Second Part of Auto Biography of Siddalingaiah . Ooru Keri is the autobiography of the famous dalit writer Dr. Siddalingaiah. While the first volume deals with his childhood and youth, recording the emergence of a new, confident, educated dalit from a very humble background.
Siddalingaiah (1954 in Magadi, Bangalore – 11 June 2021), was an Indian poet, playwright, and Dalit activist, writing in the Kannada language. He is credited with starting the Dalit-Bandaya movement in Kannada and with starting the genre of Dalit writing. He is one of the founders of the Dalita Sangharsh Samiti along with B. Krishnappa.
He has been head of the Department of Kannada at Bangalore University and a member of the University Syndicate of Kannada University, Hampi. He is acknowledged as a symbol of the Dalit movement and a leading public intellectual and Kannada poet.
ನಾನು ಓದಿದ ಅತ್ಯಂತ ಸತ್ಯ, ನೈಜ ಬದುಕಿನ ಆತ್ಮಕಥೆ. ಅಕ್ಷರ ರೂಪಕ್ಕಿಳಿಸಿ ನಮ್ಮ ಕೈಲಿರಿಸಿದ ಸಿದ್ದಲಿಂಗಯ್ಯ ಅವರಿಗೆ ಹೃದಯಪೂರ್ವ ನಮಸ್ಕಾರಗಳು. ಸಹಜ ಬದುಕಿನ ಸುಂದರ ಗ್ರಾಮೀಣ ಪ್ರತಿಭೆ. ಸರಳವಾದ ಭಾಷೆ, ಬೆಟ್ಟದಂತಹ ಕಷ್ಟಗಳಿಗೆ ಹಾಸ್ಯದ ಸ್ಪರ್ಶ ನೀಡಿ ನಿಮ್ಮನ್ನು ೧,೨,೩ ಭಾಗಗಳನ್ನು ಓದಲು ಪ್ರೇರೇಪಿಸುತ್ತದೆ. ಹಳ್ಳಿ ಜೀವನ, ೬೦-೭೦ ರ ದಶಕದ ಬೆಂಗಳೂರಿನ ಚಿತ್ರಣ, ಕೊಳೆಗೇರಿ ದರ್ಶನ, ಬದುಕಿನ ವಿವಿಧ ಹಂತದಲ್ಲಿನ ಕಷ್ಟಗಳು, ದಲಿತ ಹೋರಾಟಗಳು, ಸ್ನೇಹಿತರ ಜೊತೆ ಸಂವಾದಗಳು, ಹಾಸ್ಯ ಪ್ರಸಂಗಗಳು, ಪ್ರೇರಣೆಗಳು, ವಿಶ್ವ ವಿದ್ಯಾನಿಲಯಗಳು, ಕೊನೆಗೆ ವಿಧಾನ ಪರಿಷತ್ತು. ಖಂಡಿತಾ ಓದಿ, ವಿಶಿಷ್ಟ ಅನುಭವಗಳ ಆಗರ.
“ಊರು ಕೇರಿ-೨, ಈ ಕೃತಿಯಲ್ಲಿ ಸಿದ್ದಲಿಂಗಯ್ಯನವರ ರಾಜಕೀಯ, ಸಿನಿಮಾ ಹಾಗೂ ಹೋರಾಟದ ಮುಖಗಳನ್ನು ತಿಳಿಯಬಹುದು. ಆತ್ಮಕಥೆಗಳ ಬಗ್ಗೆ ಅನಿಸಿಕೆ ಬರೆಯುವುದು ಎಷ್ಟು ಸರಿ-ತಪ್ಪು ಗೊತ್ತಿಲ್ಲ. ಜೀವನದ ಅನುಭವಗಳನ್ನು ಅನುಭವಿಸಿರುವಂತೆಯೇ ಬರಿದಿದ್ದಾರ ಎನ್ನುವುದು ಲೇಖಕನಿಗೆ ಬಿಟ್ಟದ್ದು, ಬರೆದಿರುವುದರಲ್ಲಿ ಓದುಗನಿಗೆ ದಕ್ಕಿದ್ದು ಎಷ್ಟು ಎನ್ನುವುದರ ಪ್ರಶ್ನೆಯ ಜೊತೆ ಅದರಿಂದ ಸಿಗುವ ಮೌಲ್ಯವೆಷ್ಟು ಎನ್ನುವುದು ಗ್ರಹಿಕೆಗೆ ಬಿಟ್ಟದ್ದು. ಜೊತೆಗೆ ಆತ್ಮಕಥೆ ಬರೆಯಲು ಸೃಜನಶೀಲ ಕಲೆ ಸಾಹಿತ್ಯವೆಷ್ಟು ಮುಖ್ಯವೆನ್ನುವುದು ಕೂಡ ಒಂದು ಮಹತ್ವದ ಸಂಗತಿ.”
