ದ್ಯಾವನೂರು, ದೇವನೂರು ಮಹಾದೇವ ಬರೆದಿರುವ 7 ಕಥೆಗಳ ಸಂಕಲನ.... ಈ 7 ಕಥೆಗಳು ಅತಿ ಸಣ್ಣ ಕಥೆಗಳು, ಅಂದರೆ ಇಲ್ಲಿಯ ಯಾವ ಕಥೆಗಳು 10 ಪುಟ ದಾಟಿಲ್ಲ...ಆದರೆ ಹೇಳಿರುವ ವಿಷಯದ ಆಳ ಮತ್ತು ಪ್ರಬುದ್ಧತೆ ಬಹಳ ವಿಸ್ತಾರವಾದದ್ದು... ಇದೇ ಸಂಕಲನದ "ಡಾಂಬರು ಬಂದುದು" ಕಥೆ ನಾವೆಲ್ಲ ಶಾಲೆಯಲ್ಲಿ ಓದೇ ಇರುತ್ತೇವೆ... ಬಹುತೇಕ ಕಥೆಗಳನ್ನು ನೀರ್ಗಣ್ಣಿನಲ್ಲೇ ಓದಿದ್ದೇನೆ...