Jump to ratings and reviews
Rate this book

ಶೂದ್ರ ತಪಸ್ವಿ | Shudra Tapasvi

Rate this book
According to Valmiki Ramayana, Shambuka, a shudra ascetic, was slain by Rama for attempting to perform penance. This act of Shambuka was seen by Rama as violation of dharma as he believed that the bad karma, resulting from this act, caused the death of a Brahmin's son in his kingdom.
In this play, celebrated Kannada poet Kuvempu shows Rama as having to both carry out his duty by punishing Shambuka, and simultaneously protect Shambuka, as a pious and devout sage, from persecution, and thereby turns the story into a critique of Brahminical attitudes and a defense of Rama.

Paperback

47 people are currently reading
513 people want to read

About the author

Kuvempu

65 books562 followers
Kuppali Venkatappa Puttappa widely known by the pen name Kuvempu was a Kannada writer and poet, widely regarded as the greatest poet of 20th century Kannada literature. He is immortalised by some of his phrases, and in particular for his contribution to Universal Humanism or in his own words Vishwa maanavataa Vaada. He has penned the Karnataka State anthem Jaya Bharata Jananiya Tanujate.

He has written several Poems, stories and plays. His work Sri Ramayana Darshanam, the rewriting of the great ancient Indian epic Ramayana in modern Kannada, is regarded as revival of the era of Mahakavya (Epic poetry) in a contemporary form and charm.

He has received several awards for his works in the field of literature such as, Jnanpith Award, Sahitya Akademi Award , Pampa Award , Karnataka Ratna. He has also received The Padma Bhushan, the third highest civilian award in the Republic of India and Padma Vibhushan, the second highest civilian award in the Republic of India. He is the second among Kannada poets to be revered as Rashtrakavi

His son K P Poornachandra Tejaswi was a famous writer as well.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
45 (45%)
4 stars
31 (31%)
3 stars
10 (10%)
2 stars
6 (6%)
1 star
6 (6%)
Displaying 1 - 7 of 7 reviews
Profile Image for Nayaz Riyazulla.
456 reviews93 followers
November 12, 2025
ಎರಡನೇ ಓದಿಗೆ ಒಂದು ಟಿಪ್ಪಣಿ

ಮೊನ್ನೆ ಹೆಚ್ ಎಸ್ ರಾಘವೇಂದ್ರ ರಾಯರು ನಡೆಸಿಕೊಟ್ಟ ಕುವೆಂಪುರ ಸಾಹಿತ್ಯದ ಮೇಲಿನ ಉಪನ್ಯಾಸವನ್ನು ಕೇಳುತ್ತಿರುವಾಗ ಕುವೆಂಪುರ ನಾಟಕಗಳ ಮೇಲೆ ಹಿರಿದಾದ ಮಾತೊಂದನ್ನು ಹೇಳಿದರು. ಕುವೆಂಪುರ ನಾಟಕಗಳು ಪ್ರಸ್ತುತ ಮತ್ತು ಭವಿಷ್ಯದ ಸಮಸ್ಯೆಗಳಿಗೆ ಪುರಾಣದ ಕಥೆಗಳ ಮೂಲಕ ಸಂದೇಶವನ್ನು ಅಥವಾ ಉತ್ತರವನ್ನು ಕಂಡುಕೊಳ್ಳುವ ಕಾರ್ಯ ಮಾಡುತ್ತವೆ ಎಂಬುದು. ಈ ಮಾತಿಗೆ ಉತ್ತಮವಾದ ಉದಾಹರಣೆ ಬಹುಷಃ ಈ ನಾಟಕ. ಈ ನಾಟಕ ಕೊಡುವ ರಸಾನುಭವ ವಿವರಿಸಲಸಾಧ್ಯ. ಕುವೆಂಪುರವರೇ ಹೇಳುವಂತೆ ಈ ನಾಟಕ ಹೊರಗಡೆಯ ಅಲ್ಪವೇದಿಕೆಯ ಮೇಲೆ ಕೃತಕಾಭಿನಯದಿಂದ ಪ್ರದರ್ಶಿಸುವುದು ಅಸಾಧ್ಯ, ಆದ್ದರಿಂದ ಕಲ್ಪನಾ ತಪಸಾಧ್ಯವಾದ ಮನೋ ರಂಗಭೂಮಿಯಲ್ಲಿಯೆ ಅದನ್ನು ಸೃಷ್ಟಿಸಿ ದೃಷ್ಟಿಸಬೇಕು.


