೨ ೦ ೨ ೨ ರಿಂದ ಹಂತ ಹಂತವಾಗಿ ಭೈರಪ್ಪವರನ್ನ ಓದಿಕೊಂಡು ಬಂದಿದ್ದೇನೆ, ೨ ೦ ೨ ೫ ರಲ್ಲಿ ಅದೂ ವರ್ಷದ ಏಳನೇ ತಿಂಗಳ ಕೊನೆಯಲ್ಲಿ ಅವರ ಮೊದಲ ಕೃತಿಯನ್ನು ಇವತ್ತು ಓದಿ ಮುಗಿಸಿದೆ. ಭೈರಪ್ಪನವರು ಬರೆದಿದ್ದೆಲ್ಲವೂ ಕಾದಂಬರಿಗಳೇ, ಒಂದಷ್ಟು ಸಾಹಿತ್ಯ ಚಿಂತನ ಗ್ರಂಥಗಳನ್ನೂ ಬರೆದಿದ್ದಾರೆ. “ಗತಜನ್ಮ ಮತ್ತೆರಡು ಕತೆಗಳು” ಅವರ ಏಕಮಾತ್ರ ಕಥಾಸಂಕಲನ. ಗತಜನ್ಮ ಕಥೆಯನ್ನ ಭೈರಪ್ಪನವರು ತಮ್ಮ ಹೈಸ್ಕೂಲ್ ದಿನಗಳಲ್ಲಿ ಬರೆದಿದ್ದರೆ , ಮತ್ತೆರಡು ಕಥೆಗಳನ್ನ ೧ ೯ ೬ ೮ -೬ ೯ರ ಸುಮಾರಿನಲ್ಲಿ ಬರೆದಿರುವಂತಹವು.
ಮೊದಲನೇ ಕತೆ “ಗತಜನ್ಮ” ಒಂದು ರೀತಿಯಲ್ಲಿ ಮನಕುಲುಕುವಂತಹ ಕರುಣಾಜನಕ ಕತೆ, ಆದರೆ ಇಲ್ಲಿ ಬರವಣಿಗೆಯ ದೃಷ್ಟಿಯಲ್ಲಿ ಮೂರು ವರ್ಷಗಳಲ್ಲಿ ನನಗೆ ಕಂಡ ಭೈರಪ್ಪನವರು ಸ್ವಲ್ಪವೂ ಕಾಣಲೇ ಇಲ್ಲ, ಬರವಣಿಗೆಯಲ್ಲಿ ಅಪ್ರವೀಣತೆ ಎದ್ದು ತೋರುತ್ತಿತ್ತು. ಅವರ ಬರವಣಿಗೆಯಲ್ಲಿನ ತೀಕ್ಷ್ಣ ಚಲನೆ ಇಲ್ಲಿರಲಿಲ್ಲ. ಆ ಕಾಲಕ್ಕೆ ಹೈಸ್ಕೂಲ್ ಹುಡುಗ ಇಷ್ಟಲ್ಲದೆ ಮತ್ತೇನನ್ನು ಬರೆಯುವುದು ಸಾಧ್ಯ ? ಬರವಣಿಗೆಯ ವಿಷಯವಾಗಿ ನನಗೆ ಓಕ್ಟಾವಿಯ ಇಂಗ್ಲೀಷಿನಲ್ಲಿನ ಹೇಳಿದ ಒಂದು ಮಾತು ನೆನಪಾಗುತ್ತೆ, “You don’t start out writing good stuff. You start out writing crap and thinking it’s good stuff, and then gradually you get better at it.” ಭೈರಪ್ಪನವರು ಗತಜನ್ಮ ಬರೆದ್ರು, and the rest is history.
ಮತ್ತೆರಡು ಕತೆಗಳು, “ಸತ್ತಿಲ್ಲ” ಮತ್ತು “ಸಂಬಂಧ” ಇವು ಭೈರಪ್ಪನವರು ಪ್ರಥಮವರ್ಗದ ಕಾದಂಬರಿಕಾರರಾದಮೇಲೆ ಬರೆದಿರುವಂತಹವು, “ವಂಶವೃಕ್ಷ ಮತ್ತು ತಬ್ಬಲಿಯು ನೀನಾದೆ ಮಗನೆ” ಕಾದಂಬರಿಗಳನ್ನು ಬರೆದಮೇಲೆ ಬಂದಂತಹ ಕತೆಗಳಿವು. Both stories are absolute gems, beautifully written and unforgettable. “ಸತ್ತಿಲ್ಲ” ಎನ್ನುವ ಕತೆ ಸಾವಿನ ಕುರಿತಾದದ್ದು, ಎರಡು ವಯೋಮಾನದ ಪಾತ್ರಗಳು ಸಾವನ್ನು ಅನ್ವೇಷಿಸುವ ರೀತಿಯನ್ನ ಇಲ್ಲಿ ಕಾಣಬಹುದು. ಇನ್ನು “ಸಂಬಂಧ” ಹೆಸರಿನ ಕತೆ ಹುಟ್ಟಿನ ಕುರಿತಾದದ್ದು, ಕರುಳ ಬಳ್ಳಿ, ಮಾತೃಪ್ರೇಮ ಸಂಬಂಧವನ್ನೂ ಮೀರುವದನ್ನು, ಎಂದಿನ ಭೈರಪ್ಪನವರ ಪಾತ್ರಗಳು ಅನುಭವಿಸುವ ಅಂತರಂಗದ ವೇದನೆಯನ್ನ ಜಿಜ್ಞಾಸೆಯನ್ನ ಕಾಣಬಹುದು.
- ವಸಂತ್
೨ ೫ /೦ ೭ /೨ ೦ ೨ ೫