-ಭರತ್ ಎಂ. ಓದಿದ್ದು ೦೯.೧೦.೨೦೨೫
ಹೊಳೆಮಾದಿಗರ ಹಾಡು ಕೆಳಗಿನಂತಿದೆ. ಇಕ್ರಲಾ ವದೀರ್ಲಾ ಈ ನನ್ ಮಕ್ಕಳ ಚರ್ಮ ಎಬ್ರಲಾ ದೇವ್ರು ಒಬ್ಬೇ ಅಂತಾರೆ ಓಣಿಗೊಂದೊಂದ್ ತರಾ ಗುಡಿ ಕಟ್ಸವ್ರೆ ಎಲ್ಲಾರು ದೇವ್ರ ಮಕ್ಳು ಅಂತಾರೆ ಹೊಲೇರ್ನ ಕಂಡ್ರೆ ಹಾವ್ ಕಂಡಂಗಾಡ್ತಾರೆ ಹೋಟ್ಲು, ಬಾವಿ, ಮನೆ ಯಾವುದ್ಕೂ ಸೇರ್ಸಲ್ವರ್ಲೊ ನಮ್ ಹೇಲ್ ತಿನ್ನೋ ನಾಯ್ನ ಕ್ವಾಣೆವಳೀಕ್ ಬುಟ್‌ಕತ್ತಾರೆ ನಾವ್ ಬೆಳಿದಿತ್ ತಿಂತಾರೆ ನಾವ್ ದುಡಿದಿತ್ ತಗತ್ತಾರೆ ನಾವ್ ಮಾತ್ರ ಬ್ಯಾಡಾ ಹೊಲೇರು, ಮಾದುಗ್ರು ಅನ್ನೋ ಬದ್ಲು, ಹರಿಜನಾ ಅಂತ ಕರ್ದು ನಗ್ತಾರಲ್ಲಪ್ಪೋ ನಮ್ಯಾಲೆ ಮೀಟಿಂಗ್ ಮಾಡ್ತಾರೆ, ಕಾನೂನ್ ಮಾಡ್ತಾರೆ ನಮ್ಮ ಯಸ್ರೇಳಿ ಹಾರ ಹಾಕ್ತಾರೆ, ಹಾಕುಸ್ಕತ್ತಾರೆ ನಮ್ಮುನ್ನ ಉದ್ಧಾರ ಮಾಡ್ತೀವಿ ಅಂತ ಪೇಪ್ರೇಲಿ ಮೈಕೇಲಿ ಜೋರಾಗಿ ಕೂಗ್ತಾ ಅವಲ್ಲಪ್ಪೋ ನಾವ್ ಮಾತ್ರ ಇಸ್ಕೊಲ್‌ಗೋಗಾಂಗಿಲ್ಲ ಜೀತಕ್ಕೋಗೋಕು ತಲೆ ಎತ್ತಾಂಗಿಲ್ಲ ಬಗ್ಗುಸ್ಬೇಕು ಈ ನನ್ ಮಕ್ಕು ಕಳ್ಳಾಟ ಆಡ್ತಾ ಅದ್ರೆ ಅದಕ್ಕೇನೆ ಇಕ್ರಲಾ ವದೀರ್ಲಾ ಈ ಸೂಳೆ ಮಕ್ಳ ಮೂಳೆ ಮುರೀಲ್ಲಾ ..