಕೆಯ ಪಾತ್ರದ ಮೊಗ ಕಾಣಲೇ ಇಲ್ಲ. ಅಷ್ಟು ದಿವ್ಯತೆ ಒಬ್ಬ ಶ್ರೀಸಾಮಾನ್ಯನಿಗೆ ಇರಲಿಕ್ಕೆ ಸಾಧ್ಯವಿಲ್ಲದ ಕಾರಣವೋ ತಿಳಿಯದು. ನನಗೆ ಎಂದಿಗೂ ಒಂದು ಪಾತ್ರವನ್ನು ಮೂರ್ತ ರೂಪದಲ್ಲಿ ನೋಡಬೇಕು ಅನ್ನಿಸಿಲ್ಲ. ಆದರೆ ಈಕೆಯನ್ನು ನೋಡಬೇಕೆಂದೆನಿಸಿದೆ. ರವಿವರ್ಮರು ಈ ಪಾತ್ರವನ್ನು ಓದಿದ್ದರೆ ಕಾಳಿದಾಸನ ಶಾಕುಂತಲೆಯನ್ನು ರೂಪಿಸಿದ ಹಾಗೆ, ರುಕ್ಮಾಯಿಯನ್ನು ರೂಪಿಸುತ್ತಿದ್ದರೇನೋ!
ಬಹಳ ಹಿಂದಿನ ಕಾದಂಬರಿ ಇದು,1948ರದ್ದು. ಸಂಸಾರದ ಕಷ್ಟಗಳಿಗೆ ಅಂಜಿ ವ್ಯಕ್ತಿಯೊಬ್ಬ ಊರು ಬಿಟ್ಟು ಪರವೂರಿಗೆ ಹೋಗಿ ಸನ್ಯಾಸತ್ವ ಸ್ವೀಕರಿಸಿ ಸ್ವಾಮೀಜಿ ಆಗುವುದು ಕಥೆ. ಕಥೆ ಅದುವೇ? ಅಲ್ಲ. ಅವ ತೊರೆದು ಹೋದ ಹೆಂಡತಿ ಮೂವರು ಮಕ್ಕಳು ಹೇಗೆ ಬದುಕು ಸಾಗಿಸಿದರು.ಅವರ ಏಳುಬೀಳು ,ಜೀವನದ ಕಷ್ಟಗಳು ಇದೇ ಮುಖ್ಯ ಕಥೆ. ಮನುಷ್ಯನ ಸಣ್ಣತನಗಳ ಹೇಳುವಾಗ ಕಾರಂತರದು ನೇರ ಮಾತು. ಕಾದಂಬರಿ ರಚನೆಯಲ್ಲೂ ಅವರು ನೇರ ಕಥೆ ಹೇಳುವವರೇ.. ಭಾವಾವಿಷ್ಟರಾಗುವುದು ಇವೆಲ್ಲ ಅವರ ಬರವಣಿಗೆಯ ಜಾಯಮಾನದಲ್ಲೇ ಇಲ್ಲ. ಹಾಗಾಗಿ ಪಾತ್ರಗಳಿಗೆ ಕೊಡುವಷ್ಟು ಅನುಕಂಪ ಕೊಡಲು ಕಷ್ಟವಾಗುತ್ತದೆ.ಅದಲ್ಲದೆ ಅವರ ಬರವಣಿಗೆ ಬಾಳಿನ ದುಃಖಗಳ ಕುರಿತಾದ ನಿರ್ಲಿಪ್ತ ನೋಟ
ಬೇಡವೆಂದರೂ ಭೈರಪ್ಪನವರ ' ನಿರಾಕರಣ' ದ ಜೊತೆ ಮನಸು ಹೋಲಿಸಿ ನೋಡುತ್ತದೆ.
