ಮಹಾಭಾರತದ ಉದ್ಯೋಗಪರ್ವದಲ್ಲಿ ೧೧೪ ರಿಂದ ೧೨೦ ಶ್ಲೋಕಗಳಲ್ಲಿ ಮಾಧವಿಯ ಕುರಿತು ಹಾಗು ಆಕೆಯ ಜೀವನದಲ್ಲಿ ವಿಶ್ವಾಮಿತ್ರ, ದಿವೋದಾಸ, ಹರ್ಯಶ್ವ,ಉಶೀನರ ಬಗೆಗೂ ಉಲ್ಲೇಖವಿರುವುದರ ಕುರಿತು ಮುನ್ನುಡಿಯಲ್ಲಿ ತಿಳಿಸಿದ್ದಾರೆ. ಯಯಾತಿ ಹಾಗು ಭೀಷ್ಮನಿಗೆ ೬ ತಲೆಮಾರುಗಳ ಅಂತರ, ಅಂದರೆ ಮಾಧವಿಯ ಕಥೆ ಮಹಾಭಾರತದ ಘಟೆನೆಗಳಿಗಿಂತ ಸುಮಾರು ೩ ಶತಮಾನದ ಹಿಂದೆ ನಡೆದದ್ದು ಎಂದು ಊಹಿಸಬಹುದು. ನಿಯೋಗ ಪದ್ಧತಿ ಮಹಾಭಾರತದ ಕಾಲದಲ್ಲಿ ರೂಢಿಯಲ್ಲಿತ್ತು, ನಿಯೋಗ ಎಂದರೆ ಹೆಂಡತಿಯನ್ನು ಭೂಮಿಯನ್ನಾಗಿ ಮಾಡಿ ಬೇರೊಬ್ಬ ಪುರುಷನಿಂದ ಮಗನನ್ನು ಪಡೆಯುವುದು. ಉದಾಹರಣೆಗೆ ಕುಂತಿಗೆ ಮಕ್ಕಳಾದುದು ಹೀಗೆಯೇ. ಆ ಶೋಷಿತ ಸಮಾಜದಲ್ಲಿ ಮಹಿಳೆ ದಂಗೆಯೇಳುವ ಹಾಗೆಯೇ ಇರಲಿಲ್ಲ. ಪುರುಷಪ್ರಧಾನವಾದ ಆ ಸಮಾಜದಲ್ಲಿ ಏನು ಎತ್ತ ಎಂದು ಕೇಳುವ ಹಕ್ಕೂ ಇರಲಿಲ್ಲ.
ಗಂಗಾಯಮುನಾ ಸಂಗಮಸ್ಥಳದಲ್ಲಿ ಪ್ರತಿಷ್ಠಾನ ನಗರವನ್ನು ಯಯಾತಿ ಆಳುತ್ತಿದ್ದನು. ತನ್ನ ಮೊದಲನೆ ಹೆಂಡತಿ ಪ್ರಸವ ದಿನ ದಾಸಿಯರಿಂದ ಹೆಣ್ಣು ಮಗು ಹುಟ್ಟಿರುವ ಸುದ್ಧಿ ತಿಳಿದ ಯಯಾತಿಗೆ ಮಗುವನ್ನು ನೋಡಲು ಇಷ್ಟಪಡುವುದಿಲ್ಲ ಕಾರಣ ಹುಟ್ಟಿದ್ದು ಹೆಣ್ಣು ಮಗು. ಮರುದಿನ ಮಹಾರಾಣಿಯು ವಿಪರೀತ ಜ್ವರ ಹಾಗು ರಕ್ತಸ್ರಾವದೊಂದಿಗೆ ತೀರಿಹೋದಾಗ*ಹೆಣ್ಣಾಗಿ ಹುಟ್ಟಿದ್ದು ಸಾಲದೂಂತ ತಾಯಿಗೆ ಅಪಮೃತ್ಯು ಆಯಿತು, ಈ ಮಗು ಅಪಶಕುನದ ಮುದ್ದೆ ಎಂದು ಯಯಾತಿ ನಿರ್ಧರಿಸಿ ಆ ಮಗುವನ್ನು ತಿರಸ್ಕರಿಸಿದನು, ಆ ಅಪಶಕುನದ ಮುದ್ದೆಯೇ ಮಾಧವಿ*. ಮಾಧವಿ ನೋಡುವುದಕ್ಕೆ ಸುಂದರವಾಗಿದ್ದಳು, ಆಕೆಯ ರೂಪವನ್ನು ಕಂಡಾಗಲೆಲ್ಲಾ ದೇವಯಾನಿಗೆ ಹೊಟ್ಟೆಕಿಚ್ಚು. ಅಪ್ಪ ಚಿಕ್ಕಮ್ಮ ಎಂದು ಬಾಯಿ ತುಂಬ ಕರೆಯುವ ಆಸೆ ಆದರೆ ಅವರಿಬ್ಬರೂ ಎಂದೂ ವಾತ್ಸಲ್ಯದಿಂದ ತನ್ನನ್ನು ಕಾಣಲೇ ಇಲ್ಲ, ಇಷ್ಟೆಲ್ಲಾ ಭಾಗ್ಯವಿದ್ದು ಪ್ರಯೋಜನವಾದರೂ ಏನು?ತಂದೆ, ತಾಯಿಯ ಪ್ರೀತಿಯಿಲ್ಲದ ತಾನು ತಬ್ಬಲಿಯಂದು, ಆದರೆ ತನ್ನನ್ನು ಬೆಳೆಸಿದ್ದು ದಾಸಿ ಅವ್ವೆ, ಅದರಲ್ಲೂ ಚಾರುನೇತ್ರೆಯಂದರೆ ತುಂಬಾ ಅನ್ಯೋನ್ಯತೆ.
ಹೀಗೆ ನನ್ನ ಬಾಳಿನಲ್ಲಿ ಗಾಲವ ಬಂದು ನನ್ನ ಜೀವನವನ್ನೇ ನಾಶಮಾಡಿದ, ತಾನು ವಿಶ್ವಾಮಿತ್ರನಿಗೆ ಗುರುದಕ್ಷಿಣೆಯಾಗಿ ಮೈಯಲ್ಲಾ ಬೆಳ್ಳಗೂ ಒಂದು ಕಿವಿ ಮಾತ್ರ ಕಪ್ಪಾಗಿ ಇರುವ ೮೦೦ ಕುದುರೆಗಳನ್ನು ತಂದೊಪ್ಪಿಸಲು ನನ್ನನ್ನು ಬಳಸಿಕೊಂಡ, ಶಿಷ್ಯನ ಶುಶ್ರೂಷೆಯಿಂದಲೇ ಸಂತುಷ್ಟನಾಗಿದ್ದ ಗುರುಗಳಿಗೆ ಬಲವಂತದಿಂದ ಗುರುಕಾಣಿಕೆ ಕೊಡಲು ನನ್ನ ಜೀವನವನ್ನೇ ಹಾಳುಮಾಡಿದ ಪಾಪಿ, ಇನ್ನು ತಂದೆ ಯಯಾತಿ ಗಾಲವ ಬಂದು ಅಶ್ವಗಳನ್ನು ಕೇಳಿದಾಗ ಅದರ ಬದಲು ನನ್ನನ್ನು ಕಳುಹಿಸಿಕೊಟ್ಟ, ಹುಟ್ಟಿನಿಂದಲೂ ನನ್ನ ಮೇಲೆ ಪ್ರೀತಿ ಇದ್ದರೇ ತಾನೆ, ಹೆಣ್ಣಾಗಿ ಹುಟ್ಟಿದ್ದೇ ಪಾಪವಾಯಿತು. ಆ ವಿಶ್ವಾಮಿತ್ರನಾದರು ೮೦೦ ಕುದುರೆಗಳನ್ನಿಟ್ಚುಕೊಂಡು ಏನು ಮಾಡಿಯಾನು ಆತನೇನು ರಾಜನೆ, ಒಮ್ಮೆ ರಾಜನಿದ್ದಿರಬಹುದು ಆದರೆ ೮೦೦ ಕುದುರೆಗಳು ಕೇಳುವುದರಲ್ಲಿ ಅರ್ಥವಿಲ್ಲ, ಇದು ಗಾಲವನಿಗೆ ಬುದ್ಧಿ ಕಲಿಸಲು ಹೂಡಿದ ತಂತ್ರವಿರಬಹುದು. ಗಾಲವನಿಗೆ ತಂದೆ ಒಪ್ಪಿಸಿದಾಗ ಅವನ ಜೊತೆ ಕಾಡಿನ ಮಾರ್ಗದಿಂದ ಸಂಚರಿಸುತ್ತಾ ಅಯೋಧೆಯೆಯನ್ನು ಸೇರಿದೆ.
