K.P. Purnachandra Tejaswi was a prominent Kannada writer, novelist, photographer, ornithologist, publisher, painter and environmentalist. He made a great impression in the "Navya" period of Kannada literature and and inaugurated the bandaya sahitya.
Tejaswi was born on September 8, 1938. His father is the famous poet, Rashtrakavi Kuvempu. He completed his education in Mysore. Tejaswi has written in almost all forms of literature including poems, short stories, novels, travel literature, plays and science fiction. He has translated several English books to Kannada. His famous translations include the series on Kenneth Anderson's hunting expeditions and Henri Charrière's Papillon.
He has won several awards for his contribution to literature such as the Rajyotsava and Kannada Sahitya Academy awards.
Poornachandra Tejaswi died of cardiac arrest at the age of 69
ಅಂದೊಂದು ದಿನ ಆಗುಬೆಂಯ ಯಾವುದೋ ಒಂದು ಕಾಡಿನ ಮಧ್ಯದ ಊರಿನಲ್ಲಿ ನಡೆಯುತ್ತಿದ್ದ ಜಾತ್ರೆಯ ಪುಸ್ತಕದಂಗಡಿಯಲ್ಲಿ ನಡುರಾತ್ರಿ ಕೊಂಡುಕೊಂಡ ಕಾಡಿನ ಕತೆಗಳು ಸರಣಿಯ ಪುಸ್ತಕಗಳು ಕಾಪಾಟಿನಲ್ಲಿ ಮತ್ತೆ ಕಂಡಿದ್ದು ಇಂದು. ಕೆನೆತ್ ಆ್ಯಂಡರ್ಸನ್ ಅವರ ರೋಮಾಂಚನಕಾರಿ ಬೇಟೆಯ ಅನುಭವಗಳನ್ನು ಮನ ಮುಟ್ಟುವಂತೆ ಅನುವಾದಿಸಿದ್ದಾರೆ ನಮ್ಮ ತೇಜಸ್ವಿಯವರು. ಈ ಪುಸ್ತಕ ಓದುವಾಗ ಸಿಗುವ ಅನುಭವ ವಿಶೇಷವಾದುದ್ದು. ಕೆನೆತ್ ಆಂಡರ್ಸನ್ ಅವರ ಧೈರ್ಯ ಹಾಗು ಆ ಗಾಢ ರಾತ್ರಿಗಳಲ್ಲಿ ನರಭಕ್ಷಕ ಪ್ರಾಣಿಗಳ ಬೇಟೆಯಾಡಿರುವ ಆ ಅನುಭವಗಳ ವಿವರಣೆಗಳು ಒಂದು ಕ್ಷಣ ಮೈಜುಂ ಅನ್ನಿಸುತ್ತದೆ. ಈಗಿನ ಮಹಾನಗರದ ಜಾಲಹಳ್ಳಿಯು 90 ವರ್ಷಗಳ ಹಿಂದೆ 150 ಮನೆಗಳಿರುವ ಒಂದು ಸಾಮನ್ಯ ಹಳ್ಳಿಯಾಗಿತ್ತಂತೆ, ಅಲ್ಲಿನ ಚಿಕ್ಕಕಾಡಲ್ಲಿ ಒಂದು ಕುರ್ಕ ಮನುಷ್ಯರ ಮೇಲೆ ದಾಳಿ ಮಾಡಿತ್ತಂತೆ. ಆ ಕುರ್ಕದ ಬೇಟೆಯು ತುಂಬ ಸಾಹಸಮಯವಾಗಿತ್ತು. ಇದಲ್ಲದೆ ಆಂಧ್ರಪ್ರದೇಶದ ದಿಗುವಮೆಟ್ಟದಲ್ಲಿನ ನರಭಕ್ಷಕ ಚಿರತೆ ಹಾಗು ಮಂಚಿಹಳ್ಳಿಯ ನರಭಕ್ಷಕ ಹುಲಿಯ ಬೇಟೆಯ ದೃಶ್ಯ ಕಣ್ಮುಂದೆ ಬಂದಂತಾಯಿತು. ಈ ಮೂರು ಬೇಟೆಯ ಕತೆಯಲ್ಲದೆ ಹಂತಕ, ಕಾಡ್ಗಳ್ಳ, ಡಕಾಯಿತ ಮಮ್ಮಟಿವಾಯನ್‌ನ ಬೇಟಿಮಾಡಿರುವ ಅನುಭವಗಳು ಕೂಡ ತುಂಬ ಚನ್ನಾಗಿತ್ತು. ಕೆನೆತ್ ಆಂಡರ್ಸನ್‌ನ ಬದಲು ನಾವೇ ರೈಫಲ್‌ನನ್ನು ಬಗಲಿಕೆ ತಗುಲಿಸಿಕೊಂಡು ಆ ಕಡುಕತ್ತಲೆಯ ನಡುಕಾಡಲ್ಲಿ ಹುಲಿ ಹೊಂಡೆದಂತೆ ಅನುಭವ ಈ ಪುಸ್ತಕ ಕೊಟ್ಟಿತು.