“ಬಾಳು ಈ ಗಂಗೆಯಂತೆ ಎಲ್ಲಿಂದಲೋ ಹುಟ್ಟಿ ಎಲ್ಲಿಗೋ ಧಾವಿಸುತ್ತದೆ. ಯಮುನೆ, ಸರಸ್ವತಿರಂತಹ ಹಿರಿಯ ನದಿಗಳೂ ಗಂಗೆಯಲ್ಲಿ ಲೀನವಾಗಿ, ತಮ್ಮ ಹೆಸರನ್ನೇ ಕಳೆದುಕೊಳ್ಳುತ್ತಿವೆ. ಅವುಗಳ ಮುಂದೆ ಮನುಷ್ಯನು ಎಷ್ಟರವ ? ಎಲ್ಲಿಂದ ಬರುತ್ತಾನೋ, ಎಲ್ಲಿಗೆ ಪ್ರವಾಸಿಯಾಗಿ ಹೋಗುತ್ತಾನೋ- ಯಾರು ಬಲ್ಲರು?…”
ಕಾರಂತರ ಕಥೆಗಳು ಕೆಲವು ಸಾರಿ ವಿಮರ್ಶನಾತ್ಮಕವಾಗಿ ಕಂಡದ್ದು ಉಂಟು. ದೇವರು, ಸಂಪ್ರದಾಯ ಇವುಗಳ ಬಗ್ಗೆ ಅವರಿಗೆ ಏನೋ ಒಂದು ತಾತ್ಸಾರ ಇದೆ ಅನ್ನುವ ಹಾಗೆ. ಬೆಟ್ಟದ ಜೀವ , ಮೂಕಜ್ಜಿಯ ಕನಸುಗಳು ಅದರಲ್ಲಿ ಇದ್ದದ್ದು ನಂಗೆ ಹಾಗೆ ಅನ್ನಿಸ್ಸಿತ್ತು. ಆದರೆ ಅವರ ಈ ಪುಸ್ತಕ ನಂಗೆ ಬೇರೆಯದೇ ಕಾರಂತರ ಪರಿಚಯ ಮಾಡಿಸಿತು. ಶಂಕರ ರಾಯ ತನ್ನ ದುಷ್ಟಚಟಗಳ ಗೀಳಿಗೆ ಬಿದ್ದು ತಾನು ಕೆಲ್ಸ ಮಾಡುತ್ತಿದ್ದ ಸಾಹುಕಾರರ ಹಣವನ್ನೇ ಜೂಜಿಗಿಟ್ಟು ತಲೆಮರೆಸಿಕೊಂಡು ವಿರಕ್ತನಾಗಿ ಬಸುರಿ ಹೆಂಡತಿ ಮತ್ತು ಎರಡು ಮಕ್ಕಳನ್ನು ತ್ಯಜಿಸಿ ಊರು ಬಿಟ್ಟು ಹೋಗುವ ಕಥೆ ಅಷ್ಟೇನಾ? ಉಹು ಆಮೇಲೆ ಆ ಸಂಸಾರ ಏನಾಯಿತು ಎನ್ನುವುದೇ ಇದರ ಮೂಲ ವಸ್ತು.
ಇದಕ್ಕಿಂತ ಹೆಚ್ಚು ಏನೇ ಹೇಳಿದರೂ ಕಥೆ ಬಿಟ್ಟುಕೊಟ್ಟಂಗೆ ಆಗುತ್ತದೆ.
ಇದರಲ್ಲಿ ಬರುವ ರುಕ್ಮಾಯಿ ಪಾತ್ರ ತುಂಬಾ ಹಿಡಿಸುತ್ತದೆ.
ಗೃಹಭಂಗದ ಚೆನ್ನಗಿರಾಯ ಮತ್ತು ಇಲ್ಲಿಯ ಶಂಕರರಾಯ ನಾನು ಹೆಚ್ಚು ದ್ವೇಷಿಸುವ ಪಾತ್ರಗಳು.
ಸಂಸಾರದ ಕಷ್ಟಗಳನ್ನು ಅನುಭವಿಸದೆ ತನ್ನ ಮಡದಿ ಮತ್ತು ಮಕ್ಕಳನ್ನು ಬಿಟ್ಟು ಜೀವನದ ಅರ್ಥವನ್ನು ಹುಡುಕಲು ಹೊರಟ ಶಂಕರರಾಯನ ಮತ್ತು ಅವನ ಕುಟುಂಬದ ಚಿತ್ರಣವೇ "ಸನ್ಯಾಸಿಯ ಬದಕು" ಕೃತಿ.