ಮೊದಲ ಓದಿನ ಅನಿಸಿಕೆ

ಕಾವ್ಯೇಷು ನಾಟಕಂ ರಮ್ಯಂ ಎಂಬ ಕಾಳಿದಾಸನ ಪ್ರಸಿದ್ಧ ಮಾತಿದೆ... ಇದನ್ನು ಕನ್ನಡದ ಓದುಗ ಒಪ್ಪಿಕೊಂಡಿಲ್ಲ ಎಂಬುದೇ ಬಹಳ ನೋವಿನ ಸಂಗತಿ... ಒಪ್ಪಿದ್ದೆ ಆಗಿದ್ದರೆ ಕುವೆಂಪುರವರಿಂದ ಇಂತಹ ಅನೇಕ ಅಮೋಘ ನಾಟಕಗಳು ಮೂಡಿ ಬರುತ್ತಿತ್ತೇನೋ...

ಈ ನಾಟಕ ರಾಮಾಯಣದ ಘಟನೆಯೊಂದನ್ನು ಆಧಾರಿಸಿ ರಚಿಸಲ್ಪಟ್ಟಿದೆ... ಶಂಬುಕ ಎಂಬ ಶೂದ್ರ ತ್ರೇತಾಯುಗದಲ್ಲಿ ತಪಸ್ಸನು ಆಚರಿಸಿದ್ದಕ್ಕೆ ಊರ ಹಿರಿಯರು ರಾಮನ ಬಳಿ ದೂರನ್ನು ಕೊಟ್ಟಾಗ ರಾಮ ಇದು ಅಧರ್ಮವೆಂದು ತೀರ್ಪುನ್ನು ನೀಡಿ ಶಂಬುಕನ ಶಿರಶ್ಚೇಧ ಮಾಡುತ್ತಾನೆ, ಇದು ಮೂಲ ಕಥೆ..

ಇದನ್ನು ಕೊಂಚ ಬದಲಾಯಿಸಿ ಪುಟ್ಟಪ್ಪನವರು ನಾಟಕ ರಚಿಸಿದ್ದಾರೆ... ಇಲ್ಲಿ ಶಂಬುಕ ತಪ್ಪಸ್ಸನ್ನು ಆಚರಿಸಲು, ಒಬ್ಬ ಬ್ರಾಹ್ಮಣ ರಾಮನಲ್ಲಿ ದೂರು ನೀಡುತ್ತಾನೆ... ರಾಮನಿಗೆ ಇದಲ್ಲಿ ಅಧರ್ಮ ಕಾಣುವುದಿಲ್ಲ.. ಶಂಬುಕನ ಮೇಲೆ ಆತನಿಗೆ ಭಕ್ತಿಭಾವ ಮೂಡುತ್ತದೆ. ಬ್ರಾಹ್ಮಣನ ಬಲವಂತಕ್ಕೆ ರಾಮ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದಾಗ.. ಬ್ರಹ್ಮಾಸ್ತ್ರ ಶಂಬುಕನಿಗೆ ವಂದಿಸಿ ಬ್ರಾಹ್ಮಣನನ್ನು ಕೊಲ್ಲಲು ಬರುತ್ತದೆ.

ಆದರೆ ಬ್ರಾಹ್ಮಣ ಶಂಬುಕನಿಗೆ ವಂದಿಸಿ ತನ್ನ ತಪ್ಪಿನ ಅರಿವಾದಾಗ ಅಸ್ತ್ರ ಶಾಂತವಾಗುತ್ತದೆ.. ಇದು ನಾಟಕದ ವಸ್ತು.

ಈ ನಾಟಕ ಟೀಕೆ ಮತ್ತು ಪ್ರಶಂಸೆ ಎರಡನ್ನು ಸಮಾನವಾಗಿ ಗಳಿಸಿದ ಸೃಷ್ಟಿ... ಆದರೆ ಕುವೆಂಪುರವರು ಕೊನೆಯಲ್ಲಿ ಅವೆಲ್ಲಕ್ಕೂ ಉತ್ತರವಾಗಿ ಅದ್ಬುತ ಲೇಖನವೊಂದನ್ನು ಬರೆದಿದ್ದಾರೆ.. ಅಲ್ಲಿ ಅವರು ನಾಟಕದ ಮೂಲಕ ಹೇಳಲು ಪ್ರಯತ್ನಿಸಿರುವ ವಿಚಾರವು ತಿಳಿಯುತ್ತದೆ.

ಇನ್ನೂ ನಾಟಕದ ಭಾಷೆ ಒಂದು ಅನನ್ಯ ಅನುಭವ...
ರಾಮನನ್ನು ಪುಟ್ಟಪ್ಪನವರು ಎಷ್ಟು ಚೆನ್ನಾಗಿ ಪರಿಚಯಿಸುತ್ತಾರೆ ನೋಡಿ
"ಹರಧನುವ ಮುರಿದವನ್ ಸುರಧನಸ್ಸುದರುನ್
ಮೈಥಿಲಿ ಮನೋಹರನ್ ಕುಸುಮಕೋಮಲನ್
ನೀಲಮೇಘಶ್ಯಾಮನ್ ಗಿರಿವನಪ್ರಿಯನ್
ಅಂಜನಾಸುತ ಹೃದಯಮಿತ್ರನ್, ಪವಿತ್ರನ್
ಪಂಚವಟಿಯೋಳು ನಿಂದವನ್
ಗೋದಾವರಿಯ ಮಿಂದವನ್
ದೈತ್ಯಕೋಟಿಯ ಕೊಂದವನ್"

ಇನ್ನೂ ಶಂಬುಕನಿದ್ದ ಅರಣ್ಯ ಎಷ್ಟು ಚಂದವಿತ್ತು ಅಂತ ತಿಳಿಯುವುದಕ್ಕೆ ರಾಮನ ಸ್ವಗತವೊಂದು ಓದಿ
"ಸೀತೆಯನ್ ಅರಣ್ಯಕೆ ವಿಸರ್ಜಿಸಿದೀತಂಗೆ
ಅರಣ್ಯಮೆ ಸೀತೆಯಾಗಿರ್ಪಳ್!"
ವಾಹ್... ಎಂತ ಭಾಷಪ್ರಯೋಗ ಅಲ್ವಾ... ಇಂತ ಭಾಷೆಯ ಸೊಬಗು ನಾಟಕದ ಉದ್ದಕ್ಕೂ ಇದೆ...

ಈ ನಾಟಕವು ಕುವೆಂಪುರವರ ವಿಚಾರದ ಆಳ ಮತ್ತು ವಿಸ್ತಾರತೆಯನ್ನು ಸುಪೋಷ್ಟವಾಗಿ ಕಟ್ಟಿ ಕೊಡುತ್ತದೆ... ನಮ್ಮನ್ನು ಒಂದಿಂಚು ಬೆಳೆಸುತ್ತದೆ.o
Profile Image for Bharath Manchashetty.
205 reviews3 followers
January 16, 2026
“ಕುವೆಂಪುರವರ-ಶೂದ್ರ ತಪಸ್ವಿ ಪ್ರಕಟವಾಗಿದ್ದು ೧೯೪೪ ರಲ್ಲಿ ಆದರೂ ಇದರ ರಂಗರೂಪವನ್ನು ಇವತ್ತಿಗೂ ಪ್ರಯೋಗಿಸಲಾಗುತ್ತಿದೆ. ಕುವೆಂಪುರವರ ಕೃತಿಗಳೆಂದರೆ ಸಮಾನತೆ, ಮಾನವತಾವಾದ, ಜಾತಿವ್ಯವಸ್ಥೆ ಮತ್ತು ಮಾನವೀಯ ತತ್ವ ಕಾಣ್ಕೆಗಳ ಮಹಾಪೂರ ಎಂತಲೇ ನನ್ನ ಅನುಭವ. ಮೂರು ದೃಶ್ಯಗಳ ಪುಟ್ಟ ನಾಟಕವಾದರೂ ಕೃತಿಯ ಮೌಲ್ಯ ಬಹುದೊಡ್ಡ ಮಟ್ಟದ್ದು.

