Jump to ratings and reviews
Rate this book

ಕಮ್ಮಾರ ವೀರಭದ್ರಾಚಾರಿ

Rate this book

289 pages, Paperback

Published January 1, 2004

Loading...
Loading...

About the author

Goruru Ramaswamy Iyengar

27 books58 followers
ಗೊರೂರು ರಾಮಸ್ವಾಮಿ ಅಯ್ಯಂಗಾರ್(ಜುಲೈ ೪, ೧೯೦೪ - ಸೆಪ್ಟೆಂಬರ್ ೮, ೧೯೯೧) ತಮ್ಮ ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿದವರು. ಸ್ವಾತಂತ್ರ್ಯ ಚಳುವಳಿ, ಮೈಸೂರಿನಲ್ಲಿ ಪ್ರಜಾ ಸರ್ಕಾರಕ್ಕಾಗಿ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಹೋರಾಡಿ ಹರಿಜನೋದ್ಧಾರ ಮತ್ತು ಗ್ರಾಮೊದ್ಧಾರಕ್ಕಾಗಿ ಶ್ರಮಿಸಿದ ಅವರೊಬ್ಬ ಅಪ್ರತಿಮ ಗಾಂಧಿವಾದಿ. ಗೊರೂರು ಗ್ರಾಮ, ಹೇಮಾವತಿ ನದಿ – ಈ ಎರಡೂ ಗೊರೂರರ ಸಾಹಿತ್ಯದಿಂದ ಅಮರವಾದವು. ‘ಹೇಮಾವತಿ’, ಆ ಸಾಹಿತ್ಯ ಸಮಸ್ತಕ್ಕೂ ಸ್ಪೂರ್ತಿ. ಹೀಗೆ ಒಂದು ಊರಿನೊಡನೆ, ನದಿಯೊಡನೆ ಅಭಿನ್ನತೆ ಸಾಧಿಸಿದ ಲೇಖಕರು ವಿರಳವೇ. ‘ಹಳ್ಳಿಯ ಚಿತ್ರಗಳು’, ‘ಗರುಡಗಂಬದ ದಾಸಯ್ಯ’, ‘ನಮ್ಮ ಊರಿನ ರಸಿಕರು’, ‘ಬೆಟ್ಟದ ಮನೆಯಲ್ಲಿ ಮತ್ತು ಇತರ ಪ್ರಬಂಧಗಳು’, ‘ಕಥೆಗಳು ಮತ್ತು ವಿನೋದ ಚಿತ್ರಗಳು’, ‘ಬೆಸ್ತರ ಕರಿಯ’, ‘ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳು’ – ಈ ಸಂಕಲನಗಳಲ್ಲಿನ ಗೊರೂರರ ಪ್ರಬಂಧಗಳಲ್ಲಿ ಕಥಾಂಶ ದಟ್ಟವಾಗಿ ಸೇರಿಕೊಂಡಿವೆ. ಆದ್ದರಿಂದ ಗೊರೂರರ ಪ್ರಬಂಧಗಳು, ‘ಪ್ರಬಂಧ’ ಎಂಬ ಶಬ್ದದ ಸೀಮಿತ ಅರ್ಥಕ್ಕಿಂತ ಹೆಚ್ಚಿನ ವ್ಯಾಪ್ತಿಯುಳ್ಳದ್ದು ಎಂಬುದು ಗಮನಾರ್ಹ. ಗೊರೂರರ ಬರವಣಿಗೆ ಅಪರೂಪದ್ದು ಮತ್ತು ಅವರಿಗೇ ಅನುರೂಪವಾದದ್ದು. ಗೊರೂರರು ಸೆಪ್ಟೆಂಬರ್ 28, 1991ರಲ್ಲಿ ನಿಧನರಾದರು.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
6 (60%)
4 stars
3 (30%)
3 stars
1 (10%)
2 stars
0 (0%)
1 star
0 (0%)
Displaying 1 - 2 of 2 reviews
Profile Image for Prashanth Bhat.
2,340 reviews147 followers
September 12, 2018
ಕಮ್ಮಾರ ವೀರಭದ್ರಾಚಾರಿ - ಗೊರೂರು ರಾಮಸ್ವಾಮಿ ಅಯ್ಯಂಗಾರ್

ಮೂವತ್ತು ಕತೆಗಳ ಹೊಂದಿರುವ ಈ ಪುಟ್ಟ ಪುಸ್ತಕ. ಒಂದು ಬೀಸಿನಲ್ಲಿ ಬಾಳಿನ ಏಳು ಬೀಳುಗಳ ಪರಿಚಯಿಸುತ್ತದೆ. ಗೊರೂರರ ಸರಳ ಭಾಷೆ ,ಅವರದೇ ವಿಶಿಷ್ಟವಾದ ಹಳ್ಳಿಯ ಪರಿಸರ ಮತ್ತು ಪಾತ್ರಗಳು, ತಿಳಿ ಹಾಸ್ಯದ ನಿರೂಪಣೆ ಇವೆಲ್ಲ ಓದನ್ನು ಖುಷಿಯ ಪಯಣವಾಗಿಸುತ್ತದೆ. ಕ್ಷೌರಿಕನಂಗಡಿಯ ಪ್ರಸಂಗ , ಅಳಿಯ ಹಬ್ಬಕ್ಕೆ ಬರುವ ಪ್ರಸಂಗ ಇವೆಲ್ಲ ಗಟ್ಟಿಯಾಗಿ ನಗುವಷ್ಟು ಚೆನ್ನಾಗಿದೆ. ಇವನ್ನು ಕತೆಗಳು ಎನ್ನುವುದಕ್ಕಿಂತ ಪ್ರಸಂಗಗಳು ಅಂದರೆ ಸೂಕ್ತ.
ಗೊರೂರರ ಪುಸ್ತಕ ಓದುವಾಗ ಒಂದು ನೆಮ್ಮದಿ ದೊರೆಯುತ್ತದಲ್ಲ ಅದು ವಿರಳಾತಿ ವಿರಳ.
ಸಂದು ಹೋದ ಕಾಲದ ನೆನಪಿನ ತುಣುಕುಗಳು ಇವು!
Displaying 1 - 2 of 2 reviews