ಶಂಕರರಾಯ ಸಂಸಾರದ ಜವಾಬ್ದಾರಿ ತೆಗೆದುಕೊಳ್ಳದೆ, ಕೇವಲ ದುಷ್ಟ ಚಟಕ್ಕೆ ಬಿದ್ದು, ಪರರ ನಂಬಿಗೆ ಕಳೆದುಕೊಂಡು ತನ್ನ ಗರ್ಭವತಿ ಮಡದಿ ಸುಮಿತ್ರ ಮತ್ತು ಇಬ್ಬರು ಮಕ್ಕಳು ಬಗ್ಗೆ ಚಿಂತಿಸದೆ ಉರು ಬಿಟ್ಟು ಹೊರಡುತ್ತಾನೆ. ಆ ಹಾದಿಯಲ್ಲಿ ಅವನಿಗೆ ದೊರೆತ ಗುರುಗಳು, ಅವನು ತಲಪುವ ಜಾಗಗಳು ಅವರಲ್ಲಿ ಜೀವನದ ಅರಿವನ್ನು ಮತ್ತು ನೆಮ್ಮದಿಯನ್ನು ಪಡೆಯಲು ಬಯಸುತ್ತಾನೆ. ಅವನಿಗೆ ಸಿಕ್ಕ ಗುರುಗಳಿಂದ ತಾನು ಯಾರು ಎಂಬುದು ತಿಳಿದು ಅಲ್ಲಿಂದ ಮುಂದೆ ಪ್ರವಾಸ ಮಾಡಿ ಅನೇಕ ಜಾಗಗಳಿಗೆ ಬೇಟಿ ಕೊಟ್ಟು, ಕೋಲ್ಕತ್ತದಲ್ಲಿ ತಮಗೆ ದೊರೆತ ವಿದೇಶಿ ಪತ್ರಕರ್ತೆ ಯುವತಿ ಅವನ ಶಿಷ್ಯೆಯಾಗಿ ಬದಲಾಗುತ್ತಾಳೆ. ಎನ್ನಾ ಶಿವಾನಂದ ಆಗಿ ಬದಲಾದ ಶಂಕರರಾಯನ ಮಹಾತ್ಮೆಯನ್ನು ತನ್ನ ಪತ್ರಿಕೆಗಳ ಮೂಲಕ ಜಗತ್ತಿಗೆ ಶಿವಾನಂದ ಗುರುಗಳ ಪರಿಚಯ ಮಾಡುತ್ತಾಳೆ. ಕೊನೆಗೆ ಅವಳ ಆಸೆಯಂತೆ ಶಿವಾನಂದ ಇಂದ Krishnananda ನಾಗಿ ಬದಲಾಗಿ ಅವಳ ಜೊತೆ ಸೇರಿ ಆಶ್ರಮವನ್ನು ಸ್ಥಾಪಿಸಿ ಅಲ್ಲೇ ಸಮಸ್ಯಯನ್ನು ಬಗೆಹರಿಸಿ ಬರುವ ಜನರ ಕಷ್ಟಗಳಿಗೆ ತಮ್ಮ ಬೋಧನೆಗಳ ಮೂಲಕ ಪರಿಹಾರ ಕೊಡಲು ಮುಂದಾಗುತ್ತಾರೆ.