ಅಯೋಧ್ಯಾಪತಿ ಹರ್ಯಶ್ವ, ಕಾಶೀರಾಜ ದಿವೋದಾಸ, ಭೋಜದೇಶಾಧಿಪತಿ ಉಶೀನ, ವಿಶ್ವಾಮಿತ್ರರಿಂದ ನಾಲ್ಕು ಮಕ್ಕಳನ್ನು ಪಡೆದೆ, ಪಡೆದು ಅವರ ಬಳಿಯೇ ಬಿಟ್ಟುಬಂದ ಪಾಪಿ ತಾನು. ಈ ಎಲ್ಲಾ ರಾಜರೂ ಹಾಗು ವಿಶ್ವಾಮಿತ್ರ ನನ್ನ ಸೌಂದರ್ಯಕ್ಕೆ ಮಾರುಹೋಗಿ ನನ್ನನ್ನು ಅನುಭವಿಸಿದರು, ತಾನು ರೂಪವತಿಯಾಗಿ ಹುಟ್ಟಿದ್ದೇ ಶಾಪವೇನೋ, ಎಲ್ಲರೂ ತನ್ನನ್ನು ಭೋಗಿಸಿದರೇ ಹೊರತು ನನ್ನ ಮನಸ್ಸನ್ನು ಯಾರು ಅರ್ಥ ಮಾಡಿಕೊಳ್ಳಲಿಲ್ಲ, ಮುದುಕನಾದ ಹರ್ಯಶ್ವನಿಗೆ ನಾನು ಮಗಳ ಸಮಾನ ಆದರೂ ಕಾಮದಾಹ, ಅವನಿಂದ ವಸುಮಂತನನ್ನು ಪಡೆದೆ. ಮಹಾರಾಣಿಯರಿಗೆ ನನ್ನನ್ನು ಕಂಡರೆ ಅಸೂಯೆ, ಯಾರು ನನ್ನನ್ನ ಪ್ರೀತಿ ಇಂದ ಕಾಣಲೇ ಇಲ್ಲ, ದಾಸಿಯರ ಮಧ್ಯೆ ದಾಸಿಯಾಗಿ ಒಂಟಿ ಜೀವನ ನಡೆಸಿದೆ.