ಇದು ರಾಮಾಯಣದಲ್ಲಿ ಬರುವ ಶಂಭೂಕ ಮತ್ತು ರಾಮನ ಉಪಕಥೆ. ಒಬ್ಬ ಶೂದ್ರ ತಪಸ್ಸು ಮಾಡುವುದರಿಂದಾಗಿ ಒಬ್ಬ ಬ್ರಾಹ್ಮಣನ ಅಕಾಲಿಕ ಮರಣವಾಗುತ್ತದೆ ಮತ್ತು ಇದನ್ನು ತಿಳಿದ ರಾಮನು ಶಂಭೂಕನನ್ನು ಕೊಲ್ಲುತ್ತಾನೆ.. ಇದೇ ಕತೆಯ ಹುರುಳು. ಇದು ಪುಟ್ಟ ಸಂಧರ್ಭವೆನ್ನಿಸಿದರೂ ಪುರಾಣಗಳಲ್ಲಿ ಅಡಕವಾಗಿರುವ ವರ್ಣವ್ಯವಸ್ಥೆ, ಜಾತಿ ಪದ್ಧತಿಯನ್ನು ಕುವೆಂಪುರವರು ತನ್ನ ದಿವ್ಯದೃಷ್ಟಿಯಿಂದ ಸಮಾನತೆ ಸಾರುವುದರಲ್ಲಿ ಕೃತಿಯ ಮೂಲವನ್ನೇ ಬದಲಾಯಿಸಿದ್ದಾರೆ.

“ಶೂದ್ರತಪಸ್ವಿ” ಎಂಬ ಶೀರ್ಷಿಕೆ ಸ್ವತಃ ಒಂದು ಸಂಕೇತ. ಇಲ್ಲಿ ‘ಶೂದ್ರ’ ಎಂಬ ಪದವು ಕೇವಲ ಜಾತಿ ಸೂಚಕವಲ್ಲ, ಶ್ರಮಜೀವಿ, ಶೋಷಿತ, ಅಂಚಿನಲ್ಲಿರುವ ಮಾನವನ ಪ್ರತಿನಿಧಿಯಾಗಿದೆ. ‘ತಪಸ್ವಿ’ ಎಂಬುದು ತಪಸ್ಸು, ತ್ಯಾಗ ಮತ್ತು ಆತ್ಮಶೋಧನೆಯ ಸಂಕೇತ. ಈ ಎರಡೂ ಪದಗಳ ಸಂಯೋಜನೆಯ ಮೂಲಕ ಕುವೆಂಪು ಶ್ರಮವನ್ನೇ ತಪಸ್ಸಾಗಿ ಪರಿಗಣಿಸುವ ಮಾನವೀಯ ತತ್ವವನ್ನು ಮುಂದಿಡುತ್ತಾರೆ. ಆದರೆ ಇದನ್ನು ಬ್ರಾಹ್ಮಣರ ವಿರುದ್ಧ ಬರೆದ ಕೃತಿಯೆಂದು ಹಲವು ವಿಮರ್ಶಕರು ಟೀಕಿಸಿದ್ದಾರೆ. ಈ ಕೃತಿಯಲ್ಲಿ ಕುವೆಂಪು ಜಾತಿ ವ್ಯವಸ್ಥೆಯ ಅಮಾನವೀಯತೆಯನ್ನು ತೀವ್ರವಾಗಿ ಪರಾಂಬರಿಸಿ ಶೂದ್ರನು ಮಾಡುವ ಶ್ರಮವನ್ನು ಸಮಾಜ ಉಪಯೋಗಿಸಿಕೊಂಡರೂ, ಅವನಿಗೆ ಗೌರವ, ಸಮಾನತೆ ನೀಡದ ದೌರ್ಜನ್ಯವನ್ನು ಪ್ರಶ್ನಿಸುತ್ತಾರೆ. ಶ್ರಮವೇ ಜೀವನದ ಪವಿತ್ರ ಕ್ರಿಯೆ; ಅದನ್ನು ಮಾಡುವವನು ತಪಸ್ವಿಯೇ ಎಂಬ ಸಂದೇಶ ಈ ಕೃತಿಯ ಕೇಂದ್ರಭಾವ.