ಗಂಡ ಬಿಟ್ಟು ಹೋದ ಸಂಸಾರದ ಹೊಣೆಯನ್ನು ಸುಮಿತ್ರಿ ಒಬ್ಬಳೇ ನಿಗಿಸಬೇಕಾಗುತ್ತದೆ. ತನ್ನ ಜೊತೆಗೆ ತನ್ನ ಗರ್ಭದಲ್ಲಿ ಇರುವ ಮಗುವನ್ನು ಜೊತೆಗೆ 2 ಮಕ್ಕಳನ್ನು ಸಾಕಬೇಕಾಗುತ್ತದೆ. ಇದೇ ವೇಳೆ ತಮಗೆ ಪರಿಚಯವಾದ Rukmayi ಜೊತೆ ಮುಂದೆ ಜೀವನ ನೆಡೆಸುತ್ತಾಳೆ. ಅವನ ಹಿರಿಮಗನ ಮರಣದ ನಂತರ ತನಗೆ ಉಳಿದ ಇನ್ನೂ ಎರಡು ಮಕ್ಕಳನ್ನು ಬೆಳೆಸುತ್ತಾಳೆ. ಕೊನೆಗೆ ರುಕ್ಮಾಯಿಯ ನೆರವಿನಿಂದ ತನ್ನ ಮಗಳ ಮದುವೆ ಜವಾಬ್ದಾರಿ ಮುಗಿಸುತ್ತಾಳೆ. ಕೊನೆಗೆ ಮಗಾ ಓದಿ ಅಲ್ಲೇ ಕೆಲಸ ಮಾಡಿ ಮನೆಯ ಜವಾಬ್ದಾರಿ ತಗೆದು ಕೊಲ್ಲುತ್ತಾನೆ.
ಮಗಾ ದೇವುಗೆ ತನ್ನ ಪ್ರೇಮ ಭಗ್ನ ಹೊಂದಿದಮೇಲೆ, ತನ್ನ ನೋವನ್ನು ಮರೆಯಲು ಅಕಸ್ಮಾತ್ ಆಗಿ ತನ್ನ ತಂದೆ ಎಂದು ತಿಳಿಯದೆ ಆ ಆಶ್ರಮದಲ್ಲಿ ಇರುತ್ತಾನೆ. ತಾಯಿಗೆ ಮಗಾ ಮನೆ ಬಿಟ್ಟು ತನ್ನ ಗಂಡ Krishnananda ಆಗಿ ಅವನ ಆಶ್ರಮದಲ್ಲಿ ತನ್ನ ಮಗನ ಬಗ್ಗೆ ತಿಳಿದು, ಚಿಂತಿಸಿ ಮಗನಿಗೆ ಪತ್ರ ಬರೆದು ಕಲಿಸುತ್ತಾಳೆ. ಮನೆಗೆ ಬಂದ ಮಗನಿಗೆ ಎಲ್ಲ ವಿಷಯ ತಿಳಿದಮೇಲೆ. ತಾನು ಹೋಗಿದ್ದು ತನ್ನ ತಂದೆ ಆಶ್ರಮಕ್ಕೆ ಎಂದು ಗೊತ್ತಾದಾಗ ತನ್ನ ತಂದೆಗೆ ಅವನ ತಾಯಿ ಮತ್ತು ರುಕ್ಮಾಯಿ ಪಟ್ಟ ಕಷ್ಟಗಳನ್ನು ಕುರಿತು ತನ್ನ ತಂದೆಗೆ ಅರಿವು ಆಗುವಂತೆ ಪತ್ರ ಬರೆಯುತ್ತಾನೆ. ಕೊನೆಗೆ ರುಕ್ಮಾಯಿಯ ಆಸೆಯಂತೆ ದೇವು ಮದುವೆ ಆಗುತ್ತಾನೆ.