ಕೆನೆತ್ ಆ್ಯಂಡರ್ಸನ್ ರವರ ನರಭಕ್ಷಕ ಹುಲಿ ಮತ್ತು ಚಿರತೆಯ ಶಿಕಾರಿಗಳನ್ನು ಕಾಡಿನ ಕಥೆಗಳನ್ನಾಗಿ ಅತ್ಯಂತ ಭಾವನಾತ್ಮಕವಾಗಿ ಕನ್ನಡೀಕರಿಸಿದ್ದಾರೆ ತೇಜಸ್ವಿಯವರು. ಬರಿ ಶಿಕಾರಿಯ ಬಗ್ಗೆ ಬರೆಯದೆ, ಕಾಡಿನ ಸೌಂದರ್ಯ, ಕಾಡು ಪ್ರಾಣಿಗಳ ಜೀವನ ಶೈಲಿ ಅಲ್ಲದೆ ಕಾಡು ಜನರ ಒಡನಾಟವನ್ನೂ ಅಷ್ಟೇ ಜಾಗರೂಕತೆಯಿಂದ ವರ್ಣಿಸಿದ್ದಾರೆ ಲೇಖಕರು. ಇನ್ನು ತೇಜಸ್ವಿಯವರ ಪುಸ್ತಕಗಳು ಪರಿಸರದ ಕಾಳಜಿ, ಕಾಡಿನ ಮಹತ್ವ ಮತ್ತು ಕಾಡು ಜೀವಿಗಳ ಅವಶ್ಯಕತೆಯನ್ನು ಒತ್ತಿ ಹೇಳುತ್ತವೆ. ಅವರ ಪುಸ್ತಕಗಳನ್ನು ಓದುವುದೇ ಒಂದು ಸುಖ.
ಕೆನೆತ್ ಆಂಡರ್ಸನ್ನನ ಮೂಲ ಕೃತಿ ಓದದಿದ್ದರೂ ಇದನ್ನು ತೇಜಸ್ವಿಯವರು ಕನ್ನಡಕ್ಕೆ ಅನುವಾದ ಮಾಡಿದ್ದರ ಪ್ರಾಮುಖ್ಯತೆ ಎಷ್ಟು ಎಂಬುದು ಅರಿವಾಗುತ್ತದೆ. ಆ ಕಾಲದ ಕರ್ನಾಟಕದ ಕಾಡು, ಪ್ರಾಣಿಗಳ ಪರಿಚಯವಾಗುವಂತಹ ಸಂಗತಿಗಳುಳ್ಳ ಕಥಾನಕಗಳು. ಕಾಡು, ಹುಲಿ, ಚಿರತೆಗಳ ಬಗೆಗಿನ ಕಥೆಗಳು ಅದ್ಭುತವಾಗಿದೆ. ಕಾಡೊಳಗೆ ಶಿಕಾರಿಗಾಗಿ ಅಲೆದಾಡಿ ಬಂದಂತೆ ಅನಿಸುತ್ತದೆ.
ಅಗಾಧ ಅನುಭವ, ನಾವೇ ಶಿಕಾರಿ ಹೊರಟು ಹುಲಿಯು ಕಣ್ಮುಂದೆ ಬಂದ ಅನುಭವ. ಹುಲಿಯ ಅಂತರಂಗಕ್ಕೂ, ಮನುಷ್ಯನ ಬಹಿರಂಗ ಜೀವನಕ್ಕೂ ಇರುವ ಭಯ, ಮನುಷ್ಯನ ಭೂಮಿ ಆಸೆಗೆ ಕಾಡು ಕ್ಷೀಣಿಸಿದಂತೆ, ಮೃಗಗಳು ಕ್ರೂರವಾಗಿ ಮನುಷ್ಯನ ಮಾಂಸ ರುಚಿ ಕಂಡು ಮತ್ತೆ ಮತ್ತೆ ಭೇಟೆಯಾಡುವ ತುಮುಲ. ಹುಲಿಯ ಹಾವ ಭಾವ ಮನಸ್ಥಿತಿ ಯೋಚನೆ ಗಳನ್ನು ಈ ಎಲ್ಲ ಕೃತಿಗಳು ಅಚ್ಚುಕಟ್ಟಾಗಿ ತೆರೆದಿಡುತ್ತವೆ. ಮೃಗಾಲಯಕ್ಕೆ ಹೋಗಿ ಹುಲಿ, ಸಿಂಹ, ಕಾಡಾನೆ, ಜಿಂಕೆ ಇತ್ಯಾದಿ ಪ್ರಾಣಿಗಳನ್ನು ನೋಡಿದಾಗ ಈ ಕೃತಿಯು ನಮ್ಮೊಳಗೆ ಗೊತ್ತಿಲ್ಲದಂತೆ ಅವುಗಳ ಚಲನೆಗಳನ್ನು ಪರಾಮರ್ಶಿಸುತ್ತದೆ. ಕೆನೆತ್ ಆ್ಯಂಡರ್ಸನ್ ರವರ ನರಭಕ್ಷಕ ಹುಲಿ ಮತ್ತು ಚಿರತೆಯ ಶಿಕಾರಿಗಳನ್ನು ಕಾಡಿನ ಕಥೆಗಳನ್ನಾಗಿ ಅತ್ಯಂತ ಭಾವನಾತ್ಮಕವಾಗಿ ಕನ್ನಡೀಕರಿಸಿದ್ದಾರೆ ತೇಜಸ್ವಿಯವರು. ಬರಿ ಶಿಕಾರಿಯ ಬಗ್ಗೆ ಬರೆಯದೆ, ಕಾಡಿನ ಸೌಂದರ್ಯ, ಕಾಡು ಪ್ರಾಣಿಗಳ ಜೀವನ ಶೈಲಿ ಅಲ್ಲದೆ ಕಾಡು ಜನರ ಒಡನಾಟವನ್ನೂ ಅಷ್ಟೇ ಜಾಗರೂಕತೆಯಿಂದ ವರ್ಣಿಸಿದ್ದಾರೆ ಲೇಖಕರು. ಇನ್ನು ತೇಜಸ್ವಿಯವರ ಪುಸ್ತಕಗಳು ಪರಿಸರದ ಕಾಳಜಿ, ಕಾಡಿನ ಮಹತ್ವ ಮತ್ತು ಕಾಡು ಜೀವಿಗಳ ಅವಶ್ಯಕತೆಯನ್ನು ಒತ್ತಿ ಹೇಳುತ್ತವೆ. ಅವರ ಪುಸ್ತಕಗಳನ್ನು ಓದುವುದೇ ಒಂದು ಸುಖ.
ಇದು ಭಾವಾನುವಾದವಾಗಿರುವುದರಿಂದ, ಕನ್ನಡದಲ್ಲಿ ಓದಿದಾಗ ಅದೇ ಶಿಕಾರಿಯ ಕಥೆಯ ಅನುಭವವಾಯಿತು. ಈ ಕಥೆಗಳು ದಕ್ಷಿಣ ಭಾರತದ ಸಹ್ಯಾದ್ರಿಯ ನಿತ್ಯಹರಿದ್ವರ್ಣದ ಕಾಡುಗಳು , ಕುರುಚಲು ಕಾಡುಗಳಲ್ಲಿ ನಡೆದವು. ಇಲ್ಲಿನ ಸೋಲಿಗರು , ಜೇನು ಕುರುಬರ ಜೀವನದ ಬಗ್ಗೆಯು ಬೆಳಕೊಡ್ಡುತ್ತದೆ.
ಸಾಮಾನ್ಯವಾಗಿ ಯಾವುದೇ ಪ್ರಾಣೀಯೂ ಹುಟ್ಟುತ್ತಾ ನರಭಕ್ಷಕವಾಗಿರುವುದಿಲ್ಲ. ಇದು ಮನುಷ್ಯರ ಕಾರಣದಿಂದ ನರಭಕ್ಷಕವಾಗುವ ಪ್ರಸಂಗಗಳೇ ಹೆಚ್ಚು.ಬೆಳ್ಳಂದೂರಿನ ಹುಲಿಯನ್ನು ಅಲ್ಲಿಯ ಜನರು ಕಟುವಾಗಿ ಹಿಂಸಿಸಿ ಗಾಯಗೊಳಿಸಿದ್ದರಿಂದಲೇ ಅದು ನರಭಕ್ಷಕವಾಗಿ ಹಲವಾರು ಜನರ ಬಲಿ ತೆಗೆದುಕೊಂಡಿತು. ನಂತರ ಆಂಡೆರ್ಸನ್ ಅವರ ಉಪಾಯ ಹಾಗೂ ಅಗಾಧ ಧೈರ್ಯದಿಂದ ಅದನ್ನು ಬೇಟೆಯಾಡಲಾಯಿತು..
ಈ ಕೃತಿಯನ್ನು ತರ್ಜುಮೆ ಅಂತ ಹೇಳೋದು ತುಂಬಾ ಕಷ್ಟ. ಅಷ್ಟು ಅಚ್ಚುಕಟ್ಟಾಗಿ ನಮಗೆ ಬೆಲ್ಲದ ಪಾನಕ ಥರ ಹಂಚಿದ್ದಾರೆ ಲೇಖಕರು.