“ಶೂದ್ರತಪಸ್ವಿ”ಯಲ್ಲಿ ಕುವೆಂಪು ಅವರ ವಿಶ್ವಮಾನವತಾವಾದ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಮನುಷ್ಯನನ್ನು ಜಾತಿಯಿಂದಲ್ಲ, ಮಾನವೀಯ ಮೌಲ್ಯಗಳಿಂದ ಅಳೆಯಬೇಕು ಎಂಬ ಚಿಂತನೆ ಇಲ್ಲಿ ಪ್ರಧಾನವಾಗಿದೆ. ಸಮಾಜದ ನಿಜವಾದ ಉದ್ಧಾರವು ಶ್ರಮಕ್ಕೆ ಗೌರವ, ಸಮಾನತೆ ಮತ್ತು ಸಹಾನುಭೂತಿಯ ಮೂಲಕ ಮಾತ್ರ ಸಾಧ್ಯವೆಂಬ ಸಂದೇಶವನ್ನು ಕೃತಿ ಸಾರುತ್ತದೆ. ಭಾಷಾ ದೃಷ್ಟಿಯಿಂದ ಈ ಕೃತಿ ಸರಳವಾಗಿದ್ದರೂ ತತ್ವಗರ್ಭಿತವಾಗಿದೆ. ರೂಪಕಗಳು, ಸಂಕೇತಗಳು ಹಾಗೂ ತಾತ್ವಿಕ ಚಿಂತನೆಗಳ ಮೂಲಕ ಕುವೆಂಪು ಓದುಗರನ್ನು ಆಳವಾದ ಆತ್ಮಪರಿಶೀಲನೆಗೆ ಕರೆದುಕೊಂಡು ಹೋಗುತ್ತಾರೆ.

ಮುನ್ನುಡಿಯಲ್ಲಿ ಕುವೆಂಪು ಬರೆದಿರುವಂತೆ ಗುಡಿಯಲ್ಲಿರುವ ದೇವರನ್ನು ಪೂಜೆ ಮಾಡುತ್ತೇವೆಯೇ ಹೊರತು ಅಲ್ಲಿ ವಾಸಿಸುವ ಪಕ್ಷಿ, ಇಲಿಗಳನ್ನಲ್ಲ. ಹಾಗೆಯೇ ರಾಮಾಯಣ ಮುಖ್ಯವೇ ಹೊರತು ಅಲ್ಲಿ ಬರುವ ಇಂತಹ ಶೋಷಣಪೂರಿತ ಉಪಕತೆಗಳಲ್ಲಿ ಬರುವ ಮೌಲ್ಯಗಳಲ್ಲ. ಇಂತಹವುಗಳನ್ನು ಸೂಕ್ಷ್ಮವಾಗಿ ಮಾನವತಾ ದೃಷ್ಟಿ ಕೋನದಿಂದ ನೋಡುವುದು ಮುಖ್ಯ.
Profile Image for Thribhuvan Tejaswi.
87 reviews107 followers
August 20, 2022
' ಶೂದ್ರ ತಪಸ್ವಿ ', ಇಲ್ಲಿ ಬ್ರಾಹ್ಮಣ-ಶೂದ್ರ ಪ್ರಜ್ಞೆಗಳು ಧರ್ಮಾಧರ್ಮದ ಪ್ರಶ್ನೆಯಾಗಿ ರಾಮನಿಗೆ ಉದ್ಭವಿಸುತ್ತವೆ. ಇದನ್ನು ಅರಿತ ರಾಮ, ಬ್ರಾಹ್ಮಣನಿಗೆ ತಮ್ಮ ಮೇಲು ಕೀಳುಗಳ ಅಹಮಿಕೆಯ ಅರಿವೆಯನ್ನು ಮನವರಿಕೆಯಾಗುವಂತೆ ಮಾಡುತ್ತಾನೆ. ಇಲ್ಲಿ ಬ್ರಾಹ್ಮಣ ಮತ್ತು ಶಂಬೂಕ ಇಬ್ಬರ ಘನತೆ, ಧರ್ಮದ ಜನತ್ವ ಮಾತು ಶ್ರೀ ರಾಮನ ಮಹೋನ್ನತ ವ್ಯಕ್ತಿತ್ವ ಏಕಕಾಲಕ್ಕೆ ಅನಾವರಣವಾಗುವಂತೆ ಕುವೆಂಪುರವರು ವ್ಯಾಖ್ಯಾನಿಸುವ ರೀತಿಯಲ್ಲಿ ಅವರ ವೈಚಾರಿಕತೆ ಹೊಮ್ಮುತ್ತದೆ.ಕುವೆಂಪು ಮೂಲ ರಾಮಾಯಣದಲ್ಲಿರುವ ರಾಮನನ್ನು ಜೀವ-ವಿರೋಧಿ ಮನೋಗುಣದಿಂದ ಶೂದ್ರ ತಪಸ್ವಿಯಲ್ಲಿ ಬಿಡುಗಡೆಗೊಳಿಸಿದ್ದಾರೆ.
Displaying 1 - 7 of 7 reviews