ತನಗೆ ತಿಳಿಯದ ಸಂಸಾರದಲ್ಲಿ ಬಂದು ರುಕ್ಮಾಯಿ, ಸುಮಿತ್ರ ಮತ್ತು ಅವಳ ಮಕ್ಕಳ ಜವಾಬ್ದಾರಿ ಹೊತ್ತು ತನ್ನ ಮಕ್ಕಳಂತೆ ಸಾಕಿ. ಊಹೆಗು ಸಿಲುಕದಷ್ಟು ಸಹಾಯ ಮಾಡುತ್ತಾಳೆ. ಸುಮಿತ್ರಿ ಮಗಳ ಮದುವೆಗೆ ತಾನು ದುಡಿದ 3400 ರೂಪಾಯಿಗಳನ್ನು ಸುಮಿತ್ರಿಗೆ ತಿಳಿಯದಂತೆ ವರದಕ್ಷಿಣೆ ಕೊಡುತ್ತಾಳೆ. ತನ್ನ ಇಡೀ ಜೀವ ಮತ್ತು ಜೀವನವನ್ನು ಈ ಕುಟುಂಬಕ್ಕೆ ಮೀಸಲಿಡುತ್ತಾಳೆ. ಕೊನೆಗೆ ತನ್ನ ಎಲ್ಲ ಜವಾಬ್ದಾರಿ ಮುಗಿಸಿ ಕೊನೆಗೆ ಸ್ವೇಚ್ಛಾಮೃತ್ಯು ಹೊಂದುತ್ತಾಳೆ.
ಸಂಸಾರವನ್ನು ನಡು ನೀರಿನಲ್ಲಿ ಬಿಟ್ಟು ಜಗತ್ತಿನ ಜನರ ಜೀವನ ಉದ್ದಾರ ಮಾಡಲು ಹೊರಟ ಶಂಕರರಾಯ ತನ್ನ ಸಂಸಾರದ ಬಗ್ಗೆ ಚಿಂತೆ ಮಾಡುವುದಿಲ್ಲ, ಆದರೆ ತನ್ನ ಸಂಸಾರ ಇಲ್ಲದಿದ್ದರೂ, ಸುಮಿತ್ರಿಯ ಸಂಸಾರದಲ್ಲಿ ಪಾಲುಗೊಂಡು ಅವಳ ಸಂಸಾರಕ್ಕೆ ಹೆಗಲಾಗಿ ನಿಂತ, ಅವಳ ಜೊತೆ ಎಲ್ಲ ಕಷ್ಟಗಳನ್ನು ಅನುಭವಿಸಿ, ಅವಳಿಂದ ಏನನ್ನು ಅಪೇಕ್ಷಿಸದೆ ತನ್ನ ಇಡೀ ಜೀವನವನ್ನು ಸುಮಿತ್ರಿಯ ಸಂಸಾರಕ್ಕೆ ಮೂಡಿಪುಆಗಿ ಇಟ್ಟಿದ್ದ, ರುಕ್ಮಾಯಿ ನಿಜಕ್ಕೂ ನಿಜವಾದ ಸನ್ಯಾಸಿ. ❤
This entire review has been hidden because of spoilers.
ಜೀವನನುಭವ ನೀಡುವ ಕಾರಂತರ typical ಕಾದಂಬರಿ. ಲೌಕಿಕ ಮತ್ತು ಅಲೌಕಿಕ ಜೀವನದ ಎರಡು ಕತೆಗಳು ಇಲ್ಲಿ ಸಮಾನಾಂತರದಲ್ಲಿ ಸಾಗುತ್ತದೆ. ಜೂಜಿನ ಚಟಕ��ಕೆ ಬಿದ್ದು ತನ್ನ ಹೆಂಡತಿಯ ಮಾಂಗಲ್ಯವನ್ನೇ ಅಡವಿಟ್ಟು ಓಡಿಹೋಗುವ ಶಂಕರರಾಯ ಒಂದು ಕಡೆಯಾದರೆ, ಎರಡು ಮಕ್ಕಳು ಅಲ್ಲದೇ ಗರ್ಭ ದಲ್ಲೊಂದು ಮಗುವನ್ನು ಇಟ್ಟುಕೊಂಡು ಬಡತ��ದ ಬೇಗೆಯಲ್ಲಿ ನರಳುವ ಸುಮಿತ್ರೆ ಒಂದು ಕಡೆ. ಸಾಂಸಾರಿಕ ಜೀವನದಲ್ಲಿ ವೈರಾಗ್ಯಗೊಂಡು ಪ್ರಯಾಗ, ಮಥುರೆ, ಹಿಮಾಲಯಗಳಲ್ಲಿ ಅಲೆದಾಡಿ ಸನ್ಯಾಸ ದೀಕ್ಷೆ ತೆಗೆದುಕೊಂಡ ಶಂಕರರಾಯ ತನ್ನ ಸಂಸಾರವನ್ನು ಸ್ವತಃ ಮುಳುಗಿಸಿ ತನ್ನ ಬಳಿ ನೆರವು ಕೇಳಿ ಬಂದವರ ಸಂಸಾರವನ್ನು ಉಳಿಸುವುದಕ್ಕೆ ಮಾರ್ಗದರ್ಶನ ಕೊಡುತ್ತಾನೆ. ಕಾಲಾಂತದಲ್ಲಿ ಕಾರಾವರದಲ್ಲೊಂದು ಆಶ್ರಮ ಕಟ್ಟಿಸಿ ಇಡೀ ದೇಶದ ಮೂಲೆ ಮೂಲೆಗಳಿಂದ ದೇಣಿಗೆ ಪಡೆದುಕೊಂಡು ಜಗತ್ತು ಹಿಂದಿರುಗಿ ನೋಡುವಂತೆ ಪ್ರಸಿದ್ಧಿಗೊಳಿಸುತ್ತಾನೆ. ಆದರೆ ಇನ್ನೊಂದು ಕಡೆ ದಿಕ್ಕು ದೆಸೆಯಿಲ್ಲದೆ ಸಾಯುವ ಸ್ಥಿತಿಗೆ ಬಂದಿರುವ ಸುಮಿತ್ರೆಗೆ ನೆರಳಾಗಿ ಬರುವ ಮುದುಕಿ ರುಕ್ಮಾಯಿ. ಇದೊಂದು ಪಾತ್ರ ಸಾಕು ಈ ಕಾದಂಬರಿಗೆ. ಅದೆಷ್ಟು ನಿಸ್ವಾರ್ಥಿ ಅವಳು. ತನ್ನವರಿಲ್ಲದೆ ಅನಾಥೆಯಾಗಿ ಎಲ್ಲರ ಮನೆ ಕೆಲಸ ಮಾಡಿ ಆಶ್ರಯ ತೆಗೆದು ಕೊಳ್ಳುತ್ತಿದ್ದ ರುಕ್ಮಾಯಿ ಸುಮಿತ್ರೆ ಜೀವನದಲ್ಲಿ ಬೆಳಕಾಗುವಳು. ಒಂದು ಕ್ಷಣ ರುಕ್ಮಾಯಿ ಮೂಕಜ್ಜಿಯನ್ನು ನೆನಪಿಸಿದಂತು ಹೌದು.. ರುಕ್ಮಾಯಿಯ ಅಂತ್ಯಮಾತ್ರ ಎಂತವರನ್ನು ಕೂಡ ಒಂದು ಕ್ಷಣ ಸ್ತಬ್ಧ ಗೊಳಿಸುತ್ತದೆ. ಅಲೌಕಿಕ ಮಾರ್ಗವನ್ನು ಹಿಡಿದು ಇನ್ನೊಬ್ಬರ ಜೀವನಕ್ಕೆ ಶಂಕರ ಮಾರ್ಗದರ್ಶಿಯಾದರೆ, ಲೌಕಿಕ ಮಾರ್ಗದಲ್ಲಿ ರುಕ್ಮಾಯಿ ಬರಿ ಸುಮಿತ್ರೆಯ ಜೀವನಕ್ಕಲ್ಲ, ಇಡೀ ಮನುಕುಲಕ್ಕೆ ಮಾದರಿಯಾದಳು..
ಕಾರಂತರಿಗೆ ಒಂದೇ ಪಾತ್ರ ಸಾಕು ಓದುಗನನ್ನು ಕಾದಂಬರಿ ಬೆಂಬಿಡದೆ ಕಾಡಿಸಲು. ಅವರ ಅನೇಕ ಕಾದಂಬರಿಗಳಲ್ಲಿ ನೋಡಿದಂತೆ ಇದರಲ್ಲಿ ರುಕ್ಮಾಯಿಯ ಪಾತ್ರ ಅಂತರಾಳಕ್ಕೆ ಮುಟ್ಟುವುದು.