ಮಕ್ಕಳಾಗದೇ ದಿವೋದಾಸ ಪುತ್ರಕಾಮೇಷ್ಠಿಯಾಗವನ್ನು ಮಾಡಿದ, ಅದೂ ಹೇಗೆ ಪ್ರಜಗಳಿಂದ ತೆರಿಗೆ ವಸೂಲಿಮಾಡುವುದು, ಕೊಡದಿದ್ದಲ್ಲಿ ಹಿಂಸಿಸಿ ಕಿತ್ತುಕೊಳ್ಳುವುದು, ರಾಜನಿಗೆ ಮಕ್ಕಳಾಗುವುದಕ್ಕೆ ಪ್ರಜೆಗಳು ತೆರಿಗೆ ತೆತ್ತುವುದು ಅಂತೂ ಯಾಗ ಮುಗಿದು ಮಹಾರಾಣಿ, ಮುಖ್ಯ ದಾಸಿಯರೆಲ್ಲಾ ಪಾಯಸ ಕುಡಿದರು ಅದರಲ್ಲಿ ರಾಣಿ ಸತ್ಯವತಿಯೇ ಹೆಚ್ಚು ಆದರೆ ಪಾಯಸ ಸೇವಿಸದೆ ಗರ್ಭವತಿಯಾದದ್ದು ತಾನು ಮಾತ್ರ , ಅಂದಿನಿಂದ ಸತ್ಯವತಿ ನನ್ನನ್ನು ಪ್ರೀತಿ ಇಂದ ಕಾಣಲು ಶುರುಮಾಡಿದಳು, ಕಾರಣ ಅವರ ವಂಶಸ್ತ ನನ್ನಲ್ಲಿರುವುದಕ್ಕಾಗಿ, ಪ್ರತರ್ದನ ಹುಟ್ಟಿದ ಆತನನ್ನು ಬಿಟ್ಟು ಹೊರಟೆ, ಹೊರಡುವ ಮುಂಚೆ ಗಂಗೆಯಲ್ಲಿ ಸ್ನಾನ ಮಾಡಿದೆ, ತಾನು ಮಾಡುತ್ತಿರುವ ಪಾಪವನ್ನಾದರೂ ನಾಶಮಾಡೋಣವೆಂದು.
ಭೋಜದೇಶಾಧಿಪತಿ ಉಶೀನನಿಂದ ಗರ್ಭಿಣಿಯಾದಾಗ ಮಾಹೇಯ ರಾಜ ಭೋಜ ದೇಶವನ್ನು ಆಕ್ರಮಿಸಿಕೊಳ್ಳಲು ದಂಡೆತ್ತಿ ಬರುತ್ತಾನೆ, ಆ ಯುದ್ಧದಲ್ಲಿ ಉಶೀನ ಜಯ ಪಡೆದ ಆದರೆ ಎಷ್ಟು ಜನ ಸೈನಿಕರು ಸಾಯಲಿಲ್ಲ, ಸತ್ತು ತಮ್ಮ ತಾಯಂದಿರನ್ನ ತಬ್ಬಲಿ ಮಾಡಲಿಲ್ಲ, ದಾಸಿಯರು ಪಡುವ ದುಃಖವನ್ನು ನೋಡಿ ತಾನು ಬಿಟ್ಟು ಬಂದ ವಸುಮಂತ, ಪ್ರತರ್ದನನ ನೆನಪಾಯಿತು. ನಂತರ ಶಿಬಿಹುಟ್ಟಿದ, ಗಾಲವನಿಗೆ ೬೦೦ ಕುದುರೆಗಳು ಮಾತ್ರ ಸಿಕ್ಕಿರುತ್ತೆ ಇನ್ನು ಹುಡುಕಲು ಆತನು ಪ್ರಯತ್ನಪಡಲಿಲ್ಲ, ಕಡೆಗೆ ನನ್ನನ್ನು ವಿಶ್ವಾಮಿತ್ರರಿಗೆ ಒಪ್ಪಿಸಿದ. *ನನ್ನನ್ನು ನೋಡಿದ ವಿಶ್ವಾಮಿತ್ರ ೮೦೦ ಅಶ್ವಗಳಿಗೆ ಬದಲಾಗಿ ಮಾಧವಿಯನ್ನೇ ಸ್ವೀಕರಿಸಿ ಅಂತ ಹೇಳಿ ಇವಳನ್ನು ನನ್ನಲ್ಲಿ ತಂದು ಬಿಟ್ಟಿದ್ದರೆ ಎಷ್ಟು ಚೆನ್ನಾಗಿತ್ತು, ನಾನೇ ಇವಳನ್ನು ಜೀವಮಾನ ಪರ್ಯಂತ ಭೋಗಿಸಿ ಜಗತ್ತಿಗೆ ಶ್ರೇಷ್ಠರಾದ ನಾಲ್ವರು ಪುತ್ರರನ್ನು ಪಡೀತಿದ್ದೆ ಎಂದಾಗ ಥೂ ಗಂಡು ಜಾತಿಯೇ ಎಂದು ಹೇಸಿಗೆ ಪಟ್ಟಳು. ನಂತರ ಅಷ್ಟಕನಿಗೆ ಜನ್ಮ ನೀಡಿದಳು.*
ಹೀಗೆ ತನ್ನ ಜೀವನದಲ್ಲಿ ನಡೆದುದನ್ನು ತಿರುವಿ ಹಾಕಿದಳು, ತನ್ನನ್ನು ಕುದುರೆ ಹಸುಗಳ ಹಾಗೆ ವ್ಯಾಪರ ಮಾಡಿದರಲ್ಲಾ ಎಂದು ನಿಡುಸುಯ್ದಳು, ನಾಲ್ಕು ಜನರ ಜೊತೆ ಮಲಗಿ ನಾಲ್ಕು ಪುತ್ರರನ್ನು ಪಡೆದುಕೊಂಡೆ, ರಾಜಕುಮಾರಿಯಾಗಿ ಹುಟ್ಟಿದ ತನಗೆ ಎಂಥ ಗತಿ , ಇದಕ್ಕೆ ಬದಲು ಬಡವರ ಮನೆಯಲ್ಲಿ ಜನಿಸಿದ್ದರೆ ತಾನು ಸುಖವಾಗಿರುತ್ತಿದ್ದನೇನೊ ಎಂದು ದುಃಖಪಟ್ಟಳು. ಎಲ್ಲರ ಬಳಿ ತನ್ನನ್ನು ಸ್ವತಂತ್ರಳನ್ನಾಗಿ ಬಿಡಿ, ಇಲ್ಲ ಮಗೂನಾದ್ರೂ ಸಾಕಿಕೊಳ್ಳೋಕೆ ಅವಕಾಶ ಕೊಡಿ ಅಂತ ಕೇಳುವ ಆಸೆ ಆದರೆ ಪುರುಷಸಮಾಜ ಹೆಣ್ಣಿನ ಬಾಯಿ ಮುಚ್ಚಿಸಿತು. ಹೀಗೆ ಸಾಯಲೂ ಅಂಜಿಕೆ, ಬದುಕಲು ಹೇಸಿಗೆ, ಈ ಸಂಕಟಗಳ ಮಧ್ಯೇ ಮಾಧವಿ ತೊಳಲಾಡಿದಲು. ನನ್ನ ಧರ್ಮ ಬರಿ ಮೌನವಾಗಿರುವುದು, ಯಾವ ಅನ್ಯಾಯಗಳಾದರೂ ಪ್ರತಿಭಟಿಸದೆ ಇರುವುದು ಮಾತ್ರ. ಈ ನಾಲ್ವರೂ ನನ್ನನ್ನು ಪ್ರೀತಿಸಲೇ ಇಲ್ಲ, ಕಾಮಿಸಿದರಷ್ಟೇ. ತನ್ನ ತಂದೆ ಯಯಾತಿ ಯಾವ ತಂದೆಯೂ ಮಾಡದಬಾರದಂತಹ ಕೆಲಸ ಮಾಡಿದ, ಆತನಿಗೆ ಆ ಬಗ್ಗೆ ಕೊರಗೂ ಇಲ್ಲದಿರುವುದು ವಿಸ್ಮಯಕರ. ತಾನು ಹಿಂದಿರುಗಿ ಬರವುದಿಲ್ಲ ಎಂದು ಎಣಿಸಿರಬೇಕು, ಆದರೆ ೫ ವರ್ಷಗಳ ನಂತರ ಗಾಲವ ತಂದೆಗೆ ಒಪ್ಪಿಸಿದಾಗ ಅಂತರಾತ್ಮ ಕಟುಕುತ್ತದೆ. ಗಾಲವ ನಡೆದುದ್ದು ತಿಳಿಸಿದಾಗ ಪಾಪ ಪರಿಹಾರಕ್ಕೆ ಸ್ವಯಂವರ ಯೋಜನೆ ಹಾಕುತ್ತಾನೆ. ತನ್ನೆಲ್ಲ ದುಃಖಕ್ಕೆ ತಂದೆಯೇ ಮುಖ್ಯಕಾರಣ, ಗಾಲವನಿಗೆ ದಾನವೇ ಕೊಡದಿದ್ದರೆ ತನಗೆ ಬೇಕಿರುವ ವರನನ್ನು ಮದುವೆಯಾಗಿ ಸುಖದಿಂದಿರುತ್ತಿದ್ದನೇನೋ ಎಂದು ಸ್ವಯಂವರದ ಸಭಾ ಮಧ್ಯದಿಂದ ಎದ್ದು ಕಾಡಿನಲ್ಲಿ ಮರೆಯಾಗುತ್ತಾಳೆ.