ಶಿವರಾಮ ಕಾರಂತರ ಕಾದಂಬರಿಗಳು ಗಾತ್ರದಲ್ಲಿ ಚಿಕ್ಕವು ಆದರೆ ಅವು ಹೇಳಿಕೊಡುವ ಜೀವನಾನುಭವದ ಪಾಠ ಮಾತ್ರ ಅಪರಿಮಿತವಾದುದು. ಸಂಸಾರ ಒಂದು ಮಾಯೆ ಎಂದು ನೆಪ ಹೇಳಿ, ಬದುಕಿನಲ್ಲಿ ಮಾಡಬೇಕಾದ ಕರ್ತವ್ಯಕ್ಕೆ ಅಂಜಿ ದೇವರ ದಾಸನಾಗಲು ಹೋಗಿ ತಾನೇ ದೇವರೆಂದು ತೋರಿಕೆಯ ಜೀವನ ಮಾಡುವ ಪಾತ್ರ ಒಂದು ಕಡೆ. ಏನೇ ಆದರೂ ನಗುತ್ತಾ ಎಲ್ಲವೂ ಭಗವಂತನ ಆಟ ಎಂದು ತನ್ನ ಸುತ್ತಲಿನ ಸುಖಸಾಧನೆಗೆ ನಿಸ್ವಾರ್ಥ ಸೇವೆಯಿಂದ ಶ್ರಮಿಸುವ ಪಾತ್ರ ಮತ್ತೊಂದು ಕಡೆ. ಸಂಪೂರ್ಣ ಕಾದಂಬರಿ ಈ ಎರಡು ಪಾತ್ರಗಳ ನಿಲುವುಗಳ ಅನ್ವೇಷಣೆ ಎಂದು ಹೇಳಬಹುದು, ಯಾವ ಪಾತ್ರದ ನಿಲುವು ಶ್ರೇಷ್ಠ ಎನ್ನುವುದು ಓದುಗರ ತೀರ್ಮಾನಕ್ಕೆ ಬಿಟ್ಟಿದ್ದು. ಸುಲಭದಲ್ಲಿ ಓದಿ ಅರ್ಥೈಸಿಕೊಳ್ಳುವಂತಹ ಕೃತಿಯಲ್ಲ ಇದು, ಓದಿನ ಜೊತೆ ಓದುಗನ ಸ್ವಯಂ ವಿಶ್ಲೇಷಣೆಯೂ ಅವಶ್ಯಕ.
ಕಾದಂಬರಿಯನ್ನು ಓದಲು ಶುರುಮಾಡಿದಾಗ, ನಾನು ಒಬ್ಬ ಸನ್ಯಾಸಿಯ ಪಯಣ, ಅವರ ಏರಿಳಿತಗಳು, ಜೀವನಶೈಲಿ ಮತ್ತು ಆಧ್ಯಾತ್ಮಿಕ ಹುಡುಕಾಟದ ಕಥೆಯನ್ನು ನಿರೀಕ್ಷಿಸಿದ್ದೆ. ಆದರೆ ಕಥೆ ಒಂದು ಕುಟುಂಬದೊಂದಿಗೆ ಪ್ರಾರಂಭವಾಗಿ, ಕಥೆಯ ದಿಕ್ಕು ಸ್ಪಷ್ಟವಾಗಿರಲಿಲ್ಲ. ಕಾರಂತರು ಜೂಜಿಗೆ ಮನಸೋತ ಶಂಕರರಾಯ ಸಂಸಾರ ತೊರೆದು ಸನ್ಯಾಸಿಯಾಗುವ ಪರಿಸ್ಥಿತಿಗಳನ್ನು ಚೆನ್ನಾಗಿ ಚಿತ್ರಿಸಿದ್ದಾರೆ.