ಮಾಧವಿ, ಒಂದು ಪೌರಾಣಿಕ ಕಥಾವಸ್ತು. ಪುರುಷ ಪ್ರಧಾನತೆಯಲ್ಲಿ ಹೆಣ್ಣು ಹೇಗೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾಳೆ,ಅವಳ ಸಂಪೂರ್ಣ ಸ್ವಾತಂತ್ರ್ಯವನ್ನು ಹರಣ ಮಾಡಿ ಪುರುಷನು ತನ್ನ ಮನೋಭೀಷ್ಟಕ್ಕೆ ಅವಳನ್ನು ಬಳಸಿಕೊಂಡು ನರಕ ದರ್ಶನ ಮಾಡಿಸುವ ಹೃದಯವಿದ್ರಾವಕ ಸನ್ನಿವೇಶಗಳ ಚಿತ್ರಣ. ಪ್ರಸ್ತುತ ಆಧುನಿಕ ಯುಗದಲ್ಲಿ ಸಹ ಮಹಿಳಾ ಸಮಾಜದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ಇದಕ್ಕೆ ಹೋಲಿಕೆ ಮಾಡಬಹುದಾಗಿದೆ.
ಒಬ್ಬ ಅಸಹಾಯಕ ಹೆಣ್ಣಿನ ಕತೆ. ಜ್ಞಾನಾರ್ಜನೆಗೆ ರಿಷಿ ಮುನಿಗಳು ಅಥವಾ ಗುರುಗಳು, ಧರ್ಮಕ್ಕೆ ರಾಜ ಎಂದು ಕೇಳಿರುವ ನಮಗೆ ಈ ಕತೆ ಹಲವಾರು ಪ್ರಶ್ನೆ ಹುಟ್ಟು ಹಾಕುತ್ತೆ. ಹೆಸರಿಗಷ್ಟೇ ಹೆಣ್ಣು ಆಗ ಪೂಜ್ಯ. ಆದರೆ ಈಗ ಪೂಜ್ಯ ಅನ್ನುವುದಕ್ಕೆ ಅರ್ಥವಿಲ್ಲದಿದ್ದರೂ, ಸ್ವತಂತ್ರ ಸಿಕ್ಕಿದೆ ಹಾಗೆ ಇಷ್ಟೊಂದು ಹೀನಾಯ ಸ್ಥಿತಿ ಕಡಿಮೆಯಾಗಿದೆ. ತನ್ನ ಬೆಲೆ ತನಗೇ ಅರಿವಾಗಿದೆ ಈಗ. ಹಾಗಾಗಿ ಎಲ್ಲಿ ಎದುರು ತಿರುಗಬೇಕು ಅರಿವಾಗಿದೆ. ಆಗಿನ ಈ ರೀತಿಯ ಬಾಳು ಪ್ರಾಣಿಗಿಂತ ಹೀನಾಯ.
Clearly speaks the mind of a young woman, the difficulties faced by ancient women where they didn't have a voice and finally goes on to tell how strong a woman can be! Madhavi is an inspiration