ಕಾದಂಬರಿಯಲ್ಲಿ ಎರಡು ಪ್ರಮುಖ ಪಾತ್ರಗಳು - ರುಕ್ಮಾಯಿ ಮತ್ತು ಸನ್ಯಾಸಿ - ನನ್ನ ಗಮನ ಸೆಳೆದವು. ಒಬ್ಬಳು ಸಂಸಾರದ ಎಲ್ಲ ಸವಾಲುಗಳನ್ನು ಎದುರಿಸಿ ಇತರರಿಗೆ ನೆರವಾದರೆ, ಇನ್ನೊಬ್ಬ ಸಂಸಾರದಿಂದ ಪಲಾಯನ ಮಾಡಿ ಸನ್ಯಾಸಿಯಾಗಿ ನಂತರ ಮತ್ತೆ ಸಮಾಜದೆಡೆಗೆ ಸೆಳೆಯಲ್ಪಟ್ಟರು. ಕಥೆಯ ಅರ್ಧದ ನಂತರ, ಸನ್ಯಾಸಿಯ ಅನುಯಾಯಿಗಳು ಮತ್ತು ದಿನಚರಿಯ ವಿಸ್ತರಣೆಯ ಮೇಲೆ ವಿವರಣೆ ಸ್ವಲ್ಪ ಎಳೆದಂತೆ ಅನಿಸಿತು.
ಕಥೆ ಮುಗಿದಾಗ, ಹಲವಾರು ಪ್ರಶ್ನೆಗಳು ಮೂಡಿದವು: ಯಾವ ಮಾರ್ಗ ಸರಿ? ಸನ್ಯಾಸಿ ತಾನು ಬಯಸಿದ್ದನ್ನು ಸಾಧಿಸಿದನೇ? ರುಕ್ಮಾಯಿಯ ಬಗ್ಗೆಯೋ, ಒಂದು ಮಾತು ಸ್ಪಷ್ಟ, ರುಕ್ಮಾಯಿ ಒಂದು ಬಲಿಷ್ಠ ಪಾತ್ರವಾಗಿ ನಿಂತಿದ್ದಾಳೆ. 1948 ರಲ್ಲಿ ಬರೆಯಲ್ಪಟ್ಟ ಈ ಕೃತಿಯಲ್ಲಿ ಕಾರಂತರು ಲೌಕಿಕ ಮತ್ತು ಆಧ್ಯಾತ್ಮಿಕ ಲೋಕಗಳ ಸಂಘರ್ಷವನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ, ಯಾವುದು ಉತ್ತಮ ಮಾರ್ಗ ಎಂಬುದನ್ನು ನಮ್ಮ ಆಲೋಚನೆಗೆ ಬಿಟ್ಟಿದ್ದಾರೆ.
ಇದು ಒಬ್ಬ ಸನ್ಯಾಸಿಯ ಕಥೆಯಲ್ಲ ಸಂಸಾರದ ಜಂಜಾಟಕ್ಕೆ ಅಂಜಿ ಜೀವನದಲ್ಲಿ ಸೋತು ತನ್ನವರ ಬಗ್ಗೆ ಯೋಚಿಸದೆ ಅವರನ್ನು ಬಿಟ್ಟು ಹೋದ ಸನ್ಯಾಸಿಯೊಬ್ಬ ಮತ್ತು ತನ್ನದಲ್ಲದ ಸಂಸಾರಕ್ಕೆ ದುಡಿದು ಸಾಕಿದ ರುಕ್ಮಾಯಿ ಅಂತಹ ಬೇರೆಯವರಿಗಾಗಿ ಬಾಳುವ ಸನ್ಯಾಸಿಯ ಕತೆ. ೧೯೪೮ ರಲ್ಲ ಬರೆದ ಕೃತಿಯಿದು ಆಗ ಹಾಗೂ ಈಗಲೂ ಇದೆ ಸ್ಥಿತಿ ಭಾರತದಲ್ಲಿ ಇದೆ ಎಂದು ಎನಿಸಿದರೆ ಬೇಸರವಾಗುತ್ತದೆ.